Author: Author AIN

ವಾಷಿಂಗ್ಟನ್: ತನ್ನ ಐದು ವರ್ಷದ ಮಗಳನ್ನು ಕೊಂದುಆಕೆಯ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ತಾನು ಕೆಲಸ ಮಾಡುವ ರೆಸ್ಟೋರೆಂಟ್‌ಗೆ ಕೊಂಡೊಯ್ದ ಘಟನೆ ಅಮೆರಿಕದಲ್ಲಿ ನಡೆದಿದೆ. 34 ವರ್ಷದ ಆರೋಪಿ ತಂದೆ ಆಡಮ್ ತನ್ನ 5 ವರ್ಷದ ಮಗಳು ಹಾರ್ಮೊನಿಯನ್ನು ಹೊಡೆದು ಕೊಂದಿದ್ದಾನೆ. ಆರೋಪಿಯು ತನ್ನ ಕೆಲಸದ ಸ್ಥಳಕ್ಕೆ ಕೊಂಡೊಯ್ಯುವ ಚೀಲದಲ್ಲಿ ಮಗಳ ಕೊಳೆತ ದೇಹದ ಭಾಗಗಳನ್ನು ತುಂಬಿಸಿ, ‘ಹಳೆಯ ಕಸ’ ಎಂಬಂತೆ ಎಸೆದಿದ್ದ. ಆಕೆಯ ದೇಹದ ಭಾಗಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ಆರೋಪಿಯು ರೆಸ್ಟೋರೆಂಟ್‌ನಲ್ಲಿ ಅಡುಗೆ ಹಾಗೂ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದು, ತನ್ನ ಕೆಲಸದ ಪಾಳಿಯ ವೇಳೆ ಫ್ರೀಜರ್‌ನಲ್ಲಿ ಆಹಾರ ಪದಾರ್ಥಗಳ ಪಕ್ಕದಲ್ಲಿ ಮಗಳ ಅಂಗಾಂಗಗಳನ್ನು ಇರಿಸಿದ್ದ ಎಂದು ವರದಿಯಾಗಿದೆ. “ಆತ ಯಾವಾಗಲೂ ಕೆಲಸಕ್ಕೆ ಬರುವಾಗ ಬ್ಯಾಗ್ ತರುತ್ತಿದ್ದ. ಈಗಲೂ ಚೀಲವನ್ನು ತಂದು ಫ್ರೀಜರ್‌ನಲ್ಲಿ ಇರಿಸುತ್ತಿದ್ದ. ಫ್ರೀಜರ್‌ನಲ್ಲಿ ಆಹಾರ ಮತ್ತು ಪದಾರ್ಥಗಳನ್ನು ಇಡಲಾಗುತ್ತದೆ. ಆತ ಚೀಲವನ್ನು ಒಳಗೆ ತರುವುದು ಹಾಗೂ ಹೊರಗೆ ಕೊಂಡೊಯ್ಯುವುದನ್ನು ಜನರು ನೋಡಿದ್ದರು.…

Read More

ಕೋಲ್ಕತ್ತಾ: ಬಾಲಿವುಡ್ ಹಿರಿಯ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 73 ವರ್ಷದ ಚಕ್ರವರ್ತಿ ಅವರಿಗೆ ಶನಿವಾರ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ನಟ ಅರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದು ಇದೀಗ ಮಿಥುನ್ ಚಕ್ರವರ್ತಿ ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣವಾಗಿ ಜ್ಞಾನ ಹೊಂದಿದ್ದು, ಮೃದುವಾದ ಆಹಾರವನ್ನು ಸೇವಿಸಿದ್ದಾರೆ. ಅವರನ್ನು ಡಿಸ್ಚಾರ್ಜ್ ಮಾಡುವ ಮೊದಲು ಕೆಲವು ಪರೀಕ್ಷೆಗಳಿಗೆ ಒಳಗಾಗುತ್ತಾರೆ ಎಂದು ವೈದ್ಯಕೀಯ ಸೌಲಭ್ಯ ನೀಡುತ್ತಿರುವ ಅಧಿಕಾರಿ ತಿಳಿಸಿದ್ದಾರೆ. ಮಿಥುನ್ ಅವರನ್ನು ಫೆ.10ರ ಬೆಳಿಗ್ಗೆ 9.40 ಕ್ಕೆ ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಯಿತು. ಮೆದುಳಿನ ಎಂಆರ್‌ಐ ಮತ್ತು ರೇಡಿಯಾಲಜಿ ಪರೀಕ್ಷೆ ಸೇರಿದಂತೆ ಇತರ ಪ್ರಮುಖ ಪರೀಕ್ಷೆಗಳನ್ನು ಸಹ ಮಾಡಲಾಗಿದೆ.ಸದ್ಯ ನಟನ ಆರೋಗ್ಯ ಸುಧಾರಿಸಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Read More

ಪ್ರೇಮಿಗಳ ದಿನಕ್ಕೆ ಇನ್ನೆರಡು ದಿನ ಮಾತ್ರವೇ ಬಾಕಿ ಇದೆ. ಮನಮೆಚ್ಚಿನ ಪ್ರೇಮಿಗೆ ಏನಪ್ಪಾ ಉಡುಗೊರೆ ಕೊಡೋದು ಅಂದುಕೊಂಡವ್ರಿಗೆ ಇಲ್ಲಿದೆ ಕಡಿಮೆ ಬೆಲೆಯ ಉತ್ತಮ ಫೀಚರ್ಸ್ ಗಳಿರುವ ಸ್ಮಾರ್ಟ್ ಫೋನ್. ರಿಯಲ್ ಮಿ ನಾರ್ಜೊ N53 ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಇದ್ದು ಇದರ ಬೆಲೆ ಕೇವಲ 8,999 ರೂ. ಆಗಿದೆ. 33 ವ್ಯಾಟ್‌ಗಳ ಸೂಪರ್‌ವುಕ್ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯನ್ನು ನೀಡಲಾಗಿದೆ. 50 ಮೆಗಾಪಿಕ್ಸೆಲ್‌ಗಳ AI ಹಿಂಬದಿಯ ಕ್ಯಾಮೆರಾ ಹೊಂದಿದೆ. ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ರೆಡ್ಮಿ A2 10,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದರಲ್ಲಿ ಮೀಡಿಯಾಟೆಕ್ ಹಿಲಿಯೊ G36 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು 6.5 ಇಂಚಿನ HD+ ಡಿಸ್ಪ್ಲೇ ಹೊಂದಿದೆ. 5000 mAh ಬ್ಯಾಟರಿ ಮತ್ತು 8 ಮೆಗಾಪಿಕ್ಸೆಲ್‌ಗಳ ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ. 10 ಸಾವಿರದ ಒಳಗಿರುವ ಫೋನ್ ಗಳಲ್ಲಿ ಮತ್ತೊಂದು ಉತ್ತಮ ಸ್ಮಾರ್ಟ್ ಫೋನ್ ರೆಡ್ಮಿ 13C ಆಗಿದೆ ಇದು ಫೋನ್ 6.74-ಇಂಚಿನ…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 25 ವರ್ಷಗಳಾಗಿವೆ. ಇದೇ ಶುಭ ಸಂದರ್ಭದಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾದ ಸಮಾರಂಭವೊಂದನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮವು ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಬೇಬಿ ಮಠ  ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ನೆರವೇರಲಿದೆ. ಫೆಬ್ರವರಿ 17ರ ಶನಿವಾರ ಸಂಜೆ 5 ಗಂಟೆಗೆ ಬೆಳ್ಳಿ ಪರ್ವ ಡಿ-25 ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೀರಂಗಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮೈದಾನದಲ್ಲಿ ನಡೆಯಲಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದ್ದು, ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೊತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ. ವಿನೋದ್ ರಾಜ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ, ಝೈದ್ ಖಾನ್, ಶಿವರಾಜ್…

Read More

ಕೀನ್ಯಾ: ವಿಶ್ವ ಮ್ಯಾರಥಾನ್ ರೆಕಾರ್ಡ್ ಹೋಲ್ಡರ್ ಕೆಲ್ವಿನ್ ಕಿಪ್ಟಮ್ ಹಾಗೂ ಅವರ ತರಬೇತುದಾರ ಗೆರ್ವೈಸ್ ಹಕಿಜಿಮಾನಾ ಅವರು ಪಶ್ಚಿಮ ಕೀನ್ಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ವೇಳೆ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾನುವಾರ ರಾತ್ರಿ  ಗಂಟೆಗೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು, ಒಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಇಬ್ಬರು ಕಿಪ್ಟಮ್ ಮತ್ತು ಅವರ ತರಬೇತುದಾರರು” ಎಂದು ಎಲ್ಜಿಯೊ ಮರಕ್ವೆಟ್ ಕೌಂಟಿಯ ಪೊಲೀಸ್ ಕಮಾಂಡರ್ ಪೀಟರ್ ಮುಲಿಂಗೆ ಹೇಳಿದರು. “ಎಲ್ಲಾ ವಿಶ್ವ ಅಥ್ಲೆಟಿಕ್ಸ್ ಪರವಾಗಿ, ನಾವು ಅವರ ಕುಟುಂಬಗಳು, ಸ್ನೇಹಿತರು, ಸಹ ಆಟಗಾರರು ಮತ್ತು ಕೀನ್ಯಾ ರಾಷ್ಟ್ರಕ್ಕೆ ನಮ್ಮ ಆಳವಾದ ಸಂತಾಪವನ್ನು ಕಳುಹಿಸುತ್ತೇವೆ.ನಂಬಲಾಗದ ಪರಂಪರೆಯನ್ನು ತೊರೆದ ಅದ್ಭುತ ಕ್ರೀಡಾಪಟು ಎಂದಿದ್ದಾರೆ ಕಿಪ್ಟಮ್ ಅಕ್ಟೋಬರ್‌ನಲ್ಲಿ ನಡೆದ ಚಿಕಾಗೋ ಮ್ಯಾರಥಾನ್‌ನಲ್ಲಿ 2:00:35 ರಲ್ಲಿ ತಲುಪಿ ವಿಶ್ವ ದಾಖಲೆಮಾಡಿದರು.

Read More

2009ರಲ್ಲಿ ತೆರೆಕಂಡ ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಸದ್ಯ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನನ್ನು ರಕುಲ್ ಪ್ರೀತ್ ಸಿಂಗ್ ಫೆ.21ರಂದು ಗೋವಾದಲ್ಲಿ ವರಿಸಲಿದ್ದಾರೆ. ಬಾಲಿವುಡ್ ನ ಅನೇಕ ನಟಿಯರು ವಿದೇಶಗಳಲ್ಲಿ ಮದುವೆ ಪ್ಲ್ಯಾನ್ ಮಾಡಿದ್ದರೆ, ರಕುಲ್ ಮಾತ್ರ ಗೋವಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಿಗೆ ಈಗಾಗಲೇ ಆಹ್ವಾನ ಕೂಡ ನೀಡಲಾಗಿದೆ. ಕನ್ನಡ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ಬಳಿಕ ತೆಲುಗು, ತಮಿಳು ಹಾಗೂ ಬಾಲಿವುಡ್​ನಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಅದಾದ ಬಳಿಕ ತೆಲುಗಿನಲ್ಲಿ ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸುತ್ತಾ ಬಂದ ರಕುಲ್ ಬಳಿಕ ರಾಮ್ ಚರಣ್, ಜೂ ಎನ್​ಟಿಆರ್, ತಮಿಳಿನಲ್ಲಿ ಸೂರ್ಯ, ಕಾರ್ತಿ ಇನ್ನೂ ಹಲವಾರು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಇದೀಗ ರಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಜಾಕಿ ಬಗ್ನಾನಿಯನ್ನು ವಿವಾಹವಾಗುತ್ತಿದ್ದಾರೆ. ಬಾಯ್‍ಫ್ರೆಂಡ್ ನಟ, ನಿರ್ಮಾಪಕ ಜ್ಯಾಕಿ ಭಗ್ನಾನಿ ನೀನಿಲ್ಲದೆ…

Read More

ಸದಾ ಸಖತ್ ಹಾಟ್ ಹಾಟ್ ಆಗಿರುವ ಡ್ರಸ್ ತೊಟ್ಟು ಫೋಟೋಗೆ ಫೋಸ್ ಕೊಡುವ ನಟಿ ಅನನ್ಯಾ ಪಾಂಡೆ ಇದೀಗ ಹಾಟ್ ಡ್ರಸ್ ಮೂಲಕವೇ ಪರಿಸರದ ಪಾಠ ಹೇಳಿಕೊಟ್ಟಿದ್ದಾರೆ. ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರೀಸ್ ಕೌಂಟರ್ ವೀಕ್ ನಲ್ಲಿ ಭಾಗವಹಿಸಿದ್ದ ಅನನ್ಯಾ ಆಕರ್ಷಕ ಉಡುಪು ಧರಿಸಿ ಗಮನ ಸೆಳೆದಿದ್ದಾರೆ. ಅನನ್ಯಾ ಕಪ್ಪು ಸ್ಕರ್ಟ್ ಧರಿಸಿ ಚಿಟ್ಟೆ ಮಾದರಿಯ ಟಾಪ್ ಧರಿಸುವ ಮೂಲಕ ಸಾಕಷ್ಟು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಉಡುಪಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, ಇದು ಸೂಪರ್ ಹೀರೊ ಕಲ್ಪನೆ. ನಾವು ಕೀಟಗಳೊಂದಿಗೂ ಬದುಕುವ ಅವಶ್ಯಕತೆ ಇದೆ ಎಂಬುದನ್ನು ನಮ್ಮ ಡಿಸೈನರ್ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಅನನ್ಯಾ ಧರಿಸಿದ್ದ ವಸ್ತ್ರವನ್ನು ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ ಡಿಸೈನ್ ಮಾಡಿದ್ದಾರೆ.

Read More

ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದಿದ್ದರೂ ಇದುವರೆಗೂ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಅವರು ಭಾನುವಾರ ಚುನಾವಣಾಧಿಕಾರಿಗಳ (ಆರ್‌ಒ) ವಿರುದ್ಧ ರಾಷ್ಟ್ರ ವ್ಯಾಪಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ ಎಂದು ಪಾಕಿಸ್ತಾನ ಮೂಲದ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯಲ್ಲಿ ಉಲ್ಲೇಖಿಸಿದೆ. ಫೆಬ್ರವರಿ 8 ರ ಚುನಾವಣೆಯ ನಂತರ ‘ಗುಲಾಮಗಿರಿ ಸ್ವೀಕಾರಾರ್ಹವಲ್ಲ’ ಎಂಬ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ದೃಷ್ಟಿಯಲ್ಲಿ ಪಾಕಿಸ್ತಾನದ ಜನರು ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ. ಮತ ಎಣಿಕೆ ದಿನದಂದು ಎದುರಿಸಿದ ಸವಾಲುಗಳ ಹೊರತಾಗಿಯೂ, ಜನರು ಪಿಟಿಐ ಪರವಾಗಿ ಸ್ಪಷ್ಟ ಮತ್ತು ಪಾರದರ್ಶಕ ಜನಾದೇಶವನ್ನು ಪ್ರದರ್ಶಿಸಿದ್ದಾರೆ ಎಂದು ಗೋಹರ್ ಅಲಿಖಾನ್ ಹೇಳಿದ್ದಾರೆ. ಆರ್‌ಒಗಳು ಮತ್ತೊಮ್ಮೆ ತಮ್ಮ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋಹರ್ ಅಲಿ ಖಾನ್ ಆರೋಪಿಸಿದ್ದು, ಚುನಾವಣಾ ಫಲಿತಾಂಶಗಳನ್ನು ತಿರುಚುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಖಂಡಿಸಿದರು. ಅಂತಹ ಯಾವುದೇ ಕ್ರಮವು ಪಾಕಿಸ್ತಾನಕ್ಕೆ…

Read More

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿಯಾಗಿದ್ದು. 63 ಮಂದಿ ಕಾಣೆಯಾಗಿದ್ದಾರೆ. ಕಾಣೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ. ಫೆಬ್ರವರಿ 6 ರ ಸಂಜೆ ದಾವೊ ಡಿ ಓರೊ ಪ್ರಾಂತ್ಯದ ಪರ್ವತ ನಗರವಾದ ಮಾಕೊದಲ್ಲಿ ಭೂಕುಸಿತ ಸಂಭವಿಸಿದ್ದು, ಅನೇಕ ಮನೆಗಳು, ವಾಹನಗಳು ಮತ್ತು ಹತ್ತಾರು ಮಂದಿ ಸಮಾಧಿಯಾಗಿದ್ದಾರೆ. ಕನಿಷ್ಠ 32 ಜನರು ಗಾಯಗೊಂಡಿದ್ದಾರೆ ಎಂದು ಮ್ಯಾಕೋ ಟೌನ್ ವಿಪತ್ತು ತಡೆ ಕಚೇರಿ ತಿಳಿಸಿದೆ. ಮೈಕೊ ಪುರಸಭೆಯ ನಾಲ್ಕು ಗ್ರಾಮಗಳಲ್ಲಿ 1,347 ಕುಟುಂಬಗಳು ಅಥವಾ 5,431 ಜನರು ಭೂಕುಸಿತದಿಂದ ಪ್ರಭಾವಿತರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ವರ್ಲ್ಡ್ ರಿಸ್ಕ್ ಇಂಡೆಕ್ಸ್ 2022 ಫಿಲಿಪೈನ್ಸ್ ವಿಶ್ವದ ಅತ್ಯಂತ ವಿಪತ್ತು-ಪೀಡಿತ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿ ನೆಲೆಗೊಂಡಿರುವ ಈ ದ್ವೀಪಸಮೂಹವು ಆಗಾಗ ಪ್ರಬಲವಾದ ಬಿರುಗಾಳಿಗಳಿಂದ ಹೊಡೆತಕ್ಕೆ ಸಿಲುಕುತ್ತದೆ, ಭೂಕಂಪವೂ ಉಂಟಾಗುತ್ತಿರುತ್ತದೆ, ಇದು ಹಠಾತ್ ಪ್ರವಾಹಗಳು ಮತ್ತು ಭೂಕುಸಿತಗಳನ್ನು ಉಂಟುಮಾಡುತ್ತದೆ ಮತ್ತು ಜ್ವಾಲಾಮುಖಿ ಸ್ಫೋಟಗಳಿಂದ ಸಾಕಷ್ಟು ಬಾರಿ…

Read More

ಕೊಲಂಬೊ: ಇಂದಿನಿಂದ ಶ್ರೀಲಂಕಾ ಮತ್ತು ಮಾರಿಷಸ್‌ಗಳಲ್ಲಿ ಭಾರತದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಸೇವೆ ಗಳಿಗೆ ಚಾಲನೆ ದೊರೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ರಣಿಲ್‌ ವಿಕ್ರಮಸಿಂಘೆ ಮತ್ತು ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗೌ°ಥ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ಇದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಶ್ರೀಲಂಕಾ ಮತ್ತು ಮಾರಿಷಸ್‌ಗೆ ಪ್ರಯಾಣಿಸುವ ಭಾರತೀಯರು ಮತ್ತು ಭಾರತಕ್ಕೆ ಪ್ರಯಾಣಿಸುವ ಈ ದೇಶಗಳ ನಾಗರಿಕರಿಗೆ ಯುಪಿಐ ಸೇವೆಗಳ ಅನುಕೂಲ ದೊರೆಯಲಿದೆ.

Read More