Author: Author AIN

ಪುಟ್ಟಗೌರಿ ಧಾರವಾಹಿ ಮೂಲಕ ಪ್ರೇಕ್ಷಕರ ಮನ ಗೆದ್ದು, ಬಿಗ್ ಬಾಸ್ ಮನೆಗೆ ಹೋಗಿ ಬಂದಿರುವ ನಟಿ ಸಾನ್ಯಾ ಐಯ್ಯರ್ ಬಿಗ್ ಸ್ಕ್ರೀನ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಟಿ ಸಾನ್ಯಾ ಐಯ್ಯರ್ ಅವರು ಹಲವು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಸಾನ್ಯಾ  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ಆಗಾಗ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಟಿ ಸಾನ್ಯಾ ಅಯ್ಯರ್ ಸಖತ್ ಬ್ಯುಸಿಯಾಗಿದ್ದಾರೆ. ಸಾನ್ಯಾ ಐಯ್ಯರ್ ಹಂಚಿಕೊಳ್ಳುವ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ನೆಗೆಟಿವ್ ಕಮೆಂಟ್ ಬರುತ್ತದೆ. ಆದರೆ, ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಳ್ಳದ ಸಾನ್ಯಾ ಮತ್ತೆ ಮತ್ತೆ ಫೋಟೋಗಳನ್ನು  ಹಂಚಿಕೊಳ್ಳುತ್ತಿರುತ್ತಾರೆ. ಸದಾ ತಮ್ಮ ಫೋಟೋ ಶೂಟ್ ಗಳಿಂದ ಸುದ್ದಿಯಾಗೋ ಸಾನ್ಯಾ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಫೋಟೋದಲ್ಲಿ ಸಾನ್ಯಾ ಸಕ್ಕತ್ತಾಗೆ ಮಿಂಚಿದ್ದಾರೆ. ಗೌರಿ ಸಿನಿಮಾದ ಮೂಲಕ ಸಾನ್ಯಾ ಅಯ್ಯರ್  ನಾಯಕಿಯಾಗಿ ಗಾಂಧಿನಗರಕ್ಕೆ ಎಂಟ್ರಿಕೊಡ್ತಿದ್ದಾರೆ. ಈ ಚಿತ್ರದಲ್ಲಿ ಸಾನ್ಯಾಗೆ ನಾಯಕನಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ…

Read More

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸದ್ಯ ಸೈಲೆಂಟ್ ಆಗಿದ್ದಾರೆ. ಪುಷ್ಕರ್ ಇತ್ತೀಚೆಗೆ ಕೊಂಚ ಮಟ್ಟಿಗೆ ಸಿನಿಮಾಗಳಿಂದ ದೂರವಿದ್ದಾರೆ. ಇದೀಗ ನಟ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಕುರಿತು ಪುಷ್ಕರ್ ಪ್ರತಿಕ್ರಿಯಿಸಿದ್ದಾರೆ. ಕಿರಿಕ್ ಪಾರ್ಟಿಯಂತಹ ಸೂಪರ್ ಹಿಟ್ ಸಿನಿಮಾವನ್ನು ನೀಡಿದ್ದ ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಧ್ಯೆ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೆಲವು ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಆ ಬಳಿಕ ಇಬ್ಬರು ಬೇರೆ ಬೇರೆಯಾಗಿದ್ದರು. ಈ ಮಧ್ಯೆ ಪುಷ್ಕರ್ ಮತ್ತೆ ರಕ್ಷಿತ್ ಜೊತೆ ಸಿನಿಮಾ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ ಅದಕ್ಕೆ ಪುಷ್ಕರ್ ಸದ್ಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ‘ನನ್ನ ಹಾಗೂ ರಕ್ಷಿತ್ ಶೆಟ್ಟಿ ಮಧ್ಯೆ ಯಾವುದೇ ಹೇಟ್​ ರಿಲೇಶನ್​ಶಿಪ್​ ಇಲ್ಲ. ಇಬ್ಬರೂ ಗೌರವಯುತವಾಗಿ ನಮ್ಮದೇ ಸ್ಪೇಸ್​ನಲ್ಲಿ ಇದ್ದೇವೆ. ರಕ್ಷಿತ್ ಶೆಟ್ಟಿ ಸಿನಿಮಾ ಮಾಡಲು 10-20 ನಿರ್ಮಾಪಕರು ರೆಡಿ ಇದ್ದಾರೆ. ನಾನು ಹಣ ಹಾಕ್ತೀನಿ ಡೇಟ್ ಕೊಡಿ ಎಂದು ಅವರು ಕೇಳುತ್ತಾ ಇರುತ್ತಾರೆ. ಹೀಗಾಗಿ,…

Read More

ಬಂಗಾರಪ್ಪ ಅವರ ಕುಟುಂಬ ಒಡೆದುಹೋಗಿದ್ದು ಅವರ ಮನೆ ಒಂದು ಮಾಡಲು ಪ್ರಯತ್ನ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟ ಹಾಗೂ ಬಂಗಾರಪ್ಪ ಅವರ ಅಳಿಯ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಂಗಾರಪ್ಪ ಅವರ ಮಗಳು, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಚುನಾವಣಾ ಕೆಲಸಗಳಿಗಗಿ ಈಗಾಗಲೇ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಪಡೆದಿರುವ ಗೀತಾ ಶಿವರಾಜ್ ಕುಮಾರ್ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಬಂಗಾರಪ್ಪ ಪುತ್ರರಾದ ಸಚಿವ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ನಡುವೆ ವೈಮನಸ್ಯವಿದೆ. ಹೀಗಾಗಿ ಬಂಗಾರಪ್ಪ ಮನೆ ಒಡೆದ ಮನೆಯಂತಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರಿಗೆ ಬಂಗಾರಪ್ಪ ಮನೆ ಒಂದು ಮಾಡುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಬಂಗಾರಪ್ಪ ಅವರ ಮನೆ ಒಂದು ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್ ‘ಬಂಗಾರಪ್ಪ ಅವರ ಮನೆ ಒಂದು ಮಾಡಲು ನಾನು ಅವರ ಮನೆ ಅಳಿಯ, ಮಗನಲ್ಲ’ ಎಂದಿದ್ದಾರೆ. ಆ ಮೂಲಕ ಬಂಗಾರಪ್ಪ…

Read More

ಲೋಕಸಭೆ ಚುನಾವಣೆಗೆ ಇನ್ನೆನ್ನು ಕೆಲ ತಿಂಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಗವರ್ನರ್‌ಗೆ ಸಲ್ಲಿಸಿದ್ದಾರೆ. ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) ಯ ಆಡಳಿತ ಸಮ್ಮಿಶ್ರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಖಟ್ಟರ್ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಉಭಯ ಪಕ್ಷಗಳು ವಿಫಲವಾದ ಕಾರಣ ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ನಡುವಿನ ಮೈತ್ರಿ ಮುರಿದು ಬೀಳುವ ಹಂತದಲ್ಲಿದೆ. ಈ ನಡುವೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಿದ್ದು, ಅವರ ಸಂಪುಟದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ.

Read More

ಸ್ಯಾಂಡಲ್‌ವುಡ್ ನಟ ಶ್ರೀಮುರಳಿ ದಂಪತಿ ಕಾರು ಬರುವುದು ಲೇಟ್ ಆದ ಹಿನ್ನೆಲೆಯಲ್ಲಿ ಆಟೋದಲ್ಲಿ ಮನೆಗೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಪತ್ನಿ ವಿದ್ಯಾ ಜೊತೆ ಆಟೋದಲ್ಲಿ ತೆರಳಿದ್ದಾರೆ. ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕಾರ್ ಬರೊದು ಲೇಟ್ ಆಗುತ್ತೆ ಅಂತ ಹಾಗೇ ಆಟೋಲೆ ಹೋಗೊಣ ಅನ್ಕೊಂಡ್ವಿ. ಆಟೋ ಸಿಗದೇ ನಡೆದು ನಡೆದು ಸಾಕಾಗಿತ್ತು (ನನ್ನ ಹೆಂಡತಿಗೆ ಕೋಪಾನು ಸ್ಟಾರ್ಟ್ ಆಗುತ್ತಿತ್ತು) ಆಗ ನನ್ನ ಆಪತ್ಭಾದವರಂತೇ ಇಬ್ಬರು ಹುಡುಗರು ನಮ್ಮನ್ನು ನೋಡಿ ಸಾಕಾಗಿ, ಆಟೋ ಹಿಡಿದು ನಮ್ಮ ಬಳಿ ತಂದರು. ಅವರಿಗೆ ಧನ್ಯವಾದ ಆಟೋ ಅಣ್ಣ ನಮ್ಮನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್ ಮಾಡಿದರು ಎಂದು ನಟ ಶ್ರೀಮುರಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಶ್ರೀಮುರುಳಿ ಪರಾಕ್, ಬಘೀರ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಸಿನಿಮಾದಲ್ಲೂ ಡಿಫರೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Read More

ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಡೀಪ್ ಫೇಕ್ ವಿಡಿಯೋ ಸಖತ್ ಸದ್ದು ಮಾಡುತ್ತಿವೆ. ಯಾರದ್ದೋ ದೇಹಕ್ಕೆ ನಟಿಯರ ಮುಖವನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗುತ್ತಿದೆ. ಈ ರೀತಿಯ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದ್ದರು ಮತ್ತೆ ಮತ್ತೆ ಅದೇ ಕೆಲಸ ಆಗುತ್ತಿದೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸದ್ದು ಮಾಡಿತ್ತು. ಇದೀಗ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ದಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಯುವತಿಯೊಬ್ಬರು ಸಣ್ಣ ಬಟ್ಟೆ ಧರಿಸಿ ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಅಂಟಿಸಲಾಯಿತು. ಅನೇಕರು ಇದು ರಶ್ಮಿಕಾ ಎಂದೇ ಭಾವಿಸಿದ್ದರು. ಜೊತೆಗೆ ಬಟ್ಟೆ ಬಗ್ಗೆ ಅವರಿಗೆ ಪಾಠ ಮಾಡಿದ್ದರು. ಆ ಬಳಿಕ ಇದು ದೊಡ್ಡ ಸುದ್ದಿಯಾಗಿ ಡೀಪ್ ಫೇಕ್ ವಿಡಿಯೋ ವಿರುದ್ಧ ಸಾಕಷ್ಟು ಮಂದಿ…

Read More

ದಕ್ಷಿಣ ಕೊರಿಯಾದಲ್ಲಿ ಮುಷ್ಕರ ನಿರತ 4,900 ವೈದ್ಯರ ಲೈಸೆನ್ಸ್ ಗಳನ್ನು ಅಮಾನತುಗೊಳಿಸುವ ಕಾರ್ಯ ವಿಧಾನಗಳನ್ನು ಆರಂಭಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವೈದ್ಯಕೀಯ ತರಬೇತಿ ಯೋಜನೆಯಲ್ಲಿ ಸುಧಾರಣೆ ತರುವ ಸರಕಾರದ ನಿರ್ಧಾರವನ್ನು ವಿರೋಧಿಸಿ 4,900 ಜೂನಿಯರ್ ವೈದ್ಯರು ರಾಜೀನಾಮೆ ನೀಡಿ ಪ್ರತಿಭಟನೆ ನಡೆಸಿದ್ದಾರೆ. ಇದು ದೇಶದ ವೈದ್ಯಕೀಯ ಕ್ಷೇತ್ರದ ಕಾರ್ಯನಿರ್ವಹಣೆಗೆ ಸಮಸ್ಯೆಯಾಗಿದೆ. ದೇಶದಲ್ಲಿರುವ ವೈದ್ಯರ ಕೊರತೆಯನ್ನು ನೀಗಿಸಲು ವೈದ್ಯರ ತರಬೇತಿ ಯೋಜನೆಯನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಇದರಿಂದ ವೈದ್ಯಕೀಯ ಸೇವೆಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಜೂನಿಯರ್ ವೈದ್ಯರು ವಿರೋಧಿಸುತ್ತಿದ್ದಾರೆ. ತಕ್ಷಣ ಸೇವೆಗೆ ಮರಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದ್ದರೂ ಸುಮಾರು 12,000 ಜೂನಿಯರ್ ವೈದ್ಯರು ಕೆಲಸಕ್ಕೆ ಹಾಜರಾಗಿಲ್ಲ. ಆದ್ದರಿಂದ ಸೇನೆಯ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಬಳಸಲು ಸರಕಾರ ನಿರ್ಧರಿಸಿದೆ. `ಮಾರ್ಚ್ 8ರವರೆಗೆ 49,000ಕ್ಕೂ ಅಧಿಕ ತರಬೇತಿ ವೈದ್ಯರಿಗೆ(ಟ್ರೈನೀ ಡಾಕ್ಟರ್ಸ್) ಆಡಳಿತಾತ್ಮಕ ಅಧಿಸೂಚನೆಯನ್ನು ರವಾನಿಸಲಾಗಿದೆ. ಪ್ರಥಮ ಹಂತದಲ್ಲಿ ಮುಷ್ಕರ ನಿರತ ವೈದ್ಯರ ಲೈಸೆನ್ಸ್ ಗಳನ್ನು ಅಮಾನತುಗೊಳಿಸಲಾಗುವುದು…

Read More

ಇಂದಿನ ಜೀವನ ಶೈಲಿಯಿಂದ ಸಾಕಷ್ಟು ಮಹಿಳೆಯರು ತಾಯಿತನವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಹೆತ್ತು ಕೊಟ್ಟು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇದೀಗ ಚೀನಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಸಖತ್ ಆಫರ್‌ ನೀಡಿದೆ. 28 ರಿಂದ 29 ವರ್ಷ ವಯಸ್ಸಿನ ಯಾವುದೇ ಮಹಿಳೆ ಮಗುವಿಗೆ ಜನ್ಮ ನೀಡುವ ಮೂಲಕ ಹಣವನ್ನು ಗಳಿಸಬಹುದು ಎಂದು ಕಂಪನಿ ಹೇಳಿದೆ. ಇದು ಒಂದು ರೀತಿಯ ವಾಣಿಜ್ಯ ಜಾಹೀರಾತಾಗಿದ್ದು, ಮಕ್ಕಳನ್ನು ಹೊಂದುವ ಮೂಲಕ ಹಣವನ್ನು ಸಂಪಾದಿಸಲು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ. ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಹುಚೆನ್ ಹೌಸ್ ಕೀಪಿಂಗ್, ಮಹಿಳೆಯರು ಬಾಡಿಗೆ ತಾಯಂದಿರಾಗುವ ಮೂಲಕ ಹಣವನ್ನು ಗಳಿಸಬಹುದು ಎಂದು ಆಫರ್ ನೀಡುತ್ತಿದೆ. ಅಷ್ಟೇ ಅಲ್ಲ, ಅವರ ವಯಸ್ಸಿಗೆ ಅನುಗುಣವಾಗಿ ಪ್ಯಾಕೇಜ್ ನೀಡಲಾಗುತ್ತಿದೆ. 28 ವರ್ಷದ ಮಹಿಳೆ ತಾಯಿಯಾದರೆ ಆಕೆಗೆ 220,000 ಯುವಾನ್ ಅಂದರೆ 25,23,783 ರೂಪಾಯಿ ಮತ್ತು 29 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಆಕೆಗೆ 210,000 ಯುವಾನ್ ಅಂದರೆ…

Read More

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಗಾಜಾದ ಬೆಳವಣಿಗೆಗಳು ಮತ್ತು ತುರ್ತು ಮಾನವೀಯ ನೆರವು ಒದಗಿಸುವ ಕುರಿತಂತೆ ಚರ್ಚೆ ನಡೆಸಿದ್ದಾರೆ. ‘ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು, ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು,ಗಾಜಾದ ಬೆಳವಣಿಗೆ ಕುರಿತಂತೆ ಮಾಹಿತಿ ನೀಡಲಾಯಿತು’ಎಂದು ಪ್ರಧಾನಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘ಒತ್ತೆಯಾಳುಗಳ ಬಿಡುಗಡೆ ಮತ್ತು ಮಾನವೀಯ ನೆರವು ಕುರಿತಂತೆಯೂ ಚರ್ಚೆ ನಡೆದಿದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಇಸ್ರೇಲ್ ಎನ್‌ಎಸ್‌ಎ ಝಾಕಿ ಹನೆಬಿ ಅವರನ್ನೂ ಡೋಬಾಲ್ ಭೇಟಿಯಾದರು. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಭಾಗದ ಯುಎಇ, ಕತಾರ್, ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಜೋರ್ಡಾನ್‌ನಂತಹ ಪ್ರಮುಖ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಚರ್ಚೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Read More

ಕಡಿಮೆ ಅವಧಿಯಲ್ಲಿ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಒಡೆತನದ ಜಿಯೋ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಸಾಕಷ್ಟು ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಜಿಯೋ ಇದೀಗ ಯುಪಿಐ ಪಾವತಿ ಮಾರುಕಟ್ಟೆಗೆ ಪ್ರವೇಶ ಮಾಡಲು ಸಿದ್ದವಾಗಿದೆ. ಜಿಯೋ ಪೇ ಆ್ಯಪ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಸೌಂಡ್‌ಬಾಕ್ಸ್ ಸಹಾಯದಿಂದ ಕಂಪನಿಯು ತನ್ನ ವ್ಯವಹಾರವನ್ನು ವಿಸ್ತರಿಸಲು ಒತ್ತು ನೀಡುತ್ತಿದೆ. ಜಿಯೋ ಸೌಂಡ್‌ಬಾಕ್ಸ್‌ನ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ಅಂಗಡಿಗಳಿಗೆ ಎಂಟ್ರಿಕೊಡಲಿದೆ. ಇದರೊಂದಿಗೆ ಮುಖೇಶ್ ಅಂಬಾನಿ ನೇರವಾಗಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಜೊತೆ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಅಂಗಡಿ ಮಾಲೀಕರಿಗೂ ಭರ್ಜರಿ ಆಫರ್ ಗಳನ್ನು ನೀಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಪೇಟಿಎಂ ಪಾವತಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ದೊಡ್ಡ ಮಾಹಿತಿಯು ಬೆಳಕಿಗೆ ಬಂದಿರುವ ಸಮಯದಲ್ಲಿ ಜಿಯೋದ ಈ ಯೋಜನೆಯು ಇತರ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಸದ್ಯಕ್ಕೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ಬ್ಯಾನ್ ಮಾಡಲಾಗಿದೆ. ಆದಾಗ್ಯೂ, ಇದು ಪೇಟಿಎಂ ಯುಪಿಐ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬೆಳವಣಿಗೆಯ…

Read More