Author: Author AIN

ಗಾಜಾದಲ್ಲಿನ ಹೋರಾಟವನ್ನು ಬೆಂಬಲಿಸುವ ಮೂಲಕ ತನ್ನ ಪೂರ್ವಾಧಿಕಾರಿ ಸಯ್ಯದ್ ಹಸನ್ ನಸ್ರಲ್ಲಾ ಅಳವಡಿಸಿಕೊಂಡ ಯುದ್ಧ ಕಾರ್ಯತಂತ್ರವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹಿಜ್ಬುಲ್ಲಾದ ಹೊಸ ನಾಯಕ ಶೇಖ್ ನಯೀಮ್ ಖಾಸಿಮ್ ಹೇಳಿಕೆ ನೀಡಿದ್ದಾರೆ. “ರಾಜಕೀಯ, ಜಿಹಾದಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಯ್ಯದ್ ಹಸನ್ ನಸ್ರಲ್ಲಾ ಅವರ ಕಾರ್ಯಸೂಚಿಯನ್ನು ಮುಂದುವರಿಸಿಕೊಂಡು ಹೋಗುವೆ” ಎಂದು ಖಾಸಿಮ್ ಹಿಜ್ಬುಲ್ಲಾದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ದೂರದರ್ಶನ ಭಾಷಣದಲ್ಲಿ ಅವರು ಹೇಳಿದರು. ಈ ಪ್ರದೇಶದಲ್ಲಿ ಇಸ್ರೇಲ್ ಒಡ್ಡಿರುವ ಬೆದರಿಕೆ ಎದುರಿಸಲು ಗಾಜಾವನ್ನು ಬೆಂಬಲಿಸುವುದು ಅತ್ಯಗತ್ಯ ಎಂದು ಖಾಸಿಮ್ ಒತ್ತಿ ಹೇಳಿದರು. “ಇದು ನಮ್ಮ ಭೂಮಿಯಾಗಿರುವುದರಿಂದ ನೀವು ಖಂಡಿತವಾಗಿಯೂ ಸೋಲುವಿರಿ. ನಮ್ಮ ದೇಶಗಳಿಂದ ಹೊರಟು ಹೋಗಿ; ನೀವು ಅಲ್ಲಿಯೇ ಇದ್ದರೆ, ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಇಸ್ರೇಲಿಗಳನ್ನು ಉದ್ದೇಶಿಸಿ ಹೇಳಿದರು. ಇರಾನ್ ಯಾವುದೇ ಗುಪ್ತ ಅಜೆಂಡಾಗಳಿಲ್ಲದೇ ಹಿಜ್ಬುಲ್ಲಾವನ್ನು ಬೆಂಬಲಿಸುತ್ತಿದೆ ಎಂದು ಖಾಸಿಮ್ ಹೇಳಿದರು. “ನಮ್ಮ ಗಡಿಗಳಲ್ಲಿ ಲೆಬನಾನ್ ಯೋಧರೊಂದಿಗೆ ಕೈಜೋಡಿಸಿ ಇಸ್ರೇಲ್…

Read More

ಸಾಮಾಜಿಕ ಜಾಲಾ ತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಎಲೋನ್ ಮಸ್ಕ್ ಒಡೆತನದ ಎಕ್ಸ್ ನಿಂದ ಸಾಕಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಿ ವರ್ಜ್‌ನಲ್ಲಿನ ವರದಿಯ ಪ್ರಕಾರ, ಎಕ್ಸ್​ ತಮ್ಮ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಪ್ರಾಥಮಿಕವಾಗಿ ಎಕ್ಸ್​ನ ಎಂಜಿನಿಯರಿಂಗ್ ವಿಭಾಗದ ಮೇಲೆ ಪರಿಣಾಮ ಬೀರಿದೆ. ಎಷ್ಟು ಜನರನ್ನು ಉದ್ಯೋಗದಿಂದ ತೆಗೆದು ಹಾಕಿದ್ದಾರೆ ಎಂಬ ನಿಖರ ಮಾಹಿತಿ ತಿಳಿದು ಬಂದಿಲ್ಲ. ಈ ಬಗ್ಗೆ ಮಸ್ಕ್​ ಆಗಲಿ ಅಥವಾ ಎಕ್ಸ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ, ಟೆಕ್ ಬಿಲಿಯನೇರ್ ತಮ್ಮ ಬಹು ನಿರೀಕ್ಷಿತ ಸ್ಟಾಕ್ ಅನುದಾನದ ಬಗ್ಗೆ ಎಕ್ಸ್​ ಸಿಬ್ಬಂದಿಗೆ ಇಮೇಲ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ದಿ ವರ್ಜ್ ಪ್ರಕಾರ, ಇಮೇಲ್‌ನಲ್ಲಿ ಸಾಮಾಜಿಕ ಮಾಧ್ಯಮ ಪಾಲ್ಟ್‌ಫಾರ್ಮ್ ಉದ್ಯೋಗಿಗಳ ನಿರೀಕ್ಷಿತ ಪ್ರಭಾವದ ಆಧಾರದ ಮೇಲೆ ಸ್ಟಾಕ್ ಆಯ್ಕೆಗಳನ್ನು ನೀಡಲು ಯೋಜಿಸಿದೆ. ಅಂದರೆ, ಸಿಬ್ಬಂದಿ ತಮ್ಮ ಸ್ಟಾಕ್ ಪಡೆಯಲು ಕಂಪನಿಗೆ ತಮ್ಮ ಕೊಡುಗೆಗಳೇನು ಎಂದು…

Read More

ಸ್ಯಾಂಡಲ್‌ವುಡ್‌ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್‌ ಮತ್ತು ಸೋನಲ್ ಮಂಥೆರೋಗೆ ಇದು ಮೊದಲ ದೀಪಾವಳಿ ಆಗಿದೆ. ಮದುವೆಯಾದ ಬಳಿಕ ಬರ್ತಿರೋ ಮೊದಲ ಹಬ್ಬವನ್ನು ಸೋನಲ್ ಹಾಗೂ ತರುಣ್ ಸುಧೀರ್ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ. ಹಬ್ಬದ ಸಂಭ್ರಮದರೋ ಮುದ್ದು ಜೋಡಿ ಇದೀಗ ಅಷ್ಟೇ ಮುದ್ದಾಗಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ನವ ಜೋಡಿಯ ಫೋಟೋ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಸೋನಲ್ ಮತ್ತು ತರುಣ್ ಮದುವೆ ಮುಂಚೆ ಒಂದು ಫೋಟೋ ಶೂಟ್ ಮಾಡಿಸಿದ್ದರು. ವಿಶೇಷವಾಗಿ ಇದನ್ನ ಥಿಯೇಟರ್‌ನಲ್ಲಿಯೇ ಶೂಟ್ ಮಾಡಿಸಿದ್ದರು. ಇಬ್ಬರು ಕ್ರಿಯೇಟಿವಿಟಿಗೆ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದರು. ಇದೀಗ  ದೀಪಾವಳಿ ಹಬ್ಬಕ್ಕೆ ಮಾಡಿಸಿರೋ ಈ ಒಂದು ಫೋಟೋ ಶೂಟ್ ತುಂಬಾನೆ ಸ್ಪೆಷಲ್ ಆಗಿದೆ. ಸೋನಲ್ ಹಾಗೂ ತರುಣ್ ಸುಧೀರ್ ಇಲ್ಲಿ ವಿಶೇಷ ಕಾಸ್ಟೂಮ್ ಹಾಕಿದ್ದಾರೆ. ಲೈಟ್ ಕಲರ್ ಡ್ರೆಸ್ ನಲ್ಲಿ ಇಬ್ಬರು ಸಖತ್ತಾಗೇ ಮಿಂಚಿದ್ದಾರೆ. ಇಬ್ಬರೂ ಒಂದೇ ಬಣ್ಣದ ಡ್ರೆಸ್ ತೊಟ್ಟಿರೋದರಿಂದಲೇ ನವ ಜೋಡಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಸೋನಲ್ ಮತ್ತು ತರುಣ್…

Read More

ಬಾಂಗ್ಲಾ ದೇಶವು ಬಾಕಿ ಬಿಲ್‌ ಪಾವತಿಸದ ಕಾರಣ ಭಾರತದ ಅದಾನಿ ಪವರ್‌ ನ ಅಂಗಸಂಸ್ಥೆ ‘ಅದಾನಿ ಪವರ್‌ ಜಾರ್ಖಂಡ್‌ ಲಿಮಿಟೆಡ್‌’ (ಎಪಿಜೆಎಲ್‌) ನೆರೆ ರಾಷ್ಟ್ರಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ಅರ್ಧದಷ್ಟು ಕಡಿತಗೊಳಿಸಿದೆ. ಬಾಂಗ್ಲಾದೇಶವು 84.6 ಕೋಟಿ ಡಾಲರ್‌ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಪವರ್‌ ಗ್ರಿಡ್‌ ಬಾಂಗ್ಲಾದೇಶ ಪಿಎಲ್‌ಸಿಯ ಅಂಕಿಅಂಶದ ಪ್ರಕಾರ ಗುರುವಾರ ರಾತ್ರಿ ವಿದ್ಯುತ್‌ ಪೂರೈಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಗುರುವಾರ ಮತ್ತು ಶುಕ್ರವಾರ ನಡುವಿನ ಮಧ್ಯ ರಾತ್ರಿಯಲ್ಲಿ 1,600 ಮೆಗಾವ್ಯಾಟ್‌ ಕೊರತೆಯಾಗಿದೆ. ಈ ಮುನ್ನ ಅದಾನಿ ಕಂಪನಿಯು ಅಕ್ಟೋಬರ್‌ 30ರೊಳಗೆ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯು (ಪಿಡಿಬಿ) ಬಾಕಿ ಹಣ ಪಾವತಿಸಬೇಕು ಎಂದು ವಿದ್ಯುತ್‌ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಅಕ್ಟೋಬರ್‌ 27ರ ಪತ್ರದಲ್ಲಿ ಬಾಕಿ ಮೊತ್ತ ಪಾವತಿಸದಿದ್ದರೆ ಕಂಪನಿಯು ವಿದ್ಯುತ್‌ ಖರೀದಿ ಒಪ್ಪಂದದ (ಪಿಪಿಎ) ಅಡಿ ಪರಿಹಾರಾತ್ಮಕ ಕ್ರಮ ಕೈಗೊಳ್ಳಲಿದೆ. ಅದರಂತೆ ಅಕ್ಟೋಬರ್‌ 31ರಂದು ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಿದೆ ಎಂದು ತಿಳಿಸಿದೆ. ಬಾಂಗ್ಲಾದೇಶ ಕೃಷಿ ಬ್ಯಾಂಕ್‌ನಿಂದ 17 ಕೋಟಿ ಡಾಲರ್‌…

Read More

ಸರ್ಬಿಯಾದಲ್ಲಿ ನೋವಿ ಸ್ಯಾಡ್‌ ನ ರೈಲ್ವೇ ನಿಲ್ದಾಣದ ಪ್ರವೇಶದ್ವಾರದಲ್ಲಿ ಮೇಲ್ಛಾವಣಿ ಕುಸಿದು 14 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ದುರಂತ ಸಂಭವಿಸಿದೆ. ರೈಲ್ವೆ ನಿಲ್ದಾಣದ ಮೇಚ್ಚಾವಣಿ ಕುಸಿದ ಪರಿಣಾಮ ಕೆಳಗಡೆ ನಿಂತಿದ್ದ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರೇನ್‌ಗಳು ಮತ್ತು ಬುಲ್ಡೋಜರ್‌ಗಳು ಡಜನ್‌ಗಟ್ಟಲೆ ರಕ್ಷಕರು ಮತ್ತು ನಿರ್ಮಾಣ ಕಾರ್ಮಿಕರೊಂದಿಗೆ ಅವಶೇಷಗಳ ಮೂಲಕ ಶೋಧ ಕಾರ್ಯ ನಡೆಸಿವೆ. ರಾಜಧಾನಿ ಬೆಲ್‌ಗ್ರೇಡ್‌ನ ವಾಯುವ್ಯಕ್ಕೆ ಸುಮಾರು 70 ಕಿಮೀ(40 ಮೈಲುಗಳು) ನಗರದಲ್ಲಿ 35-ಮೀಟರ್ (115-ಅಡಿ) ಉದ್ದದ ಛಾವಣಿಯ ಕುಸಿದು ದುರಂತ ಸಂಭವಿಸಿದೆ. ಸದ್ಯ ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ರಕ್ಷಣಾ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ.

Read More

ಅಮೇರಿಕಾದ ರಕ್ಷಣಾ ಇಲಾಖೆಯೂ ಉಕ್ರೇನ್ ಗೆ ಸುಮಾರು 425 ಮಿಲಿಯನ್ ಡಾಲರ್ ಮೌಲ್ಯದ ಹೆಚ್ಚುವರಿ ಭದ್ರತಾ ನೆರವನ್ನು ಘೋಷಿಸಿದೆ. ಅಧ್ಯಕ್ಷೀಯ ಡ್ರಾಡೌನ್ ಅಥಾರಿಟಿ (ಪಿಡಿಎ) ಪ್ಯಾಕೇಜ್ ಅಡಿಯಲ್ಲಿ ನೆರವು ಉಕ್ರೇನ್ನ ನಿರ್ಣಾಯಕ ಭದ್ರತೆ ಮತ್ತು ರಕ್ಷಣಾ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ ಎಂದು ಪೆಂಟಗನ್ ಹೇಳಿಕೆಯಲ್ಲಿ ತಿಳಿಸಿದೆ. ನೆರವಿನ ಅಡಿಯಲ್ಲಿ ಒದಗಿಸಬೇಕಾದ ಸಲಕರಣೆಗಳಲ್ಲಿ ರಾಷ್ಟ್ರೀಯ ಸುಧಾರಿತ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಗಳ (ನಾಸಾಮ್ಸ್) ಯುದ್ಧಸಾಮಗ್ರಿಗಳು ಸೇರಿವೆ; ಸ್ಟಿಂಗರ್ ಕ್ಷಿಪಣಿಗಳು; ಮಾನವರಹಿತ ವೈಮಾನಿಕ ವ್ಯವಸ್ಥೆಗಳು (ಸಿ-ಯುಎಎಸ್) ಉಪಕರಣಗಳು ಮತ್ತು ಯುದ್ಧಸಾಮಗ್ರಿಗಳು; ಗಾಳಿಯಿಂದ ನೆಲಕ್ಕೆ ಯುದ್ಧಸಾಮಗ್ರಿಗಳು; ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್ (ಹಿಮಾರ್ಸ್) ಗಾಗಿ ಮದ್ದುಗುಂಡುಗಳು; 155 ಎಂಎಂ ಮತ್ತು 105 ಎಂಎಂ ಫಿರಂಗಿ ಮದ್ದುಗುಂಡುಗಳು; ಟ್ಯೂಬ್-ಉಡಾವಣೆ, ಆಪ್ಟಿಕಲ್ ಟ್ರ್ಯಾಕ್, ವೈರ್-ಗೈಡೆಡ್ (ಟಿಒಡಬ್ಲ್ಯೂ) ಕ್ಷಿಪಣಿಗಳು; ಜಾವೆಲಿನ್ ಮತ್ತು ಎಟಿ -4 ಆಂಟಿ-ಆರ್ಮರ್ ವ್ಯವಸ್ಥೆಗಳು; ಸ್ಟ್ರೈಕರ್ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು; ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು; ವೈದ್ಯಕೀಯ ಉಪಕರಣಗಳು; ಮತ್ತು ನೆಲಸಮಗೊಳಿಸುವ ಉಪಕರಣಗಳು ಮತ್ತು…

Read More

ಖಾನ್ ಯೂನಿಸ್‌ ನಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ಹಿರಿಯ ಅಧಿಕಾರಿ ಇಝ್‌-ಅಲ್‌ ದೀನ್‌ ಕಸಬ್‌ರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಮೃತ ಅಲ್ ದೀನ್ ಕಸಬ್ ಗಾಜಾ ಪಟ್ಟಿಯಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಜೊತೆಗೆ ಹಮಾಸ್‌ ನ ಉನ್ನತ ಶ್ರೇಣಿಯ ನಾಯಕರಾಗಿದ್ದರು ಎಂದು ಇಸ್ರೇಲ್‌ ಹೇಳಿದೆ. ಕಸಬ್ ಸಾವನ್ನು ಹಮಾಸ್ ಬಂಡುಕೋರ ಸಂಘಟನೆಯೂ ಖಚಿತ ಪಡಿಸಿದ್ದು, ‘ಅವರ ಸಾವಿಗೆ ದುಃಖ ವ್ಯಕ್ತ ಪಡಿಸುತ್ತೇವೆ’ ಎಂದು ಹೇಳಿದೆ. ಅಲ್ಲದೆ ಮತ್ತೊಬ್ಬ ಅಧಿಕಾರಿ ಐಮನ್ ಆಯೆಷ್ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ. ಕಸಬ್‌, ಗಾಜಾದಲ್ಲಿ ಸ್ಥಳೀಯ ಗುಂಪಿನ ಅಧಿಕಾರಿಯಾಗಿದ್ದರೂ, ಅದರ ನಿರ್ಧಾರ ತೆಗೆದುಕೊಳ್ಳುವ ರಾಜಕೀಯ ಕಚೇರಿಯ ಸದಸ್ಯರಲ್ಲ ಎಂದು ಹಮಾಸ್ ಮೂಲಗಳು ತಿಳಿಸಿವೆ.

Read More

ಯುವ ಸಿನಿಮಾದ ಮೂಲಕ ಭರ್ಜರಿಯಾಗಿ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ದೊಡ್ಮನೆ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಇದೀಗ 2ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 2ನೇ ಸಿನಿಮಾದ ಟೈಟಲ್ ಇದೀಗ ಅನೌನ್ಸ್ ಮಾಡಿದ್ದಾರೆ. ಕ್ಯಾಚಿ ಟೈಟಲ್‌ನೊಂದಿಗೆ ಯುವ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.  ಯುವ ನಟನೆಯ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಆಯುಧವೊಂದನ್ನು ಹಿಡಿದು ರಕ್ತಸಿಕ್ತವಾಗಿ ಯುವ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಆಗಿ ಲುಕ್ ಕೊಟ್ಟಿದ್ದಾರೆ. ಈ ಸಿನಿಮಾಗೆ ‘ಎಕ್ಕ’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಪೋಸ್ಟರ್‌ ಶೇರ್‌ ಮಾಡಿ, ಪ್ರಪಂಚದ ಪಾಪದಲ್ಲಿ, ಎಲ್ಲರೂ ಪಾಲುದಾರರೂ ಎಂದು ಯುವ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಎಕ್ಕ’ ಚಿತ್ರವನ್ನು ಕೆಆರ್‌ಜಿ ಸಂಸ್ಥೆ ಮತ್ತು ಪಿಆರ್‌ಕೆ ಸಂಸ್ಥೆಯ ಅಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ & ಭೋಗೇಂದ್ರ ನಿರ್ಮಾಣ ಮಾಡಲಿದ್ದಾರೆ.

Read More

ಕನ್ನಡ ಸ್ಟಾರ್ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ದೀಪಾವಳಿಯಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಪೋಷಕರಾಗುತ್ತಿರುವ ಸಿಹಿಸುದ್ದಿಯನ್ನು ಜೋಡಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ಶುಭ ದಿನದಂದು ನಿಮ್ಮೆಲ್ಲರೊಡನೆ ಶುಭ ಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ‘ಕುಡಿ’ಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಆರ್ಶಿವಾದಗಳ ನಿರೀಕ್ಷೆಯಲ್ಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಸಿಷ್ಠ ಸಿಂಹ ದಂಪತಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಜೋಡಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಗುಡ್ ನ್ಯೂಸ್ ನೀಡಿದ್ದಾರೆ. ಇನ್ನೂ ಡಾಲಿ ಮತ್ತು ವಸಿಷ್ಠ ಸಿಂಹ ಹಲವು ವರ್ಷಗಳಿಂದ ಸ್ನೇಹಿತರು. ಇಂದು (ನ.1) ಡಾಲಿ ಅವರು ಭಾವಿ ಪತ್ನಿಯನ್ನು ಪರಿಚಯಿಸಿ ಮದುವೆ ಡೇಟ್ ಅನೌನ್ಸ್ ಮಾಡಿದ್ದಾರೆ. ಈ ಬೆನ್ನಲ್ಲೇ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗುಡ್ ನ್ಯೂಸ್ ನೀಡಿದ್ದಾರೆ ವಸಿಷ್ಠ ಸಿಂಹ ದಂಪತಿ. ಅಂದಹಾಗೆ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವರ್ಷ ಜನವರಿ 26ರಂದು ಮೈಸೂರಿನಲ್ಲಿ ಹಸೆಮಣೆ ಏರಿದ್ದರು. ಹಲವು…

Read More

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅದಿತಿ ಪ್ರಭುದೇವ ಮನೆಯಲ್ಲಿ ಈ ವರ್ಷದ ದೀಪಾವಳಿ ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಮಗಳ ಜೊತೆ ಅದಿತಿ ದಂಪತಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಇದೀಗ ಕುಟುಂಬದ ಜೊತೆ ದೀಪಾವಳಿ ಹಬ್ಬ ಆಚರಿಸಿರುವ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಮುದ್ದಿನ ಮಗಳು ನೇಸರ, ಪತಿ ಯಶಸ್ ಜೊತೆ ಕುಳಿತು ಕ್ಯಾಮರಾಗೆ ನಟಿ ಪೋಸ್ ಕೊಟ್ಟಿದ್ದಾರೆ. ಅದಿತಿ ಪುತ್ರಿ ನೇಸರ ಪಿಂಕ್ ಬಣ್ಣ ಡ್ರೆಸ್ ತೊಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳನ್ನು ಅಭಿಮಾನಿಗಳಿಗೆ ನಟಿ ತಿಳಿಸಿದ್ದಾರೆ. ಇನ್ನೂ ಉದ್ಯಮಿ ಯಶಸ್ ಜೊತೆ 2022ರಲ್ಲಿ ನಟಿ ಮದುವೆಯಾದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ನವೆಂಬರ್ 22ರಂದು ಹಸೆಮಣೆ ಏರಿದರು. ಅಂದಹಾಗೆ, ಬಜಾರ್, ಟ್ರಿಪಲ್ ರೈಡಿಂಗ್, ಬ್ರಹ್ಮಚಾರಿ, ಧೈರ್ಯಂ, ತೋತಾಪುರಿ, ತೋತಾಪುರಿ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದಿತಿ ನಟಿಸಿದ್ದಾರೆ. ಸದ್ಯ ರಿಯಾಲಿಟಿ ಶೋ ಬಡ್ಜ್ ಆಗಿಯೂ ಬ್ಯುಸಿಯಾಗಿದ್ದಾರೆ.

Read More