ಕಲಘಟಗಿ: ಗ್ರಾಮೀಣ ಭಾಗದಲ್ಲಿ ಮಾತ್ರ ದೇಸಿ ಕ್ರೀಡೆಗಳು ಕಾಣ ಸಿಗುತ್ತಿವೆ. ಎಲ್ಲರೂ ಕಬಡ್ಡಿಯಂತಹ ಕ್ರೀಡೆಗಳನ್ನು ಪ್ರೋತ್ಸಾ ಹಿಸುವ ಕೆಲಸವಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು. ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮರಸ್ಯ ಬೆಸೆಯಲು ಕಬಡ್ಡಿ ಕ್ರೀಡೆ ಸಹಕಾರಿಯಾಗಲಿದೆ. ಈ ಆಟದಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರಲ್ಲೂ ಕ್ರೀಡಾಸೂರ್ತಿ ವೃದ್ಧಿಗೊಳ್ಳಲಿದೆ ಎಂದರು. ಪ್ರಾಸ್ತವಿಕವಾಗಿ ಮಾತನಾಡಿದ ಶಿಕ್ಷಕ ಪರಶುರಾಮ ಪಾಣಿಗಟ್ಟಿ ಅವರು, ಕಬಡ್ಡಿಗೆ ತನ್ನದೆಯಾದ ಇತಿಹಾಸವಿದೆ. ಸದೃಢ ಆರೋಗ್ಯಕ್ಕೆ ಪೂರಕವಾಗುವ ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು. https://ainlivenews.com/here-there-is-a-physical-relationship-between-siblings-mother-son-and-father-daughter/ ಗ್ರಾಮದ ಹಿರಿಯರಾದ ಬಸವಣ್ಣೆಪ್ಪ ಟವಳಿ ಮಾತನಾಡಿ, ಎಲ್ಲಕ್ಕಿಂತ ಆರೋಗ್ಯ ಸಂಪತ್ತು ದೊಡ್ಡದು. ಮೊಬೈಲ್ ಗೀಳಿನಲ್ಲಿ ಮುಳುಗುತ್ತಿರುವ ಯುವ ಸಮೂಹ ಆರೋಗ್ಯವನ್ನು ನಿರ್ಲಕ್ಷಿಸುತ್ತಿದೆ. ಚಿಕ್ಕ ವಯಸ್ಸಿ ನಲ್ಲಿಯೇ ಅನಾರೋಗ್ಯ ಸಮಸ್ಯೆ ಎದುರಾಗುತ್ತಿದೆ. ದೈಹಿಕ ಶ್ರಮ ಬಯಸುವ ಕಬಡ್ಡಿಯಂತಹ ಕ್ರೀಡೆಯಲ್ಲಿ ಯುವಕರು ತೊಡಗಿಕೊಳ್ಳಲಿ ಎಂದು…
Author: Author AIN
ಟೊರೊಂಟೋ: ಲ್ಯಾಂಡ್ ಆಗಿ ರನ್ ವೇಯಲ್ಲಿ ಸಾಗುವಾಗ ವಿಮಾನ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಕೆನಡಾದ ರಾಜಧಾನಿ ಟೊರೊಂಟೋದಲ್ಲಿ ಸಂಭವಿಸಿದೆ. 80 ಜನರನ್ನು ಹೊತ್ತಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್ ಆಗಿ ರನ್‌ವೇಯಲ್ಲಿ ಮುಂದಕ್ಕೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ವಿಮಾನ ದುರಂತದಲ್ಲಿ ಕನಿಷ್ಠ 18 ಜನರಿಗೆ ಗಾಯಗಳಾಗಿದ್ದು, ಒಂದು ಮಗು ಸೇರಿದಂತೆ, ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಸಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು ವರದಿಯಾಗಿದೆ. 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ವಿಮಾನ ಅಮೆರಿಕದ ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಿಂದ ಕೆನಡಾದ ಅತಿದೊಡ್ಡ ಮಹಾನಗರ ಟೊರೊಂಟೊಕ್ಕೆ ಬಂದಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನ ಪಲ್ಟಿಯಾಗುತ್ತಿದ್ದಂತೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಗಾಯಗಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ವಿಮಾನಗಳ…
ರೋಗ ನಿರೋಧಕ ಶಕ್ತಿಯು ನಮ್ಮನ್ನು ಹೆಚ್ಚು ಶಕ್ತಿಶಾಲಿಯಾಗಿಸಲು ಹಾಗೂ ರೋಗಗಳ ವಿರುದ್ಧ ಹೋರಾಡಲು ನಮ್ಮನ್ನು ಶಕ್ತಿಶಾಲಿಯಾಗಿಸುತ್ತದೆ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಎಂದಾದರೆ ಅದಕ್ಕೆ ತಕ್ಕಂತಹ ಆಹಾರಗಳನ್ನು ನಾವು ಸೇವಿಸಬೇಕಾಗುತ್ತದೆ. ಆದ್ರೆ ನೀವು ಆರೋಗ್ಯವಾಗಿರಲು ಬಯಸುವುದಾದರೆ ಮೊದಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು ಬಹಳ ಮುಖ್ಯ. ಬ್ಯಾಕ್ಟೀರಿಯಾ, ಪರಾವಲಂಬಿಗಳು ಮತ್ತು ವೈರಸ್ಗಳಿಂದ ಉಂಟಾಗುವ ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಡಾ ಗೋಯಲ್ ಹೇಳುತ್ತಾರೆ. ವಿವಿಧ ಹಾನಿಕಾರಕ ರೋಗಗಳನ್ನು ಎದುರಿಸಲು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯು ಅತ್ಯಗತ್ಯ. ಕೆಲವು ಆಹಾರಗಳ ಅತಿಯಾದ ಸೇವನೆಯು ರೋಗನಿರೋಧಕ ಶಕ್ತಿಯನ್ನು ನಿಧಾನಗೊಳಿಸುತ್ತದೆ. ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿವೆ. ಸಕ್ಕರೆ: ಹೆಚ್ಚಿನ ಸಕ್ಕರೆ ಸೇವನೆಯು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಹಾಗಾಗಿ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಂಸ್ಕರಿಸಿದ ಆಹಾರಗಳು: ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ಅಂಶ ಅಧಿಕವಾಗಿರುತ್ತದೆ, ಇವು ಅನಾರೋಗ್ಯಕರ…
UPI ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಒಬ್ಬ ಬಳಕೆದಾರರಿಂದ ಇನ್ನೊಬ್ಬರಿಗೆ ಪಾವತಿಗಳನ್ನು ಕಳುಹಿಸಲು ಇದು ವೇಗವಾದ, ಸುಲಭ ಮತ್ತು ಸುರಕ್ಷಿತ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ವೈಯಕ್ತಿಕ ಬ್ಯಾಂಕಿಂಗ್ ವಹಿವಾಟುಗಳು, ಬಿಲ್ ಪಾವತಿಗಳು, ಇ-ಕಾಮರ್ಸ್ ವಹಿವಾಟುಗಳನ್ನು ಯುಪಿಐ ಮೂಲಕ ಸುಲಭವಾಗಿ ನಿರ್ವಹಿಸಬಹುದು. ಅದರಂತೆ ಇದೀಗ ವಹಿವಾಟು ವಿಫಲವಾದರೆ ಅಥವಾ ಹಣ UPI ನಲ್ಲಿ ಸಿಲುಕಿಕೊಂಡರೆ, ಮರುಪಾವತಿ ಬರಲು ಕೆಲವು ದಿನಗಳು ಬೇಕಾಗುತ್ತದೆ. ಈಗ ಅಂತಹ ಯಾವುದೇ ಸಮಸ್ಯೆ ಇಲ್ಲ. UPI ವಹಿವಾಟು ವಿಫಲಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈಗ ಚಾರ್ಜ್‌ಬ್ಯಾಕ್ ವಿನಂತಿಗಳಿಗೆ ಅನುಮೋದನೆ ಮತ್ತು ನಿರಾಕರಣೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಿದೆ. ಒಂದು ವೇಳೆ ವಹಿವಾಟು ವಿಫಲವಾದರೆ ಅಥವಾ ಹಣವು ಯಾವುದೇ UPI ನಲ್ಲಿ ಸಿಲುಕಿಕೊಂಡರೆ, ಮರುಪಾವತಿಗಾಗಿ ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಇದರರ್ಥ ಈಗ ನಿಮ್ಮ UPI ವಹಿವಾಟು ವಿಫಲವಾದರೆ ಮತ್ತು ನಿಮಗೆ ಮರುಪಾವತಿ ಸಿಗದಿದ್ದರೆ, ನಿಮ್ಮ ಬ್ಯಾಂಕಿನಿಂದ ಚಾರ್ಜ್‌ಬ್ಯಾಕ್ ವಿನಂತಿಸುವ ಪ್ರಕ್ರಿಯೆಯಲ್ಲಿ ನೀವು ಮೊದಲಿನಂತೆ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಈ…
ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಇಂದು ಉಪಯೋಗಿಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಯೂಸರ್ಸ್ಗೆ ಕಾಲಕ್ಕೆ ತಕ್ಕಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ ಮುಂದಿನ ದಿನಗಳಲ್ಲಿ ಸಾಲು ಸಾಲು ಹೊಸ ಫೀಚರ್ಗಳನ್ನು ತರಲು ಕಾದುಕುಳಿತಿದೆ. ಅದರಂತೆ ಳಕೆದಾರರ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡಿದ್ದು, ಫೇಕ್ ನಂಬರ್ ಪತ್ತೆ ಮಾಡಬಹುದಾಗಿದೆ ಆಯ್ಕೆಯನ್ನು (Select) ನೀಡಿರುವುದು ಬಳಕೆದಾರರಿಗೆ ವಾಟ್ಸಾಪ್ ಉತ್ತಮ ಅನುಭವ ನೀಡಿದೆ. ಹಾಗದರೆ ಯಾವ ರೀತಿಯಲ್ಲಿ ಫೇಕ್ ನಂಬರ್ ಪತ್ತೆಹಚ್ಚೋದು ಎಂಬುದನ್ನುತಿಳಿಯೋಣ ಬನ್ನಿ. ವಾಟ್ಸಾಪ್‌ನಲ್ಲಿ ಬಳಕೆದಾರರ ಸಂಖ್ಯೆ ಏರುತ್ತಿರುವ ಜೊತೆಗೆ ಜೊತೆಗೆನೇ ವಾಟ್ಸಾಪ್ ವಂಚನೆ ಕೂಡ ವೇಗವಾಗಿ ಹೆಚ್ಚುತ್ತಿದೆ. ಬಳಕೆದಾರರಿಗೆ ಕೆಲವೊಮ್ಮೆ ಅಪರಿಚಿತ ನಂಬರ್‌ಗಳಿಂದ ಮೆಸೆಜ್ ಬರುತ್ತವೆ.ಎನೋ ಲಾಭವಿದೆ ಅಂದುಕೊಂಡು ಅಪರಿಚಿತ ನಂಬರ್ ಕಳುಹಿಸಿದ ಲಿಂಕ್ ಅಥಾವ ಇನ್ನಿತರ ವಿಷಯಗಳನ್ನು ಟ್ಯಾಪ್ ಮಾಡಿದರೆ ಮೋಸ ಹೋಗುವುದಂತು ಪಕ್ಕಾ. ಎಷ್ಟೋ ಸಂದರ್ಭದಲ್ಲಿ ಆ ನಂಬರ್‌ಗಳು ಫೇಕ್ ಆಗಿರುವ ವಿಷಯವೇ ಗೊತ್ತಿರುವುದಿಲ್ಲ. ಅಂತಹ ನಂಬರ್‌ಗಳಿಂದ ಬರುವ ಮೆಸೆಜ್‌ಗಳಿಂದ…
ಪ್ರಪಂಚದಾದ್ಯಂತ ಅನೇಕ ಬುಡಕಟ್ಟು ಜನಾಂಗಗಳಿವೆ ಮತ್ತು ಪ್ರತಿಯೊಂದು ಬುಡಕಟ್ಟು ತನ್ನದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ. ಇಂತಹ ಬುಡಕಟ್ಟು ಜನಾಂಗಗಳು ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಕಂಡುಬರುತ್ತವೆ ಮತ್ತು ಕೆಲವು ಬುಡಕಟ್ಟು ಜನಾಂಗದವರ ನಂಬಿಕೆಗಳು ತುಂಬಾ ವಿಚಿತ್ರವಾಗಿದ್ದು, ಅವುಗಳ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅಂತಹ ಒಂದು ಬುಡಕಟ್ಟು ಇಂಡೋನೇಷ್ಯಾದ ಪೊಲಾಹಿ ಬುಡಕಟ್ಟು, ಅಲ್ಲಿ ಸಂತಾನೋತ್ಪತ್ತಿ ಅಥವಾ ಸಂಭೋಗದ ಸಂಸ್ಕೃತಿ ಇದೆ. ಸಂತಾನೋತ್ಪತ್ತಿ ಎಂದರೆ ಒಂದೇ ಕುಟುಂಬದ ಜನರು ಪರಸ್ಪರ ಸಂಬಂಧವನ್ನು ಸ್ಥಾಪಿಸುತ್ತಾರೆ ಮತ್ತು ಮಕ್ಕಳನ್ನು ಉತ್ಪಾದಿಸುತ್ತಾರೆ. ಪೋಲಾಹಿ ಬುಡಕಟ್ಟು ಜನಾಂಗದ ಬಗ್ಗೆ ಹಲವು ರೀತಿಯ ಸಂಶೋಧನೆಗಳು ನಡೆದಿವೆ ಮತ್ತು ಅವರ ಬಗ್ಗೆ ಸರಿಯಾದ ಅಧ್ಯಯನಗಳು ಪ್ರಕಟವಾಗಿವೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು ಅವುಗಳ ಅಂತಃಸಂತಾನೋತ್ಪತ್ತಿಯನ್ನು ಅಧ್ಯಯನ ಮಾಡಲು ಮುಂದೆ ಬರುತ್ತಾರೆ. ಅದೇ ರೀತಿ, ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಲ್ಟಿಕಲ್ಚರಲ್ ಅಂಡ್ ಮಲ್ಟಿ ರಿಲಿಜಿಯಸ್ ಅಂಡರ್ಸ್ಟ್ಯಾಂಡಿಂಗ್‌ನಲ್ಲಿ ಪ್ರಕಟವಾದ ‘ಪೊಲಾಹಿ ಟ್ರೈಬ್ ಇನ್ ಬ್ರೀಡಿಂಗ್ ಕಲ್ಚರ್ ಇನ್ ಗೊರೊಂಟಾಲೊ’ ಎಂಬ ಅಧ್ಯಯನವು ಈ ಬುಡಕಟ್ಟಿನ ಬಗ್ಗೆ…
ಸೂರ್ಯೋದಯ – 6:44 AM ಸೂರ್ಯಾಸ್ತ – 6:15 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಮಾಘ ಮಾಸ, ತಿಥಿ – ಷಷ್ಠಿ ನಕ್ಷತ್ರ – ಚಿತ್ತೆ ಯೋಗ – ಗಂಡ ಕರಣ – ಗರಜೆ ರಾಹು ಕಾಲ – 03:00 ದಿಂದ 04:30 ವರೆಗೆ ಯಮಗಂಡ – 09:00 ದಿಂದ 10:30 ವರೆಗೆ ಗುಳಿಕ ಕಾಲ – 12:00 ದಿಂದ 01:30 ವರೆಗೆ ಬ್ರಹ್ಮ ಮುಹೂರ್ತ – 5:08 ಬೆ ದಿಂದ 5:56 ಬೆ ವರೆಗೆ ಅಮೃತ ಕಾಲ – 1:04 ಬೆ ದಿಂದ 2:52 ಬೆ ವರೆಗೆ ಅಭಿಜಿತ್ ಮುಹುರ್ತ – 12:07ಮ ದಿಂದ 12:53 ಮ ವರೆಗೆ ಮೇಷ ರಾಶಿ ಉದ್ಯೋಗದಲ್ಲಿ ವರ್ಗಾವಣೆಯಿಂದ ಸಂತಸ, ಕ್ರೀಡಾಕೂಟದ ಪಟುಗಳಿಗೆ ಸಿಹಿಸುದ್ದಿ,ನೀನು ತುಂಬಾ ಪ್ರಯತ್ನಿಸುತ್ತಿದ್ದೀರಿ ಆದರೆ ಅದೃಷ್ಟ ಕೈಕೊಡುತ್ತಿದೆ, ಉದ್ಯೋಗ ಸಂದರ್ಶನ, ಸರಕಾರಿ ಉದ್ಯೋಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ…
ಬಹು ನಿರೀಕ್ಷಿತ ಸೈಕಲಾಜಿಕಲ್ ಥ್ರಿಲ್ಲರ್ “ಕಪಟಿ” ಚಿತ್ರ ಮಾರ್ಚ್ 7 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಫೆಬ್ರವರಿ 27 ರಂದು ಟ್ರೇಲರ್ ಲಾಂಚ್ ಆಗಲಿದೆ. ರವಿಕಿರಣ್ ಮತ್ತು ಚೇತನ್ ಎಸ್ ಪಿ ಅವರು ಸಸ್ಪೆನ್ಸ್ ಮತ್ತು ಮಾನಸಿಕ ಒಳಸಂಚುಗಳನ್ನು ಕರಗತವಾಗಿ ಸಂಯೋಜಿಸಿದ್ದಾರೆ(ನಿರ್ದೇಶಿಸಿದ್ದಾರೆ). “ಕಪಟಿ” ಪ್ರೇಕ್ಷಕರನ್ನು ಅವರ ಆಸನಗಳ ತುದಿಯಲ್ಲಿ ಇರಿಸಲು ಭರವಸೆ ನೀಡುತ್ತದೆ. ಹೆಸರಾಂತ ಚಲನಚಿತ್ರ ನಿರ್ಮಾಪಕ ದಯಾಳ್ ಪದ್ಮನಾಭನ್ ಅವರು ಡಿ ಪಿಕ್ಚರ್ಸ್ ಲಾಂಛನದಲ್ಲಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಶಸ್ತಿ ವಿಜೇತ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ “ಹಗ್ಗದ ಕೊನೆ”, “ಆ ಕರಾಳ ರಾತ್ರಿ”, “ತ್ರಯಂಬಕಂ” ಮುಂತಾದ ಚಲನಚಿತ್ರಗಳನ್ನು ನಿರ್ಮಿಸಿರುವ ಡಿ ಪಿಕ್ಚರ್ಸ್ ಸಂಸ್ಥೆಯಿಂದಲೇ “ಕಪಟಿ” ಚಿತ್ರ ಕೂಡ ನಿರ್ಮಾಣವಾಗಿದೆ. ಡಾರ್ಕ್ ವೆಬ್ ಹಾರರ್ ಮೀಟ್ಸ್ ಸೈಕಲಾಜಿಕಲ್ ಥ್ರಿಲ್ಲರ್ – ಸೈಬರ್ ಕ್ರೈಮ್, ಮಿಸ್ಟರಿ ಮತ್ತು ವಿಲಕ್ಷಣ ಸಸ್ಪೆನ್ಸ್‌ನ ಸಂಗಮವಾಗಿರುವ ಈ ಚಿತ್ರದ ಅನಿರೀಕ್ಷಿತ ಟ್ವಿಸ್ಟ್‌ಗಳು – ಗಾನ್ ಗರ್ಲ್, ಸರ್ಚಿಂಗ್, ಸಿ ಯು ಸೂನ್…
ನ್ಯಾಶನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳ ಜೊತೆಗೆ ವೈಯಕ್ತಿಕ ವಿಚಾರವಾಗಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೀಗ ರಶ್ಮಿಕಾ ಹಂಚಿಕೊಂಡಿರುವ ಸ್ಪೆಷನ್ ಪೋಸ್ಟ್ ಒಂದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ರಶ್ಮಿಕಾ ಮಂದಣ್ಣ, ಇನ್ಸ್ಟಾದಲ್ಲಿ ಸ್ಟೋರಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಸ್ಟೋರಿಯಲ್ಲಿ ಹೂಗುಚ್ಛದ ಫೋಟೋವನ್ನ ಶೇರ್ ಮಾಡಿರುವ ನಟಿ, ಕುತೂಹಲ ಮೂಡಿಸುವಂತೆ ಕ್ಯಾಪ್ಷನ್ ನೀಡಿದ್ದಾರೆ. ನನ್ನ ಮುಖದ ಮೇಲೆ ನಗು ಮೂಡಿಸುವುದು ಹೇಗೆ ಅನ್ನೋದು ನಿನಗೆ ಯಾವಾಗಲೂ ಗೊತ್ತು ಎಂದು ನಟಿ ರಶ್ಮಿಕಾ ಮಂದಣ್ಣ ಬರೆದಿದ್ದಾರೆ. ಆದ್ರೆ ಈ ರೆಡ್ ರೋಸ್ ಹೂಗುಚ್ಛ ನೀಡಿದ ವ್ಯಕ್ತಿ ಯಾರು ಅನ್ನೋದನ್ನು ಮಾತ್ರ ನಟಿ ತಿಳಿಸಿಲ್ಲ. ರಶ್ಮಿಕಾ ಮಂದಣ್ಣ ಫೋಟೋ ವೈರಲ್ ಆಗಿದ್ದು, ಹೂ ಗುಚ್ಛ ನೀಡಿದವನು ಹೈದರಾಬಾದ್ ಹುಡುಗನೇನಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ನಟ ವಿಜಯ್ ದೇವರಕೊಂಡ ಹಾಗೂ ನಟಿ…
ಶಿವಮೊಗ್ಗ : ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಭಾರತಾಂಬೆಯ ಹೆಸರನ್ನಿಟ್ಟುಕೊಂಡು ಬಿಜೆಪಿಯವರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಈ ಹಿಂದೆ ಭಾರತ್ ಅಕ್ಕಿಯನ್ನು ಕೊಡುವ ಕೆಲಸ ಮಾಡಿದ್ದರು. ಅದು ಇದುವರೆಗೆ ಎಷ್ಟು ಮನೆಗೆ ತಲುಪಿದೆ ಎಂಬುದು ತಿಳಿದಿದಲ್ಲ. ಸಂಸದರ ಚುನಾವಣೆ ಸಂದರ್ಭದಲ್ಲಿ ಜನರಿಗೆ ಮೋಸ ಮಾಡಲು ಬಿಜೆಪಿ ಭಾರತ್ ಅಕ್ಕಿಯನ್ನು ಘೋಷಣೆ ಮಾಡಿತು. ಆದರೆ ಅದನ್ನು ಮನೆಮನೆಗೆ ತಲುಪಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಮನೆ, https://ainlivenews.com/if-you-eat-watermelon-seeds-like-this-your-blood-sugar-will-be-immediately-controlled/ ಮನೆಗೆ ತಲುಪಿಸಿರುವ ತೃಪ್ತಿ ನಮಗಿದೆ ಎಂದರು. ಸಚಿವ ರಾಜಣ್ಣ ಬಗ್ಗೆ ನನ್ನ ಬಳಿ ಕೇಳಬೇಡಿ ಎಂದರು. ಇನ್ನು ಭದ್ರಾವತಿ ಪ್ರಕರಣದ ಬಗ್ಗೆ ಮಾತನಾಡಿ ಭದ್ರಾವತಿ ಪ್ರಕರಣದ ಬಗ್ಗೆ ಕ್ರಮ ತಗೆದುಕೊಳ್ಳಿ ಅಂತಾ ಅಧಿಕಾರಿಗಳಿಗೆ ಹೇಳಿದ್ದೀನಿ, ಈಗಾಗಲೇ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಷ್ಟೇ, ಆ ಹಿನ್ನೆಲೆ ತೆಗೆದುಕೊಳ್ಳುತ್ತೇವೆ…