ಕಾರ್ಕಸ್: ವೆನಿಜುವೆಲಾದ ಅಧ್ಯಕ್ಷರಾಗಿ ನಿಕೋಲಸ್ ಮಡುರೊ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚುನಾವಣಾ ಅಕ್ರಮ ಆರೋಪಗಳು ಕೇಳಿ ಬಂದ ಹೊರತಾಗಿಯೂ ನಿಕೋಲಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿಕೋಲಸ್ ಮಡುರೊ ಮೂರನೆಯ ಭಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಅಧಿಕಾರಾವಧಿ ಮುಂದಿನ ಆರು ವರ್ಷಗಳವರೆಗೆ ಮುಂದುವರೆಯಲಿದೆ. ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕೋಲಸ್ ಮಡುರೊ ಶೇ. 51ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದು, ವಿರೋಧ ಪಕ್ಷದ ನಾಯಕ ಜೌನ್ ಗೈಡೊ ಶೇ. 44ರಷ್ಟು ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯಸ್ಥ ಎಲ್ವಿಸ್ ಅಮೊರೊಸ್ ಘೋಷಿಸಿದ್ದರು. ಈ ಘೋಷಣೆ ಬಳಿಕ, ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ವಿದೇಶಿ ನಾಯಕರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಜೌನ್ ಗೈಡೊ ಪ್ರತಿಭಟನೆ ನಡೆಸಿದ್ದರು.
Author: Author AIN
ರ್ಯಾಪರ್ ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ‘ಕಾಟನ್ ಕ್ಯಾಂಡಿ’ ಹೆಸರಿನ ಹಾಡು ಬಿಡುಗಡೆ ಮಾಡಿದ್ದು ಹಾಡು ಸೂಪರ್ ಹಿಟ್ ಆಗಿದೆ. ಬೇರೆ ಬೇರೆ ಸೆಲೆಬ್ರಿಟಿಗಳಿಂದ ತಮ್ಮ ಹಾಡಿಗೆ ರೀಲ್ಸ್ ಮಾಡಿಸುತ್ತಿದ್ದು ಇದೀಗ ಚಂದನ್ ಶೆಟ್ಟಿ ವಿರುದ್ಧ ಇದೀಗ ಕೃತಿ ಚೌರ್ಯ ಆರೋಪ ಕೇಳಿ ಬಂದಿದೆ. ಚಂದನ್ ಶೆಟ್ಟಿ ತಮ್ಮ ಹಳೆಯ ಹಾಡಿನ ಟ್ಯೂನ್ ಕದ್ದು, ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ಬಳಸಿಕೊಂಡಿದ್ದು, ತಾವು ಚಂದನ್ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ. ಯುವರಾಜ್ ಹೆಸರಿನ ಮತ್ತೊಬ್ಬ ರ್ಯಾಪರ್, ಚಂದನ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ತಾನು ಆರು ವರ್ಷದ ಹಿಂದೆ ಬಿಡುಗಡೆ ಮಾಡಿರುವ ‘ವೈ ಬುಲ್ ಪಾರ್ಟಿ’ ಹಾಡಿನ ಮೊದಲ ಪಲ್ಲವಿ ಹಾಗೂ ಎರಡನೇ ಚರಣ ನಕಲು ಮಾಡಿ ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಚಂದನ್ ಶೆಟ್ಟಿಯೇ ಈ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದೆ ಆದರೆ ಅವರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ನನ್ನ ಬಳಿಯೂ ಅವರು ಈ ಬಗ್ಗೆ ಕೇಳಿಲ್ಲ. ಹಾಗಾಗಿ ಈಗ ನಾನೇ…
ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯನ್ನ ಆಸ್ಟ್ರೇಲಿಯಾ 3-1 ಅಂತರದಲ್ಲಿ ಗೆದ್ದಿದೆ. ಈ ಸರಣಿಯುದ್ದಕ್ಕೂ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು, ಆಸೀಸ್ ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಸ್ ಜೊತೆಗಿನ ಅವರ ಜಗಳ ಚರ್ಚೆಯ ವಿಷಯವಾಯಿತು. ಇನ್ನೂ ಇದರ ನಡುವೆ ಉತ್ತರದ ಪ್ರದೇಶದ ವೃಂದಾವನದಲ್ಲಿರುವ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭೇಟಿ ನೀಡಿದ್ದಾರೆ. ಈ ಭೇಟಿಯ ವೇಳೆ ಆಶೀರ್ವಾದ ಪಡೆದ ಕೊಹ್ಲಿಗೆ ಗುರೂಜಿ ಕೆಲ ವಿಶೇಷ ಸಲಹೆಗಳನ್ನು ನೀಡಿದ್ದಾರೆ. ವಿರುಷ್ಕಾ ಜೋಡಿಯ ಭೇಟಿಗೆ ಸಂತೋಷ ವ್ಯಕ್ತಪಡಿಸಿದ ಪ್ರೇಮಾನಂದ ಜಿ ಮಹಾರಾಜ್, ಯಶಸ್ಸಿನ ಉತ್ತುಂಗಕ್ಕೇರಿದರೂ ನೀವಿಬ್ಬರೂ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿರುವುದು ದೊಡ್ಡ ವಿಷಯ ಎಂದರು. ಅಲ್ಲದೆ ಕಳಪೆ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯನ್ನು ಸಂತೈಸುವ ಮಾತುಗಳನ್ನಾಡಿದರು. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಕ್ರಿಕೆಟ್ ಕೂಡ ಆಧ್ಯಾತ್ಮಿಕ ಅಭ್ಯಾಸ ಎಂದು ಬಣ್ಣಿಸಿದ ಪ್ರೇಮಾನಂದ ಜಿ ಮಹಾರಾಜ್, ಅಭ್ಯಾಸ ನಡೆಸುವುದನ್ನು ಎಂದಿಗೂ ಬಿಡಬಾರದು ಎಂದರು.…
ಶೃಂಗೇರಿ, ಜ. 11: ಸಿ ಟಿ ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿeಮ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಟೀಕಿಸಿದ್ದಾರೆ. ಶೃಂಗೇರಿಯಲ್ಲಿ ಅವರು ಮಾಧ್ಯಮದವರಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಸಿ.ಟಿ. ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ ಎಂದು ಕೇಳಿದಾಗ, “ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿದ ನಂತರ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. https://ainlivenews.com/heres-the-solution-to-get-your-loan-back-its-enough-if-you-do-this/ ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದೇನೆ ಕ್ಷಮೆ ಕೇಳುತ್ತೇನೆ ಎಂದಿದ್ದರೆ…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದೆ. ನಡು ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿರುವ ಪ್ರಸಂಗ ಬೆಳಕಿಗೆ ಬರುತ್ತಿವೆ. ಅದರಂತೆಯೇ ಮತ್ತೊಂದು ಘಟನೆ ಇದೀಗ ವರದಿಯಾಗಿದೆ. ಹೌದು ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ಗಾಡಿ ಓವರ್ ಟೆಕ್ ವಿಚಾರಕ್ಕೆ ಶುರುವಾದ ಫೈಟ್ ಅವಾಚ್ಯ ಶಬ್ದಗಳ ಬಳಕೆವರೆಗೆ ಮುಂದುವರೆದಿದೆ. https://ainlivenews.com/heres-the-solution-to-get-your-loan-back-its-enough-if-you-do-this/ ಕೆಟ್ಟ ಕೆಟ್ಟ ಪದಗಳಿಂದ ಇಬ್ಬರು ಚಾಲಕರು ಜಗಳ ಮಾಡಿದ್ದಾರೆ. ಅದಲ್ಲದೆ ಮಧ್ಯ ರಸ್ತೆಯಲ್ಲಿ ಕಾರಿನ ಒಳಗಡೆ ಕೂತು ಮಧ್ಯ ಬೆರಳು ತೋರಿಸಿ ಅಸಭ್ಯ ವರ್ತನೆ ಕೂಡ ತೋರಿದ್ದಾರೆ. ಈ ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮೈಸೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷ ಸಂಘಟನಾ ಸಭೆಗೆ ನಾನು ಭಾಗಿಯಾಗಲ್ಲ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾಳೆಯ ಸಭೆಯಲ್ಲಿ ನಾನು ಭಾಗಿಯಾಗಲ್ಲ ಎಂದಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಓಡಾಡುತ್ತಿದ್ದೇನೆ. ಹೀಗಾಗಿ ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ. ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಬೇಸರ ಕೂಡ ಇಲ್ಲ. ದಿಶಾ ಸಭೆಗೆ ನಮ್ಮ ನಾಯಕರು ಬಂದ ವೇಳೆ ನಾನು ಹೋಗಬೇಕಿತ್ತು. ಆರೋಗ್ಯ ಸರಿಯಿಲ್ಲದ ಕಾರಣದಿಂದ ನಾನು ಹೋಗಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. https://ainlivenews.com/heres-the-solution-to-get-your-loan-back-its-enough-if-you-do-this/ ನನಗೆ ಮನೆಯ ಜವಾಬ್ದಾರಿ ಸ್ವಲ್ಪ ಜಾಸ್ತಿಯಾಗಿದೆ. ಮತ್ತೆ ಕ್ಷೇತ್ರ ನೀವೇ ನೋಡಿದ್ದೀರಿ, 900 ಬಡಾವಣೆಗಳು ಹಸ್ತಾಂತರ ಮಾಡಿದ್ದಾರೆ. ಸುಮಾರು 10 ವರ್ಷ 15 ವರ್ಷದಿಂದ ಮುಡಾನೂ ಅಭಿವೃದ್ಧಿ ಮಾಡಿಲ್ಲ. ನಗರಪಾಲಿಕೆಯೂ ಅಭಿವೃದ್ಧಿಯಾಗಬೇಕಿದೆ. ಶುಕ್ರವಾರ ಮುಖ್ಯಮಂತ್ರಿಗಳ ಸಭೆಯಲ್ಲಿ ಹೇಳಿದ್ದೇವೆ. ಈ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಹುಕ್ಕೇರಿ – ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ, ಶ್ರೀ ಗುರುಶಾಂತೇಶ್ವರ ಪ್ರೌಢ ಶಾಲೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಸಂಸ್ಕ್ರತ ಮತ್ತು ವೇದ ಪಾಠ ಶಾಲೆ ಶ್ರೀ ಗುರುಶಾಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ “ಹುಕ್ಕೇರೀಶರ ಉತ್ಸವ 2025” ನೇ ಸಾಲಿನ ಸಾಧನಾ ಸಿರಿ ಪ್ರಶಸ್ತಿ ಕೊಣ್ಣೂರು ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ|| ಪವಾಡೇಶ್ವರ ಮಹಾಸ್ವಾಮಿಗಳವರಿಗೆ , ರಾಯಬಾಗ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಅರುಣ ಐಹೊಳೆ ಅವರಿಗೆ,ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ನಿಲಜಗಿ ಅವರಿಗೆ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಪಾಟೀಲ ಅವರಿಗೆ ಅವಧೂತ ಶ್ರೀ ವಿನಯ ಗುರೂಜೀ ಅವರು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರಿರಂಗಪಟ್ಟಣ ಬೇಬಿಮಠದ ಶ್ರೀ ಡಾ|| ತ್ರೀನೇತ್ರ ಮಹಾಂತ ಸ್ವಾಮಿಗಳು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವಧೂತ ಶ್ರೀ ವಿನಯ ಗುರೂಜೀ…
ಶೃಂಗೇರಿ, ಜ.11: “ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ ಫಲಾಫಲ ದೇವರಿಗೆ ಬಿಡೋಣ. ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಶೃಂಗೇರಿಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು. https://ainlivenews.com/heres-the-solution-to-get-your-loan-back-its-enough-if-you-do-this/ ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಗಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ನನಗೆ ಯಾರ ಬೆಂಬಲವೂ ಬೇಡ. ಈ ವಿಚಾರದಲ್ಲಿ ಯಾವುದೇ ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು. ಟೆಂಪಲ್ ರನ್ ಎನ್ನುವವರು, ದೇವಾಲಯ ಮುಚ್ಚಿಬಿಡಿ: ನೀವು ದೇವಾಲಯ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬ್ಯಾಕ್ ಟು ಬ್ಯಾಕ್ ಚಿತ್ರ ಒಪ್ಪಿಕೊಂಡಿದ್ದಾರೆ. ಇದರ ಮಧ್ಯೆ ಶಸ್ತ್ರ ಚಿಕಿತ್ಸೆ ಕೂಡ ನಡೆದಿದೆ. ಶಿವಣ್ಣ ಕ್ಯಾನ್ಸರ್ ಫ್ರೀ ಆಗಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಶಿವಣ್ಣ ಫುಲ್ ಆಯಕ್ಟೀವ್ ಆಗಿದ್ದಾರೆ. ಹೌದು ಶಿವರಾಜ್ಕುಮಾರ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಮಿಯಾಮಿಯಲ್ಲಿ ಅವರು ಸುತ್ತಾಟ ನಡೆಸುತ್ತಿದ್ದಾರೆ. ಮುಂದಿನ ಕೆಲ ದಿನಗಳನ್ನು ಅವರು ಅಲ್ಲಿಯೇ ಕಳೆಯಲಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಅವರು ಮರಳಲಿದ್ದಾರೆ. ಸದ್ಯ ಶಿವರಾಜ್ಕುಮಾರ್ ಅವರು ಅಮೆರಿಕದಲ್ಲೇ ಇದ್ದಾರೆ. ಜನವರಿ 24ರವರೆಗೆ ಅಲ್ಲಿಯೇ ಇರಲಿದ್ದಾರೆ. ಈಗ ಅವರು ಚೇತರಿಕೆ ಕಾಣುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಇರುವ ಪ್ರದೇಶಗಳನ್ನು ಅವರು ವೀಕ್ಷಿಸುತ್ತಾ ಇದ್ದಾರೆ. ಸಮುದ್ರ ತೀರದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಶಿವರಾಜ್ಕುಮಾರ್ ಅವರ ಲುಕ್ ಗಮನ ಸೆಳೆದಿದೆ. ಅವರು ಮೊದಲಿನ ಎನರ್ಜಿಯನ್ನು ಮತ್ತೆ ತಂದುಕೊಂಡಂತೆ ಕಾಣುತ್ತಿದೆ. ಶಿವರಾಜ್ಕುಮಾರ್ ಹಾಗೂ ಗೀತಾ ಅವರು ಅಮೆರಿಕಕ್ಕೆ ತೆರಳುವುದಕ್ಕೂ ಮೊದಲು ತಿರುಪತಿಗೆ ತೆರಳಿದ್ದರು. ಅಲ್ಲಿ ಅವರು ಕುಟುಂಬದ ಜೊತೆ ತೆರಳಿ ಮುಡಿಕೊಟ್ಟಿದ್ದರು.…
ಬೆಂಗಳೂರು: ಕೋಟಿ ಕೋಟಿ ಮೌಲ್ಯದ ಚಿನ್ನ ವಂಚನೆ ಮಾಡಿರುವ ಕೇಸ್‌ನಲ್ಲಿ ಸಿಲುಕಿಕೊಂಡಿರುವ ಐಶ್ವರ್ಯಗೌಡ ಬಗ್ಗೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದಲ್ಲಿ ಬಗೆದಷ್ಟು ಒಂದೊಂದೇ ವಂಚನೆಗಳು ಬಯಲಾಗ್ತಿವೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಸಾಕಷ್ಟು ಜನರಿಗೆ ವಂಚಿಸಿರುವ ಆರೋಪಿತೆ ಐಶ್ವರ್ಯ ಗೌಡಳ ಗಂಡ ಹೆಸರಿನಲ್ಲಿ ಇರುವ ಬೆನ್ಜ್ ಕಾರು ವಿನಯ್ ಕುಲಕರ್ಣಿಗೆ ಕೊಟ್ಟಿದ್ದೇನೆ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ರು. https://ainlivenews.com/heres-the-solution-to-get-your-loan-back-its-enough-if-you-do-this/ ಹೀಗಾಗಿ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಐಶ್ವರ್ಯ ಗೌಡ ಹಾಗೂ ವಿನಯ್ ಕುಲಕರ್ಣಿ ನಡುವೆ ವ್ಯವಹಾರಿಕ ಸಂಬಂಧ ಇದೆ ಎಂಬುದಕ್ಕೆ ಸಾಕ್ಷಿಯಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಐಶ್ವರ್ಯಗೌಡ ಬಳಿ ಮೂರು ಐಷಾರಾಮಿ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ ಆಡಿ, ಬಿಎಂಡಬ್ಲ್ಯೂ ಹಾಗೂ ಫಾರ್ಚುನರ್ ಕಾರುಗಳನ್ನು ಸೀಜ್ ಮಾಡಲಾಗಿತ್ತು. ಇದೀಗ ಮತ್ತೊಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಕೆಎ03 ಎನ್‌ಎನ್ 8181 ಸಂಖ್ಯೆಯ 60 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರನ್ನು ಸೀಜ್…