Author: Author AIN

ತಮ್ಮ ಸಿಂಪ್ಲಿಸಿಟಿಯಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದ ಹನುಮಂತ ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಸೈಲೆಂಟ್ ಆಗಿಯೇ ಸದ್ದು ಮಾಡುತ್ತಿದ್ದಾರೆ. ತನ್ನ ಸಂಪೂರ್ಣ ಗಮನವನ್ನು ಆಟದ ಮೇಲೆಯೇ ಇಟ್ಟಿರುವ ಹನುಮಂತ ಇದೀಗ ಸೈಲೆಂಟ್ ಆಗಿಯೇ ಫಿನಾಲೆಗೆ ಎಂಟ್ರಿಯಾಗಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಫಿನಾಲೆ ಟಿಕೆಟ್​ ಪಡೆಯಲು ಬಿಗ್ ಬಾಸ್​ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಭವ್ಯಾ ಗೌಡ ಅವರು 3 ನಿಮಿಷ 22 ಸೆಕೆಂಡ್​​ ತೆಗೆದುಕೊಂಡರು. ರಜತ್ ಅವರು 3 ನಿಮಿಷ 49 ಸೆಕೆಂಡ್ ತೆಗೆದುಕೊಂಡರು. ತ್ರಿವಿಕ್ರಮ್ ಅವರು 2 ನಿಮಿಷ 30 ಸೆಕೆಂಡ್​ ಪಡೆದುಕೊಂಡರು. ಎಲ್ಲರಿಗಿಂತಲೂ ಕಡಿಮೆ ಸಮಯದಲ್ಲಿ ಟಾಸ್ಕ್​ ಪೂರ್ಣಗೊಳಿಸಿದ್ದು ಹನುಮಂತ. ಅವರು ಕೇವಲ 2 ನಿಮಿಷ 27 ಸೆಕೆಂಡ್​ ತೆಗೆದುಕೊಂಡು ಟಾಸ್ಕ ಪೂರ್ಣಗೊಳಿಸಿ ಟಿಕೆಟ್ ಟು…

Read More

ವಾಷಿಂಗ್ಟನ್‌: ಅಮೆರಿಕದ 2ನೇ ಅತಿದೊಡ್ಡ ನಗರವಾದ ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ಕದನ ಮುಂದುವರೆದಿದೆ.ಬೆಂಕಿಯ ರೌದ್ರ ನರ್ತನಕ್ಕೆ ಸುಮಾರು 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದೀಗ ನಟಿ ಪ್ರಿಯಾಂಕ ಚೋಪ್ರಾ ತಾವಿರುವ ಮನೆಯ ಬಾಲ್ಕನಿಯಿಂದ ವಿಡಿಯೋ ಶೂಟ್ ಮಾಡಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಪ್ರಿಯಾಂಕಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದು ಪತಿ ಹಾಗೂ ಮಗಳೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ಪ್ರಿಯಾಂಕ ವಾಸವಿರುವ ಮನೆಯ ಸ್ವಲ್ಪ ದೂರದಲ್ಲಿರುವ ಸ್ಥಳದಲ್ಲಿ ಈ ಅವಘಡ ನಡೆದಿದೆ. ಮನೆಯ ಬಾಲ್ಕನಿಯಿಂದ ಶೂಟ್ ಮಾಡಿದ ವಿಡಿಯೋ ಶೇರ್ ಮಾಡಿ, ಈ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಂತಾಪಗಳು. ನಾವೆಲ್ಲರೂ ಈ ರಾತ್ರಿ ಸೇಫ್ ಆಗಿರ್ತೀವೆಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಟಿ ಶೇರ್ ಮಾಡಿದ ಮತ್ತೊಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಲಾಸ್ ಏಂಜಲೀಸ್ ಕಾಡ್ಗಿಚ್ಚಿನ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ನಮ್ಮ ರಕ್ಷಕರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಲಾಸ್​ ಏಂಜಲೀಸ್​ನಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿಗೆ ಸಾವಿರಾರು ಮನೆಗಳು ಸುಟ್ಟು ಭಸ್ಮವಾಗಿದೆ, ಇದುವರೆಗೆ…

Read More

ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಇತ್ತೀಚೆಗೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ತಂದೆ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ವಿಶೇಷವಾಗಿ ಶುಭ ಹಾರೈಸಿದ್ದಾರೆ. 76ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಂದೆಗೆ ‘ಪುಷ್ಪ ಕಾ ಬಾಪ್’ ಎಂದು ಕೇಕ್ ಮೇಲೆ ಬರೆದು ಅಲ್ಲು ಅರ್ಜುನ್ ವಿಶೇಷವಾಗಿ ಶುಭಹಾರೈಸಿದ್ದಾರೆ. ಹ್ಯಾಪಿ ಬರ್ತ್‌ಡೇ ಎಂದು ನಟ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್ ಕುಟುಂಬಸ್ಥರ ಜೊತೆ ಕೇಕ್ ಕತ್ತರಿಸಿ ಸಿಂಪಲ್ ಆಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲು ಅರವಿಂದ್ ತಂದೆಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

Read More

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾದ ವೇಳೆ ಸಂಬಂವಿಸಿದ ಕಾಲ್ತುಳಿತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆಯಿಂದ ನಟ ಅಲ್ಲು ಅರ್ಜುನ್ ಸಾಕಷ್ಟು ನೊಂದಿದ್ದರು. ಇದೀಗ ಸಿನಿಮಾ ರಿಲೀಸ್ ಆದ ಕೆಲ ದಿನಗಳ ಬಳಿಕ ಅಲ್ಲು ಅರ್ಜುನ್ ಬನ್ಸಾಲಿ ಕಚೇರಿಯಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಬನ್ಸಾಲಿ ಹಾಗೂ ಅಲ್ಲು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಅಲ್ಲು ಅರ್ಜುನ್ ಹಾಗೂ ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಈ ಹಿಂದೆ ಕೆಲ ಬಾರಿ ಕೇಳಿ ಬಂದಿತ್ತು. ಆದರೆ ಆ ವೇಳೆ ಅದು ಫೈನಲ್ ಆಗಿರಲಿಲ್ಲ. ಆದರೆ ಇದೀಗ ಪುಷ್ಪ 2 ಸಿನಿಮಾ ಬಿಡುಗಡೆ ಆಗಿದ್ದು ಇದೀಗ ಬನ್ಸಾಲಿ ಅಲ್ಲು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು ಬನ್ಸಾಲಿ ಅವರನ್ನು ಅಲ್ಲು ಅರ್ಜುನ್ ಮುಂಬೈನ ಕಚೇರಿಯಲ್ಲಿ ಭೇಟಿಯಾಗಿದ್ದಾರೆ. ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಮುಂಬೈಗೆ ತೆರಳಿದ್ದರು. ಬನ್ಸಾಲಿ ಕಚೇರಿಯಲ್ಲಿ…

Read More

ವಾರದಲ್ಲಿ 90 ಗಂಟೆ ಕೆಲಸ ಮಾಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸುವ ಮೂಲಕ ಎಲ್‌ ಆ್ಯಂಡ್‌ ಟಿ ಅಧ್ಯಕ್ಷ ಎಸ್‌.ಎನ್‌. ಸುಬ್ರಹ್ಮಣ್ಯನ್‌ ಅವರು ಭಾರೀ ವಿವಾದವೊಂದಕ್ಕೆ ಗುರಿಯಾಗಿದ್ದಾರೆ. ಇದೀಗ ಸುಬ್ರಹ್ಮಣ್ಯನ್ ಹೇಳಿಕೆಗೆ ದೀಪಿಕಾ ಪಡುಕೋಣೆ ತಿರುಗೇಟು ನೀಡಿದ್ದಾರೆ. ‘ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲದಿರುವುದಕ್ಕೆ ನನಗೆ ವಿಷಾದ ಇದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ನೀವೂ ಕೂಡ ಭಾನುವಾರ ಕೆಲಸ ಮಾಡಿದರೆ ನನಗೆ ಹೆಚ್ಚು ಖುಷಿಯಾಗುತ್ತದೆ. ಪ್ರತಿ ಉದ್ಯೋಗಿ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು’ ಎಂದು ಸುಬ್ರಮಣ್ಯನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ದೀಪಿಕಾ ಟೀಕಿಸಿದ್ದಾರೆ. ‘ಅವರು ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿ ಮಾಡಿದ್ದಾರೆ’ ಎಂದಿದ್ದಾರೆ. ವಾರಕ್ಕೆ 90 ಗಂಟೆ ಕೆಲಸ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಈ ರೀತಿ ಮಾಡಿದಾಗ ವ್ಯಕ್ತಿಯ ಆರೋಗ್ಯದ ಮೇಲೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಆ ರೀತಿ ಆಗಬಾರದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೊದಲು ಕೂಡ ಸುಬ್ರಮಣ್ಯನ್ ಅವರು ‘ಭಾನುವಾರವೂ ಉದ್ಯೋಗಿಗಳು…

Read More

ನಟ ಸೋನು ಸೂದ್ ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಹಿರೋ ಎಂದು ಸಾಭೀತು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹಲವರಿಗೆ ನೆರವಾಗಿದ್ದ ಸೋನು ಸೂದ್ ತೆಲುಗು, ಕನ್ನಡ, ತಮಿಳು ಹೀಗೆ ಪ್ರತಿಯೊಂದು ಭಾಷೆಯ ಸಿನಿಮಾದಲ್ಲಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ. ಈ ಮಧ್ಯೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಭಾಗಿಯಾದ ಸೋನು ಸೂದ್, ಬಾಲಿವುಡ್ ನಟರ ನಿಜ ಬಣ್ಣ ಬಯಲು ಮಾಡಿದ್ದಾರೆ. ಬಾಲಿವುಡ್ ನಟರು ಹೊರಗೆ ಹೋದಾಗ ಪಾಪರಾಟ್ಜಿಗಳು, ಅಭಿಮಾನಿಗಳು ಅವರನ್ನು ಸುತ್ತುವರೆಯುವುದು ನೋಡಿಯೇ ಇರುತ್ತೀರಿ. ಆದರೆ ಇದು ನಿಜವಲ್ಲ ಎಂದಿದ್ದಾರೆ ಸೋನು ಸೂದ್. ಪಾಪರಾಜಿಗಳಿಗೆ ನಟ, ನಟಿಯರು ಮೊದಲೇ ಮಾಹಿತಿ ನೀಡಿರುತ್ತಾರಂತೆ. ಇಂಥಹಾ ಕಡೆ ಹೋಗುತ್ತಿದ್ದೀವಿ ನೀವು ಬನ್ನಿ ಎಂದು. ಜೊತೆಗೆ ನಟರು ಎಲ್ಲಾದರೂ ಹೋದಾಗ ಅವರ ಬಾಡಿಗಾರ್ಡ್​ಗಳು ಬೇಕೆಂದೇ ಜೋರಾಗಿ ಸದ್ದು ಮಾಡುವುದು, ಸುಮ್ಮನೆ ನಕಲಿ ಗಡಿಬಿಡಿ ಮಾಡಿ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಾರಂತೆ. ಇದರಿಂದ ಜನರ ಗಮನ ತಮ್ಮತ್ತೆ ತಿರುಗುವಂತೆ ಮಾಡುತ್ತಾರೆ ಎಂದು ಸೋನು ಸೂದ್ ಹೇಳಿದ್ದಾರೆ.…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ರೆಗ್ಯೂಲರ್ ಬೇಲ್ ನೀಡಿದೆ. ರೆಗ್ಯೂಲರ್ ಬೇಲ್ ಪಡೆದ ಬಳಿಕ ಮೊದಲ ಬಾರಿಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ನಿನ್ನೆ ಬೆಂಗಳೂರಿನ ಸಿಸಿಎಚ್ 57 ಕೋರ್ಟ್‌ಗೆ ಹಾಜರಾಗಿದ್ದರು. ಎಲ್ಲ ಆರೋಪಿಗಳ ಹಾಜರಿ ಪಡೆದ ನ್ಯಾಯಾಧೀಶರು ಆ ನಂತರ ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಿದರು. ಈ ನಡುವೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರುಗಳು ಪ್ರತ್ಯೇಕವಾಗಿ ನ್ಯಾಯಾಧೀಶರ ಬಳಿ ಬೆಂಗಳೂರು ಬಿಟ್ಟು ಹೊರಗೆ ಪ್ರಯಾಣಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ನಟ ದರ್ಶನ್, ಮೈಸೂರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಅದರಂತೆ ನಟಿ ಪವಿತ್ರಾ ಗೌಡ ಕರ್ನಾಟಕ ಬಿಟ್ಟು ಹೊರರಾಜ್ಯಕ್ಕೆ ತೆರಳಲು ಅನುಮತಿ ಕೋರಿದ್ದರು. ಇಬ್ಬರಿಗೂ ನ್ಯಾಯಾಲಯ ಅನುಮತಿ ನೀಡಿದೆ. ದರ್ಶನ್, ಐದು ದಿನಗಳ ಕಾಲ ಮೈಸೂರಿಗೆ ತೆರಳಬಹುದಾಗಿದೆ. ಜನವರಿ 12 ರಿಂದ 17ರವರೆಗೆ ದರ್ಶನ್ ಮೈಸೂರಿನಲ್ಲಿ ಇರಬಹುದಾಗಿದ್ದು ಆ ಬಳಿಕ ಬೆಂಗಳೂರಿಗೆ ವಾಪಸ್ ಬರಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಇನ್ನು…

Read More

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸಣ್ಣ ಮತ್ತು ದೊಡ್ಡ ಅಗತ್ಯಗಳನ್ನು ಪೂರೈಸಲು ಸಾಲವನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ಅದಲ್ಲದೆ ಕೆಲವೊಮ್ಮೆ ಸ್ನೇಹಿತರು ಅಥವಾ ಪ್ರೀತಿಪಾತ್ರರಿಗೆ ಸಹಾಯ ಮಾಡಲು ಹಣವನ್ನು ಸಾಲ ನೀಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸಾಲ ನೀಡಿದ ಹಣ ಬರೋದೆ ಇಲ್ಲ. ಇದರಿಂದ ನಾವು ತುಂಬಾನೆ ಕಷ್ಟ ಎದುರಿಸಬೇಕಾಗಿ ಬರುತ್ತೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗದ ಕಾರಣ ನಿದ್ರೆಯಿಲ್ಲದ ರಾತ್ರಿಗಳು, ಒತ್ತಡ ಹೆಚ್ಚುತ್ತದೆ. ಕೆಲವೊಂದು ಪರಿಹಾರಗಳನ್ನು ಮಾಡಿದರೆ ಸಿಕ್ಕಿಬಿದ್ದ ಹಣವನ್ನು ಮರಳಿ ಪಡೆಯಬಹುದು. ಗಣೇಶನ ಪೂಜೆ ಸಾಲ ಕೊಟ್ಟ ಹಣ ವಾಪಸ್ ಬರದಿದ್ದರೆ, ಪ್ರತಿದಿನ ಬೆಳಿಗ್ಗೆ ಗಣೇಶನ ಪೂಜೆ ಮಾಡಬೇಕು. ಪ್ರತಿನಿತ್ಯ ಗಣಪತಿಯನ್ನು ಪೂಜಿಸುವುದರಿಂದ ನಿಮ್ಮ ಬಾಕಿ ಹಣವು ನಿಮಗೆ ವಾಪಸ್ ಸಿಗುತ್ತದೆ ಮತ್ತು ನೀವು ಯಾರಿಂದಾದರೂ ಸಾಲ ತೆಗೆದುಕೊಂಡಿದ್ದರೆ ಕ್ರಮೇಣ ಅದು ಮರುಪಾವತಿಯಾಗಲು ಪ್ರಾರಂಭಿಸುತ್ತದೆ. ​ಹನುಮಂತನ ಪೂಜೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾರಿಗಾದರೂ ಕೊಟ್ಟ ಹಣವನ್ನು ಮರಳಿ ಪಡೆಯಲು ಹನುಮಂತನಿಗೆ ಕೆಂಪು ವಸ್ತ್ರವನ್ನು ಅರ್ಪಿಸಿ. ಇದರ ಜೊತೆಗೆ ಸಾಸಿವೆ ಎಣ್ಣೆಯಲ್ಲಿ…

Read More

ತುಪ್ಪವನ್ನು ಶತಮಾನಗಳಿಂದ ಭಾರತೀಯ ಅಡುಗೆ ಮತ್ತು ಆಯುರ್ವೇದ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸು ತ್ತಾರೆ. ಆದ್ರೆ ತುಪ್ಪದಿಂದ ತಯಾರಿಸಿದ ಚಹಾ ಈಗ ಟ್ರೆಂಡ್ ಆಗುತ್ತಿದೆ. ಏಕೆಂದರೆ ತುಪ್ಪದಿಂದ ತಯಾರಿಸಿದ ಕಾಫಿ ದೇಹದ ತೂಕವನ್ನು ಇಳಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ತುಪ್ಪದ ಚಹಾ ಕುಡಿಯುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ತ್ರಾಣವನ್ನು ಹೆಚ್ಚಿಸುತ್ತದೆ : ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿದ್ದು ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ. ಬೆಳಿಗ್ಗೆ ತುಪ್ಪದ ಚಹಾವನ್ನು ಸೇವಿಸುವ ಮೂಲಕ ನೀವು ದಿನವಿಡೀ ಅಗತ್ಯವಿರುವ ಶಕ್ತಿಯನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ತುಪ್ಪದಲ್ಲಿರುವ ಕೊಬ್ಬಿನ ಅಂಶವನ್ನು ದೇಹವು ವೇಗವಾಗಿ ಹೀರಿಕೊಳ್ಳುತ್ತದೆ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡದೆಯೇ ನಿಮ್ಮ ಸ್ನಾಯು ಮತ್ತು ಮೆದುಳಿಗೆ ಶಕ್ತಿಯನ್ನು ಪೂರೈಸುತ್ತದೆ. ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ : ತುಪ್ಪದಲ್ಲಿ ಕಂಡು ಬರುವ ಬ್ಯೂಟಿರೇಟ್ ಎನ್ನುವ ಕೊಬ್ಬಿನಾಮ್ಲವು,…

Read More

ಸೂರ್ಯೋದಯ – 6:52 AM ಸೂರ್ಯಾಸ್ತ – 5:55 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ದ್ವಾದಶಿ ನಕ್ಷತ್ರ – ರೋಹಿಣಿ ರಾಹು ಕಾಲ – 09:00 ದಿಂದ 10:30 ವರೆಗೆ ಯಮಗಂಡ – 01:30 ದಿಂದ 03:00 ವರೆಗೆ ಗುಳಿಕ ಕಾಲ – 06:00 ದಿಂದ 07:30 ವರೆಗೆ ಬ್ರಹ್ಮ ಮುಹೂರ್ತ – 5:16 ಬೆ ದಿಂದ 6:04 ಬೆ ವರೆಗೆ ಅಮೃತ ಕಾಲ – 9:26 ಬೆ ದಿಂದ 10:57 ಬೆ ವರೆಗೆ ಅಭಿಜಿತ್ ಮುಹುರ್ತ – 12:02 ಮ ದಿಂದ 12:46 ಬೆ ವರೆಗೆ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಚಿಂತಿಸಬೇಡಿ…

Read More