Author: Author AIN

ಚಾಮರಾಜನಗರ : ಕಾವೇರಿ ನದಿಯಲ್ಲಿ ಯೋಗ ಮಾಡುತ್ತಲೇ ನುರಿತ ಈಜು ಹಾಗೂ ಯೋಗಪಟು ಸಾವನ್ನಪ್ಪಿದ್ದಾರೆ.  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರದಲ್ಲಿ ಘಟನೆ ನಡೆದಿದೆ. https://ainlivenews.com/two-young-women-drowned-in-muttathi-river/ ಕೊಳ್ಳೇಗಾಲದ ನಾಗರಾಜು(78) ಮೃತ ದುರ್ದೈವಿಯಾಗಿದ್ದು, ವಿಪ್ರ ಬಾಂಧವರ ಜೊತೆ ತೀರ್ಥಸ್ನಾನ ಮಾಡಲು ತೆರಳಿದ್ದರು. ಈಜುತ್ತಾ ಬಲುದೂರ ಸಾಗಿದ ಬಳಿಕವೂ ಹಿಂತಿರುಗದಿದ್ದಾಗ ನೀರಿನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. https://www.youtube.com/watch?v=fGzNs6EQWq0 ನೀರಿನಲ್ಲಿ ಯೋಗ ಸೇರಿ ವಿವಿಧ ಆಂಗಿಕ ಸಾಧನೆ ಮಾಡುವುದರಲ್ಲಿ ನಿಪುಣರಾಗಿದ್ದ ನಾಗರಾಜು ಈಜುವಾಗ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಆಂಧ್ರಪ್ರದೇಶ : ಶಾಲಾ ಮಕ್ಕಳಿದ್ದ ಬಸ್‌ ಪಲ್ಟಿಯಾಗಿ, ಕೆರೆಗೆ ಬಿದಿದ್ದು, ಪರಿಣಾಮ ಐವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಘಟನೆ ನಡೆದಿದೆ. https://ainlivenews.com/two-young-women-drowned-in-muttathi-river/ ಮಂಡಸ  ಮಂಡಲದ ವಿವೇಕಾನಂದ ಶಾಲೆಗೆ ಸೇರಿದ ಮಂಡಸ ಉಮಗಿರಿ ಮೂಲಕ ಬುಡಾರು ಸಿಂಗ್‌ಗೆ 35 ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಂಡಸ ಮತ್ತು ಉಮಗಿರಿ ನಡುವೆ ಉರುಳಿ ಕೆರೆಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಧಾವಿಸಿ ಬಸ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Read More

ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ನಡೆದಿದೆ. ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಶೋಭಾ (23) ನದೀಯಾ (19) ಮೃತರು. https://ainlivenews.com/a-fire-broke-out-next-to-the-police-station-a-major-disaster-that-was-missed/ ಮಳವಳಿ ತಾಲೂಕಿನ ಹಲಗೂರಿನ ಮುತ್ತತ್ತಿಯ ಆಂಜನೇಯ ಸ್ವಾಮಿ ದೇವರ ಕಾರ್ಯಕ್ಕೆಂದು ತೆರಳಿದ್ದರು. ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಗಾಣಾಳು ಗ್ರಾಮದ ಸುಮಾರು 50 ಕ್ಕೂ ಹೆಚ್ಚು ಮಂದಿ ತೆರಳಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಾಹಿತಿ ನೀಡಿದ ಕೂಡಲೇ ಹಲಗೂರು ಪೊಲೀಸರು ಸ್ಥಳಕ್ಕಾಗಿಮಿಸಿದ್ದು, ಇಬ್ಬರ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಾಗಲಕೋಟೆ :  ಪೊಲೀಸ್ ಠಾಣೆ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಬಾಗಲಕೋಟ ಜಿಲ್ಲೆ ಇಲಕಲ್ ನಗರದ ಶಹರ್ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ. https://ainlivenews.com/another-atm-machine-theft-khadeem-who-stole-the-machine-with-money/ ಪೊಲೀಸ್ ಠಾಣೆ ಹಿಂಭಾಗ ಬೆಳಗ್ಗ ನಗರಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದ್ದು, ಕಸ ರಾಶಿ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ತದನಂತರ ಪೊಲೀಸ್ ಠಾಣೆ ಹಿಂದೆ ಇದ್ದ ಟೈಯರ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಹೊಗೆ ಆವರಿಸಿಕೊಂಡಿದ್ದನ್ನ ಕಂಡು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.

Read More

ಹಾಸನ : ಹಾಸನದಲ್ಲಿ ಮತ್ತೊಂದು ಎಟಿಎಂ ಮಿಷನ್‌ ಕಳುವಾಗಿದೆ.  ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯ ಪಕ್ಕದಲ್ಲೇ ಇರುವ ಎಟಿಎಂ ನಲ್ಲಿ ಹಣದ ಸಮೇತ ಎಟಿಎಂ ಮಿಷನ್ ಕಳ್ಳತನ ಮಾಡಲಾಗಿದೆ. https://ainlivenews.com/suspect-of-rape-and-murder-of-a-woman-the-incident-came-to-light-late/ ಎಟಿಎಂನಲ್ಲಿದ್ದ ಲಕ್ಷಾಂತರ ರೂ ಹಣವಿದ್ದ ಇಂಡಿಯನ್ ಬ್ಯಾಂಕ್‌ನ ಎಟಿಎಂ ಮಿಷನ್ ನನ್ನು ಖದೀಮರು ಕದ್ದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ, ಪರಿಶೀಲನೆ ನಡೆಸಿದ್ದಾರೆ, ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಳೆದ ಜ.29ರಂದು ಹಾಸನದ  ಹನುಮಂತಪುರದಲ್ಲಿ ಇದೇ ರೀತಿ ಎಟಿಎಂ ಮಿಷನ್ ಕಳುವಾಗಿತ್ತು. ಇದೀಗ ಹದಿನೈದು ದಿನಗಳ ಅಂತರದಲ್ಲಿ ಮತ್ತೊಂದು ಎಟಿಎಂ ಮಿಷನ್ ಕಳ್ಳತನ ನಡೆದಿದೆ. https://www.youtube.com/watch?v=xOrZKXDKnQ4

Read More

ಹಾಸನ: ಶೆಡ್ ವೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ರಾಜಘಟ್ಟ ಸಮೀಪ ರೈಲ್ವೆ ನಿಲ್ದಾಣ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ. https://ainlivenews.com/a-man-who-was-surprised-to-hear-the-name-of-daba-passed-away/ ಗುರುವಾರದ ಮುಂಜಾನೆ ಘಟನೆ ನಡೆದಿರುವ ಸಾಧ್ಯತೆ ಹೆಚ್ಚಾಗಿದ್ದು, ಹೊಸದಾಗಿ ನಿರ್ಮಾಣವಾಗುತ್ತಿರೋ ರೈಲ್ವೆ ಇಲಾಖೆ ಕಟ್ಟಡದೊಳಗೆ 37-40  ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಅನುಮಾನಿಸಲಾಗಿದೆ. ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತೆಯ ಶವ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದೆ. ಮಹಿಳೆ ತಲೆಯ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಲಾಗಿದೆ. ರೈಲ್ವೆ ಕೂಲಿ ಕಾರ್ಮಿಕರು ಬೆಳಗ್ಗೆ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಶವ ಬಿದ್ದಿರುವುದನ್ನು ನೋಡಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೈಲ್ವೆ ಎಸ್ಪಿ…

Read More

ಬೆಂಗಳೂರು : ಹಾಲ್‌ಮಾರ್ಕ್‌ಗೆ ಎಂದು ಕೊಡುತ್ತಿದ್ದ ಆಭರಣಗಳಲ್ಲಿ ಚಿನ್ನ ಎಗರಿಸುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಂತ ಹಂತವಾಗಿ ಬರೋಬ್ಬರಿ ಎರಡೂವರೆ ಕೆ.ಜಿ ಚಿನ್ನಾಭರಣ ದೋಚಿದ್ದ ಕೆಲಸಗಾರರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಹಲಸೂರ್ ಗೇಟ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  ರಾಜಸ್ಥಾನ ಮೂಲದ ಮಹಬೀರ್ ಬುರ್ಜರ್, ಮಣೀಶ್ ಪ್ರಜಾಪತ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಹಾಲ್‌ ಮಾರ್ಕ್‌ ಹಾಕಿ ಕೊಡುವ ಸೆಂಟರ್‌ ನಲ್ಲಿ  ಮಾಡುತ್ತಿದ್ದರು. ನಗರದ ಹಲವು ಜ್ಯುವೆಲ್ಲರಿ ಅಂಗಡಿಗಳಿಂದ ಈ ಸೆಂಟರ್‌ಗೆ ಹಾಲ್‌ಮಾರ್ಕ್‌ ಹಾಕಿಸಲು‌ ಕೆಜಿಗಟ್ಟಲೇ ಚಿನ್ನಾಭರಣ ಬರುತ್ತಿತ್ತು. ಹೀಗೆ ಹಾಲ್‌ ಮಾರ್ಕಿಂಗ್‌ಗೆ  ಬರುತ್ತಿದ್ದ ಚಿನ್ನಾಭರಣಗಳಲ್ಲಿ ಸ್ವಲ್ಪ ಸ್ವಲ್ಪವೇ ಕದಿಯುತ್ತಿದ್ದರು ಎನ್ನಲಾಗಿದೆ. https://ainlivenews.com/gold-theft-from-sai-gold-palace-owned-by-ta-sharavana-case-registered/ ಕಳೆದ ಮೂರು ತಿಂಗಳಲ್ಲಿ ಹಂತ ಹಂತವಾಗಿ ಎರಡೂವರೆ ಕೆಜಿ ಚಿನ್ನ ಕದ್ದು ಪರಾರಿಯಾಗಿದ್ದರು. ತಾವು ಕದ್ದ ಚಿನ್ನದ ಸಮೇತ ಸೀದಾ ರಾಜಸ್ಥಾನಕ್ಕೆ ಎಸ್ಕೇಪ್ ಆಗಿದ್ದಾರೆ. ಸದ್ಯ ಹಲಸೂರು ಗೇಟ್‌ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ. ಸದ್ಯ ಖದೀಮರು ತನಿಖೆ ವೇಳೆ ಚಿನ್ನವನ್ನು…

Read More

ಬೆಂಗಳೂರು : ರಾಜ್ಯದಲ್ಲಿ ತಳಮಟ್ಟದಲ್ಲಿ ಜೆಡಿಎಸ್‌ ಪಕ್ಷ ಸಂಘಟನೆ ಕಾರ್ಯ ನಡೀತಿದ್ದು, ಇಂದು ಬೆಂಗಳೂರಿನಲ್ಲಿ ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ನಡೆಯಿತು. ಗವಿಪುರದಲ್ಲಿ ನಡೆದ ಬಸವನಗುಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಪರಿಷತ್‌ ಶಾಸಕ ಟಿ.ಎ.ಶರವಣ ಅವರು ಭಾಗಿಯಾಗಿದ್ದರು. https://ainlivenews.com/council-mla-ta-sharavana-drives-for-collective-yoga/ ಜ್ಯೋತಿ ಬೆಳಗುವ ಮೂಲಕ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಬೂತ್‌ ಸಮಿತಿ ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರಿಷತ್‌ ಶಾಸಕ ಟಿ.ಎ.ಶರವಣ ಅವರು, ಬಸವನಗುಡಿಯಲ್ಲಿ ಜೆಡಿಎಸ್‌ ಬಾವುಟ ಹಾರಿಸೋಕೆ ಅವಿರತ ಶ್ರಮ ಪಡುತ್ತಿದ್ದೇವೆ, ಈ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುವುದು ಎಂದರು. ಇನ್ನೂ ಬೆಂಗಳೂರು ವಿಭಜನೆ ಮತ್ತು ಮೆಟ್ರೋ ದರ ಏರಿಕೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ದ ಕಿಡಿಕಾರಿದರು. ಕೆಂಪೇಗೌಡರು ಕಟ್ಟಿದಂತಹ ಬೆಂಗಳೂರನ್ನು ಸರ್ಕಾರ ವಿಭಜನೆ ಮಾಡಲು ಹೊರಟಿದೆ. ಬೆಂಗಳೂರು ವಲಯ ವಿಭಜನೆ ಮತ್ತು ಬಜೆಟ್‌ ಕುರಿತಂತೆ ನಾವು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹ ಮಾಡುವಂತ ಕೆಲಸ ಮಾಡುತ್ತಿದ್ದೇವೆ. ಈ…

Read More

ಹಾವೇರಿ: ಸತ್ತನೆಂದು ಆಸ್ಪತ್ರೆಯಿಂದ ಊರಿಗೆ ಕರೆತರುವಾಗ ಬದುಕಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.. ಹಾವೇರಿಯ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ. ಬಿಷ್ಟಪ್ಪ ಅಶೋಕ್ ಗುಡಿಮನಿ (45) ಮೃತರು. ಅಶೋಕ್‌ ಅವರನ್ನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆದರೆ ಚಿಕಿತ್ಸೆ ವೇಳೆ ಕೆಲ ಗಂಟೆಗಳ ಕಾಲ ಉಸಿರು ನಿಂತಿದ್ದರಿಂದಾಗಿ ವೈದ್ಯರು ಸತ್ತಿದ್ದಾರೆ ಎಂದು, ಊರಿಗೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು. ಅದರಂತೆ ಊರಿಗೆ ವಾಪಸ್‌ ಆಗುತ್ತಿದ್ದ ವೇಳೆ, ಅವರಿಗೆ ಇಷ್ಟವಾದ ಡಾಬಾ ಬಂದಾಗ, ಅವರ ಪತ್ನಿ ಗೋಳಾಡಿದ್ದಾರೆ. ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಗೋಳಾಡಿ ಪತ್ನಿ ಕಣ್ಣೀರಿಟ್ಟಾಗ ಮೃತಪಟ್ಟ ವ್ಯಕ್ತಿ ಉಸಿರು ಬಿಟ್ಟಿದ್ದರು. https://ainlivenews.com/stampede-at-delhi-railway-station-18-people-died/ ಕೂಡಲೇ ಆಸ್ಪತ್ರೆಯಲ್ಲಿ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ವಾರ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಶೋಕ್‌ ಗುಡಿಮನಿ ನಿಧನರಾಗಿದ್ದಾರೆ.

Read More

ನವದೆಹಲಿ: ಕಳೆದ ಶನಿವಾರ ನವದೆಹಲಿಯ ರೈಲು ನಿಲ್ದಾಣದಲ್ಲಿ ಕಾಳ್ತುಳಿತ ಸಂಭವಿಸಿದ್ದು, ಪರಿಸ್ಥಿತಿ ಸದ್ಯ ನಿಯಂತ್ರಂದಲ್ಲಿದೆ. ಕಾಳ್ತುಳಿತದಲ್ಲಿ ಈವರೆಗೂ 18 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿದೆ. https://ainlivenews.com/stampede-at-delhi-railway-station-18-people-died/ ಕೇಂದ್ರ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದು, ಗಾಯಾಳುಗಳ ಕುಟುಂಬಕ್ಕೆ ತಲಾ 2.5 ಲಕ್ಷ ಪರಿಹಾರ ಘೋಷಿಸಿದೆ. ಇನ್ನೊಂದೆಡೆ ಘಟನೆ ಕುರಿತು ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರೈಲು ನಿಲ್ದಾಣದ ಪ್ರತಿಯೊಂದು ಸಿಸಿಟಿವಿ ಕ್ಯಾಮೆರಾಗಳಲ್ಲಿನ ಫೂಟೇಜ್‌ಗಳನ್ನು ಸಹ ಪರಿಶೀಲನೆ ನಡೆಸುತ್ತಿದ್ದಾರೆ. https://ainlivenews.com/stampede-at-railway-station-what-did-the-officials-and-eyewitnesses-say/ ಇನ್ನೂ ಘಟನೆಯ ಕುರಿತು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ನನಗೆ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನನ್ನ ಸಂತಾಪಗಳು. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಕಾಲ್ತುಳಿತದಿಂದ ತೊಂದರೆಗೊಳಗಾದ ಎಲ್ಲರಿಗೂ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಮೋದಿ ಪೋಸ್ಟ್​…

Read More