ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡ್ಯಾನ್ಸ್ ಶೋವೊಂದರಲ್ಲಿ ಪುತ್ರಿ ಅಥಿಯಾ ಪ್ರೆಗ್ನೆನ್ಸಿ ಬಗ್ಗೆ ಸುನೀಲ್ ಶೆಟ್ಟಿ ಸುಳಿವು ನೀಡಿದ್ದಾರೆ. ‘ಡ್ಯಾನ್ಸ್ ದೀವಾನೆ’ ಶೋನಲ್ಲಿ ಸುನಿಲ್ ಶೆಟ್ಟಿ ಭಾಗಿಯಾಗಿದ್ದು ಈ ವೇಳೆ ನಿರೂಪಕಿ, ಅಜ್ಜನಾಗುವ ಕುರಿತು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುನೀಲ್ ಶೆಟ್ಟಿ, ಹೌದು ಮುಂದಿನ ಸೀಸನ್ ಗೆ ಬಂದಾಗ ನಾನು ವೇದಿಕೆ ಮೇಲೆ ಅಜ್ಜನಂತೆಯೇ ಓಡಾಡುತ್ತೇನೆ ಎಂದಿದ್ದಾರೆ. ಸುನೀಲ್ ಶೆಟ್ಟಿ ಈ ಹೇಳಿಕೆ ನೀಡಿದ ನಂತರ ಅಥಿಯಾ ಶೆಟ್ಟಿ ಪ್ರೆಗ್ನೆಂಟ್ ಆಗಿದ್ದಾರಾ? ಹಾಗಾಗಿ ಈ ರೀತಿಯ ಹೇಳಿಕೆ ನೀಡಿದ್ರಾ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಸರಿಯಾಗಿ ಮದುವೆ ನಂತರ ನಟಿ ಸಿನಿಮಾಗಳಿಂದ ದೂರವಿದ್ದಾರೆ. ಇತ್ತೀಚೆಗೆ ಯಾವುದೇ ಬಾಲಿವುಡ್‌ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಅಥಿಯಾ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಪ್ರೆಗ್ನೆನ್ಸಿ ಸುದ್ದಿಗೆಮತ್ತಷ್ಟು ಪುಷ್ಠಿ ಸಿಕ್ಕಿದೆ.
Author: Author AIN
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ದುಬಾರಿ ಆಡಿ Q7 ಕಾರನ್ನು ಖರೀದಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಖರೀದಿಸಿರುವ ಕಾರಿನ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುನೀತ್ ನಿಧನದ ಬಳಿಕ ಎಲ್ಲಾ ಜವಬ್ದಾರಿಗಳು ಅಶ್ವಿನಿ ಹೆಗಲೇರಿದೆ. ಪಿಆರ್‌ಕೆ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಅಶ್ವಿನಿ ಆ ಮೂಲಕ ಹೊಸ ಪ್ರತಿಭೆಗಳಿಗೆ ನೆರವಾಗುತ್ತಿದ್ದಾರೆ. ಇದೀಗ ಐಷಾರಾಮಿ ಕಾರನ್ನು ಖರೀದಿಸುವ ಮೂಲಕ ಪುನೀತ್ ಪತ್ನಿ ಸುದ್ದಿಯಲ್ಲಿದ್ದಾರೆ. ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳಿವೆ. ಆ ಸಾಲಿಗೆ ಇದೀಗ ಆಡಿಕ್ಯೂ 7 ಕಾರು ಸೇರ್ಪಡೆಯಾಗಿದೆ. ಸದ್ಯ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಇದು ಕೂಡ ಒಂದು. ವಿನ್ಯಾಸ, ಲುಕ್, ಪರ್ಫಾಮೆನ್ಸ್, ಟೆಕ್ನಾಲಜಿ ಹೀಗೆ ಎಲ್ಲಾ ವಿಚಾರದಲ್ಲೂ ಆಡಿ ಕ್ಯೂ7 ಇತರ ಕಾರಗಳಿಗಿಂತ ಬಹಳ ವಿಭಿನ್ನವಾಗಿದೆ. ಸಾಕಷ್ಟು ಸೌಲಭ್ಯಗಳಿರುವ ಆಡಿ Q7 ಕಾರಿನ ಬೆಲೆ 1 ಕೋಟಿ ರೂ. ಮೌಲ್ಯದಾಗಿದೆ.
ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಹಲವಾರು ನಟ ನಟಿಯರು ನಾನಾ ಪಕ್ಷಗಳನ್ನು ಸೇರುತ್ತಿದ್ದಾರೆ. ತೆಲುಗಿನ ಖ್ಯಾತ ನಟ ನಿಖಿಲ್ ಸಿದ್ದಾರ್ಥ್ ಇದೀಗ ತೆಲುಗು ದೇಶಂ ಪಕ್ಷ ಸೇರಿದ್ದಾರೆ. ನಟ ನಿಖಿಲ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಯಾವ ಪಕ್ಷದಿಂದ ಎನ್ನುವುದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ನಿಖಿಲ್ ತೆಲುಗು ದೇಶಂ ಪಕ್ಷ ಸೇರಿದ್ದು ಆ ಮೂಲಕ ಜನ ಸೇವೆಗೆ ನಟ ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ನಿಖಿಲ್ ಸ್ಪರ್ಧೆ ಮಾಡುವುದಿಲ್ಲ ಎನ್ನಲಾಗುತ್ತಿದೆ. ಮುಂಬರುವ ಆಂಧ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರಂತೆ. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ನಿಖಿಲ್, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಸಾಮಾಜಿಕ ಕೆಲಸಗಳ ಮೂಲಕ ಮತ್ತಷ್ಟು ಅಭಿಮಾನಿಗಳ ಮನ ಗೆಲ್ಲಲ್ಲು ಸಿದ್ದರಾಗಿದ್ದಾರೆ.
ಬೆಂಗಳೂರಿನ ಜೆಟ್‌ಲ್ಯಾಗ್ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿ ಎಂಟು ಮಂದಿಗೆ ಬಿಗ್ ರಿಲೀಫ್ ಸಿಕ್ಕಿದೆ. ನಟ ದರ್ಶನ್ ಸೇರಿ ಎಂಟು ಮಂದಿ ಜೆಟ್‌ಲ್ಯಾಗ್ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ತಡ ರಾತ್ರಿ ಪಾರ್ಟಿ ಮಾಡಿಲ್ಲ. ಆರೋಪಿಗಳು ಊಟದ ಪಾರ್ಟಿ ಮಾಡಿದ್ದರು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್‌ಲ್ಯಾಗ್ ಪಬ್ ಮಾಲೀಕ, ಮ್ಯಾನೇಜರ್ ಮೇಲೆ ಕೇಸ್ ದಾಖಲಾಗಿತ್ತು. ಈ ಸಂಬಂಧ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿ 8 ಮಂದಿಗೆ ನೋಟಿಸ್ ಜಾರಿಯಾಗಿತ್ತು. ವಿಚಾರಣೆಗೆ ಹಾಜರಾದ 8 ಜನರು ನಾವು ಪಾರ್ಟಿ ಮಾಡಿಲ್ಲ. ಕೇವಲ ಊಟ ಮಾತ್ರ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧಾರಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.
ದಿವಂಗತ ನಟಿ ಶ್ರೀದೇವಿ ಪತಿ, ಖ್ಯಾತ ನಟಿ ಜಾನ್ವಿ ಕಪೂರ್ ತಂದೆ, ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೋಟ್ಯಂತರ ರೂಪಾಯಿ ಹಣ ವಂಚನೆ ಆರೋಪ ಕೇಳಿ ಬಂದಿದೆ. ಸಿನಿಮಾದ ಚಿತ್ರೀಕರಣಕ್ಕೆ ಬೇಕಾದ ಪ್ರಾಪರ್ಟಿಗಳನ್ನು ಸರಬರಾಜು ಮಾಡಿದ್ದ ಉದ್ದಿಮೆದಾರನೊಬ್ಬ ಬೋನಿ ಕಪೂರ್ ವಿರುದ್ಧ ಆರೋಪ ಮಾಡಿದ್ದು, ತಮಗೆ ಕೋಟ್ಯಂತರ ರೂಪಾಯಿ ಶುಲ್ಕ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬೋನಿ ಕಪೂರ್, ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಆ ವ್ಯಕ್ತಿಗೆ ನಮ್ಮ ನಿರ್ಮಾಣ ಸಂಸ್ಥೆಯಿಂದ 1.70 ಕೋಟಿ ರೂಪಾಯಿಗಳ ಬಿಲ್ ನೀಡಬೇಕಿತ್ತು. ನಾವು ಸಿನಿಮಾ ಬಿಡುಗಡೆ ಆಗುವ ಮುನ್ನವೇ 1.07 ಕೋಟಿ ನೀಡಿದ್ದೆವು. 63 ಲಕ್ಷ ರೂಪಾಯಿಗಳನ್ನು ಬಾಕಿ ಉಳಿಸಿದ್ದೆ. ಆತ ಒಮ್ಮೆ ನನ್ನನ್ನು ಬಂದು ಭೇಟಿಯಾಗಿದ್ದ, ಆಗ ನಾನು ಸಿನಿಮಾ ಬಿಡುಗಡೆ ಆಗಲಿ ಹಣ ತಲುಪುತ್ತದೆ ಎಂದಿದ್ದೆ. ಆತ ಸಹ ಖುಷಿಯಾಗಿ ಹೋಗಿದ್ದ. ಸಿನಿಮಾ ಬಿಡುಗಡೆ ಆದ ಬಳಿಕವೇ ಹಲವರ ಬಿಲ್ ಕ್ಲಿಯರ್ ಆಗುತ್ತದೆ…
ಕನ್ನಡ ಸಿನಿಮಾಗಳ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ಶ್ರೀಲೀಲಾ ಟಾಲಿವುಡ್ ನಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಶ್ರೀಲೀಲಾಗೆ ಮಾತ್ರ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಇದೀಗ ನಟಿ ತಮಿಳು ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ನಟಿ ಶ್ರೀಲೀಲಾ ನಟನೆಯ ಜೊತೆಗೆ ಭರ್ಜರಿ ಡ್ಯಾನ್ಸ್ ಹಾಗೂ ಸೌಂದರ್ಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸದ್ಯ ತೆಲುಗಿನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಇತ್ತೀಚೆಗೆ ತಮಿಳುನಾಡಿನಲ್ಲಿ ಮೆಡಿಕಲ್ ಕಾಲೇಜು ಕಾರ್ಯಕ್ರಮವೊಂದರಲ್ಲಿ ನಟ ಶಿವಕಾರ್ತಿಕೇಯನ್ ಜೊತೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ, ತಮಿಳು ಅಭಿಮಾನಿಗಳ ಕ್ರೇಜ್ ನೋಡಿ ನಟಿ ಶಾಕ್ ಆಗಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ. ನನಗೆ ಇಷ್ಟು ದಿನ ನನಗೊಂದು ಅನುಮಾನವಿತ್ತು. ನನಗೆ ತಮಿಳು ಬರುವುದಿಲ್ಲ, ತಮಿಳಿನಲ್ಲಿ ಸಿನಿಮಾ ಮಾಡಿಲ್ಲ. ಇಲ್ಲಿನವರಿಗೆ ನನ್ನ ಪರಿಚಯ ಇರಲ್ಲ ಎಂದುಕೊಂಡಿದ್ದೆ. ನನ್ನನ್ನು ಅತಿಥಿ ಆಗಿ ಕರೆದಾಗ, ನನ್ನ ಹೇಗೆ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ನಿಮ್ಮ ಪ್ರೀತಿಯನ್ನು…
ರಂಗಭೂಮಿ ಮತ್ತು ಹಲವು ಸಿನಿಮಾಗಳಲ್ಲಿ ನಟಿಸಿದ ನಟ ಪ್ರಕಾಶ್ ಹೆಗ್ಗೋಡು ನಿಧನರಾಗಿದ್ದಾರೆ. ಕಳೆದ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಕಾಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. 58 ಪ್ರಕಾಶ್ ಹೆಗ್ಗೋಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಪ್ರಕಾಶ್ ಸಾವಿನ ಸುದ್ದಿ ಕೇಳಿ ಆಪ್ತರು, ಸಿನಿಮಾ ರಂಗದವರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಪುರಪ್ಪೆಯ ಪ್ರಕಾಶ್ ಅವರ ಸ್ವಗೃಹದಲ್ಲಿ ಏರ್ಪಡಿಸಲಾಗಿದೆ. ಆಪ್ತರು, ಊರಿನ ಜನರಿಗೆ ಅಂತಿಮ ದರ್ಶನ ಪಡೆಯಬಹುದಾಗಿದೆ. ಸಂತ, ಭಾಗ್ಯದ ಬಳೆಗಾರ, ಕಲ್ಪನಾ 2 (Kalpana 2), ವೀರು, ಕಲಾಸಿಪಾಳ್ಯ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಕಾಶ್ ಹೆಗ್ಗೋಡು ನಟಿಸಿ ಸೈ ಎನಿಸಿಕೊಂಡಿದ್ದರು.ಪ್ರಕಾಶ್ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.
ಯಶ್ ನಟನೆಯ ಕಿರಾತಕ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಟರಾಗಿ ನಟಿಸಿರುವ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೀಗ ಅವರು ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಬಾಲಜಿ ಅವರಿಗೆ ತಾವು ನಿಧನವಾದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂಬ ಆಸೆ ಇತ್ತಂತೆ. ಇದೀಗ ಬಾಲಜಿ ಅವರ ಆಸೆಯಂತೆ ಕುಟುಂಬಸ್ಥರು ಇದೀಗ ಕಣ್ಣುಗಳನ್ನು ದಾನ ಮಾಡಲಾಗಿದೆ. ನಟ ಡೇನಿಯಲ್ ಬಾಲಾಜಿ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 48 ವರ್ಷದ ನಟನ ಹಠಾತ್ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬಾಲಾಜಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಡೇನಿಯಲ್ ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ‘ಮರುದುನಾಯಗಂ’ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು…
ದಕ್ಷಿಣ ಕೊರಿಯಾದಲ್ಲಿ ಮಕ್ಕಳ ಜನನ ಪ್ರಮಾಣದ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಕಳೆದ ಜನವರಿಯಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಜನನವಾಗಿದೆ ಎಂದು ಅಂಕಿ ಅಂಶದಲ್ಲಿ ತಿಳಿಸಲಾಗಿದೆ. ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದು, ಕಡಿಮೆ ಜನನ ಸಂಖ್ಯೆ ದರ ಚಿಂತೆಗೀಡು ಮಾಡುತ್ತಿದೆ. 2024ರ ಜನವರಿಯಲ್ಲಿ ಒಟ್ಟು 21,442 ಮಕ್ಕಳು ಜನಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7.7ರಷ್ಟು ಕುಸಿತ ಕಂಡಿದೆ. 1981ರಿಂದ ದಂತ್ತಾಂಶಗಳನ್ನು ಸಂಗ್ರಹಿಸಿ ನೋಡಿದಾಗ ಜನವರಿಯಲ್ಲಿ ಅತೀ ಕಡಿಮೆ ಮಕ್ಕಳ ಜನನ ಪ್ರಮಾಣವನ್ನು ಕಾಣಬಹುದು ಎಂದು ಯೊನ್ಹಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜನನ ಕುಸಿತ ಕಳೆದೆರಡು ವರ್ಷದಿಂದ ಹೆಚ್ಚಾಗಿದ್ದು, 2022ರಲ್ಲಿ ಶೇ.1 ಮತ್ತು 2023ರಲ್ಲಿ ಶೇ.5.7ರಷ್ಟು ತಗ್ಗಿದೆ. 2000ನೇ ಇಸವಿಯ ಜನವರಿಯಲ್ಲಿ 60 ಸಾವಿರ ಮಕ್ಕಳು ಜನಿಸಿದರೆ, 2002ರ ಜನವರಿಯಲ್ಲಿ 50 ಸಾವಿರ ಮತ್ತು 2016ರಲ್ಲಿ 30,000 ಮಕ್ಕಳ ಜನನವಾಗಿದೆ. 2020ರಿಂದ ಈ ಸಂಖ್ಯೆ ಜನವರಿ ತಿಂಗಳಲ್ಲಿ 20,000 ಮಟ್ಟದಲ್ಲಿದೆ. 2023ರ ಮಾರ್ಚ್ನಲ್ಲಿ ಮೊದಲ ಬಾರಿಗೆ ಜನನ ಸಂಖ್ಯೆ 20 ಸಾವಿರ ಮಟ್ಟದಲ್ಲಿ…
ಭಾರತದೊಂದಿಗೆ ವ್ಯಾಪಾರ ವಹಿವಾಟು ಆರಂಭಿಸಲು ಪಾಕಿಸ್ತಾನ ಎದುರು ನೋಡುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೀಗ ಪಾಕಿಸ್ತಾಣ ಸರ್ಕಾರ ಮತ್ತೊಮ್ಮೆ ಯೂ ಟರ್ನ್ ಹೊಡೆದಿದೆ. ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಪುನಾರಂಭಿಸುವ ಯಾವುದೇ ಯೋಜನೆ ಇಲ್ಲ ಎಂದು ಆಕ್ ವಿದೇಶಾಂಗ ಕಚೇರಿ ತಿಳಿಸಿದೆ. ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭಿಸಲು ಇಸ್ಲಾಮಾಬಾದ್ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಹೊಸ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ ಕೆಲವೇ ದಿನಗಳ ಈ ಹೇಳಿಕೆ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಸಂವಿಧಾನದ 370 ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರದ್ದುಪಡಿಸಿದ ನಂತರ 2019 ರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ಸ್ಥಗಿತಗೊಂಡಿವೆ. ಈ ಬಗ್ಗೆ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್, 2019 ರಲ್ಲಿ ಭಾರತವು ಅಕ್ರಮವಾಗಿ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನುಬಾಹಿರ ಕ್ರಮಗಳನ್ನು ಕೈಗೊಂಡಾಗಿನಿಂದ ಪಾಕಿಸ್ತಾನ -…