ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆಗೆ ನಗರದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರು. ಬಳಿಕ ದರ ಪರಿಷ್ಕರಣೆ ಮಾಡಿದ್ದೇವೆ ಅಂತಾ ಹೇಳಿದ್ದ ನಮ್ಮ ಮೆಟ್ರೋಗೆ ಪ್ರಯಾಣಿಕರ ದಿಢೀರ್ ಇಳಿಕೆಯ ಬಿಸಿ ತಟ್ಟಿತ್ತು. ಇದೀಗ ಈ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದು, ಮೆಟ್ರೋ ದರ ನಿಗದಿ ಮಾಡುವ ಕಮಿಟಿಯನ್ನ ನೇಮಕ ಮಾಡೋದು ಕೇಂದ್ರ ಸರ್ಕಾರ. ಆ ಕಮಿಟಿಯಲ್ಲಿ ಇಬ್ಬರು ಕೇಂದ್ರ ಸರ್ಕಾರದ ಪ್ರತಿನಿಧಿ, ಒಬ್ಬರು ರಾಜ್ಯ ಸರ್ಕಾರದವರು ಇರುತ್ತಾರೆ. ಮೆಟ್ರೋ ಸ್ವಾಯತ್ತ ಸಂಸ್ಥೆ ಆದರೂ ಮೆಟ್ರೋವನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ನಡೆಸುತ್ತವೆ ಎಂದರು. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಬೆಲೆ ನಿಗದಿ ಮಾಡಿ, ಏರಿಕೆ ಮಾಡಿ ಅಂತ ನಾವು ಪ್ರಪೋಸಲ್ ಕೊಡುತ್ತೇವೆ. ಆದರೆ ಬೆಲೆ ನಿಗದಿ ಮಾಡೋದು ಕಮಿಟಿ ಅವರು. ಆ ಕಮಿಟಿಯ ಅಧ್ಯಕ್ಷರನ್ನು ಆಯ್ಕೆ ಮಾಡೋದು ಕೇಂದ್ರ ಸರ್ಕಾರದವರು ಅನ್ನೋ ಮೂಲಕ ಕೇಂದ್ರ ಸರ್ಕಾರವೇ ಮೆಟ್ರೋ ದರ ಏರಿಕೆ ಮಾಡಿರೋದು ಎಂದು ಪರೋಕ್ಷವಾಗಿ ಆರೋಪ ಮಾಡಿದರು.
Author: Author AIN
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಮದ್ದು ಎರೆದಿದ್ದೇ ಮೆಟ್ರೋ. ಬೇಗ ಬೇಗ ಆಫೀಸ್, ಕಾಲೇಜಿಗೆ ಹೋಗಬೇಕೆಂದವರು ಮೆಟ್ರೋ ಹತ್ತಿದ್ರು. ಮಳೆ, ಚಳಿ, ಬಿಸಿಲು ಹಾಗೂ ಟ್ರಾಫಿಕ್ ಕಿರಿಕಿರಿ ಇಲ್ಲದೇ ನಮ್ಮ ಮೆಟ್ರೋನಲ್ಲಿ ಆರಾಮದಾಯಕ ಪ್ರಯಾಣ ಮಾಡುತ್ತಿದ್ದರು. ಆದ್ರೆ, ದರ ಏರಿಕೆ ಬರೆ ಎಳೆದುಬಿಟ್ಟಿದೆ. ಇದರ ನಡುವೆ ರಾಜ್ಯ ರಾಜಧಾನಿಯ ನಾಗರಿಕರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಹೌದು ನಗರದ ಬಹು ನಿರೀಕ್ಷಿತ ಪಿಂಕ್ ಮೆಟ್ರೋ ಈ ವರ್ಷ ಅಥವಾ ಬರೋ ವರ್ಷ ಓಪನ್ ಆಗಲಿದೆ. ಪಿಂಕ್ ಮಾರ್ಗದ ಗೊಟ್ಟಿಗೆರೆ ಟು ನಾಗವಾರ 21 ಕಿಮೀ ವಿಸ್ತೀರ್ಣದಲ್ಲಿರುವ ಮಾರ್ಗ. ಅಂಡರ್ ಗ್ರೌಂಡ್‌ನಲ್ಲಿ 13 ಕಿಮೀ ಒಳಗೆ ಮೆಟ್ರೋ ರೈಲು ಸಂಚಾರ ಮಾಡಲಿದ್ದು, ಈ ಮಾರ್ಗದಲ್ಲಿ ಒಟ್ಟು-18 ಮೆಟ್ರೋ ಸ್ಟೇಷನ್‌ಗಳಿವೆ. https://ainlivenews.com/if-you-eat-watermelon-seeds-like-this-your-blood-sugar-will-be-immediately-controlled/ 13ರಲ್ಲಿ 12 ಅಂಡರ್ ಗ್ರೌಂಡ್ ಸ್ಟೇಷನ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್‌ಗಳಿವೆ. ಅಂದಾಜು 12 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಾರ್ಗದಲ್ಲಿ 5 ಸಾವಿರ ಕೋಟಿಯಷ್ಟು ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದೆ. ಅಂಡರ್ ಗ್ರೌಂಡ್ ಮೆಟ್ರೋ…
ಕನ್ನಡದ ನಟ ಡಾಲಿ ಧನಂಜಯ್ ಮೈಸೂರಿನಲ್ಲಿ ಅದ್ಧೂರಿಯಾಗಿ ಚಿತ್ರದುರ್ಗ ಮೂಲದ ಡಾ.ಧನ್ಯತಾ ಅವರನ್ನು ಮದುವೆಯಾಗಿದ್ದಾರೆ. ಗುರು ಹಿರಿಯರು, ಗಣ್ಯರು ಅಭಿಮಾನಿಗಳ ಸಮ್ಮುಖದಲ್ಲಿ ತಾಳಿ ಕಟ್ಟಿ ಹೊಸ ಜೀವನ ಆರಂಭಿಸಿದ್ದಾರೆ. ಮೊನ್ನೆ ಅದ್ದೂರಿಯಾಗಿ ಆರತಕ್ಷತೆ, ನಿನ್ನೆ ಮಾಂಗಲ್ಯ ಧಾರಣೆ ನೆರವೇರಿದೆ. ಮೈಸೂರಿನ ವಸ್ತು ಪ್ರದರ್ಶನ ವೇದಿಕೆಯಲ್ಲಿ ಧನಂಜಯ್ ಹಾಗೂ ಧನ್ಯತಾ ಸತಿ, ಪತಿಗಳಾಗಿದ್ದಾರೆ.ಇದೀಗ ಧನ್ಯತಾರನ್ನು ಧನಂಜಯ್ ಕುಟುಂಬಸ್ಥರು ಅದ್ದೂರಿಯಾಗಿ ಮನೆ ತುಂಬಿಸಿಕೊಂಡಿದ್ದಾರೆ. ಅರಸೀಕೆರೆಯ ಕಾಳೇನಹಳ್ಳಿ ನಿವಾಸಕ್ಕೆ ಬಂದ ನವಜೋಡಿಯನ್ನು ಕುಟುಂಬಸ್ಥರು ಸಂಭ್ರಮದಿಂದ ಮನೆ ತುಂಬಿಸಿಕೊಂಡಿದ್ದಾರೆ. ನೆನ್ನೆ ಸಂಜೆಯೇ ಮುದ್ದಿನ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆದಿದ್ದು, ಸುಮಾರು 7 ಗಂಟೆಗೆ ಮನೆ ತುಂಬಿಸಿಕೊಳ್ಳಲಾಗಿದೆ. ಈ ವೇಳೆ ವೇಳೆ ಧನ್ಯತಾ ಹಾಗೂ ಡಾಲಿ ಕುಟುಂಬಸ್ಥರು ಹಾಜರಿದ್ದರು.
ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಗರಾಜ್ ಮಹಾ ಕುಂಭಕ್ಕೆ ಹೋಗಲು ವಿವಿಧ ರೈಲುಗಳನ್ನು ಹತ್ತಲು ಭಾರಿ ಜನಸಮೂಹ ಪ್ರಯತ್ನಿಸುತ್ತಿದ್ದಾಗ ಕಾಲ್ತುಳಿತ ಸಂಭವಿಸಿದೆ. ಈ ಅಪಘಾತದಲ್ಲಿ 18 ಜನರು ಸಾವನ್ನಪ್ಪಿದರು ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಎಲ್‌ಎನ್‌ಜೆಪಿ ಮತ್ತು ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲಾ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ. ಘಟನೆಯ ನಂತರ ರೈಲು ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿಲ್ದಾಣದ ಆವರಣದಲ್ಲಿ ಭದ್ರತಾ ಪಡೆಗಳ ಒಂದು ಕಂಪನಿಯನ್ನು ನಿಯೋಜಿಸಲಾಗಿದೆ. ಮೆಟ್ರೋ ಭದ್ರತೆಯಲ್ಲಿ ತೊಡಗಿರುವ ಸಿಐಎಸ್‌ಎಫ್ ಕಂಪನಿಯನ್ನು ರೈಲ್ವೇ ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮಾತನಾಡಿ, ದೆಹಲಿ ರೈಲು ನಿಲ್ದಾಣದ ಭದ್ರತೆಗಾಗಿ ಎಂಟು ಕಂಪನಿಗಳ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಜೊತೆಗೆ 80 ಸಿಬ್ಬಂದಿಯನ್ನು ಒಳಗೊಂಡ ಮೆಟ್ರೋ ಪೊಲೀಸ್ ಕಂಪನಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಮೆಟ್ರೋದಿಂದ ಮೂವರು ಇನ್ಸ್ಪೆಕ್ಟರ್‌ಗಳು ಮತ್ತು ಒಬ್ಬ ಎಸಿಪಿಯನ್ನು ನಿಯೋಜಿಸಲಾಗಿದೆ. ರೈಲ್ವೇ ಪೊಲೀಸ್ ಮತ್ತು ಜಿಆರ್‌ಪಿಯ ಪ್ರತ್ಯೇಕ…
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತವೊಂದು ಸಂಭವಿಸಿದ್ದು, ತಾಯಿಯೊಬ್ಬಳು ತನ್ನ 5 ವರ್ಷದ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹೌದು ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಅಧ್ಯಕ್ಷೆಯೂ ಆಗಿರುವ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಮಯ್ಯ ಲೇಔಟ್ ನಡೆದಿದೆ. ಶ್ರುತಿ(33) ಆತ್ಮಹತ್ಯೆಗೆ ಶರಣಾದ ಮಹಿಳೆ. ಶ್ರುತಿ ಮೊದಲು ತನ್ನ ಐದು ವರ್ಷದ ಮಗಳು ರೋಷಿಣಿಯನ್ನು ಕೊಂದು ಬಳಿಕ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಟವಾಡಲು ಹೊರಹೋಗಿದ್ದ ಪುತ್ರ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆಗೆ ಮುನ್ನ ಶ್ರುತಿ ಡೆತ್ನೋಟ್ ಬರೆದಿಟ್ಟಿದ್ದು, ಡೆತ್ನೋಟ್ನಲ್ಲಿ ಗಂಡ ಪರಸ್ತ್ರಿಯೊಂದಿಗಿನ ಅನೈತಿಕ ಸಂಬಂಧದ ಹೊಂದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ 10 ವರ್ಷದ ಹಿಂದೆ ಶ್ರುತಿ ಚಾರ್ಟರ್ಡ್ ಅಕೌಂಟೆಂಟ್ ಜತೆ ಮದುವೆಯಾಗಿದ್ದರು. ಅಲ್ಲದೇ ಶ್ರುತಿ ಗ್ರಾಮ ಪಂಚಾಯಿತಿ ಒಂದರ ಅಧ್ಯಕ್ಷೆಯಾಗಿದ್ದು, ಒಂದು ಹೆಣ್ನು ಒಂದು ಗಂಡು ಮಗು ಸಹ ಇದೆ. ಆದ್ರೆ, ಗಂಡನ ಅನೈತಿಕ…
ಬೆಂಗಳೂರು: ಮೆಟ್ರೋ ದರ ಏರಿಕೆ ಆಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದರ ಏರಿಕೆ ಜನಕ್ಕೆ ಹೊರೆ ಆಗುತ್ತದೆ. ಅದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಸಬ್ಸಿಡಿ ಕೊಡಲಿ ಎಂದು ಹೇಳುತ್ತೇನೆ. ಮೆಟ್ರೋ ದರ ಏರಿಕೆ ಆಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ. ಮೋದಿ ಅವರನ್ನು ಪ್ರಶ್ನಿಸಲು ನಮ್ಮ ಸಂಸದರಿಗೆ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ರೈಲ್ವೆ ವಿಷಯ ಬಂದ ಕೂಡಲೇ ಪಿಸಿ ಮೋಹನ್, ತೇಜಸ್ವಿಸೂರ್ಯ ನಾವೇ ಮೆಟ್ರೋ ತಂದಿದ್ದು ಎನ್ನುವ ರೀತಿ ಮಾತಾಡ್ತಾರೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಮೆಟ್ರೋ ಬಂದಿದೆ. ಕೆಲವರು ಫೋಸ್ ಕೊಡೋ ಕೆಲಸ ಮಾಡುತ್ತಾರೆ. ಪ್ರಹ್ಲಾದ್ ಜೋಶಿ ಕೂಡಾ ಸುಳ್ಳು ಹೇಳ್ತಾರೆ. ಬೊಮ್ಮಾಯಿ, ಶೆಟ್ಟರ್ ಕೂಡಾ ಮೆಟ್ರೋ ದರ ರಾಜ್ಯ ಏರಿಕೆ ಮಾಡಿದ್ದು ಅಂತಾರೆ.ಮಾಜಿ ಸಿಎಂ ಆದವರು ಹೀಗೆ ಹಸಿಸುಳ್ಳು ಹೇಳ್ತಾರೆ. ಇವರಿಗೆ ಸಿಎಂ ಆಗಲಿ ಅರ್ಹತೆ ಇರಲಿಲ್ಲ. ಅಂತವರನ್ನ ಬಿಜೆಪಿ ಸಿಎಂ ಮಾಡಿತ್ತು ಎಂದು ಸಿಟ್ಟು ಹೊರ ಹಾಕಿದರು.
ಬೆಂಗಳೂರು: ಬ್ಯಾಂಕ್ ಕೆಲಸಕ್ಕಾಗಿ ಕಾಯುತ್ತಿರೋರಿಗೆ ಗುಡ್ನ್ಯೂಸ್ ಒಂದಿದೆ. ನಿಮಗೆ ಬ್ಯಾಂಕ್ ನಲ್ಲಿ ಕೆಲಸ ಮಾಡಿ ಆಸಕ್ತಿ ಇದ್ಯಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡದೇ ನೋಡಿ. ಪಂಜಾಬ್ & ಸಿಂಧ್ ಬ್ಯಾಂಕ್‌ನಲ್ಲಿ ಬಂಪರ್ ಹುದ್ದೆಗಳು ಖಾಲಿ ಇವೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ನೀವು ಕೂಡ ಕೆಲಸ ಪಡೆಯಲು ಬಯಸಿದರೆ ಪಂಜಾಬ್ & ಸಿಂಧ್ ಬ್ಯಾಂಕ್‌ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಪಂಜಾಬ್ & ಸಿಂಧ್ ಬ್ಯಾಂಕ್ 110 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 7 ರಿಂದ ಫೆಬ್ರವರಿ 28 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಡ್ರೈವ್‌ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ punjabandsindbank.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಈ ನೇಮಕಾತಿ ಅಭಿಯಾನಕ್ಕೆ ಅರ್ಜಿ…
ಬೆಂಗಳೂರು: ಮಾಜಿ ಸಂಸದ ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆರೋಪಿ ಐಶ್ವರ್ಯಗೌಡ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಐಷಾರಾಮಿ ಕಾರುಗಳು ಪತ್ತೆಯಾಗಿದ್ದು, ಕೋಟ್ಯಾಂತರ ಹಣ ವಹಿವಾಟು ಪತ್ತೆಯಾಗಿವೆ. ಈ ಹಲವು ದಾಖಲೆಗಳು ಸಿಕ್ಕಿರುವುದರಿಂದ ಪ್ರಕರಣದ ತನಿಖಾಧಿಕಾರಿ ಭರತ್ ರೆಡ್ಡಿ ಅವರು ಐಶ್ವರ್ಯಳ ಹಣ ವರ್ಗಾವಣೆ ಪರಿಶೀಲಿಸುವಂತೆ ಇಡಿ ಗೆ ಪತ್ರ ಬರೆದಿದ್ದಾರೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಈ ಹಿಂದೆ ಭರತ್ ರೆಡ್ಡಿ ಅವರು ಐಟಿ ಅಧಿಕಾರಿಗಳಿಗೂ ಪತ್ರ ಬರೆದಿದ್ದರು. ಇದೀಗ ಇಡಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಐಶ್ವರ್ಯಗೆ ಡಬಲ್ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹುಬ್ಬಳ್ಳಿ:- ಮೆಟ್ರೋ ದರ ಏರಿಕೆ ಮಾಡಿದ್ದು ನಾವಲ್ಲ, ಅದಕ್ಕೆ ಒಂದು ಸಮಿತಿ ಇದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ವಿಚಾರವಾಗಿ ಮೆಟ್ರೋ ದರ ಏರಿಕೆ ಮಾಡಿದ್ದು ನಾವಲ್ಲ. ದರ ನಿಗದಿ ಮಾಡುವ ಒಂದು ಸಮಿತಿ ಇದೆ. ಆದರೆ ಈ ಮೆಟ್ರೋ ದರ ಏರಿಕೆ ವಿಚಾರದಲ್ಲಿ ಎಲ್ಲ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ. ಅದರಲ್ಲಿ ರಾಜ್ಯ ಅಧಿಕಾರಿಗಳಿರುತ್ತಾರೆ. ಅದಕ್ಕೆ ರಾಜ್ಯ ಸರ್ಕಾರವೇ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿಗಳು ದರ ಏರಿಕೆ ವಿಚಾರವಾಗಿ ನಿರ್ದೇಶನ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ ಎಂದರು. ಇನ್ನೂ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅದಕ್ಕೆ ವಿದ್ಯುತ್, ನೀರು, ಹಾಲಿನ ದರ ಸೇರಿದಂತೆ ಎಲ್ಲ ದರಗಳನ್ನೂ ಏರಿಸುತ್ತಿದೆ. ಸರ್ಕಾರ ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದೆ. ಎಂದು ವಾಗ್ದಾಳಿ ನಡೆಸಿದರು. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಮೈಸೂರಿನಲ್ಲಿ ಉದಯಗಿರಿ ಗಲಾಟೆ ವಿಚಾರವಾಗಿ ಮಾತನಾಡಿ, ಯಾವಾಗ ಸರ್ಕಾರ ಹಳೆ ಹುಬ್ಬಳ್ಳಿ ಪ್ರಕರಣವನ್ನು ಹಿಂದೆಪಡೆದುಕೊಂಡಿತ್ತು ಆವಾಗ ಸರ್ಕಾರ ಯಾರ ಪರ ಇದೆ ಎನ್ನುವುದು…
ಬೆಂಗಳೂರು: ಮಾರ್ಚ್ 3 ರಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ಮಾ.3ರಿಂದ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಂದು ರಾಜ್ಯಪಾಲರು ಬಜೆಟ್ ಮೇಲಿನ ಭಾಷಣ ಮಾಡಲಿದ್ದು ರಾಜ್ಯಪಾಲರ ಭಾಷಣದ ಮೇಲೆ ಮೂರು ದಿನಗಳ ಕಾಲ ಚರ್ಚೆ ನಡೆಯಲಿದೆ. ನಂತರ ನಿಗದಿಯಂತೆ ಮಾ.7ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು. ಮಾರ್ಚ್ ಅಂತ್ಯಕ್ಕೆ ಬಜೆಟ್ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ವಿವರಿಸಿದರು. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಇವತ್ತು ಕೂಡ ಸಭೆ ಮಾಡಿದ್ದೀನಿ. ಕರ್ನಾಟಕ ಸರ್ಕಾರ ಯಾವಾಗಲೂ ರೈತರ ಹಿತ ಕಾಪಾಡಲು ಹಿಂದೆ ಬಿದ್ದಿಲ್ಲ. ಯಾವತ್ತೂ ಕೂಡ ರೈತರ ಜೊತೆ ಇರುತ್ತೇವೆ. ಕೃಷಿಕರ ಜೊತೆ ಇರುತ್ತೇವೆ ಎಂಬ ಮಾತು ಕೊಡುತ್ತೇನೆ. ಬೆಲೆ ಏರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಧಾರ. ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಗೆ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೇವೆ ಎಂದು ಹೇಳಿದರು. ಮೆಟ್ರೋ ರೈಲಿನ ದರ ನಿಗದಿ ಕಮಾಡಲು ಕೇಂದ್ರ ಸರ್ಕಾರ ಕಮಿಟಿ…