ನ್ಯೂಯಾರ್ಕ್ : ಅಮೆರಿಕದ ಲಾಸ್‍ಏಂಜಲೀಸ್‍ನಲ್ಲಿ ಹತ್ತಿಕೊಂಡಿರುವ ಕಾಡ್ಗಿಚ್ಚು ಹತೋಟಿಗೆ ಬಂದಿಲ್ಲ. ಬೆಂಕಿನ ಭೀಕರ ರೌದ್ರ ನರ್ತಕ್ಕೆ ಹಲವರು ಮನೆ ಮಠ ಕಳೆದುಕೊಂಡು ಭೀದಿಗೆ ಬಂದಿದ್ದಾರೆ. ಇದೀಗ ಘಟನೆಯಲ್ಲಿ ಆಸ್ಟ್ರೆಲಿಯಾದ ಮಾಜಿ ಬಾಲನಟ (ಅಂಧ ನಟ) ರೋರಿ ಸೈಕ್ಸ್ ಬಲಿಯಾಗಿರುವುದಾಗಿ `ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ. ಲಾಸ್ ಏಂಜಲೀಸ್‍ನಲ್ಲಿ ರೋರಿ ಸೈಕ್ಸ್ ಕುಟುಂಬ ವಾಸಿಸುತ್ತಿದ್ದ ಮಲಿಬು ಕಾಟೇಜ್ ಕಾಡ್ಗಿಚ್ಚಿನ ಬೆಂಕಿಯಲ್ಲಿ ಸುಟ್ಟುಹೋಗಿದ್ದು ರೋರಿ ಸೈಕ್ಸ್‍ರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಮನೆಯಲ್ಲಿ ನೀರಿನ ಕೊರತೆಯಿದ್ದ ಕಾರಣ, ದೃಷ್ಟಿದೋಶದ ಜತೆ ಸೆರೆಬ್ರಲ್ ಪಾಲ್ಸಿ(ಚಲನೆಗೆ ಸಂಬಂಧಿಸಿದ ಸಮಸ್ಯೆ) ಸಮಸ್ಯೆಯಿಂದಲೂ ಬಳಲುತ್ತಿದ್ದ ರೋರಿ ಸೈಕ್ಸ್‍ರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅವರ ತಾಯಿ ಹೇಳಿದ್ದಾರೆ. ಬ್ರಿಟನ್‍ನ ಟಿವಿ ಕಾರ್ಯಕ್ರಮ `ಕಿಡ್ಡೀ ಕೇಪರ್ಸ್’ನ ಕೆಲವು ಕಂತುಗಳಲ್ಲಿ ರೋರಿ ಸೈಕ್ಸ್ ಬಾಲನಟನಾಗಿ ನಟಿಸಿದ್ದರು.
Author: Author AIN
ಕ್ಯಾಲಿಫೋರ್ನಿಯಾ: ಕಳೆದ ಕೆಲ ದಿನಗಳಿಂದ ಲಾಸ್ ಏಂಜಲೀಸ್ ನಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚಿಗೆ ಇದುವರೆಗೂ 16 ಜನರು ಮೃತಪಟ್ಟಿದ್ದು, 12,000ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದೆ ಎಂದು ವರದಿಯಾಗಿದೆ. ಲಾಸ್ ಏಂಜಲೀಸ್ ಕೌಂಟಿಯಲ್ಲಿ ಬೆಂಕಿಯು ಹೆಚ್ಚುವರಿಯಾಗಿ 1,000 ಎಕರೆಗಳಷ್ಟು ಪ್ರದೇಶಕ್ಕೆ ವಿಸ್ತರಿಸಿದೆ. ಹೆಚ್ಚಿನ ಮನೆಗಳಿಗೆ ಬೆಂಕಿ ಆವರಿಸಿದ್ದು, ಜನರನ್ನು ತುರ್ತು ಸ್ಥಳಾಂತರ ಮಾಡಲಾಗಿದೆ. 1,00,000ಕ್ಕೂ ಅಧಿಕ ಮಂದಿ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ಕಾಡ್ಗಿಚ್ಚಿನ ವೇಳೆ 13 ಮಂದಿ ಕಾಣೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರ ಬಗ್ಗೆ ದೂರು ನೀಡಲು ಕೇಂದ್ರವೊಂದನ್ನು ಸ್ಥಾಪನೆ ಮಾಡಲಾಗಿದೆ. ‘ಸಾಂತಾ ಅನಾʼ ಎಂದು ಕರೆಯಲಾದ ಶಕ್ತಿಶಾಲಿ ಒಣ ಹವೆಯಿಂದ ಸೃಷ್ಟಿಯಾದ ಬೆಂಕಿಯು ತನ್ನ ಕೆನ್ನಾಲಿಗೆಗಳನ್ನು ಚಾಚಿ ಲಾಸ್ ಏಂಜಲೀಸ್ ನಲ್ಲಿ ಮನೆಗಳು ಹಾಗೂ ಕಟ್ಟಡಗಳ ಆಹುತಿ ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಜನವರಿ 7ರಂದು ಬೆಂಕಿ ಪ್ರಾರಂಭವಾದಾಗಿನಿಂದ ಸುಮಾರು 39,000 ಎಕರೆಗಳಷ್ಟು ಭೂಮಿ ಸುಟ್ಟು ಹೋಗಿದೆ. ಈ ವಿಸ್ತೀರ್ಣವು ಸ್ಯಾನ್ ಫ್ರಾನ್ಸಿಸ್ಕೋಗಿಂತ…
ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತ 2’ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಬೇಕಿತ್ತು. ಆದರೆ ನಿರ್ದೇಶಕರು ಹಾಗೂ ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯದಿಂದ ಕೊನೆ ಘಳಿಗೆಯಲ್ಲಿ ಬಿಡುಗಡೆ ಕ್ಯಾನ್ಸಲ್ ಆಗಿತ್ತು. ಇದೀಗ ಸಿನಿಮಾ ಬಿಡುಗಡೆಗಿದ್ದ ತೊಡುಕು ನಿವಾರಣೆಯಾಗಿದ್ದು ಈ ಬಗ್ಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದೆ. ‘ಸಂಜು ವೆಡ್ಸ್ ಗೀತ 2’ ಸಿನಿಮಾ ಜನವರಿ 10ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ತಡೆಯಾಜ್ಞೆ ತಂದಿದ್ದ ಕಾರಣಕ್ಕೆ ಸಿನಿಮಾ ಬಿಡುಗಡೆ ಆಗಲಿಲ್ಲ. ಸಿನಿಮಾದ ಮೇಲೆ ತಡೆಯಾಜ್ಞೆ ಬೀಳಲು ಕಾರಣ ಏನೆಂದು ವಿವರಿಸಿದ ನಾಗಶೇಖರ್, ‘ಗೆಳೆಯ ಭಾವನಾ ರವಿ ಜೊತೆ ಸೇರಿ ತೆಲುಗಿನಲ್ಲಿ ‘ಗುರ್ತುಂದಾ ಸೀತಾಕಾಲಂ’ ಹೆಸರಿನ ಸಿನಿಮಾ ಮಾಡಿದ್ದೆ. ಆ ಸಿನಿಮಾದ ಫೈನ್ಯಾನ್ಶಿಯರ್ ಈ ಕೇಸು ಹಾಕಿದ್ದರು. ‘ಸಂಜು ವೆಡ್ಸ್ ಗೀತಾ 2’ ನನ್ನದೇ ಬ್ಯಾನರ್ ಸಿನಿಮಾ ಎಂದುಕೊಂಡು ಅವರು ಕೇಸು ಹಾಕಿದ್ದರು. ಹಳೆಯ ವಿಡಿಯೋ ನೋಡಿ, ಅವರು ಇದು ನನ್ನ ಸಿನಿಮಾ ಅಂದುಕೊಂಡಿದ್ದರು…
ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಿ ಎರಡು ದಿನ ಕಳೆದಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಘಳಿಕೆ ಕಾಣುತ್ತಿರುವ ಸಿನಿಮಾಗೆ ತೆಲಂಗಾಣ ಸರ್ಕಾರ ಬಿಗ್ ಸಿನಿಮಾ ಶಾಕ್ ನೀಡಿದೆ. ‘ಗೇಮ್ ಚೇಂಜರ್’ ಸಿನಿಮಾದ ಟಿಕೆಟ್ ದರ ಹೆಚ್ಚಳ ಮತ್ತು ಸ್ಪೆಷಲ್ ಶೋಗಳಿಗೆ ನೀಡಿದ್ದ ಅನುಮತಿಯನ್ನು ಸಂಪೂರ್ಣವಾಗಿ ರದ್ದು ಮಾಡಿದೆ. ಇದರಿಂದಾಗಿ ‘ಗೇಮ್ ಚೇಂಜರ್’ ಸಿನಿಮಾ ತೆಲಂಗಾಣದಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಅನ್ನು ಕಾಣುವುದಿಲ್ಲ ಎಂಬುದು ಸ್ಪಷ್ಟ. ತೆಲಂಗಾಣ ಸರ್ಕಾರ ಮಾತ್ರವೇ ಅಲ್ಲದೆ ಹೈಕೋರ್ಟ್ನಲ್ಲಿಯೂ ಸಹ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಹಿನ್ನಡೆ ಎದುರಾಗಿದೆ. ‘ಪುಷ್ಪ 2’ ಬಿಡುಗಡೆ ಸಮಯದಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಘಟನೆ ಬಳಿಕ ಸಿಎಂ ರೇವಂತ್ ರೆಡ್ಡಿ ಇನ್ನು ಮುಂದೆ ತೆಲಂಗಾಣದಲ್ಲಿ ಯಾವುದೇ ವಿಶೇಷ ಶೋಗೆ ಅನುಮತಿ ನೀಡುವುದಿಲ್ಲ, ಟಿಕೆಟ್ ದರ ಹೆಚ್ಚಳವೂ ಇರುವುದಿಲ್ಲ ಎಂದಿದ್ದರು. ಆದರೆ ‘ಗೇಮ್ ಚೇಂಜರ್’ ಸಿನಿಮಾಕ್ಕೆ ವಿಶೇಷ ಶೋಗೆ ಅನುಮತಿ…
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಸದ್ಯ ಜಾಮೀನು ಪಡೆದು ಹೊರ ಬಂದಿದ್ದಾರೆ. ಹೊರಗಡೆ ಬಂದ ಬಳಿಕ ನೆಮ್ಮದಿಯಾಗಿ ಇರಬಹುದು ಎಂದುಕೊಂಡಿದ್ದ ದಾಸನಿಗೆ ಪೊಲೀಸರು ಶಾಕ್ ಮೇಲೆ ಶಾಕ್ ನೀಡ್ತಿದ್ದಾರೆ. ಇದೀಗ ದರ್ಶನ್ ಗೆ ಮತ್ತೊಂದು ಸಂಕಷ್ಟು ಎದುರಾಗಿದೆ. ನಟ ದರ್ಶನ್ ವಿರುದ್ಧ ಮತ್ತೊಂದು ಕ್ರಮಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ನಟನಿಗೆ ಇರುವ ಪ್ರಮುಖ ಸವಲತ್ತು ಹಿಂಪಡೆಯಲು ನಿರ್ಧಾರ ಮಾಡಲಾಗಿದೆ. ದರ್ಶನ್ ಬಳಿ ಗನ್ ಲೈಸೆನ್ಸ್ ಇದ್ದು ಅದನ್ನು ಹಿಂಪಡೆಯುವ ಬಗ್ಗೆ ಪೊಲೀಸರು ಆಲೋಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಅವರಿಗೆ ಪೊಲೀಸರಿಂದ ನೋಟಿಸ್ ನೀಡಿದ್ದಾರೆ ಎನ್ನಲಾಗುತ್ತಿದೆ. ಸೆಲೆಬ್ರಿಟಿ ಆಗಿರುವ ಕಾರಣದಿಂದ ದರ್ಶನ್ ಅವರು ತಮ್ಮ ಭದ್ರತೆಗಾಗಿ ಗನ್ ಲೈಸೆನ್ಸ್ ಪಡೆದಿದ್ದರು. ಆದರೆ ಈಗ ಅವರು ಕೊಲೆ ಪ್ರಕರಣದ ಆರೋಪಿ ಆಗಿರುವ ಕಾರಣ ಲೈನೆನ್ಸ್ ರದ್ದು ಮಾಡುವ ಕುರಿತು ಆಯೋಚಿಸಲಾಗಿದೆ. ‘ನಿಮ್ಮ ಬಳಿ ಇರುವ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು’ ಎಂದು ಪ್ರಶ್ನಿಸಿ ನೋಟಿಸ್ ಕಳಿಸಲಾಗಿದೆ. 7 ದಿನಗಳಲ್ಲಿ…
ಸೂರ್ಯೋದಯ – 6:52 AM ಸೂರ್ಯಾಸ್ತ – 5:56 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ಚತುರ್ದಶಿ ನಕ್ಷತ್ರ – ಮೃಗಶಿರ ರಾಹು ಕಾಲ – 04:30 ದಿಂದ 06:00 ವರೆಗೆ ಯಮಗಂಡ – 12:00 ದಿಂದ 01:30 ವರೆಗೆ ಗುಳಿಕ ಕಾಲ – 03:00 ದಿಂದ 04:30 ವರೆಗೆ ಬ್ರಹ್ಮ ಮುಹೂರ್ತ – 5:16 ಬೆ ದಿಂದ 6:04 ಬೆ ವರೆಗೆ ಅಮೃತ ಕಾಲ – 12:56 ಬೆ ದಿಂದ 2:29 ಬೆ ವರೆಗೆ ಅಭಿಜಿತ್ ಮುಹುರ್ತ – 12:02 ಮ ದಿಂದ 12:46 ಮ ವರೆಗೆ ಮೇಷ ರಾಶಿ.ವಿದೇಶ ಪ್ರಯಾಣ ಯೋಗ, ಹೃದಯ ತಜ್ಞರಿಗೆ ಉನ್ನತ ಸ್ಥಾನಮಾನ, ಕೃಷಿ ಆಧಾರಿತ ವ್ಯಾಪಾರದಲ್ಲಿ ಲಾಭ, ವಕೀಲರು ಮತ್ತು ಸಂಧಾನ ಸಭೆ ನಡೆಸುವವರಿಗೆ ಶುಭದಾಯಕ, ವ್ಯಾಪಾರದಲ್ಲಿ ಏರಿಳಿತ ಸಾಮಾನ್ಯ, ಹಣಕಾಸಿನ ವ್ಯವಹಾರ ಬೇಡ, ರಾಜಕಾರಣಿಗಳು…
ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ ನಲ್ಲಿ ಕಳೆದ ಕೆಲ ದಿನಗಳಿಂದ ಸಂಭವಿಸುತ್ತಿರುವ ಕಾಳ್ಗಿಚ್ಚು ಸಾವಿರಾರು ಮಂದಿಯನ್ನು ಸಂತ್ರಸ್ತರನ್ನಾಗಿಸಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ತಮ್ಮ ಮನೆ ಮಠ ಕಳೆದುಕೊಂಡು ನೊಂದಿದ್ದಾರೆ. ಅವರಲ್ಲಿ ಅಮೆರಿಕದ ಖ್ಯಾತ ಈಜು ಪಟು ಗ್ಯಾರಿ ಹಾಲ್ ಜೂನಿಯರ್ ಕೂಡಾ ಸೇರಿದ್ದಾರೆ. ಲಾಸ್ ಏಂಜಲೀಸ್ ಉಂಟಾದ ಕಾಳ್ಗಚ್ಚಿನಿಂದ ಗ್ಯಾರಿ ಹಾಲ್ ತಾವು ಒಲಿಂಪಿಕ್ ನಲ್ಲಿ ಪಡೆದ 10 ಪದಕಗಳನ್ನು ಕಳೆದುಕೊಂಡಿದ್ದಾರೆ. ಖ್ಯಾತ ಒಲಿಂಪಿಕ್ ಈಜು ಪಟು ಗ್ಯಾರಿ ಹಿಲ್ ಜೂನಿಯರ್ ಪೆಸಿಫಿಕ್ ಪ್ಯಾಲಿಸೇಡ್ಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತಮಗೆ ಸೇರಿದ ಹಲವಾರು ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಒಲಿಂಪಿಕ್ ಪದಕಗಳೂ ಸೇರಿವೆ. ಈ ಕುರಿತು ಆಸ್ಟ್ರೇಲಿಯ ಮೂಲದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಮಾಧ್ಯಮ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗ್ಯಾರಿ ಹಿಲ್ ಜೂನಿಯರ್, ಈ ಘಟನೆಯು ಕಾಲ್ಪನಿಕ ಸಿನಿಮಾಗಿಂತಲೂ ಕೆಟ್ಟದ್ದಾಗಿದೆ ಎಂದಿದ್ದಾರೆ. “ಈ ಘಟನೆಯು ಯಾವುದೇ ಕಾಲ್ಪನಿಕ ಚಿತ್ರಕ್ಕಿಂತಲೂ ಕೆಟ್ಟದ್ದಾಗಿದೆ. ಈ ಘಟನೆಯು ನೀವು ನೋಡಿರುವ ಯಾವುದೇ ಚಿತ್ರಗಳಿಗಿಂತ 1000 ಪಟ್ಟು…
ಕಾರ್ಕಸ್: ವೆನಿಜುವೆಲಾದ ಅಧ್ಯಕ್ಷರಾಗಿ ನಿಕೋಲಸ್ ಮಡುರೊ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚುನಾವಣಾ ಅಕ್ರಮ ಆರೋಪಗಳು ಕೇಳಿ ಬಂದ ಹೊರತಾಗಿಯೂ ನಿಕೋಲಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿಕೋಲಸ್ ಮಡುರೊ ಮೂರನೆಯ ಭಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಅಧಿಕಾರಾವಧಿ ಮುಂದಿನ ಆರು ವರ್ಷಗಳವರೆಗೆ ಮುಂದುವರೆಯಲಿದೆ. ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕೋಲಸ್ ಮಡುರೊ ಶೇ. 51ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದು, ವಿರೋಧ ಪಕ್ಷದ ನಾಯಕ ಜೌನ್ ಗೈಡೊ ಶೇ. 44ರಷ್ಟು ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯಸ್ಥ ಎಲ್ವಿಸ್ ಅಮೊರೊಸ್ ಘೋಷಿಸಿದ್ದರು. ಈ ಘೋಷಣೆ ಬಳಿಕ, ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ವಿದೇಶಿ ನಾಯಕರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಜೌನ್ ಗೈಡೊ ಪ್ರತಿಭಟನೆ ನಡೆಸಿದ್ದರು.
ರ್ಯಾಪರ್ ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ‘ಕಾಟನ್ ಕ್ಯಾಂಡಿ’ ಹೆಸರಿನ ಹಾಡು ಬಿಡುಗಡೆ ಮಾಡಿದ್ದು ಹಾಡು ಸೂಪರ್ ಹಿಟ್ ಆಗಿದೆ. ಬೇರೆ ಬೇರೆ ಸೆಲೆಬ್ರಿಟಿಗಳಿಂದ ತಮ್ಮ ಹಾಡಿಗೆ ರೀಲ್ಸ್ ಮಾಡಿಸುತ್ತಿದ್ದು ಇದೀಗ ಚಂದನ್ ಶೆಟ್ಟಿ ವಿರುದ್ಧ ಇದೀಗ ಕೃತಿ ಚೌರ್ಯ ಆರೋಪ ಕೇಳಿ ಬಂದಿದೆ. ಚಂದನ್ ಶೆಟ್ಟಿ ತಮ್ಮ ಹಳೆಯ ಹಾಡಿನ ಟ್ಯೂನ್ ಕದ್ದು, ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ಬಳಸಿಕೊಂಡಿದ್ದು, ತಾವು ಚಂದನ್ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ. ಯುವರಾಜ್ ಹೆಸರಿನ ಮತ್ತೊಬ್ಬ ರ್ಯಾಪರ್, ಚಂದನ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ತಾನು ಆರು ವರ್ಷದ ಹಿಂದೆ ಬಿಡುಗಡೆ ಮಾಡಿರುವ ‘ವೈ ಬುಲ್ ಪಾರ್ಟಿ’ ಹಾಡಿನ ಮೊದಲ ಪಲ್ಲವಿ ಹಾಗೂ ಎರಡನೇ ಚರಣ ನಕಲು ಮಾಡಿ ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಚಂದನ್ ಶೆಟ್ಟಿಯೇ ಈ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದೆ ಆದರೆ ಅವರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ನನ್ನ ಬಳಿಯೂ ಅವರು ಈ ಬಗ್ಗೆ ಕೇಳಿಲ್ಲ. ಹಾಗಾಗಿ ಈಗ ನಾನೇ…
ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯನ್ನ ಆಸ್ಟ್ರೇಲಿಯಾ 3-1 ಅಂತರದಲ್ಲಿ ಗೆದ್ದಿದೆ. ಈ ಸರಣಿಯುದ್ದಕ್ಕೂ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು, ಆಸೀಸ್ ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಸ್ ಜೊತೆಗಿನ ಅವರ ಜಗಳ ಚರ್ಚೆಯ ವಿಷಯವಾಯಿತು. ಇನ್ನೂ ಇದರ ನಡುವೆ ಉತ್ತರದ ಪ್ರದೇಶದ ವೃಂದಾವನದಲ್ಲಿರುವ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭೇಟಿ ನೀಡಿದ್ದಾರೆ. ಈ ಭೇಟಿಯ ವೇಳೆ ಆಶೀರ್ವಾದ ಪಡೆದ ಕೊಹ್ಲಿಗೆ ಗುರೂಜಿ ಕೆಲ ವಿಶೇಷ ಸಲಹೆಗಳನ್ನು ನೀಡಿದ್ದಾರೆ. ವಿರುಷ್ಕಾ ಜೋಡಿಯ ಭೇಟಿಗೆ ಸಂತೋಷ ವ್ಯಕ್ತಪಡಿಸಿದ ಪ್ರೇಮಾನಂದ ಜಿ ಮಹಾರಾಜ್, ಯಶಸ್ಸಿನ ಉತ್ತುಂಗಕ್ಕೇರಿದರೂ ನೀವಿಬ್ಬರೂ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿರುವುದು ದೊಡ್ಡ ವಿಷಯ ಎಂದರು. ಅಲ್ಲದೆ ಕಳಪೆ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯನ್ನು ಸಂತೈಸುವ ಮಾತುಗಳನ್ನಾಡಿದರು. https://ainlivenews.com/have-you-ever-drunk-ghee-tea-you-will-get-these-health-benefits-if-you-drink-it/ ಕ್ರಿಕೆಟ್ ಕೂಡ ಆಧ್ಯಾತ್ಮಿಕ ಅಭ್ಯಾಸ ಎಂದು ಬಣ್ಣಿಸಿದ ಪ್ರೇಮಾನಂದ ಜಿ ಮಹಾರಾಜ್, ಅಭ್ಯಾಸ ನಡೆಸುವುದನ್ನು ಎಂದಿಗೂ ಬಿಡಬಾರದು ಎಂದರು.…