ಅಮೆರಿಕದ ಪೆನ್ಸಿಲ್ವೇನಿಯಾದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಯುವತಿ ಮೃತಪಟ್ಟಿದ್ದಾರೆ ಎಂದು ಭಾರತೀಯ ರಾಜಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಮೂಲದ ಉದ್ಯೋಗಿ ಅರ್ಶಿಯಾ ಜೋಶಿ(24) ಮಾ.21ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಿಲ್ಲಿ ಮೂಲದ ಜೋಶಿ, ತಮ್ಮ ಕಾರಿನಲ್ಲಿ ಪಯಣಿಸುವಾಗ ಅಪಘಾತವಾಗಿ ಮೃತಪಟ್ಟಿದ್ದಾರೆ. ಆಕೆಯ ಪೋಷಕರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Author: Author AIN
ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ಥಾನ ಭಾರತದೊಂದಿಗೆ ತನ್ನ ವ್ಯಾಪಾರ ಸಂಬಂಧ ವನ್ನು ಮತ್ತೆ ಸರಿಪಡಿಸಿಕೊಳ್ಳಲು ಯತ್ನಿಸುತ್ತಿದೆ. ಖುದ್ದು ಪಾಕ್‌ನ ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ಧಾರ್ ಈ ವಿಚಾರವನ್ನು ಪಾಕಿಸ್ಥಾನ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಲಂಡನ್‌ನಲ್ಲಿ ನಡೆದ ಪರಮಾಣು ಶಕ್ತಿ ಶೃಂಗಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಿಶಾಕ್ ಧಾರ್, “ಪಾಕಿಸ್ಥಾನಿ ಉದ್ಯಮಿಗಳಿಗೆ ಭಾರತದ ಜತೆಗೆ ವ್ಯಾಪಾರ ಸಂಬಂಧ ಹೊಂದುವ ಹಂಬಲ ವಿದೆ. ಈ ನಿಟ್ಟಿನಲ್ಲಿ ಆ ಸಂಬಂಧವನ್ನು ಮತ್ತೆ ಸರಿ ಪಡಿಸುವ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ’ ಎಂದಿದ್ದಾರೆ. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ವ್ಯಾಪಾರ ಸಂಬಂಧವನ್ನು ಪಾಕ್ ತಗ್ಗಿಸಿತ್ತು.
ದೇಶದ ಬೆನ್ನೆಲುಭಾಗಿರುವ ರೈತರಿಗೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಹಲವ ಯೋಜನೆಗಳು ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ರೈತರು ವೃದ್ಧಾಪ್ಯದಲ್ಲಿ ತೊಂದರೆ ಅನುಭವಿಸಬಾರದೆಂದು ಪ್ರಧಾನ ಮಂತ್ರಿ ಕಿಶನ್ ಮನ್ ಧನ್ ಎಂಬ ಹೊಸ ಯೋಜನೆಯನ್ನು ರಚಿಸಿದೆ. ಈ ಯೋಜನೆಯಿಂದ ಆರ್ಥಿಕ ಭದ್ರತೆ ದೊರೆಯಲಿದೆ ಎನ್ನಲಾಗಿದೆ. ಈ ಯೋಜನೆಯಡಿ ತಿಂಗಳಿಗೆ 55 ರೂ. ಪಾವತಿಸಿದರೆ, 60 ವರ್ಷ ಹೂಡಿಕೆಯ ನಂತರ ಪ್ರತಿ ತಿಂಗಳು 3 ಸಾವಿರ ರೂ.ಸಿಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಸರ್ಕಾರವು ಸಂಪೂರ್ಣವಾಗಿ ಬಡ ರೈತರಿಗಾಗಿ ಪ್ರಾರಂಭಿಸಿದೆ. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಸೇರಲು ಅರ್ಹರು. ಈ ಯೋಜನೆಯಡಿ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ಈ ಯೋಜನೆ ತಕ್ಷಣಕ್ಕೆ ಲಾಭ ನೀಡದಿದ್ದರೂ ರೈತರು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಇರಲು ಸಹಕಾರಿಯಾಗುತ್ತದೆ. ಈ ಪಿಎಂ ಕಿಸಾನ್ ಮನ್ ಧನ್ ಯೋಜನೆಯು ವೃದ್ಧಾಪ್ಯದಲ್ಲಿ ಪಿಂಚಣಿ ರೂಪದಲ್ಲಿ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕೊನೆಗಾಲದಲ್ಲಿ ಮಕ್ಕಳು ಕೈಬಿಟ್ಟಾಗ ಕಣ್ಣೀರು…
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಸಂಘಟನೆ ಉಗ್ರರ ದಾಳಿ ವಿಡಿಯೋ ಬಿಡುಗಡೆ ಮಾಡಿದೆ. ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ಉಗ್ರರು ಸುಮಾರು 150ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರು. ಬಂದೂಕುಧಾರಿಗಳು ಚಿತ್ರೀಕರಿಸಿದ ವೀಡಿಯೊವನ್ನು ಜಿಹಾದಿ ಗುಂಪು ಇಸ್ಲಾಮಿಕ್ ಸ್ಟೇಟ್ (ISIS) ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ. ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ ಮಸುಕುಧಾರಿಗಳು ಘೋಷಣೆ ಕೂಗುತ್ತಾ ಅಸಾಲ್ಟ್ ರೈಫಲ್ಗಳನ್ನು ಮತ್ತು ಚಾಕುಗಳನ್ನು ಹಿಡಿದು ಅಲ್ಲಿ ನೆರೆದಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ವಿಡಿಯೋದಲ್ಲಿ ದಾಳಿಕೋರರು ಹಲವಾರು ಸುತ್ತು ಗುಂಡುಗಳನ್ನು ಹಾರಿಸುತ್ತಿದ್ದು, ಈ ವೇಳೆ ಸುತ್ತಲಿನ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಷ್ಯಾದ ಸೈಟ್ ಮಾನಿಟರಿಂಗ್ ಗ್ರೂಪ್ ವರದಿ ಪ್ರಕಾರ ಈ ವೀಡಿಯೊ ಐಎಸ್ನ ಸುದ್ದಿ ವಿಭಾಗವಾದ ಅಮಾಕ್ ನ ಟೆಲಿಗ್ರಾಮ್ ಖಾತೆಯಲ್ಲಿ ಈ ವಿಡಿಯೋಗಳು ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.
ಟಾಲಿವುಡ್ ಬ್ಯೂಟಿ ಸಮಂತಾ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿ. ನಟನೆ ಹಾಗೂ ಸೌಂದರ್ಯ ಎರಡರಲ್ಲೂ ಸೈ ಎನಿಸಿಕೊಂಡಿರುವ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಈಗ ಗುಣಮುಖರಾಗುತ್ತಿದ್ದಂತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋ ಹಂಚಿಕೊಂಡು ಅಭಿಮಾನಿಗಳ ನಿದ್ದೆ ಕೆಡಿಸಿದ್ದಾರೆ. ಅನಾರೋಗ್ಯದಿಂದ ಹೊರ ಬಂದಿರುವ ಸಮಂತಾ ಮತ್ತೆ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಖತ್ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಬ್ಲ್ಯಾಕ್ ಬ್ಯೂಟಿಯಾಗಿ ಮಿಂಚುತ್ತಾ ಪಡ್ಡೆಹುಡುಗರ ನಿದ್ದೆ ಕದ್ದಿರುವ ಸ್ಯಾಮ್, ‘ಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ. ಆದರೆ ಈಗ ನಾನು ಡ್ರ್ಯಾಗನ್’ ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಬ್ಲ್ಯಾಕ್ ಕಲರ್ ಡ್ರೆಸ್ ನಲ್ಲಿ ಮಿಂಚುತ್ತಿರುವ ಸಮಂತಾ, ಜಾಕೆಟ್ ಬಟನ್ ತೆಗೆದು ಫೋಟೋಗಳಿಗೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಬೋಲ್ಡ್ ಫೋಟೋಶೂಟ್ ನಲ್ಲಿ ಸಮಂತಾ ಮಿಂಚುತ್ತಿದ್ದಾರೆ. ಗ್ಲಾಮರಸ್ ಫೋಟೋಗಳನ್ನು ಸಮಂತಾ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಯಶೋದಾ…
ಟಾಲಿವುಡ್ ಬ್ಯೂಟಿ ಸಮಂತಾ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿ. ನಟನೆ ಹಾಗೂ ಸೌಂದರ್ಯ ಎರಡರಲ್ಲೂ ಸೈ ಎನಿಸಿಕೊಂಡಿರುವ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಈಗ ಗುಣಮುಖರಾಗುತ್ತಿದ್ದಂತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಅನಾರೋಗ್ಯದಿಂದ ಹೊರ ಬಂದಿರುವ ಸಮಂತಾ ಮತ್ತೆ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಖತ್ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಬ್ಲ್ಯಾಕ್ ಬ್ಯೂಟಿಯಾಗಿ ಮಿಂಚುತ್ತಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಹಾಟ್ ಫೋಟೋ ಶೇರ್ ಮಾಡಿ, ‘ಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ. ಆದರೆ ಈಗ ನಾನು ಡ್ರ್ಯಾಗನ್’ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ಇದೀಗ ತಮ್ಮ ಕೆಲವು ಹಾಟ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಮಂತಾ. ‘ರಾಣಿಯಾಗಿ ನಾನು ಸೋತಿದ್ದೇನೆ, ಈಗ ನಾನು ಡ್ರ್ಯಾಗನ್’ ಎಂದು ಬರೆದುಕೊಂಡಿದ್ದಾರೆ. ಸಮಂತಾ ನಿಜಕ್ಕೂ ಡ್ರ್ಯಾಗನ್, ಸಮಸ್ಯೆಗಳಿಗೆ ಅಳುತ್ತಾ ಕೂರುತ್ತಿದ್ದ ಹುಡುಗಿಯಾಗಿದ್ದ ಸಮಂತಾ ಈಗ ದಿಟ್ಟತನದಿಂದ ಎದುರಿಸುವುದು…
ಅಪ್ರಾಪ್ತ ಬಾಲಕಿಯನ್ನು ಆಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋಷಿಯಲ್ ಮೀಡಿಯಾ ತಾರೆ ಸೋನು ಗೌಡ ಬಂಧನಕ್ಕೆ ಒಳಗಾಗಿದ್ದಾರೆ. ಇಂದು (ಮಾರ್ಚ್ 24) ಆಕೆಯನ್ನು ರಾಯಚೂರಿಗೆ ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ರಾಯಚೂರಿನ ಬಾಲಕಿಯನ್ನು ದತ್ತು ಪಡೆದುಕೊಂಡಿರುವುದಾಗಿ ಸೋನು ಗೌಡ ವಿಡಿಯೋ ಮೂಲಕ ತಿಳಿಸಿದ್ದರು. ಆದರೆ ಸೋನು ಗೌಡ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದಾರೆಂದು ಆರೋಪಿಸಿ ಜಿಲ್ಲಾ ಮಕ್ಕಳು ಹಕ್ಕು ರಕ್ಷಣಾ ಘಟಕದ ಅಧಿಕಾರಿ ದೂರು ನೀಡಿದ್ದರು. ದೂರಿನ ಅನ್ವಯ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಬಂಧಿಸಿದ್ದರು. ಇಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡ ಅವರನ್ನು ಮಗುವಿನ ಊರಾದ ರಾಯಚೂರಿನ ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮಕ್ಕೆ ಕರೆತಂದು ಸ್ಥಳ ಮಹಜರು ಮಾಡಿದರು. ಮಗು ಪಡೆದುಕೊಂಡು ಹೋದ ಸ್ಥಳ,ಗ್ರಾಮದಲ್ಲಿ ಓಡಾಡಿ ಸ್ಥಳಗಳಲ್ಲಿ ಸ್ಥಳ ಮಹಜರು ಮಾಡಿದರು. ಅಲ್ಲದೆ, ಬಾಲಕಿಯನ್ನ ಗ್ರಾಮದಿಂದ ಕರೆದುಕೊಂಡು ಹೋಗಿದ್ದರ ಬಗ್ಗೆ ವಿಚಾರಣೆಯನ್ನು ಸಹ ಮಾಡಿದರು. ಸೋನುಗೌಡ ಜೊತೆಗೆ ಬ್ಯಾಡರಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ಬಂದು ಸ್ಥಳ ಮಹಜರು…
ಯುದ್ಧ ಪೀಡಿತ ಗಾಜಾಗೆ ಜೀವರಕ್ಷಕ ನೆರವು ಹರಿದು ಬರಬೇಕಾದ ಸಮಯ ಇದು. ಅಲ್ಲಿಯವರ ಹಸಿವು ನೈತಿಕ ಅಕ್ರೋಶ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ. ಅಲ್ಲದೆ ತಕ್ಷಣವೇ ಯುದ್ಧ ನಿಲ್ಲಿಸಬೇಕು ಎಂದು ಇಸ್ರೇಲ್ ಹಾಗೂ ಹಮಾಸ್ ಜೊತೆ ಅವರು ಮನವಿ ಮಾಡಿದ್ದಾರೆ. ರಫಾ ನಗರದ ಸಮೀಪ ಇರುವ ಗಾಜಾದ ಈಜಿಪ್ಟ್ ಭಾಗದ ಗಡಿಯಲ್ಲಿ ಪ್ರತಿಕ್ರಿಯಿಸಿದ ಅವರು, ಹೆಚ್ಚಿನ ಆಕ್ರಮಣವು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಲಿವೆ. ಪಾಲೆಸ್ಟೀನಿಯನ್ನರಿಗೆ ಹಾಗೂ ಒತ್ತೆಯಾಳುಗಳಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಲಿವೆ ಎಂದಿದ್ದಾರೆ. ಗಾಜಾಗೆ ನೆರವು ಸಾಗಿಸುವುದಕ್ಕೆ ಉಂಟಾಗಿರುವ ತೊಂದರೆಗಳ ಬಗ್ಗೆ ಅವರು ಪದೇ ಪದೇ ಪ್ರಸ್ತಾಪಿಸಿದರು.’ಈ ಗಡಿ ಭಾಗದಿಂದ ಹೃದಯ ವಿದ್ರಾವಕ ಹಾಗೂ ಹೃದಯ ಶೂನ್ಯ ಪರಿಸ್ಥಿತಿಗಳನ್ನು ನಾವು ನೋಡಬಹುದು. ಪರಿಹಾರ ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳ ಉದ್ದದ ಸರತಿ ಸಾಲು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ಹಸಿವಿನ ಕರಾಳತೆ ಕಾಣಿಸುತ್ತದೆ’ ಎಂದರು. ಗಾಜಾಗೆ ಮಾನವೀಯ ನೆರವು ಸಿಗುವಂತೆ, ಸಹಾನುಭೂತಿಯ ರಂಜಾನ್ ಮನೋಭಾವದಲ್ಲಿ ಇಸ್ರೇಲ್ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ…
ಆಗ್ನೇಯ ಬ್ರೆಜಿಲ್ ನಲ್ಲಿ ಸಂಭವಿಸಿದ ಭೀಕರ ಚಂಡಮಾರುತದ ಪರಿಣಾಮ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಾಜಧಾನಿಯಿಂದ 70 ಕಿಲೋಮೀಟರ್ (45 ಮೈಲಿ) ಒಳನಾಡಿನ ಪೆಟ್ರೋಪೊಲಿಸ್ ನಗರದಲ್ಲಿ ಚಂಡಮಾರುತದಿಂದಾಗಿ ಮನೆ ಕುಸಿದಿದ್ದು, ನಾಲ್ವರು ಮತಪಟ್ಟಿದ್ದಾರೆ ಎಂದು ರಿಯೊ ರಾಜ್ಯ ಸರ್ಕಾರ ತಿಳಿಸಿದೆ. 16 ಗಂಟೆಗಳಿಗೂ ಹೆಚ್ಚು ಕಾಲ ಅವಶೇಷಗಳಡಿ ಹೂತುಹೋಗಿದ್ದ ಬಾಲಕಿಯನ್ನು ಎಎಫ್ಪಿ ತಂಡ ರಕ್ಷಿಸಿದೆ. ಸಾಂತಾ ಕ್ರೂಜ್ ಡಾ ಸೆರ್ರಾದಲ್ಲಿ ಈ ಹಿಂದೆ ಟ್ರಕ್ ನದಿಗೆ ಬಿದ್ದಾಗ ವ್ಯಕ್ತಿಯೊಬ್ಬರು ಮುಳುಗಿ ಸಾವನ್ನಪ್ಪಿದ್ದರು. ಟೆರೆಸೊಪೊಲಿಸ್ನಲ್ಲಿ, ಮನೆ ಕುಸಿತದಲ್ಲಿ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ ಅರೈಯಲ್ ಡೊ ಕ್ಯಾಬೊದಲ್ಲಿ, ಅಲ್ಲಿ ಒಬ್ಬ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ತೀವ್ರ ಮಳೆ ಮತ್ತು ಕ್ವಿಟಾಂಡಿನ್ಹಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಪೆಟ್ರೋ ಪೊಲಿಸ್ ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ರಿಯೊ ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೊ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಬಳಿಕ ಉಕ್ರೇನ್ ಭಾನುವಾರ ರೆಡ್ ಅಲರ್ಟ್ ಘೋಷಿಸಿದೆ. ದಾಳಿಯ ಮೊದಲು ಉಕ್ರೇನ್ ನ ಹಲವಾರು ಭಾಗಗಳಿಗೆ ವಾಯು ದಾಳಿಯ ಎಚ್ಚರಿಕೆಯನ್ನು ಘೋಷಿಸಲಾಯಿತು. ಉಕ್ರೇನ್ ಅಲಾರಂ ನಕ್ಷೆಯು ಪ್ರಸ್ತುತ ದೇಶದ ಎಲ್ಲಾ ಭಾಗಗಳನ್ನು ರೆಡ್ ಅಲರ್ಟ್ ಅಡಿಯಲ್ಲಿ ತೋರಿಸುತ್ತದೆ. ಕ್ರಿಮಿಯಾದ ಸೆವಾಸ್ಟೋಪೋಲ್ ನಗರದ ಕಡೆಗೆ ಉಕ್ರೇನ್ ಹಾರಿಸಿದ ಕ್ಷಿಪಣಿಗಳ ಚಂಡಮಾರುತವನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಹೇಳಿಕೆಯಲ್ಲಿ ತಿಳಿಸಿದೆ. ಕ್ಷಿಪಣಿ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ನಗರದ ಗವರ್ನರ್ ಮಿಖಾಯಿಲ್ ರಜ್ವೊಝಾಯೆವ್ ತಿಳಿಸಿದ್ದಾರೆ. “ಆರಂಭಿಕ ಮಾಹಿತಿಯ ಪ್ರಕಾರ, 10 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ” ಎಂದು ರಜ್ವೊಝಾಯೆವ್ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ, ರಷ್ಯಾ ಉಕ್ರೇನ್ ನ ಇಂಧನ ಮೂಲಸೌಕರ್ಯದ ಮೇಲೆ ಬೃಹತ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಪ್ರಾರಂಭಿಸಿತು, ಇದು ಕನಿಷ್ಠ ಐದು ಜನರನ್ನು ಕೊಂದಿತು ಮತ್ತು ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ವಿದ್ಯುತ್ ಇಲ್ಲದೆ ಮಾಡಿತು. ವೈಮಾನಿಕ ದಾಳಿಯಲ್ಲಿ 60 ಕ್ಕೂ…