ಇದೇ ಮೊದಲ ಬಾರಿಗೆ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಸೌದಿ ಅರೇಬಿಯಾ ತಯಾರಿ ನಡೆಸುತ್ತಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಲು ಸೌದಿ ಸಜ್ಜಾಗಿದೆ. 27 ವರ್ಷದ ರೂಮಿ ಅಲ್ಕಹ್ತಾನಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಸೌದಿ ಅರೇಬಿಯಾದ ಮಹಿಳಾ ಸಬಲೀಕರಣಕ್ಕೆ ಮಹತ್ವದ ಮೈಲಿಗಲ್ಲಾಗಲಿದೆ. ರೂಮಿ ಅಲ್ಕಹ್ತಾನಿ ಅವರು ಮಲೇಷ್ಯಾದಲ್ಲಿನ ಮಿಸ್ ಏಷ್ಯಾ ಮತ್ತು ಮಿಸ್ ಅರಬ್ ಪೀಸ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸಿದ್ದರು. ಇದಲ್ಲದೇ ಮಿಸ್ ಮಿಡಲ್ ಈಸ್ಟ್ ಮತ್ತು ಮಿಸ್ ಅರಬ್ ವರ್ಲ್ಡ್ ಪೀಸ್ 2021 ರಂತಹ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರೂಮಿ ತಾವು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸೋದಾಗಿ ತಿಳಿಸಿದ್ದಾರೆ. ಅರೇಬಿಕ್,ಇಂಗ್ಲಿಷ್, ಫ್ರೆಂಚ್ ಮತ್ತು ಬಹು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ರೂಮಿ ಅಲ್ಕಹ್ತಾನಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅರಬ್ ರಾಷ್ಟ್ರವನ್ನು ಪ್ರತಿನಿಧಿಸುವ ಮೂಲಕ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಿವೆ.
Author: Author AIN
ಮುಂಬೈನಲ್ಲಿನ ಹುಕ್ಕಾ ಬಾರ್, ಹುಕ್ಕಾ ಪಾಪ್ಯೂಲರ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿ ಸೇರಿದಂತೆ ಇನ್ನೂ 14 ಮಂದಿಯನ್ನು ಬಂಧಿಸಿದ್ದರು. ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಹುಕ್ಕಾ ಪಾಪ್ಯೂಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಬಿಗ್ಬಾಸ್ ಹಿಂದಿ ಸೀಸನ್ 17ರ ವಿಜೇತ, ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರೂಖಿ ಸಹ ಸ್ಥಳದಲ್ಲಿದ್ದರು. ಅವರನ್ನೂ ಸೇರಿದಂತೆ ಅಲ್ಲಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ದಾಳಿಯ ವೇಳೆ 13,500 ಮೌಲ್ಯದ ಹುಕ್ಕಾ ಪಾಟ್ಗಳು, 4500 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸಿದಾಗ ಹಲವಾರು ಮಂದಿ ಸಿಗರೇಟು ಹಾಗೂ ಹುಕ್ಕಾ ಸೇವನೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಜಾಮೀನು ನೀಡಲು ಅವಕಾಶವಿದ್ದ ಕಾರಣ ಅವರನ್ನು ಆ ನಂತರ ಬಿಟ್ಟು ಕಳುಹಿಸಿದ್ದಾರೆ. ಮುನಾವರ್ ಫಾರೂಖಿ ಜನಪ್ರಿಯ ಸ್ಟಾಂಡಪ್ ಕಮಿಡಿಯನ್. ಕೆಲ ವರ್ಷಗಳ ಹಿಂದೆ ಮುನಾವರ್ ಫಾರೂಖಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗೆ ಇಳಿದಿದ್ದಾರೆ. ಶಿವರಾಜ್ ಕುಮಾರ್ ಪತ್ನಿಯ ಪರ ಪ್ರಚಾರ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಅವರು ನಟಿಸಿದ ಸಿನಿಮಾ, ಜಾಹೀರಾತುಗಳ ಮೇಲೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಕೆ ಆಗಿತ್ತು. ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್. ರಘು ಇತ್ತೀಚೆಗೆ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ‘ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಶಿವರಾಜ್ಕುಮಾರ್ ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್ಕುಮಾರ್ ಅವರ ಸಿನಿಮಾ, ಬಿಲ್ಬೋರ್ಡ್, ಜಾಹೀರಾತು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್, ಸೋಶಿಯಲ್ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದರು. ರಘು ಮನವಿಗೆ ಚುನಾವಣಾ ಆಯೋಗ…
ಇಂದು ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪತ್ನಿ ಉಪಾಸನಾ ಹಾಗೂ ಅತ್ತೆಯೊಂದಿಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ರಾಮ್ ಚರಣ್ ದಂಪತಿ ಆಗಾಗ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುತ್ತಿರುತ್ತಾರೆ. ಅಂತೆಯೇ ಈ ಭಾರಿಯೂ ಶೂಟಿಂಗ್ ನ ಮಧ್ಯೆ ಬಿಡುವು ಮಾಡಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ಮುಂಜಾನೆ ಪ್ರಾರ್ಥನೆ ಸೇವೆ, ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಜನ್ಮದಿನದಂದೇ ನಟ ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ರಾಮ್ ಚರಣ್ ದೇವಸ್ಥಾನಕ್ಕೆ ಬರುವ ವಿಷಯ ತಿಳಿದ ಭಕ್ತರು ಅವರನ್ನು ಸ್ವಾಗತಿಸಲು ಜಮಾಯಿಸಿದ್ದಾರೆ. ದೇವಸ್ಥಾನದಿಂದ ಹೊರಬರುತ್ತಿದ್ದಂತೆ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಮುಗಿಬಿದಿದ್ದಾರೆ. ರಾಮ್ ಚರಣ್ ಅವರು ಕೇಸರಿ ಬಣ್ಣದ ಶಾಲು ಹೊದ್ದುಕೊಂಡಿದ್ದರು. ನಟನ ಜೊತೆ ಅವರ ಪತ್ನಿ ಮಗಳನ್ನು ಎತ್ತಿಕೊಂಡಿದ್ದರು. ಉಪಾಸನಾ ಅವರು ಪಿಂಕು ಬಣ್ಣದ…
ಕಿಚ್ಚ ಸುದೀಪ್ ತಮ್ಮ ಮೇಲೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ನಿರ್ಮಾಪಕ ಎನ್.ಎಂ.ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಎನ್ ಎಂ ಸುರೇಶ್ ವಿರುದ್ಧ ಕಿಚ್ಚ ಸುದೀಪ್ ಸುಳ್ಳು ಆಸ್ತಿ ಸಂಪಾದನೆ ಮತ್ತು ವಂಚನೆಯ ದೂರು ದಾಖಲಿಸಿದ್ದರು. ಸುದೀಪ್ ಅವರ ವಿರುದ್ಧ ಮಾನಹಾನಿಕರ ಮತ್ತು ಸಮಾಜದಲ್ಲಿ ಅವರ ಹೆಸರನ್ನು ಕೆಡಿಸುವಂತಹ ಆರೋಪದ ಪ್ರಕರಣವನ್ನು ದಾಖಲಿಸಲಾಗಿದೆ. ಸಮನ್ಸ್ ಜಾರಿ ಮಾಡುವ ಕ್ರಮದಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲ. ಹಾಗಾಗಿ ರದ್ದು ಮಾಡಲಾಗದು ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಹೇಳಿದ್ದಾರೆ. ಪ್ರಕರಣ ಸಂಬಂಧ ಐಪಿಸಿ 499 ಮತ್ತು 500 ಅಡಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಸುರೇಶ್ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರ ಮಾಡಿದ್ದರು. ಜೊತೆಗೆ ನಿರ್ಮಾಪಕರಾದ…
ತೆಲುಗಿನ ಖ್ಯಾತ ನಟ ಚಿರಂಜೀವಿ ಬೆಂಗಳೂರಿನಲ್ಲಿ ಅತ್ಯಂತ ಸುಸಜ್ಜಿತ ಮನೆ ಹಾಗೂ ಫಾರ್ಮ್ ಹೌಸ್ ಹೊಂದಿದ್ದಾರೆ. ಇಡೀ ಬೆಂಗಳೂರಿನ ಜನತೆ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ ಚಿರಂಜೀವಿ ಮನೆ ಹಾಗೂ ಫಾರ್ಮ್ ಹೌಸ್ ನಲ್ಲಿ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಅಲ್ಲದೆ ನೀರಿನ ಸಮಸ್ಯೆಗೆ ನಟ ಪರಿಹಾರ ಸೂಚಿಸಿದ್ದಾರೆ. ಚಿರಂಜೀವಿ ಮನೆಯಲ್ಲಿ ಸದಾ ನೀರು ಜಿನುಗುವಂತೆ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಅದನ್ನು ಕನ್ನಡದಲ್ಲೇ ಚಿರಂಜೀವಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ನೀರಿನ ಮಹತ್ವವನ್ನು ತಿಳಿಸಿದ್ದಾರೆ. ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ… ಬಹಳ ಮುಖ್ಯ. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ. ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ…
ರಾಷ್ಟ್ರೀಯ ಡೇಟಾಬೇಸ್ ಮತ್ತು ನೋಂದಣಿ ಪ್ರಾಧಿಕಾರ (NADRA) ನಾಗರಿಕರ ಡೇಟಾವನ್ನು ಸೋರಿಕೆ ಮಾಡಿರುವ ಬಗ್ಗೆ ಪಾಕಿಸ್ತಾನದ ಜಂಟಿ ತನಿಖಾ ತಂಡ (ಜೆಐಟಿ) ಆಂತರಿಕ ಸಚಿವಾಲಯಕ್ಕೆ ವರದಿ ನೀಡಿದೆ. ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ), ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಸಹಯೋಗದೊಂದಿಗೆ ಡೇಟಾ ಸೋರಿಕೆಯ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಂತರಿಕ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡಿದೆ. ಮುಲ್ತಾನ್, ಪೇಶಾವರ್ ಮತ್ತು ಕರಾಚಿಯ ನಾದ್ರಾ ಕಚೇರಿಗಳ ಸಹಾಯದಿಂದ 2019 ರಿಂದ 2023 ರವರೆಗೆ 2.7 ಮಿಲಿಯನ್ ಪಾಕಿಸ್ತಾನಿಗಳ ಡೇಟಾವನ್ನು ಕಳವು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಮುಲ್ತಾನ್ ನಿಂದ ಪೇಶಾವರಕ್ಕೆ ಮತ್ತು ನಂತರ ದುಬೈಗೆ ಡೇಟಾವನ್ನು ಪಡೆಯಲಾಗಿದೆ ಮತ್ತು ಅರ್ಜೆಂಟೀನಾ ಮತ್ತು ರೊಮೇನಿಯಾದಲ್ಲಿಯೂ ಮಾರಾಟ ಮಾಡಲಾಗಿದೆ ಎಂದು ಜೆಐಟಿ ವರದಿಯಲ್ಲಿ ತಿಳಿಸಲಾಗಿದೆ. ಎನ್‌ಎಡಿಆರ್‌ಎಯ ಹಲವಾರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದು, ಮಾರ್ಚ್ 2023 ರ ಸೈಬರ್ ದಾಳಿಯ ತನಿಖೆಗಾಗಿ ಎಫ್‌ಐಎ ನಿರ್ದೇಶಕ ಸೈಬರ್ ಕ್ರೈಮ್…
ದೊಡ್ಡ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನ ಅತಿ ಉದ್ದದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದಿದೆ. ಡಿಕ್ಕಿ ಹೊಡೆದ ಕಂಟೇನರ್ ಹಡಗಿನಲ್ಲಿ 22 ಸಿಬ್ಬಂದಿ ಭಾರತೀಯರಿದ್ದು ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಹಡಗು ನಿರ್ವಹಣಾ ಘಟಕ ತಿಳಿಸಿದೆ. ಅಪಘಾತಕ್ಕೀಡಾದ ಹಡಗು ಡಾಲಿ ಹೆಸರಿನ ಕಂಟೈನರ್ ಹಡಗಾಗಿದ್ದು, ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ಮಂಗಳವಾರ ಮುಂಜಾನೆ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿದ್ದು, ಸೇತುವೆಯೂ ಮುರಿದು ನದಿಗೆ ಬಿದ್ದಿದೆ. ರಕ್ಷಕರು ಇಬ್ಬರನ್ನು ಹೊರತೆಗೆಯಲಾಗಿದ್ದು ಇನ್ನೂ ಆರು ಮಂದಿ ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಪೈಲಟ್‌ಗಳು ಸೇರಿದಂತೆ ಸಿಬ್ಬಂದಿಯನ್ನು ಪರಿಗಣಿಸಲಾಗಿದ್ದು, ಯಾವುದೇ ಗಾಯಗಳ ವರದಿಯಾಗಿಲ್ಲ. ಯಾವುದೇ ಮಾಲಿನ್ಯವೂ ಇಲ್ಲ ಎಂದು ಚಾರ್ಟರ್ ಮ್ಯಾನೇಜರ್, ಸಿನರ್ಜಿ ಮೆರೈನ್ ಗ್ರೂಪ್ ಹೇಳಿದ್ದಾರೆ . ಕಂಟೈನರ್ ಹಡಗು ಸುಮಾರು ಎಂಟು ಗಂಟುಗಳ ತುಲನಾತ್ಮಕವಾಗಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಸೇತುವೆಯನ್ನು ಅಪ್ಪಳಿಸುವ ಮೊದಲು ಕ್ಷಣಗಳಲ್ಲಿ ವಿದ್ಯುತ್…
ಮೋಹಕ ತಾರೆ ರಮ್ಯಾರನ್ನು ಮತ್ತೆ ತೆರೆ ಮೇಲೆ ನೋಡ್ಬೇಕು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿದೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ರಮ್ಯಾ ಚಿತ್ರತಂಡದಿಂದ ಹೊರ ನಡೆದಿದ್ದಾರೆ. ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಉತ್ತರಕಾಂಡ ಚಿತ್ರದಲ್ಲಿ ಡಾಲಿ ಧನಂಜಯ್‌ಗೆ ನಾಯಕಿಯಾಗಿ ರಮ್ಯಾ ಕಾಣಿಸಿಕೊಳ್ಳುವುದಾಗಿ ಕಳೆದ ವರ್ಷ ಘೋಷಣೆಯಾಗಿತ್ತು. ಅದ್ಧೂರಿಯಾಗಿ ಮುಹೂರ್ತ ಕೂಡ ನೆರವೇರಿತ್ತು. ಚಿತ್ರದಲ್ಲಿ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ರಮ್ಯಾ ಚಿತ್ರದಿಂದ ಹೊರನಡೆದಿದ್ದು ಅಭಿಮಾನಿಗಳಿಗೆ ಹಾಗೂ ಚಿತ್ರತಂಡಕ್ಕೆ ಬೇಸರ ಮೂಡಿಸಿದೆ. ಉತ್ತರಕಾಂಡ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಚಿತ್ರಕ್ಕೆ ‘ರತ್ನನ್ ಪ್ರಪಂಚ’ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದು, ಕೆಆರ್‌ಜಿ ಸಂಸ್ಥೆ ಬಂಡವಾಳ ಹೂಡಿದೆ.…
ನಟಿ ತ್ರಿಶಾ ಕೃಷ್ಣನ್ ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 40 ವರ್ಷದ ಈ ನಟಿಗೆ ಸಾಕಷ್ಟು ಡಿಮ್ಯಾಂಡ್ ಇದ್ದು ಟಾಪ್ ಹೀರೋಗಳ ಜೊತೆ ತ್ರಿಶಾ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ಚಿತ್ರಗಳಲ್ಲಿ ನಟಿಸದಿರಲು ಕಾರಣವೇನು ಎಂಬುದನ್ನು ತ್ರಿಶಾ ತಿಳಿಸಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಖಟ್ಟಾ ಮಿಟ್ಟಾ’ ಸಿನಿಮಾದಲ್ಲಿ ತ್ರಿಶಾ ನಟಿಸಿದ್ದರು. ಖಟ್ಟಾ ಮಿಟ್ಟಾ ಸಿನಿಮಾ ಹೀನಾಯವಾಗಿ ಸೋತಿತ್ತು. ಹಿಂದಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆಯೋದ್ರಲ್ಲಿ ನಾನು ಸೋತೆ ಎಂದಿದ್ದಾರೆ. ಹಾಗಾಗಿ ಅದೇ ನನ್ನ ಮೊದಲ ಮತ್ತು ಕೊನೆಯ ಚಿತ್ರವಾಗಿದೆ. ಹಾಗಾಗಿ ನಾನು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದು ಬಿಟ್ಟೆ ಎಂದು ತ್ರಿಶಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ‘ಪೊನ್ನಿಯನ್ ಸೆಲ್ವನ್’ ಚಿತ್ರದ ಸಕ್ಸಸ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತ್ರಿಶಾ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಬಾಲಿವುಡ್ ಸಿನಿಮಾಗಳಿಂದಲೂ ಆಫರ್ ಬರ್ತಿವೆ. ಆದರೆ ತ್ರಿಶಾ ಅವುಗಳನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಾಂಭರ’ ಸಿನಿಮಾದಲ್ಲಿ ತೊಡಗಿಕೊಂಡಿದ್ದು ಚಿತ್ರದ ಶೂಟಿಂಗ್ ನಡೆಯುತ್ತಿದೆ.