Author: Author AIN

ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿದ್ದ ಪಾರು ಧಾರವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಸದ್ಯ ಸಖತ್ ವೈಲೆಂಟ್ ಆಗಿದ್ದಾರೆ. ಈ ವಾರ ಮೋಕ್ಷಿತ ಎಲಿಮಿನೇಷನ್​ನಿಂದ ​ ಪಾರಾಗಿದ್ದಾರೆ. ತಾವು ಸೇಫ್ ಆಗಿರುವುದು ತಿಳಿಯುತ್ತಿದ್ದಂತೆ ನಟಿ ತಮ್ಮ ಆಟದ ವರಸೆಯನ್ನೇ ಬದಲಾಯಿಸಿದ್ದಾರೆ. ಈವರೆಗೆ ತಮ್ಮ ಬಗ್ಗೆ ಕೆಲವರು ಆಡಿದ ಮಾತುಗಳನ್ನು ಅವರು ನಿರ್ಲಕ್ಷಿಸುತ್ತಿದ್ದ ಮೋಕ್ಷಿತಾ ಪೈ ಇದೀಗ ಆ ಎಲ್ಲ ಮಾತುಗಳಿಗೆ ತಿರುಗೇಟು ನೀಡಲು ಶುರು ಮಾಡಿದ್ದಾರೆ. ‘ಇವರೆಲ್ಲ 10 ವಾರ ಮಾತ್ರ ಇರೋದು’ ಎಂದು ಹೇಳಿದ್ದ ತ್ರಿವಿಕ್ರಮ್​ಗೆ ಮೋಕ್ಷಿತಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೋಕ್ಷಿತಾ ಸೇರಿದಂತೆ ಇನ್ನೂ ಕೆಲವರು ಕೇವಲ 10 ವಾರ ಇರುತ್ತಾರೆ ಎಂದು ತ್ರಿವಿಕ್ರಮ್ ಅವರು ಉಗ್ರಂ ಮಂಜು ಬಳಿ ಹೇಳಿದ್ದರು. ಆ ವಿಷಯ ಮೋಕ್ಷಿತಾ ಅವರ ಕಿವಿಗೆ ಬಿದ್ದಿತ್ತು. ಇಷ್ಟು ದಿನ ಸುಮ್ಮನಿದ್ದ ಅವರು ಈಗ ಎಲಿಮಿನೇಷನ್​ನಿಂದ ಪಾರಾದ ಬಳಿಕ ಅದೇ ವಿಷಯ ಇಟ್ಟುಕೊಂಡು ಜಗಳ ಆರಂಭಿಸಿದ್ದಾರೆ. ಆಗ ತ್ರಿವಿಕ್ರಮ್ ಅವರ ಇನ್ನೊಂದು…

Read More

ನಟಿ ಹಂಸಾ ಅವರ ಬಿಗ್ ಬಾಸ್ ಜರ್ನಿ ಮುಕ್ತಾಯವಾಗಿದೆ. 28ನೇ ದಿನಕ್ಕೆ ಹಂಸಾ ಮನೆಯಿಂದ ಹೊರ ಬಿದಿದ್ದಾರೆ. ಕಳೆದ ವಾರ ಚೈತ್ರಾ ಕುಂದಾಪುರ, ಗೋಲ್ಡ್​ ಸುರೇಶ್, ಉಗ್ರಂ ಮಂಜು, ಭವ್ಯಾ, ಮೋಕ್ಷಿತಾ ಪೈ, ಹಂಸಾ, ಮಾನಸಾ ಮುಂತಾದವರು ನಾಮಿನೇಟ್ ಆಗಿದ್ದರು. ಆದರೆ ಅಂತಿಮವಾಗಿ ಹಂಸಾ ಅವರು ಎಲಿಮಿನೇಟ್​ ಆಗಬೇಕಾಯಿತು. ಡೇಂಜರ್​ ಝೋನ್ ​ನ ಅಂತಿಮ ಹಂತಕ್ಕೆ ಮೋಕ್ಷಿತಾ ಮತ್ತು ಹಂಸಾ ಬಂದಿದ್ದರು. ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಭಾನುವಾರದ ಸಂಚಿಕೆಯಲ್ಲಿ ತೋರಿಸಿರಲಿಲ್ಲ. ಆದರೆ ಸೋಮವಾರದ (ಅ.28) ಸಂಚಿಕೆಯಲ್ಲಿ ಹಂಸಾ ಎಲಿಮಿನೇಟ್ ಆಗಿರುವುದು ಕರ್ನ್ಪಾರ್ಮ್ ಆಗಿದೆ. ಪ್ರತಿ ವಾರ ಎಲಿಮಿನೇಟ್ ಆದವರನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ಇತ್ತೀಚೆಗೆ ಅವರ ತಾಯಿ ನಿಧನರಾದ್ದರಿಂದ ವೀಕೆಂಡ್ ಸಂಚಿಕೆ ನಡೆಸಿಕೊಡಲು ಸುದೀಪ್ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಹಂಸಾ ಅವರು ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡದೇ ಬಿಗ್ ಬಾಸ್​ ಆಟವನ್ನು ಮುಗಿಸುವಂತಾಯಿತು. ಈ ಮೊದಲು ಎಲಿಮಿನೇಟ್ ಆದ ರಂಜಿತ್, ಜಗದೀಶ್ ಅವರಿಗೂ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನ ಎ2 ಆರೋಪಿ ದರ್ಶನ್​ ಬೇಲ್ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಬೇಲ್​ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಹೈಕೋರ್ಟ್ ನಲ್ಲೂ ದರ್ಶನ್ ಗೆ ಜಾಮೀನು ಸಿಕ್ಕಿಲ್ಲ. ​ಅಕ್ಟೋಬರ್ 22ರಂದು ಹೈಕೋರ್ಟ್ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಬಳಿಕ ಅಕ್ಟೋಬರ್ 28ಕ್ಕೆ ಬೇಲ್ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಅದರಂತೆ ಇಂದು ಬೇಲ್ ಅರ್ಜಿ ವಿಚಾರಣೆ ನಡೆಸಿದ್ದು, ನಾಳೆಗೆ ವಿಚಾರಣೆ ಮುಂದೂಡಲಾಗಿದೆ. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಿನ್ನಲೆ ದರ್ಶನ್ ಮೆಡಿಕಲ್ ರಿಪೋರ್ಟ್ ಅನ್ನು ಕೂಡ ಜೈಲು ಅಧಿಕಾರಿಗಳು  ಕೊರ್ಟ್​ಗೆ ಸಲ್ಲಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ವೈದ್ಯಕೀಯ ವರದಿ ತಂದ ಜೈಲಾಧಿಕಾರಿಗಳು ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ ಗೆ ರಿಪೋರ್ಟ್ ಸಲ್ಲಿಸಲಿದ್ದಾರೆ. ನಾಳೆ ಅಕ್ಟೋಬರ್ 29ರಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್​ಗೆ ಬೆನ್ನುನೋವು ನಿವಾರಣೆಗೆ ಶಸ್ತ್ರ ಚಿಕಿತ್ಸೆ ಅವಶ್ಯವಿದೆ ಅಂತ ಎಂಆರ್​​ಐ ಸ್ಕ್ಯಾನಿಂಗ್​​ನಲ್ಲಿ ವೈದ್ಯರು…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನ ಎ2 ಆರೋಪಿ ದರ್ಶನ್​ ಬೇಲ್ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಬೇಲ್​ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಹೈಕೋರ್ಟ್ ನಲ್ಲೂ ದರ್ಶನ್ ಗೆ ಜಾಮೀನು ಸಿಕ್ಕಿಲ್ಲ. ​ಅಕ್ಟೋಬರ್ 22ರಂದು ಹೈಕೋರ್ಟ್ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಬಳಿಕ ಅಕ್ಟೋಬರ್ 28ಕ್ಕೆ ಬೇಲ್ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಅದರಂತೆ ಇಂದು ಬೇಲ್ ಅರ್ಜಿ ವಿಚಾರಣೆ ನಡೆಸಿದ್ದು, ನಾಳೆಗೆ ವಿಚಾರಣೆ ಮುಂದೂಡಲಾಗಿದೆ. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಿನ್ನಲೆ ದರ್ಶನ್ ಮೆಡಿಕಲ್ ರಿಪೋರ್ಟ್ ಅನ್ನು ಕೂಡ ಜೈಲು ಅಧಿಕಾರಿಗಳು  ಕೊರ್ಟ್​ಗೆ ಸಲ್ಲಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ವೈದ್ಯಕೀಯ ವರದಿ ತಂದ ಜೈಲಾಧಿಕಾರಿಗಳು ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ ಗೆ ರಿಪೋರ್ಟ್ ಸಲ್ಲಿಸಲಿದ್ದಾರೆ. ನಾಳೆ ಅಕ್ಟೋಬರ್ 29ರಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಕೆಲ ಕಾಲ ವಾದ ಮಾಡಿದ್ರು.

Read More

ಇರಾನ್‌ ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರ ಹೊಸ ಖಾತೆಗೆ ಎಕ್ಸ್ ನಿರ್ಬಂಧ ಹೇರಿದೆ. ಖಮೇನಿ ಅವರ ಹೆಸರಲ್ಲಿ ಹಿಬ್ರೂ ಭಾಷೆಯ (@Khamenei_Heb) ಖಾತೆಯನ್ನು ಭಾನುವಾರವಷ್ಟೇ ತೆರೆಯಲಾಗಿತ್ತು. ಇದರಲ್ಲಿ ‘ದೇವರು ಅತ್ಯಂತ ಕರುಣಾಮಯಿ’ ಎಂಬ ಸಂದೇಶವನ್ನು ಹಂಚಿಕೊಳ್ಳಲಾಗಿತ್ತು. ನಿರ್ಬಂಧಕ್ಕೆ ಸಂಬಂಧಿಸಿದಂತೆ ಆ ಖಾತೆಯಲ್ಲಿ, ‘ಎಕ್ಸ್‌ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖಾತೆ ಅಮಾನತಿನಲ್ಲಿಡಲಾಗಿದೆ’ ಎನ್ನಲಾಗಿದೆ. ಯಾವ ನಿಯಮದ ಉಲ್ಲಂಘನೆಯಾಗಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಕಂಪನಿಯು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಈ ತಿಂಗಳ ಆರಂಭದಲ್ಲಿ ಇರಾನ್‌ ನಡೆಸಿದ್ದ ಸರಣಿ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಶನಿವಾರ ಪ್ರತಿದಾಳಿ ನಡೆಸಿತ್ತು. ಅದಕ್ಕೆ ಸಂಬಂಧಿಸಿದಂತೆ ಭಾನುವಾರ ಪ್ರತಿಕ್ರಿಯಿಸಿದ್ದ ಖಮೇನಿ, ದಾಳಿಯನ್ನು ಉತ್ಪ್ರೇಕ್ಷಿಸುವಂತಿಲ್ಲ ಎಂದಿದ್ದರು. 85 ವರ್ಷದ ಖಮೇನಿ ಅವರ ಹೆಸರಿನ ಹಲವು ಖಾತೆಗಳು ‘ಎಕ್ಸ್‌’ನಲ್ಲಿವೆ. ಅವರ ಕಚೇರಿಯು ಬೇರೆ ಬೇರೆ ಭಾಷೆಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಖಮೇನಿ ಅವರ ಖಾತೆಗೆ ನಿರ್ಬಂಧ ಹೇರುತ್ತಿರುವುದು ಇದೇ ಮೊದಲಲ್ಲ.…

Read More

ಇರಾನ್ ದೇಶದ ಮೇಲೆ ದಾಳಿ ನಡೆಸಿದ ಇಸ್ರೇಲ್ ವಿರುದ್ಧ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಕಿಡಿಕಾರಿದ್ದಾರೆ. ಅಲ್ಲದೆ ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕೃತ ಟಿವಿ ವಾಹಿನಿಗೆ ಹೇಳಿಕೆ ನೀಡಿರುವ ಮಸೂದ್‌, ‘ನಾವು ಯುದ್ಧವನ್ನು ಬಯಸುವುದಿಲ್ಲ. ಆದರೆ ನಮ್ಮ ದೇಶದ ಹಕ್ಕು ಮತ್ತು ರಾಷ್ಟ್ರವನ್ನು ಕಾಪಾಡುತ್ತೇವೆ. ಯಹೂದಿಗಳ ಆಡಳಿತದ ಆಕ್ರಮಣಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ’ ಎಂದಿದ್ದಾರೆ. ಇರಾನ್‌ ದಾಳಿ ನಡೆಸದಿದ್ದರೆ ಗಾಜಾ ಮತ್ತು ಲೆಬನಾನ್‌ನಲ್ಲಿ ಸಂಘರ್ಷ ಕೊನೆಗೊಳಿಸುವುದಾಗಿ ಅಮೆರಿಕ ಭರವಸೆ ನೀಡಿತ್ತು ಎಂದಿರುವ ಅವರು, ‘ನಮ್ಮ ಸಂಯಮಕ್ಕೆ ಪ್ರತಿಯಾಗಿ ಯುದ್ಧ ಅಂತ್ಯಗೊಳಿಸುವುದಾಗಿ ಅಮೆರಿಕ ಮಾತು ಕೊಟ್ಟಿದ್ದರು. ಆದರೆ, ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ. ‘ಆಕ್ರಮಣಕಾರಿ ಪ್ರವೃತ್ತಿ ಮುಂದುವರಿಸಿದರೆ, ಉದ್ವಿಗ್ನತೆ ತೀವ್ರಗೊಳ್ಳಲಿದೆ’ ಎಂದು ಇಸ್ರೇಲ್‌ಗೆ ಎಚ್ಚರಿಸಿರುವ ಅವರು, ‘ಇಂತಹ ಕೃತ್ಯಗಳನ್ನು ನಡೆಸಲು ಇಸ್ರೇಲ್‌ಗೆ ಕುಮ್ಮಕ್ಕು ನೀಡುತ್ತಿರುವುದು ಗೊತ್ತಿದೆ’ ಎನ್ನುವ ಮೂಲಕ ಅಮೆರಿಕಕ್ಕೂ ತಿವಿದಿದ್ದಾರೆ.

Read More

ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾ ರಿಲೀಸ್​​ಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಡಿಸೆಂಬರ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಹೀಗಿರುವಾಗಲೇ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡಲು ದೊಡ್ಡ ತೊಡಕು ಉಂಟಾಗಿದೆ. ಈ ಚಿತ್ರದ ಬಿಸ್ನೆಸ್​ಗೆ ಕರ್ನಾಟಕದಲ್ಲಿ ದೊಡ್ಡ ಹೊಡೆತ ಉಂಟಾಗೋದು ಖಚಿತ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ‘ಪುಷ್ಪ 2’ ಈವೆಂಟ್​ನಲ್ಲಿ ಕರ್ನಾಟಕ ಹಂಚಿಕೆದಾರ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ‘ಪುಷ್ಪ 2’ ಚಿತ್ರ ಕರ್ನಾಟಕದಲ್ಲಿ ಭರ್ಜರಿ ಬಿಸ್ನೆಸ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದರು. ಆದೆರ ಪರಭಾಷೆಯವರು ಸುಲಭದಲ್ಲಿ ಬಿಸ್ನೆಸ್ ಮಾಡಿಕೊಂಡು ಹೋಗುತ್ತಿರುವ ವಿಚಾರವನ್ನು, ಹಾಗೂ ಟಿಕೆಟ್​ ದರಕ್ಕೆ ಕಡಿವಾಣ ಇಲ್ಲದನ್ನು ಕನ್ನಡ ಚಲಚಿತ್ರ ವಾಣಿಜ್ಯ ಮಂಡಳಿ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಏಕರೂಪ ಟಿಕೆಟ್ ದರದ ಕೂಗು ಕೂಡ ಎದ್ದಿದೆ. ಈ ಬಗ್ಗೆ ಮಾತನಾಡಿರುವ ಸಾರಾ ಗೋವಿಂದು ಅವರು, ‘ಮಲ್ಟಿಪ್ಲೆಕ್ಸ್​ನಲ್ಲಿ ರಜಿನಿಕಾಂತ್ ಚಿತ್ರಕ್ಕೆ 6 ಸ್ಕ್ರೀನ್ ಕೊಟ್ಟರೆ ಕನ್ನಡ ಸಿನಿಮಾಗೆ 2 ಸ್ಕ್ರೀನ್ ಕೊಡಲಾಗಿತ್ತು. ಟಿಕೆಟ್ ಬೆಲೆ 1500 ರೂಪಾಯಿ ನಿಗದಿ…

Read More

ಕೋಟಿ ಕೋಟಿ ಹಣ ನೀಡಿ ಖರೀದಿ ಮಾಡಿದ್ದ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಕೇವಲ 15 ದಿನಗಳಲ್ಲಿ ನಡು ರಸ್ತೆಯಲ್ಲೇ ಕೆಟ್ಟು ನಿಂತಿದೆ. ಇದರಿಂದ ಲ್ಯಾಂಬೋರ್ಗಿನಿ ಕಾರಿನ ವಿರುದ್ಧ ಭಾರತದ ಖ್ಯಾತ ಉದ್ಯಮಿ ಗೌತಮ್ ಸಿಂಘಾನಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರು ಕೆಟ್ಟು ನಿಂತಿದ್ದು, ಈ ಕುರಿತ ಗ್ರಾಹಕರ ದೂರುಗಳಿಗೆ ಇಟಾಲಿಯನ್‌ ಕಾರು ತಯಾರಿಕಾ ಕಂಪನಿ ಲ್ಯಾಂಬೋರ್ಗಿನಿ ಸ್ಪಂದಿಸದೆ ಅಹಂಕಾರ ತೋರುತ್ತಿದೆ ಎಂದು ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಕಿಡಿಕಾರಿದ್ದಾರೆ. ಎಕ್ಸ್ ನಲ್ಲಿ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಗೌತಮ್ ಸಿಂಘಾನಿಯಾ, ತಮ್ಮ ಲ್ಯಾಂಬೋರ್ಗಿನಿ ರೆವಲ್ಟೊ ಕಾರು ತಾಂತ್ರಿಕ ದೋಷದಿಂದಾಗಿ ಮುಂಬೈನ ಟ್ರಾನ್ಸ್‌ ಹಾರ್ಬರ್‌ ಲಿಂಕ್‌ ಬಳಿ ಕೆಟ್ಟು ನಿಂತ ಬಗ್ಗೆ ಈ ಹಿಂದೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಕಾರಿನ ದುರಸ್ತಿ ಕುರಿತು ಸಂಸ್ಥೆಯನ್ನು ಸಂಪರ್ಕಿಸಿದಾಗ ಈ ಬಗ್ಗೆ ಕಂಪನಿ ಪ್ರತಿಕ್ರಿಯಿಸಲಿಲ್ಲ ಎಂದಿರುವ ಅವರು, ಮತ್ತೊಂದು ಪೋಸ್ಟ್‌ ಹಂಚಿಕೊಂಡು ‘ಲ್ಯಾಂಬೋರ್ಗಿನಿಯ ಭಾರತದ ಮುಖ್ಯಸ್ಥ ಶರದ್‌ ಅಗರ್ವಾಲ್‌…

Read More

ಸ್ಯಾಂಡಲ್‌ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಪತ್ನಿ ಸೋನಲ್ ಜೊತೆ ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಪತ್ನಿ ಜೊತೆ ಹಾಸನಾಂಬೆ ದೇವಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ತರುಣ್ ಸುಧೀರ್ ದಂಪತಿ ದೇವಿಯ ಬಳಿಕ ದರ್ಶನ್ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಿ ದರ್ಶನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ತರುಣ್ ಸುಧೀರ್ ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ ಎಂದು ದೇವಿ ಬಳಿ ಕೇಳಿಕೊಂಡಿದ್ದೇವೆ. ಅವರು ಇದ್ದಿದ್ದರೆ ಈ ಬಾರಿ ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತಿದ್ದರು. ಆದಷ್ಟು ಬೇಗ ಎಲ್ಲಾ ಒಳ್ಳೆಯದಾಗಲಿ ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದರು. ನಾವು ಮದುವೆಯಾದ ನಂತರ ದೇವಿ ದರ್ಶನಕ್ಕೆ ಬಂದಿದ್ದೇವೆ ಅದು ನನಗೆ ವಿಶೇಷ. ಈ ತಾಯಿ ಹತ್ತಿರ ದರ್ಶನಕ್ಕೆ ಬಂದಾಗ ಮನಸ್ಸಿನಲ್ಲಿ ಇರೋದೆನ್ನೆಲ್ಲಾ ಒಮ್ಮೆಲೆ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಇಲ್ಲಿ ಒಂದು ವೈಬ್ರೇಷನ್ ಇದೆ. ಪ್ರತಿ ವರ್ಷ ನಾನು ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತೇನೆ. ಕಳೆದ ವರ್ಷ ಶೂಟಿಂಗ್ ಇದ್ದಿದ್ದರಿಂದ ಬರಲು ಆಗಿರಲಿಲ್ಲ ಎಂದು…

Read More

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಭಾವ ಬಳಸಿ ರಷ್ಯಾ ಹಾಗೂ ಉಕ್ರೇನ್‌ ಯುದ್ಧವನ್ನು ನಿಲ್ಲಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಭಾರತದ ಮಾಧ್ಯಮವೊಂದಕ್ಕೆ ಸಂದರ್ಶನದ ನೀಡಿದ ಝೆಲೆನ್ಸ್ಕಿ, ನಿಸ್ಸಂದೇಹವಾಗಿ ಪ್ರಧಾನಿ ಮೋದಿ ಈ ಕೆಲಸ ಮಾಡಬಹುದು. ಅಗ್ಗದ ಶಕ್ತಿಯನ್ನು ನಿರಾಕರಿಸುವುದು ಮತ್ತು ಆದ್ದರಿಂದ ಯುದ್ಧಗಳನ್ನು ನಡೆಸುವ ಮಾಸ್ಕೋದ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಝೆಲೆನ್ಸ್ಕಿ ಅವರಿಂದ ಈ ಹೇಳಿಕೆ ಬಂದಿರುವುದು ವಿಶೇಷ. ಒಂದು ವೇಳೆ   ನಾನು ಗೆದ್ದರೆ ಉಕ್ರೇನ್‌ ನೀಡುತ್ತಿರುವ ಸೇನಾ ನೆರವನ್ನು ಕಡಿತಗೊಳಿಸುತ್ತೇನೆ ಎಂದು ರಿಪಬ್ಲಿಕನ್‌ ಅಭ್ಯರ್ಥಿ ಟ್ರಂಪ್‌ ಈಗಾಗಲೇ ಹೇಳಿಕೆ ನೀಡಿದ್ದಾರೆ. ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾದರೆ ಉಕ್ರೇನ್‌ ಹೋರಾಟಕ್ಕೆ ಭಾರೀ ಹಿನ್ನಡೆಯಾಗಲಿದೆ. ಬಲವಂತವಾಗಿ ರಷ್ಯಾಕ್ಕೆ ಗಡೀಪಾರು ಮಾಡಲಾದ ಉಕ್ರೇನಿಯನ್ ಮಕ್ಕಳನ್ನು ಮರಳಿ ಕರೆತರಲು ಸಹಾಯ ಮಾಡುವಂತೆ ಝೆಲೆನ್ಸ್ಕಿ ಮೋದಿ ಅವರನ್ನು ಕೇಳಿದರು. ರಷ್ಯಾ ಅಧ್ಯಕ್ಷ ಪುಟಿನ್ ಬಳಿ ಮೋದಿ ತಮ್ಮ…

Read More