ಶಿವಮೊಗ್ಗ, ಫೆ.17 : ಕುವೆಂಪು ವಿಶ್ವವಿದ್ಯಾಲಯ ಹಾಗೂ ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ ಚೆನ್ನೈ ವತಿಯಿಂದ ಫೆಬ್ರವರಿ 20 ರಿಂದ 22 ರ ವರೆಗೆ ಸಮಾಜದಲ್ಲಿ ಜ್ಞಾನ ಎಂಬ ಸಮಾವೇಶವನ್ನು ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಫ್ರೋ ಶರತ್ ಅನಂತ ಮೂರ್ತಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಮಾಜದಲ್ಲಿನ ಜ್ಞಾನದ ಕುರಿತಾದ ಈ ಸಮಾವೇಶವು 75 ವರ್ಷಗಳ ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿಯ ದಾರಿಯಲ್ಲಿ ಜ್ಞಾನದ ಬಗೆಗಿನ ಪ್ರಶ್ನೆಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಶ್ನೆಗಳನ್ನು ಚರ್ಚಿಸುವ ಮುಕ್ತ ವೇದಿಕೆಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಆದರೂ ಮಾನವ ಬದುಕಿನ ಇತರೆ ಜ್ಞಾನ ವಲಯಗಳಾದ ಅರ್ಥಶಾಸ್ತ್ರ, ರಾಜಕೀಯ, ಸಮಾಜ ವಿಜ್ಞಾನ, ಕಲೆ ತತ್ವಶಾಸ್ತ್ರ ಸಾಮಾಜಿಕ ಸಂಘಟನೆ ಕುಟುಂಬ ಮುಂತಾದ ವಿಷಯಗಳ…
Author: Author AIN
ಮೈಸೂರು: ನಗರದ ಸಂಕಲ್ಪ್ ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿರುವುದಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಮೃತ ಚೇತನ್ ಅಮೆರಿಕದಲ್ಲಿರುವ ತನ್ನ ಸಹೋದರ ಭರತ್‌ಗೆ ಮುಂಜಾನೆ 4 ಗಂಟೆಗೆ ಕರೆ ಮಾಡಿ ಕುಟುಂಬದ ಮೂವರನ್ನು ಕೊಲೆ ಮಾಡಿದ್ದೇನೆ. ನಾನು ಸಾಯುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಚೇತನ್ ಮೊದಲು ಕುಟುಂಬಸ್ಥರಿಗೆ ವಿಷ ಉಣಿಸಿ ಹತ್ಯೆಗೆ ಯೋಚಿಸಿದ್ದರು. ಅದರಂತೆ ವಿಷ ಉಣಿಸಿದ್ದರು. ವಿಷ ಉಣಿಸಿ ಸಾವನ್ನಪ್ಪದೇ ಇದ್ದಾಗ ಮೂವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ನೇಣಿಗೆ ಶರಣಾಗಿದ್ದಾರೆ. ಮೃತನ ಸಹೋದರ ಭರತ್, ಚೇತನ್ ಪತ್ನಿಯ ತಂದೆ ತಾಯಿಗೆ ಕರೆ ಮಾಡಿ ಈ ಬಗ್ಗೆ ತಕ್ಷಣ ಮಾಹಿತಿ ನೀಡಿ, ಅಪಾರ್ಟ್‍ಮೆಂಟ್ ಬಳಿ ತೆರಳುವಂತೆ ಹೇಳಿದ್ದರು. ಅಷ್ಟರಲ್ಲಾಗಲೇ ಚೇತನ್ ನೇಣಿಗೆ ಶರಣಾಗಿದ್ದ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಚೇತನ್ (45), ರೂಪಾಲಿ (43), ಪ್ರಿಯಂವದ ಮತ್ತು ಕುಶಾಲ್ (15) ಶವ ಪತ್ತೆಯಾಗಿತ್ತು. ಚೇತನ್ ಶವ ನೇಣು…
ಹುಬ್ಬಳ್ಳಿ: ಸಾರ್ವಜನಿಕರು ಕಡಿಮರ ಮೊತ್ತದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುತ್ತಿದ್ದರು. ಆದ್ರೆ ರಾಜ್ಯ ಸರ್ಕಾರ ಈಗ ಮತ್ತೇ ಶಾಕ್ ನೀಡಿದೆ. ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಫೆಬ್ರುವರಿ 4 ರಂದು ಆದೇಶ ಹೊರಡಿಸಿದೆ. ಈ ಹಿಂದೆ ಕೇವಲ ಐದು ರೂಪಾಯಿಗೆ ಸಿಗುತ್ತಿದ್ದ ಪ್ರಮಾಣ ಪತ್ರ, ಇದೀಗ 50 ರೂಪಾಯಿಗೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಶುಲ್ಕ ಏರಿಕೆ ಬಿಸಿ ತಟ್ಟಿದೆ. ಹೌದು,,, ಜನನ, ಮರಣ ಪ್ರಮಾಣ ಪತ್ರ ಅತ್ಯವಶ್ಯ ದಾಖಲೆಗಳಲ್ಲಿ ಒಂದಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು, ಆಧಾರ್ ಕಾರ್ಡ್ ಮಾಡಿಸಲು ಹಾಗೂ ಇನ್ನಿತರ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ ಬೇಕೇ ಬೇಕು. ಇನ್ನೂ ಮೃತಪಟ್ಟ ವ್ಯಕ್ತಿಯ ಆಸ್ತಿ ಮತ್ತು ಇತರೆ ದಾಖಲಾತಿಗಳು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲು ಮರಣ ಪ್ರಮಾಣ ಪತ್ರ ಕಡ್ಡಾಯ. ಹೀಗಾಗಿ ಜನರು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮೂಲಕ ಈ ಪ್ರಮಾಣ ಪತ್ರಗಳನ್ನು ತೆಗೆದುಕೊಳ್ಳುತ್ತಾರೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/…
ಐಪಿಎಲ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಕೂಡ ಒಂದು. ಮುಂಬೈ ತಂಡವು ಮಾರ್ಚ್ 23 ರಂದು ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದಾಗ್ಯೂ, ಐಪಿಎಲ್ 2025 ಪ್ರಾರಂಭವಾಗುವ ಮೊದಲು ಮುಂಬೈ ಇಂಡಿಯನ್ಸ್ ದೊಡ್ಡ ಆಘಾತವನ್ನು ಅನುಭವಿಸಿತು. ಅದೇನೆಂದರೆ.. ಆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಿಷೇಧ ಮಾಡಲಾಗಿದೆ. ಅವರಿಗೆ ಒಂದು ಪಂದ್ಯ ಆಡದಂತೆ ನಿಷೇಧ ಹೇರಲಾಗಿದೆ. ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಮಿಸ್ ಮಾಡಿಕೊಳ್ಳಲಿದ್ದಾರೆ. ಋತು ಆರಂಭವಾಗುವ ಮೊದಲೇ ನಿಷೇಧ ಏನು? ಪಾಂಡ್ಯ ಏನು ತಪ್ಪು ಮಾಡಿದ್ದಾರೆ ಅಂತ ನಿಮಗನ್ನಿಸುತ್ತೆ? ಕಳೆದ ವರ್ಷ, 2024 ರ ಐಪಿಎಲ್ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ ತಪ್ಪು ಈಗ ಅವರ ನಿಷೇಧಕ್ಕೆ ಕಾರಣವಾಗಿದೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಏಕೆಂದರೆ ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ…
ಧಾರವಾಡ: ಬಾಳುನಿದ್ದಕ್ಕೂ ಅನುದಾಂಪತ್ಯ ನಡೆಸಿದ್ದ ಹಿರಿಯ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಈಶ್ವರ ಆರೇರ್ (82), ಪಾರ್ವತಿ ಆರೇರ್ (73) ಒಂದೇ ದಿನ ಕೊನೆಯುಸಿರೆಳೆದ ಹಿರಿಯ ಜೀವಗಳು. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪತ್ನಿ ಪಾರ್ವತಿ ಆರೇರ್ ಪತ್ನಿ ಆರೈಕೆಯನ್ನು ಪತಿ ಈಶ್ವರ ಆರೇರ್ ಮತ್ತು ಮಕ್ಕಳು ಮಾಡುತ್ತಿದ್ದರು. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಭಾನುವಾರ ರಾತ್ರಿ ಒಟ್ಟಿಗೆ ಊಟ ಮಾಡಿ ದಂಪತಿ ಮಲಗಿದ್ದರು. ಬೆಳಿಗ್ಗೆ ಎಬ್ಬಿಸಲು ಹೋದಾಗ ದಂಪತಿ ಮೇಲೆದ್ದಿಲ್ಲ. ರೈತ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, 12 ಮಂದಿ ಮೊಮ್ಮಕ್ಕಳು ಇದ್ದಾರೆ.
ಬೆಂಗಳೂರು: ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ ಕಿಡಿಕಾರಿದ್ದಾರೆ. ಬೆಮಗಳೂರಿನಲ್ಲಿ ಮಾತನಾಡಿದ ಅವರು, ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆಯವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು ಈಗ ಕೇಳಲ್ಲ. ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಕಿಡಿಕಾರಿದ್ದಾರೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನ ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಇದು ಆರೋಪ ಅಲ್ಲ ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ…
ವಾಷಿಂಗ್ಟನ್: ಎರಡು ದಿನಗಳ ಕಾಲ ಅಮೆರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಮೋದಿ ಅವರು ಎಲಾನ್ ಮಸ್ಕ್ ಅವರನ್ನು ಏಕೆ ಭೇಟಿಯಾದರು ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಎಲಾನ್ ಮಸ್ಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕದ ಸಿಇಒ ಅಥವಾ ಅಮೆರಿಕ ಸರ್ಕಾರದ ಪ್ರತಿನಿಧಿಯಾಗಿ ಭೇಟಿಯಾದರೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನನಗೆ ಗೊತ್ತಿಲ್ಲ” ಎಂದಿದ್ದಾರೆ. “ಅವರಿಬ್ಬರು ಭೇಟಿಯಾದರು. ಅವರು ಭಾರತದಲ್ಲಿ ವ್ಯಾಪಾರ ಮಾಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಲಾನ್ ಮಸ್ಕ್ ಕಂಪೆನಿಯನ್ನು ನಡೆಸುತ್ತಿರುವುದರಿಂದ ಭೇಟಿಯಾಗಿರಬಹುದು”, ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಮೂರು ದಿನಗಳಲ್ಲಿ ಆರಂಭವಾಗಲಿರುವಂತೆಯೇ ಟೀಮ್ ಇಂಡಿಯಾಕ್ಕೆ ಶಾಕ್ ಎದುರಾಗಿದೆ.. ಈಗಾಗಲೇ ದುಬೈಗೆ ಪ್ರಯಾಣ ಬೆಳೆಸಿರುವ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ, ಟೀಮ್ ಇಂಡಿಯಾ ಆಟಗಾರರು ಭಾನುವಾರ ದುಬೈನ ಐಸಿಸಿ ಅಕಾಡೆಮಿಯಲ್ಲಿ ನೆಟ್ ಸೆಷನ್‌ಗಳಲ್ಲಿ ಭಾಗವಹಿಸಿದ್ದರು. ಅದರ ಭಾಗವಾಗಿ, ಹಾರ್ದಿಕ್ ಪಾಂಡ್ಯ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಅವರು ಹೊಡೆದ ಚೆಂಡು ನೇರವಾಗಿ ಹೋಗಿ ರಿಷಭ್ ಪಂತ್ ಅವರ ಎಡ ಮೊಣಕಾಲಿಗೆ ಬಡಿಯಿತು. ಅದರೊಂದಿಗೆ, ಪಂತ್ ಅಲ್ಲಿಯೇ ಕೆಳಗೆ ಬಿದ್ದರು. ಚೆಂಡು ಬಲವಾಗಿ ತಗುಲಿದಾಗ ಪಂತ್ ನೋವಿನಿಂದ ಒದ್ದಾಡಿದರು. ತಕ್ಷಣ, ಫೀಲ್ಡಿಂಗ್ ಕೋಚ್ ಮತ್ತು ವೈದ್ಯಕೀಯ ತಂಡ ಪಂತ್ ಬಳಿಗೆ ಧಾವಿಸಿತು. ಹಾರ್ದಿಕ್ ಪಾಂಡ್ಯ ಕೂಡ ಪಂತ್ ಬಳಿ ಬಂದು ಕ್ಷಮೆಯಾಚಿಸಿದರು. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಆದಾಗ್ಯೂ, ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ನಂತರ, ವೈದ್ಯಕೀಯ ತಂಡವು ಪಂತ್ ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ದಿತು. ಅದಾದ ಸ್ವಲ್ಪ ಸಮಯದ ನಂತರ, ಪಂತ್ ತಮ್ಮ ಪ್ಯಾಡ್‌ಗಳನ್ನು ಹಾಕಿಕೊಂಡು ಅಭ್ಯಾಸಕ್ಕಾಗಿ ಬಂದರು. ಆದರೆ, ಅದು…
ಎಲೋನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ ಅಂತಾರಾಷ್ಟ್ರೀಯ ಬಜೆಟ್‌ನಲ್ಲಿ ವ್ಯಾಪಕ ಬದಲಾವಣೆ ತಂದಿದೆ. ಇದರ ಭಾಗವಾಗಿ ವಿದೇಶಿ ನೆರವು ನಿಧಿಯನ್ನು 723 ಮಿಲಿಯನ್ ಡಾಲರ್ ಕಡಿತಗೊಳಿಸಲು ನಿರ್ಧರಿಸಿದ್ದು ಈ ನಿರ್ಧಾರದ ಅಡಿಯಲ್ಲಿ, ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಿಗೆ ಹಂಚಿಕೆ ಮಾಡಲಾಗುತ್ತಿದ್ದ ಹಣವನ್ನು ನಿಲ್ಲಿಸಲಾಗಿದೆ. ಭಾರತದಲ್ಲಿ ಮತದಾರರ ಜಾಗೃತಿ ಹೆಚ್ಚಿಸಲು ಉದ್ದೇಶಿಸಲಾದ ಹಣವನ್ನು ರದ್ದುಗೊಳಿಸುವ DOGE ನಿರ್ಧಾರಕ್ಕೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದಾರೆ. Xನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದಲ್ಲಿ ಮತದಾರರ ಮತದಾನಕ್ಕೆ ಮಿಲಿಯನ್ ಡಾಲರ್ ಹಣ ಬಳಸಿರುವುದು ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಹೊರಗಿನ ಹಸ್ತಕ್ಷೇಪವಾಗಿರುವುದು ಸ್ಪಷ್ಟವಾಗಿದೆ. ಇದರಿಂದ ಯಾರು ಲಾಭ ಪಡೆಯುತ್ತಿದ್ದರು? ಖಂಡಿತವಾಗಿಯೂ ಆಡಳಿತ ಪಕ್ಷವಲ್ಲ! ಎಂದು ಬರೆದಿದ್ದಾರೆ. ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು 21 ಮಿಲಿಯನ್ ಡಾಲರ್, ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ತಿತ್ವವನ್ನು ಬಲಪಡಿಸಲು 29 ಮಿಲಿಯನ್ ಡಾಲರ್, ಮೊಜಾಂಬಿಕ್‌ನಲ್ಲಿ ಸ್ವಯಂಪ್ರೇರಿತ ಪುರುಷ ಸುನ್ನತಿ ಕಾರ್ಯಕ್ರಮಕ್ಕೆ 10 ಮಿಲಿಯನ್ ಡಾಲರ್ ಮತ್ತು ನೇಪಾಳದಲ್ಲಿ “ಹಣಕಾಸು ಒಕ್ಕೂಟ”…
ತುಮಕೂರು: ಕರ್ನಾಟಕದಲ್ಲಿ ಮತ್ತೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕುಣಿಗಲ್ ತಾಲೂಕಿನ ಕಂಪ್ಲಾಪುರ ಗ್ರಾಮದಲ್ಲಿ ನಡೆದಿದೆ. ಬಾದಾಮಿ ತಾಲೂಕಿನ ಗುಳೇದಗುಡ್ಡ ಮೂಲದ ಮಹಿಳೆ ಕಸ್ತೂರಿ (43) ಸಾವನ್ನಪ್ಪಿದ ದುರ್ಧೈವಿಯಾಗಿದ್ದು, ಬಸವರಾಜು, ಶಾಂತಮ್ಮ, ವಿಶ್ವನಾಥ್, ಪಾವನಿಗೆ ಗಂಭೀರ ಗಾಯಗಳಾಗಿವೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಮೈಸೂರಿಗೆ ತೆರಳುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಗಾಯಾಳುಗಳಿಗೆ ಕುಣಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.