Author: Author AIN

ನೊರೊವೈರಸ್ ಎಂದು ಕರೆಯಲಾಗುವ ಹೊಟ್ಟೆಯ ಸೋಂಕು ಸದ್ಯ ಅಮೆರಿಕದ ಈಶಾನ್ಯ ಪ್ರದೇಶದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಏಜೆನ್ಸಿ ಸಿಡಿಸಿ ಅಂಕಿ ಅಂಶದಲ್ಲಿ ವರದಿ ಆಗಿದೆ. ಸಿಡಿಸಿ ವರದಿಯ ಪ್ರಕಾರ, ಈಶಾನ್ಯ ಪ್ರದೇಶದಲ್ಲಿನ 3 ವಾರಗಳ ಪರೀಕ್ಷೆಯ ಸರಾಸರಿ ಪಾಸಿಟಿವ್ ಪ್ರಮಾಣ 13.9%ಕ್ಕೆ ತಲುಪಿದೆ ಮತ್ತು 2023ರ ಡಿಸೆಂಬರ್ ಮಧ್ಯಭಾಗದಿಂದ ಪಾಸಿಟಿವ್ ಪ್ರಮಾಣ 10%ಕ್ಕೂ ಹೆಚ್ಚಿನ ಪ್ರಮಾಣದಲ್ಲಿಯೇ ಉಳಿದಿದೆ. ಅಮೆರಿಕದಲ್ಲಿ ವಾಂತಿ, ಅತಿಸಾರ ಮತ್ತು ಆಹಾರದಿಂದ ಹರಡುವ ಅನಾರೋಗ್ಯದ ಪ್ರಾಥಮಿಕ ಕಾರಣ ನೊರೊವೈರಸ್ ಎಂದು ಗುರುತಿಸಲಾಗಿದೆ. ಈ ಅನಾರೋಗ್ಯ ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಇದು ಬಹಳ ಸುಲಭವಾಗಿ ಮತ್ತು ತ್ವರಿತವಾಗಿ ಹರಡುತ್ತದೆ. ನೊರೊವೈರಸ್ ಹರಡುವುದನ್ನು ತಡೆಯಲು ಸಾಬೂನು ಮತ್ತು ನೀರಿನಿಂದ ಕೈತೊಳೆಯಬೇಕು, ಬ್ಲೀಚಿಂಗ್ ಪೌಡರ್ ಬಳಸಬೇಕು ಮತ್ತು ಬಿಸಿನೀರಿನಿಂದ ಬಟ್ಟೆಗಳನ್ನು ಒಗೆಯಬೇಕು ಎಂದು ಸಿಡಿಸಿ ವರದಿಯಲ್ಲಿ ತಿಳಿಸಿದೆ.

Read More

ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ ಪತ್ನಿಯ ಫೋನ್‌ ಕರೆಗಳನ್ನು ಕದ್ದಾಲಿಕೆ ಮಾಡಿ ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ದತ್ತಾಂಶಗಳನ್ನು ತಿಳಿದು, ಅವುಗಳ ಆಧಾರದಲ್ಲಿ ಅಕ್ರಮವಾಗಿ ವ್ಯವಹಾರ ನಡೆಸಿ 16.58 ಕೋಟಿ ರೂ. ಘಳಿಸಿದ್ದ ಪತಿಗೆ ಪತ್ನಿ ವಿಚ್ಚೇದನ ನೀಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಟೆಕ್ಸಾಸ್‌ ನಿವಾಸಿ ಟೈಲರ್‌ ಲೌಡನ್‌ ಅವರ ಪತ್ನಿ ಬ್ರಿಟಿಷ್‌ ಪೆಟ್ರೋಲಿಯಂ (ಬಿಪಿ) ಸಂಸ್ಥೆಯಲ್ಲಿ ವಿಲೀನ ಮತ್ತು ಸ್ವಾಧೀನ ವಿಭಾಗದಲ್ಲಿ ನಿರ್ವಹಣ ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿ ದ್ದರು. ಬಿಪಿ ಸಂಸ್ಥೆಯು ಅಮೆರಿಕ ಐಎನ್‌ಸಿಯ ಟ್ರಾವೆಲ್ಸ್‌ ಸಂಸ್ಥೆಗಳನ್ನು ಖರೀದಿಸಲು ಯೋಜಿಸಿದ್ದು, ಅದರ ಮೇಲ್ವಿಚಾರಣೆಯನ್ನೂ ನೋಡಿಕೊ ಳ್ಳುತ್ತಿದ್ದರು. ಆಕೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ಟೈಲರ್‌ ಪತ್ನಿಯ ಫೋನ್‌ ಕರೆಗಳನ್ನು ಕದ್ದಾಲಿಸಿ ಈ ಬಗ್ಗೆ ತಿಳಿದುಕೊಂಡು, ಟ್ರಾವೆಲ್‌ ಸಂಸ್ಥೆಗಳ ಷೇರನ್ನು ಖರೀದಿಸಿದ್ದಾರೆ. ಈ ಮೂಲಕ 16.58 ಕೋಟಿ ರೂ. ಗಳ ಲಾಭ ಪಡೆದಿದ್ದಾರೆ. ಇತ್ತ ಸಂಸ್ಥೆಯು ಮಾಹಿತಿ ಸೋರಿಕೆಯಾಗಿದೆ ಎಂದು ಟೈಲರ್‌ ಅವರ ಪತ್ನಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದರಿಂದ ಮನನೊಂದಿ ಪತ್ನಿ ಪತಿಯಿಂದ ವಿಚ್ಚೇದನ ಪಡೆದಿದ್ದಾರೆ.

Read More

ಸ್ಯಾಂಡಲ್‌ವುಡ್‌ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಸಿನಿಮಾ, ಬಿಗ್ ಬಾಸ್, ಐಪಿಲ್ ಅಂತ ಸಖತ್ ಬ್ಯುಸಿಯಾಗಿರುವ ಸುದೀಪ್ ಅಂದ್ರೆ ಎಲ್ರಿಗೂ ಅಚ್ಚು ಮೆಚ್ಚು. ಸದಾ ಸಖತ್ ಆಕ್ಟೀವ್ ಆಗಿರುವ ಕಿಚ್ಚ ಇದೀಗ ಪ್ರಚಲಿತ ಕಂಪನಿಯೊಂದರ ರಾಯಭಾರಿ ಆಗಿದ್ದಾರೆ. ಯೆಸ್. ಇನ್ಮುಂದೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದ್ದನ್ನು ಸುದೀಪ್ ಅವರೇ ಹೇಳಲಿದ್ದಾರೆ. ಅಂದ್ರೆ ಸುದೀಪ್ ಕಂಚಿನ ಕಂಠದಿಂದ ಇನ್ಮುಂದೆ ಆ ಕಂಪನಿ ಹಣಕಾಸಿನ ವ್ಯವಹಾರಗಳ ಕಂಪ್ಲೀಟ್ ಡಿಟೈಲ್ಸ್ ದೊರೆಯುತ್ತದೆ. ಹೌದು, ಕಿಚ್ಚ ಸುದೀಪ್ ಧ್ವನಿ ಇನ್ಮೇಲೆ ಫೋನ್ ಪೇ ಸ್ಪೀಕರ್‌ಗಳಲ್ಲಿ ಕೇಳಿ ಬರಲಿದೆ. ಕಿಚ್ಚ ಸುದೀಪ್ ಜೊತೆಗೆ ಫೋನ್ ಪೇ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಕಿಚ್ಚನ ವಾಯ್ಸ್ ಸ್ಯಾಂಪಲ್ ತೆಗೆದುಕೊಂಡು ಹೋಗಲಾಗಿದೆ. ‘ಒಂದು ರೂಪಾಯಿ ಫೋನ್ ಪೇ ಸ್ವೀಕರಿಸಲಾಗಿದೆ ಧನ್ಯವಾದಗಳು’ ಅನ್ನೋ ಸಾಲನ್ನ ಕಿಚ್ಚನಿಂದ ಹೇಳಿಸಲಾಗಿದೆ. ನೀವು ಯಾರಿಗೆ ಹಣ ಕಳುಹಿಸಿದ್ರು, ಯಾವುದೇ ಅಂಗಡಿಯಲ್ಲಿ ಶಾಪಿಂಗ್ ಮಾಡಿ…

Read More

ಕನ್ನಡ ಸಿನಿಮಾ ರಂಗದ ಖ್ಯಾತ ನಟ ವಿಷ್ಣುವರ್ಧನ್ ಅವರನ್ನು ನೆನಪಿಸುವಂತಹ ಕಿರುಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ತಯಾರಾಗಿದೆ. ಡಾ.ವಿಷ್ಣು ಸೇನಾ ಸಮಿತಿಯು ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದು, ನಟ ಹುಚ್ಚ ವೆಂಕಟ್ ಕಿರು ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸಮಯದಿಂದ ಹುಚ್ಚ ವೆಂಕಟ್ ಸಿನಿಮಾ ರಂಗದಿಂದ ದೂರವಾಗಿದ್ದರು. ಅವರನ್ನು ಹುಡುಕಿ ಕರೆತಂದಿರೋ ಕಿರುಚಿತ್ರತಂಡ ಚಿತ್ರದಲ್ಲಿ ನಟಿಸುವಂತೆ ಮಾಡಿದೆ ಚಿತ್ರತಂಡ. ವಿಜಯ್ ಕಿತ್ತೂರ್ ನಿರ್ದೇಶನದ ಈ ಕಿರು ಚಿತ್ರಕ್ಕೆ ವಿಷ್ಣು ಗೋವಿಂದ್ ಸಂಕಲನ ಮಾಡಿದ್ದಾರೆ. ಖ್ಯಾತ ಫೋಟೋಗ್ರಾಫರ್ ಮತ್ತು ಡಿಸೈನರ್ ರಾಜು ವಿಷ್ಣು ಕೂಡ ಈ ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದು ಇತ್ತೀಚೆಗಷ್ಟೇ ಕಿರುಚಿತ್ರದ ಲಿರಿಕಿಲ್ ವಿಡಿಯೋ  ರಿಲೀಸ್ ಆಗಿದೆ. ನಿರ್ದೇಶಕ ಮತ್ತು ನಟರಾದ ರಘುರಾಮ್, ನವೀನ್ ಕೃಷ್ಣ, ನಿರ್ದೇಶಕ ಖದರ್ ಕುಮಾರ್ ಹಾಗೂ ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಉಪಸ್ಥಿತಿಯಲ್ಲಿ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿದೆ. ವಿಷ್ಣುವರ್ಧನ್ ಅವರ ಕುರಿತಂತೆ ಹಲವಾರು ವಿಚಾರಗಳನ್ನು…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಗಲಾಟೆ ದಿನದಿಂದ ದಿನಕ್ಕೆ ವಿವಿಧ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಗೌಡತಿ ಸೇನೆ ಹೆಸರಿನ ಸಂಘಟನೆಯು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ನೀಡಿದೆ. ಜೊತೆಗೆ ಈ ಪ್ರಕರಣ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದೆ. ಇದರ ಜೊತೆಗೆ ದರ್ಶನ್ ವಿರುದ್ಧ ಇನ್ನೂ ಕೆಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಹೆಣ್ಣು ಮಕ್ಕಳ ನಿಂದನೆ ಮತ್ತು ರಾಜ್ಯದ ಪ್ರಭಾವಿ ಸಮುದಾಯದ ನಾಯಕನಿಗೆ ಅವಮಾನ ಮಾಡಿದ ಹಿನ್ನೆಲೆಯಾಗಿಟ್ಟುಕೊಂಡು ದರ್ಶನ್ ವಿರುದ್ಧ ಆರ್.ಆರ್.ನಗರ ಮತ್ತು ಚಂದ್ರಲೇ ಔಟ್ ಠಾಣೆಯಲ್ಲಿ ಗಣೇಶ್ ಗೌಡ ಹಾಗೂ ಜಗದೀಶ್ ಎನ್ನುವರು ಎರಡು ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜ್ಯದ ಪ್ರಭಾವಿ ಸಮುದಾಯದ ನಾಯಕರ ಬಗ್ಗೆ ಮತ್ತು ವೇದಿಕೆ ಮೇಲೆ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ  ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದರ್ಶನ್ ಅವರ ಮಾತು ಒಂದು ಸಮುದಾಯವನ್ನು ಕೆರಳಿಸುವಂತಿದೆ. ದರ್ಶನ್ ಗೆ ಹೆಣ್ಣು ಮಕ್ಕಳೆಂದರೆ ಆಟಿಕೆಯ ವಸ್ತುಗಳ ರೀತಿ ಬಳಸಿ ಬಿಸಾಡುವಂತ…

Read More

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಮೆರಿಕಾದ ನಾಸಾ ಸಂಸ್ಥೆಯ ಕ್ವಾಡ್‌ಕಾಪ್ಟರ್‌ ಮಾದರಿಯಲ್ಲಿ ಮಂಗಳ ಗ್ರಹಕ್ಕೆ  ರೋಟೋಕಾಪ್ಟರ್ ಕಳುಹಿಸುವ ಕುರಿತು ಚಿಂತನೆ ನಡೆಸುತ್ತಿದೆ. ಮೂರು ವರ್ಷಗಳ ತನ್ನ ಅಭೂತಪೂರ್ವ ಕಾರ್ಯಾಚರಣೆ ವೇಳೆ 72 ಉಪಗ್ರಹ ಹಾರಾಟಗಳನ್ನು ನಾಸಾ ಪೂರ್ಣಗೊಳಿಸಿದೆ. ಇಸ್ರೋದ ರೋಟರ್‌ಕ್ರಾಫ್ಟ್ ಇನ್ನೂ ಪರಿಕಲ್ಪನೆಯ ಹಂತದಲ್ಲಿದ್ದು, ಇದು ತಾಪಮಾನ ಸಂವೇದಕ, ತೇವಾಂಶ ಸಂವೇದಕ, ಒತ್ತಡ ಸಂವೇದಕ, ಗಾಳಿಯ ವೇಗ ಸಂವೇದಕ, ವಿದ್ಯುತ್ ಕ್ಷೇತ್ರ ಸಂವೇದಕ, ಜಾಡಿನ ಜಾತಿಗಳು ಮತ್ತು ಧೂಳಿನ ಸಂವೇದಕ ಸೇರಿದಂತೆ ಹಲವಾರು ಉಪಕರಣಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ವರದಿಗಳ ಪ್ರಕಾರ ಯೋಜಿತ ಡ್ರೋನ್ ಕೆಂಪು ಗ್ರಹ ಮಂಗಳನ ವಾತಾವರಣವನ್ನು ವಿವರಿಸಲು ತೆಳುವಾದ ಮಂಗಳದ ಗಾಳಿಯಲ್ಲಿ 100 ಮೀಟರ್‌ಗಳಷ್ಟು ಎತ್ತರಕ್ಕೆ ಹಾರುವ ನಿರೀಕ್ಷೆಯಿದೆ. ರೆಡ್ ಪ್ಲಾನೆಟ್ ಸುತ್ತ ಸುಮಾರು ಒಂದು ದಶಕವನ್ನು ಕಳೆದ ನಂತರ 2022 ರಲ್ಲಿ ತನ್ನ ಜೀವನದ ಅಂತ್ಯವನ್ನು ತಲುಪಿದ ಮಂಗಳಯಾನ್ ಮಾರ್ಸ್ ಆರ್ಬಿಟರ್ ಮಿಷನ್‌ನ ಅನುಸರಣೆಯಾಗಿ – ಇಸ್ರೋ ತನ್ನ ಮತ್ತೊಂದು ಮಹತ್ವಾಕಾಂಕ್ಷಿ ಮಿಷನ್ ಅನ್ನು ಯೋಜಿಸುತ್ತಿದೆ ಎಂದು…

Read More

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಪಾಕಿಸ್ತಾನಕ್ಕೆ ನೀಡುತ್ತಿರುವ ಧನಸಹಾಯವನ್ನು ನಿಲ್ಲಿಸುವಂತೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್​) ಪತ್ರ ಬರೆಯಲಿದ್ದಾರೆ ಎಂದು ಪಕ್ಷದ ಮುಖಂಡ ಅಲಿ ಜಾಫರ್ ತಿಳಿಸಿದ್ದಾರೆ. “ಉತ್ತಮ ಆಡಳಿತವಿರುವ ದೇಶಗಳಿಗೆ ಮಾತ್ರ ಸಾಲ ನೀಡಬೇಕೆಂಬುದು ಐಎಂಎಫ್, ಇಯು ಮತ್ತು ಇತರ ಸಂಸ್ಥೆಗಳ ಚಾರ್ಟರ್ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇಮ್ರಾನ್​ ಖಾನ್ ಇಂದು ಐಎಂಎಫ್​​ಗೆ ಪತ್ರ ರವಾನಿಸಲಿದ್ದಾರೆ” ಎಂದು ಜಾಫರ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಖಾನ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು. ಪ್ರಜಾಪ್ರಭುತ್ವವಿಲ್ಲದ ದೇಶಗಳಲ್ಲಿ ಐಎಂಎಫ್, ಇಯು ಮತ್ತು ಇತರ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಹಾಗೂ ಅಂಥ ದೇಶಗಳಲ್ಲಿ ಅವು ಕಾರ್ಯನಿರ್ವಹಿಸಬಾರದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಮೂಲಧಾರವಾಗಿವೆ. ಆದಾಗ್ಯೂ, ರಾಷ್ಟ್ರದ ಜನಾದೇಶವನ್ನು ಹೇಗೆ ಕದಿಯಲಾಗಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಚುನಾವಣಾ…

Read More

ಅಮೆರಿಕದ ಇಲಿನಾಯ್ಸ್ ಅರ್ಬಾನಾ- ಚಾಂಪೇನ್ ವಿಶ್ವವಿದ್ಯಾಲಯದಲ್ಲಿ (ಯುಐಯುಸಿ) ವ್ಯಾಸಂಗ ಮಾಡುತ್ತಿದ್ದ ಭಾರತೀಯ- ಅಮೆರಿಕನ್‌ ವಿದ್ಯಾರ್ಥಿ ಅಕುಲ್‌ ಬಿ. ಧವನ್‌ ಸಾವಿಗೆ ಅತಿಯಾದ ಮದ್ಯಸೇವನೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 26ರಂದು ನಾಪತ್ತೆಯಾಗಿದ್ದ ಅಕುಲ್‌ ಬಿ. ಧವನ್‌ ಶವ 10 ಗಂಟೆಗಳ ಬಳಿಕ ವಿಶ್ವವಿದ್ಯಾಲಯ ಬಳಿಯ ಕಟ್ಟಡದ ಹಿಂಬದಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿಯ ಸಾವಿನ ನಿಖರ ಕಾರಣದ ಪತ್ತೆಗಾಗಿ ತನಿಖೆ ನಡೆಸಿರುವ ಪೊಲೀಸರು, ಅತಿಯಾಗಿ ಮದ್ಯಸೇವನೆ ಹಾಗೂ ದೇಹದಲ್ಲಿ ಸಾಮಾನ್ಯ ಉಷ್ಣತೆ ಪ್ರಮಾಣಕ್ಕಿಂತ ಕಡಿಮೆ ಉಷ್ಣತೆ ಇದ್ದಿದ್ದರಿಂದ ವಿದ್ಯಾರ್ಥಿ ಧವನ್‌ ಮೃತಪಟ್ಟಿದ್ದಾರೆ ಎಂದು ಇಲಿನಾಯ್ಸ್‌ ರಾಜ್ಯದ ಪೊಲೀಸರು ಮತ್ತು ಚಾಂಪೇನ್‌ ಕೌಂಟಿ ಕಾರ್ನರ್‌ನ ಕಚೇರಿ ಮಾಹಿತಿ ನೀಡಿದೆ. ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸಂಚು ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Read More

ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ, ನಟಿ  ಸುಮಲತಾ ಅಂಬರೀಶ್‌ ಬಹಿರಂಗಪಡಿಸಿದ್ದಾರೆ. ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಸುಮಲತಾ ಈ ವಿಚಾರವನ್ನು ತಿಳಿಸಿದ್ದರು. ತಮ್ಮ 5 ವರ್ಷದ ಕೆಲಸದ ಬಗ್ಗೆ ಮೆಲುಕು ಹಾಕಿದ ನಟಿ ಈ ಮಧ್ಯೆ ತಮಗೆ ಪ್ರಾಣ ಬೆದರಿಕೆ ಇದ್ದ ಬಗ್ಗೆ ತಿಳಿಸಿದ್ದಾರೆ. ನಾನು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಈ ವೇಳೆ ಹೋರಾಟ ನಿಲ್ಲಿಸುವಂತೆ ನನಗೆ ಒತ್ತಡ ಹಾಗೂ ಪ್ರಾಣ ಬೆದರಿಕೆ ಇತ್ತು. ಆದರೆ ಈ ಬೆದರಿಕೆಗೆ ಹೆದರದೆ ಕೆಆರ್‌ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆಯನ್ನು ನಿಲ್ಲಿಸಿದೆ ಎಂದರು. ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ  ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ…

Read More

ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ, ನಟಿ  ಸುಮಲತಾ ಅಂಬರೀಶ್‌ ಬಹಿರಂಗಪಡಿಸಿದ್ದಾರೆ. ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಸುಮಲತಾ ಈ ವಿಚಾರವನ್ನು ತಿಳಿಸಿದ್ದರು. ತಮ್ಮ 5 ವರ್ಷದ ಕೆಲಸದ ಬಗ್ಗೆ ಮೆಲುಕು ಹಾಕಿದ ನಟಿ ಈ ಮಧ್ಯೆ ತಮಗೆ ಪ್ರಾಣ ಬೆದರಿಕೆ ಇದ್ದ ಬಗ್ಗೆ ತಿಳಿಸಿದ್ದಾರೆ. ನಾನು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಈ ವೇಳೆ ಹೋರಾಟ ನಿಲ್ಲಿಸುವಂತೆ ನನಗೆ ಒತ್ತಡ ಹಾಗೂ ಪ್ರಾಣ ಬೆದರಿಕೆ ಇತ್ತು. ಆದರೆ ಈ ಬೆದರಿಕೆಗೆ ಹೆದರದೆ ಕೆಆರ್‌ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆಯನ್ನು ನಿಲ್ಲಿಸಿದೆ ಎಂದರು. ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ  ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ…

Read More