ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಐದು ತಿಂಗಳ ಬಳಿಕ ಕೊನೆಗೂ ನಟ ದರ್ಶನ್ಗೆ ಜಾಮೀನು ಸಿಕ್ಕಿದೆ. ಆದರೆ ಈಗ ಕೇವಲ ಆರು ವಾರಗಳ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್ಗೆ ಜಾಮೀನು ಲಭ್ಯವಾದ ಬೆನ್ನಲ್ಲೆ ದರ್ಶನ್ ಪರ ವಕೀಲರ ತಂಡದ ಸುನಿಲ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ಗೆ ಇರುವ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಾನ್ಯ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಎಲ್ಲ ಕಾನೂನು ಪ್ರಕ್ರಿಯೆಗಳು ಇಂದೇ ಮುಗಿದು ಇಂದೇ ದರ್ಶನ್ ಜೈಲಿನಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ ಎಂದು ವಕೀಲ ಸುನಿಲ್ ಹೇಳಿದ್ದಾರೆ. ‘ನಾವು, ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದೆವು. ದರ್ಶನ್ ಅವರಿಗೆ ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ. ಅವರ ಎಲ್5 ಮತ್ತು ಎಸ್1 ಅಲ್ಲಿ ಸಮಸ್ಯೆಯಿದ್ದು ಸೂಕ್ತ ಚಿಕಿತ್ಸೆ ತುರ್ತು ಅಗತ್ಯವಿದೆ. ದರ್ಶನ್ಗೆ ಈ ಸಮಸ್ಯೆ ಈಗ ಬಂದಿದ್ದಲ್ಲ, ಅಥವಾ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆದ ಬಳಿಕ ಬಂದಿದ್ದಲ್ಲ, ಅವರಿಗೆ ಈ ಸಮಸ್ಯೆ 2022-23 ರಿಂದಲೂ…
Author: Author AIN
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸದೆ ಇರಲು ವಾಷಿಂಗ್ಟನ್ ಪೋಸ್ಟ್ ನಿರ್ಧರಿಸಿದೆ. ಕಳೆದ ವಾರ ಪತ್ರಿಕೆಯು ಈ ನಿರ್ಧಾರ ತೆಗೆದುಕೊಂಡ ಬಳಿಕ ಸುಮಾರು 2 ಲಕ್ಷ ಮಂದಿ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಚಂದಾದಾರಿಕೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಪತ್ರಿಕೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಪತ್ರಿಕೆಯು ಈಗಾಗಲೇ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಇದರ ಮಧ್ಯದಲ್ಲೇ ದೊಡ್ಡ ಸಂಖ್ಯೆಯಲ್ಲಿ ಚಂದಾದಾರಿಕೆ ಹಿಂದೆ ಸರಿದಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ವರ್ಷದ ಅಂಕಿಅಂಶದ ಪ್ರಕಾರ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 25 ಲಕ್ಷ ಚಂದಾದಾರಿಕೆ ಹೊಂದಿದ್ದು, ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಡಿಜಿಟಲ್ ಆವೃತ್ತಿಯ ಚಂದಾದಾರಾಗಿದ್ದರು. ಪ್ರಸರಣ ಸಂಖ್ಯೆಯಲ್ಲಿ ‘ನ್ಯೂಯಾರ್ಕ್ ಟೈಮ್ಸ್’, ‘ವಾಲ್ ಸ್ಟ್ರೀಟ್ ಜರ್ನಲ್’, ಪತ್ರಿಕೆಯು ಮೊದಲ ಎರಡು ಸ್ಥಾನಗಳಲ್ಲಿದೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪತ್ರಿಕೆಯ ವಕ್ತಾರೆ ಒಲಿವಿಯಾ ಪೀಟರ್‌ಸನ್ ನಿರಾಕರಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ಸಾಕಷ್ಟು ಕಾರಣಕ್ಕೆ ಕುತೂಹಲ ಮೂಡಿಸಿದೆ.ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮನೆಯ ಕ್ಯಾಪ್ಟನ್ ಆಗಲು ಸಾಕಷ್ಟು ಕಷ್ಟ ಪಡಬೇಕು. ಆದ್ರೆ ದೊಡ್ಮನೆ ಒಳಗೆ ಕಾಲಿಡ್ತಿದ್ದಂಗೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದು ಸಿಂಗರ್ ಹನುಮಂತ. ಇದೀಗ ಹನುಮಂತ 2ನೇ ಬಾರಿಗೆ ಮತ್ತೆ ಕ್ಯಾಪ್ಟನ್ ಆಗಿ ದೊಡ್ಮನೆಯಲ್ಲಿ ಅಸಲಿ ಆಟ ಶುರು ಮಾಡಿದ್ದಾರೆ. ಬಿಗ್ ಬಾಸ್ ಮನೆಯ 12 ಮಂದಿ ಸದಸ್ಯರಿಗೆ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಶಿಶಿರ್ ಅವರು ಹೊರಬಿದ್ದಿದ್ದಾರೆ. ಸ್ಪರ್ಧಿಗಳು ಬೇರೆ ಸ್ಪರ್ಧಿಗಳ ಫೋಟೋಗಳನ್ನು ತಂದು ಇಟ್ಟಿದ್ದಾರೆ. ಸುರೇಶ್ ಹಾಗೂ ಮಂಜು ರೂಲ್ಸ್ ಬ್ರೇಕ್ ಮಾಡಿದ ಕಾರಣದಿಂದ ಇಬ್ಬರು ಗೇಮ್ ನಿಂದ ಹೊರಬಿದ್ದಿದ್ದಾರೆ. ಆ ಬಳಿಕ ಒಬ್ಬರನ್ನು ಮಾತ್ರ ಹೊರಗೆ ಇಡಬೇಕೆನ್ನುವ ನಿಟ್ಟಿನಲ್ಲಿ ಮಂಜು ಅವರನ್ನು ಮಾತ್ರ ಹೊರಗಿಟ್ಟಿದ್ದಾರೆ. ರೂಲ್ ಬ್ರೇಕ್ ವಿಚಾರದಲ್ಲಿ ಮಂಜು – ತಿವಿಕ್ರಮ್ ನಡುವೆ ವಾಗ್ವಾದ ನಡೆದಿದೆ. ಇವನು ನಾಟಕ ಆಡುತ್ತಾನೆ. ನಾನು ಶಿಶಿರ್…
ಟಾಲಿವುಡ್ ನಟ, ಬಾಹುಬಲಿ ಖ್ಯಾತಿಯ ಪ್ರಭಾಸ್ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಇದೆ. ಈ ಹಿಂದೆ ಪ್ರಭಾಸ್ ಹೆಸರು ಕೆಲವು ನಟಿಯರ ಜೊತೆ ಕೇಳಿ ಬಂದಿತ್ತು. ಆದರೆ ಅದ್ಯಾವುದು ಮದುವೆ ಹಂತಕ್ಕೆ ಹೋಗಿರಲಿಲ್ಲ. ಇದೀಗ ಪ್ರಭಾಸ್ ಮದುವೆ ಸುದ್ದಿ ಮತ್ತೆ ಕೇಳಿ ಬಂದಿದೆ. ಕೆಲವು ದಿನಗಳ ಹಿಂದೆ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾದೇವಿ ಈ ಬಗ್ಗೆ ಮಾಹಿತಿ ನೀಡಿ ಶೀಘ್ರದಲ್ಲೇ ಪ್ರಭಾಸ್ ಇಷ್ಟಪಟ್ಟ ಹುಡುಗಿಯನ್ನ ಪರಿಚಯಿಸುತ್ತಾರೆ.. ಎಲ್ಲವೂ ಸರಿಯಾಗಿ ನಡೆದರೆ ಮದುವೆ ನಡೆಯಲಿದೆ ಎಂದು ಹೇಳುತ್ತಿದ್ದರು. ಮತ್ತೊಂದೆಡೆ, ಪ್ರಭಾಸ್-ಅನುಷ್ಕಾ ಪ್ರೀತಿಸುತ್ತಿದ್ದಾರೆ.. ಇಬ್ಬರೂ ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂಬ ವರದಿಗಳಿವೆ. ಆದರೆ ಅವರಿಬ್ಬರು ಕೇವಲ ಸ್ನೇಹಿತರು ಎಂದು ಪ್ರಭಾಸ್ ಸ್ಪಷ್ಟಪಡಿಸಿದ್ದಾರೆ.. ಬಾಲಯ್ಯ ಕಾರ್ಯಕ್ರಮವೊಂದರಲ್ಲಿ ಹೀಗೆ ಮಾಡಿದರೇ ನಿಮಗೂ ಹೆಣ್ಣು ಸಿಗುವುದಿಲ್ಲ ಎಂದಿದ್ದರು.. ಅದಕ್ಕೆ ಉತ್ತರಿಸಿದ ಪ್ರಭಾಸ್ ನಾನು ಸಲ್ಮಾನ್ ಖಾನ್ ಮದುವೆಯ ನಂತರ ವಿವಾಹವಾಗುತ್ತೇನೆ ಎಂದು ಹೇಳಿದ್ದರು. ಇದಲ್ಲದೇ ಪ್ರಭಾಸ್ ಆದಿಪುರುಷ ಚಿತ್ರ ನಿರ್ಮಾಣದ ಸಮಯದಲ್ಲಿ ಕೃತಿಸನನ್ ಅವರನ್ನು ಪ್ರೀತಿಸುತ್ತಿದ್ದರು.. ಶೀಘ್ರದಲ್ಲೇ ಅವರು…
ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಮಹತ್ವದ ಘಟ ತಲುಪಿದೆ. ಧಾರವಾಹಿಯಲ್ಲಿ ಡಿಸಿ ಪಾತ್ರಧಾರಿ ಸಂಜನಾ ಬುರ್ಲಿ ಪಾತ್ರ ಅಂತ್ಯವಾಗಿದೆ. ಅಷ್ಟಕ್ಕೂ ಸ್ನೇಹಾ ಪಾತ್ರ ಸಾಯಿಸೋದಕ್ಕೆ ನಿಜವಾದ ಕಾರಣ ಈಗ ರಿವೀಲ್ ಆಗಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ ಆರಂಭದಿಂದಲೂ ಜನರನ್ನು ರಂಜಿಸುತ್ತ ಬರ್ತಿದೆ. ಸಮಯದ ಬದಲಾವಣೆಯಾದರೂ ಪ್ರೇಕ್ಷಕರು ಮಾತ್ರ ಪುಟ್ಟಕ್ಕನ ಕೈ ಬಿಡಲಿಲ್ಲ. ಮೂವರು ಹೆಣ್ಣು ಮಕ್ಕಳು ಹುಟ್ಟಿದ್ದರಂತೆ ಗಂಡು ಬಿಟ್ಟು ಹೋದರು ಕುಗ್ಗದ ಪುಟ್ಟಕ್ಕ ಅವರನ್ನೆಲ್ಲಾ ಓದಿಸಿದ್ದಾಳೆ. ದೊಡ್ಡ ಮಗಳನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿದ್ದ ಪುಟ್ಟಕ್ಕ ಈಗೀಗ ಸರಿಯಾಗಿದ್ದರು. ಆದರೆ ಈಗ ಮತ್ತೆ ಎರಡನೇ ಮಗಳನ್ನು ಕಳೆದುಕೊಂಡಿದ್ದಾಳೆ. ಪುಟ್ಟಕ್ಕನ ನೋವನ್ನ ನೋಡಲು ಆಗುತ್ತಿಲ್ಲ. ಮಗಳನ್ನು ಕಳೆದುಕೊಂಡು ಆಕಾಶವೇ ಕಳಚಿಬಿದ್ದಂತೆ ಆಡುತ್ತಿದ್ದಾಳೆ. ಬದುಕೇ ಬರಿದಾಗಿದೆ ಎನ್ನುವಂತ ಪರಿಸ್ಥಿತಿಯಲ್ಲಿ ಇದ್ದಾಳೆ. ಆದರೆ ಪುಟ್ಟಕ್ಕನ ಸಂಕಟಕ್ಕೆ ವೀಕ್ಷಕರು ನೊಂದುಕೊಂಡಿದ್ದಾರೆ. ಸ್ನೇಹಾ ಸಾವು ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಿಸಿ ಪೋಸ್ಟ್ ಕೂಡ ಈಗ ಸಿಕ್ಕಿದೆ. ಹೀಗಿರುವಾಗ ಇಷ್ಟು ಬೇಗ ಸ್ನೇಹಾರನ್ನ ಸಾಯಿಸುವ…
ತಮಿಳು ಚಿತ್ರರಂಗದ ಸ್ಟಾರ್ ದಂಪತಿಗಳಲ್ಲಿ ಸೂರ್ಯ ಹಾಗೂ ಜೋತಿಕಾ ಕೂಡ ಒಬ್ಬರು. ಮದುವೆಯಾದ ಬಳಿಕವೂ ಜೋತಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ, ಮಕ್ಕಳು, ಮನೆಯ ಜೊತೆಗೆ ಬಣ್ಣದ ಬದುಕಿನ ನಂಟನ್ನೂ ಹಾಗೆ ಉಳಿಸಿಕೊಂಡಿದ್ದಾರೆ. ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ದುಡಿದ ಜೋತಿಕಾಗಾಗಿ ಇದೀಗ ಸೂರ್ಯ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಈ ನಿರ್ಧರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸ್ಟಾರ್ ನಟ ಸೂರ್ಯ ತಮ್ಮ ಪತ್ನಿಗಾಗಿ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದ್ದಾರೆ. ಹೆಂಡತಿ ತನ್ನ ಪತಿಗಾಗಿ ತ್ಯಾಗ ಮಾಡುತ್ತಾಳೆ, ಆದರೆ ಸೂರ್ಯ ಈಗ ತನ್ನ ಹೆಂಡತಿಗಾಗಿ ತ್ಯಾಗ ಮಾಡಲು ಮುಂದಾಗಿದ್ದು ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸ್ಟಾರ್ ಹೀರೋ ಸೂರ್ಯ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಚೆನ್ನೈನಲ್ಲಿರುವ ಡಾ.ರಾಜ್ ಕುಮಾರ್ ಅವರ ಮನೆ ಸೂರ್ಯ ಅವರ ಮನೆಯ ಪಕ್ಕದಲ್ಲಿದೆ. ನಟನಾದ ನಂತರ ಸೂರ್ಯ ಮುಂಬೈ ಮೂಲದ ನಟಿ ಜ್ಯೋತಿಕಾರನ್ನು ವಿವಾಹವಾದರು. ಆ ಸಮಯದಲ್ಲಿ ಜ್ಯೋತಿಕಾ ದೊಡ್ಡ ನಟಿಯಾಗಿ ಗುರುತಿಸಿಕೊಂಡಿದ್ದರು. ಹಿಂದಿ, ಕನ್ನಡ ಅಲ್ಲದೆ ಹಲವು…
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್ನ ವಡೋದರದಲ್ಲಿ ಸಿ-295 ಏರ್ಕ್ರಾಫ್ಟ್ ತಯಾರಿಸುವ ಟಾಟಾ ಏರ್ಬಸ್ ಕಾರ್ಖಾನೆಯನ್ನು ಉದ್ಘಾಟಿಸಿದರು. C295 ಮಿಲಿಟರಿ ವಿಮಾನವಾಗಿದ್ದು, ಅದರ ಉತ್ಪಾದನೆಯು ಭಾರತದ ಏರೋಸ್ಪೇಸ್ ಉದ್ಯಮವನ್ನು ಬಲಪಡಿಸುತ್ತದೆ. ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಹೊಸ ಭಾಷ್ಯ ಬರೆಯಲಿದೆ ಎನ್ನಲಾಗುತ್ತಿದೆ. ಇದು ಮಿಲಿಟರಿ ಏರ್ಕ್ರಾಫ್ಟ್ಗಳನ್ನು ಉತ್ಪಾದಿಸುವ ದೇಶದ ಮೊದಲ ಖಾಸಗಿ ವಲಯದ ಕಾರ್ಖಾನೆಯಾಗಿದೆ. ಇದು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಜೊತೆಗೆ, ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ವರದಿಯಾಗಿದೆ. ಈ ಯೋಜನೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ವೃದ್ಧಿಸುವುದು ಮಾತ್ರವಲ್ಲದೇ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ವರ್ಲ್ಡ್ ಮಿಶನ್ಗೆ ವೇಗ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಿ-295 ಏರ್ಬಸ್ ಕಾರ್ಖಾನೆಯು ನವಭಾರತದ ಹೊಸ ರೀತಿಯ ಕೆಲಸದ ಸಂಸ್ಕೃತಿಯ ಪ್ರತಿಬಿಂಬವಾಗಿದೆ. 2022ರಲ್ಲಿ ಕಾರ್ಖಾನೆಗೆ ಅಡಿಗಲ್ಲು ಹಾಕಿ, ಎರಡೇ ವರ್ಷದಲ್ಲಿ ಕಾರ್ಯಾರಂಭ ಮಾಡಿದೆ. ಇದು ಯೋಜನೆಯ ವೇಗಕ್ಕೆ ಸಾಕ್ಷಿಯಾಗಿದೆ ಎಂದರು. ಒಪ್ಪಂದದ ಹಿನ್ನೆಲೆ: ಏರ್ಬಸ್ ಸಿ-295 ಒಂದು…
ಚಾರ್ಲಿ ಸಿನಿಮಾದ ನಟಿ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದುಮಾಡಿದ್ದರು. ತಮ್ಮ ನೇರವಾದ ಮಾತು, ಬಿಗ್ ಫೈಟ್, ಕಠಿಣ ಸ್ಪರ್ಧೆ ನೀಡುತ್ತೆ, ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಕೊನೆಯವರೆಗೂ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಸಂಗೀತ ಶೃಂಗೇರಿ ಕೂಡ ಒಬ್ಬರು. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕವೂ ಸಂಗೀತ ಕ್ರೇಜ್ ಕಮ್ಮಿಯಾಗಿಲ್ಲ. ಸದ್ಯ ಸಂಗೀತ ಅವರ ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ಟ್ರೀಟ್ ಫೋಟೊಗ್ರಾಫರ್ ಒಬ್ಬರು ಶೂಟ್ ಮಾಡಿದಂತಹ ಫೋಟೊಗಳು ಇದಾಗಿದ್ದು, ಫೋಟೋದಲ್ಲಿ ನಟಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಂಗೀತ ಶೃಂಗೇರಿಯ ಹೊಸ ಲುಕ್ ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಫೋಟೊಗಳಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಲೈಕ್ಸ್ , ಸಾವಿರಾರು ಕಾಮೆಂಟ್ಸ್ ಗಳೂ ಬಂದಿವೆ. ಹೆಚ್ಚಾಗಿ ಸಿಂಪಲ್ ಆಗಿ ಕಾಣಿಸಿಕೊಳ್ಳುವ ಸಂಗೀತ ಇಲ್ಲಿ ಮಾಡರ್ನ್ ಆಗಿ ಜೊತೆಗೆ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಂಗೀತ ಡೆನಿಮ್ ಡಂಗ್ರಿ ಡ್ರೆಸ್ ಧರಿಸಿದ್ದು, ಅದಕ್ಕೆ ಪರ್ಪಲ್ ಬಣ್ಣದ…
ಅಮೆರಿಕ ಅಧ್ಯಕ್ಷ ಜೋ ಬೈಡನ್ ಶ್ವೇತಭವನದಲ್ಲಿ ಸೋಮವಾರ ದೀಪಾವಳಿ ಆಚರಣೆ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ದೇಶದಲ್ಲಿನ ಕಾಂಗ್ರೆಸಿಗರು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ 600ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಬೆಳಕಿನ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಂಪ್ರದಾಯದಂತೆ ಬೈಡನ್ ಭಾಷಣಕ್ಕೂ ಮುನ್ನ ಬ್ಲೂ ರೂಮ್‌ನಲ್ಲಿ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಬೈಡನ್, ‘ಶ್ವೇತ ಭವನದಲ್ಲಿ ಅತಿದೊಡ್ಡ ದೀಪಾವಳಿ ಆಚರಣೆ ಆಯೋಜಿಸಿರುವುದಕ್ಕೆ ಹೆಮ್ಮೆಯಿದೆ’ ಎಂದರು. ಇದೇ ವೇಳೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ವಿಲಿಯಮ್ಸ್ ಅವರ ವೀಡಿಯೊ ಸಂದೇಶವನ್ನು ಪ್ರಸ್ತುತಪಡಿಸಲಾಯಿತು. ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಾರಣ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ಆಫ್ರಿಕಾ ಖಂಡದ ಉತ್ತರ ಭಾಗದ ದೇಶವಾದ ಚಾಡ್‌ನಲ್ಲಿ ಬೋಕೊ ಹರಾಮ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಚಾಡ್ ಸೇನೆಯ 40 ಸೈನಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯೂಗೌಬೊವಾ ಹೆಸರಿನ ಸೇನಾ ನೆಲೆಯ ಮೇಲೆ ಸೋಮವಾರ ನಸುಕಿನ ಜಾವ ಉಗ್ರರು ಏಕಾಏಕಿ ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯುನಿಟ್ ಕಮಾಂಡರ್ ಸೇರಿದಂತೆ ಸೈನಿಕರು ಮೃತಪಟ್ಟಿದ್ದಾರೆ ಎಂದು ಚಾಡ್ ಸೇನಾ ವಕ್ತಾರರು ತಿಳಿಸಿದ್ದಾರೆ. ಘಟನೆ ಬಗ್ಗೆ ಚಾಡ್ ಅಧ್ಯಕ್ಷ ಮಹಮತ್ ಇಡ್ರಿಸ್ ಡೆಬಿ ಇಟ್ನೊ ಆಘಾತ ವ್ಯಕ್ತಪಡಿಸಿದ್ದಾರೆ. ನಮ್ಮ ಮೇಲೆ ದಾಳಿ ಮಾಡಿದ ಉಗ್ರರನ್ನು ಪ್ರತಿ ದಾಳಿ ಮಾಡಿ ಹತ್ಯೆ ಮಾಡಿದ್ದೇವೆ. ಸ್ಥಳದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ’ ಎಂದು ಅವರು ತಿಳಿಸಿದ್ದಾರೆ. ಪಕ್ಕದ ನೈಜೀರಿಯಾ ಜೊತೆ ಗಡಿ ಸಂಘರ್ಷ ಹೊಂದಿರುವ ಚಾಡ್ ಮೇಲೆ ನೈಜಿರಿಯಾ ಮೂಲದ ಬೊಕೊ ಹರಾಮ್ ಉಗ್ರರೂ ಸಹ ಕೆಂಗೆಣ್ಣು ಬೀರಿದ್ದಾರೆ.