ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಹಿರಿಯ ನಟಿ ಹೇಮಾ ಚೌಧರಿಹಾಗೂ ಎಂ.ಎಸ್ ನರಸಿಂಹಮೂರ್ತಿ ಅವರಿಗೆ ನ.1ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ನಟಿ ಹೇಮಾ ಚೌಧರಿ, ಎಂ.ಎಸ್ ನರಸಿಂಹಮೂರ್ತಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಪುರಸ್ಕೃತರಿಗೆ ಶಾಲಿನ ಜೊತೆ ಹೂವಿನ ಹಾರ ಹಾಕಿ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಖ್ಯಾತ ಹಿರಿಯ ನಟಿ ಹೇಮಾ ಚೌಧರಿ ಬಿಗ್ ಸ್ಕ್ರೀನ್ ಜೊತೆಗೆ ಸ್ಮಾಲ್ ಸ್ಕ್ರೀನ್ ನಲ್ಲೂ ತಮ್ಮನ್ನು ತಾವು ತೊಡಗಿಕೊಂಡಿದ್ದರು. ಅವರು ತೆಲುಗಿನ ಸ್ಟಾರ್ ನಟ ಎನ್‌ಟಿ ರಾಮರಾವ್, ವರನಟ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್ ಸೇರಿದಂತೆ ಅನೇಕರ ಜೊತೆ ತೆರೆಹಂಚಿಕೊಂಡಿದ್ದಾರೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ಬಣ್ಣ ಹಚ್ಚಿದ್ದಾರೆ. ಇನ್ನೂ ನಟ,…
Author: Author AIN
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮೊದಲ ಬಾರಿಗೆ ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಗಳ ಕಾಲಗಳ ಫೋಟೋ ಶೇರ್ ಮಾಡಿರುವ ದಂಪತಿ ಹೆಸರನ್ನು ರಿವೀಲ್ ಮಾಡಿದ್ದಾರೆ. ಸೆ.8ರಂದು ದೀಪಿಕಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ, ಪೋಟೋವನ್ನು ದೀಪಿಕಾ ದಂಪತಿ ಎಲ್ಲೂ ಹಂಚಿಕೊಂಡಿರಲಿಲ್ಲ. ಈಗ ಮಗಳ ಕಾಲಿನ ಫೋಟೋ ಶೇರ್ ಮಾಡಿದ್ದು ಮಗುವಿಗೆ ‘ದುವಾ’ ಎಂದು ಹೆಸರಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಮಗಳಿಗೆ ಇಟ್ಟಿರುವ ದುವಾ ಹೆಸರಿನ ಅರ್ಥವನ್ನು ದಂಪತಿ ತಿಳಿಸಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಎಂದರ್ಥವಾಗಿದೆ. ಯಾಕೆಂದರೆ ನಮ್ಮ ಪ್ರಾರ್ಥನೆಗೆ ಅವಳು ಉತ್ತರ ಎಂದು ನಟಿ ಬರೆದುಕೊಂಡಿದ್ದಾರೆ. 2015 ರಲ್ಲಿ ರಣವೀರ್ ಸಿಂಗ್ ಜೊತೆ ದೀಪಿಕಾ ಇಟಲಿಯಲ್ಲಿ ಹಸೆಮಣೆ ಏರಿದರು. ಹಲವು ವರ್ಷಗಳ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮದುವೆಯಾದ 9 ವರ್ಷಗಳ ಬಳಿಕ ಮಗಳನ್ನು ಬರ ಮಾಡಿಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಬೆನ್ನು ನೋವಿನ ಹಿನ್ನೆಲೆಯಲ್ಲಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. ಬುಧವಾರ ಜಾಮೀನು ಪಡೆದು ಹೊರ ಬಂದಿರುವ ದರ್ಶನ್ ಶುಕ್ರವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ದರ್ಶನ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ನವೀನ್ ಅಪ್ಪಾಜಿ ಗೌಡ ಮಾತನಾಡಿ, ಇಂದು ಮಧ್ಯಾಹ್ನ 3:30 ಕ್ಕೆ ದರ್ಶನ್ ಅಡ್ಮಿಟ್ ಆದರು. ದರ್ಶನ್ ಕಾಲಲ್ಲಿ ವೀಕ್ನೆಸ್ ಇದೆ. ಎಡಗಡೆಯ ಕಾಲು ನೋವಿದೆ. ಎಂಆರ್‌ಐ, ಸ್ಕ್ಯಾನಿಂಗ್, ಎಕ್ಸ್ ರೇ ಮಾಡಬೇಕಾಗುತ್ತೆ. ಎಡಗಡೆಯ ಕಾಲು ತುಂಬಾ ನೋವಿದೆ. ಬೆನ್ನುನೋವಿಗೆ ಸಂಬಂಧಿಸದಂತೆ ಪರೀಕ್ಷೆ ಮಾಡಬೇಕಾಗುತ್ತೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ತಿಳಿಸಿದರು. ಎಡಗಾಲು ಸ್ಪರ್ಶತೆ ಸ್ವಲ್ಪ ಕಡಿಮೆ ಆಗಿದೆ. ಎಕ್ಸಾಮಿನೇಷನ್ ಮುಗಿದ ಬಳಿಕ ಅಪರೇಷನ್ ಅಥವಾ ಫಿಸಿಯೋನಾ? ಅಥವಾ ಬೇರೆ ರೀತಿಯ ಚಿಕಿತ್ಸೆನಾ ಅಂತ…
ಬಿಗ್ ಬಾಸ್ ಸೀಸನ್ 11ಗೆ ಎಂಟ್ರಿಕೊಟ್ಟಿದ್ದ ಲಾಯರ್ ಜಗದೀಶ್ ದೊಡ್ಮನೆಗೆ ಕಾಲಿಟ್ಟ ಎರಡೇ ವಾರಕ್ಕೆ ಹೊರ ಬಂದಿದ್ದರು. ಶೋ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣದಿಂದ ಅವರನ್ನು ಮಧ್ಯದಲ್ಲೇ ಎಲಿಮಿನೇಟ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವು ಜಗದೀಶ್ ಹವಾ ಕಡಿಮೆ ಆಗಿಲ್ಲ. ಎಂದಿನಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ರಿಯಾಲಿಟಿ ಶೋನಿಂದಲೂ ಅವರಿಗೆ ಅಹ್ವಾನ ಬರುತ್ತಿದೆ. ಈಗ ಅವರು ‘ಜೀ ಕನ್ನಡ’ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದಾರೆ. ಜಗಮಗಿಸುವ ವೇದಿಕೆಯಲ್ಲಿ ಕಲರ್ಫುಲ್ ಬಟ್ಟೆ ಧರಿಸಿ ಜಗದೀಶ್ ಅವರು ಎಂಟ್ರಿ ನೀಡಿದ್ದಾರೆ. ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರ ಎಂಟ್ರಿ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಜಡ್ಜ್ಗಳಾದ ರಕ್ಷಿತಾ ಪ್ರೇಮ್, ಶಿವರಾಜ್ಕುಮಾರ್, ವಿಜಯ್ ರಾಘವೇಂದ್ರ ಅವರು ಗ್ರ್ಯಾಂಡ್ ವೆಲ್ ಕಮ್ ನೀಡಿದ್ದು, ಎಂದಿನಂತೆ ಜಗದೀಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. ‘ವೆಲ್ಕಮ್ ಜಗದೀಶ್. ಡ್ಯಾನ್ ಚೆನ್ನಾಗಿ ಮಾಡಿದ್ದೀರಿ’…
ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಪದೇಪದೇ ಕೊಲೆ ಬೆದರಿಕೆ ಬರುತ್ತಲೆ ಇದೆ. ಇತ್ತೀಚೆಗಷ್ಟೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನವರು ಎನ್ನಲಾದ ಕೆಲವರು ಸಲ್ಮಾನ್ ಖಾನ್ರ ಆಪ್ತ ಬಾಬಾ ಸಿದ್ಧಿಕಿಯನ್ನು ಹತ್ಯೆ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಅವರನ್ನು ಕೊಂದೇ ಕೊಲ್ಲುವುದಾಗಿ ಹೇಳಿದ್ದಾರೆ. ಇದರ ನಡುವೆ ಸಲ್ಮಾನ್ ಖಾನ್ರ ಮಾಜಿ ಗೆಳತಿ ಸೋಮಿ ಅಲಿ, ‘ಲಾರೆನ್ಸ್ ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ’ ಎಂದು ಹೇಳಿದ್ದಾರೆ. ಸೋಮಿಯ ಈ ಹೇಳಿಕೆ ವೈರಲ್ ಆಗುತ್ತಿದೆ. ಐಎಎನ್ಎಸ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋಮಿ ಅಲಿ, ‘ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ. ಆತನೊಂದಿಗೆ ರಿಲೇಷನ್ಶಿಪ್ನಲ್ಲಿದ್ದಾಗ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನಾನು ಅನುಭವಿಸಿದ್ದೆ. ನಾನು ಮಾತ್ರವೇ ಅಲ್ಲ ಸಲ್ಮಾನ್ ಖಾನ್ ಜೊತೆಗೆ ಪ್ರೇಮ ಸಂಬಂಧದಲ್ಲಿದ್ದ ಎಲ್ಲ ನಟಿಯರೂ ಸಹ ಸಾಕಷ್ಟು ಹಿಂಸೆ ಮತ್ತು ನೋವನ್ನು ಅನುಭವಿಸಿದ್ದಾರೆ, ಆದರೆ ನನ್ನಷ್ಟು ಕೆಟ್ಟದಾಗಿ ಆತ ಇನ್ಯಾರೊಂದಿಗೂ ನಡೆದುಕೊಂಡಿರಲಿಲ್ಲ’ ಎಂದಿದ್ದಾರೆ. ‘ಐಶ್ವರ್ಯಾ ರೈ ಮೇಲೆಯೂ ಸಹ ಬಹಳ ಕೆಟ್ಟದಾಗಿ ಆತ ಹಲ್ಲೆ…
ಡಾಲಿ ಧನಂಜಯ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಡಾಲಿ ಧನಂಜಯ್ ಅವರ ಕೈ ಹಿಡಿಯೋ ಹುಡುಗಿ ಯಾರು ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅವರ ಬಾಳ ಸಂಗಾತಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ತಮ್ಮ ಬಾಳ ಸಂಗಾತಿಯನ್ನು ಧನಂಜಯ್ ಅವರು ಪರಿಚಯಿಸಿದ್ದಾರೆ. ಫೆಬ್ರವರಿ 16ರಂದು ಧನಂಜಯ್ ಮದುವೆ ನಡೆಯಲಿದೆ. ಧನಂಜಯ್ ಅವರ ಮದುವೆ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆಗಳು ಎದುರಾಗುತ್ತಿದ್ದವು. ಮದುವೆ ಯಾವಾಗ ಎಂದು ಅವರನ್ನು ಕೇಳಲಾಗುತ್ತಿತ್ತು. ಇದೀಗ ಆ ಪ್ರಶ್ನೆಗೆ ಡಾಲಿ ಧನಂಜಯ ಕಡೆಯಿಂದ ಉತ್ತರ ಸಿಕ್ಕಿದೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋನ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಸ್ತ್ರೀರೋಗ ತಜ್ಞೆ ಆಗಿರುವ ಧನ್ಯತಾ, ಧನಂಜಯ್ಗೆ ಜೊತೆಯಾಗುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಮಧ್ಯೆ ಅನೇಕ ವರ್ಷಗಳ ಪರಿಚಯ ಇದ್ದು, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.…
ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ ಹಬ್ಬಕ್ಕೆ ಅಧಿಕೃತ ರಜೆ ಘೋಷಣೆ ಮಾಡುವ ಮೂಲಕ ಐತಿಹಾಸ ನಿರ್ಮಿಸಲಾಗಿದೆ. ನ್ಯೂಯಾರ್ಕ್ ನಗರದಲ್ಲಿ 1.1 ಮಿಲಿಯನ್ ವಿದ್ಯಾರ್ಥಿಗಳು ಈ ಬೆಳಕಿನ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನ ಸಾರ್ವಜನಿಕ ಶಾಲೆಗಳಲ್ಲಿ ದೀಪಾವಳಿಗೆ ರಜೆ ಘೋಷಣೆ ಮಾಡುವ ಸಂಬಂದ ಕಳೆದ ವರ್ಷ ಗವರ್ನರ್ ಕ್ಯಾತಿ ಹೊಚುಲ್ ಶಾಸನಕ್ಕೆ ಸಹಿ ಹಾಕಿದ್ದರು. ಇದು ಈ ವರ್ಷದಿಂದ ಜಾರಿಯಾಗಿದ್ದು, ದೀಪಾವಳಿ ಹಿನ್ನೆಲೆ ನವೆಂಬರ್ 1 ಶಾಲೆಗಳಿಗೆ ರಜೆ ನೀಡಲಾಗಿದೆ. ನ್ಯೂಯಾರ್ಕ್ ನಗರದ ಮೇಯರ್ ಕಚೇರಿಯ ಡೆಪ್ಯುಟಿ ಕಮಿಷನರ್ ದಿಲೀಪ್ ಚೌಹಾಣ್ ಮಾತನಾಡಿ, ನ್ಯೂಯಾರ್ಕ್ ನಗರದಲ್ಲಿ ಮೊದಲ ಬಾರಿಗೆ ದೀಪಾವಳಿ ದಿನದಂದು ಅಧಿಕೃತವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಇದು ನಮ್ಮ ನಗರದ ವೈವಿಧ್ಯತೆ ಮತ್ತು ನಮ್ಮ ಸಮುದಾಯ ಮತ್ತು ನಾಯಕರ ದಣಿವರಿಯದ ಪ್ರಯತ್ನಗಳಿಂದಾಗಿ ಹಬ್ಬವನ್ನು ಆಚರಿಸುತ್ತಿರುವುದು ಒಂದು ಮೈಲಿಗಲ್ಲಾಗಿದೆ. 1.1 ಮಿಲಿಯನ್ ವಿದ್ಯಾರ್ಥಿಗಳು ಈ ಹಬ್ಬವನ್ನು ಸಂಭ್ರಮಿಸಲಿದ್ದಾರೆ. ದೀಪಾವಳಿಯು ಏಕತೆಯ ಸಂಕೇತವಾಗಿದ್ದು, ಕತ್ತಲೆಯ ಮೇಲೆ ಬೆಳಕು ಮತ್ತು…
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಐದು ದಿನಗಳು ಮಾತ್ರವೇ ಭಾಕಿ ಇದೆ. ಟ್ರಂಪ್ ಹಾಗೂ ಕಮಲಾ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಇಬ್ಬರು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ವಿಸ್ಕಾನ್ಸಿನ್‌ನಲ್ಲಿ ಇಬ್ಬರೂ ಬಿರುಸಿನ ರ್ಯಾಲಿಯಲ್ಲಿ ನಡೆಸಿದ್ದಾರೆ. ಇಬ್ಬರ ನಡುವೆ ರಾಜಕೀಯ ವಾಕ್ಸಮರವೂ ಜೋರಾಗಿದ್ದು ಮತದಾರರು ಯಾರ ಪರ ಒಲವು ತೋರಿಸುತ್ತಾರೆ ಎಂಬ ಕುತೂಹಲ ಶುರವಾಗಿದೆ. ಚುನಾವಣೆ ನವೆಂಬರ್ 5ರಂದು ನಡೆಯಲಿದೆ. ಬುಧವಾರದ ವೇಳೆಗೆ ಸುಮಾರು 6 ಕೋಟಿ ಮತದಾರರು ಇ-ಮೇಲ್ ಮೂಲಕ ಅಥವಾ ನೇರ ಮತದಾನದ ಮೂಲಕ ಮತ ಚಲಾವಣೆ ಮಾಡಿದ್ದಾರೆ. ಏಕಕಾಲದಲ್ಲಿ ಚುನಾವಣಾ ಪ್ರಚಾರ ಮತ್ತು ಮತದಾನ ಪ್ರಕ್ರಿಯೆ ನಡೆಯುವುದು ಅಮೆರಿಕ ಪ್ರಜಾಪ್ರಭುತ್ವದ ವೈಶಿಷ್ಟ್ಯವೆನಿಸಿದೆ. ಶ್ವೇತಭವನದ ಗದ್ದುಗೆ ಏರಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ನೇರಾನೇರಾ ಹಣಾಹಣಿ ಏರ್ಪಟ್ಟಿರುವುದನ್ನು ಇತ್ತೀಚಿನ ಸಮೀಕ್ಷೆಗಳು ತೆರೆದಿಟ್ಟಿವೆ. ಸಿಎನ್‌ಎನ್ ನಡೆಸಿರುವ ಇತ್ತೀಚಿನ ಸಮೀಕ್ಷೆಗಳು, ಹ್ಯಾರಿಸ್ ಅವರಿಗೆ ಮಿಷಿಗನ್ ಮತ್ತು ವಿಸ್ಕಾನ್ಸಿನ್‌ನಲ್ಲಿ ಪರಿಸ್ಥಿತಿ ಕೊಂಚ ಅನುಕೂಲಕರವಾಗಿದೆ. ಆದರೆ, ಪೆನ್ಸಿಲ್ವೇನಿಯಾದಲ್ಲಿ…
ಪಾಕಿಸ್ತಾನದ ಭದ್ರತಾ ಪಡೆಗಳು ಬನ್ನು ಜಿಲ್ಲೆಯಲ್ಲಿ ಗುಪ್ತಚರ ಕಾರ್ಯಚರಣೆ ನಡೆಸಿದ್ದು, ಎಂಟು ಉಗ್ರರನ್ನು ಹತ್ಯೆಗೈದಿದೆ ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್ ತಿಳಿಸಿದೆ. ಉಗ್ರರ ಸುಳಿವಿನ ಆಧಾರದ ಮೇಲೆ ಬನ್ನು ಜಿಲ್ಲೆಯ ಬಕಾ ಖೇಲ್ ಪ್ರದೇಶದಲ್ಲಿ ಕಾರ್ಯಚರಣೆಯು ನಡೆದಿದ್ದು, ಈ ಕಾರ್ಯಚರಣೆಯಲ್ಲಿ ಎಂಟು ಉಗ್ರರು ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ ಎಂದು ಐಎಸ್‌ಪಿಆರ್ ತಿಳಿಸಿದೆ. ಕಾರ್ಯಚರಣೆಯಲ್ಲಿ ಭದ್ರತಾ ಪಡೆಯನ್ನು ಮುನ್ನಡೆಸುತ್ತಿದ್ದ ಮೇಜರ್ ಅತೀಫ್ ಖಲೀಲ್ ಮತ್ತು ಇಬ್ಬರು ಮೃತಪಟ್ಟಿದ್ದಾರೆ ಎಂದು ಐಎಸ್‌ಆರ್ ಹೇಳಿಕೆ ತಿಳಿಸಿದೆ. ಈ ಕಾರ್ಯಚರಣೆಯಲ್ಲಿ ಸ್ಥಳೀಯ ಉಗ್ರಗಾಮಿ ಕಮಾಂಡರ್ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.
ಕಳೆದ ಕೆಲ ದಿನಗಳಿಂದ ಸ್ಪೇನ್ ನಲ್ಲಿ ಸುರಿಯುತ್ತಿರುವ ಧಾರಾಕಾರಕ ಮಳೆ ಮುಂದುವರೆದಿದೆ. ಭೀಕರ ಪ್ರವಾಹದಲ್ಲಿ ಕನಿಷ್ಠ 158 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಪೂರ್ವ ಸ್ಪೇನ್‍ನ ವಲೆನ್ಸಿಯಾ ಪ್ರಾಂತದಲ್ಲಿ ಹಲವು ಕಟ್ಟಡಗಳು, ಸೇತುವೆಗಳು ಮತ್ತು ಕಾರುಗಳು ನೆರೆನೀರಲ್ಲಿ ಕೊಚ್ಚಿಹೋಗಿವೆ. ಮಣ್ಣಿನ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ಶೋಧಕ್ಕಾಗಿ ರಕ್ಷಣ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಸ್ಪೇನ್ನಲ್ಲಿ ಈ ಶತಮಾನದಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದ್ದು, ವ್ಯಾಪಕ ಹಾನಿಯು ಚಂಡಮಾರುತ ಅಥವಾ ಸುನಾಮಿಯಂತಹ ಪರಿಣಾಮವನ್ನು ನೆನಪಿಸುತ್ತದೆ. ನೂರಾರು ಕಾರುಗಳು ಮಣ್ಣಿನಡಿ ಸಿಲುಕಿದ್ದು, ಅದರೊಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ನೂರಾರು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ದೊಡ್ಡ ದೊಡ್ಡ ಮರಗಳು ಸಹ ಬೇರು ಸಹಿತ ಬುಡಮೇಲಾಗಿವೆ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. “ದುರದೃಷ್ಟವಶಾತ್, ಕೆಲವು ವಾಹನಗಳಲ್ಲಿ ಮೃತದೇಹಗಳಿವೆ” ಎಂದು ಸ್ಪೇನ್‌ನ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಅವರು ಹೇಳಿದ್ದಾರೆ. ಭಾರಿ…