ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ಪಾತ್ರವನ್ನು ವಹಿಸಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಜರ್ಮನ್ ಆರ್ಥಿಕ ಪತ್ರಿಕೆ ಹ್ಯಾಂಡೆಲ್ಸ್ಬ್ಲಾಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್, ಮಧ್ಯಪ್ರಾಚ್ಯದಲ್ಲಿ ಭಾರತದ ಇಂಧನ ಪೂರೈಕೆದಾರರು ಯುರೋಪಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಒದಗಿಸಲು ಆದ್ಯತೆ ನೀಡುತ್ತಾರೆ ಎಂದಿದ್ದಾರೆ. ಇದು ಉಕ್ರೇನ್ ಯುದ್ಧದ ನಂತರ ಹೆಚ್ಚಿನ ಬೆಲೆಯನ್ನು ಪಾವತಿಸಿತು ಮತ್ತು ಭಾರತಕ್ಕೆ ರಷ್ಯಾದ ಕಚ್ಚಾತೈಲವನ್ನು ಖರೀದಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಚೀನಾವನ್ನು ಭಾರತದಂತೆಯೇ ಯುರೋಪ್ ನೋಡಬೇಕೆಂದು ಭಾರತ ನಿರೀಕ್ಷಿಸದಂತೆಯೇ, ರಷ್ಯಾದ ಬಗ್ಗೆ ಭಾರತದ ವಿಧಾನವು ಯುರೋಪಿನಂತೆಯೇ ಇರಲು ಸಾಧ್ಯವಿಲ್ಲ ಎಂದು ಯುರೋಪ್ ಸಹ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಭಾರತವು ರಷ್ಯಾದೊಂದಿಗೆ “ಸ್ಥಿರ” ಮತ್ತು “ತುಂಬಾ ಸ್ನೇಹಪರ” ಸಂಬಂಧವನ್ನು ಹೊಂದಿದೆ ಮತ್ತು ಮಾಸ್ಕೋ ಎಂದಿಗೂ ನವದೆಹಲಿಯ ಹಿತಾಸಕ್ತಿಗಳಿಗೆ ಧಕ್ಕೆ ತಂದಿಲ್ಲ ಎಂದು ವಿದೇಶಾಂಗ ಮತ್ತೊಂದೆಡೆ, ಉದಾಹರಣೆಗೆ, ಚೀನಾದೊಂದಿಗಿನ ನಮ್ಮ ರಾಜಕೀಯ ಮತ್ತು ಮಿಲಿಟರಿ ಸಂಬಂಧವು ತುಂಬಾ ಜಟಿಲವಾಗಿದೆ” ಎಂದು ಅವರು ಪ್ರತಿಪಾದಿಸಿದರು. ಉಕ್ರೇನ್ ಯುದ್ಧದ…
Author: Author AIN
ಖ್ಯಾತ ರಿಯಲ್ ಮಿ ಕಂಪನಿ ಹೊಸ ಸ್ಮಾರ್ಟ್ಫೋನ್ ರಿಯಲ್ ಮಿ 12+ 5G ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಆರಂಭದಲ್ಲಿ ಈ ಫೋನ್ ತಿಂಗಳ ಕೊನೆಯಲ್ಲಿ ಫೆಬ್ರವರಿ 29 ರಂದು ಮಲೇಷ್ಯಾದಲ್ಲಿ ಬಿಡುಗಡೆ ಆಗಲಿದೆ. ಬಳಿಕ ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ರಿಯಲ್ ಮಿ ಭಾರತದಲ್ಲಿ ರಿಯಲ್ ಮಿ 12+ 5G ಮತ್ತು ರಿಯಲ್ ಮಿ 12 ಮಾಡೆಲ್‌ಗಳನ್ನು ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಗೆ IST ಬಿಡುಗಡೆ ಮಾಡುವ ಸಾಧ್ಯತೆಯಿದೆ Tipster Sudhanshu Ambhore (@Sudhanshu1414) X ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಟಿಪ್‌ಸ್ಟರ್ ಪೋಸ್ಟ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ, ರಿಯಲ್ ಮಿ 12 ಪ್ಲಸ್ ಫೋನ್ ಬೀಜ್ ಮತ್ತು ಹಸಿರು ಫಾಕ್ಸ್ ಲೆದರ್ ಫಿನಿಶ್‌ಗಳಲ್ಲಿ ಕಾಣಿಸಿಕೊಂಡಿದೆ. ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC, Sony LYT-600 OIS ಪೋರ್ಟ್ರೇಟ್ ಕ್ಯಾಮೆರಾ ಮತ್ತು 120Hz ಮೃದುವಾದ AMOLED…
ಉಕ್ರೈನ್ ವಿರುದ್ಧ ಹೋರಾಟ ಮಾಡಲು ರಷ್ಯಾ ಖಾಸಗಿ ಸೈನಿಕರು ಮತ್ತು ಕೈದಿಗಳನ್ನು ಬಳಸಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ರಷ್ಯಾ ಹಲವು ಭಾರತೀಯ ಕಾರ್ಮಿಕರನ್ನು ಬಳಸಿಕೊಂಡಿರುವ ಆಘಾತಕಾರಿ ಅಂಶ ಕೂಡಾ ವರದಿಯಲ್ಲಿ ಬಹಿರಂಗಗೊಂಡಿದೆ. ರಷ್ಯಾವು ಸೇನಾ ಭದ್ರತಾ ಸಹಾಯಕ ಹುದ್ದೆ ಎಂದು ನಂಬಿಸಿ ಭಾರತೀಯ ಏಜೆಂಟ್ ಮೂವರು ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿ ವಂಚಿಸಲಾಗಿತ್ತು. ಈ ಮೂವರನ್ನು ರಷ್ಯಾ ಉಕ್ರೈನ್ ವಿರುದ್ಧ ಯುದ್ಧದಲ್ಲಿ ಹೋರಾಡಲು ಬಳಸಿಕೊಂಡಿರುವುದಾಗಿ ತಿಳಿಸಿದೆ. 2023ರ ನವೆಂಬರ್ ಹೊತ್ತಿಗೆ ಅಂದಾಜು 18 ಮಂದಿ ಭಾರತೀಯರನ್ನು ರಷ್ಯಾ ಮತ್ತು ಉಕ್ರೈನ್ ಗಡಿಯ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬರು ಯುದ್ಧದಲ್ಲಿ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ. ವಂಚನೆಗೊಳಗಾಗಿರುವ ಹೈದರಾಬಾದ್ ನ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು ಇದೀಗ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿಯ ಮೊರೆ ಹೋಗಿದ್ದು, ಈ ನಿಟ್ಟಿನಲ್ಲಿ ಓವೈಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭಾರತೀಯರು ವಾಪಸ್…
ಅತ್ಯುತ್ತಮ ಸಿನಿಮಾಗಳು ತೆರೆಗೆ ಬಂದಾಗ ಅದನ್ನು ಹೊಗಳಿ ಚಿತ್ರತಂಡದವರಿಗೆ ಪ್ರಧಾನಿ ಮೋದಿ ಆಗಾಗೆ ಪ್ರಶಂಸೆ ಮಾಡುತ್ತಲೆ ಬಂದಿದ್ದಾರೆ. ಈ ಬಾರಿ ಮೋದಿ ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ. ಮೋದಿಯ ಭಾಷಣ ಕೇಳಿದ ಆರ್ಟಿಕಲ್ 370 ಸಿನಿಮಾದ ನಾಯಕಿ ಯಾಮಿನಿ ಗೌತಮ್ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ನೈಜ ಕಥೆಯನ್ನು ನಿಮಗೆ ಮತ್ತು ಎಲ್ಲರಿಗೂ ಒಪ್ಪುವಂತೆ ಸಿನಿಮಾ ಮಾಡಿದ್ದೇವೆ ಎನ್ನುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡಲಿದೆ ಎಂದು ಯಾಮಿನಿ ಪ್ರತಿಕ್ರಿಯಿಸಿದ್ದಾರೆ. ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೈಲರ್ ನಲ್ಲಿ…
ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ಯಾವುದೇ ರೀತಿಯ ವಸ್ತ್ರ ಧರಿಸಿದ್ರು ಸಖತ್ ಮುದ್ದಾಗಿ ಕಾಣಿಸುತ್ತಾರೆ. ಸೀರೆಯುಟ್ಟು ಸುಂದರಿಯಾಗಿ ಕಾಣಿಸಿಕೊಂಡಿರುವ ನಟಿಯ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲಂಡನ್‌ನಲ್ಲಿ ನಡೆದ 77th BAFTA ರೆಡ್ ಕಾರ್ಪೆಟ್‌ನಲ್ಲಿ ದೀಪಿಕಾ ಪಡುಕೋಣೆ ಸೀರೆಯುಟ್ಟುಕೊಂಡು ಭಾಗವಹಿಸಿದ್ದು ದೀಪಿಕಾ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ರಿಟೀಷ್ ಅಕಾಡೆಮಿ ಫಿಲ್ಮ್ ಅವಾರ್ಡ್ 2024 ಕಾರ್ಯಕ್ರಮದಲ್ಲಿ ಹಾಲಿವುಡ್ ನ ಖ್ಯಾತ ನಟ,ನಟಿಯರು ಭಾಗಿಯಾಗಿದ್ದರು. ಯಾವಾಗಲು ಫ್ಯಾಷನ್ ಟ್ರೆಂಡ್ ಆಗಿರುವ ನಟಿ 77th BAFTA ಕಾರ್ಯಕ್ರಮದಲ್ಲಿ ಮಿನುಗುವ ಕ್ರೀಮ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ಅಂದಹಾಗೆ ದೀಪಿಕಾ ಗರ್ಭೀಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಜನವರಿಯಲ್ಲಿ ಮಗು ಬಗ್ಗೆ ಮಾತನಾಡಿದ್ದ ದೀಪಿಕಾ ಪಡುಕೋಣೆ ಅವರು, “ನನಗೂ ತಾಯಿ ಆಗಬೇಕಿದೆ. ನನಗೂ, ರಣವೀರ್‌ಗೂ ಮಗು ಅಂದರೆ ತುಂಬ ಇಷ್ಟ. ಹೊಸ ಕುಟುಂಬ ಶುರು ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ದೀಪಿಕಾ ಹೇಳಿಕೊಂಡಿದ್ದರು. ಚಿತ್ರರಂಗದಲ್ಲಿ ಹೆಸರು…
ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬರು ತಾವು ಮೊಟ್ಟ ಮೊದಲು ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಈ ಖುಷಿಯಲ್ಲಿ ಪತ್ನಿಗೆ ಮೆಸೇಜ್ ತಿಳಿಸಿದ್ದ ಅಧಿಕಾರಿಯ ಶವ ಮರುದಿನ ನದಿಯಲ್ಲಿ ಪತ್ತೆಯಾಗಿದೆ. 35 ವರ್ಷದ ಪೊಲೀಸ್ ಅಧಿಕಾರಿ ರಾಬರ್ಟ್ ಜಾನ್ ಲಿಯೊನಾರ್ಡ್ ಟೆನ್ನೆಸ್ಸೀ ರಾಜ್ಯದಲ್ಲಿ ಹೊಸದಾಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಪ್ರೇಮಿಗಳ ದಿನದಂದು ರಾತ್ರಿ 10 ಗಂಟೆ ಸುಮಾರಿಗೆ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇತುವೆ ಮೇಲೆ ಜಗಳವಾಡುತ್ತಿದ್ದಾರೆ ಎನ್ನುವ ಮಾಹಿತಿ 911 ಮೂಲಕ ಪೊಲೀಸರಿಗೆ ತಲುಪಿತ್ತು. ಈ ವೇಳೆ ಮಹಿಳೆಯನ್ನು ಜಾನ್ ಲಿಯೋನಾರ್ಡ್ ಬಂಧಿಸಿದ್ದರು.ಇದು ಅವರ ಮೊದಲ ಬಂಧನವಾಗಿದ್ದು, ಪತ್ನಿಗೆ ಈ ಕುರಿತು ಸಂದೇಶ ಕಳುಹಿಸಿದ್ದರು. ಆದರೆ ಆ ಬಳಿಕ ಲಿಯೋನಾರ್ಡ್ ಮೊಬೈಲ್ ಸ್ಪಿಚ್ ಆಫ್ ಆಗಿದೆ. ಬಳಿಕ ಶೋಧ ತಂಡ ಹುಡುಕಾಟ ಆರಂಭಿಸಿತ್ತು. ಪೊಲೀಸರು ಕಾರನ್ನು ಪತ್ತೆ ಹಚ್ಚಲು ಉಪಗ್ರಹ ಟ್ರ್ಯಾಕಿಂಗ್ ಬಳಸಿದ್ದಾರೆ, ಗುರುವಾರ ಟೆನ್ನೆಸ್ಸೀ ನದಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಆತ ಬಂಧಿಸಿದ್ದ ಮಹಿಳೆ ಇಬ್ಬರ ಶವವು ಪತ್ತೆಯಾಗಿದೆ. ಕಾರು ನದಿಗೆ ಹೇಗೆ ಬಿದ್ದಿದೆ…
ಜೀವನದ ಕೊನೆಯವರೆಗೂ ಜೊತೆಯಾಗಿ ಇರುತ್ತೇವೆ ಎಂದು ಕೈ ಹಿಡಿದ ಜೋಡಿಗಳು ಮದುವೆಯಾದ ಕೆಲವೇ ವರ್ಷಗಳಲ್ಲಿ ದೂರ ದೂರವಾಗುತ್ತಾರೆ. ಇಂದು ಸಣ್ಣ ಪುಟ್ಟ ಕಾರಣಗಳಿಗೂ ದಂಪತಿಗಳು ದೂರ ದೂರವಾಗುತ್ತಿದ್ದಾರೆ. ಇಲ್ಲೋರ್ವ ಮಹಿಳೆ ಪತಿಯಿಂದ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಇದರಿಂದ ಕೋಪಗೊಂಡ ಪತಿ ತಾನು ಹಿಂದೆ ನೀಡಿದ್ದ ಕಿಡ್ನಿಯನ್ನು ವಾಪಸ್ ನೀಡುವಂತೆ ಕೇಳಿದ್ದಾನೆ. ಆತನ ಹೆಸರು ಡಾ. ರಿಚರ್ಡ್ ಬಟಿಸ್ಟಾ. ವಿಚ್ಛೇದನ ದ ವೇಳೆ ಈತ ತನ್ನ ಪತ್ನಿಯಿಂದ ಕಿಡ್ನಿ ವಾಪಸ್ ಕೇಳಿದ್ದಾನೆ. ಕಿಡ್ನಿ ವಾಪಸ್ ನೀಡಿಲ್ಲವೆಂದ್ರೆ 1.2 ಮಿಲಿಯನ್ ಪೌಂಡ್ ನೀಡುವಂತೆ ಬೇಡಿಕೆ ಇಟ್ಟಿದ್ದ. 1990 ರಲ್ಲಿ ಡೊನ್ನೆಲ್ ಮತ್ತು ರಿಚರ್ಡ್ ಬಟಿಸ್ಟಾಗೆ ಮದುವೆ ಆಗಿತ್ತು. ಇಬ್ಬರಿಗೆ ಮೂರು ಮಕ್ಕಳಿದ್ದು, ಡೊನ್ನೆಲ್ ಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಸಂಬಂಧದಲ್ಲಿ ಬಿರುಕು ಮೂಡಿತ್ತು. 2001 ರಲ್ಲಿ ಡೊನ್ನೆಲ್ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಆಕೆಯ ಎರಡೂ ಕಿಡ್ನಿ ಫೇಲ್ ಆಗಿತ್ತು. ಈ ಸಂದರ್ಭದಲ್ಲಿ ಪತ್ನಿ ಜೀವ ಹಾಗೂ ವೈವಾಹಿಕ ಸಂಬಂಧ ಮುಖ್ಯ ಎಂಬ…
ನೀಲಿ ಚಿತ್ರಗಳ ಖ್ಯಾತ ನಟಿ, ಅಂಸಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೆಚ್ಚಿನ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಅಭಿಮಾನಿಗಳು ಕಂಗಾಲಾಗಿದ್ದಾರೆ. ಮೃತ ಕೆನಿ ಹಲವು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 36ರ ವಯಸ್ಸಿನ ಕೆನಿ ಲಿನ್ ಕಾರ್ಟರ್ ಯನೈಟೆಡ್ ಸ್ಟೇಟ್ಸ್ ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯ ಖಚಿತ ಪಡಿಸಿದೆ. ಕೆನಿ ಲಿನ್ ಕಾರ್ಟರ್ ಕೇವಲ ನೀಲಿತಾರೆ ಮಾತ್ರ ಆಗಿರಲಿಲ್ಲ. ನೃತ್ಯಗಾರ್ತಿ ಹಾಗೂ ಗಾಯಕಿಯಾಗಿಯೂ ಖ್ಯಾತಿ ಘಳಿಸಿದ್ದರು. 2000 ಇಸವಿಯಲ್ಲಿ ವಯಸ್ಕರ ಸಿನಿಮಾಗಳ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದ ಕೆನಿ ಬರೋಬ್ಬರಿ 20 ವರ್ಷಗಳ ಕಾಲ ಅದೇ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆನಂತರ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ನಡುವೆ ತಮ್ಮದೇ ಸ್ಟುಡಿಯೋ ಶುರು ಮಾಡಿ, ಪೋಲ್ ಡಾನ್ಸಿಂಗ್ ನಲ್ಲೂ ಸಕ್ರೀಯರಾಗಿದ್ದರು. ಕೆನಿ…
ಲಾಹೋರ್:ಪಾಕಿಸ್ತಾನದ ಎರಡು ಪ್ರಮುಖ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಂತಿಮವಾಗಿ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಒಪ್ಪಂದಕ್ಕೆ ನೀಡಿವೆ. ಫೆ.8ರಂದು ನಡೆದ ಸಾರ್ವರ್ತಿಕ ಚುನಾವಣೆಯಲ್ಲಿ ಯಾವುದೇ ಪಕ್ಷವು ಸರಳವಾಗಿ ಬಹುಮತ ಪಡೆಯದ ಕಾರಣ ರಾಷ್ಟ್ರೀಯ ಚುನಾವಣೆಯ ನಂತರ ದಿನಗಳ ಮಾತುಕತೆಗಳನ್ನು ಕೊನೆಗೊಳಿಸಿದೆ. ಇದೀಗ ಸಮ್ಮಿಶ್ರ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೆಚ್ಚಿನ ಅನಿಶ್ಚಿತತೆಯ ಮತದಾನದ ನಂತರ, PPP ಮತ್ತು PML-N ನ ಉನ್ನತ ನಾಯಕರು ಮತ್ತೊಮ್ಮೆ “ರಾಷ್ಟ್ರದ ಹಿತದೃಷ್ಟಿಯಿಂದ” ಸರ್ಕಾರವನ್ನು ರಚಿಸಲು ಪಡೆಗಳನ್ನು ಸೇರುತ್ತಿದ್ದಾರೆ ಎಂದು ದೃಢಪಡಿಸಿದರು. ಶೆಹಬಾಜ್ ಷರೀಫ್ ಅವರು ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿದ್ದು, ಆಸಿಫ್ ಅಲಿ ಜರ್ದಾರಿ ದೇಶದ ಅಧ್ಯಕ್ಷರ ಜಂಟಿ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಲಾವಲ್ ಖಚಿತಪಡಿಸಿದರು. “ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಈಗ ಸಂಪೂರ್ಣ ಸಂಖ್ಯಾಬಲವನ್ನು ಹೊಂದಿದ್ದು, ನಾವು ಮುಂದಿನ ಸರ್ಕಾರವನ್ನು ರಚಿಸುವ ಸ್ಥಿತಿಯಲ್ಲಿರುತ್ತೇವೆ” ಎಂದು ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.…
ಸೀತಾ ರಾಮಂ ಚಿತ್ರದ ಬಳಿಕ ನಟಿ ಮೃಣಾಲ್ ಠಾಕೂರ್ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದ ಜೊತೆಗೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲೂ ಮೃಣಾಲ್ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಮೃಣಾಲ್ ಬಾಲಿವುಡ್ ಕ್ವೀನ್ ಕಂಗನಾ ರಾಣವತ್ ಅವರ ಆಸ್ತಿ ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಮೃಣಾಲ್ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಂತೆ ಅವರ ಸಂಭಾವನೆ ಕೂಡ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಆಕೆಯ ಲೈಫ್ ಸ್ಟೈಲ್ ಕೂಡ ಬದಲಾವಣೆ ಆಗಿದೆ. ಸದ್ಯ ಮೃಣಾಲ್ ದುಬೈನ ದುಬಾರಿ ಏರಿಯಾದಲ್ಲಿರುವ ನಟಿ ಕಂಗನಾ ಅವರ ಪ್ಲ್ಯಾಟ್ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ಅಂದೇರಿಯಲ್ಲಿ ಕಂಗನಾ ರಣಾವತ್ ಅವರ ತಂದೆ ಅಮರ್ದೀಪ್ ರಣಾವತ್ ಒಡೆತನದಲ್ಲಿ ಇದ್ದ ಎರಡು ಫ್ಲಾಟ್ಗಳನ್ನು ಮೃಣಾಲ್ ಠಾಕೂರ್ ಖರೀದಿ ಮಾಡಿದ್ದಾರೆ. ಇದರ ಬೆಲೆ ಅಂದಾಜು 10 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮೃಣಾಲ್ ಠಾಕೂರ್ ಅವರು ಶೀಘ್ರದಲ್ಲೇ ಈ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಲಿದ್ದು, ಇಂಟೀರಿಯರ್ ಡಿಸೈನ್ ಕೆಲಸಗಳು ನಡೆಯುತ್ತಿವೆ ಎಂದು…