ಬೆಂಗಳೂರು: ವಿವಿ ಮುಚ್ಚುತ್ತೇವೆ ಎನ್ನುವವರು ವೈನ್ ಸ್ಟೋರ್, ಬಾರ್ ಗಳನ್ನು ಮುಚ್ಚಿ ನೊಡೋಣ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿವಿ ಮುಚ್ಚುತ್ತೇವೆ ಎನ್ನುವವರು ವೈನ್ ಸ್ಟೋರ್, ಬಾರ್ ಗಳನ್ನು ಮುಚ್ಚಿ ನೊಡೋಣ. ಇದೇ ಕಾಂಗ್ರೆಸ್ ನೀತಿ. ನಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರ ರಾಜ್ಯಕ್ಕೆ ಹೋಗಬೇಕೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇನ್ನೂ ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉಪನ್ಯಾಸಕರ ನೇಮಕ ಆಗಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ಇಲ್ಲ. https://ainlivenews.com/do-you-know-why-you-shouldnt-have-a-shani-idol-in-your-house-what-is-the-secret-behind-it-here-is-the-answer/ ಶಾಲೆ ಕಾಲೇಜು ಕಟ್ಟಡಗಳ ದುರಸ್ತಿ ಇಲ್ಲ ಪಠ್ಯಪುಸ್ತಕ, ಸಮಸವಸ್ತ್ರ ಕೊಡಲು ಕಾಸಿಲ್ಲ, ಮನಸಿಲ್ಲ. ಕೆಪಿಎಸ್ಸಿಯಲ್ಲಿ ತಪ್ಪಿಲ್ಲದೇ ಸರಿಯಾಗಿರುವ ಪ್ರಶ್ನೆ ಪತ್ರಿಕೆ ಕೊಡುವ ಯೋಗ್ಯತೆ ಇಲ್ಲ. ಈಗ ನಾಲ್ಕು ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈ ಬಜೆಟ್ನಲ್ಲಿ ವಿಶ್ವವಿದ್ಯಾಲಯಗಳಿಗೆ ಕೇವಲ 342 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
Author: Author AIN
ಚಿಕ್ಕಮಗಳೂರು: ಮೈಸೂರಿನ ಉದಯಗಿರಿ ಘಟನೆ ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ಆ ಘಟನೆ ಮಾಸುವ ಮುನ್ನವೇ ಕಾಫಿನಾಡಿನಲ್ಲೂ ಕಲ್ಲುತೂರಾಟ ನಡೆದಿದೆ. ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ. https://ainlivenews.com/students-who-fought-in-the-middle-of-the-street/ ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಡಾವಣೆಯ ಮನೆಗಳ ಮೇಲೆ ಕೆಲ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಎಂಬುವರ ಮನೆ ಮೇಲೆ ತಡ ರಾತ್ರಿ ಕಲ್ಲು ತೂರಾಟ ನಡೆಸಿ, ಘೋಷಣೆ ಕೂಗಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕಲ್ಲು ತೂರಾಟದಿಂದ ಮನೆಯ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ. ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಸವನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://www.youtube.com/watch?v=FwzWZ2srkLU
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ವಂಡಾರು ಗ್ರಾಮದ ಬೋರ್ಡ್ ಗಲ್ಲು ಎಂಬಲ್ಲಿ ವನ್ಯಪ್ರಾಣಿಗಳ ಹತ್ಯೆಗೈಯ್ಯಲು ವಂಡಾರು ಬ್ಲಾಕ್ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ಬಂದ ಭಟ್ಕಳ-ಶಿರೂರು ಮೂಲದ ಮೂವರು ವನ್ಯಜೀವಿ ಹಂತಕ ಆರೋಪಿಗಳನ್ನು ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಜ್ಯೋತಿ ಕೆ ಸಿ ಮತ್ತು ಅವರ ತಂಡದಿಂದ ಬಂಧಿಸಲಾಗಿದೆ. ಭಟ್ಕಳದ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯಾ, ಶಿರೂರಿನವರಾದ ವಾಸೀಂ ಅಕ್ರಂ, ಆಲಿ ಬಾವು ಯಾಸಿನ್ ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,ಆರೋಪಿಗಳಿಂದ ಒಂದು ಬಂದೂಕು, 11 ಕಾಡತೂಸು, 4 ಚಾಕುಗಳು, 01 ಮಚ್ಚು, 01 ಟಾರ್ಚ್, 03 ಮೊಬೈಲುಗಳು ಹಾಗೂ ಸಂಚಾರಕ್ಕೆ ಬಳಸಿದ ಒಂದು ಆಟೋ ರಿಕ್ಷಾವನ್ನು ವಶ ಪಡೆಯಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಲ್ಲಿ ಅರೋಪಿಗಳು ಶಂಕರನಾರಾಯಣ ಅರಣ್ಯ ವಲಯದ ವಂಡಾರಿನ ಬಳಿ ಕಾಡು ಪ್ರಾಣಿಯನ್ನು ಹತ್ಯೆಗೈದು,ಕಾಡು ಪ್ರದೇಶದಲ್ಲಿ ಕರುಳನ್ನು ಎಸೆದಿದ್ರು.ಇದರ ಸ್ಯಾಂಪಲ್ ಭಾರತೀಯ ವೈಡ್ ಲೈಫ್ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದು ಕಾಡುಕೋಣ ಎಂಬುದಾಗಿ ದೃಢಪಟ್ಟಿರುತ್ತದೆ. ವನ್ಯಪ್ರಾಣಿ ಹತ್ಯೆ…
ಬೆಂಗಳೂರು: ಕೋರ್ಟ್ ನಲ್ಲಿ ವಾರೆಂಟ್ ಅಗಿದ್ರು ತಲೆ ಮರೆಸಿಕೊಂಡಿದ್ದ ಆರೋಪಿಯು 9 ವರ್ಷಗಳ ನಂತರ ಸಿಕ್ಕಿಬಿದ್ದರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಅಬ್ದುಲ್ ಫಾರೂಕ್ ಬಂಧಿತ ಆರೋಪಿಯಾಗಿದ್ದು, ಮಹಮ್ಮದ್ ಫಾರೂಕ್ ತನ್ನ ತಂದೆ ತೀರಿಹೋದಗಲೂ ಕೂಡ ಅಂತ್ಯಕ್ರಿಯೆಗೆ ಬಂದಿರಲಿಲ್ಲ. ಪೊಲೀಸರು ಮಹಮ್ಮದ್ ಫಾರೂಕ್ ಗಾಗಿ ತುಂಬಾ ಹುಡುಕಾಟ ನಡೆಸಿದ್ರು. ಮೊಬೈಲ್ ನಂಬರ್ ಕೂಡ ಅಕ್ಟೀವ್ ಇಲ್ಲ ಅತ ತನ್ನ ಸೋಷಿಯಲ್ ಮೀಡಿಯಾವನ್ನ ಕೂಡ ಬಳಸ್ತಿರಲಿಲ್ಲ. ಆದರೆ ಮಗ ಅಪ್ಪನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಟೊವೇ ಇದೀಗ ಮುಳುವಾಯ್ತು. https://ainlivenews.com/do-you-know-why-you-shouldnt-have-a-shani-idol-in-your-house-what-is-the-secret-behind-it-here-is-the-answer/ ಹೌದು ಇತ್ತೀಚೆಗೆ ಇನ್ಸ್ಟಾಗ್ರಾಂ ಸ್ಟೋರಿಯೊಂದರಲ್ಲಿ ಮೊಹಮ್ಮದ್ ಫಾರೂಕ್ನ ಫೋಟೋ ಪ್ರಕಟಿಸಲಾಗಿತ್ತು. ಫೋಟೋ ಪ್ರಕಟವಾದ ಇನ್ಸ್ಟಾಗ್ರಾಂ ಐಡಿ, ಐಪಿ ಅಡ್ರೆಸ್ ಪರಿಶೀಲನೆ ನಡೆಸಿದಾಗ ಅದು ಮೊಹಮ್ಮದ್ ಫಾರೂಕ್ನ ಹೆಸರಿನಲ್ಲಿರುವ ಮೊಬೈಲ್ ನಂಬರ್ನ ಆಧಾರದಲ್ಲಿ ಆ ಐಡಿ ಕ್ರಿಯೇಟ್ ಆಗಿರುವುದು ಪತ್ತೆಯಾಗಿತ್ತು. ಅಲ್ಲದೇ ಅದೇ ನಂಬರ್ನಿಂದ ಆನ್ಲೈನ್ನಲ್ಲಿ ಫುಡ್ ಆರ್ಡರ್ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆ ಆರ್ಡರ್ಗಳು ಪ್ಲೇಸ್ಮೆಂಟ್ ಆಗುತ್ತಿದ್ದ ಮಾಹಿತಿ ಆಧಾರದಲ್ಲಿ…
ಉಡುಪಿ: ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಗುಂಪುಗಳು ನಡುರಸ್ತೆಯಲ್ಲೇ ಬಡಿದಾಡಿಕೊಂಡಿವೆ. ಉಡುಪಿ ಜಿಲ್ಲೆಯ ಮಣಿಪಾಲ್ನ (Manipal) ಕಾಯಿನ್ ಸರ್ಕಲ್ ಬಳಿ ಘಟನೆ ನಡೆದಿದೆ. ವಿದ್ಯಾರ್ಥಿಗಳ ಹೊಡೆದಾಟಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮಣಿಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. https://ainlivenews.com/car-hits-bus-10-devotees-killed-in-horrific-accident/ ಬಾರ್ ಒಂದರ ಮುಂದೆ ಮದ್ಯದ ಅಮಲಿನಲ್ಲಿದ್ದ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿಯ ಬಟ್ಟೆ ಹರಿದು ಹೋಗಿದೆ. ಈ ವೇಳೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ.
ನವದೆಹಲಿ: ಡಿಸೆಂಬರ್ ತ್ರೈಮಾಸಿಕದಲ್ಲಿ ಬಿಎಸ್ಎನ್ಎಲ್ 262 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ, ಇದು ಸುಮಾರು 17 ವರ್ಷಗಳ ನಂತರ ಲಾಭದಾಯಕತೆಗೆ ಮರಳಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ. ಸೇವಾ ಕೊಡುಗೆಗಳು ಮತ್ತು ಚಂದಾದಾರರ ನೆಲೆಯ ವಿಸ್ತರಣೆಯತ್ತ ಗಮನಹರಿಸಿರುವ ಸರ್ಕಾರಿ ಸ್ವಾಮ್ಯದ ಟೆಲ್ಕೊಗೆ ಇದು “ಮಹತ್ವದ ತಿರುವು” ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬಿಎಸ್ಎನ್ಎಲ್ ಹಲವಾರು ಎಣಿಕೆಗಳಲ್ಲಿ ಸುಧಾರಣೆಯನ್ನು ಸಾಧಿಸಿದೆ, ಮೊಬಿಲಿಟಿ, ಎಫ್ಟಿಟಿಎಚ್ ಮತ್ತು ಗುತ್ತಿಗೆ ಲೈನ್ ಸೇವಾ ಕೊಡುಗೆಗಳಲ್ಲಿ ಶೇ. 14-18 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ಸಂವಹನ ಸಚಿವ ಸಿಂಧಿಯಾ ಹೇಳಿದರು. ಜೂನ್ನಲ್ಲಿ 8.4 ಕೋಟಿ ಇದ್ದ ಚಂದಾದಾರರ ನೆಲೆಯೂ ಡಿಸೆಂಬರ್ನಲ್ಲಿ ಸುಮಾರು 9 ಕೋಟಿಗೆ ಏರಿದೆ ಎಂದು ಸಂವಹನ ಸಚಿವ ಸಿಂಧಿಯಾ ಹೇಳಿದರು. https://ainlivenews.com/do-you-know-why-you-shouldnt-have-a-shani-idol-in-your-house-what-is-the-secret-behind-it-here-is-the-answer/ “ಇಂದು ಬಿಎಸ್ಎನ್ಎಲ್ಗೆ ಮತ್ತು ಭಾರತದಲ್ಲಿ ಟೆಲಿಕಾಂ ಕ್ಷೇತ್ರದ ಪ್ರಯಾಣಕ್ಕೆ ಮಹತ್ವದ ದಿನವಾಗಿದೆ… ಬಿಎಸ್ಎನ್ಎಲ್ 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 17 ವರ್ಷಗಳಲ್ಲಿ ಮೊದಲ…
ತುಮಕೂರು : ಗೃಹ ಸಚಿವರ ತೇಜೋವಧೆ ಮಾಡುವಂತೆ ಏಕವಚನದಲ್ಲಿ ಮಾತನಾಡಬಾರದು ಅಂತಾ ಸಚಿವ ಕೆ.ಎನ್ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ತುಮಕೂರಿನಲ್ಲಿ ಹಾಲಿ ಮಾಜಿಗಳ ವಾಕ್ಸಮರ ವಿಚಾರವಾಗಿ ಮಾತನಾಡಿದ ಅವರು, ಇಬ್ಬರೂ ವೈಯಕ್ತಿಕವಾಗಿ ಟೀಕೆ ಮಾಡೋದು ಭೂಷಣ ಅಲ್ಲಾ. ಸುರೇಶ್ ಗೌಡ್ರು ತಾಳ್ಮೆ ಇಟ್ಟುಕೊಳ್ಳಬೇಕು.. ಗೌರಿಶಂಕರ್ ಕೂಡಾ ಪದ ಬಳಕೆಯಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಪದ ಬಳಿಸಬೇಕು. ಇಬ್ಬರು ಏಕವಚದಲ್ಲಿ ಮಾತನಾಡುವ ಕೆಲಸ ಮಾಡಬಾರದು. ಸುರೇಶ್ ಗೌಡ ಮೂರು ಬಾರಿ ಶಾಸಕರಾಗಿರೋರು. ಡಾ.ಜಿ.ಪರಮೇಶ್ವರ್ ಅವರು ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ತೇಜೋವಧೆ ಮಾಡುವ ಹಾಗೆ ಮಾತನಾಡೋದು ಖಂಡನೀಯ. ಪರಮೇಶ್ವರ್ ಬಗ್ಗೆ ಆಡಿರೋ ಮಾತು ವಾಪಾಸ್ ಪಡೆಯಬೇಕು ಹಾಗೂ ಕ್ಷೇತ್ರದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಶೋಷಿತರ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಸಿಗುವ ಹಕ್ಕು ದೊರಕಿಸಿಕೊಳ್ಳಲು ಸಂಘಟನೆ ಆಗಲು ಸಮಾವೇಶ ನಡೆಯುತ್ತೆ. 2004ರಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು. ಆದರೆ ದೇವೇಗೌಡರು ಧರ್ಮ ಸಿಂಗ್ ಮಾಡಿದ್ರು. ಸಿದ್ದರಾಮಯ್ಯಗೂ ತಪ್ಪಿಸಿದ್ದರು.. ದೇವೇಗೌಡರ ಮುಂದಾಲೋಚನೆ ಇರುತ್ತೆ.…
ಭಾರತೀಯ ಕ್ರಿಕೆಟ್ ಅನ್ನು ಬದಲಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಅಧ್ಯಕ್ಷ ಲಲಿತ್ ಮೋದಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಪ್ರೇಮಿಗಳ ದಿನದಂದು ಅವರು ತಮ್ಮ ಹೊಸ ಪ್ರೀತಿಯನ್ನು ಜಗತ್ತಿಗೆ ಘೋಷಿಸಿದರು. ರೀಮಾ ಬೌರಿ ಎಂಬ ಮಹಿಳೆ ತನ್ನ ಜೀವನದ ಹೊಸ ಸಂಗಾತಿಯಾದಳು ಮತ್ತು ಅವರ 25 ವರ್ಷಗಳ ಸ್ನೇಹ ಪ್ರೀತಿಯಾಗಿ ಬದಲಾಯಿತು ಎಂದು ಲಲಿತ್ ಬಹಿರಂಗಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮಿಗಳ ದಿನದ ಪೋಸ್ಟ್ ರೀಮಾ ಅವರ 25 ವರ್ಷಗಳ ಸ್ನೇಹ ಪ್ರೀತಿಗೆ ತಿರುಗಿದಾಗ, ಮೋದಿ ಅವರು ಅವರ ಜೊತೆಗಿನ ಹಲವಾರು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ಅದೇ ಆಗಲಿ ಎಂದು ನಾನು ಭಾವಿಸುತ್ತೇನೆ. ಅವರು ಅದಕ್ಕೆ #HappyValentinesDay ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ರೀಮಾ, “ನಾನು ನಿನ್ನನ್ನು ಇನ್ನೂ ಹೆಚ್ಚು ಪ್ರೀತಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ. ರೀಮಾ ಬೌರಿ ಯಾರು? ರಿಮಾ ಬೌರಿ ಲೆಬನಾನ್ ಮೂಲದ ಸ್ವತಂತ್ರ ಸಲಹೆಗಾರರಾಗಿದ್ದಾರೆ. ಅವರಿಗೆ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉತ್ತಮ ಅನುಭವವಿದೆ.…
ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಮ್ ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರು 6000 ಏಕದಿನ ರನ್ಗಳನ್ನು ಪೂರ್ಣಗೊಳಿಸಿದ ಎರಡನೇ ಅತಿ ವೇಗದ ಆಟಗಾರರಾದರು, ದಂತಕಥೆ ಹಾಶಿಮ್ ಆಮ್ಲಾ ಅವರ ದಾಖಲೆಯನ್ನು ಸರಿಗಟ್ಟಿದರು. ಈ ದಾಖಲೆಯನ್ನು ಸಾಧಿಸಲು ಬಾಬರ್ ಕೇವಲ 123 ಇನ್ನಿಂಗ್ಸ್ಗಳನ್ನು ತೆಗೆದುಕೊಂಡರು, ಏಷ್ಯಾದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಇದಲ್ಲದೆ, ಬಾಬರ್ 136 ಇನ್ನಿಂಗ್ಸ್ಗಳಲ್ಲಿ ಈ ದಾಖಲೆಯನ್ನು ಸಾಧಿಸಿದ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದರು. ಕರಾಚಿಯ ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಈ ಸಾಧನೆ ಮಾಡಿದರು. ಜಾಕೋಬ್ ಡಫಿ ತಮ್ಮ ಬೌಲಿಂಗ್ನಲ್ಲಿ ಅದ್ಭುತ ಕವರ್ ಡ್ರೈವ್ ಮೂಲಕ 6000 ರನ್ಗಳ ಮೈಲಿಗಲ್ಲನ್ನು ದಾಟಿದರು. ಈ ದಾಖಲೆಯನ್ನು ಸಾಧಿಸಿದರೂ, ಬಾಬರ್ ಅವರ ಫಾರ್ಮ್ ತ್ರಿಕೋನ ಸರಣಿಯಲ್ಲಿ ಕೊರತೆಯಿರುವಂತೆ ತೋರುತ್ತಿದೆ. ಅವರು ಮೂರು ಪಂದ್ಯಗಳಲ್ಲಿ ಕೇವಲ 10, 23 ಮತ್ತು 29 ರನ್ಗಳನ್ನು ಗಳಿಸಿದರು, ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ…
ಪ್ರಯಾಗ್ರಾಜ್: ಮಹಾಕುಂಭಮೇಳ ಸ್ಥಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದು ಅತ್ಯಂತ ದುರಂತವಾಗಿತ್ತು. ಇದೀಗ ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 10 ಭಕ್ತರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಪ್ರಯಾಗ್ರಾಜ್-ಮಿರ್ಜಾಪುರ ಹೆದ್ದಾರಿಯ ಮೇಜಾ ಪ್ರದೇಶದಲ್ಲಿ ಬೊಲೆರೊ ಕಾರು ಬಸ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿವೆ. 19 ಜನರು ಗಾಯಗೊಂಡಿದ್ದಾರೆ. https://ainlivenews.com/do-you-know-why-you-shouldnt-have-a-shani-idol-in-your-house-what-is-the-secret-behind-it-here-is-the-answer/ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಸ್ನಾನ ಮಾಡಲು ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಿಂದ ಭಕ್ತರು ಪ್ರಯಾಣಿಸುತ್ತಿದ್ದರು. ಭಕ್ತರನ್ನು ಕರೆದೊಯ್ಯುತ್ತಿದ್ದ ಬೊಲೆರೊ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಿಂದ ಪ್ರಯಾಣಿಸುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.