ಸಿಂಪಲ್ ಸುನಿ ನಿರ್ದೇಶನದ ಶರಣ್ ನಟನೆಯ ಅವತಾರ ಪುರುಷ 2 ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಹಿಟ್ ಆದ ಬಳಿಕ ಸುನಿ ನಿರ್ದೇಶನದ ಮುಂದಿನ ಸಿನಿಮಾಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ದೇಶಕರು ಅನೌನ್ಸ್ ಮಾಡಿದ್ದಾರೆ. ‘ಅವತಾರ ಪುರುಷ’ ಚಿತ್ರದ ಮುಂದುವರಿದ ಭಾಗ ‘ಅವತಾರ ಪುರುಷ 2’ ಚಿತ್ರ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾ 2022ರ ಮೇ 6ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಹಾಸ್ಯದ ಜೊತೆ ಸಸ್ಪೆನ್ಸ್ ಕೂಡ ಇತ್ತು. ಸುನಿ ಮಾಟ ಮಂತ್ರದ ಕಥೆಯನ್ನು ಹೇಳಿದ್ದರು. ಅವರ ಚಿತ್ರಗಳಲ್ಲಿ ಲವ್ಸ್ಟೋರಿಗಳೇ ಹೆಚ್ಚು ಹೈಲೈಟ್ ಆಗುತ್ತವೆ. ಆದರೆ, ಈ ಚಿತ್ರದಲ್ಲಿ…
Author: Author AIN
ಕೋಟ್ಯಾಧಿಪತಿ ಮುಕೇಶ್ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮದುವೆಗೆ ಕೋಟಿ ಕೋಟಿ ಖರ್ಚು ಮಾಡುತ್ತಿದ್ದು ದೇಶ ವಿದೇಶದ ಸೆಲೆಬ್ರಿಟಿಗಳು ಮನರಂಜನಾ ಕಾರ್ಯಕ್ರಮ ನೀಡುತ್ತಾರೆ. ಅಂಥ ಸೆಲೆಬ್ರಿಟಿಗಳಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತದೆ. ಜನಪ್ರಿಯ ಗಾಯಕಿ ರಿಹಾನಾ ಅನಂತ್ ಅಂಬಾನಿ ಮದುವೆಯಲ್ಲಿ ಮನರಂಜನೆ ನೀಡಲಿದ್ದಾರೆ. ಅದಕ್ಕಾಗಿ ಆಕೆಗೆ ನೀಡುತ್ತಿರುವ ಸಂಭಾವನೆ 74 ಕೋಟಿ ರೂಪಾಯಿ. ವಿದೇಶದಿಂದ ರಿಹಾನಾ ಅವರನ್ನು ಮದುವೆಯಲ್ಲಿ ಮನರಂಜನೆ ನೀಡಲು ಕರೆಸಲಾಗಿದೆ. ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಸುದ್ದಿ ಕೇಳಿ ಪ್ರತಿಯೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಾರ್ಬೆಡೋಸ್ ದೇಶದಿಂದ ಬಂದಿರುವ ರಿಹಾನಾ ಅವರಿಗೆ 36 ವರ್ಷ ವಯಸ್ಸಾಗಿದ್ದು ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಹಾಡುಗಳು ಸೂಪರ್ ಹಿಟ್ ಆಗಿವೆ. ರಿಹಾನಾ ಅವರ ಬಗ್ಗೆ ಯುವ ಜನತೆಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ರಿಹಾನಾ ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ. ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ…
ಟೆಕ್ಸಾಸ್ ನಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಸುಮಾರು ಒಂದು ಮಿಲಿಯನ್ ಎಕರೆಗಳಷ್ಟು ಕಾಡು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದು ಟೆಕ್ಸಾಸ್ ಸ್ಮೋಕ್‌ಹೌಸ್ ಕ್ರೀಕ್ ಫೈರ್ 2006 ರ ಪೂರ್ವ ಅಮರಿಲ್ಲೊ ಕಾಂಪ್ಲೆಕ್ಸ್ ಬೆಂಕಿಯನ್ನು ಮೀರಿಸಿದ್ದು, ಇದುವರೆಗೆ ದಾಖಲಾದ ರಾಜ್ಯದ ಅತಿದೊಡ್ಡ ಕಾಡ್ಗಿಚ್ಚು ಇದಾಗಿದೆ. ಅಗ್ನಿಶಾಮಕ ದಳದ ಅಧಿಕಾರಿಯಗಳು ಶತಪ್ರಯತ್ನ ನಡೆಸಿದರು ಕೇವಲ 3% ಬೆಂಕಿಯನ್ನು ಮಾತ್ರವೇ ನಿಯಂತ್ರಿಸಲು ಸಾಧ್ಯವಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಹಚಿನ್ಸನ್ ಕೌಂಟಿಯ ಬೆಂಕಿಯು 83 ವರ್ಷದ ಜಾಯ್ಸ್ ಬ್ಲಾಂಕೆನ್‌ಶಿಪ್‌ನ ಜೀವವನ್ನು ಬಲಿ ತೆಗೆದುಕೊಂಡಿತು, ಬೆಂಕಿಯು ಆಕೆಯ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಅವರ ಸಂಬಂಧಿಕರು ಬಹಿರಂಗಪಡಿಸಿದ್ದಾರೆ. ಬೆಂಕಿಯು ಉತ್ತರ ಟೆಕ್ಸಾಸ್‌ನಾದ್ಯಂತ ವ್ಯಾಪಕ ನಾಶವನ್ನು ಉಂಟುಮಾಡಿತು. ಈ ಮಾರಣಾಂತಿಕ ಘಟನೆಯು ಟೆಕ್ಸಾಸ್ ಪ್ಯಾನ್‌ಹ್ಯಾಂಡಲ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಐದು ಮಾರಣಾಂತಿಕ ಕಾಡ್ಗಿಚ್ಚುಗಳಲ್ಲಿ ಒಂದಾಗಿದೆ, ಇದು ಹಲವಾರು ಮನೆಗಳು, ಜಾನುವಾರುಗಳು ಮತ್ತು ಜೀವನೋಪಾಯಕ್ಕೆ ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ.
ತ್ರಿಪುರಾ ಮೂಲದ ಮಾಜಿ ಮಿಸ್ ಇಂಡಿಯಾ ರಿಂಕಿ ಚಕ್ಮಾ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಂಕಿ ಚಿಕತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 28 ವರ್ಷದ ರಿಂಕಿ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರಿಂಕಿ ಶಸ್ತ್ರಚಿಕಿತ್ಸೆ ಬಳಿಕ ಚಿಕಿತ್ಸಾ ವಿಧಾನಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಅಲ್ಲದೆ ಶೀಘ್ರವೇ ಗುಣಮುಖವಾಗಿ ಮತ್ತೆ ಸಹಜ ಜೀವನಕ್ಕೆ ಮರಳುತ್ತೇನೆ ಅನ್ನೋ ಭರವಸೆಯಲ್ಲಿದ್ದರು. ಆದ್ರೆ ಆಕೆ ಗುಣಮುಖಳಾಗುವುದಿಲ್ಲ ಎಂದು ತಿಳಿದ ನಂತರ ತನಗೆ ಸ್ಥನ ಕ್ಯಾನ್ಸರ್ ಇರೋದನ್ನ ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆಮಿನಾ ಮಿಸ್ ಇಂಡಿಯಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಕಷ್ಟದ ಸಮಯದಲ್ಲಿ ಚಕ್ಮಾ ಕುಟುಂಬಸ್ಥರು ಹಾಗೂ ಆಪ್ತರಿಗೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ಕೊಡಲಿ ಎಂದು ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ. ಚಕ್ಮಾ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿತು, ತಲೆ ಭಾಗದಲ್ಲಿ ಗಡ್ಡೆ ಬೆಳೆಯಿತು. ಇದರಿಂದ ಕಿಮೋಥೆರಪಿಗೆ ಒಳಗಾಗಿದ್ದರು. ಈ ವೇಳೆ…
ನೀವು ಏರ್ ಟೆಲ್, ಜಿಯೋ ಗ್ರಾಹಕರಾಗಿದ್ದರೆ ನಿಮಗೆ ಈ ಸುದ್ದಿ ಕೇಳಿ ಶಾಕ್ ಆಗಬಹುದು. ಇದುವರೆಗೂ ಕಡಿಮೆ ಬೆಲೆಗೆ ಕಾಲ್ ಹಾಗೂ ಇಂಟರ್ ನೆಟ್ ಸೌಲಭ್ಯ ನೀಡುತ್ತಿದ್ದ ಏರ್ ಟೆಲ್ ಹಾಗೂ ಜಿಯೋ ಇದೀಗ ಶುಲ್ಕ್ ಹೆಚ್ಚಳಕ್ಕೆ ಮುಂದಾಗಿವೆ. ಈ ಮೂಲಕ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತು ಖಂಡಿತ. ಜನಪ್ರಿಯ ಭಾರ್ತಿ ಏರ್‌ಟೆಲ್ ಸಂಸ್ಥೆಯು ಶುಲ್ಕ ಏರಿಕೆ ಮಾಡಬಹುದು ಎಂದು ಏರ್‌ಟೆಲ್‌ನ ಅಧ್ಯಕ್ಷ ಸುನೀಲ್ ಮಿತ್ತಲ್ ತಿಳಿಸಿದ್ದಾರೆ. ಇತ್ತೀಚಿಗೆ ಎನ್‌ಡಿಟಿವಿ ಪ್ರಾಫಿಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಮಾತನಾಡಿದ ಅವರು ಮಾರುಕಟ್ಟೆಯನ್ನು ಸುಸ್ಥಿರವಾಗಿಡಲು ಸಂಸ್ಥೆಯು ಟೆಲಿಕಾಂ ದರಗಳನ್ನು ಹೆಚ್ಚಿಸಲಿದೆ ಎಂದಿದ್ದಾರೆ. ಇನ್ನು ಪರಿಷ್ಕೃತ ದರಗಳಿಗೆ ನಿರ್ದಿಷ್ಟ ಕಾಲಮಿತಿಯ ಮಾಹಿತಿ ಅನ್ನು ಸುನೀಲ್ ಮಿತ್ತಲ್ ಬಹಿರಂಗಪಡಿಸಿಲ್ಲ. ಅದಾಗ್ಯೂ, ಪ್ರಸಕ್ತ – 2024 ರ ದ್ವಿತೀಯಾರ್ಧದಲ್ಲಿ ಟೆಲಿಕಾಂ ಶುಲ್ಕಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಮುಂದಿನ ತಿಂಗಳುಗಳಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯವನ್ನು (ARPU) 208 ರೂ. ನಿಂದ 300 ರೂ. ಗೆ ಹೆಚ್ಚಿಸುವ ಗುರಿಯನ್ನು ಏರ್‌ಟೆಲ್ ಟೆಲಿಕಾಂ ಹೊಂದಿದೆ.…
ಜಗ್ಗೇಶ್ ನಟನೆಯ ಗುರುಪ್ರಸಾದ್ ನಿರ್ದೇಶನದ ‘ರಂಗನಾಯಕ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಈ ಹಿಂದೆ ಬಂದ ಎರಡೂ ಸಿನಿಮಾಗಳಲ್ಲೂ ವಿಡಂಬನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ರಂಗನಾಯಕ ಚಿತ್ರದ ಟ್ರೈಲರ್ ಅನ್ನು ಕೂಡ ವಿಡಂಬನೆಗೆ ಮೀಸಲಿಟ್ಟಿದ್ದಾರೆ. ಈ ಹಿಂದೆ ರಂಗನಾಯಕ ಚಿತ್ರದ ಹಾಡೊಂದು ರಿಲೀಸ್ ಆಗಿತ್ತು. ಆ ಹಾಡಿನಲ್ಲಿ ಮೀಟೂ ಶ್ರುತಿ, ಬಿಗ್ ಬಾಸ್ ಶ್ರುತಿ ಎಂದು ಇಬ್ಬರು ನಟಿಯರ ಕಾಲೆಳೆದಿದ್ದರು ಗುರುಪ್ರಸಾದ್. ಈಗ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ಶಿವಣ್ಣ, ಯಶ್, ಸುದೀಪ್, ದರ್ಶನ್, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಗಿರೀಶ್ ಕಾಸರವಳ್ಳಿ ಹೀಗೆ ಅನೇಕ ಕಲಾವಿದರನ್ನು ಕರೆತಂದಿದ್ದಾರೆ. ಕನ್ನಡಕ್ಕೆ ತೊಂದರೆ ಆಗ್ತಿದೆ ಬನ್ನಿರಿ ಎಂದು ಕರೆಯುವ ಡೈಲಾಗ್ ನಲ್ಲಿ ಶಿವಣ್ಣ, ಯಶ್, ಸುದೀಪ್, ದರ್ಶನ್ ಅವರ ಹೆಸರನ್ನು ಬಳಸಿಕೊಂಡಿದ್ದಾರೆ ಗುರುಪ್ರಸಾದ್. ಐಟಂ ಸಾಂಗ್ ವಿಚಾರವಾಗಿ ಗಿರೀಶ್ ಕಾಸರವಳ್ಳಿ ಅವರ ಹೆಸರನ್ನೂ ನಿರ್ದೇಶಕರು ಬಳಸಿಕೊಂಡಿದ್ದು, ಗಿರೀಶ್ ಕಾಸರವಳ್ಳಿ ಸಿನಿಮಾದಲ್ಲಿ ಐಟಂ ಸಾಂಗ್ ಕೇಳಿದಂಗಾತು…
ತುಳು ನಾಡಿನ ಹುಡುಗಿ ನಟಿ ಕೃತಿ ಶೆಟ್ಟಿ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಹಿಟ್ ಸಿನಿಮಾಗಳನ್ನ ನೀಡಲು ಸೋಲುತ್ತಿದ್ದಾರೆ. ಉಪ್ಪೇನ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಕೃತಿ ಶೆಟ್ಟಿ ಸದ್ಯಕ್ಕೆ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಕೃತಿ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ನಲ್ಲಿ ಮಲಗುತ್ತಿವೆ. ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಕೃತಿ ಶೆಟ್ಟಿ. ಮೊದಲ ಸಿನಿಮಾದಲ್ಲೇ 100 ಕೋಟಿ ಕಲೆಕ್ಷನ್ ಮಾಡಿದ ನಾಯಕಿಯಾಗಿ ಕೃತಿ ಶೆಟ್ಟಿ ಟಾಲಿವುಡ್ ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಇಂಡಸ್ಟ್ರಿಗೆ ಬಂದ ನಂತರ ಸತತ ಮೂರು ಚಿತ್ರಗಳಲ್ಲಿ ಯಶಸ್ಸು ಪಡೆದು ಹ್ಯಾಟ್ರಿಕ್ ಹೀರೋಯಿನ್ ಆದ ಚೆಲುವೆ ಈಕೆ. ಕೃತಿ ಶೆಟ್ಟಿ ಚಿಕ್ಕವಳಿದ್ದಾಗ ಅಮ್ಮ ಹೇಳಿದ ಎಲ್ಲ ದಿನಸಿ ಸಾಮಾನುಗಳನ್ನು ಅಂಗಡಿಗೆ ಹೋಗಿ ಖರೀದಿಸುತ್ತಿದ್ದರು. ಅದು ತನ್ನ ಮೊದಲ ಕೆಲಸ ಎಂದು ಹೇಳಿದರು. ಈ ಕೆಲಸ ಮಾಡಲು ಅವರ ತಾಯಿ 100 ಅಥವಾ 150 ರೂಪಾಯಿಗಳನ್ನು ನೀಡುತ್ತಿದ್ದರು…
ಮಾಸ್ಕೋ: ಉಕ್ರೇನ್‌ನಲ್ಲಿ ಹೋರಾಡಲು ತನ್ನ ಸೈನ್ಯವನ್ನು ಕಳುಹಿಸುವ ಧೈರ್ಯಮಾಡುವ ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳು “ಅಣ್ವಸ್ತ್ರ ಬಳಕೆಯ ಪರಿಣಾಮ” ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಪಾಶ್ಚಿಮಾತ್ಯ ದೇಶಗಳು ರಷ್ಯಾದ ಸಾಮರ್ಥ್ಯ ಕುಗ್ಗಿಸಲು ಪ್ರಯತ್ನಿಸುತ್ತಿವೆ. ಆದರೆ ರಷ್ಯಾ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಆ ದೇಶಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಈ ವಾರದ ಆರಂಭದಲ್ಲಿ ನ್ಯಾಟೊ ಸದಸ್ಯ ರಾಷ್ಟ್ರಗಳು ಉಕ್ರೇನ್‌ಗೆ ಸೇನಾಪಡೆಗಳನ್ನುಕಳುಹಿಸಬೇಕು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಸಲಹೆ ನೀಡಿದ್ದರು. ಮ್ಯಾಕ್ರನ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪುಟಿನ್ ಅವರು ಈ ಎಚ್ಚರಿಕೆ ನೀಡಿದ್ದಾರೆ ಎಂದು ದಿನಪತ್ರಿಕೆ ವರದಿ ಮಾಡಿದೆ. ಅಮೆರಿಕ, ಜರ್ಮನಿ, ಬ್ರಿಟನ್ ಮತ್ತು ಇತರ ರಾಷ್ಟ್ರಗಳು, ಸೇನೆ ಕಳುಹಿಸುವ ಮ್ಯಾಕ್ರನ್ ಅವರ ಸಲಹೆಯನ್ನು ತಿರಸ್ಕರಿಸಿದ್ದರು.
15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಗಳೂರು ಚಿತ್ರೋತ್ಸವಕ್ಕೆ ಮತ್ತಷ್ಟು ಬಲ ನೀಡಿದ್ದಾರೆ. ಈ ವೇಳೆ ಶಿವಣ್ಣ ಕಾಂತಾರ ಹಾಗೂ ಕೆಜಿಎಫ್ ನಂತಹ ಸಿನಿಮಾಗಳಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಕಾಂತಾರ, ಕೆಜಿಎಫ್‌ನಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಅಂದರೆ ನಾವೆಲ್ಲಾ ಹೆಮ್ಮೆ ಪಡುವ ವಿಚಾರ. ಕನ್ನಡ ಭಾಷೆ ಬಂದು 90 ವರ್ಷ ಆಯ್ತು ಇಂಡಸ್ಟ್ರಿಗೆ ಬಂದು. ಇದರಲ್ಲಿ ನನ್ನದು ಕೂಡ 38 ವರ್ಷ ಸೇವೆ ಇದೆ ಅನ್ನೋದು ಖುಷಿಯಿದೆ. ಈ ಸಂಭ್ರಮದಲ್ಲಿ ನಾನು ಭಾಗಿಯಾಗಿರೋದು ಖುಷಿಯಿದೆ ಎಂದು ಶಿವಣ್ಣ ಬೆಂಗಳೂರು ಚಿತ್ರೋತ್ಸವದಲ್ಲಿ ಮಾತನಾಡಿದ್ದಾರೆ. ಫೆ.29ರಿಂದ ಮಾರ್ಚ್ 7ರವರೆಗೂ ಸಿನಿಮಾ ಹಬ್ಬ ನಡೆಯಲಿದ್ದು,ಫಿಲ್ಮ್ ಫೆಸ್ಟಿವಲ್‌ಗೆ 200 ಸಿನಿಮಾಗಳು ಬಂದಿವೆ. ಅದರಲ್ಲಿ ಕನ್ನಡ ಸಿನಿಮಾಗಳು ಕೂಡ ಇದೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ರಾಂಗ್ ರೂಟ್ ನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದ ತೆಲುಗು ನಟಿ ಸೌಮ್ಯ ಜಾನು ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ತಾನು ಮಾಡಿದ ತಪ್ಪಿನ ಅರಿವಾದ ಬಳಿಕ ಕ್ಷಮೆ ಕೇಳಿದ್ದಾರೆ. ನಟಿ ಸೌಮ್ಯ ಜಾನು ವಿರುದ್ಧ ಹೈದರಾಬಾದ್ ನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಯಿಗೆ ಔಷಧಿ ತರಬೇಕಾದ ತುರ್ತು ಕಾರಣದಿಂದಾಗಿ ರಾಂಗ್ ರೂಟ್ ನಲ್ಲಿ ಬಂದೆ. ಪೊಲೀಸರು ನನಗೆ ಕೆಟ್ಟದಾಗಿ ನಿಂದಿಸಿದರು ಎಂದು ನಟಿ ಹೇಳಿಕೊಂಡಿದ್ದರು. ರಾಂಗ್ ರೂಟ್ ನಲ್ಲಿ ಬಂದ ನಟಿಯ ಕಾರನ್ನು ತಡೆದ ಟ್ರಾಫಿಕ್ ಹೋಮ್ ಗಾರ್ಡ್ ದಂಡ ಕಟ್ಟುವಂತೆ ಹೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಹೋಮ್ ಗಾರ್ಡ್ ಸಮವಸ್ತ್ರ ಹರಿದಿತ್ತು. ಈ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೌಮ್ಯ ಜಾನು ಕುಡಿದು ಕಾರು ಚಲಾಯಿಸುತ್ತಿದ್ದರು ಎಂದು ಕೆಲವರು ಹೇಳಿದ್ದರು. ಆದರೆ, ಸೌಮ್ಯಗೆ ಕುಡಿಯುವ ಅಭ್ಯಾಸವಿಲ್ಲ ಎಂದು ನಟಿ ಹೇಳಿಕೊಂಡಿದ್ದರು. ಪೊಲೀಸ್…