ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ವಿವಾದಿತ ಸಿನಿಮಾಗಳು ಹೆಚ್ಚು ಹೆಚ್ಚು ತೆರೆಗೆ ಬರ್ತಿವೆ. ಅವು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗ್ತಿವೆ ಕೂಡ. ಅಂತಹ ಚಿತ್ರಗಳ ಸಾಲಿಗೆ ಇದೀಗ ಜೆಎನ್.ಯು ಸಿನಿಮಾ ಸೇರಿಕೊಂಡಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಭಾರೀ ಪರ ಮತ್ತು ವಿರೋಧ ಹುಟ್ಟಿಹಾಕಿದೆ. ಜೆ.ಎನ್.ಯು ಅಂದರೆ ಜವಾಹರಲಾಲ್ ನೆಹರೂ ಯೂನಿವರ್ಸಿಟಿ. ಈ ವಿಶ್ವವಿದ್ಯಾಲಯ ನಾನಾ ಕಾರಣಗಳಿಂದ ಸದ್ದು ಮಾಡುತ್ತಲೇ ಇದೆ. ಎಡ ಮತ್ತು ಬಲ ವಿದ್ಯಾರ್ಥಿ ಸಂಘಟನೆಗಳು ಕಾರಣದಿಂದಾಗಿ ಬೇಡದ ವಿಷಯಕ್ಕೆಲ್ಲ ವಿಶ್ವ ವಿದ್ಯಾಲಯವನ್ನು ಬಳಸಿಕೊಳ್ಳಲಾಗಿದೆ. ಇದನ್ನೇ ಇಟ್ಟುಕೊಂಡು ಜೆಎನ್.ಯು ಸಿನಿಮಾ ಮಾಡಲಾಗಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಜೆಎನ್.ಯು ಅಂದರೆ ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ ಎಂದು ತೋರಿಸಲಾಗಿದೆ. ಪೋಸ್ಟರ್ ಮಧ್ಯ ಭಾರತದ ನಕ್ಷೆ ಇದ್ದು, ಒಂದು ಶೈಕ್ಷಣಿಕ ಸಂಸ್ಥೆ ರಾಷ್ಟ್ರವನ್ನು ಒಡೆಯಬಹುದೆ? ಎನ್ನುವ ಪ್ರಶ್ನೆಯನ್ನೂ ಮಾಡಲಾಗಿದೆ. ಈ ಸಾಲುಗಳೇ ಅನೇಕರನ್ನು ಕೆರಳಿಸಿವೆ. ಹಾಗಾಗಿ ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಜರದಿದ್ದಾರೆ. ಏಪ್ರಿಲ್ 5ರಂದು ಈ ಸಿನಿಮಾವನ್ನು…
Author: Author AIN
ಸೀತಾ ರಾಮಂ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟಿ ಮೃಣಾಲ್ ಠಾಕೂರ್ ಸಾಕಷ್ಟು ಅವಕಾಶವನ್ನು ಭಾಚಿಕೊಳ್ಳುತ್ತಿದ್ದಾರೆ. ಸದ್ಯ ಬಾಲಿವುಡ್ ಹಾಗೂ ದಕ್ಷಿಣ ಭಾರತ ಎರಡರಲ್ಲೂ ಬ್ಯುಸಿ ಆಗಿರುವ ಮೃಣಾಲ್ ಇದೀಗ ಸ್ಟಾರ್ ನಟ ಪ್ರಭಾಸ್ ಜೊತೆ ಕೆಲಸ ಮಾಡೋ ಅವಕಾಶ ಅವರಿಗೆ ಸಿಕ್ಕಿದೆ. ಈ ಚಿತ್ರಕ್ಕೆ ಸೀತಾ ರಾಮಂ ಖ್ಯಾತಿಯ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬಣ್ಣದ ಜರ್ನಿ ಆರಂಭಿಸಿದ ಮೃಣಾಲ್ ಠಾಕೂರ್ 2014ರಲ್ಲಿ ಮರಾಠಿ ಸಿನಿಮಾಗಳಲ್ಲಿ ನಟಿಸಿದರು. 2018ರಲ್ಲಿ ‘ಲವ್ ಸೋನಿಯಾ’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮೃಣಾಲ್ ಆ ಬಳಿಕ ಮತ್ತಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದರು. ಮೃಣಾಲ್ ಅದೃಷ್ಟ ಬದಲಾಗಿದ್ದು 2022ರಲ್ಲಿ ತೆರೆಕಂಡ ಸೀತಾ ರಾಮಂ ಚಿತರದ ಮೂಲಕ. ಈಗ ಅವರಿಗೆ ಮತ್ತೊಂದು ದಕ್ಷಿಣದ ಆಫರ್ ಸಿಕ್ಕಿದೆ. ಹನು ರಾಘವಪುಡಿ ಅವರು ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಸೀತಾ ರಾಮಂ’ ಸಿನಿಮಾ ನಿರ್ದೇಶನ ಮಾಡಿದ ಖ್ಯಾತಿ ಅವರಿಗೆ ಇದೆ. ಪ್ರಭಾಸ್ ಜೊತೆ ನಟಿಸಲು ಮೃಣಾಲ್…
ಇಂದು ಸಾಕಷ್ಟು ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ (AI) ಗಳು ಆರಂಭವಾಗಿದೆ. ಮಾನವಿಗೆ ಸೆಡ್ಡೆ ಹೊಡೆಯಲು ಮುಂದಾಗಿರುವುದು ಸಾಕಷ್ಟು ತಲೆ ನೋವಿಗೆ ಕಾರಣವಾಗಿದೆ. ಈ ಕೃತಕ ಬುದ್ದಿಮತ್ತೆ ಮುಂದಿನ ದಿನಗಳಲ್ಲಿ ಮಾನವ ಬುದ್ಧಿಮತ್ತೆಯನ್ನ ಮೀರಿಸುತ್ತದೆ ಎಂಬ ಕಲ್ಪನೆಯು ದಶಕಗಳಿಂದ ತಂತ್ರಜ್ಞರು, ವಿಜ್ಞಾನಿಗಳು ಮತ್ತು ಭವಿಷ್ಯವಾದಿಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಉತ್ಪಾದಕ ಎಐ ಪರಿಚಯದಿಂದಾಗಿ, ಈಗ ಗೂಗಲ್, ಮೆಟಾ, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ನಂತಹ ದೊಡ್ಡ ಟೆಕ್ ಕಂಪನಿಗಳು ಪ್ರಸ್ತುತ ತಮ್ಮದೇ ಆದ ಭಾಷಾ ಮಾದರಿಗಳನ್ನ ನಿರ್ಮಿಸಲು ಮತ್ತು ತಮ್ಮ ಎಐ ಪ್ಲಾಟ್ಫಾರ್ಮ್ಗಳನ್ನ ಪರಿಷ್ಕರಿಸಲು ತೀವ್ರ ಸ್ಪರ್ಧೆಯಲ್ಲಿವೆ. ಎಐ ಕುರಿತು ಪ್ರತಿಕ್ರಿಯಿಸಿರುವ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ 2029ರಲ್ಲಿ ಎಐ ಮಾನವರಿಗಿಂತ ಹೆಚ್ಚು ಬುದ್ಧಿವಂತರಾಗುವ ಸಮಯಾವಧಿ ದೂರವಿಲ್ಲ ಎಂದಿದ್ದಾರೆ.
ಕೆನಡಾದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ ಮೂವರು ಭಾರತೀಯರು ಸೇರಿದಂತೆ ನಾಲ್ಕು ಜನರನ್ನು ನ್ಯೂಯಾರ್ಕ್ ಗಡಿಯಲ್ಲಿ ಬಂಧಿಸಲಾಗಿದೆ. ಬಫೆಲೊ ನಗರದ ಬಳಿ ಚಲಿಸುತ್ತಿದ್ದ ರೈಲಿನಿಂದ ಅಂತರರಾಷ್ಟ್ರೀಯ ಗಡಿಗೆ ಧುಮುಕಿದ ಓರ್ವ ಮಹಿಳೆ ಸೇರಿ ನಾಲ್ವರನ್ನು ಅಮೆರಿಕ ಗಡಿ ಭದ್ರತಾ ಪಡೆ ಬಂಧಿಸಿದೆ. ಬಂಧಿತರಲ್ಲಿ ಓರ್ವ ಡೊಮಿನಿಕ್ ರಿಪಬ್ಲಿಕ್ ಮೂಲದವನು ಎಂದು ಗೊತ್ತಾಗಿದೆ. ಗಾಯಗೊಂಡಿದ್ದ ಮಹಿಳೆ ನಡೆಯಲು ಸಾಧ್ಯವಾಗದ್ದರಿಂದ ಆಕೆಯನ್ನು ಅಲ್ಲಿಗೆ ಬಿಟ್ಟು ತೆರಳಾಗಿತ್ತು. ಪೊಲಿಸರು ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ವಲ್ಪ ಸಮಯದಲ್ಲೇ ಉಳಿದ ಮೂವರನ್ನೂ ಬಂಧಿಸಲಾಗಿದೆ. ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆ ವೇಳೆ ಈ ನಾಲ್ವರೂ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ್ದು ದೃಢಪಟ್ಟಿದೆ. ಉಳಿದ ಮೂವರನ್ನು ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್ 212 ಹಾಗೂ 237 ಅಡಿಯಲ್ಲಿ ಗಡೀಪಾರು ಮಾಡಲು ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ವಾಟರ್ ಕ್ರಾಫ್ಟ್ ಓಡಿಸುತ್ತಿದ್ದ ವೇಳೆ 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ನಡೆದಿದೆ. ತೆಲಂಗಾಣದ ವೆಂಕಟರಮಣ ಪಿಟ್ಟಲ ಮೃತ ಭಾರತೀಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪಿಟ್ಟಲ ಬಾಡಿಗೆಗೆ ಪಡೆದ ಯಮಹಾ ಪರ್ಸನಲ್ ವಾಟರ್ ಕ್ರಾಫ್ಟ್ (ಪಿಡಬ್ಲ್ಯೂಸಿ) ಓಡಿಸುತ್ತಿದ್ದರು, ಅದು ಮತ್ತೊಂದು ವಾಟರ್ ಕ್ರಾಫ್ಟ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಪಿಟ್ಟಲ ಅವರು ಇಂಡಿಯಾನಾಪೊಲಿಸ್‍ನ ಇಂಡಿಯಾನಾ ಯೂನಿವರ್ಸಿಟಿ ಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದು, ಮೇ ತಿಂಗಳಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.
ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಲಖನೌನಲ್ಲಿ ಬೋನಿ ಕಪೂರ್ ಹಾಗೂ ಯೋಗಿ ಆದಿತ್ಯನಾಥ್ ಭೇಟಿ ನಡೆದಿದ್ದು ಈ ವೇಳೆ ನೋಯ್ಡಾದಲ್ಲಿ ನಿರ್ಮಾಣ ಆಗಲಿರುವ ಫಿಲ್ಮ್ ಸಿಟಿ ಬಗ್ಗೆ ಮಾತನಾಡಿದ್ದಾರೆ. ನೋಯ್ಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಕಾರ್ಯ ನಡೆಯಲಿದ್ದು ಅದರ ಉಸ್ತುವಾರಿಯನ್ನು ಬೋನಿ ಕಪೂರ್ ಪಡೆದಿದ್ದಾರೆ. ಬೋನಿ ಕಪೂರ್ ಅವರ ಒಡೆತನದ ‘ಬೇವ್ಯೂ ಪ್ರಾಜೆಕ್ಸ್ಟ್’ ಮತ್ತು ಭೂತಾನಿ ಗ್ರೂಪ್ ಸಹಯೋಗದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಲಿದೆ. ಮುಂಬರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಅನುಮತಿಗಳಿರುವ ಪತ್ರವನ್ನು ಯೋಗಿ ಆದಿತ್ಯನಾಥ್ ಅವರು ಬೋನಿ ಕಪೂರ್ಗೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಸೌಕರ್ಯಗಳು ಇರುವ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬುದು ಯೋಗಿ ಆದಿತ್ಯನಾಥ್ ಅವರ ಕನಸು. ಅದನ್ನು ಸಾಕಾರಗೊಳಿಸುವ ಅವಕಾಶವನ್ನು ತಮಗೆ ನೀಡಿದ್ದಕ್ಕಾಗಿ ಬೋನಿ ಕಪೂರ್…
ಬಾಲಿವುಡ್ ಚಿತ್ರರಂಗವನ್ನು ಆಳಿದವರಲ್ಲಿ ಕಪೂರ್ ಕುಟುಂಬ ಕೂಡ ಒಂದು. ಇಂದು ಕೂಡ ಕಪೂರ್ ಕುಟುಂಬದ ಸಾಕಷ್ಟು ಕುಟುಂಬದವರು ಹಿಂದಿ ಚಿತ್ರರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದಾರೆ. ಈ ಕುಟುಂಬದಲ್ಲಿ ಹಲವು ಸ್ಟಾರ್ ನಟ, ನಟಿಯರಿದ್ದಾರೆ. ಇವರ ಸಿನಿಮಾಗಳ ಜೊತೆಗೆ ಖಾಸಗಿ ಜೀವನದ ಬಗ್ಗೆಯೂ ಆಗಾಗ್ಗೆ ಸದ್ದು, ಸುದ್ದಿಗಳು ಆಗುತ್ತಿರುತ್ತವೆ. ಇದೇ ಕುಟುಂಬಕ್ಕೆ ಸೇರಿದ, 90-2000 ಸಮಯದಲ್ಲಿ ಬಾಲಿವುಡ್ ಅನ್ನು ಆಳಿದ ಕರಿಷ್ಮಾ ಕಪೂರ್ ಚಿತ್ರರಂಗದಿಂದ ಬಹುತೇಕ ದೂರಾಗಿದ್ದರು, ಇದೀಗ ಬಾಲಿವುಡ್ಗೆ ಮರಳಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕರಿಷ್ಮಾ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಸರಿದರು. ನಟಿಯಾಗಿದ್ದಂಗ ಚಿನ್ನದಂಥಹಾ ದಿನಗಳನ್ನು ನೋಡಿದ್ದ ನಟಿಮದುವೆಯಾದ ಬಳಿಕ ನರಕವನ್ನೇ ನೋಡಿದ್ದರು. ತಮ್ಮ ದಾಂಪತ್ಯದ ಬಗ್ಗೆ ಕರಿಷ್ಮಾ ಹಿಂದೊಮ್ಮೆ ಮಾತನಾಡಿದ್ದರು. ಅದೀಗ ಮತ್ತೆ ಸುದ್ದಿಯಾಗಿದೆ. ಕರೀಷ್ಮಾ ಕಪೂರ್, ಸಂಜಯ್ ಕಪೂರ್ ಎಂಬುವರನ್ನು 2003 ರಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಿಗೆ ಸಂಜಯ್ನ ನಿಜವಾದ ವ್ಯಕ್ತಿತ್ವದ ಪರಿಚಯವಾಗಿದೆ. ಪತ್ನಿಗೆ ಪತಿ ಸಂಜಯ್ ಕಪೂರ್ ತಮ್ಮ ಗೆಳೆಯರೊಟ್ಟಿಗೆ ಮಲಗುವಂತೆ…
ಜಪಾನಿನ ಕಂಪನಿಯೊಂದು ತಯಾರಿಸಿದ ಖಾಸಗಿ ರಾಕೆಟ್ ಉಡಾವಣೆಯಾದ ಕೆಲವೇ ಹೊತ್ತಿನಲ್ಲಿ ಸ್ಫೋಟಗೊಂಡಿದೆ. ಟೋಕಿಯೋ ಮೂಲದ ಸ್ಟಾರ್ಟ್ ಅಪ್ ಸ್ಪೇಸ್ ಒನ್ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಉಡಾವಣೆಯಾದ 51 ನಿಮಿಷಯದಲ್ಲಿ ಉಪಗ್ರಹ ಕಕ್ಷೆಗೆ ಸೇರುವ ನಿರೀಕ್ಷೆಯನ್ನು ಸಂಸ್ಥೆ ಮಾಡಿತ್ತು. ಆದರೆ ನಿರೀಕ್ಷೆ ಉಲ್ಟ್ ಹೊಡೆದಿದೆ. ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೊದಲ ಜಪಾನಿನ ಖಾಸಗಿ ಸಂಸ್ಥೆಯ ಪ್ರಯತ್ನ ವಿಫಲವಾಗಿದೆ. ಕೈರೋಸ್ ರಾಕೆಟ್ ಪಶ್ಚಿಮ ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ನಲ್ಲಿರುವ ಸ್ಟಾರ್ಟ್‌ಅಪ್‌ನ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ಸೆಕೆಂಡುಗಳ ನಂತರ, ರಾಕೆಟ್ ಜ್ವಾಲೆಯ ಚೆಂಡಾಯಿತು. ಉಪಗ್ರಹ ಸ್ಫೋಟಗೊಂಡು ಉಡಾವಣಾ ಪ್ಯಾಡ್ ಪ್ರದೇಶದಲ್ಲಿ ಕಪ್ಪು ಹೊಗೆ ತುಂಬಿತ್ತು. ಉಡಾವಣೆಯಾದ ಸುಮಾರು 51 ನಿಮಿಷಗಳ ಹೊತ್ತಿಗೆ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಭರವಸೆಯನ್ನು ಕೈರೋಸ್ ಹೊಂದಿತ್ತು. ಆದರೆ ಪ್ರಯತ್ನ ವಿಫಲವಾಗಿದೆ. ವಿಫಲತೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪೇಸ್ ಒನ್ ಸಂಸ್ಥೆ ತಿಳಿಸಿದೆ.
ಸ್ಯಾಂಡಲ್‌ವುಡ್ ನಟಿ ಪವಿತ್ರಾ ಗೌಡ ಸದ್ಯ ತಮ್ಮ ಕೈಯಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಮೂಲಕ ಸುದ್ದಿಯಾಗ್ತಿದ್ದಾರೆ. ಪವಿತ್ರಾ ತಮ್ಮ ಕೈ ಮೇಲೆ 777 ಎಂದು ಟ್ಯಾಟು ಹಾಕಿಸಿಕೊಂಡಿದ್ದು ಇದನ್ನು ಬಿಗ್ ಬಾಸ್ ಖ್ಯಾತಿಯ ನಟಿ ನೀತು ವನಜಾಕ್ಷಿ ಹಾಕಿದ್ದಾರೆ. ಪವಿತ್ರಾ ಗೌಡ, ನೀತು ವನಜಾಕ್ಷಿ ಬಳಿ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ತಮ್ಮ ಬಲಗೈ ಮಣಿಕಟ್ಟಿನ ಮೇಲೆ ‘777’ ಎಂದು ಟ್ಯಾಟೂ ಹಾಕಿಸಿಕೊಂಡಿರುವ ಪವಿತ್ರಾ ಗೌಡ, ನನ್ನ ಪ್ರೀತಿ ಪಾತ್ರರಿಗೆ ಟ್ಯಾಟೂ ಹಾಕಿದ್ದು ಎಂದು ಬರೆದುಕೊಂಡಿದ್ದಾರೆ. ನೀತು ಅವರ ಟ್ಯಾಟೂ ಸ್ಟುಡಿಯೋಗೆ ಭೇಟಿ ನೀಡಿ ಅವರ ಕೈಯಲ್ಲಿಯೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇನ್ನೂ ಪವಿತ್ರಾ ಕೈಗೆ ‘777’ ಎಂದು ಟ್ಯಾಟೂ ಹಾಕಿಸಿಕೊಂಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. 777 ಅಂದರೆ ಎನು? ಆದರೆ ಈ ಬಗ್ಗೆ ಪವಿತ್ರಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ತೆಲುಗು ನಟ ರಾಮ್ ಚರಣ್ ಪತ್ನಿ ಉಪಾಸನಾ ತಮ್ಮ ತಾತನ ಜೊತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ರಾಮಲಲ್ಲಾ ಪ್ರತಿಷ್ಠಾಪನೆ ದಿನ ಪತಿ ರಾಮ್ ಚರಣ್ ಮತ್ತು ಮಾವ ಚಿರಂಜೀವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಉಪಾಸನಾ ಹೋಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ತಾತಾನ ಜೊತೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ. ತಾತ ಹಾಗೂ ಕುಟುಂಬದ ಕೆಲ ಸದಸ್ಯರ ಜೊತೆ ಅಯೋಧ್ಯೆಗೆ ತೆರಳಿದ್ದ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಉಪಾಸನಾ ಕನಸಾಗಿದೆ. ಅದಕ್ಕಾಗಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದ ಆ ಬಗ್ಗೆ ಉಪಾಸನ ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲೇ ಆಸ್ಪತ್ರೆಯ ಕೆಲಸವನ್ನು ಶುರು ಕೂಡ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.