ಹುಬ್ಬಳ್ಳಿ:ಬೆಂಗಳೂರಿನಲ್ಲಿ ಹಸು ಕೆಚ್ಚಲು ಕೊಯ್ಲು ವಿಚಾರ ಅತ್ಯಂತ ಕ್ರೂರತನದಿಂದ ಕೂಡಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಏನಾಗಿದೆ ಗೊತ್ತು ಇದೊಂದು ಮೀತಿ ಮೀರಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಏನಾಗಿದೆ ಅಂತಾ ಮನವರಿಕೆ ಆಗತಾ ಇದೆಹುಬ್ಬಳ್ಳಿಯಲ್ಲಿ ಗಲಿಭೆ ಮಾಡಿದವರನ್ನ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚದವರನ್ನ ಬಿಟ್ಟರೆ ಏನಾಗುತ್ತದೆ ಇಂತಹ ಕೆಲಸ ಬಿಟ್ಟು ಬೇರೆ ಕೆಲಸ ಏನು ಮಾಡತ್ತಾರೆ ಸರಕಾರ ಈ ಕುರಿತು ಕಟುವಾಗಿ ನಿರ್ಧಾರ ತೆಗೆದುಕೊಳ್ಳಬೇಕು ತಪ್ಪು ಮಾಡಿದವರ ಮೇಲೆ ಕಠಿಣ ನಿರ್ಧಾರ ದಿಂದ ಮಾತ್ರ ಇಂತಹ ಘಟನೆಗಳನ್ನ ತಡೆಯಲು ಸಾಧ್ಯ ಈ ಸರಕಾರದಲ್ಲಿ ತುಷ್ಟೀಕರಣ ಒಂದು ಮಿತಿ ಇರದ ಹಾಗೇ ಆಗಿದ್ದು ಇದಕ್ಕೆ ಇರಬೇಕು.ಅತಿಯಾದ ತುಷ್ಟೀಕರಣದಿಂದ ಈ ರೀತಿ ಘಟನೆಗಳು ನಡೆತಾ ಇವೆ https://ainlivenews.com/do-you-cut-your-nails-in-the-evening-lakshmi-might-go-back-when-she-comes-home-be-careful/ ತಕ್ಷಣ ಸರಕಾರ ಎಚ್ಷೇತ್ತಕೊಳ್ಳಬೇಕು ಈಗ ಯಾರು ಅಪರಾಧಿಗಳು ಇದ್ದಾರೆ ಅವರ…
Author: Author AIN
ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ 777 ಚಾರ್ಲಿ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಕಿರಣ್ ರಾಜ್ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದಿದೆ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಹಲವರು ಭಾಗಿಯಾಗಿ ಕಿರಣ್ ರಾಜ್ ಗೆ ಶುಭಹಾರೈಸಿದ್ದಾರೆ. ಅಂದ ಹಾಗೆ ಕಿರಣ್ ರಾಜ್ ಭರತನಾಟ್ಯ ಪ್ರವೀಣೆಯಾಗಿರುವ ಅನಯಾ ವಸುಧಾ ಎಂಬುವವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಕಿರಣ್ ರಾಜ್ ಮದುವೆಯಾಗಲಿರುವ ಅನಯಾ ವಸುಧಾ ಭರತನಾಟ್ಯ ಪ್ರವೀಣೆಯಾಗಿದ್ದು ವಿದೇಶದಲ್ಲಿ ಹುಟ್ಟಿ ಬೆಳೆದಿದ್ದಾರೆ. ಇದೀಗ ಕಿರಣ್ ರಾಜ್ ಎಂಗೇಜ್ ಆಗಿರುವ ಫೋಟೋ ವೈರಲ್ ಆಗುತ್ತಿದೆ. ಜೊತೆಗೆ ಆಂಕರ್ ಅನುಶ್ರೀ ಕೂಡ ನವಜೋಡಿಗೆ ಶುಭಕೋರಿದ್ದಾರೆ. ಮದುವೆ ಯಾವಾಗ ಎಂಬುದು ತಿಳಿದುಬಂದಿಲ್ಲ. ಚಾರ್ಲಿ ಸಿನಿಮಾ ಮೂಲಕ ಭಾರೀ ಖ್ಯಾತಿ ಗಳಿಸಿದರು. ರಕ್ಷಿತ್ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 777 ಚಾರ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಯಿತು. ಡೈರೆಕ್ಟರ್ ಕಿರಣ್‌ರಾಜ್‌ಗೆ ಅತ್ಯುತ್ತಮ ಡೈರೆಕ್ಟರ್ ಪ್ರಶಸ್ತಿ ತಂದುಕೊಟ್ಟ ಚಾರ್ಲಿ ಸಿನಿಮಾ ಬೇರೆ…
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಜ್‌ಗಳು ಲಭ್ಯವಿದೆ. ಬೇಯಿಸಿದ ಆಹಾರ ಪದಾರ್ಥಗಳನ್ನು ಕೆಡದಂತೆ ದೀರ್ಘಕಾಲ ತಾಜಾ ತರಕಾರಿಗಳು ಮತ್ತು ಇತರ ಪದಾರ್ಥಗಳನ್ನು ಇರಿಸಲು ಫ್ರಿಜ್ ಅನ್ನು ಬಳಸಲಾಗುತ್ತದೆ. ಆದರೆ ಕೆಲವು ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಿದ್ರೆ ಯಾವೆಲ್ಲಾ ಆಹಾರಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನಬಾರದು, ಅಥವಾ ಬಳಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಈರುಳ್ಳಿ ಈರುಳ್ಳಿ ಅಡುಗೆ ಮನೆಯ ಹಾಗೂ ಅಡುಗೆಯ ಅವಿಭಾಜ್ಯ ಅಂಗ. ಈರುಳ್ಳಿ ಇಲ್ಲದೇ ಯಾವ ಅಡುಗೆಯೂ ರುಚಿಯಾಗುವುದಿಲ್ಲ ಎಂಬ ಮಟ್ಟಿಗೆ ಈರುಳ್ಳಿ ಅಡುಗೆ ಮನೆಯನ್ನು ಆವರಿಸಿ ಬಿಟ್ಟಿದೆ. ಸಿಪ್ಪೆ ತೆಗೆಯದ ಹಾಗೂ ಕತ್ತರಿಸಿದ ಈರುಳ್ಳಿಯನ್ನು ರೆಫ್ರೀಜರೇಟರ್ ನಲ್ಲಿ ಇರಿಸಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಈರುಳ್ಳಿ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುವ ಗುಣವನ್ನು ಹೊಂದಿರುವುದರಿಂದ ಅತಿಯಾದ ತೇವಾಂಶಕ್ಕೆ ಒಡ್ಡಿಕೊಂಡಾಗ ಈರುಳ್ಳಿಯ ರುಚಿ, ಗುಣಮಟ್ಟ, ಬಣ್ಣ ಹದಗೆಡುತ್ತದೆ. ರಾಷ್ಟ್ರೀಯ ಈರುಳ್ಳಿ ಸಂಘದ ಪ್ರಕಾರ, ಈರುಳ್ಳಿಯನ್ನು 45-55 ಡಿಗ್ರಿ ಸೆಲ್ಸಿಯಷ್ ನಲ್ಲಿ ಸಂಗ್ರಹಿಸಬೇಕು. ಗಿಡಮೂಲಿಕೆಗಳು, ಸೊಪ್ಪುಗಳು ಕೊತ್ತಂಬರಿ, ಪುದೀನ,…
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ನಾಗ್ಪುರದಲ್ಲಿ ಕಂಗನಾ ರನೌತ್ ಮತ್ತು ಅನುಪಮ್ ಖೇರ್ ಅವರೊಂದಿಗೆ ಕುಳಿತು ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿದರು. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಚಿತ್ರದ ವಿಶೇಷ ಸ್ಕ್ರೀನಿಂಗ್ನ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದಾರೆ. “ಜನವರಿ 17ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರದ ಪ್ರದರ್ಶನದಲ್ಲಿ ನಿತಿನ್ ಜಿ ಅವರೊಂದಿಗೆ” ಎಂದು ಕಂಗನಾ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಗಡ್ಕರಿ, “ಇಂದು ನಾಗ್ಪುರದಲ್ಲಿ ಟೀಂ ಕಂಗನಾ ಮತ್ತು ಅನುಪಮ್ ಖೇರ್ ಅಭಿನಯದ ‘ಎಮರ್ಜೆನ್ಸಿ’ ಚಲನಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ. ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಇಷ್ಟೊಂದು ಸತ್ಯಾಸತ್ಯತೆ ಮತ್ತು ಉತ್ಕೃಷ್ಟತೆಯೊಂದಿಗೆ ಪ್ರಸ್ತುತಪಡಿಸಿದ ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತದ ಇತಿಹಾಸದಲ್ಲಿನ ಮಹತ್ವದ ಅವಧಿಯೊಂದನ್ನು ಚಿತ್ರಿಸುವ ಈ ಚಿತ್ರವನ್ನು ಎಲ್ಲರೂ ನೋಡಬೇಕೆಂದು ನಾನು ಕರೆ ನೀಡುತ್ತೇನೆ” ಎಂದಿದ್ದಾರೆ. ಖೇರ್ ಮತ್ತು ಕಂಗನಾ ಅಭಿನಯದ…
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ 4 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟನ ಆರೋಗ್ಯ ಸ್ಥಿತಿ ಇಂದು ಗಂಭೀರವಾಗಿದೆ ಎಂದು ಸರಿಗಮ ವಿಜಯ್ ಮಗ ರೋಹಿತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಚಿತ್ರಕ್ಕೆ ಸಣ್ಣ ಪಾತ್ರದಲ್ಲಿ ನಟಿಸುವುದರ ಮೂಲಕ ನಟನಾಗಿ ಗುರುತಿಸಿಕೊಂಡರು. ನಟ ಸರಿಗಮ ವಿಜಯ್ ಅವರು 269 ಚಿತ್ರಗಳಲ್ಲಿ ನಟಸಿ, 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ. 2,400 ಧಾರಾವಾಹಿಗಳ ನಿರ್ದೇಶನದ ಜೊತೆಗೆ ನಟನೆ ಮಾಡಿದ್ದಾರೆ.
ಬಿಗ್ ಬಾಸ್ ಮನೆಯ ಪ್ರತಿಯೊಬ್ಬ ಸದಸ್ಯರು ಅಲ್ಲಿನ ನಿಯಮವನ್ನು ಚಾಚು ತಪ್ಪದೆ ಪಾಲಿಸಬೇಕು. ನಿಯಮ ಮುರಿದರೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡುದ್ದಾರೆ. ಆದರೂ ಕೆಲವು ಸಂದರ್ಭದಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ಕೈಯಿಂದ ತಪ್ಪಿಸಿಕೊಂಡು ಬಿಡುತ್ತಾರೆ. ಆದರೆ ಅದನ್ನು ನೋಟಿಸ್ ಮಾಡಿ ಸುದೀಪ್ ಅವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ಇದೀಗ ನಟ ಕಿಚ್ಚ ಸುದೀಪ್ ಕೂಡ ದೊಡ್ಮನೆಯಲ್ಲಿ ತಪ್ಪು ಮಾಡಿದ ಭವ್ಯಾ ಗೌಡರನ್ನು ಶಿಕ್ಷಿಸಿದ್ದಾರೆ. ಭವ್ಯಾ ಗೌಡ ಹನುಮಂತನ ಮೇಲೆ ಕೈ ಮಾಡಿದ್ದರು. ಆದರೂ ಅವರಿಗೆ ಬಿಗ್ ಬಾಸ್ ಶಿಕ್ಷೆ ನೀಡಿರಲಿಲ್ಲ. ಆದರೆ ಸುದೀಪ್ ಅವರು ಭವ್ಯಾಗೆ ಸೂಕ್ತ ಶಿಕ್ಷೆ ನೀಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನ ನಿಯಮದ ಪ್ರಕಾರ, ಯಾರೂ ಕೂಡ ಇನ್ನೊಬ್ಬರ ಮೇಲೆ ಕೈ ಮಾಡುವಂತಿಲ್ಲ. ಈ ಮೊದಲು ಕೂಡ ಕೈ ಮಾಡಿದ ಸ್ಪರ್ಧಿಗಳನ್ನು ಮುಲಾಜಿಲ್ಲದೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಆದರೆ ಈ ವಾರ ಭವ್ಯಾ ಗೌಡ ಅವರು ಹನುಮಂತನಿಗೆ ಅಕ್ಷರಶಃ ಹೊಡೆದರು! ಆದರೂ ಸಹ…
ಮಾತಿನ ಮೂಲಕವೇ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದ ಚೈತ್ರಾ ಕುಂದಾಪುರ ಈ ವಾರ ಎಲಿಮಿನೇಟ್ ಆಗಿದ್ದಾರೆ. ಕೊನೇ ಹಂತದಲ್ಲಿ ಮೋಕ್ಷಿತಾ ಪೈ, ಧನರಾಜ್, ಚೈತ್ರಾ ಕುಂದಾಪುರ ಅವರು ಡೇಂಜರ್ ಝೋನ್ಗೆ ಬಂದಿದ್ದರು. ಈ ವೇಳೆ ಮೋಕ್ಷಿತಾ ಅವರು ಮೊದಲು ಸೇಫ್ ಆದರು. ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ನಡುವೆ ಯಾರು ಔಟ್ ಆಗಬಹುದು ಎಂದ ಕೌತುಕ ಮೂಡಿತು. ಅಂತಿಮವಾಗಿ ಚೈತ್ರಾ ಅವರ ಆಟ ಇಲ್ಲಿಗೆ ಮುಗಿಯಿತು ಎಂದು ಹೇಳಲಾಯಿತು. ಈ ವೇಳೆ ಭಾವುಕರಾದ ಚೈತ್ರಾ ನೋವಿನಿಂದಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಎಲಿಮಿನೇಷನ್ ಪ್ರಕ್ರಿಯೆ ನಡೆಯುವಾಗ ‘ಬಿಗ್ ಬಾಸ್ ಮನೆಯಲ್ಲಿ ಒಂದು ಲಕೋಟೆ ಇರಲಿದೆ. ಅದರಲ್ಲಿ ಸೇಫ್ ಆದವರ ಹೆಸರು ಬರೆದಿರುತ್ತದೆ’ ಎಂದು ಸುದೀಪ್ ಹೇಳಿದರು. ಮನೆ ಪೂರ್ತಿ ಸುತ್ತಾಡಿ ಧನರಾಜ್ ಮತ್ತು ಚೈತ್ರಾ ಅವರು ಲಕೋಟೆ ಹುಡುಕಿದರು. ಹುಡುಕುವ ವೇಳೆ ಧನರಾಜ್ ಅವರು ‘ಸ್ವಾಮಿ ಕೊರಗಜ್ಜ’ ಎಂದು ದೇವರನ್ನು ಸ್ಮರಿಸಿದರು. ಅಚ್ಚರಿ ಎಂದರೆ, ಧನರಾಜ್ ಅವರೇ ಸೇಫ್…
ಭಾರತೀಯ ವಾಯುಪಡೆ ಯಲ್ಲಿ ಅಗ್ನಿವೀರ್ವಾಯು ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ afcat.cdac.in ಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಫ್ಲೈಯಿಂಗ್ ಬ್ರಾಂಚ್ , ಗ್ರೌಂಡ್ ಡ್ಯೂಟಿ ಟೆಕ್ನಿಕಲ್ / ನಾನ್ ಟೆಕ್ನಿಕಲ್ ಹುದ್ದೆಗಳು ಸೇರಿದಂತೆ ಒಟ್ಟು 336 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ * ಸಂಸ್ಥೆಯ ಹೆಸರು : ಭಾರತೀಯ ವಾಯುಪಡೆ * ಹುದ್ದೆಯ ಹೆಸರು : ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ (ತಾಂತ್ರಿಕ), ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ) * ಒಟ್ಟು ಹುದ್ದೆಗಳ ಸಂಖ್ಯೆ : 336 ಹುದ್ದೆಗಳು ಶೈಕ್ಷಣಿಕ ಅರ್ಹತೆ * ಫ್ಲೈಯಿಂಗ್ ಬ್ರಾಂಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ…
ಸೂರ್ಯಾಸ್ತದ ನಂತರ ಅಥವಾ ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡದಂತೆ ಧರ್ಮಗ್ರಂಥಗಳು ಎಚ್ಚರಿಸುತ್ತವೆ. ಈ ಕೆಲಸಗಳನ್ನು ಮಾಡಿದರೆ, ವ್ಯಕ್ತಿಯು ಆರೋಗ್ಯ ಸಮಸ್ಯೆಗಳು ಮತ್ತು ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು ಸೂರ್ಯಾಸ್ತದ ನಂತರ ಉಗುರುಗಳನ್ನು ಕತ್ತರಿಸುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಆಹಾರದ ವಿಚಾರದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಸಂಜೆಯ ವೇಳೆ ಉಗುರುಗಳನ್ನು ಕತ್ತರಿಸುವುದರಿಂದ ಶನಿಗೆ ಕೋಪ ಬರುತ್ತದೆ ಎಂದು ಹೇಳಲಾಗುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಸಾಲ ಮತ್ತು ಆದಾಯವನ್ನು ಪಾವತಿಸುವಲ್ಲಿ ತೊಂದರೆಗಳು ಕಡಿಮೆಯಾಗುತ್ತವೆ. ಜ್ಯೋತಿಷ್ಯದ ಕಾರಣಗಳೆಂದರೆ ಶನಿಯು ರಾತ್ರಿಯಲ್ಲಿ ಆಳುವ ಗ್ರಹವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದು ಶನಿ ಮತ್ತು ರಾಹು ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಸೂರ್ಯಾಸ್ತದ ನಂತರ ಉಗುರುಗಳನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತದೆ
ದಮಾಸ್ಕಸ್: ಸಿರಿಯಾ ರಾಜಧಾನಿ ದಮಾಸ್ಕಸ್‍ನ ಉಮಯ್ಯದ್ ಮಸೀದಿಯಲ್ಲಿ ಶುಕ್ರವಾರ ಕಾಲ್ತುಳಿತದಿಂದ 4 ಮಂದಿ ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಸನಾ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ. ಮಸೀದಿಯ ಬಳಿ ಉಚಿತ ಉಪಾಹಾರ ವಿತರಿಸುತ್ತಿದ್ದ ಸಂದರ್ಭದಲ್ಲಿ ಊಟ ಪಡೆಯಲು ಒಮ್ಮೆಲೇ ಜನರು ಮುಗಿಬಿದ್ದಿದ್ದಾರೆ. ಇದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿದ್ದು ಕಾಲ್ತುಳಿತಕ್ಕೆ ಸಿಲುಕೆ ನಾಲ್ವರು ಮೃತಪಟ್ಟಿದ್ದಾರೆ. ಆಹಾರದ ಪೊಟ್ಟಣ ಪಡೆಯುವ ಧಾವಂತದಲ್ಲಿ ಹಲವರು ಕೆಳಗೆ ಬಿದ್ದಿದ್ದು ಅವರನ್ನು ತುಳಿದುಕೊಂಡೇ ಗುಂಪು ಮುನ್ನುಗ್ಗಿದೆ. ಕನಿಷ್ಟ 4 ಮಂದಿ ಸಾವನ್ನಪ್ಪಿದ್ದು ಮಕ್ಕಳು, ಮಹಿಳೆಯರ ಸಹಿತ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ದುರಂತಕ್ಕೆ ಕಾರಣ ಮತ್ತು ಹೊಣೆಗಾರರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ದಮಾಸ್ಕಸ್ ಗವರ್ನರ್ ಹೇಳಿದ್ದಾರೆ.