ಎರಡು ದಿನಗಳ ಕಾಲ ಅಮೆರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ವಾಪಸ್ ಆಗಿದ್ದಾರೆ. ಈ ವೇಳೆ ಟ್ರಂಪ್ ಜೊತೆ ಹಲವು ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರ ಸಂಧಾನ, ಮಾತುಕತೆಯ ಕೌಶಲ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಸ್ಪರ ಸುಂಕಗಳ ಘೋಷಣೆ ಮತ್ತು ವಿಶ್ವದ ಅತಿ ಹೆಚ್ಚು ವ್ಯಾಪಾರ ಸುಂಕಗಳನ್ನು ವಿಧಿಸಿದ್ದಕ್ಕಾಗಿ ಭಾರತದ ಕುರಿತ ಟೀಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರ ಮಾತುಕತೆಯ ಕೌಶಲ್ಯವನ್ನು ಶ್ಲಾಘಿಸಿದರು. ಅಮೇರಿಕಾದ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ವಿಷಯವಾಗಿ ಮಾತನಾಡಿರುವ ಟ್ರಂಪ್, ಸಾಂಪ್ರದಾಯಿಕವಾಗಿ, ಭಾರತ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಾಸ್ತವವಾಗಿ ಇನ್ನೂ ಕೆಲವು ಸಣ್ಣ ದೇಶಗಳು ಹೆಚ್ಚು ವಿಧಿಸುತ್ತದೆ. ಆದರೆ ಭಾರತ ಭಾರಿ ಸುಂಕಗಳನ್ನು ವಿಧಿಸುತ್ತದೆ. ಭಾರತದಲ್ಲಿ-ತೆರಿಗೆ ತುಂಬಾ ಹೆಚ್ಚಾಗಿದ್ದರಿಂದ ಹಾರ್ಲೆ-ಡೇವಿಡ್ಸನ್ ತಮ್ಮ ಮೋಟಾರ್‌ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಾಗದಿದ್ದ ಸನ್ನಿವೇಶ ನನಗೆ…
Author: Author AIN
ನ್ಯೂಯಾರ್ಕ್: ಮಗು ಬೇಡದಿದ್ದರೂ ಸಂಭೋಗದ ವೇಳೆ ಸ್ಖಲನ ಮಾಡುವ ಗಂಡಸರಿಗೆ ಅಮೆರಿಕಾ ಸರ್ಕಾರ ಭಾರಿ ಶಾಕ್ ನೀಡಿದ್ದು, ಲಕ್ಷ ಲಕ್ಷ ದಂಡ ವಿಧಿಸಲು ಮುಂದಾಗಿದೆ. ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ಇದು ಒಂದು. ಅಮೆರಿಕದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಓಹಿಯೋ ಮಸೂದೆಯಡಿಯಲ್ಲಿ ಪುರುಷರು ಮಗುವನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ತಮ್ಮ ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಸ್ಖಲನ ಮಾಡಿದರೆ ಅವರಿಗೆ 1 ಸಾವಿರ ಡಾಲರ್ನಿಂದ 10,000 ಡಾಲರ್ವರೆಗೆ ದಂಡ ಹೇರಲಾಗುತ್ತದೆ ಎಂದು ಹೇಳಲಾಗಿದೆ. ಈ ಪ್ರಸ್ತಾವಿತ ಮಸೂದೆಯ ಪ್ರಕಾರ, ಮಗುವಿಗಾಗಿ ಗರ್ಭಧರಿಸುವ ಉದ್ದೇಶವಿಲ್ಲದೆ ಸಂಭೋಗದ ವೇಳೆ ಸ್ಖಲನ ಮಾಡಿದರೆ ಪುರುಷರಿಗೆ ದಂಡ ಹೇರಲಾಗತ್ತದೆಯಂತೆ. ಮೊದಲ ಬಾರಿ ಈ ತಪ್ಪು ಮಾಡುವ ಪುರುಷರಿಗೆ 1,000, ಡಾಲರ್ (87 ಸಾವಿರ ರೂ.) ಎರಡನೇ ಬಾರಿಗೆ 5,000 ಡಾಲರ್ ಮತ್ತು ನಂತರದ ಅಪರಾಧಕ್ಕಾಗಿ 10,000 ಡಾಲರ್ (8.66 ಲಕ್ಷ ರೂ.) ದಂಡ ತೆರಬೇಕಾಗುತ್ತದೆ ಎಂದು ಹೇಳಲಾಗಿದೆ.…
ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಮದುವೆಗೆ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ಹಲವು ಶಾಸ್ತ್ರಗಳು ನಡೆದಿವೆ, ಇದೀಗ ಮದುವೆ ಮುನ್ನ ಶಾಸ್ತ್ರದ ಕಾರ್ಯಕ್ರಮದಲ್ಲಿ ಧನ್ಯತಾ ಅವರ ಹಣೆಗೆ ಡಾಲಿ ಮುತ್ತನಿಟ್ಟಿದ್ದಾರೆ. ಇದೇ ವೇಳೆ ಧನ್ಯತಾ ಸಹ ಡಾಲಿ ಹಣೆಗೆ ಹೂ ಮುತ್ತು ನೀಡಿದರು. ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಮುನ್ನ ಶಾಸ್ತ್ರಗಳು ಸಂಭ್ರಮದಿಂದ ನಡೆಯುತ್ತಿದೆ. ಇಬ್ಬರು ಕುಟುಂಬಸ್ಥರು ಆಪ್ತರು ಶಾಸ್ತ್ರಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಲವು ಶಾಸ್ತ್ರಗಳಲ್ಲಿ ಪರಸ್ಪರ ಗೌರವ, ಪ್ರೀತಿ ವಿಶ್ವಾಸದಿಂದ ಭಾಗಿ ಆಗಿದ್ದಾರೆ. ಡಾಲಿ ಧನಂಜಯ್ ಕಾಲಿಗೆ ನಮಸ್ಕರಿಸುವ ಮೂಲಕ ಧನ್ಯತಾ ಆಶೀರ್ವಾದ ಪಡೆದರು. ಈ ವೇಳೆ ವಧು-ವರರ ಸಂಬಂಧಿಕರು ಪರಸ್ಪರರ ಬಗ್ಗೆ ತಮಾಷೆ ಮಾಡುತ್ತಾ, ಛೇಡಿಸಿದ್ದು ಚಿತ್ರದಲ್ಲಿ ಕಾಣಬಹುದು. ಡಾಲಿ ಧನಂಜಯ್, ಧನ್ಯತಾ ಅವರಿಗೆ ಸಿಹಿ ತಿನ್ನಿಸಿದರು. ಕಾಲುಂಗುರ ತೊಡಿಸಿ, ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಪರಸ್ಪರರಿಗೆ ಸಿಹಿ ತಿನ್ನಿಸಿದರು. ನಟ ಡಾಲಿ ಧನಂಜಯ್ ಮತ್ತು ಧನ್ಯತಾ ವಿವಾಹ ಕಾರ್ಯ ಇಂದು…
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ಗೀತಾ ರಾಜ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಗೀತಾರಾಜ್ ಕುಮಾರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಗೀತಾ ರಾಜ್ ಕುಮಾರ್ ಅವಿರೋಧ ಆಯ್ಕೆಯಾದರು. https://ainlivenews.com/a-schoolboy-died-after-going-swimming-in-a-farm-pond/ ನಗರಸಭೆಯಲ್ಲಿ 35 ಜನ ಸದಸ್ಯರಿದ್ದು, 19 ಕಾಂಗ್ರೆಸ್, 3 ಬಿಜೆಪಿ ಸದಸ್ಯರು ಹಾಗೂ 5 ಜನ ಜೆಡಿಎಸ್ ಮತ್ತು ಎಂಎಲ್ ಸಿ ಸದಸ್ಯರು ಸೇರಿ 27 ಜನ ಸದಸ್ಯರ ಸಮ್ಮುಖದಲ್ಲಿ ಗೀತಾ ರಾಜ್ ಕುಮಾರ್ ಆಯ್ಕೆಯಾದರು. https://www.youtube.com/watch?v=FwzWZ2srkLU
ಬೆಂಗಳೂರು ಗ್ರಾಮಾಂತರ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಶಾಲಾ ಬಾಲಕ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರಾಜು ಎಂಬುವವರ ಮಗನಾದ ನಾಗೇಶ್(14) ಮೃತ ದುರ್ದೈವಿ. ಶಾಲೆ ಮುಗಿದ ನಂತರ ಬಿಸಿಲಿನ ತಾಪಕ್ಕೆ ಮೂರು ಜನ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದಾನೆ. ಮೂರು ಮಂದಿಯಲ್ಲಿ ನಾಗೇಶ್ ನೇರವಾಗಿ ನೀರಿಗೆ ಇಳಿದಿದ್ದಾನೆ. ಈಜು ಬಾರದ ಹಿನ್ನೆಲೆ ನೀರಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. https://ainlivenews.com/adopt-companion-crops-in-agricultural-fields-bharathi-chili/ ಮತ್ತೊಂದು ಘಟನೆಯಲ್ಲಿ ಈಜಲು ಹೋಗಿ ನೀರಿನ ಹೊಂಡದಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಬಳಿ ನಡೆದಿದೆ. ಸರ್ವೇಶ ಸತೀಶ ಗುಜ್ಜರ (12) ಮೃತ ಬಾಲಕನಾಗಿದ್ದು, ನಂದಕುಮಾರ ಬಳ್ಳೊಳ್ಳಿ ಎಂಬುವವರ ತೋಟದ ನೀರಿನ ಹೊಂಡದಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ. ಅಥಣಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ…
ಹುಬ್ಬಳ್ಳಿ: ಪಕ್ಷದ ಆಂತರಿಕ ವಿಷಯಗಳ ಕುರಿತು ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಥವಾ ಸಿಎಂ ಬದಲಾವಣೆ ಕುರಿತಂತೆ ಸೂಕ್ತ ಸಮಯದಲ್ಲಿ ಎಲ್ಲರೂಂದಿಗೆ ಚರ್ಚಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು. https://ainlivenews.com/a-case-of-abuse-of-a-female-officer-i-have-done-no-wrong-basavesh/ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಅವರು ತಮ್ಮ ತಮ್ಮ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಪಕ್ಷದ ಒಳಗಿನ ಯಾವುದೇ ನಿರ್ಧಾರವನ್ನು ಕ್ಯಾಬಿನೆಟ್ ಪುನರ್ ರಚನೆ ಸೇರಿದಂತೆ ಪಕ್ಷದೊಳಗಿನ ಎಲ್ಲ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. https://www.youtube.com/watch?v=EawDhIVdQ6o ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಬಂದಾಗ ಎಲ್ಲ ಸಮುದಾಯಗಳ ಅಭಿಪ್ರಾಯ ಚರ್ಚಿಸಿ ಅದರ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಇಲ್ಲಿಯವರೆಗೆ ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸಿದ್ದೇನೆ. ಮುಂದೆಯೂ ಮುಂದುವರೆಸುತ್ತೇವೆ ಎಂದು ಸಲೀಂ ಅಹ್ಮದ್ ಹೇಳಿದರು.
ಬೆಂಗಳೂರು: ನೀರಾವರಿ ಯೋಜನೆಗಳಿಗಾಗಿ ನಾನು ಸದಾ ಹೋರಾಟ ಮಾಡೋಕೆ ಸಿದ್ದ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆ ವಿಚಾರ ಸುಪ್ರೀಂನಲ್ಲಿದ್ದು ಯೋಜನೆಗೆ ಗೋವಾ ವಿರೋಧ ಮಾಡಿದೆ. ಗೋವಾ ಸರ್ಕಾರ ಸುಪ್ರೀಂಕೋರ್ಟ್ ಅರ್ಜಿ ಹಾಕಿದೆ. ನಮ್ಮ ಸರ್ಕಾರ ಅವರು ಪ್ರತಿಯಾಗಿ ನೀರು ಬೇಕು ಅಂತ ಅರ್ಜಿ ಹಾಕಿದೆ. ಅದು ಸುಪ್ರೀಂಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಅದಕ್ಕೂ ನಾನು ಹೋರಾಟ ಮಾಡ್ತೀನಿ. ನೀರಾವರಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನೀರಾವರಿ ಯೋಜನೆಗಳಿಗಾಗಿ ನಾನು ಸದಾ ಹೋರಾಟ ಮಾಡೋಕೆ ಸಿದ್ದ ಅಂತ ಕಾಂಗ್ರೆಸ್ ನಾಯಕರಿಗೆ ದೇವೇಗೌಡರು ತಿರುಗೇಟು ನೀಡಿದರು. https://ainlivenews.com/job-opportunities-for-those-who-want-to-work-in-a-bank-no-written-exam/ ನಾನು ಭದ್ರಾ ಮೇಲ್ದಂಡೆಗೆ ಅನುಮತಿ ಕೊಡಿ ಅಂತ ನೀರಾವರಿ ಮಂತ್ರಿಗೆ ಪತ್ರ ಬರೆದಿದ್ದೇನೆ. ಭದ್ರಾ ಯೋಜನೆ ಬಗ್ಗೆಯೂ ನಾನು ಕುಳಿತುಕೊಳ್ಳೊಲ್ಲ. ಅದರ ಬಗ್ಗೆ ಹೋರಾಟ ಮಾಡ್ತೀನಿ ಅಂತ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.
ಬೆಂಗಳೂರು: ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ರಾಜ್ಯ ಸರ್ಕಾರವೇ ಕಾರಣ ಎಂದು ಕೇಂದ್ರ ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೆಟ್ರೋ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ. ದರ ಏರಿಕೆ ಪ್ರಸ್ತಾವನೆ ನೀಡಿದ್ದೇ ರಾಜ್ಯ ಸರ್ಕಾರ. ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ದರ ಏರಿಕೆಗೆ ಸೂಚನೆ ನೀಡಿಲ್ಲ. ಇದು ತಪ್ಪು ಆರೋಪ ಎಂದು ದೂರಿದರು. https://ainlivenews.com/job-opportunities-for-those-who-want-to-work-in-a-bank-no-written-exam/ ಮೆಟ್ರೋ ಸಂಬಂಧಿತ ಎಲ್ಲಾ ಜವಾಬ್ದಾರಿಗಳೂ ರಾಜ್ಯ ಸರ್ಕಾರಕ್ಕೆ ಬರಲಿದೆ. ಮೆಟ್ರೋ ದರ ಏರಿಕೆ ಸಮಿತಿ ದೆಹಲ್ಲಿ ಇಲ್ಲ. ಕರ್ನಾಟಕದಲ್ಲಿ ಇದೆ. ನಾವು ದರ ಏರಿಕೆ ಮಾಡಿದ್ದೇವೆ ಅನ್ನೋದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: 100% ದರ ಏರಿಕೆಯಾದ ಕಡೆ ಕೇವಲ 10 ರೂ. ಇಳಿಕೆ – 50% ಹೇಳಿ 70% ಏರಿಸಿದ BMRCL ಹಿಂದೆ ಎಷ್ಟಿತ್ತು? ಈಗ ಎಷ್ಟು ಇಳಿಕೆ? ಇದು ಕರ್ನಾಟಕ ಮಾತ್ರ ಅಲ್ಲ.…
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಪೂರ್ಣಾವಧಿ ಸಿಎಂ ಚರ್ಚೆ ವಿಚಾರ ತೀವ್ರಗೊಳ್ತಿದೆ.. ಸಿದ್ದರಾಮಯ್ಯ ಪರ ಘಟಾನುಘಟಿ ನಾಯಕರು ಬ್ಯಾಟಿಂಗ್ ಮಾಡಲು ಶುರು ಮಾಡಿದ್ದಾರೆ.. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ ಶಿವಕುಮಾರ್ ಅವ್ರನ್ನ ಕೆಳಗಿಳಸಲು ಭಾರೀ ರಣತಂತ್ರ ರೂಪಿಸ್ತಿದ್ದಾರೆ.. ಸದ್ಯದಲ್ಲೇ ಬೃಹತ್ ಅಹಿಂದ ಸಮಾವೇಶ ನಡೆಸಿ, ಸಿದ್ದರಾಮಯ್ಯ ಪರ ಶಕ್ತಿ ಪ್ರದರ್ಶನಕ್ಕೂ ಸಿದ್ದತೆ ಮಾಡಿಕೊಳ್ತಿದ್ದಾರೆ.. ಯೆಸ್.. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನಡುವೆ ಬಣ ಬಡಿದಾಟ ತಾರಕಕ್ಕೇರಿದೆ.. ಡಿಕೆಶಿ ವಿರುದ್ದ ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ ನೇರವಾಗಿಯೇ ಸೆಡ್ಡು ಹೊಡೆದಿದ್ದಾರೆ.. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಬದಲಾವಣೆಗೆ ಪಟ್ಟು ಹಿಡಿದಿದ್ದು, ಡಿಕೆಶಿಗೆ ಮಾತ್ರ ಡಿಸಿಎಂ ಜೊತೆ ಎರಡು ಖಾತೆ ಹಗೂ ಅಧ್ಯಕ್ಷಗಿರಿಯೇಕೆ ಅಂತಾ ಪ್ರಶ್ನೆ ಹಾಕಿದ್ದಾರೆ. ಸಿದ್ದರಾಮಯ್ಯ ಆಪ್ಯರ ನಡೆಯಿಂದ ಹೈಕಮಾಂಡ್ ನಾಯಕರೂ ಇಕ್ಕಟ್ಟಿಗೆ ಸಿಲುಕುವಂತಾಗಿದೆ.. ಡಿ.ಕೆ ಶಿವಕುಮಾರ್ ಗೆ ಕೊಟ್ಟಂತೆ ನಮಗೂ ಎರಡು ಹುದ್ದೆ ನೀಡಿ.. ಕೆಪಿಸಿಸಿ ಅಧ್ಯಕ್ಷತೆ ಜೊತೆಗೆ ಮಂತ್ರಿಸ್ಥಾನ ನಿಭಾಯಿಸಲು ನಾವೂ ಕೂಡ…
ಚಿಕ್ಕಬಳ್ಳಾಪುರ : ಬರೋಬ್ಬರಿ 40 ಕ್ಕೂ ಹೆಚ್ಚು ಮನೆಗಳ್ಳತನ, 20ಕ್ಕೂ ಹೆಚ್ಚು ಕಿಡ್ಯ್ನಾಪ್, 5 ಕೊಲೆ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಮೋಸ್ಟ್ ವಾಂಟೆಂಡ್ ಬಾಂಬೆ ಸಲೀಂ ಸೇರಿದಂತೆ 7 ಆರೋಪಿಗಳನ್ನು ಬಂಧಿಸುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. https://ainlivenews.com/former-goa-mla-killed-in-belgaum-accused-arrested/ ಬಾಂಬೆ ಸಲೀಂ ಜೊತೆ ಆಂಧ್ರಪ್ರದೇಶದ ಚಿಲಮತ್ತೂರಿನ ಅನಿಲ್, ರಾಜಾನುಕುಂಟೆಯ ಚೇತನ್, ರಾಜಾನುಕುಂಟೆಯ ರೌಡಿಶೀಟರ್ ನಾಗೇಶ್, ಬಾಗೇಪಲ್ಲಿಯ ರೌಡಿಶೀಟರ್ ಚೇತನ್, ಗುಡಿಬಂಡೆಯ ರೌಡಿಶೀಟರ್ ಬಾಬುರೆಡ್ಡಿ, ಬೆಂಗಳೂರಿನ ರೌಡಿಶೀಟರ್ ವಾಸಿಮ್ ಹಾಗೂ ಅಸ್ಲಾಂ ಎಂಬುವವರನ್ನ ಕೇರಳದಲ್ಲಿ ಬಂಧಿಸಲಾಗಿದೆ. ಬಂಧಿತರರಿಂದ ಒಂದು ಕಾರು, ಮೂರು ಬೈಕ್ ಹಾಗೂ 5 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. https://www.youtube.com/watch?v=xOrZKXDKnQ4 2024ರ ಡಿ.20 ರಂದು ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ಎಂಬಾತನ ಕಿಡ್ಯ್ನಾಪ್ ಮಾಡಲಾಗಿತ್ತು. ಆ ವೇಳೆ ಕಾರಿನಲ್ಲಿದ್ದ 16 ಲಕ್ಷ ರೂ. ಹಣ ದೋಚಿದ್ದರು. ಅಲ್ಲದೇ ಬಾಂಬೆ ಸಲೀಂ ಮತ್ತು ಅವನ ಗ್ಯಾಂಗ್ ಅಶ್ವತ್ಥನಾರಾಯಣಸ್ವಾಮಿ ಹೆಂಡತಿಗೆ ಕರೆ ಮಾಡಿ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇದೀಗ…