ಚಿಕ್ಕಮಗಳೂರು: ಡಿಸೆಂಬರ್ 13ನೇ ತಾರೀಕು ವಿಧಾನಪರಿಷತ್ ರಣರಂಗವಾಗಿತ್ತು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪರಿಷತ್ ಸದಸ್ಯ ಸಿ.ಟಿ ರವಿ ಅವಾಚ್ಯ ಪದ ಬಳಸಿ ನಿಂದಿಸಿರುವ ಆರೋಪ ಕೇಳಿಬಂದಿತ್ತು. ಆದ್ರೆ ಪ್ರಕರಣ ಜೈಲು, ಕೋರ್ಟ್ ಮೆಟ್ಟಿಲೇರಿ ಸಿಟಿ ರವಿ ಸದ್ಯ ಬಂಧನದಿಂದ ಮುಕ್ತರಾಗಿದ್ದಾರೆ. ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ “ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಕ್ಷಮೆ ಕೇಳದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಪುತ್ರ ಸೂರ್ಯನನ್ನು ಹತ್ಯೆ ಮಾಡಲಾಗುತ್ತದೆ” ಎಂಬ ಬೆದರಿಕೆ ಪತ್ರ ಸಿಟಿ ರವಿಯವರ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಕ್ಕೆ ಬಂದಿದೆ. ಈ ಸಂಬಂಧ ಸಿಟಿ ರವಿ ಪಿಎ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಮಾತನಾಡಿ, ಅಪರಿಚಿತ ವ್ಯಕ್ತಿಗಳಿಂದ ಎಂಎಲ್ಸಿ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಬಸವನಹಳ್ಳಿ…
Author: Author AIN
ಕರಾವಳಿಯಲ್ಲಿ ಮೀನುಗಾರರು ತಮ್ಮ ಆಕ್ರೋಶವನ್ನು ಬೀದಿಗೆ ಬಂದು ಪ್ರತಿಭಟಿಸುವ ಮಟ್ಟಿಗೆ ಬಂದಿದೆ. ಕಡಲ ಮಕ್ಕಳು ಆಕ್ರೋಶಗೊಂಡರೆ ಎನಾಗಬಹುದು ಎಂಬುದನ್ನು ತೋರಿಸಿದ್ದಾರೆ ಇವರು ಬೀದಿಗೆ ಬಂದು ಆಕ್ರೋಶಿತರಾಗಲು ಕಾರಣವೇನು ಎಂಬುದು ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.. ಕರಾವಳಿ ಕಡಲತೀರದಲ್ಲಿ ಕಳೆದ ಹಲವಾರು ವರ್ಷಗಳಿಂದ ಎಗ್ಗಿಲ್ಲದೆ ಅವೈಜ್ಞಾನಿಕ ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಕಡಲ ಜೀವಿಗಳ ಪ್ರಾಣಕ್ಕೆ ಕುತ್ತು ತರುವ ಈ ಮೀನುಗಾರಿಕೆ ವಿರುದ್ಧ ಯಾವೊಬ್ಬ ಅಧಿಕಾರಿ ಇನ್ನು ಕ್ರಮ ಕೈಗೊಂಡಿಲ್ಲ. ಇದರಿಂದ ಕೆರಳಿದ ಕಡಲ ಮಕ್ಕಳು ಉಡುಪಿ, ಉತ್ತರಕನ್ನಡ, ಮಂಗಳೂರಿನಿಂದ ಆಗಮಿಸಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಕಡಲ ತೀರದಲ್ಲಿ 200 ಕ್ಕೂ ಹೆಚ್ಚು ನಾಡದೋಣಿಗಳನ್ನು ಸಮುದ್ರದಲ್ಲಿ ಲಂಗರು ಹಾಕಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಕರ್ನಾಟಕ ರಾಜ್ಯ ಸಾಂಪ್ರಾದಾಯಕ ನಾಡದೋಣಿ ಮೀನುಗಾರರ ಒಕ್ಕೂಟದಿಂದ ಪ್ರತಿಭಟನೆ ನೆಡೆಸಿದರು. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಕತ್ತಲಾಗುತ್ತಿದ್ದಂತೆ ದೊಡ್ಡ ಬೋಟ್‌ಗಳನ್ನ ಹತ್ತಿ, ಹೈವೋಲ್ಟೇಜ್ ಲೈಟ್‌ಗಳನ್ನ ಮತ್ತು ಅದಕ್ಕೆ ಬೇಕಾದ…
ಬೆಂಗಳೂರು: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಖರ್ ಹಾಗೂ ಅವರ ಪತ್ನಿ ಶ್ರೀಮತಿ ಸುದೇಶ ಧನಖರ್ ಅವರು ಇಂದು ಬೆಂಗಳೂರಿಗೆ ಆಗಮಿಸಿದರು. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಎಲ್ಲಾ ರಾಜ್ಯಗಳ ಲೋಕಸೇವಾ ಆಯೋಗಗಳ 25ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಂತರ, ಬಿಇಎಲ್ ನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬಿಹೆಚ್ಇಎಲ್ ನಲ್ಲಿ ಹಮ್ಮಿಕೊಳ್ಳಲಾಗಿರುವ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಇಂದು ಸಂಜೆಯೇ ಮರಳಿ ನವದೆಹಲಿಗೆ ತೆರಳಲಿದ್ದಾರೆ. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ದಂಪತಿ ಸಮೇತರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಮ್ ಸಿ ಸುಧಾಕರ್ ಸೇರಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಬೆಂಗಳೂರು – ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮಧುಮೇಹದ ಸ್ಥಿತಿಯು ಆತಂಕಕಾರಿ ಮಟ್ಟವನ್ನು ತಲುಪಿದೆ, 10 ಕೋಟಿಗೂ ಹೆಚ್ಚು ಪೀಡಿತ ವ್ಯಕ್ತಿಗಳೊಂದಿಗೆ ದೇಶವನ್ನು ವಿಶ್ವದ ಮಧುಮೇಹ ರಾಜಧಾನಿಯನ್ನಾಗಿ ಮಾಡಿದೆ. ಈ ದೀರ್ಘಕಾಲದ ಕಾಯಿಲೆಯು ಹೆಚ್ಚಿದ ರಕ್ತದಲ್ಲಿನ ಸಕ್ಕರೆಯಿಂದ ಕೂಡಿದ್ದು, ಕಣ್ಣುಗಳು, ಮೂತ್ರಪಿಂಡಗಳು, ಹೃದಯ ಮತ್ತು ನರಮಂಡಲ ಸೇರಿದಂತೆ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಮಧುಮೇಹ, ವಿಶೇಷವಾಗಿ ಇನ್ಸುಲಿನ್ ಪ್ರತಿರೋಧದಿಂದಾಗಿ, ಬೊಜ್ಜು, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಎಸ್), ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮುಂತಾದ ಅನೇಕ ಪರಿಸ್ಥಿತಿಗಳಿಗೆ ಮೂಲ ಕಾರಣವಾಗಿದೆ. ನಾರಾಯಣ ನೇತ್ರಾಲಯದ ಸಂಸ್ಥಾಪಕ ಅಧ್ಯಕ್ಷರಾದ ದಿ|| ಡಾ. ಕೆ ಭುಜಂಗ ಶೆಟ್ಟಿ ಅವರಿಗೆ, ಮಧುಮೇಹವು ಕೇವಲ ಕ್ಲಿನಿಕಲ್ ಸವಾಲಿಗಿಂತ ಹೆಚ್ಚಾಗಿತ್ತು – ಇದು ವೈಯಕ್ತಿಕ ಯುದ್ಧವಾಗಿತ್ತು. 25 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದ ಇವರ ದಿನನಿತ್ಯದ ಅಭ್ಯಾಸದಲ್ಲಿ, ಮಧುಮೇಹದಿಂದ ಉಂಟಾದ ಅಥವಾ ಹದಗೆಟ್ಟ ಕಣ್ಣಿನ ಕಾಯಿಲೆಗಳೊಂದಿಗೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಕೆಲವರು ಕುರುಡುತನಕ್ಕೆ ಕಾರಣರಾದರು ಹಾಗೂ ಪರಿಹಾರವನ್ನು ಕಂಡುಹಿಡಿಯಲು ಪ್ರೇರಣೆ…
ಬೆಂಗಳೂರು: ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಆಸಕ್ತಿಯಿದ್ದು, ಉದ್ಯೋಗದ ಹುಡುಕಾಟದಲ್ಲಿ ದ್ದೀರಾ.? ಹಾಗಿದ್ರೆ ನಿಮಗಿಲ್ಲಿದೆ ಭರ್ಜರಿ ಉದೋಗವಕಾಶ.. ಹೌದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಶಾಖೆಯಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ . ಈ ಬ್ಯಾಂಕ್ ನಲ್ಲಿ ಒಟ್ಟು 32 ಕಿರಿಯ ಸಹಾಯಕ ಹುದ್ದೆಗಳು ಖಾಲಿಯಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೋಡಿ ಜನವರಿ 16, 2025 ರೊಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳು * ಸಂಸ್ಥೆಯ ಹೆಸರು : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ * ಹುದ್ದೆ : ಜೂನಿಯರ್ ಅಸಿಸ್ಟೆಂಟ್ * ಉದ್ಯೋಗ ಸ್ಥಳ : ಕೊಡಗು * ವೇತನ : ಮಾಸಿಕ ರೂ. 30,350 – ರೂ 58,250 ಶೈಕ್ಷಣಿಕ ಅರ್ಹತೆ * ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಶೇ 55% ಕನಿಷ್ಠ ಅಂಕದೊಂದಿಗೆ ವಾಣಿಜ್ಯೇತರ…
ಬೆಂಗಳೂರು: ಕಚ್ಚಾ ತೈಲಗಳಾದ ಪೆಟ್ರೋಲ್ ಡೀಸೆಲ್ ಕೂಡ ಬೆಲೆಗಳಲ್ಲಿ ಏರಿಳಿತಕ್ಕೊಳಗಾಗುತ್ತಿದ್ದು, ದಿನಂಪ್ರತಿ ಬಳಕೆಯಾಗುವ ಈ ಇಂಧನಗಳು ಒಮ್ಮೊಮ್ಮೆ ಬೆಲೆ ಏರಿಸಿಕೊಂಡಿರುವುದು ವಾಹನ ಚಾಲಕರಿಗೆ ತಲೆನೋವಿನ ಸಮಸ್ಯೆಯಾಗಿದೆ. ನವೀಕರಿಸಲಾಗದೇ ಇರುವ ಇಂಧನಗಳಾಗಿ ಗುರುತಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಬಳಕೆಗೆ ಲಭ್ಯವಾಗಿಸಲಾಗುತ್ತದೆ. ಯುಪಿಯ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 10 ಪೈಸೆಯಷ್ಟು ಹೆಚ್ಚಾಗಿದೆ ಮತ್ತು ಲೀಟರ್‌ಗೆ 94.87 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಕೂಡ 12 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ ಗೆ 88.01 ರೂ.ಗೆ ತಲುಪಿದೆ. ಗಾಜಿಯಾಬಾದ್‌ನಲ್ಲೂ ಪೆಟ್ರೋಲ್ ಬೆಲೆ 6 ಪೈಸೆ ಹೆಚ್ಚಾಗಿದೆ ಮತ್ತು ಲೀಟರ್‌ಗೆ 94.64 ರೂ.ಗೆ ಮಾರಾಟವಾಗುತ್ತಿದೆ ಮತ್ತು ಡೀಸೆಲ್ 7 ಪೈಸೆ ಏರಿಕೆಯಾಗಿ ಲೀಟರ್‌ಗೆ 87.74 ರೂ.ಗೆ ಮಾರಾಟವಾಗುತ್ತಿದೆ. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಬಿಹಾರದ ರಾಜಧಾನಿ ಪಾಟ್ನಾದಲ್ಲಿ, ಪೆಟ್ರೋಲ್ ಲೀಟರ್‌ಗೆ 39 ಪೈಸೆ ಏರಿಕೆಯಾಗಿದ್ದು, 105.34 ರೂ.ಗೆ ತಲುಪಿದೆ ಮತ್ತು ಡೀಸೆಲ್ ಬೆಲೆ 37 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 92.19 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ…
ವಾಷಿಂಗ್ಟನ್: ನೀಲಿ ಚಿತ್ರ ತಾರೆ ಸ್ಟಾರ್ಮಿ ಡೆನಿಯಲ್ಸ್ ಅವರಿಗೆ ಹಣ ನೀಡಿದ ಪ್ರಕರಣದಲ್ಲಿ ದೋಷಿಯಾಗಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜೈಲು ಶಿಕ್ಷೆಯನ್ನು ನ್ಯಾಯಾಧೀಶರು ನಿರಾಕರಿಸಿದ್ದಾರೆ. ಪ್ರಕರಣದಲ್ಲಿ ಟ್ರಂಪ್ ದೋಷಿ ಎಂದು ಘೋಷಿಸಿದ್ದ ಮ್ಯಾನ್‌ಹ್ಯಾಟನ್ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಔಪಚಾರಿಕವಾಗಿ ಶಿಕ್ಷೆ ವಿಧಿಸಿದರು. ಆದರೆ ಯಾವುದೇ ಜೈಲು ಶಿಕ್ಷೆ ವಿಧಿಸದೆ ಬೇಷರತ್ತಾದ ಬಿಡುಗಡೆ ಶಿಕ್ಷೆ ವಿಧಿಸಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ. ಈ ನಿರ್ಧಾರವು ಟ್ರಂಪ್ ಅವರನ್ನು ಅಪರಾಧದಿಂದ ಮುಕ್ತಗೊಳಿಸುತ್ತದೆ ಮತ್ತು ಜೈಲು ಶಿಕ್ಷೆ ಅಥವಾ ದಂಡ ಇಲ್ಲದೆ ಶ್ವೇತಭವನ ಪ್ರವೇಶಿಸಲು ಅವಕಾಶ ನೀಡುತ್ತದೆ. ಮ್ಯಾನ್‌ಹ್ಯಾಟನ್ ನ್ಯಾಯಾಧೀಶ ಜಾನ್ ಎಂ ಮರ್ಚಂಟ್ ಅವರು, ಅಮೆರಿಕದ ನಿಯೋಜಿತ ಅಧ್ಯಕ್ಷರು ಶ್ವೇತಭವನದಲ್ಲಿ ಮೊದಲ ಅಪರಾಧಿಯಾಗುವುದನ್ನು ತಪ್ಪಿಸಲು ಬೇಷರತ್ತಾದ ಬಿಡುಗಡೆ ಶಿಕ್ಷೆ ನೀಡಿದ್ದಾರೆ.
ಖಾನಾಪುರ ಭಾಗದಲ್ಲಿ ಜನರ ನಿದ್ದೆಗೆಡಸಿದ್ದ ಒಂಟಿ ಸಲಗವನ್ನು ಸಕ್ರೆಬೈಲು ಮಾವುತರು ಮತ್ತು ವೈದ್ಯರ ತಂಡ ಡಾರ್ಟ್ ಮಾಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಸೆರೆಸಿಕ್ಕ ಕಾಡಾನೆಯನ್ನು ಸಕ್ರೆಬೈಲು ಖೆಡ್ಡಾಗೆ ಸ್ಥಳಾಂತರಿಸಲಾಗಿದ್ದು, ಇಂದು ಲಾರಿಯಿಂದ ಖೆಡ್ಡಾಗೆ ಸೇರಿಸುವಲ್ಲಿ ಮಾವುತ ಕಾವಾಡಿಗಳು ಯಶಸ್ವಿಯಾದರು. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಬೆಳಗಾಂ ಜಿಲ್ಲೆಯ ಚಾಪಗಾಂವ ಬಳಿ ಒಂಟಿ ಸಲಗ ರೈತರ ಜಮೀನಿಗೆ ನುಗ್ಗಿ ಆತಂಕ ಸೃಷ್ಟಿಸಿತ್ತು. ಎಸಿಎಫ್ ಸುನಿತಾ ನಿಂಬರಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಇಂದು ಆನೆಯನ್ನು ಖೆಡ್ಡಾಗೆ ಸೇರಿಸಿ, ಕೆಲವೇ ದಿನಗಳಿಂದ ಪಳಗಿಸುವ ಪ್ರಕ್ರೀಯೆಗೆ ಚಾಲನೆ ನೀಡಲಾಗುವುದು. ನಂತರ ಸೂಕ್ತ ತರಬೇತಿ ನೀಡಿ, ಅರಣ್ಯ ಇಲಾಖೆಯ ಕಾರ್ಯಗಳಿಗೆ ಸಾಕಾನೆಯನ್ನು ಬಳಸಿಕೊಳ್ಳಲಾಗುತ್ತದೆ.
ಕಲಬುರಗಿ: ಬೆಳ್ಳಂಬೆಳಿಗ್ಗೆ ಅಕ್ರಮವಾಗಿ ಡ್ರಗ್ ಸಪ್ಲೈ ಮಾಡುತಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿರೋ ಘಟನೆ ಕಲಬುರಗಿ ಹೊರ ವಲಯದ ತಾವರಗೇರಾ ಬಳಿ ನಡೆದಿದೆ. ಸುಪ್ರೀತ್ ನವಲೇ (32) ಮೇಲೆ ಫೈರಿಂಗ್ ಮಾಡಲಾಗಿದ್ದು, ಅಕ್ರಮವಾಗಿ ಕಾರ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಾ ಇದ್ದ ಅನ್ನೋ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರು ಕಾರ್ ನಿಲ್ಲಿಸಿ ತಪಾಸಣೆ ಮಾಡುವಾಗ ಪೊಲೀಸರ ಮೇಲೆ ಆರೋಪಿ ಚಾಕುವಿನಿಂದ ದಾಳಿ ಮಾಡಿದ್ದಾನೆ. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಹೆಡ್ ಕಾನ್ಸ್‌ಟೇಬಲ್ ಗುರುಮೂರ್ತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಚೌಕ್ ಠಾಣೆ PI ರಾಘವೇಂದ್ರರಿಂದ ಎಡಗಾಲಿಗೆ ಫೈರಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಗಾಯಾಳು ಸುಪ್ರೀತ್ ನನ್ನು ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೀದರ್: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹೆಸರು ಡೆತ್ನೋಟ್ನಲ್ಲಿ ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಗೆ ಆರೋಪ ಮಾಡಲಾಗಿದೆ. ಹೀಗಾಗಿ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಇದೀಗ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಅವರನ್ನು ಸಿಐಡಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶ ಹೊರಡಿಸಿದೆ. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು ಕಪನೂರು, ನಂದಕುಮಾರ್ ನಾಗಭುಜಂಗೇ, ಘೋರ್ಕನಾಥ ಸಜ್ಜನಾ, ಸತೀಶ್ ಅವರಿಗೆ ನೋಟಿಸ್ ನೀಡಲಾಗಿತ್ತು. ಎಲ್ಲರೂ ವಿಚಾರಣೆಗೆ ಹಾಜರಾಗಿದ್ದರು. ಆರೋಪಿ ರಾಜು ಮತ್ತು ಗ್ಯಾಂಗ್ ಅನ್ನು ಸಿಐಡಿಯ ಡಿವೈಎಸ್‌ಪಿ ಸುಲೇಮಾನ್ ತೀವ್ರ ವಿಚಾರಣೆಗೆ ಒಳಪಡಿಸಿದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಳಿಕ ಬೀದರ್ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನ…