ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಉಪ ಕುಲಸಚಿವರ ಸಹಿಯನ್ನೇ ಫೋರ್ಜರಿ ಮಾಡಲಾಗಿದೆ. ಡಿ. ಗ್ರೂಪ್ ನೌಕರ ವೈ.ಕೃಷ್ಣಮೂರ್ತಿ ವಿರುದ್ಧ ಉಪ ಕುಲಸಚಿವ ಸಹಿಯನ್ನ ನಕಲು ಮಾಡಿದ ಆರೋಪದಡಿ, ಆತನನ್ನು ಸಸ್ಪೆಂಡ್ ಮಾಡಲಾಗಿದೆ. https://www.youtube.com/watch?v=FwzWZ2srkLU ವಿದ್ಯಾರ್ಥಿಗಳ ವಲಸೆ ಪ್ರಮಾಣ ಪತ್ರದಲ್ಲಿ ಪ್ರಭಾರಿ ಉಪ ಕುಲಸಚಿವ ಪ್ರೋ ನಿರ್ಮಲಾ ಎಂಬವರ ಸಹಿ ನಕಲು ಮಾಡಲಾಗಿದೆ. ಕೊಪ್ಪಳದ ಗಂಗಾವತಿಯ ಕೆಲ ವಿದ್ಯಾರ್ಥಿಗಳು ವಲಸೆ ಪ್ರಮಾಣ ಪತ್ರಕ್ಕೆ ವಿವಿಗೆ ಅರ್ಜಿ ಸಲ್ಲಿಸಿದ್ದರು. ಕೃಷ್ಣಮೂರ್ತಿ ನಕಲಿ ಸಹಿ ಬಳಸಿ ಪ್ರಮಾಣ ಪತ್ರ ನೀಡಿದ್ದಾರೆ. ಅರ್ಜಿ ಸತ್ಯಾಸತ್ಯತೆ ಪರಿಶೀಲನೆಗೆಂದು ವಿದ್ಯಾರ್ಥಿಗಳಿಗೆ ವಿಎಸ್‌ಕೆ ವಿವಿ ಸಿಬ್ಬಂದಿ ಕರೆ ಮಾಡಿದ್ದು, ಶುಲ್ಕ ಭರಿಸಿ ಸರ್ಟಿಫಿಕೇಟ್ ಪಡೆದು ಮಾಹಿತಿ ತಿಳಿಸಿದ್ದಾರೆ. ಈ ವೇಳೆವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಗೆ ಶುಲ್ಕ ಪಾವತಿಯಾಗದೆ ಪ್ರಮಾಣ ಪತ್ರ ವಿತರಣೆ ವಿತರಿಸುವುದು ಗೊತ್ತಾಗಿದ್ದು, ಕೃಷ್ಣಮೂರ್ತಿಯ ಸಹಿ ಕಳ್ಳಾಟ ಬಟಾಬಯಲಾಗಿದೆ. ವಿಎಸ್‌ಕೆ ವಿವಿ ಕುಲಸಚಿವ ರುದ್ರೇಶ್ ಅವರು ಡಿ.ಗ್ರೂಪ್ ನೌಕರ ಕೃಷ್ಣಮೂರ್ತಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
Author: Author AIN
ಬೆಂಗಳೂರು: ಕರ್ನಾಟಕ ಸಿಬಿಐ ನ್ಯಾಯಾಲಯದ ವಶದಲ್ಲಿದ್ದ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಅಧಿಕಾರಿಗಳು ಪ್ರಸ್ತುತ ಅವುಗಳ ಮೌಲ್ಯವನ್ನು ಲೆಕ್ಕ ಹಾಕುವ ಪ್ರಕ್ರಿಯೆಯಲ್ಲಿದ್ದಾರೆ. ದಿವಂಗತ ಜಜಲಲಿತಾ. ಭ್ರಷ್ಟಾಚಾರ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಆ ಸಮಯದಲ್ಲಿ ವಶಪಡಿಸಿಕೊಂಡ ಕೆಜಿಗಟ್ಟಲೆ ಚಿನ್ನ ಮತ್ತು ಬೆಳ್ಳಿ ವರ್ಷಗಳ ಕಾಲ ಕರ್ನಾಟಕ ಸಿಬಿಐ ನ್ಯಾಯಾಲಯದ ವಶದಲ್ಲಿತ್ತು. ಆದರೆ, ಈಗ ಚಿನ್ನವನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಿರುವುದರಿಂದ ಅವುಗಳ ಎಣಿಕೆ ಆರಂಭವಾಗಿದೆ. ಸಂಬಂಧಿಕರು ಎಂದು ಹೇಳಿಕೊಂಡು ದೀಪ ಹಾಗೂ ದೀಪಕ್ ಇಬ್ಬರು ಜಯಲಲಿತಾ ಒಡವೆಯನ್ನ ನಮಗೆ ಕೊಡಿ ಎಂದು ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿಯನ್ನ ಸಲ್ಲಿಸಿದ್ದರು. ಆದ್ರೆ, ಹೈಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು. ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ತಮಿಳುನಾಡು ಸರ್ಕಾರಕ್ಕೆ ಎಲ್ಲಾ ವಸ್ತುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ವಕೀಲರು ಹಾಗೂ ತಮಿಳುನಾಡಿನ ಕೆಲವು ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಪ್ರತಿಯೊಂದು ಮಾಹಿತಿಯನ್ನು ನೀಡಿ ಚಿನ್ನದ ಒಡವೆಗಳನ್ನು ತೂಕವನ್ನು ಹಾಕುತ್ತಿದ್ದಾರೆ.…
ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿವೆ. ಮೈಸೂರಿನ ಘಟನೆ ಪೂರ್ವ ತಯಾರಿಯಿಂದ ಆಗಿದೆ. ಇದು ಸಂಪೂರ್ಣ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿ ನಗರದಲ್ಲಿಂದು ಮಾತನಾಡಿದ ಅವರು, ಇದು ಅತ್ಯಂತ ಗಂಭೀರವಾದ ವಿಷಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಿಎಫ್ ಐ, ಎಸ್ ಡಿಪಿಐ, ಕೇಸ್ ವಾಪಸು ಪಡೆದ್ರು. ಹಳೇ ಹುಬ್ಬಳ್ಳಿ ಕೇಸ್ ವಾಪಸಾತಿಯಿಂದ ಅವರಿಗೆ ದೊಡ್ಡ ಕುಮ್ಮಕ್ಕು ಬಂದಿದೆ. ಇಸ್ಲಾಂ ಮತಾಂಧ ಶಕ್ತಿಗಳು ಕಾಂಗ್ರೆಸ್ ಬೆಂಬಲದಿಂದ ಈ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. https://ainlivenews.com/stone-pelting-in-chikkamagalur-after-udayagiri-riots/ ಕಾಂಗ್ರೆಸ್ ನವರಿಗೆ ಮುಸ್ಲಿಂ ಅವರು ಮಾತ್ರ ಬೇಕಾ?.ಈ ಘಟನೆಯನ್ನು ಸಹ ಕಾಂಗ್ರೆಸ್ ಇದನ್ನು ತುಷ್ಟಿಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಗೃಹ ಸಚಿವರು ತಮ್ಮ ಐಡಿಯಾಲಜಿ ತಕ್ಕಂತೆ ಮಾತನಾಡನಾಡುತ್ತಾರೆ. ಸಾರ್ವಜನಿಕರ ಆಸ್ತಿ ನಷ್ಟ ಬರಿಸೋರು ಯಾರು? ಅತೀ ಹೆಚ್ಚು ಹಿಂದೂಗಳು ತೆರಿಗೆ ನೀಡುತ್ತಾರೆ. ಗಲಭೆಕೋರರಿಂದ ಆಸ್ತಿ ನಷ್ಟವನ್ನು ಒದ್ದು ವಸೂಲಿ ಮಾಡಬೇಕು. ಸರ್ಕಾರಕ್ಕೆ…
ಚಿತ್ರದುರ್ಗ: ಸಿದ್ಧರಾಮಯ್ಯನವರ ಸರಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಂಸದ ಗೋವಿಂದ ಕಾರಜೋಳ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೂಂಡಾಗಳಿಗೆ ಪ್ರೋತ್ಸಾಹ ನೀಡುವ ಕೆಟ್ಟ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದೆ. ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್ ನಾವು ಯಾರನ್ನೂ ಬಿಡಲ್ಲ ಅಂತಿದ್ದಾರೆ. ಆದರೆ ಅದನ್ನು ಸಾಬೀತು ಮಾಡಿ ತೋರಿಸಲಿ, ಗಲಾಟೆ ಮಾಡಿದವರು 1000 ಜನ ಅಂತಾ FIR ಹೇಳುತ್ತೆ. ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾದ್ರೂ ತಿಣುಕಾಡಿ 13 ಜನರನ್ನು ಅರೆಸ್ಟ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು. ಉದಯಗಿರಿ ಘಟನೆ ಸಂಬಂಧ ಒಂದು ಜೈಲು ತುಂಬುವಷ್ಟು ಜನರನ್ನು ಬಂಧಿಸಬೇಕಿತ್ತು . ಕಾಂಗ್ರೆಸ್ ಗೆ ಆಡಳಿತ ನಡೆಸಲು ಯೋಗ್ಯತೆ ಇಲ್ಲದ ಸರ್ಕಾರ ಎಂದು ಕಿಡಿಕಾರಿದರು. https://ainlivenews.com/the-government-cant-do-anything-against-me-union-minister-h-d-k/ ಸ್ವಾತಂತ್ರಾನಂತರ ದೇಶವನ್ನು 60 ವರ್ಷ ಕಾಂಗ್ರೆಸ್ ಆಳಿದೆ. ಕುರ್ಚಿಗೆ ಕಂಟಕ ಬಂದಾಗ, ಜನರ ಅವರಿಂದ ದೂರವಾದಾಗ ಇಂಥ ಹೊಸ ನಾಟಕ ಮಾಡ್ತಾರೆ. ನಾವು ಸಣ್ಣವರಿದ್ದಾಗ ಹಳ್ಳಿಯಲ್ಲಿ ಸಣ್ಣಾಟ, ಬಯಲಾಟ…
ಹಾಸನ : ಈ ಸರ್ಕಾರ ನನಗೆ ಏನೂ ಮಾಡೋಕಾಗಲ್ಲ ಅಂತಾ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ತಮ್ಮ ವಿರುದ್ದದ ಭೂಕಬಳಿಕೆ ಆರೋಪ ಕುರಿತು ಮಾತನಾಡಿದ ಅವರು, ರಾಮನಗರದಲ್ಲಿ ಅವನ್ಯಾರೋ ಸಾಮಾಜಿಕ ಪರಿವರ್ತನೆಕಾರ ಎಸ್.ಆರ್.ಹಿರೇಮಠ್ ರಿಪೋರ್ಟ್ ಮೇಲೆ ಆಗಿರುವ ಕೇಸ್ ಅದು. ಸಿದ್ದಪ್ಪ ಅವತ್ತು ರಾಮನಗರದಲ್ಲಿ ಅಸಿಸ್ಟೆಂಟ್ ಕಮಿಷನರ್. ಅವನು ಒಂದು ವರದಿ ಕೊಟ್ಟ, ಅದನ್ನು ಇಟ್ಕೊಂಡು ಈ ಆಟ ಆಡುತ್ತಿದ್ದಾರೆ. ಯಡಿಯೂರಪ್ಪ ಕಾಲದಲ್ಲೂ ತನಿಖೆ ಮಾಡಿದ್ರು ಏನು ಸಿಗಲಿಲ್ಲ. ಎಲ್ಲರ ಕಾಲದಲ್ಲೂ ನಡೆಯುತ್ತಲೇ ಇದೆ. ಕಷ್ಟಪಟ್ಟು ಸಂಪದಾನೆ ಮಾಡಿದ್ದಕ್ಕೆ ಇದು ಪರಿಸ್ಥಿತಿ. ಲೂಟಿ ಹೊಡೆದು ಇವರೆಲ್ಲ ಮಾಡಿಕೊಂಡಿದ್ದಾರಲ್ಲಾ ಅದನ್ನು ಕೇಳೋರೇ ಇಲ್ಲ, ಯಾರು ಹೆದರಿಕೊಳ್ಳುತ್ತಾರೆ ಬ್ರದರ್ ಇದಕ್ಕೆಲ್ಲಾ, ನೋಡಿಲ್ವ ಎಂದು ತಿರುಗೇಟು ನೀಡಿದ್ದಾರೆ. https://ainlivenews.com/stone-pelting-in-chikkamagalur-after-udayagiri-riots/ ಮೈಸೂರು ಗಲಭೆ ಪ್ರಕರಣ ಸಂಬಂಧ ಮಾತನಾಡಿ, ಮೈಸೂರು ಗಲಭೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಕೊಡುವುದು ಬೇಡ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಸಮಾಜದವರು ಸೋಷಿಯಲ್ ಮಿಡೀಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ಇನ್ನೊಂದು ಸಮಾಜದವರು…
ಬೆಂಗಳೂರು: ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಅವರು, ಪಂಜಾಬ್ನ ಪಟಿಯಾಲ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಪಟಿಯಾಲದ ಆಸ್ಪತ್ರೆಯೊಂದರಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಬೂರ್ ಶಾಂತಕುಮಾರ್ ಅವರನ್ನು ಪಟಿಯಾಲ ಆಸ್ಪತ್ರೆಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ವ್ಯವಸ್ಥೆ ಮಾಡಿದ್ದಾರೆ. https://ainlivenews.com/women-benefit-more-from-eating-poppy-seeds-than-men-youll-be-shocked-to-hear/ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡುವ ಸಂಬಂಧ ಪಟಿಯಾಲ ಜಿಲ್ಲೆಯ ಡಿಸಿ ಜೊತೆ ಸಚಿವ ಸೋಮಣ್ಣ ಮಾತನಾಡಿದ್ದಾರೆ. ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸುವ ಸಂಬಂಧ ಶಾಂತಕುಮಾರ್ ಜೊತೆ ಮೂರು ಬಾರಿ ಸೋಮಣ್ಣ ಮಾತನಾಡಿದ್ದಾರೆ. ಕರ್ನಾಟಕದ ರೈತ ಮುಖಂಡನಾಗಿ ಹಲವು ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ಪಂಜಾಬ್‌ನಲ್ಲಿ ಆಯೋಜನೆಗೊಂಡಿದ್ದ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಪಂಜಾಬ್ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಎಸ್ಕಾರ್ಟ್ ವಾಹನ ಜೊತೆ ತೆರಳುತ್ತಿದ್ದ ವೇಳೆ ಮುಂದಿನ ವಾಹನ ಅಪಘಾತಕ್ಕೀಡಾಗಿದೆ.…
ಬೆಂಗಳೂರು: ಕೆಪಿಎಸ್ ಸಿಯ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಅನ್ಯಾಯವಾಗಿದೆ ಎಂದು ಕೆಎಎಸ್ ಪರೀಕ್ಷೆ ಸಂಬಂಧ ಮತ್ತೆ ಕರವೇ ಪ್ರತಿಭಟನೆಗಿಳಿದಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕೆಪಿಎಸ್ ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಫೆ.18ರಂದು ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಹಮ್ಮಿಕೊಂಡಿದೆ. ಅನ್ಯಾಯಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. https://ainlivenews.com/women-benefit-more-from-eating-poppy-seeds-than-men-youll-be-shocked-to-hear/ ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದ್ದರಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಚಳವಳಿ ಹಮ್ಮಿಕೊಂಡಿತ್ತು. ನಮ್ಮ ಚಳವಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮರುಪರೀಕ್ಷೆಗೆ ಆದೇಶಿಸಿದ್ದರು. ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವೆಲ್ಲ ಒಕ್ಕೊರಲಿನಿಂದ ಅಭಿನಂದಿಸಿದ್ದೆವು. ಆದರೆ ಮರುಪರೀಕ್ಷೆಯಲ್ಲೂ ಕನ್ನಡಾನುವಾದದ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ವಿವಿ ಮುಚ್ಚುತ್ತೇವೆ ಎನ್ನುವವರು ವೈನ್ ಸ್ಟೋರ್, ಬಾರ್ ಗಳನ್ನು ಮುಚ್ಚಿ ನೊಡೋಣ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿವಿ ಮುಚ್ಚುತ್ತೇವೆ ಎನ್ನುವವರು ವೈನ್ ಸ್ಟೋರ್, ಬಾರ್ ಗಳನ್ನು ಮುಚ್ಚಿ ನೊಡೋಣ. ಇದೇ ಕಾಂಗ್ರೆಸ್ ನೀತಿ. ನಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರ ರಾಜ್ಯಕ್ಕೆ ಹೋಗಬೇಕೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇನ್ನೂ ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉಪನ್ಯಾಸಕರ ನೇಮಕ ಆಗಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ಇಲ್ಲ. https://ainlivenews.com/do-you-know-why-you-shouldnt-have-a-shani-idol-in-your-house-what-is-the-secret-behind-it-here-is-the-answer/ ಶಾಲೆ ಕಾಲೇಜು ಕಟ್ಟಡಗಳ ದುರಸ್ತಿ ಇಲ್ಲ ಪಠ್ಯಪುಸ್ತಕ, ಸಮಸವಸ್ತ್ರ ಕೊಡಲು ಕಾಸಿಲ್ಲ, ಮನಸಿಲ್ಲ. ಕೆಪಿಎಸ್‌ಸಿಯಲ್ಲಿ ತಪ್ಪಿಲ್ಲದೇ ಸರಿಯಾಗಿರುವ ಪ್ರಶ್ನೆ ಪತ್ರಿಕೆ ಕೊಡುವ ಯೋಗ್ಯತೆ ಇಲ್ಲ. ಈಗ ನಾಲ್ಕು ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಕೇವಲ 342 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು: ಮೈಸೂರಿನ ಉದಯಗಿರಿ ಘಟನೆ ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ಆ ಘಟನೆ ಮಾಸುವ ಮುನ್ನವೇ ಕಾಫಿನಾಡಿನಲ್ಲೂ ಕಲ್ಲುತೂರಾಟ ನಡೆದಿದೆ. ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ. https://ainlivenews.com/students-who-fought-in-the-middle-of-the-street/ ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಡಾವಣೆಯ ಮನೆಗಳ ಮೇಲೆ ಕೆಲ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಎಂಬುವರ ಮನೆ ಮೇಲೆ ತಡ ರಾತ್ರಿ ಕಲ್ಲು ತೂರಾಟ ನಡೆಸಿ, ಘೋಷಣೆ ಕೂಗಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕಲ್ಲು ತೂರಾಟದಿಂದ ಮನೆಯ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ. ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಸವನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://www.youtube.com/watch?v=FwzWZ2srkLU
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ವಂಡಾರು ಗ್ರಾಮದ ಬೋರ್ಡ್ ಗಲ್ಲು ಎಂಬಲ್ಲಿ ವನ್ಯಪ್ರಾಣಿಗಳ ಹತ್ಯೆಗೈಯ್ಯಲು ವಂಡಾರು ಬ್ಲಾಕ್ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ಬಂದ ಭಟ್ಕಳ-ಶಿರೂರು ಮೂಲದ ಮೂವರು ವನ್ಯಜೀವಿ ಹಂತಕ ಆರೋಪಿಗಳನ್ನು ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಜ್ಯೋತಿ ಕೆ ಸಿ ಮತ್ತು ಅವರ ತಂಡದಿಂದ ಬಂಧಿಸಲಾಗಿದೆ. ಭಟ್ಕಳದ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯಾ, ಶಿರೂರಿನವರಾದ ವಾಸೀಂ ಅಕ್ರಂ, ಆಲಿ ಬಾವು ಯಾಸಿನ್ ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,ಆರೋಪಿಗಳಿಂದ ಒಂದು ಬಂದೂಕು, 11 ಕಾಡತೂಸು, 4 ಚಾಕುಗಳು, 01 ಮಚ್ಚು, 01 ಟಾರ್ಚ್, 03 ಮೊಬೈಲುಗಳು ಹಾಗೂ ಸಂಚಾರಕ್ಕೆ ಬಳಸಿದ ಒಂದು ಆಟೋ ರಿಕ್ಷಾವನ್ನು ವಶ ಪಡೆಯಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಲ್ಲಿ ಅರೋಪಿಗಳು ಶಂಕರನಾರಾಯಣ ಅರಣ್ಯ ವಲಯದ ವಂಡಾರಿನ ಬಳಿ ಕಾಡು ಪ್ರಾಣಿಯನ್ನು ಹತ್ಯೆಗೈದು,ಕಾಡು ಪ್ರದೇಶದಲ್ಲಿ ಕರುಳನ್ನು ಎಸೆದಿದ್ರು.ಇದರ ಸ್ಯಾಂಪಲ್ ಭಾರತೀಯ ವೈಡ್ ಲೈಫ್ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದು ಕಾಡುಕೋಣ ಎಂಬುದಾಗಿ ದೃಢಪಟ್ಟಿರುತ್ತದೆ. ವನ್ಯಪ್ರಾಣಿ ಹತ್ಯೆ…