ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು ೭ ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜೈಲು ಸೇರುವ ಮುನ್ನ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಜೈಲಿನಲ್ಲಿದ್ದ ವೇಳೆ ಬೆನ್ನು ನೋವು ಹೆಚ್ಚಾದ ಹಿನ್ನೆಲೆ ಅದಕ್ಕಾಗಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಲಿನಿಂದ ಹೊರ ಬಂದು ಎರಡು ತಿಂಗಳಾಗುತ್ತ ಬಂದಿದ್ದು ಇದೀಗ ದರ್ಶನ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ, ಈ ಮಧ್ಯೆ ದರ್ಶನ್ ಜೈಲಿಗೆ ಹೋಗುವ ಮುಂಚೆ ಒಪ್ಪಂದ ಮಾಡಿಕೊಂಡಿದ್ದ ಇನ್ನೊಂದು ಸಿನಿಮಾದ ಬಗ್ಗೆಯೂ ಅಪ್ಡೇಟ್ ಸಿಕ್ಕಿದೆ. ‘ಡೆವಿಲ್’ ಸಿನಿಮಾದ ಚಿತ್ರೀಕರಣ ನಡೆಯುವಾಗಲೇ ದರ್ಶನ್, ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ದರ್ಶನ್ ಹಾಗೂ ಪ್ರೇಮ್ ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದ್ದಾರೆ ಎಂಬುದು ಸಹ ಖಾತ್ರಿ ಆಗಿತ್ತು. ಅಸಲಿಗೆ ದರ್ಶನ್ ಹಾಗೂ ಪ್ರೇಮ್ ನಡುವೆ ‘ಪುಡಾಂಗ್’ ವಿಚಾರಕ್ಕೆ ಮನಸ್ಥಾಪ ಮೂಡಿತ್ತು, ರಕ್ಷಿತಾ ಪ್ರೇಮ್ ಸಂಧಾನದ ಕಾರಣ ಆ ಮನಸ್ಥಾಪ ಸರಿಹೋಗಿದ್ದು, ಮತ್ತೊಮ್ಮೆ ದರ್ಶನ್ ಹಾಗೂ…
Author: Author AIN
‘ಮುದ್ದು ಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ವಿರುದ್ದ ಇದೀಗ ಮತ್ತೊಂದು ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಈ ಹಿಂದೆ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದೀಗ ಮತ್ತೊಂದು ದೂರು ದಾಖಲು ದಾಖಲಾಗಿದೆ. ಸೀರಿಯಲ್ ಶೂಟಿಂಗ್ ನೋಡಲು ಹೋಗಿದ್ದ ಮಹಿಳೆಯೊಟ್ಟಿಗೆ ಪರಿಚಯ ಬೆಳೆಸಿಕೊಂಡು ಆಕೆಯನ್ನು ಲೈಂಗಿಕ ತೃಷೆಗಾಗಿ ಚರಿತ್ ಬಾಳಪ್ಪ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಧಾರಾವಾಹಿ ಶೂಟಿಂಗ್ ನೋಡಲು ಬಂದಿದ್ದ ಮಹಿಳೆಯೊಟ್ಟಿಗೆ ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿ ಆ ನಂತರ ಬೇರೆಯವರೊಂದಿಗೆ ಮದುವೆ ಆಗಿದ್ದನಂತೆ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ. ಅದಾದ ಬಳಿಕ ಯುವತಿ, ಚರಿತ್ನಿಂದ ದೂರವೇ ಉಳಿದಿದ್ದರು. ಆದರೆ ಮದುವೆ ಆದ ಬಳಿಕವೂ ಸಹ ಈ ಯುವತಿಯ ಸಂಪರ್ಕ ಬೆಳೆಸಿ, ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡುತ್ತಿದ್ದನಂತೆ. ಅದಾದ ಬಳಿಕ ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು ಗಲಾಟೆ…
ಮಾವಿನ ಹಣ್ಣು, ಲಿಚ್ಚಿ, ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನಲೂ ಉತ್ತಮ ಹಣ್ಣುಗಳು. ಕಲ್ಲಂಗಡಿಯು ಶಾಖ ಮತ್ತು ಅನಾರೋಗ್ಯದಿಂದ ರಕ್ಷಿಸುತ್ತದೆ, ಏಕೆಂದರೆ ಕಲ್ಲಂಗಡಿಹಣ್ಣಿನಲ್ಲಿ 92-93 ಪ್ರತಿಶತದಷ್ಟು ನೀರಿನ ಅಂಶವಿದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ಪೊಟಾಶಿಯಂ ಸೇರಿದಂತೆ ಸಾಕಷ್ಟು ಪೋಷಕಾಂಶಗಳಿವೆ. ಆದ್ದರಿಂದ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಂತೆ ಬೀಜಗಳಲ್ಲಿ ಕೂಡ ಹಲವಾರು ಬಗೆ ಔಷಧೀಯ ಗುಣಗಳು ಇವೆ ಎಂದು ಹೇಳಲಾಗಿದೆ. ಇದನ್ನು ಸೇವನೆ ಮಾಡಿದರೆ, ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವರು. ಕಲ್ಲಂಗಡಿ ಬೀಜಗಳಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಇದು ಒಳ್ಳೆಯದು. ಮೆಗ್ನೀಸಿಯಮ್ ಹೃದಯ ಮತ್ತು ಸ್ನಾಯುವಿನ ಕಾರ್ಯವನ್ನು ಸುಧಾರಿಸುತ್ತದೆ. ಕಲ್ಲಂಗಡಿ ಬೀಜವನ್ನು ಹುರಿದು ತಿಂದರೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೌದು ಕಲ್ಲಂಗಡಿ ಬೀಜಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸಣ್ಣ ಕಪ್ಪು ಬೀಜಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ…
ಭಾರತೀಯ ಚಿತ್ರರಂಗಕ್ಕೆ ಹಲವು ಖ್ಯಾತ ನಟರನ್ನು ನೀಡಿದ ಖ್ಯಾತ ನಿರ್ಮಾಪಕಿ ಸಿ ಕೃಷ್ಣವೇಣಿ ನಿಧನರಾಗಿದ್ದಾರೆ. ವಯೋಸಹಜ ಕಾಲಿಯೆಯಿಂದ ಬಳಲುತ್ತಿದ್ದ 102 ವರ್ಷದ ಕೃಷ್ಣವೇಣಿ ಇಹಲೋಕ ತ್ಯಜಿಸಿದ್ದಾರೆ. ಕೃಷ್ಣವೇಣಿ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. 1938 ರಲ್ಲಿ ನಟನೆ ಆರಂಭಿಸಿದ ಕೃಷ್ಣವೇಣಿ ಮೊದಲು ನಟಿಸಿದ್ದು ‘ಕಚ ದೇವಯಾನಿ’ ಸಿನಿಮಾದಲ್ಲಿ. ನಟನೆಯ ಜೊತೆಗೆ ನಿರ್ಮಾಪಕಿಯೂ ಆಗಿದ್ದ ಸಿ ಕೃಷ್ಣವೇಣಿ, ತೆಲುಗು ಚಿತ್ರರಂಗದ ದಿಗ್ಗಜ ನಟ ಎನ್ಟಿಆರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಎನ್ಟಿಆರ್ ಅವರ ಮೊದಲ ಸಿನಿಮಾ ‘ಮನ ದೇಸಂ’ ನ ನಿರ್ಮಾಪಕಿ ಆಗಿದ್ದ ಕೃಷ್ಣವೇಣಿ ಆ ಸಿನಿಮಾದಲ್ಲಿ ನಟಿಸಿದ್ದರು. ಕೃಷ್ಣವೇಣಿಯ ಕುಟುಂಬದವರು ಸ್ಟುಡಿಯೋ ಸಹ ಹೊಂದಿದ್ದರು. ಹಾಗಾಗಿ ಕೆಲವು ಸಿನಿಮಾಗಳನ್ನು ಕೃಷ್ಣವೇಣಿ ನಿರ್ಮಾಣ ಮಾಡಿದ್ದರು. ಎನ್ಟಿಆರ್ ನಟನೆಯ ಮೊದಲ ಸಿನಿಮಾ ನಿರ್ಮಾಣ ಮಾಡಿದ ಜೊತೆಗೆ, ದಿಗ್ಗಜ ಗಾಯಕ ಘಂಟಸಾಲ ಅವರಿಗೂ ಮೊದಲ ಬಾರಿಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದು ಇದೇ ಕೃಷ್ಣವೇಣಿಯವರು. ತೆಲುಗು ಚಿತ್ರರಂಗದ ಲೆಜೆಂಡರಿ ನಿರ್ದೇಶಕ ರಾಘವೇಂದ್ರ ರಾವ್ ಅವರಿಗೆ ಮೊದಲ ಅವಕಾಶವನ್ನು ಕೊಟ್ಟಿದ್ದು…
ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಮನೆಯಲ್ಲಿ ಇಡುವ ಪೊರಕೆಗೂ ಹೆಚ್ಚಿನ ಮಹತ್ವವಿದೆ. ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಿಂದ ಕೊಳಕು ಮತ್ತು ಬಡತನವನ್ನು ಮಾತ್ರ ಓಡಿಸುತ್ತದೆ. ನೀವು ಪೊರಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡರೆ, ನಂತರ ನೀವು ಜೀವನದಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವ ದಿನ ಪೊರಕೆ ಖರೀದಿಸಬಾರದು ಎಂದು ನಮಗೆ ತಿಳಿಸಿ, ಇಲ್ಲದಿದ್ದರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ದಿನ ಪೊರಕೆ ಖರೀದಿಸಬೇಡಿ ಶನಿವಾರದಂದು ಹೊಸ ಪೊರಕೆಯನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಇದರಿಂದ ವ್ಯಕ್ತಿ ಶನಿ ದೋಷದಿಂದ ಬಳಲಬಹುದು. ಇದರೊಂದಿಗೆ ಶುಕ್ಲ ಪಕ್ಷದಲ್ಲಿಯೂ ಪೊರಕೆಯನ್ನು ಖರೀದಿಸಬಾರದು. ಹೀಗೆ ಮಾಡುವುದರಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ಭಾನುವಾರ ಮತ್ತು ಗುರುವಾರದಂದು ಪೊರಕೆ ಖರೀದಿಯನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುವುದಿಲ್ಲ. ಈ ನಿಯಮಗಳನ್ನು ಅನುಸರಿಸದಿದ್ದರೆ, ಒಬ್ಬ ವ್ಯಕ್ತಿಯು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ನಿಯಮಗಳನ್ನು ನೆನಪಿನಲ್ಲಿಡಿ ಎಲ್ಲರಿಗೂ ಕಾಣುವಂತೆ ಪೊರಕೆಯನ್ನು…
ತುಮಕೂರು : ಬೆಳ್ಳಾವಿ ಕಾರದ ಮಠದಲ್ಲಿ ಶ್ರೀ ಶಿವಯೋಗಿ ಕರ್ತೃ ಗದ್ದುಗೆ ಲೋಕಾರ್ಪಣೆ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಗೃಹ ಸಚಿವ ಡಾ ಪರಮೇಶ್ವರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಜ್ಯೋತಿ ಗಣೇಶ್ ಸೇರಿದಂತೆ ಹಲವರು ರಾಜಕೀಯ ನಾಯಕರು, ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಗುರುಪರಂಪರೆ ಆಚಾರ ಸಂಸ್ಕಾರ ಸಂಸ್ಕೃತಿಯನ್ನ ಮರೆತಿದ್ದೇವೆ. ಹೆತ್ತ ತಂದೆತಾಯಿಗಳನ್ನ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇಂದಿನ ಯುವ ಪೀಳಿಗೆ ಮಾರು ಹೋಗಿರುವುದು ದುರಂತ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟಿದ್ದೇವೆ ಸಂಸ್ಕಾರ ಕೊಡುವುದರಲ್ಲಿ ವಿಫಲವಾಗಿದ್ದೇವೆ. ಈಗಲೂ ಕಾಲಮಿಂಚಿಲ್ಲ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಪ್ರಯತ್ನಿಸೋಣ ಎಂದರು. https://www.youtube.com/watch?v=EXfhOmVXQlY ನರೇಂದ್ರ ಮೋದಿಜಿಯವರು ದೇಶದ ಅಭಿವೃದ್ಧಿ ಕನಸು ಕಾಣುತ್ತ ಯುವಜನತೆ ಮೇಲೆ ವಿಶ್ವಾಸ ವಿಟ್ಟಿದ್ದಾರೆ. ಬೇರೆ ದೇಶಗಳಲ್ಲಿ ಭಾರತೀಯರನ್ನ ಭಿಕ್ಷುಕರಂತೆ ಕಾಣುತ್ತಿದ್ದರು. ಇಂದು ಭಾರತೀಯ ಯಾವುದೇ ದೇಶಕ್ಕೆ ಹೋದರು ತಲೆಯೆತ್ತಿ ನಡೆಯುವಂತೆ…
ಮೈಸೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಮತ್ತು ಡಾಕ್ಟರ್ ಧನ್ಯತಾ ವಿವಾಹ ಅದ್ಧೂರಿಯಾಗಿ ನೆರವೇರಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನವದಂಪತಿ ಇದೀಗ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಧಾರಾ ಕಾರ್ಯಕ್ರಮದ ಬಳಿಕ ಮಾತನಾಡಿದ ಡಾಲಿ, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ಸಾವಿರಾರು ಜನರು ಬಂದು ಆಶೀರ್ವದಿಸಿದ್ದಾರೆ. ಮೈಸೂರಿನಲ್ಲಿ ನನ್ನ ಮದುವೆ ಸಾರ್ಥಕ ಅನ್ನಿಸ್ತು ಎಂದಿದ್ದಾರೆ. https://www.youtube.com/watch?v=a8_9LASHr9I ಕಾರ್ಯಕ್ರಮ ಶಾಂತಿಯುತವಾಗಿ ಆಯಿತು. ಆರತಕ್ಷತೆಗೆ ಜನ ಬಂದಿದ್ದು ಖುಷಿ ಆಯಿತು. ನಾನು ಅಂದುಕೊಂಡಂತೆ ಆಗಿದೆ. ಎಲ್ಲರು ಖುಷಿ ಆಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಗೊತ್ತಿಲ್ಲ. ಅಭಿಮಾನಿಗಳು ತುಂಬಾ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ ಅಂದರು. https://www.youtube.com/watch?v=tWQb4ZbhUdM ಇನ್ನು ಡಾಲಿ ಪತ್ನಿ ಧನ್ಯತಾ ಮಾತನಾಡಿ, ಇಷ್ಟು ಜನರನ್ನ ನಾನು ನೋಡಿಲ್ಲ. ತಾಳಿ ಕಟ್ಟುವಾಗ ನಾನು ತುಂಬಾ ಭಾವುಕಳಾದೆ. ಡಾಲಿ ಕುಟುಂಬ ನನ್ನ ಕುಟುಂಬ. ನನ್ನ ಮನೆಗೆ ಹೋಗೋಕೆ ತುಂಬಾ ಖುಷಿ ಇದೆ. ನಾನು ಡಾಲಿ ಮನೆಗೆ ಹೋಗೋಕೆ ತುಂಬಾ ಕಾಯ್ತಾ ಇದ್ದೇನೆ. ಇಷ್ಟು ಪ್ರೀತಿ ಆಶೀರ್ವಾದ…
ಕೊಪ್ಪಳ: ಬೈಕ್ ಗೆ ಸರ್ಕಾರಿ ಬಸ್ ಡಿಕ್ಕಿಯಾಗಿ, ಓರ್ವ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ಬಳಿ ನಡೆದಿದೆ. https://ainlivenews.com/yadavattu-at-the-trauma-care-center-in-bellary-treatment-in-the-dark/ ಸಿದ್ದಾಪುರ ನಿವಾಸಿ ಮಂಜುನಾಥ ಮೃತರಾಗಿದ್ದು, ಗಾಯಗೊಂಡಿದ್ದ ಖಾಸಿಂ ಸಾಬ್ ನನ್ನು ಆಸ್ಪತ್ರೆಗೆ ದಾಖಲಿಸಲಾಘಿದೆ. ಮೃತ ಮಂಜುನಾಥ್ ಹಾಗೂ ಖಾಸಿಂ ಸಾಬ್ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಸರ್ಕಾರಿ ಬಸ್ ಚಾಲಕ ಎದುರಿಗಿದ್ದ ಕಾರನ್ನು ಓವರ್‌ಟೆಕ್ ಮಾಡಲು ಹೋಗಿ, ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕಾರಟಗಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ : ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ನಲ್ಲಿ ಮತ್ತೊಂದು ಎಡವಟ್ಟು. ಸಂಭವಿಸಿದೆ. ವಿದ್ಯುತ್ ಇಲ್ಲದೇ ಮೊಬೈಲ್ ಟಾರ್ಚ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದಂತ ಘಟನೆಯೂ ನಡೆದಿದೆ. https://www.youtube.com/watch?v=EXfhOmVXQlY ಎಮರ್ಜೆನ್ಸಿ ವಾರ್ಡ್ ನಲ್ಲಿ ವಿದ್ಯುತ್ ಇಲ್ಲದೇ ಪರದಾಡುವಂತಾಗಿದ್ದು, ಮೊಬೈಲ್ ಟಾರ್ಚ್ ಹಾಕಿ ರೋಗಿಗಳನ್ನ ನೋಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅತ್ಯಾಧುನಿಕ ಸೌಲಭ್ಯವಿರೋ ಟ್ರಾಮಾ ಕೇರ್ ಸೆಂಟರ್ ನಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಆರೋಗ್ಯ ಸಚಿವಾಲಯವು ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಟ್ರಾಮಾ ಕೇರ್ ಸೆಂಟರ್ ಸೂಪರಿಡೆಂಡ್ ಗೆ ಸೂಚನೆ ನೀಡಿದೆ.
ಚಾಮರಾಜನಗರ : ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಚಾಮರಾಜನಗರ ಪಟ್ಟಣದ ಕೊಳದಬೀದಿಯಲ್ಲಿ ನಡೆದಿದೆ. ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಭಾಗಶ: ಮನೆ ಭಸ್ಮವಾಗಿದೆ. ಮನೆಯಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. https://ainlivenews.com/a-yogi-died-while-doing-yoga-in-cauvery-river/ ಮನೆಯಲ್ಲಿದ್ದ ಅಂಬಿಕಾ(35) , ಜಿ.ವಿಶ್ವನಾಥ್ (45) ಮಕ್ಕಳಾದ ರೋಹಿಣಿ (12) ವಿವೇಕ್ (10) ಶಕ್ತಿ ( 3 )ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಾಲದಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಭಾರೀ ಅವಘಡವೊಂದನ್ನು ತಪ್ಪಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ನಾಲ್ ರೋಡ್ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ನಾಲ್ ರೋಡ್ ಸಮೀಪದ ಅರಣ್ಯ ಪ್ರದೇಶದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ರೈತರು ಗಮನಿಸಿ ಅರಣ್ಯ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕ ಅಗ್ನಿಶಾಮಕ ದಳದ ಠಾಣಾಧಿಕಾರಿ ಪ್ರಶಾಂತ್ ನಾಯ್ಕ್…