ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಮತದಾನಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣೆಗೆ ವಾರ ಇರುವಾಗ್ಲೆ ಅಲ್ಲಲ್ಲಿ ಸಾಕಷ್ಟು ಹಿಂಸಾಚಾರಗಳು ನಡೆಯುತ್ತಿದ್ದು ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 6.50 ಲಕ್ಷ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 100 ವಿದೇಶಿ ವೀಕ್ಷಕರು ಪಾಕಿಸ್ತಾನದ ಚುನಾವಣಾ ಪ್ರಕ್ರಿಯೆಯ ಮೇಲೆ ಕಣ್ಣಿಟ್ಟಿದ್ದಾರೆ. ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಪಾಕಿಸ್ತಾನದಲ್ಲಿ ಒಟ್ಟು 90,675 ಮತಗಟ್ಟೆಗಳಿರುತ್ತವೆ. ಈ ಕೇಂದ್ರಗಳಲ್ಲಿ 2,76,402 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗದ ಪ್ರಕಾರ, 12.85 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ 5121 ಅಭ್ಯರ್ಥಿಗಳಲ್ಲಿ ಒಟ್ಟು 12,85,85,760 ನೋಂದಾಯಿತ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಟ್ರಾನ್ಸ್-ಜೆಂಡರ್ ಅಭ್ಯರ್ಥಿಗಳು ಸೇರಿದ್ದಾರೆ. ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ…
Author: Author AIN
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಈ ಚಿತ್ರದ ಕುರಿತು ಯಾವುದಾದರೂ ಅಪ್ ಡೇಟ್ ಕೊಡಿ ಎಂದು ಫ್ಯಾನ್ಸ್ ಕಿಚ್ಚನನ್ನು ಪದೇ ಪದೇ ಕೇಳ್ತಿದ್ದಾರೆ. ಇದೀಗ ಸುದೀಪ್ ಮ್ಯಾಕ್ಸ್ ಸಿನಿಮಾದ ಮಾಹಿತಿ ಕೇಳುವುದರ ಜೊತೆಗೆ ಸಿಸಿಎಲ್ ಮತ್ತು ಬಿಗ್ ಬಾಸ್ ಅನ್ನು ವ್ಯಂಗ್ಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸಿಸಿಎಲ್ ಮತ್ತು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಲ್ಲಿ ಸುದೀಪ್ ಕಳೆದು ಹೋಗಿದ್ದಾರೆ. ಹಾಗಾಗಿಯೇ ಸಿನಿಮಾ ಬೇಗ ಬೇಗ ಆಗುತ್ತಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದರು. ಮ್ಯಾಕ್ಸ್ ಸಿನಿಮಾ ಎಲ್ಲಿಗೆ ಬಂತು? ಯಾವಾಗ ರಿಲೀಸ್ ಎಂದೆಲ್ಲ ಪ್ರಶ್ನೆ ಕೇಳಿದ್ದರು. ಎಲ್ಲದಕ್ಕೂ ಕಿಚ್ಚ ಪ್ರತಿಕ್ರಿಯೆ ನೀಡಿದ್ದಾರೆ. ಯಾರದೋ ಸಿನಿಮಾ ರಿಲೀಸ್ ಆಯಿತು ಅಂತ ಪೈಪೋಟಿಗಾಗಿ ಹಾಗೆಲ್ಲ ಅಪ್ ಡೇಟ್ ಕೊಡೋಕೆ ಆಗಲ್ಲವೆಂದು ಸುದೀಪ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿದ ಮೇಲೆ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ‘ಸಂಕ್ರಾಂತಿ’ ನಂತರ ಮ್ಯಾಕ್ಸ್ ಸಿನಿಮಾ…
ತಮಿಳು ಚಿತ್ರರಂಗದಲ್ಲಿ ಕಲಾವಿದರು ರಾಜಕೀಯಕ್ಕೆ ಬರುವುದು ಕಾಮನ್ ಆಗಿದೆ. ಈಗಾಗ್ಲೆ ನಟ ವಿಜಯ್ ದಳಪತಿ ತಮ್ಮದೆ ಹೊಸ ಪಕ್ಷ ಹುಟ್ಟುಹಾಕಿದ್ದು ಈ ಮಧ್ಯೆ ನಟ ವಿಶಾಲ್ ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ನಟ ವಿಶಾಲ್ ಸ್ಪಷ್ಟನೆ ನೀಡಿದ್ದಾರೆ. ನಟ ವಿಶಾಲ್ ಜನಪರ ಕೆಲಸಗಳನ್ನು ನೋಡಿ ಅವರು ರಾಜಕೀಯಕ್ಕೆ ಎಂಟ್ರಿಕೊಡ್ತಾರೆ ಎಂದು ಹೇಳಲಾಗಿತ್ತು. ವಿಶಾಲ್ ತಮ್ಮ ತಾಯಿ ಹೆಸರಿನಲ್ಲಿ ಫೌಂಡೇಶನ್, ಅಭಿಮಾನಿಗಳ ಕ್ಲಬ್ ಹೆಸರಿನಲ್ಲಿ ಸಮಾಜ ಸೇವೆ ಮಾಡುತ್ತಿರುವ ಕಾರಣಕ್ಕೆ ವಿಶಾಲ್ ಹೆಸರು ರಾಜಕಾರಣದಲ್ಲಿ ಕೇಳಿ ಬಂದಿತ್ತು. ಆದರೆ ಇದೀಗ ಅದಕ್ಕೆಲ್ಲಾ ವಿಶಾಲ್ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶಾಲ್, ರಾಜಕೀಯ ಕನಸು ಇಟ್ಟುಕೊಂಡು ತಾವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿಲ್ಲ. ನನ್ನ ಖುಷಿಗಾಗಿ ಇವೆಲ್ಲವನ್ನೂ ಮಾಡುತ್ತಿರುವೆ. ಅದಕ್ಕೂ ರಾಜಕಾರಣಕ್ಕೂ ತಳುಕು ಹಾಕಬೇಡಿ ಎಂದು ಪತ್ರ ಬರೆದಿದ್ದಾರೆ. ಸದ್ಯಕ್ಕೆ ರಾಜಕಾರಣದ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ಏನು ಅಂತ ಗೊತ್ತಿಲ್ಲ. ಸಮಾಜ ಸೇವೆ ಎಂದಿನಂತೆ ಮುಂದುವರೆಯಲಿದೆ. ತಾಯಿ…
ನಿರ್ದೇಶಕ ಅಟ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜವಾನ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಶಾರುಖ್ ಜೊತೆ ಮತ್ತೊಂದು ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಅಟ್ಲಿ ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಜವಾನ್ ಸಿನಿಮಾದ ಬಳಿಕ ಶಾರುಖ್ ಖಾನ್ ಹಾಗೂ ಅಟ್ಲಿ ಕಾಂಬಿನೇಷನ್ ನಲ್ಲಿ ಜವಾನ್ 2 ಚಿತ್ರಕ್ಕೆ ಪ್ಲ್ಯಾನ್ ನಡೆದಿತ್ತು. ಆದರೆ ಈ ಮಧ್ಯೆ ಅಟ್ಲಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಅಟ್ಲಿ ಎರಡು ಮೂರು ಬಾರಿ ಸಲ್ಮಾನ್ ಖಾನ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಗೆ ಕಥೆ ಒಪ್ಪಿಸೋಕೆ ಅವರು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಟ್ಲಿ ಎಂಡ್ ಟೀಂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲಿ. ಆದರೆ ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಜವಾನ್ ಸಿನಿಮಾದ ಬಳಿಕ ಅಟ್ಲಿ ನಿರ್ದೇಶನದ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿರೋದು ಮಾತ್ರ…
ಕೊಲಂಬೊ: ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ, ಪ್ರವಾಸಿಗರ ನೆಚ್ಚಿನ ತಾಣವಾದ ಮಾಲ್ದೀವ್ಸ್, ಸಾಲದ ಸಂಕಷ್ಟಕ್ಕೆ ತುತ್ತಾಗುವ ಅತಿ ದೊಡ್ಡ ಅಪಾಯವನ್ನು ಎದುರಿಸುತ್ತಿದೆ ಎಂದು ವಿಶ್ವ ಹಣಕಾಸು ಸಂಸ್ಥೆ ಎಚ್ಚರಿಕೆ ನೀಡಿದೆ. ಚೀನಾದಿಂದ ಹೆಚ್ಚಿನ ಪ್ರಮಾಣದ ಸಾಲ ಪಡೆದಿರುವುದು ಮಾಲ್ದೀವ್ಸ್ ನ ಆರ್ಥಿಕತೆಗೆ ಕುತ್ತಾಗಿ ಪರಿಣಮಿಸಲಿದೆ ಎಂದು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಐಎಂಎಫ್ ಈ ಎಚ್ಚರಿಕೆ ನೀಡಿದೆ. ಆದರೆ ಮಾಲ್ದೀವ್ಸ್ ನ ವಿದೇಶಿ ಸಾಲದ ಕುರಿತ ವಿವರಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಬಹಿರಂಗಪಡಿಸಿಲ್ಲ. ಆದರೆ, ಆ ದೇಶದ ಆರ್ಥಿಕ ನೀತಿಯಲ್ಲಿ ತುರ್ತು ಹೊಂದಾಣಿಕೆ ಮಾಡಬೇಕಾದ ಅಗತ್ಯವನ್ನು ಐಎಂಎಫ್ ಪ್ರತಿಪಾದಿಸಿದೆ. ”ಗಣನೀಯವಾದ ನೀತಿ ಬದಲಾವಣೆಗಳಿಲ್ಲದೆ ಮಾಲ್ದೀವ್ಸ್ ನ ಒಟ್ಟಾರೆ ವಿತ್ತೀಯ ಕೊರತೆ ಹಾಗೂ ಸಾರ್ವಜನಿಕ ಸಾಲದ ಪ್ರಮಾಣವು ಅಧಿಕಮಟ್ಚದಲ್ಲಿಯೇ ಉಳಿದುಕೊಂಡಿದೆ ಎಂದು ಐಎಂಎಫ್ ತಿಳಿಸಿದೆ. 2021ರಲ್ಲಿಯೇ ಮಾಲ್ದೀವ್ಸ್ ಚೀನಾಗೆ 3 ಶತಕೋಟಿ ಡಾಲರ್ ಸಾಲವನ್ನು ಬಾಕಿಯಿರಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ಮಾಹಿತಿ ನೀಡಿದೆ. ಮುಯಿಝ್ಝು ಅವರ ರಾಜಕೀಯ ಗುರು, 2018ರವರೆಗೆ ಆಡಳಿತ ನಡೆಸಿದ್ದ…
ಬಾಲಿವುಡ್ ನ ಖ್ಯಾತ ಸೆಲೆಬ್ರಿಟಿ ದಂಪತಿ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ತಮ್ಮ 12 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಅಂದ ಹಾಗೆ ಇಶಾ ಡಿಯೋಲ್ ಪತಿ ಭರತ್ ನಿಂದ ದೂರವಾಗಲು ವಿವಾಹೇತರ ಸಂಬಂಧವೇ ಕಾರಣ ಎನ್ನಲಾಗ್ತಿದೆ. ಬೆಂಗಳೂರಿನ ಹುಡುಗಿ ಜೊತೆ ಉದ್ಯಮಿ ಭರತ್ಗೆ ಸಂಬಂಧ ಇರುವ ಕಾರಣದಿಂದಾಗಿ ಇಶಾಗೆ ಪತಿಗೆ ಡಿವೋರ್ಸ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಇಶಾ ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಗಂಡ ಹೆಂಡತಿ ನಡುವಿನ ಸಂಬಂಧ ಹದಗೆಟ್ಟಿತ್ತು. ಸಾಕಷ್ಟು ಸಮಯದಿಂದ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದು ಇದೀಗ ಇಬ್ಬರು ಅಧಿಕೃತವಾಗಿ ದೂರವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ತಾವಿಬ್ಬರು ಬೇರೆಯಾಗಿರುವ ಕುರಿತು ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾವು ಪರಸ್ಪರ ಒಪ್ಪಿಗೆಯ ಮೇರೆಗೆ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ಮತ್ತು…
ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ ಸಂಜಯ್ ದತ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅಧಿರಾ ಪಾತ್ರದಲ್ಲಿ ನಟಿಸಿದ ಬಳಿಕ ಸಂಜಯ್ ದತ್ ಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು ಸದ್ಯ ಕೆಡಿ ಚಿತ್ರದಲ್ಲಿ ಸಂಜು ಬಾಯ್ ಅಬ್ಬರಿಸುತ್ತಿದ್ದಾರೆ. ಕೆಡಿ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದು ಧ್ರುವ ಸರ್ಜಾ ಚಿತ್ರದ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ಡಿಕೆ ಚಿತ್ರತಂಡ ಪಾರ್ಟಿಯೊಂದನ್ನು ಆಯೋಜಿಸಿದ್ದು ಪಾರ್ಟಿಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕಾಣಿಸಿಕೊಂಡಿದ್ದಾರೆ. ದರ್ಶನ್ ಸದ್ಯ ಕಾಟೇರ ಸಿನಿಮಾದ ಸೂಪರ್ ಸಕ್ಸಸ್ ನಲ್ಲಿದ್ದು ಇದೇ ಖುಷಿಯಲ್ಲಿ ಅಧಿರಾನ ಜೊತೆ ಪಾರ್ಟಿ ಎಂಜಾಯ್ ಮಾಡಿದ್ದಾರೆ. ದರ್ಶನ್, ಸಂಜಯ್ ದತ್, ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್ ಸೇರಿದಂತೆ ಮತ್ತಷ್ಟು ಮಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದು ಇವುಗಳ ಫೋಟೋಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ, ‘’ಇದು ಸ್ಪೆಷಲ್ ಮೀಟಿಂಗ್ ಹಾಗೂ ಸ್ಪೆಷಲ್ ಮೊಮೆಂಟ್’’ ಎಂದು ಬಣ್ಣಿಸಿದೆ. 1968 ರಿಂದ 1978 ವರೆಗೆ ನಡೆದ ನೈಜ ಘಟನೆಗಳನ್ನ ಆಧರಿಸಿ ‘ಕೆಡಿ’…
ಸದ್ಯ ದರ್ಶನ್ ನಟನೆಯ ಕಾಟೇರ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿದ್ರು ಬಾಕ್ಸ್ ಆಫೀಸ್ ನಲ್ಲಿ ಕಾಟೇರನ ಅಬ್ಬರ ಜೋರಾಗಿಯೇ ಇದೆ. ಈ ಮಧ್ಯೆ ದರ್ಶನ್ ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದಾರೆ. ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾದಲ್ಲಿ ಅಧಿರಾನ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಸಂಜಯ್ ದತ್ ಸೌತ್ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ತಿದ್ದಾರೆ. ಸದ್ಯ ಸಂಜಯ್ ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರತಂಡ ಇತ್ತೀಚೆಗೆ ಪಾರ್ಟಿಯೊಂದನ್ನು ಆಯೋಜಿಸಿದೆ. ಈ ಪಾರ್ಟಿಯಲ್ಲಿ ಸಂಜಯ ದತ್ ಭಾಗಿಯಾಗಿದ್ದು ಈ ವೇಳೆ ದಚ್ಚು ಸಂಜು ಭೇಟಿ ನಡೆದಿದೆ. ‘ಕೆಡಿ’ ಸಿನಿಮಾ ತಂಡದ ಜೊತೆ ದರ್ಶನ್, ಪ್ರೇಮ್, ರಕ್ಷಿತಾ ಕಾಣಿಸಿಕೊಂಡಿದ್ದಿ ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾವನ್ನು ‘ಕೆವಿಎನ್’ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ದರ್ಶನ್ ರ ಮುಂದಿನ…
ಇಸ್ಲಾಮಾಬಾದ್: ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಒಟ್ಟು 5128 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ (ಪಿಟಿಐ) ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಝ್ ಶರೀಫ್) (ಪಿಎಂಎಲ್-ಎನ್) ಮತ್ತು ಬಿಲಾವಲ್ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ. ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಕೆಲವೇ ದಿನಗಳ ಮೊದಲು, ಜನಪ್ರಿಯ ನಾಯಕ, ಪಿಟಿಐ ಪಕ್ಷದ ವರಿಷ್ಠ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿ ಜೈಲು ಶಿಕ್ಷೆ ಘೋಷಿಸಿದ್ದು ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹತೆಯನ್ನು ಘೋಷಿಸಲಾಗಿತ್ತು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿರುವುದರಿಂದ ಹಾಗೂ ಅವರ ಪಕ್ಷದ ಅಭ್ಯರ್ಥಿಗಳಿಗೆ ಪಕ್ಷದ ಬ್ಯಾಟ್ ಚುನಾವಣಾ ಚಿಹ್ನೆಯನ್ನು ನೀಡಲು ನಿರಾಕರಿಸಿರುವುದರಿಂದ ನವಾಝ್ ಶರೀಫ್ ನೇತೃತ್ವದ ಪಿಎಂಎಲ್(ಎನ್) ಪಕ್ಷಕ್ಕೆ ಗೆಲುವಿನ ಹಾದಿ ಸುಗಮವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಿಎಂಎಲ್ (ಎನ್) ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು…
ತನಗಿಂತ 15 ವರ್ಷ ಕಿರಿಯನ ಕೈ ಹಿಡಿತಾರಾ ಮಾಜಿ ವಿಶ್ವ ಸುಂದರಿ ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರದಲ್ಲಿ ಆಗಾಗ ಸದ್ದು ಮಾಡುತ್ತಲೆ ಇರುತ್ತಾರೆ. ಸುಶ್ಮಿತಾ ಸೇನ್ ಹೆಸರು ಈಗಾಗಲೇ ಸಾಕಷ್ಟು ಮಂದಿಯೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಅದ್ಯಾವುದಕ್ಕೂ ನಟಿ ಕ್ಯಾರೆ ಎಂದಿಲ್ಲ. ಸುಶ್ಮಿತಾ ಕಳೆದ ಕೆಲ ವರ್ಷಗಳಿಂದ ರೋಹ್ಮನ್ ಶಾಲ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಆದರೆ ಮದುವೆಯಾಗುತ್ತಾರೆ ಎನ್ನುವ ಮಾತನ್ನು ಸುಶ್ಮಿತಾ ನಿರಾಕರಿಸಿದ್ದರು. ಇದೀಗ ಸುಶ್ಮಿತಾ ಮತ್ತೆ ರೋಹ್ಮನ್ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸುಶ್ಮಿತಾ ಸೇನ್ ತನಗಿಂತ 15 ವರ್ಷ ಕಿರಿಯ ಗೆಳೆಯ ರೋಹ್ಮನ್ ಶಾಲ್ ಜೊತೆ ಮದುವೆಯಾಗ್ತಾರಾ ಎಂಬ ಪ್ರಶ್ನೆಗೆ ಸುಶ್ಮಿತಾ ಸೇನ್ ಉತ್ತರಿಸಿದ್ದಾರೆ. ಎಲ್ಲರೂ ನಾನು ಮದುವೆಯಾಗಬೇಕೆಂದು ಬಯಸುತ್ತಾರೆ ಎಂದು ನನಗೆ ತಿಳಿದಿದೆ. ಈ ವಯಸ್ಸಿನಲ್ಲಿ ನಾನು ಜೀವನದಲ್ಲಿ ಸೆಟ್ಲ್ ಆಗ್ಬೇಕು ಎಂದು ಭಾವಿಸುತ್ತೀರಿ. ಆದರೆ ನಾನು ಮದುವೆ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ. ಮದುವೆಯ ಬಗ್ಗೆ ನನಗೆ ಅಪಾರ…