ಕಾಂತಾರ ಸಿನಿಮಾದ ಬಳಿಕ ನಟಿ ಸಪ್ತಮಿ ಗೌಡ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು ಇದೀಗ ಎರಡನೇ ಭಾರಿ ನಟ ಡಾಲಿ ಧನಂಜಯ್ ಗೆ ಜೋಡಿಯಾಗುತ್ತಿದ್ದಾರೆ. ಈ ಹಿಂದೆ ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಧನಂಜಯ್ ಹಾಗೂ ಸಪ್ತಮಿ ಗೌಡ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾದ ಮೂಲಕವೆ ಸಪ್ತಮಿ ಗೌಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಮತ್ತೊಂದು ಡಾಲಿಗೆ ಜೋಡಿಯಾಗಿ ಸಪ್ತಮಿ ಕಾಣಿಸಿಕೊಳ್ತಿದ್ದಾರೆ. ಸುಮಾರು ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಒಂದಾಗುತ್ತಿದ್ದಾರೆ. ‘ಹಲಗಲಿ’ ಹೆಸರಿನ ಸಿನಿಮಾದಲ್ಲಿ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸಿನಿಮಾದ ಕತೆ, ಪಾತ್ರವರ್ಗ ಅಂತಿಮವಾಗಿದ್ದು ಸಿನಿಮಾದ ಚಿತ್ರೀಕರಣವೂ ಪ್ರಾರಂಭವಾಗಿದೆ. ಸ್ವಾತಂತ್ರ್ಯಕ್ಕೂ ಮುಂಚಿನ 1857 ರಲ್ಲಿ ನಡೆದ ಘಟನೆಯನ್ನು ಆಧರಿಸಿದ ಸಿನಿಮಾ ಒಂದರಲ್ಲಿ ಡಾಲಿ ಧನಂಜಯ್ ನಾಯಕನಾಗಿ…
Author: Author AIN
‘ವಾಣಿ ರಾಣಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಜೆನ್ನಿ ಪ್ರಿಯಾ ಇದೀಗ ವಿದೇಶದಲ್ಲಿರೋ 2 ಮಕ್ಕಳ ತಂದೆಯನ್ನ ಮದುವೆಯಾಗಲು ಹೋಗಿ 400ಗ್ರಾಂ ಚಿನ್ನ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಈ ಬಗ್ಗೆ ದೂರು ನೀಡಿರುವ ನಟಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನಟಿ ಜೆನಿ ಪ್ರಿಯಾ ನಟನೆಯ ಜೊತೆಗೆ ಮೇಕಪ್ ಕಲಾವಿದೆಯೂ ಗುರುತಿಸಿಕೊಂಡಿದ್ದರು. ಸನ್ ಟಿವಿ, ಜಯ ಟಿವಿ, ಕಲೈನಾರ್ ಟಿವಿ ಮುಂತಾದ ಅನೇಕ ಟಿವಿ ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದು, ಪಾಲಿಮರ್ ಟಿವಿಯಲ್ಲಿ ಪ್ರಸಾರವಾದ ‘ರಾಜ ಮನ್ನಾರ್ ಪುರಿಯಾರ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅದಾದ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದರು. ನಟಿ ತಮ್ಮದೇ ಆದ ಮೇಕಪ್ ಸ್ಟುಡಿಯೊವನ್ನು ಹೊಂದಿದ್ದಾರೆ. ಮೇಕಪ್ ತರಬೇತಿ ತರಗತಿಗಳನ್ನು ನೀಡುತ್ತಿರುತ್ತಾರೆ. ಜೆನ್ನಿ ಅವರಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಇದಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ವಿದೇಶದಲ್ಲಿರುವ ವರನಿಗಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಜೆನಿ ಪ್ರಿಯಾ ಅವರಿಗೆ ಪರಿಚಯವಾಗಿದ್ದು, ಎರಡು ಮಕ್ಕಳ ತಂದೆ ಪೈಲಟ್ ಥುಣೇಶನ್. ಥುಣೇಶನ್ ಅವರಿಗೆ…
ನಮ್ಮ ದೇಶದ ಕರಕುಶಲತೆ ಹೊಂದಿದ ಕಾರ್ಮಿಕರ ಕೊರತೆಯನ್ನು ನಿಗಿಸಲು ಭಾರತ ಸಹಾಯ ಮಾಡುತ್ತಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಹೇಳಿದ್ದಾರೆ. ನಗರದ ಗೋಥೆ ಇನ್‌ಸ್ಟಿಟ್ಯೂಟ್ ಹಾಗೂ ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಆಯೋಜಿಸಿದ್ದ ಭಾರತೀಯ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯುವ ವಿದ್ಯಾವಂತ ಭಾರತೀಯರು ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ನಮ್ಮ ದೇಶದಲ್ಲಿ (ಜರ್ಮನಿ) ನುರಿತ ಕಾರ್ಮಿಕರ ಅವಶ್ಯಕತೆ ಇದೆ. ಹಾಗಾಗಿ ಪ್ರತಿಭಾವಂತ ಭಾರತೀಯರನ್ನು ಸ್ವಾಗತಿಸಲು ನಾವು ಸದಾ ಸಿದ್ಧರಿರುತ್ತೇವೆ’ ಎಂದು ಹೇಳಿದ್ದಾರೆ. ’2022ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ಸಮಾಲೋಚನೆಯಲ್ಲಿ ನಾವು ನಮ್ಮ ದ್ವಿಪಕ್ಷೀಯ ಸಹಕಾರಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವು. ಈ ಎರಡು ವರ್ಷದ ಅವಧಿಯಲ್ಲಿ ನಮ್ಮ ಕಾರ್ಯತಂತ್ರದ ಸಂಬಂಧಗಳ ವಿವಿಧ ಕ್ಷೇತ್ರಗಳಲ್ಲಿ ಪ್ರೋತ್ಸಾಹದಾಯಕ ಪ್ರಗತಿ ಕಂಡುಬಂದಿದೆ’ ಎಂದರು. ‘ಜರ್ಮನಿಯಲ್ಲಿ ಕುಶಲತೆ ಹೊಂದಿದ ಕಾರ್ಮಿಕರ ಕೊರತೆಯಿದ್ದು, ಭಾರತದಿಂದ ಜರ್ಮನಿಗೆ ಬರುವ ಐ.ಟಿ. ತಂತ್ರಜ್ಞರಿಗೆ ಕೆಲಸದ ವೀಸಾಗಳನ್ನು ಪಡೆಯುವುದನ್ನು ನಮ್ಮ ಸರ್ಕಾರವು ಸುಲಭಗೊಳಿಸಿದೆ’ ಎಂದು ಹೇಳಿದ್ದಾರೆ. ‘ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಮತ್ತು ಐ.ಟಿ…
ಇರಾನ್ ಮೇಲೆ ನಡೆಸಿದ ಮೂರು ಸುತ್ತಿನ ದಾಳಿ ಬಳಿಕ ಸೇನಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಇಸ್ರೇಲ್‌ನ ಅಧಿಕೃತ ಸುದ್ದಿಸಂಸ್ಥೆ ಪ್ರಕಟಿಸಿದೆ. ಇದೇ ತಿಂಗಳ ಆರಂಭದಲ್ಲಿ ಇಸ್ರೇಲ್ ವಿರುದ್ಧ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇರಾನ್ ಬೆಂಬಲಿತ ಹಿಜ್ಬುಲ್ಲಾ ನಾಯಕರನ್ನು ಲೆಬನಾನ್‌ನಲ್ಲಿ ಹತ್ಯೆ ಮಾಡಿದ ಬಳಿಕ ಈ ದಾಳಿ ಸಂಘಟಿಸಲಾಗಿತ್ತು. ಇದು ಕಳೆದ ಆರು ತಿಂಗಳಲ್ಲಿ, ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ನೇರ ದಾಳಿಯಾಗಿತ್ತು. ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಕಾರವಾಗಿ, ಕಾರ್ಯಾಚರಣೆ ನಡೆಸುವುದಾಗಿ ಇಸ್ರೇಲ್ ಸೇನೆ ಇಂದು ಬೆಳಿಗ್ಗೆ ತಿಳಿಸಿತ್ತು. ಸೇನಾ ಪಡೆ ಮುಖ್ಯಸ್ಥ ಹರ್ಜಿ ಹಲೇವಿ ಅವರು ವಾಯು ಪಡೆಯ ರಹಸ್ಯ ಕಮಾಂಡ್ ಸೆಂಟರ್‌ನಲ್ಲಿ ಆದೇಶಗಳನ್ನು ನೀಡುತ್ತಿದ್ದಾರೆ ಎಂದೂ ಹೇಳಿತ್ತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಧಿಕಾರಿಗಳ ಸಭೆ ನಡೆಸಿದ್ದರು. ಇರಾನ್ ರಾಜಧಾನಿ ಟೆಹರಾನ್ ಸಮೀಪ ಸೇನಾ ನೆಲೆಗಳ ಮೇಲೆ ದಾಳಿಗಳು ನಡೆದಿರುವ ಬಗ್ಗೆ ವರದಿಯಾಗಿತ್ತು. ಇರಾನ್ ಮೇಲೆ ಮೂರು ಸುತ್ತಿನ ದಾಳಿ ನಡೆಸಲಾಗಿದೆ. ಕ್ಷಿಪಣಿ, ಡ್ರೋನ್…
ಕಳೆದ ಕೆಲ ದಿನಗಳಿಂದ ಭಾರತದ ವಿರುದ್ಧ ಹೇಳಿಕೆ ನೀಡುವ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿವಾದ ಹುಟ್ಟುಹಾಕಿದ್ದಾರೆ. ಇದೀಗ ಕೆನಡಾ ಸರ್ಕಾರವು ಮುಂದಿನ ವರ್ಷದಿಂದ ತನ್ನ ಜನಸಂಖ್ಯೆಗೆ ತಕ್ಕಂತೆ ವಲಸಿಗರಿಗೆ ವೀಸಾ ನೀಡುವ ಪ್ರಮಾಣದಲ್ಲಿ ಶೇಕಡಾ 20ರಷ್ಟು ಕಡಿತಗೊಳಿಸಲು ಮುಂದಾಗಿದ್ದಾರೆ. ಕೋವಿಡ್ ಸಮಯದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು, 2025-2026 ರಲ್ಲಿ ತಲಾ 5 ಲಕ್ಷ ವಲಸಿಗರಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದಾಗ, ಉದ್ಯೋಗಿಗಳ ಅಗತ್ಯಗಳನ್ನು ಪರಿಹರಿಸುವ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ವಹಿಸುವ ನಡುವೆ ಸರಿಯಾದ ಸಮತೋಲನ ಹೊಂದಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ಇದೀಗ ಕೆನಡಾ ಸರ್ಕಾರದ ಹೊಸ ಯೋಜನೆಯ ಪ್ರಕಾರ, 2025 ರಲ್ಲಿ 3.95 ಲಕ್ಷ ಹೊಸ ಖಾಯಂ ನಿವಾಸಿಗಳಿಗೆ ಅವಕಾಶ ನೀಡಲಾಗುವುದು, ಅದು ಈ ವರ್ಷದ 4.85 ಲಕ್ಷದಿಂದ ಕಡಿಮೆಯಾಗಿದೆ. 2026 ಮತ್ತು 2027 ರ ಪರಿಷ್ಕೃತ ಗುರಿಗಳು ಕ್ರಮವಾಗಿ 3.8 ಲಕ್ಷ ಮತ್ತು 3.65 ಲಕ್ಷಗಳಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿ ವೀಸಾಗಳನ್ನು ಸುಮಾರು ಶೇಕಡಾ 35…
ಆಲಿಯಾ ಭಟ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ. ಮದುವೆಯಾದ ಬಳಿಕವೂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಆಲಿಯಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಆಲಿಯಾ ಅಭಿಮಾನಿಗಳು, ಕೆಲ ಸಿನಿಮಾ ಪ್ರೇಮಿಗಳು ನಟಿಯ ಮುಖದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದ್ದಾರೆ. ಆಲಿಯಾರ ಮುಖ ಮೊದಲಿನಂತಿಲ್ಲ. ಆಲಿಯಾರ ನಗು ಹಾಗೂ ಮಾತನಾಡುವ ಶೈಲಿಯೂ ಬದಲಾಗಿದೆ. ಆಲಿಯಾರ ಮುಖ ಬೇರೆ ಆಕಾರವನ್ನೇ ಪಡೆದುಕೊಂಡಿದೆ ಎಂದು ಗುರುತಿಸಿದ್ದರು. ಕಾಸ್ಮೆಟಿಕ್ ಸರ್ಜನ್ ಒಬ್ಬರು ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಸಖತ್ ವೈರಲ್ ಆಗಿತ್ತು. ವೈದ್ಯ ಸಾಯಿ ಗಣಪತಿ ಎಂಬುವರು ಸಂದರ್ಶನವೊಂದರಲ್ಲಿ ಮಾತನಾಡಿ, ‘ಆಲಿಯಾ ಭಟ್ರ ಇತ್ತೀಚೆಗಿನ ವಿಡಿಯೋ, ಚಿತ್ರಗಳನ್ನು ನೋಡಿದರೆ ಅವರಿಗೆ ಮುಖದ ಪಾರ್ಶ್ವವಾಯು ಆಗಿದೆ ಎನ್ನುವುದು ಖಾತ್ರಿಯಾಗುತ್ತಿದೆ. ಅವರು ಬಾಯಿ ಸೊಟ್ಟ ಮಾಡಿ ನಗುತ್ತಿದ್ದಾರೆ, ಬಾಯಿ ಸೊಟ್ಟ ಮಾಡಿ ಮಾತನಾಡುತ್ತಿದ್ದಾರೆ. ಅವರ ಮುಖದ ಒಂದು ಭಾಗ ಮಾತ್ರ ಸಕ್ರಿಯವಾಗಿದೆ. ಒಂದು ಭಾಗ ಸತ್ವ ಕಳೆದುಕೊಂಡಿದೆ. ಅವರು ಬೋಟಾಕ್ಸ್ (ಸೌಂದರ್ಯ ಹೆಚ್ಚು ಮಾಡುವ ಶಸ್ತ್ರಚಿಕಿತ್ಸೆ)ಗೆ ಒಳಗಾಗಿದ್ದಾರೆ ಎನಿಸುತ್ತಿದೆ. ಆದರೆ…
ಕನ್ನಡದ ಕಿರುತೆರೆ ನಟಿ, ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ನಮ್ರತಾ ಗೌಡ ಫುಲ್ ಗರಂ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಕೆಂಡಾಮಂಡಲರಾಗಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನಮೃತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಜೊತೆಗೆ ಜಾಹೀರಾತುಗಳಲ್ಲೂ ಮಿಂಚುತ್ತಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಹೊಸ ಹೊಸ ಲುಕ್ ಗಳ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಇದೀಗ ಫುಲ್ ಗರಂ ಆಗಿದ್ದಾರೆ. ಅಷ್ಟಕ್ಕೂ ಆಕೆಯ ಕೋಪಕ್ಕೆ ಕಾರಣವಾಗಿರೋದು ಆಕೆಗೆ ಬರುತ್ತಿರುವ ನೆಗೆಟಿವ್ ಫೋಸ್ಟ್ ಗಳು ನಾನು ಯಾವಾಗಲೂ ಪಾಲಿಸುವುದು ಒಂದೇ, ನೆಗೆಟಿವ್ ಜನರಿಗೆ ನಾನು ಪ್ರಿತಿಕ್ರಿಯೆ ನೀಡುವುದು ಕಡಿಮೆ ಮಾಡಿದರೆ ಶಾಂತಿಯುತವಾಗಿ ಇರಲು ಸಾಧ್ಯ. ಆದರೆ ನಿಮ್ಮ ನಡುವಳಿಕೆ ಮತ್ತು ಆಲೋಚನೆಗಳು ಬೇರೆಯವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರಿಗೆ ತೊಂದರೆ ಆಗುವುದು ಗ್ಯಾರೆಂಟಿ ಎಂದು ನಾನು ನಂಬಿದ್ದೀನಿ. ಟ್ರೋಲಿಂಗ್ ಮತ್ತು ಅರ್ಥವಿಲ್ಲದ ವಿಚಾರಕ್ಕೆ ನನ್ನ ಬಗ್ಗೆ ಮಾತನಾಡುವುದನ್ನು…
ಬಿಗ್ ಬಾಸ್ ಅಂದರೆ ಅದು ಸುದೀಪ್ ಅನ್ನೋ ಅಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಸುದೀಪ್ ಹೊರತಾಗಿ ಆ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಕನ್ನಡದ ಬಿಗ್ ರಿಯಾಲಿಟಿ ಶೋ ಆರಂಭವಾದಾಗಿನಿಂದಲೂ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ. ಸೀಸನ್ 1ರಿಂದ 10ರವೆರೆಗೂ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಬಿಗ್ಬಾಸ್ ಮೂಡಿ ಬರುತ್ತಿತ್ತು. ಆದ್ರೆ ಈ ವಾರ ಬಿಗ್ಬಾಸ್ ಶೋನಲ್ಲಿ ನಿರೂಪಕರು ಬದಲಾಗಿದ್ದಾರೆ. ಯೆಸ್. ಇದೇ ಮೊದಲ ಬಾರಿಗೆ ಬಿಗ್ಬಾಸ್ ಸೀಸನ್ 11ರಲ್ಲಿ ಇಬ್ಬರು ಶೋ ನಿರೂಪಣೆ ಮಾಡಲಿದ್ದಾರೆ. ಪ್ರತಿ ವಿಕೇಂಡ್ನಲ್ಲೂ ಬಿಗ್ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಬರುತ್ತಿದ್ದರು. ಆದರೆ ಮೂಲಗಳು ಪ್ರಕಾರ ಶನಿವಾರ ಎಪಿಸೋಡ್ ಅನ್ನು ನಿರ್ದೇಶಕ ಯೋಗರಾಜ್ ಭಟ್, ಹಾಗೂ ಭಾನುವಾರ ಎಪಿಸೋಡ್ ಅನ್ನು ನಟ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರಂತೆ. ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ನಿಧನರಾಗಿದ್ದರು. ಸದ್ಯ ಕಿಚ್ಚ ಸುದೀಪ್ ಅವರು ಅನುಪಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಈ ಇಬ್ಬರು…
ಕಳೆದ ಕೆಲವ ದಿನಗಳ ಹಿಂದೆ ವಯೋಸಹಜ ಕಾಯಿಲೆಯಿಂದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನರಾಗಿದ್ದಾರೆ. ಟಾಟಾ ನಿಧನದ ಬಳಿಕ ಅವರ ಆಸ್ತಿ ಯಾರಾ ಪಾಲಾಗಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಇದೀಗ ರತನ್ ಟಾಟಾ ಅವರು ಬರೆದಿಟ್ಟಿರಿವು ವಿಲ್ ಮಾಹಿತಿ ಬಯಲಾಗಿದೆ. ಹಂಡತಿ-ಮಕ್ಕಳಿಲ್ಲದ ಟಾಟಾ ಅವರು ತಮ್ಮ ಮುದ್ದಿನ ಸಾಕು ನಾಯಿಯನ್ನು ವಿಲ್ನಲ್ಲಿ ಉಲ್ಲೇಖಿಸಿರುವುದು ನಿಜಕ್ಕೂ ಅಪರೂಪದ ಸಂಗತಿ. ಟಾಟಾ ಅವರ ಹಿಂದಿನ ನಾಯಿಯ ಮರಣದ ನಂತರ ಸುಮಾರು ಆರು ವರ್ಷಗಳ ಹಿಂದೆ ಟಿಟೊವನ್ನು ದತ್ತು ಪಡೆಯಲಾಯಿತು. ಅದರ ಮುಂದಿನ ಆರೈಕೆಯ ಜವಾಬ್ದಾರಿ, ವೆಚ್ಚದ ಬಗ್ಗೆ ವಿಲ್ನಲ್ಲಿ ಉಲ್ಲೇಖಿಸಿದ್ದಾರೆ. ಅವರ ದೀರ್ಘಕಾಲದ ಬಾಣಸಿಗರಾದ ರಾಜನ್ ಶಾಗೆ ಮುದ್ದಿನ ಶ್ವಾನವನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರತನ್ ಟಾಟಾ ಅವರ ಎಸ್ಟೇಟ್ ₹ 10,000 ಕೋಟಿ ಮೌಲ್ಯಕ್ಕೂ ಮೀರಿದ್ದು ಎಂದು ಅಂದಾಜಿಸಲಾಗಿದೆ. ಅವರ ಆಸ್ತಿಯನ್ನು ಸಹೋದರ ಜಿಮ್ಮಿ ಟಾಟಾ, ಮಲ ಸಹೋದರಿಯರಾದ ಶಿರೀನ್ ಮತ್ತು ಡೀನಾ…
ಆತ ಎಷ್ಟೇ ಬಡವನಾಗಿದ್ದರು ಕೆಲವೊಂದು ಸಂದರ್ಭಗಳು ಅವರನ್ನು ಏಕಾಏಕಿ ಕೋಟ್ಯಾಧಿಪತಿಯಾಗಿ ಮಾಡಿ ಬಿಡುತ್ತವೆ. ಅಂತೆಯೇ ಇಲ್ಲೊಬ್ಬ ಬಡ ಕಾರ್ಮಿಕ ಜಸ್ಟ್ ಎಂಟೇ ಎಂಟು ನಿಮಿಷದಲ್ಲಿ 8.5 ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ. ಅಮೆರಿಕಾದ ವರ್ಜೀನಿಯಾದ ರೋನೋಕ್ನಲ್ಲಿ ಬಡ ಕಾರ್ಮಿಕನೊಬ್ಬ ಎಂಟೇ ನಿಮಿಷಗಳಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ. ಇಲ್ಲಿನ 604 ಮಿನಿಟ್ ಮಾರ್ಕೆಟ್ನ ಶಾಪಿಂಗ್ ಮಾಲ್ನಲ್ಲಿ ಆತ ಕಳೆದ 13 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ. ಇದೇ ತಿಂಗಳು ಕೂಡ ಆತ ಲಾಟರಿ ಖರೀದಿಸಿದ್ದ. ಅಷ್ಟು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರೂ ಆತನಿಗೆ ಲಾಟರಿಯಲ್ಲಿ ಯಾವುದೇ ಬಹುಮಾನ ಬಾರದೇ ಇದ್ದಿದ್ದನ್ನು ನೋಡಿ ಆತನನನ್ನು ಆತನ ಸ್ನೇಹಿತರು ಗೇಲಿ ಮಾಡಿದ್ದರು. ಸ್ನೇಹಿತರು ಎಷ್ಟೇ ಗೇಲಿ ಮಾಡಿದ್ರು ಆತ ಕೊಂಚವು ಬೇಸರಿಸಿಕೊಳ್ಳದೆ ಲಾಟರಿ ಖರೀದಿ ಮಾಡುತ್ತಿದ್ದ. ಜೊತೆ ನನ್ನ ಪ್ರಯತ್ನ ನಾನು ಮಾಡ್ತಾ ಇದೀನಿ. ನನಗೂ ಒಂದ್ ದಿನ ಅದೃಷ್ಟ ಖುಲಾಯಿಸುತ್ತೆ. ಖಂಡಿತವಾಗಿಯೂ ನನಗೆ ಲಾಟರಿ ಹೊಡೆದೇ ಹೊಡೆಯುತ್ತೆ ಅಂತ ಹೇಳಿದ. ಅದಾಗಿ ಕೆಲವೇ ಗಂಟೆಗಳಲ್ಲಿ,.. ಆತನಿಗೆ ಜಾಕ್ ಪಾಟ್ ಹೊಡೆದಿದೆ.…