ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟ ಜ್ಯೂನಿಯರ್ ಎನ್ ಟಿ ಆರ್ ದೇವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಿದೆ. ಈಗಾಗ್ಲೆ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು ಈ ಮಧ್ಯೆ ಚಿತ್ರತಂಡಕ್ಕೆ ಮತ್ತೋರ್ವ ನಟಿಯ ಎಂಟ್ರಿಯಾಗಿದೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಹೀಗಿರುವಾಗ ಸಿನಿಮಾಗೆ ಮತ್ತೊಬ್ಬ ಖ್ಯಾತ ನಟಿಯ ಆಗಮನವಾಗಿದೆ. ‘ದೇವರ’ ಸಿನಿಮಾದಲ್ಲಿ ಮರಾಠಿ ಸಿನಿಮಾರಂಗದ ನಟಿ ಶ್ರುತಿ ಮರಾಠೆ ಅವರು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ಮುಂದೆ ಸೈಫ್ ಅಲಿ ಖಾನ್ ವಿಲನ್ ಆಗಿ ಕಾಣಿಸಿಕೊಳ್ತಿದ್ದು, ಕನ್ನಡದ ನಟಿ ಚೈತ್ರಾ ರೈ ಸೈಫ್ ಪತ್ನಿಯಾಗಿ ನಟಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
Author: Author AIN
ಸ್ಯಾಂಡಲ್‌ವುಡ್ ಸೆಂಡ್ರೆಲಾ ನಟಿ ರಾಧಿಕಾ ಪಂಡಿತ್ ವ್ಯಾಲೆಂಟೈನ್ ಮೂಡ್ ನಲ್ಲಿದ್ದಾರೆ. ಪ್ರೇಮಿಗಳ ದಿನ ಹತ್ತಿರವಾಗುತ್ತಿರುವ ಖುಷಿಯಲ್ಲಿರುವ ರಾಧಿಕಾ ಇದೇ ಖುಷಿಯಲ್ಲಿ ಸಖತ್ತಾಗೆ ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಯಶ್‌ಗಾಗಿ ಕಾಯುತ್ತಿರುವ ಸುಂದರ ಫೋಟೋಗಳನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದು, ಸದ್ಯ ನಟಿಯ ಹೊಸ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಡ್ರೆಸ್‌ನಲ್ಲಿ ತೊಟ್ಟಿರುವ ನಟಿ ಮಿನುಗುವ ಲೈಟ್ ಮಧ್ಯೆ ಕುಳಿತು ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಫೋಟೋಗಳಿಗೆ ‘ನನ್ನ ವ್ಯಾಲೆಂಟೈನ್ ಕಾಣಿಸಿಕೊಂಡಾಗ ಹ್ಯಾಪಿ ಟೈಮ್ ಪ್ರಾರಂಭವಾಗುತ್ತದೆ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಷನ್ ನೀಡಿದ್ದಾರೆ. ರಾಧಿಕಾರ ಸುಂದರ ಫೋಟೋ ನೋಡ್ತಿದ್ದಂತೆ ಯಶ್ ಎಲ್ಲಿ? ರಾಕಿ ಬಾಯ್‌ಗಾಗಿ ಕಾಯುತ್ತಿದ್ದೀರಾ ಅಲ್ವಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ರಾಧಿಕಾ ಹಾಗೂ ಯಶ್ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೋಡಿಗೆ ಐರಾ ಹಾಗೂ ಯಥರ್ವ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರವಾಗಿರೋ…
ಕೊಲಂಬೊ: ಇಂದಿನಿಂದ ಶ್ರೀಲಂಕಾ ಮತ್ತು ಮಾರಿಷಸ್‌ಗಳಲ್ಲಿ ಭಾರತದ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಸೇವೆ ಗಳಿಗೆ ಚಾಲನೆ ದೊರೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ರಣಿಲ್ ವಿಕ್ರಮಸಿಂಘೆ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗೌ°ಥ್ ವೀಡಿಯೋ ಕಾನ್ಫರೆನ್ಸ್ ಮೂಲಕ ಇದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಶ್ರೀಲಂಕಾ ಮತ್ತು ಮಾರಿಷಸ್‌ಗೆ ಪ್ರಯಾಣಿಸುವ ಭಾರತೀಯರು ಮತ್ತು ಭಾರತಕ್ಕೆ ಪ್ರಯಾಣಿಸುವ ಈ ದೇಶಗಳ ನಾಗರಿಕರಿಗೆ ಯುಪಿಐ ಸೇವೆಗಳ ಅನುಕೂಲ ದೊರೆಯಲಿದೆ.
ಬಾಲಿವುಡ್ ಬ್ಯೂಟಿ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ವಿಗೆ ನಿರೀಕ್ಷಿಸಿದ ಮಟ್ಟಿಗಿನ ಯಶಸ್ಸು ಲಭಿಸದೆ ಹೋದ್ರು ಆಫರ್ ಗಳಿಗೆ ಮಾತ್ರ ಯಾವುದೇ ಕೊರತೆಯಾಗಿಲ್ಲ. ಇದೀಗ ಸೌತ್ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ದುಬಾರಿ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾಗೆ ಜಾನ್ವಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಚ್ಚರಿ ಏನೆಂದರೆ, ‘ದೇವರ’ ಬಿಡುಗಡೆ ಆಗುವುದಕ್ಕೂ ಮುನ್ನವೇ ತೆಲುಗಿನಲ್ಲಿ ಅವರು ಒಪ್ಪಿಕೊಳ್ಳುವ ಹೊಸ ಸಿನಿಮಾಗಳಿಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ದೇವರ ಸಿನಿಮಾದ ಬಳಿಕ ನಟಿಸಲಿರುವ ಸಿನಿಮಾಗಳಿಗೆ ಶ್ರಿದೇವಿ ಪುತ್ರಿ ಸಂಭಾವನೆ ಏರಿಸಿಕೊಂಡಿದ್ದು, ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಎನ್ನಲಾಗಿದೆ. ಜಾನ್ವಿ ಸಿನಿಮಾಗಳು ಹೆಚ್ಚು ಸದ್ದು ಮಾಡದೆ ಹೋದ್ರು ಆಕೆಯ ಸಂಭಾವನೆ ಮಾತ್ರ ಹೆಚ್ಚುತ್ತಲೆ ಇದೆ. ಆದ್ರೆ ಈ ಬಗ್ಗೆ ಜಾನ್ವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನವದೆಹಲಿ: ನಾಳೆ ಅಂದರೆ ಫೆಬ್ರವರಿ 12ರಿಂದ 2023 -24 ನೇ ಸಾಲಿನ ನಾಲ್ಕನೇ ಸರಣಿಯ ಗೋಲ್ಡ್ ಬಾಂಡ್ ಸ್ಕೀಮ್ ಆರಂಭವಾಗಲಿದ್ದು, ಫೆಬ್ರವರಿ 16 ರವರೆಗೆ ಬಾಂಡ್ ಗಳನ್ನು ಖರೀದಿಸಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಗೋಲ್ಡ್ ಬಾಂಡ್ ಗಳನ್ನು ನಿರ್ದಿಷ್ಟ ಅಂಚೆ ಕಚೇರಿಗಳು, ವಾಣಿಜ್ಯ ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್, ಕ್ಲಿಯರಿಂಗ್ ಕಾರ್ಪೊರೇಷನ್ ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಫೆಬ್ರವರಿ 8, 2016ರಲ್ಲಿ ಜಾರಿ ಮಾಡಿದ್ದ ಗೋಲ್ಡ್ ಬಾಂಡ್ ಬೆಲೆ ಪ್ರತಿ ಗ್ರಾಂಗೆ 2600 ರೂ. ನಿಗದಿಪಡಿಸಲಾಗಿತ್ತು. ಎಂಟು ವರ್ಷ ಮೆಚುರಿಟಿ ಅವಧಿ ನಿಗದಿಗೊಳಿಸಲಾಗಿದ್ದು, 2024ರ ಫೆಬ್ರವರಿ 8ರಂದು ಅವಧಿ ಮುಕ್ತಾಯವಾಗಲಿದೆ. ಮೆಚುರಿಟಿ ಮೊತ್ತವನ್ನು ಘೋಷಣೆ ಮಾಡಿದ್ದು, ಪ್ರತಿ ಯುನಿಟ್ 6271 ರೂ. ನಿಗದಿಪಡಿಸಿದೆ. ಗೋಲ್ಡ್ ಬಾಂಡ್ ದಾರರಿಗೆ ಶೇಕಡ 141 ರಷ್ಟು ರಿಟರ್ನ್ಸ್ ಸಿಗಲಿದೆ. ಹೂಡಿಕೆದಾರರಿಗೆ ಮೆಚುರಿಟಿ ಸಮಯದಲ್ಲಿನ ಚಿನ್ನದ ಮಾರುಕಟ್ಟೆ ಮೌಲ್ಯ ಮತ್ತು ಬಡ್ಡಿ ಸಹಿತ ರಿಟರ್ನ್ಸ್ ಸಿಗಲಿದೆ.
ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಮಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಇದನ್ನೇ ಬಳಸಿಕೊಂಡಿರೋ ವಂಚಕರು ವಂಚನೆಗೆ ಇಳಿದಿದ್ದಾರೆ. ಮಹೇಶ್ ಬಾಬು ಅವರ ತಂಡ ಈಗಾಗಲೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಿತಾರಾ ಅವರ ತಾಯಿ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಈ ವಂಚನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ಸಹ ನೀಡಿದ್ದಾರೆ. ವ್ಯಕ್ತಿಯೋರ್ವ ಸಿತಾರಾ ಗಟ್ಟಿಮನೇನಿಯ ಚಿತ್ರ, ವಿಡಿಯೋ ಹಾಗೂ ಹೆಸರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ಲಿಂಕ್ಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಅಲ್ಲದೆ ಬಂಡವಾಳ ಹೂಡಿಕೆ ಯೋಜನೆಗಳ ಮಾರಾಟ, ಲೋನ್ ಕೊಡಿಸುವುದಾಗಿ ಹೇಳಿ ಲಿಂಕ್ ಕಳಿಸುವುದು, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಹೂಡಿಕೆ ಐಡಿಯಾಗಳನ್ನು ಕೊಡುವುದಾಗಿ ಹೇಳಿಕೊಂಡು ಹಲವರನ್ನು ಸಂಪರ್ಕ ಮಾಡಿದ್ದಾನೆ. ಸದ್ಯ ಪೊಲೀಸರು ವಂಚನೆ ಎಸಗಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜನರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಬಂದ ಹೂಡಿಕೆ ಮಾಹಿತಿಯನ್ನು ನಿಜವೆಂದು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿಕೊಳ್ಳಿ…
ಇಸ್ಲಾಮಾಬಾದ್: ಫೆಬ್ರುವರಿ 8ರಂದು ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಶ್ನಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಇಸ್ಲಾಮಾಬಾದ್, ಲಾಹೋರ್, ಸಿಂಧ್ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಾತ್ರೋರಾತ್ರಿ ಫಲಿತಾಂಶ ತಿರುಚಿದ್ದಲ್ಲದೆ, ಕ್ಷೇತ್ರದ ಮತ ಎಣಿಕೆ ವೇಳೆ ಪ್ರಕ್ರಿಯೆಗಳನ್ನು ಪಾಲನೆ ಮಾಡಿಲ್ಲ ಎಂದು ಅರ್ಜಿಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಎರಡು, ಸಿಂಧ್ ಹೈಕೋರ್ಟ್‌ನಲ್ಲಿ ಮೂರು ಹಾಗೂ ಲಾಹೋರ್ ಹೈಕೋರ್ಟ್‌ನಲ್ಲಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಲಾಹೋರ್ ಪ್ರಾಂತ್ಯದ ಕ್ಷೇತ್ರಗಳಲ್ಲಿ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರಿಯಂ ನವಾಜ್ ಅವರು ಗೆಲುವು ಸಾಧಿಸಿದ್ದಾರೆಂದು ಘೋಷಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯ 265 ಕ್ಷೇತ್ರಗಳ ಪೈಕಿ 259 ಸ್ಥಾನಗಳ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು 102 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 74, ಪಾಕಿಸ್ತಾನ್…
ಕೈರೋ: ಅಕ್ಟೋಬರ್ 7ರಿಂದ ಇದುವರೆಗು ಗಾಜಾದ ಮೇಲೆ ಇಸ್ರೇಲ್ ಸೇನೆ ನಡೆಸಿದ್ದು ದಾಳಿಯಲ್ಲಿ ಒಟ್ಟು 28,176 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ವರದಿ ನೀಡಿದೆ. ದಾಳಿಯಲ್ಲಿ 67,784ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವಾಲಯ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 112 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 173 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಗಾಜಾದ ನಾಗರಿಕರು, ಹಮಾಸ್ ಬಂಡುಕೋರರು ಸೇರಿದ್ದಾರೆ ಎನ್ನಲಾಗಿದೆ. ತನ್ನ ಶತ್ರುಗಳ ಮೇಲೆ ಹಮಾಸ್ ಹಾರಿಸಿದ ರಾಕೆಟ್ ಆಕಸ್ಮಿಕವಾಗಿ ಗಾಜಾದಲ್ಲಿ ಸ್ಪೋಟಿಸಿಯೂ ಕೆಲವು ಸಾವುಗಳು ಸಂಭವಿಸಿವೆ. ಇಸ್ರೇಲ್ ಸೇನೆ ಪ್ರಕಾರ, ದೇಶದೊಳಗೆ ಸುಮಾರು 1 ಸಾವಿರ ಹಮಾಸ್ ಬಂಡುಕೋರರನ್ನು ಸದೆಬಡಿದಿದ್ದು, ಗಾಜಾದೊಳಗೆ ಸುಮಾರು 10 ಸಾವಿರ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇಸ್ಲಾಮಾಬಾದ್: ಚುನಾವಣೆಯಲ್ಲಿ ಇವಿಎಂ ಬಳಸಿದ್ದರೆ ಪಾಕಿಸ್ತಾನ ಚುನಾವಣಾ ಫಲಿತಾಂಶ ಬರುವುದು ಇಷ್ಟು ತಡವಾಗುತ್ತಿರಲಿಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಹತಾಶೆ ವ್ಯಕ್ತಪಡಿಸಿದ್ದಾರೆ. ಆಯೋಗದ ಉನ್ನತ ಹಕ್ಕುಗಳ ಹೊರತಾಗಿಯೂ, ಪಾಕಿಸ್ತಾನದ ಚುನಾವಣಾ ಆಯೋಗದ ಹೊಸ ಚುನಾವಣಾ ನಿರ್ವಹಣಾ ವ್ಯವಸ್ಥೆ ವಿಫಲವಾಗಿದೆ ಎಂದು ಅಲ್ವಿ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಅಲ್ವಿ ಅವರು, ಇಂದು ಇವಿಎಂಗಳು ಇದ್ದಿದ್ದರೆ, ನನ್ನ ಪ್ರೀತಿಯ ಪಾಕಿಸ್ತಾನ ಈ ಬಿಕ್ಕಟ್ಟಿನಿಂದ ಪಾರಾಗುತ್ತಿತ್ತು. ಅಧ್ಯಕ್ಷ ಸ್ಥಾನದಲ್ಲೇ 50 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ನಂತರ ಇವಿಎಂ ಬಳಸದಿರಲು ತೀರ್ಮಾನಿಸಲಾಯಿತು. ಇವಿಎಂಗಳಿಗಾಗಿ ನಮ್ಮ ಸುದೀರ್ಘ ಹೋರಾಟವನ್ನು ನೆನಪಿಸಿಕೊಳ್ಳಿ. ಇವಿಎಂ ಕೈಯಿಂದ ಪ್ರತ್ಯೇಕವಾಗಿ ಎಣಿಕೆ ಮಾಡಬಹುದಾದ ಕಾಗದದ ಮತಪತ್ರಗಳನ್ನು ಹೊಂದಿತ್ತು (ಇಂದು ಇದನ್ನು ಮಾಡಲಾಗುತ್ತದೆ) ಆದರೆ ಇದು ಪ್ರತಿ ಮತದ ಬಟನ್ ಒತ್ತಿದ ಸರಳ ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರ್ ಅನ್ನು ಸಹ ಹೊಂದಿದೆ ಎಂದು ಅವರು ಹೇಳಿದರು. ಯಂತ್ರಗಳನ್ನು ಬಳಸಿದರೆ ಮತದಾನ ಮುಗಿದ ಐದು ನಿಮಿಷಗಳಲ್ಲಿ ಪ್ರತಿ…
ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟ ರಾಮ್ ಚರಣ್ ಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದುವರೆಗೂ ಟಾಲಿವುಡ್ ನಲ್ಲಿ ಸಖತ್ ಸದ್ದು ಮಾಡ್ತಿದ್ದ ಹೀರೋ ಇದೀಗ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವೇಳೆ ರಾಮ್ ಚರಣ್ ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಸೌತ್ ನಟ ನಟಿಯರಿಗೆ ಮಣೆ ಹಾಕಲಾಗುತ್ತಿದೆ. ಈಗಾಗ್ಲೆ ಸಾಕಷ್ಟು ಸೌತ್ ಕಲಾವಿದರು ಬಾಲಿವುಡ್ ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ.ಇದೀಗ ರಾಮ್ ಚರಣ್ ಕೂಡ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ನಿರ್ದೇಶಕ ಸಂಜಯ್ ಲೀಲಾ ಬನ್ಸಲಿ ರಾಮ್ ಚರಣ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಅಮಿಶ್ ಅವರ ‘ದಿ ಲೆಜೆಂಡ್ ಆಫ್ ಸುಹೇಲ್ದೇವ್’ ಪುಸ್ತಕವನ್ನು ಆಧರಿಸಿ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಈ ಕಥೆಯ ನಾಯಕನಾಗಿ ರಾಮ್ ಚರಣ್ ಕಾಣಿಸಿಕೊಳ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಮುಂಬೈನಲ್ಲಿ ಬನ್ಸಾಲಿ ಅವರನ್ನು ರಾಮ್…