Author: Author AIN

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಇತ್ತೀಚೆಗೆ ಒಂದರ ಹಿಂದೊದರಂತೆ ಜೀವ ಬೆದರಿಕೆಗಳು ಬರುತ್ತಲೆ ಇವೆ. ಇದೀಗ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದ ಕಾರಣಕ್ಕೆ ಮುಂಬೈ ಪೊಲೀಸರು ರಾಯಚೂರಿನಲ್ಲಿ ಸೋಹೆಲ್ ಪಾಶಾ ಎಂಬಾತನನ್ನು ಬಂಧಿಸಿದ್ದಾರೆ. ಶಾಕಿಂಗ್ ವಿಚಾರ ಎಂದರೆ ಈತ ಸಲ್ಮಾನ್ ಖಾನ್ ಮುಂಬರುವ ಸಿನಿಮಾದ ಗೀತ ಸಾಹಿತಿ ಆಗಿದ್ದನು. ಸಲ್ಮಾನ್ ಖಾನ್ ಅವರನ್ನು ಕೊಲ್ಲೋದಾಗಿ ಮುಂಬೈ ಸಂಚಾರ ಪೊಲೀಸರಿಗೆ ನಿರಂತರವಾಗಿ ಸಂದೇಶ ಬರುತ್ತಲೇ ಇದೆ. ನವೆಂಬರ್ 7ರಂದು ಕೂಡ ಬೆದರಿಕೆ ಬಂದಿತ್ತು. ಐದು ಕೋಟಿ ರೂಪಾಯಿ ಕೊಡದೇ ಇದ್ದರೆ ಸಲ್ಮಾನ್ ಹಾಗೂ ಸಹೋದರ ಸೋಹೆಲ್ ​ಖಾನ್ ರನ್ನು ಕೊಲೆ ಮಾಡುತ್ತೇವೆ ಎಂದು ಸೋಹೆಲ್ ಪಾಶಾ ಎಂಬಾತ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬಂಧಿಸಿದಂತೆ ವೊರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮುಂಬೈ ಪೊಲೀಸರು ನಿರಂತರವಾಗಿ ತನಿಖೆ ನಡೆಸಿದ್ದಾರೆ. ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದಾಗ ಅದು ಕರ್ನಾಟಕದ ರಾಯಚೂರಿನ ವೆಂಕಟೇಶ್ ನಾರಾಯಣ ಎಂಬುವವರದು ಅನ್ನೋದು ಗೊತ್ತಾಗಿದೆ. ಅಲ್ಲಿ…

Read More

ಕನ್ನಡದ ನಟ ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ’ ಚಿತ್ರದ ಬಳಿಕ ಟಾಲಿವುಡ್​ನಲ್ಲೂ ಡಾಲಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಸದ್ಯ ಡಾಲಿ ಧನಂಜಯ್ ನಟನೆಯ ‘ಜಿಬ್ರ’ ಚಿತ್ರದ ಟ್ರೇಲರ್ ಹೈದರಾಬಾದ್​ನಲ್ಲಿ ರಿಲೀಸ್ ಆಗಿದೆ. ಈ ಈವೆಂಟ್​ಗೆ ಚಿರಂಜೀವಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಧನಂಜಯ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ‘ಧನಂಜಯ್ ತೆಲುಗಿನಲ್ಲಿ ಸೆಟಲ್​ ಆಗ್ತಾರೆ’ ಎಂದು ಚಿರಂಜೀವಿ ಭವಿಷ್ಯ ನುಡಿದಿದ್ದಾರೆ. ‘ಕನ್ನಡದ ಅದ್ಭುತ ನಟ ಎಂದರೆ ಅದು ಧನಂಜಯ್. ನಾನು ಅವರ ಬಗ್ಗೆ ಕೇಳಿದ್ದೇನೆ, ಆದರೆ ಸಿನಿಮಾ ನೋಡಿಲ್ಲ. ಪುಷ್ಪ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಜಿಬ್ರಾ ಸಿನಿಮಾದಿಂದ ಅವರಿಗೆ ಒಳ್ಳೆಯ ಜನಪ್ರಿಯತೆ ಸಿಗುತ್ತದೆ. ಈ ಸಿನಿಮಾ ಬಳಿಕ ಅವರು ತೆಲುಗಿನಲ್ಲಿ ಸೆಟಲ್ ಆಗುತ್ತಾರೆ ಎಂಬುದಕ್ಕೆ ಯಾವುದೇ ಅನುಮಾನ ಬೇಡ’ ಎಂದು ಚಿರಂಜೀವಿ ಹೇಳಿದ್ದಾರೆ. ಧನಂಜಯ್ ಅವರಿಗೆ ಟಾಲಿವುಡ್​ ಚಿತ್ರರಂಗದ ಜೊತೆ ಒಳ್ಳೆಯ ನಂಟು ಬೆಳೆದಿದೆ. ಈ ಮೊದಲು ‘ಭೈರವ ಗೀತ’ ಹೆಸರಿನ ತೆಲುಗು ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ರಾಮ್…

Read More

ಬಹುತಾರಾಗಣದ ‘ಕಲ್ಕಿ 2898 ಎಡಿ’ ಸಿನಿಮಾ ನಿರ್ದೇಶನ ಮಾಡಿ ಫೇಮಸ್ ಆದ ನಾಗ್ ಅಶ್ವಿನ್ ಅವರು ಸದ್ಯ ಈ ಚಿತ್ರದ ಸೀಕ್ವೆಲ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದ ನಿರ್ದೇಶಕ ಈಗ ಆಲಿಯಾ ಭಟ್ ಜೊತೆ ಸಿನಿಮಾ ಮಾಡುತ್ತಾರೆ ಎಂದು ವರದಿ ಆಗಿತ್ತು. ಆದರೆ ಈ ಸುದ್ದಿಯನ್ನು ನಾಗ್ ಅಶ್ವಿನ್ ನಿರಾಕರಿಸಿದ್ದಾರೆ. ಟಾಲಿವುಡ್ ನಲ್ಲಿ ಬೇಡಿಕೆ ಕಾಯ್ದುಕೊಂಡಿರುವ ನಾಗ್ ಅಶ್ವಿನ್ ಆಲಿಯಾ ಭಟ್ ಜೊತೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ನಾಗ್ ಅಶ್ವಿನ್ ಅವರು ಸಿನಿಮಾಗಳನ್ನು ಮಾಡುತ್ತಿರುವುದು ತೆಲುಗಿನಲ್ಲಿ. ಆಲಿಯಾ ಭಟ್ ಅವರಿಗೆ ತೆಲುಗು ಚಿತ್ರರಂಗ ಹೊಸದೇನು ಅಲ್ಲ. ಅವರು ಈಗಾಗಲೇ ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ನಾಗ್ ಅಶ್ವಿನ್ ಅವರು ಮಹಿಳಾ ಪ್ರಧಾನ ಪಾತ್ರ ಮಾಡಲು ಹೊರಟಿದ್ದಾರೆ ಎಂದು ವರದಿ ಆಗಿತ್ತು. ಇದಕ್ಕೆ ಆಲಿಯಾ ಹೀರೋಯಿನ್ ಎಂದು ಹೇಳಲಾಗಿತ್ತು. ಆಲಿಯಾ ಭಟ್ ಅವರು ಹಲವು ಮಹಿಳಾ ಪ್ರಧಾನ ಸಿನಿಮಾ ಮಾಡಿ ಗಮನ ಸೆಳೆದಿದ್ದಾರೆ. ‘ರಾಜಿ’ ಚಿತ್ರದಲ್ಲಿ…

Read More

ಕಾಲಿವುಡ್​ನ ಖ್ಯಾತ ನಟ ನೆಪೋಲಿಯನ್ ಮಗ ಧನುಷ್ ವಿವಾಹವನ್ನು ನ. 7ರಂದು ಜಪಾನ್​ನಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಧನುಷ್ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವಾಗಲೇ ತಮಿಳುನಾಡಿನ ಖ್ಯಾತ ಸಾಮಾಜಿಕ ಕಾರ್ಯಕರ್ತ ಕೃಷ್ಣವೇಲ್ ನೀಡಿರುವ ಹೇಳಿಕೆಗಳು ಭಾರಿ ಚರ್ಚೆಗೆ ಕಾರಣವಾಗಿದೆ. ನೆಪೋಲಿಯನ್ ಮಗನಿಗೆ ನಡೆದ ಮದುವೆ ಒಂದು ಕೈಗೊಂಬೆ ಮದುವೆ ಎಂದು ಕೃಷ್ಣವೇಲ್ ಟೀಕಿಸಿದ್ದಾರೆ. ನೆಪೋಲಿಯನ್ ಪುತ್ರ ಧನುಷ್ ಹಾಗೂ ಅಕ್ಷಯ ಮದುವೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಕಾಯಿಲೆಯಿಂದ ಬಳಲುತ್ತಿರುವ ಧನುಷ್, ಜೀವನವಿಡಿ ಎದ್ದು ನಡೆಯಲಾಗದಂತಹ ಸ್ಥಿತಿಯಲ್ಲಿದ್ದಾರೆ. ಯಾವಾಗಲೂ ಕುರ್ಚಿಯ ಆಸರೆ ಇರಬೇಕು. ಹೀಗಿರುವಾಗ ಧನುಷ್​, ವೈವಾಹಿಕ ಜೀವನ ನಡೆಸುವುದು ಸಾಧ್ಯವೇ? ಹಣಕ್ಕಾಗಿ ಈ ಹೆಣ್ಣು ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ​ಆರಂ ನಾಡು ಯೂಟ್ಯೂಬ್ ಚಾನೆಲ್​ಗೆ ಸಂದರ್ಶನ ನೀಡಿರುವ ರಾಜಕೀಯ ವಿಮರ್ಶಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೃಷ್ಣವೇಲ್, ಈ ಮಹಿಳೆಯನ್ನು ನೆಪೋಲಿಯನ್​ ಪುತ್ರ…

Read More

ಟಿಬಿ, ಕೆಮ್ಮು, ರಕ್ತಹೀನತೆ ಮತ್ತು ಬೆನ್ನು-ಮೊಣಕಾಲು ನೋವನ್ನು ಗುಣಪಡಿಸಲು ಬಳಸುವ ಕ್ಯಾಟರ್ಪಿಲ್ಲರ್ ಫಂಗಸ್‌ ಅಥವಾ ಶಿಲೀಂಧ್ರವನ್ನು ಇದೀಗ ಗಂಭೀರ ಕಾಯಿಲೆಗೂ ಬಳಸಲಾಗುತ್ತದೆ. ಕಾರ್ಡಿಸೆಪ್ಸ್ ಎಂದು ಕರೆಯಲ್ಪಡುವ ಕ್ಯಾಟರ್ಪಿಲ್ಲರ್‌ ಅಥವಾ ಹುಳುಗಳ ಮೇಲೆ ಬೆಳೆಯುವ ಆರೆಂಜ್ ಜೊಂಬಿ ಫಂಗಸ್ ಅನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಬಹುದು ಎಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ. ಕಾರ್ಡಿಸೆಪ್ಸ್ ಎಂಬ ಶಿಲೀಂಧ್ರವು ಕ್ಯಾನ್ಸರ್ ಕೋಶಗಳಲ್ಲಿ ಅತಿಯಾದ ಕೋಶ ಬೆಳವಣಿಗೆಯ ಸಂಕೇತಗಳನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೊಸ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಹುಳುಗಳ ಮೇಲೆ ಬೆಳೆಯುವ ಶಿಲೀಂಧ್ರವನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಬಹುದು. ಕೀಮೋಥೆರಪಿ ಮತ್ತು ವಿಕಿರಣದಂತಹ ಪರ್ಯಾಯಗಳಿಗಿಂತ ರೋಗಿಗಳಿಗೆ ಕಡಿಮೆ ಹಾನಿಕಾರಕ ಚಿಕಿತ್ಸೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. FEBS ಲೆಟರ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯು ಕಾರ್ಡಿಸೆಪಿನ್ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗದಂತೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಸಂಕೇತಗಳನ್ನು ಅಡ್ಡಿಪಡಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ. ಈ ಕಿತ್ತಳೆ ಬಣ್ಣದ ಜೊಂಬಿ ಶಿಲೀಂಧ್ರವನ್ನು ಸಾಂಪ್ರದಾಯಿಕ ಏಷ್ಯನ್ ಔಷಧದಲ್ಲಿ ದೀರ್ಘಕಾಲ ಬಳಸಲಾಗಿದೆ. ಆದರೆ ಈಗ ಸಂಶೋಧಕರು…

Read More

ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾಯ್ತಿರ್ತಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್ ಖಾನ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ 2022 ರಲ್ಲಿ ಬಿಡುಗಡೆಯಾಯಿತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾ ಫ್ಲಾಪ್ ಆಗಿತ್ತು. ಅದರ ನಂತರ, ಆಮೀರ್ ನಟನೆಯನ್ನು ಬಿಡಲು ನಿರ್ಧರಿಸಿದ್ರಂತೆ. ಇದೀಗ ಈ ದೊಡ್ಡ ನಿರ್ಧಾರದ ಹಿಂದಿನ ಕಾರಣ ರಿವೀಲ್ ಮಾಡಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅಮೀರ್ ಖಾನ್, ನಟನೆಯನ್ನು ತ್ಯಜಿಸುವ ನಿರ್ಧಾರದ ಬಗ್ಗೆ ಹೇಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲಿನಿಂದ ಕಂಗೆಟ್ಟು ನಟನೆಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ನಾನು ಬರಲಿಲ್ಲ ಎಂದಿದ್ದಾರೆ. ಸಿನಿಮಾ ಕೆಲಸದ ಬಗ್ಗೆ ಮಾತಾಡಿದ ನಟ ಅಮೀರ್ ಖಾನ್, “ನಾನು 18 ವರ್ಷದವನಾಗಿದ್ದಾಗಿನಿಂದಲೂ ನನ್ನ ಗಮನವೆಲ್ಲಾ…

Read More

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ದನಿಯೋಳೆ’ ಹಾಡು ಸೈಪರ್ ಹಿಟ್ ಆಗಿತ್ತು. ಈ ಹಾಡು ಹಾಡಿದ್ದು ಜಸ್ ಕರಣ್ ಸಿಂಗ್. ಇದೀಗ ಈ ಜಸ್ ಕರಣ್ ಸಿಂಗ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ಹಾಡಿಗೆ ಧನಿಯಾಗಿದ್ದಾರೆ. ಮೂಲತಃ ಪಂಜಾಬ್​ನವರಾದರೂ ರಿಯಾಲಿಟಿ ಶೋಗಳ ಮೂಲಕ ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಮಧುರ ಕಂಠದಿಂದಾಗಿ ಕನ್ನಡದವರೇ ಆಗಿಬಿಟ್ಟಿರುವ ಜಸ್ ಕರಣ್ ಸಿಂಗ್ ಈಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಸಿನಿಮಾದ ಹೆಸರು ‘ಅಂಶು’. ‘ಗಟ್ಟಿಮೇಳ’ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ‘ಅಂಶು’ ಸಿನಿಮಾನಲ್ಲಿ ಜಸ್ ಕರಣ್ ಸಿಂಗ್ ಮಧುರವಾದ ಹಾಡೊಂದನ್ನು ಹಾಡಿದ್ದಾರೆ. ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಕಾಣಿಸಿಕೊಂಡಿದ್ದಾರೆ. ಮಹಿಳೆಯ ಆಂತರಿಕ ತುಮುಲಗಳನ್ನು, ಮಾಡುತ್ತಿರುವ ಹೋರಾಟವನ್ನು ಹೇಳುವ ಹಾಡುವ ಇದಾಗಿದ್ದು, ಜಸ್ ಕರಣ್ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಈಗ ಬಿಡುಗಡೆ ಆಗಿರುವ ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಜೊತೆಗೆ ಸಿನಿಮಾದ ಕೆಲವು ತುಣುಕುಗಳನ್ನು ಸೇರಿಸಲಾಗಿದೆ. ಚಿತ್ರ ಸನ್ನಿವೇಶಗಳಿಗೆ…

Read More

ಪಾಕಿಸ್ತಾನದಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಜನ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಬಳುತ್ತಿದ್ದಾರೆ. ಹೀಗಾಗಿ, ಸರ್ಕಾರ ಜನರ ಓಡಾಟಕ್ಕೆ ಬ್ರೇಕ್‌ ಹಾಕಿದ್ದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ಹೆಚ್ಚಿನ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಿದೆ. ತೀವ್ರವಾದ ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳನ್ನು ನಿಗ್ರಹಿಸಲು ಸೋಮವಾರದಿಂದ ಕೆಲವು ಪ್ರದೇಶಗಳಲ್ಲಿ ಅಂಗಡಿಗಳು, ಮಾರುಕಟ್ಟೆಗಳು ಮತ್ತು ಮಾಲ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ ಜನರು ಹೊರಗಡೆ ಹೆಚ್ಚು ಓಡಾಡದಂತೆ ಕ್ರಮ ವಹಿಸಲಾಗಿದೆ. ವಾಯು ಗುಣಮಟ್ಟದಲ್ಲಿ ವಿಶ್ವದ ಅತ್ಯಂತ ಕಲುಷಿತ ನಗರವಾದ ಲಾಹೋರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನ.17 ರ ವರೆಗೆ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಾನಗಳು ಮತ್ತು ಪ್ರಾಣಿಸಂಗ್ರಹಾಲಯಗಳಂತಹ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ. ಲಾಹೋರ್, ಮುಲ್ತಾನ್, ಫೈಸಲಾಬಾದ್ ಮತ್ತು ಗುಜ್ರಾನ್‌ವಾಲಾ ಜಿಲ್ಲೆಗಳಲ್ಲಿ ಉಸಿರಾಟದ ಕಾಯಿಲೆಗಳು, ಕಣ್ಣು ಮತ್ತು ಗಂಟಲಿನ ಕಿರಿಕಿರಿ ಮತ್ತು ಗುಲಾಬಿ ಕಣ್ಣಿನ ಕಾಯಿಲೆಯ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಕ್ರೀಡಾ ಕಾರ್ಯಕ್ರಮಗಳು, ಪ್ರದರ್ಶನಗಳು, ಉತ್ಸವಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟ ಸೇರಿದಂತೆ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಅನಿವಾರ್ಯ…

Read More

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚೌಕಟ್ಟನ್ನು ತಿರುಚುವ ಪ್ರಯತ್ನಗಳ ವಿರುದ್ಧ ಭಾರತ ಎಚ್ಚರಿಕೆ ನೀಡಿದೆ. ಇಂತಹ ಕ್ರಮಗಳು ಶಾಶ್ವತ ಸದಸ್ಯತ್ವದ ವಿಸ್ತರಣೆ ಮತ್ತು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದ ಕಡಿಮೆ ಪ್ರಾತಿನಿಧ್ಯವನ್ನು ಪರಿಹರಿಸುವಂತಹ ಮಹತ್ವದ ಅಂಶಗಳನ್ನು ಅನಿರ್ದಿಷ್ಟವಾಗಿ ಮುಂದೂಡುವ ಹುನ್ನಾರವಾಗಿದೆ ಎಂದು ಆರೋಪಿಸಿದೆ. ಭದ್ರತಾ ಮಂಡಳಿಯ ಸದಸ್ಯತ್ವದಲ್ಲಿ ಸಮಾನ ಪ್ರಾತಿನಿಧ್ಯ ಮತ್ತು ಹೆಚ್ಚಳದ ಪ್ರಶ್ನೆ ಕುರಿತು ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪಿ.ಹರೀಶ್‌ ಈ ಹೇಳಿಕೆ ನೀಡಿದ್ದಾರೆ. ಯುಎನ್‌ಎಸ್ಸಿ ಸುಧಾರಣೆಯ ತುರ್ತು ಅಗತ್ಯವನ್ನು ಹಲವಾರು ದಶಕಗಳಿಂದ ಸಾಮೂಹಿಕವಾಗಿ ಪುನರುಚ್ಚರಿಸಿದರೂ, 1965 ರಿಂದ ಕೌನ್ಸಿಲ್‌ ಅನ್ನು ಕೊನೆಯದಾಗಿ ಶಾಶ್ವತವಲ್ಲದ ವಿಭಾಗದಲ್ಲಿ ವಿಸ್ತರಿಸಿದಾಗಿನಿಂದ ಈ ನಿಟ್ಟಿನಲ್ಲಿ ತೋರಿಸಲು ನಮಗೆ ಯಾವುದೇ ಫಲಿತಾಂಶಗಳಿಲ್ಲ ಎಂಬುದು ನಿರಾಶಾದಾಯಕವಾಗಿದೆ ಎಂದು ಅವರು ಹೇಳಿದರು.

Read More

ಗಾಝಾದಲ್ಲಿ ಇಸ್ರೇಲ್ ನಡೆಸಿದ ಎರಡು ದಾಳಿಗಳಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ ಮಾನವೀಯ ವಲಯ ಎಂದು ಕರೆಯಲ್ಪಡುವ ಕೇಂದ್ರವಾದ ಮುವಾಸಿಯಲ್ಲಿ ಸ್ಥಳಾಂತರಗೊಂಡ ಜನರು ಬಳಸುವ ತಾತ್ಕಾಲಿಕ ಕೆಫೆಟೇರಿಯಾದಲ್ಲಿ ಸೋಮವಾರ ತಡರಾತ್ರಿ ಒಂದು ದಾಳಿ ನಡೆಸಲಾಗಿದೆ. ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ನಾಸಿರ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳದ ವೀಡಿಯೊದಲ್ಲಿ ತುಕ್ಕು ಹಿಡಿದ ಲೋಹದ ಹಾಳೆಗಳಿಂದ ಮಾಡಿದ ಆವರಣದಲ್ಲಿ ಮರಳಿನಲ್ಲಿ ಸ್ಥಾಪಿಸಲಾದ ಮೇಜುಗಳು ಮತ್ತು ಕುರ್ಚಿಗಳ ನಡುವೆ ರಕ್ತಸಿಕ್ತ ಗಾಯಾಳುಗಳನ್ನು ಪುರುಷರು ಎಳೆಯುತ್ತಿರುವುದು ಕಾಣಿಸಿದೆ. ಗಾಝಾದ ಇತರ ಭಾಗಗಳಿಂದ ಸ್ಥಳಾಂತರಗೊಳ್ಳುತ್ತಿರುವ ಫೆಲೆಸ್ತೀನೀಯರಿಗೆ ಆಶ್ರಯ ಪಡೆಯಲು ತಿಳಿಸಿರುವ ಇಸ್ರೇಲ್ ಸೇನೆಯು ಈ ವಲಯವನ್ನು ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ದಕ್ಷಿಣ ಗಾಝಾದ ಮೆಡಿಟರೇನಿಯನ್ ಕರಾವಳಿಯುದ್ದಕ್ಕೂ ಕೆಲವು ಸೌಲಭ್ಯಗಳು ಅಥವಾ ಸೇವೆಗಳನ್ನು ಹೊಂದಿರುವ ದಿಬ್ಬಗಳು ಮತ್ತು ಕೃಷಿ…

Read More