Author: Author AIN

ತೆಲಂಗಾಣದ ಹೈದರಾಬಾದ್‌ ಮೂಲದ ಶ್ವೇತಾ ಮಧಗಾನಿ ಎಂಬ ಮಹಿಳೆಯ ಶವ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಪತ್ತೆಯಾಗಿದೆ. ಈಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದು ಆಕೆಯ ಪತಿಯ ಮೇಲೆ ಅನುಮಾನ ಮೂಡಿದೆ. ಶ್ವೇತಾ ಮಧಗಾನಿ ಶವ ಶನಿವಾರ (ಮಾರ್ಚ್ 9) ಬಕ್ಲಿಯಲ್ಲಿ ರಸ್ತೆ ಬದಿಯ ತೊಟ್ಟಿಯಲ್ಲಿ ಪತ್ತೆಯಾಗಿದೆ, ಕೊಲೆಯಲ್ಲಿ ಆಕೆಯ ಪತಿ ಅಶೋಕ್ ರಾಜ್ ಭಾಗಿಯಾಗಿರಬಹುದೆಂದು ಶಂಕಿಸಲಾಗಿದೆ. ಕೊಲೆಯ ನಂತರ ಅಶೋಕ್ ತಮ್ಮ ಮೂರು ವರ್ಷದ ಮಗನೊಂದಿಗೆ ಭಾರತಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

Read More

ಅಡಲ್ಟ್ ಸಿನಿಮಾಗಳ ನಟಿ ಸೋಫಿಯಾ ಲಿಯೋನಿ ಅವರ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎನ್ನುವುದು ತನಿಖೆಯಿಂದ ದೃಡಪಟ್ಟಿದೆ. 26 ವಯಸ್ಸಿನ ಸೋಫಿಯಾ ಲಿಯೋನಿ ಇತ್ತೀಚೆಗೆ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಅನುಮಾನ ಬಂದಿದೆ. ಆ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಬಾಗಿಲು ತೆಗೆದು ನೋಡಿದಾಗ ಸೋಫಿಯಾ ಶವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಫಿಯಾ ಮಲತಂದೆ ಮೈಕ್ ರೋಮೆರೋ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೋಫಿಯಾ ತಾಯಿ ಹಾಗೂ ಕುಟುಂಬದ ಪರವಾಗಿ ಈ ವಿಚಾರವನ್ನು ತಿಳಿಸುತ್ತಿದ್ದೇನೆ. ಸೋಫಿಯಾ ಇನ್ನಿಲ್ಲ ಎನ್ನುವ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ಘಟನೆ ನಮ್ಮ ಕುಟುಂಬ ಹಾಗೂ ಗೆಳೆಯರಿಗೆ ಶಾಕ್​ ನೀಡಿದೆ. ಸೋಫಿಯಾ ಅವರ ಅಂತ್ಯ ಸಂಸ್ಕಾರಕ್ಕೆ ಹಣ ಕಳುಹಿಸುವಂತೆ ಹಾಗೂ ಈ ಸಂಬಂಧ ತನಿಖೆ ನಡೆಸುವಂತೆ ಮೈಕ್ ಮನವಿ ಮಾಡಿದ್ದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಸೋಫಿಯಾ ಅವರು ಸದಾ ಪ್ರಯಾಣ…

Read More

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಟಿ ದೀಪಿಕಾ ದಾಸ್ ಸೀಕ್ರೇಟ್ ಆಗಿ ಗೋವಾದಲ್ಲಿ ಹಸೆಮಣೆ ಏರಿದ್ದಾರೆ. ಮದುವೆಯ ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಹಮ್ಮಿಕೊಂಡಿದ್ದ ನಟಿ ಇದೀಗ ಮದುವೆಯಾಗಿರುವ ಹುಡುಗನ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ದೀಪಿಕಾ ಕೈ ಹಿಡಿದಿರೋ ದೀಪಕ್ ಹಿನ್ನೆಲೆ ಏನು ಗೊತ್ತಾ? ರಿಯಲ್​ ಎಸ್ಟೇಟ್​ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್​ ಜೊತೆ ನಟಿ ದೀಪಿಕಾ ದಾಸ್ ಮದುವೆ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ದೀಪಿಕಾ ದಾಸ್​ ಮತ್ತು ದೀಪಕ್​ ಡೇಟಿಂಗ್​ ಮಾಡುತ್ತಿದ್ದು ಸಡನ್ ಆಗಿ ಗೋವಾದಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆದರೆ ಇದು ಸೀಕ್ರೇಟ್ ಮ್ಯಾರೇಜ್ ಅಲ್ಲ, ಸಾಕಷ್ಟು ತಿಂಗಳಿನಿಂದ ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೇವೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ. ನಾವಿಬ್ಬರು ನಾಲ್ಕು ವರ್ಷಗಳ ಹಿಂದೆ ನಾವು ಭೇಟಿ ಆದೆವು. ಕಳೆದೊಂದು ವರ್ಷದಿಂದ ಕಮಿಟೆಡ್​ ರಿಲೇಷನ್​ಶಿಪ್​ನಲ್ಲಿ ಇದ್ದೆವು. ಮನೆಯವರಿಗೆಲ್ಲ ಗೊತ್ತಿತ್ತು. ಇದರಲ್ಲಿ ಏನೂ ಸಸ್ಪೆನ್ಸ್​ ಇಲ್ಲ. ನಾನು ರಿಯಲ್​ ಎಸ್ಟೇಟ್​ ಡೆವೆಲಪರ್​. ಇಲ್ಲಿಯೇ ಇರುವುದು.…

Read More

ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ನಟಿ ದೀಪಿಕಾ ದಾಸ್ ಏಕಾಏಕಿ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಗೋವಾದಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ನಟಿ ಇದೀಗ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಹಮ್ಮಿಕೊಂಡಿದ್ದರು. ಮಾಧ್ಯಮಗಳ ಜೊತೆ ಮದುವೆಯ ಬಗ್ಗೆ ಮಾತನಾಡಿದ ದೀಪಿಕಾ ಇದು ಸಡನ್​ ಆಗಿ ಆದ ಮದುವೆ ಅಲ್ಲ ಎಂದಿದ್ದಾರೆ. ಈ ಮದುವೆ ಗೌಪ್ಯವಾಗಿ ಇರಲಿಲ್ಲ. ಕೆಲವು ತಿಂಗಳಿಂದ ಇದಕ್ಕೆ ತಯಾರಿ ಮಾಡಿದ್ದೆವು. ಸರ್ಪ್ರೈಸಿಂಗ್​ ಆಗಿರಲಿ ಅಂತ ನಾವು ಅಂದುಕೊಂಡೆವು. ಹಾಗಾಗಿ ಪ್ರಚಾರ ಮಾಡಿಲ್ಲ. ಚಿಕ್ಕ ಸಮಾರಂಭದಲ್ಲಿ ನಮ್ಮದು ಡೆಸ್ಟಿನೇಷನ್​ ವೆಡ್ಡಿಂಗ್​ ಆಗಿರಬೇಕು ಎಂಬ ಆಸೆ ನನಗೆ ಇತ್ತು. ಕೇವಲ ಫ್ಯಾಮಿಲಿಯವರ ಎದುರು ನಾನು ಅಂದುಕೊಂಡ ರೀತಿಯಲ್ಲಿ ಮದುವೆ ಆಗಬೇಕು ಎಂಬ ಆಸೆ ನನ್ನದಾಗಿತ್ತು’ ಎಂದಿದ್ದಾರೆ. ‘ನನ್ನ ಆಸೆಯನ್ನು ನಾನು ದೀಪಕ್​ ಅವರಿಗೆ ಹೇಳಿದೆ. ಇದೆಲ್ಲ ಸಾಧ್ಯನಾ ಅಂತ ಅವರು ಕೇಳಿದರು. ಯಾಕೆಂದರೆ ಅವರದ್ದು ದೊಡ್ಡ ಫ್ಯಾಮಿಲಿ. ಹಾಗಿದ್ದರೂ ಕೂಡ ನನ್ನ ಆಸೆಗೆ ಅವರು ಸಪೋರ್ಟ್​ ಮಾಡಿದರು. ಅದಕ್ಕಾಗಿ ಅವರಿಗೆ…

Read More

ಇಂಡೋನೇಷ್ಯಾದ ಬಾಂದಾ ಸಮುದ್ರದಲ್ಲಿ ಇಂದು ಬೆಳಗ್ಗೆ (ಮಾ.10) 5.0 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪದ ಕೇಂದ್ರಬಿಂದುವನ್ನು 7.30 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 129.27 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ವಿಚಾರಣೆ ಮಾಡಲಾಗಿದೆ ಎಂದು ಜಿಎಫ್ಜೆಡ್ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ಮಾಹಿತಿ ನೀಡಿದೆ. ದ್ವೀಪಸಮೂಹ ದೇಶ ಇಂಡೋನೇಷ್ಯಾ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ಎಂದು ಕರೆಯಲ್ಪಡುವ ಸೂಕ್ಷ್ಮ ಭೂಕಂಪನ ವಲಯದಲ್ಲಿದೆ. ಈ ಘಟನೆಯಿಂದ ಯಾವುದೇ ಹಾನಿ ಉಂಟಾಗಿಲ್ಲ. ಇಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More

ಡೊನಾಲ್ಡ್ ಟ್ರಂಪ್ ಒಳ್ಳೆಯ ವ್ಯಕ್ತಿ ಅಲ್ಲ. ಆತ ಓರ್ವ ರಾಕ್ಷಸ. ಹೀಗಾಗಿ ಅಮೆರಿಕದ ಮತದಾರರು ಮುಂಬರುವ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬಿಡೆನ್‍ಗೆ ಮತ ಚಲಾಯಿಸಬೇಕು.ಯಾವುದೇ ಕಾರಣಕ್ಕೂ ಟ್ರಂಪ್ ಗೆ ಮತ ಹಾಕಬೇಡಿ ಎಂದು ಹಾಲಿವುಡ್ ಖ್ಯಾತ ನಟ ರಾಬರ್ಟ್ ಡಿ ನಿರೋ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿರುವ ನಿರೋ, ನೀವು ಬದುಕಲು ಬಯಸುವ ಜಗತ್ತಿನಲ್ಲಿ ವಾಸಿಸಲು ಮತ್ತು ಆನಂದಿಸಲು ಬಯಸುವಿರಾ ಅಥವಾ ದುಃಸ್ವಪ್ನದಲ್ಲಿ ಬದುಕಲು ಬಯಸುವಿರಾ? ಟ್ರಂಪ್‍ಗೆ ಮತ ನೀಡಿದರೆ ನೀವು ದುಃಸ್ವಪ್ನವನ್ನು ಪಡೆಯುತ್ತೀರಿ, ಬಿಡೆನ್‍ಗೆ ಮತ ಚಲಾಯಿಸಿ ಸಹಜ ಜೀವನ ನಡೆಸಿ ಎಂದಿದ್ದಾರೆ. ಆತ ತುಂಬಾ ನೀಚ, ಅಸಹ್ಯ, ದ್ವೇಷಪೂರಿತ ವ್ಯಕ್ತಿ. ನಾನು ಎಂದಿಗೂ ಟ್ರಂಪ್ ಆಗಿ ನಟಿಸುವುದಿಲ್ಲ ಏಕೆಂದರೆ ನಾನು ಅವನಲ್ಲಿ ಯಾವುದೇ ಒಳ್ಳೆಯದನ್ನು ನೋಡುವುದಿಲ್ಲ ಎಂದಿದ್ದಾರೆ.

Read More

ಗಾಝಾ ಯುದ್ಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕ್ರಮಗಳು ಇಸ್ರೇಲಿಗೆ ನೆರವಾಗುವ ಬದಲಾಗಿ ಇಸ್ರೇಲನ್ನೇ ಘಾಸಿಗೊಳಿಸುತ್ತಿವೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಬೈಡನ್, ಇಸ್ರೇಲ್ ನಾಯಕತ್ವದ ಬಗ್ಗೆ ಅಮೆರಿಕದ ಮುಖಂಡರ ಅಸಹನೆ ಹೆಚ್ಚುತ್ತಿರುವುದರ ಪ್ರತೀಕ ಇದಾಗಿದೆ. ಗಾಝಾದಲ್ಲಿ ಮಾನವೀಯ ಸಂಘರ್ಷ ಹೆಚ್ಚುತ್ತಿದ್ದು, ಅಮೆರಿಕದ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ದಕ್ಷಿಣ ಗಾಝಾದ ರಫಾ ಮೇಲೆ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ನೆತನ್ಯಾಹು ಅವರಿಗೆ ಇಸ್ರೇಲ್ ದೇಶವನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕೂ ಇದೆ. ಆದರೆ ಕ್ರಮ ಕೈಗೊಂಡ ಪರಿಣಾಮ ಜೀವ ಕಳೆದುಕೊಂಡ ಅಮಾಯಕ ಜೀವಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದಿದ್ದಾರೆ. “ನನ್ನ ಪ್ರಕಾರ ಅವರ ಕ್ರಮಗಳು ಇಸ್ರೇಲ್‍ಗೆ ನೆರವಾಗುವ ಬದಲು ಇಸ್ರೇಲ್‍ಗೆ ಘಾಸಿಯಾಗುತ್ತಿವೆ” ಎಂದು ಬೈಡನ್ ಹೇಳಿದ್ದಾರೆ.

Read More

ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಹೆಸರು ಘೋಷಣೆಯಾಗುತ್ತಿದ್ದಂತೆ ಗೀತಾ ಶಿವರಾಜ್‌ಕುಮಾರ್‌ ಶಿವಮೊಗ್ಗದಲ್ಲಿ ಚುನಾವಣಾ ಕಾರ್ಯಗಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಪಡೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ ಪಕ್ಷ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 9 ರಾಜ್ಯಗಳ 39 ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲೇ ಗೀತಾ ಶಿವರಾಜ್‌ಕುಮಾರ್‌ ಹೆಸರು ಸೇರಿಕೊಂಡಿದೆ. ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಗೀತಾ ಶಿವರಾಜ್‌ಕುಮಾರ್‌ ಚುನಾವಣಾ ಕಾರ್ಯಗಳಿಗಾಗಿ ಶಿವಮೊಗ್ಗದಲ್ಲಿ ಬಾಡಿಗೆಮನೆ ಪಡೆದಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಗಳಿಗೆ ಸಚಿವ ಮಧು ಬಂಗಾರಪ್ಪ ಮತ್ತು ಗೀತಾ ಶಿವರಾಜ್‌ಕುಮಾರ್‌ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಶಿವಮೊಗ್ಗದ ಕಲ್ಲಹಳ್ಳಿ ಬಡಾವಣೆಯಲ್ಲಿ ಮಧು ಬಂಗಾರಪ್ಪ ನಿವಾಸದ ಪಕ್ಕದಲ್ಲೇ ಮನೆಯೊಂದನ್ನ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇಲ್ಲಿಯೇ ಚುನಾವಣಾ ಪ್ರಚಾರ ಕಾರ್ಯಗಳ ಕುರಿತು ಮಹತ್ವದ ಸಿದ್ಧತೆಗಳನ್ನು ಇಲ್ಲಿಯೇ ಮಾಡಿಕೊಳ್ಳಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.

Read More

ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಂಚ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ್ ಗೆ ನಟರಾದ ಯಶಸ್ ಸೂರ್ಯ ಹಾಗೂ ಚಿಕ್ಕಣ್ಣ ಸಾಥ್ ನೀಡಿದ್ದಾರೆ. ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ ದರ್ಶನ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದರ್ಶನ್ ಅವರಿಗೆ ಕ್ಷೇತ್ಎದ ವತಿಯಿಂದ ಗೌರವ ಸಲ್ಲಿಸಲಾಯಿತು. ಪೂಜೆಯ ಬಳಿಕ ದರ್ಶನ್ ಮಾತನಾಡಿದ ದರ್ಶನ್, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ ಎಂದಿದ್ದಾರೆ. ಈ ಹಿಂದೆ ಮಂಗಳೂರಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಆದರೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೀನಿ. ಇಲ್ಲಿಗೆ ಬಂದಿರುವುದಕ್ಕೆ ಬೇರೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ ಎಂದು ದರ್ಶನ್ ಹೇಳಿದ್ದಾರೆ

Read More

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುವುದು ಕಣ್ಣಿಗೆ ಹಾನಿಕಾರಕ ಜೊತೆಗೆ ದೈಹಿಕ ಆರೋಗ್ಯವು ಹದಗೆಡುತ್ತದೆ ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳ ಪ್ರಕಾರ, ಐದು ವರ್ಷದೊಳಗಿನ ಮಕ್ಕಳು ಮೊಬೈಲ್ ಪರದೆಗಳನ್ನು ವೀಕ್ಷಿಸಲು ಕಡಿಮೆ ಸಮಯವನ್ನು ಕಳೆಯಬೇಕು. ಯುಎನ್ ಆರೋಗ್ಯ ಸಂಸ್ಥೆ ಶಿಶುಗಳು ಮತ್ತು 1 ವರ್ಷದ ಮಗುವಿಗೆ ಪರದೆಯ ಸಮಯವನ್ನು ಶಿಫಾರಸು ಮಾಡದಿದ್ದರೂ, 2 ವರ್ಷ ವಯಸ್ಸಿನವರು ಒಂದು ಗಂಟೆಗಿಂತ ಹೆಚ್ಚು ಕಾಲ ಮೊಬೈಲ್ ನೋಡಬಾರದು ಎಂದು ತಿಳಿಸಿದೆ. ಒಂದೂವರೆ ವರ್ಷ ವಯಸ್ಸಿನ ಮಕ್ಕಳಿಗೆ ಸಹ ಪೋಷಕರು ಸ್ಮಾರ್ಟ್ ಫೋನ್ ಗಳನ್ನು ನೀಡುತ್ತಿದ್ದಾರೆ ಎಂದು ಗುರುಗ್ರಾಮದ ಮೇದಾಂತ ದಿ ಮೆಡಿಸಿಟಿಯ ಪೀಡಿಯಾಟ್ರಿಕ್ ಕೇರ್ನ ಪೀಡಿಯಾಟ್ರಿಕ್ ಪಲ್ಮೊನಾಲಜಿ, ಕ್ರಿಟಿಕಲ್ ಕೇರ್ ಪೀಡಿಯಾಟ್ರಿಕ್ಸ್ (ಪಿಐಸಿಯು) ನಿರ್ದೇಶಕ ಡಾ.ರಾಜೀವ್ ಉತ್ತಮ್ ಹೇಳಿದರು. “ಅತಿಸಾರ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಂತಹ ಕಾಯಿಲೆಗಳು ತಮ್ಮ ಮೊಬೈಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುವ…

Read More