Author: Author AIN

ಫ್ರೀಕಿ ದೇಶದ ಮಾಲಿಯ ಕೆನಿಬಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತವಾದ ಬಸ್ ಬಸ್ ಬುರ್ಕಿನಾ ಫಾಸೊಗೆ ಹೋಗುತ್ತಿತ್ತು. ಈ ವೇಳೆ ಬಸ್ ಸೇತುವೆಯಿಂದ ಕೆಳಗೆ ಬಿದ್ದು ಭೀಕರ ದುರಂತ ಸಂಭವಿಸಿದೆ ಎಂದು  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪಶ್ಚಿಮ ಆಫ್ರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿದೆ. ಮಾಲಿಯ ಕಳಪೆ ರಸ್ತೆಗಳು ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಾರಣವೆಂದು ಉಲ್ಲೇಖಿಸಲಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ರಸ್ತೆ ಸಾವುಗಳಲ್ಲಿ ಕಾಲು ಭಾಗದಷ್ಟು ಆಫ್ರಿಕಾದಲ್ಲಿ ಸಂಭವಿಸುತ್ತವೆ.

Read More

ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಶಾಂತನ್ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಶಾಂತನ್, ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಿಂದ ಕೊಂಚ ಚೇತರಿಕೆ ಕಂಡಿದ್ದ ಶಾಂತನ್ ಅವರನ್ನು ತಿರುಚ್ಚಿಯ ಕೇಂದ್ರ ಕಾರಾಗೃಹದ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಂತನ್ ನಿಧನರಾಗಿದ್ದಾರೆ. 1990ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಎಲ್‌ಟಿಟಿಇ ಭಯೋತ್ಪಾದಕಿ ಧನು ಎಂಬ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಗೆ ಬಲಿಯಾಗಿದ್ದರು. ಬಳಿಕ ಈ ಕೃತ್ಯಕ್ಕೆ ಸಾಥ್ ನೀಡಿ ಪರಾರಿಯಾಗಿದ್ದ ಎಲ್‌ಟಿಟಿಇ ಉಗ್ರರಾದ ಶಿವರಾಸನ್ ಹಾಗೂ ಶುಭಾರನ್ನು ಬೆಂಗಳೂರಿನ ಕೋಣನಕುಂಟೆಯಲ್ಲಿ ಪೊಲೀಸರು ಹತ್ಯೆ ಮಾಡಿದ್ದರು. ಇನ್ನು ಪೇರರಿವಾಳನ್, ಮುರುಗನ್, ಶಾಂತನ್, ನಳಿನಿ, ರಾಬರ್ಟ್ ಪಿಯಸ್, ಜಯಕುಮಾರ್ ಹಾಗೂ ರವಿಚಂದ್ರನ್- ಸೇರಿದಂತೆ 7 ಅಪರಾಧಿಗಳು ಅವರು 1991 ರಲ್ಲಿ ರಾಜೀವ್ ಹತ್ಯೆಗೆ ಸಂಬಂಧಿಸಿದಂತೆ ಆಜೀವ ಕಾರಾಗೃಹವಾಸ ಅನುಭವಿಸುತ್ತಿದ್ದರು. ಈ ಪೈಕಿ ಕಳೆದ ಮೇನಲ್ಲಿ ಪೇರರಿವಾಳನ್ ರೀಲಿಸ್…

Read More

‘ಬಿಗ್ ಬಾಸ್ ಸೀಸನ್ 10’ರ ಸ್ಪರ್ಧಿ ವಿನಯ್ ಗೌಡ ಸೋಷಿಯಲ್ ಮೀಡಿಯಾ ಫೇಕ್ ಪ್ರಮೋಟರ್ ವಿರುದ್ಧ ಗರಂ ಆಗಿದ್ದಾರೆ. ಮಾಡದ ತಪ್ಪಿಗೆ ತನ್ನ ವಿರುದ್ಧ ಪಿತೂರಿ ಮಾಡಿದವರಿಗೆ ವಿಡಿಯೋ ಶೇರ್ ಮಾಡುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ.  ಬಿಗ್ ಬಾಸ್ ಮನೆಯಲ್ಲಿ ಇದ್ದ ಅಷ್ಟು ದಿನವೂ ವಿನಯ್ ಹಾಗೂ ಡ್ರೋನ್ ಪ್ರತಾಪ್ ಜಗಳ ಮಾಡುತ್ತಲೆ ಇದ್ದರು. ಬಿಗ್ ಬಾಸ್ ನಲ್ಲಿ ನೇರ ನುಡಿ ಮೂಲಕ ಗಮನ ಸೆಳೆದ ವಿನಯ್ ಗೌಡ ಈಗ ಫೇಕ್ ಸುದ್ದಿ ಪ್ರಮೋಟ್ ಮಾಡಿದವನಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಖಾಸಗಿ ಸೋಷಿಯಲ್ ಮೀಡಿಯಾ ಪೇಜ್‌ವೊಂದು ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಕೆಟ್ಟದಾಗಿ ಮಾತನಾಡಿದ್ದಾರೆ ಎಂದೇ ಬರೆಯಲಾಗಿತ್ತು. ಇತ್ತೀಚೆಗೆ ಇನ್ಸ್ಟಾಗ್ರಾಂ ಲೈವ್‌ಗೆ ವಿನಯ್ ಬಂದಿದ್ದರು. ಆಗ ಪ್ರತಾಪ್ ಕುರಿತು ಕೆಟ್ಟ ಮಾತುಗಳನ್ನಾಡಿದ್ದಾರೆ ಎಂದೇ ಉಲ್ಲೇಖಿಸಿದ್ದರು. ಅದಕ್ಕೆ ವಿನಯ್ ಈಗ ಫುಲ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಬಗ್ಗೆ ನಾನು ಏನೂ ಮಾತನಾಡಿಯೇ ಇಲ್ಲ. ಆದರೂ ಏನೇನೋ ಹಾಕುವುದು ಎಷ್ಟು ಸರಿ ಹೇಳಿ.…

Read More

ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಸಖತ್ ಟ್ರೋಲ್ ಗೆ ಗುರಿಯಾಗ್ತಿದ್ದಾರೆ. ಅವರು ಏನೇ ಮಾಡಿದ್ರು ನೆಟ್ಟಿಗರು ಅವರ ಕಾಲು ಎಳೆಯುತ್ತಿದ್ದಾರೆ. ಇದೀಗ ರಕ್ಷಕ್ ದುಬಾರಿ ಕಾರೊಂದನ್ನು ಖರೀದಿಸಿದ್ದು ಅದಕ್ಕೂ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ರಕ್ಷಕ್ ಮನೆಗೆ ಹೊಸ ಅತಿಥಿ ಆಗಮನ ಆಗಿರೋ ಸಂತಸದಲ್ಲಿದ್ದಾರೆ. ದುಬಾರಿ ಕಾರು ಖರೀದಿ ಮಾಡಿದಕ್ಕೆ ಬುಲೆಟ್ ಪ್ರಕಾಶ್ ಪುತ್ರನಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಕೋಟಿ ಕೋಟಿ ಹಣ ಎಲ್ಲಿಂದ ಬಂತು ಅಂತ ನೆಟ್ಟಿಗರು ರಕ್ಷಕ್ ಕಾಲೆಳೆದಿದ್ದಾರೆ. ರಕ್ಷಕ್ ಮನೆಗೆ ಬಿಎಂಡಬ್ಲೂ ಕಾರು ಬಂದಿರುವ ಫೋಟೋ ಶೇರ್ ಮಾಡಿ ‘ಹೊಸ ಸದಸ್ಯ ಮನೆಗೆ ಸ್ವಾಗತ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.  ದುಬಾರಿ ಕಾರಿನ ಫೋಟೋ ರಕ್ಷಕ್ ಶೇರ್ ಮಾಡ್ತಿದ್ದಂತೆ ಕಾರಿನ ಬೆಲೆಯ ಕುರಿತು ನೆಟ್ಟಿಗರು ಚರ್ಚೆ ಶುರುಮಾಡಿದ್ದಾರೆ. ಬಿಎಂಡಬ್ಲೂ ಕಾರಿನ ಬೆಲೆ ಕಡಿಮೆ ಅಂದರೂ 40 ಲಕ್ಷ ರೂ.ಯಿಂದ 2.60 ಕೋಟಿ ರೂ.…

Read More

ದೊರೆ, ಬಂಗಾರದ ಮನೆ, ‘ಅಮೆರಿಕಾ ಅಮೆರಿಕಾ’ ಸಿನಿಮಾಗಳ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದ ನಟಿ ಹೇಮಾ ಪ್ರಭಾತ್ ಮತ್ತೆ ನಟನೆಗೆ ಕಂಬ್ಯಾಕ್ ಮರಳಿದ್ದಾರೆ. ಇದುವರೆಗೂ ಬಿಗ್ ಸ್ಕ್ರೀನ್ ನಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ಈ ಭಾರಿ ಸ್ಮಾಲ್ ಸ್ಕ್ರೀನ್ ಮೂಲಕ ನಿಮ್ಮ ಮನೆ ಮನೆಗೆ ಬರ್ತಿದ್ದಾರೆ. ಮೈಸೂರಿನ ಬೆಡಗಿ ಸ್ಪಂದನಾ ಸೋಮಣ್ಣ, ಅಶ್ವೀನ್ ನಟನೆಯ ‘ಕರಿಮಣಿ’ ಎಂಬ ಧಾರವಾಹಿಯ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಕರಿಮಣಿ ಧಾರಾವಾಹಿಯಲ್ಲಿ ನಟಿ ಹೇಮಾ ಪ್ರಭಾತ್ ನಟಿಸುತ್ತಿದ್ದಾರೆ. ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಸ್ಪಂದನಾ ಸೋಮಣ್ಣ ಅವರ ಟೀಚರ್ ಪಾತ್ರಕ್ಕೆ ಹೇಮಾ ಬಣ್ಣ ಹಚ್ಚಿದ್ದಾರೆ. 90ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಚೆಲುವೆ ಹೇಮಾ ಕನ್ನಡಿಗರ ಮನಗೆದ್ದಿದ್ದರು. ಬಳಿಕ ಮದುವೆ, ಸಂಸಾರ ಎಂದು ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದ ನಟಿ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸದಾ ಹತ್ತಿರವಾಗಿಯೇ ಇದ್ದರು. ಇದೀಗ ಮತ್ತೆ ನಟನೆಗೆ ಎಂಟ್ರಿಕೊಟ್ಟಿರೋದು ಅವರ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಹೇಮಾ ಪ್ರಭಾತ್ ಐದು…

Read More

ಬಾಲಿವುಡ್ ಬ್ಯೂಟಿಸ್ ಗಳು ಒಬ್ಬರ ಹಿಂದೊಬ್ಬರಂತೆ ಹಸೆಮಣೆ ಏರುತ್ತಿದ್ದಾರೆ. ಕಳೆದ ವಾರವಷ್ಟೇ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಜೊತೆಗೆ ನಟಿ ಕೃತಿ ಕರಬಂಧ ಮಾರ್ಚ್‌ನಲ್ಲಿ ಮದುವೆ ಆಗೋದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ ನಟಿ ತಾಪ್ಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜೊತೆ ತಾಪ್ಸಿ 10 ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಹಸೆಮಣೆ ಏರಲು ಸಜ್ಜಾಗಿದ್ದು 2 ಕುಟುಂಬದವರು ಮತ್ತು ಆಪ್ತರಷ್ಟೇ ಮದುವೆಯಲ್ಲಿ. ಫೆ.21ರಂದು ರಕುಲ್ ಹಾಗೂ ಜಾಕಿ ಹಸೆಮಣೆ ಏರಿದ್ದಾರೆ. ಕೃತಿ ಇದೇ ಮಾರ್ಚ್ 13ಕ್ಕೆ ಹೊಸ ಬಾಳಿಗೆ ಕಾಲಿಡಲಿದ್ದಾರೆ. ಈ ಬೆನ್ನಲ್ಲೇ ತಾಪ್ಸಿ ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾಗಿದ್ದು, ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ ನಡೆಯಲಿದೆ.‌ ತಾಪ್ಸಿ ಮದುವೆಯ ಸುದ್ದಿ ಪಡ್ಡೆ ಹುಡುಗರ ಹೃದಯ ವಿಲ ವಿಲ ಒದ್ದಾಡ್ತಿದೆ.

Read More

ಭಾರತದ ಮರಿಯನ್ ಬಯೋಟೆಕ್ ತಯಾರಿಸಿದ ಮಕ್ಕಳ ಕೆಮ್ಮಿನ ಸಿರಪ್ ಸೇವಿಸಿ 68 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಉಜ್ಬೇಕಿಸ್ತಾನದ ನ್ಯಾಯಾಲಯವು ಆರು ತಿಂಗಳ ಸುದೀರ್ಘ ವಿಚಾರಣೆಯ ನಂತರ ಸೋಮವಾರ ತೀರ್ಪು ಪ್ರಕಟಿಸಿದೆ. ಪ್ರಕರಣದ ತನಿಖೆಯನ್ನು ಕೂಲಂಕುಶವಾಗಿ ನಡೆಸಿದ ಬಳಿಕ ಇದೀಗ 23 ಮಂದಿಗೆ ಜೈಲು ಶಿಕ್ಷೆ ವಿದಿಸಿ ಆದೇಶ ಹೊರಡಿಸಿದೆ. ಮಧ್ಯ ಏಷ್ಯಾದ ರಾಷ್ಟ್ರವು ಈ ಹಿಂದೆ ಔಷಧಿಗಳಿಗೆ ಸಂಬಂಧಿಸಿದ 65 ಸಾವುಗಳನ್ನ ವರದಿ ಮಾಡಿತ್ತು. ಕಳೆದ ತಿಂಗಳು ತಾಷ್ಕೆಂಟ್ ನಗರದ ನ್ಯಾಯಾಲಯದ ಪ್ರಾಸಿಕ್ಯೂಟರ್ಗಳು ಸಾವಿನ ಸಂಖ್ಯೆಯನ್ನ ನವೀಕರಿಸಿದರು ಮತ್ತು ವಿಚಾರಣೆಯ ಸಮಯದಲ್ಲಿ ಇನ್ನೂ ಇಬ್ಬರ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಹೇಳಿದರು. ಒಬ್ಬ ಭಾರತೀಯ ಪ್ರಜೆ ಸೇರಿದಂತೆ ಪ್ರತಿವಾದಿಗಳು ಎರಡರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ತೆರಿಗೆ ವಂಚನೆ, ಕಳಪೆ ಗುಣಮಟ್ಟದ ಅಥವಾ ನಕಲಿ ಔಷಧಿಗಳ ಮಾರಾಟ, ಕಚೇರಿ ದುರುಪಯೋಗ, ನಿರ್ಲಕ್ಷ್ಯ, ಫೋರ್ಜರಿ ಮತ್ತು ಲಂಚದ ಆರೋಪಗಳಲ್ಲಿ ತಪ್ಪಿತಸ್ಥರು ಎಂದು ತಿಳಿದು ಬಂದಿದೆ.

Read More

ಈಜಿಪ್ಟ್ ರಾಜಧಾನಿಯ ಹೊರಭಾಗದಲ್ಲಿರುವ ನೈಲ್ ನದಿಯಲ್ಲಿ ದಿನಗೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಹಡಗು ಮುಳುಗಿದ್ದು ಈ ವೇಳೆ ಹಡಗಿನಲ್ಲಿದ್ದ 15 ಜನರಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದುಕುಳಿದ ಐವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆಯಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಮುಳುಗಲು ಕಾರಣ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಸಚಿವಾಲಯವು ಮೃತರ ಪ್ರತಿ ಕುಟುಂಬಕ್ಕೆ 200,000 ಈಜಿಪ್ಟ್ ಪೌಂಡ್ (ಸುಮಾರು 6,466 ಡಾಲರ್) ಮತ್ತು ಗಾಯಗೊಂಡ ಐದು ಜನರಿಗೆ ತಲಾ 20,000 (646 ಡಾಲರ್) ಪರಿಹಾರವನ್ನು ನಿಗದಿಪಡಿಸಿದೆ. ಗ್ರೇಟರ್ ಕೈರೋವನ್ನು ರೂಪಿಸುವ ಮೂರು ಪ್ರಾಂತ್ಯಗಳಲ್ಲಿ ಒಂದಾದ ಗಿಜಾದ ಮೊನ್ಶಾತ್ ಎಲ್-ಕನಾಟರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅನೇಕ ಈಜಿಪ್ಟಿನವರು ಪ್ರತಿದಿನವೂ ದೋಣಿಗಳನ್ನು ಬಳಸುತ್ತಾರೆ, ವಿಶೇಷವಾಗಿ ಮೇಲಿನ ಈಜಿಪ್ಟ್ ಮತ್ತು ನೈಲ್ ಮುಖಜಭೂಮಿಯಲ್ಲಿ. ಅರಬ್ ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ರಜಾದಿನಗಳಲ್ಲಿ ನೈಲ್ ನದಿಯ ಉದ್ದಕ್ಕೂ ನೌಕಾಯಾನವು ನೆಚ್ಚಿನ ಕಾಲಕ್ಷೇಪವಾಗಿದೆ.

Read More

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಬೆನ್ನಲ್ಲೇ ಪ್ರಭಾಸ್ ‘ಕಲ್ಕಿ 2898 ಎಡಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ನಿರ್ದೇಶಕರು ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಸಿನಿಮಾದಲ್ಲಿ ಆರು ಸಾವಿರ ವರ್ಷಗಳ ಕಥೆ ಇರಲಿದೆಯಂತೆ. ಈ ವಿಚಾರ ಕೇಳಿ ಪ್ರಭಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ದೆಹಲಿ ಸಮೀಪದ ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಾಗ್ ಅಶ್ವಿನ್ ಭಾಗವಹಿಸಿದ್ದಾರೆ. ಈ ವೇಳೆ ಅವರು ಸಿನಿಮಾ ಟೈಮ್​ಲೈನ್ ಬಗ್ಗೆ ಮಾತನಾಡಿದ್ದಾರೆ. ‘ಮಹಾಭಾರತದಿಂದ ಆರಂಭ ಆಗುವ ಸಿನಿಮಾದ ಕಥೆ 2898 ಎಡಿಯಲ್ಲಿ ಕೊನೆಗೊಳ್ಳಲಿದೆ. ಸುಮಾರು ಆರು ಸಾವಿರ ವರ್ಷಗಳ ಕಥೆ ಸಿನಿಮಾದಲ್ಲಿದೆ. ನಾವು ಜಗತ್ತುಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದೇವೆ’ ಎಂದಿದ್ದಾರೆ ಅವರು. ಮಹಾಭಾರತದಲ್ಲಿ ಕೃಷ್ಣ ಇದ್ದಾನೆ. ಅವನಿಂದಲೇ ಕಥೆ ಆರಂಭ…

Read More

ದಿನದ 24 ಗಂಟೆಯೂ ಜನಜಂಗುಳಿಯಿಂದ ತುಂಬಿರುವ ಚರ್ಚ್ ಸ್ಟ್ರೀಟ್ ನಲ್ಲಿ ಇನ್ಮುಂದೆ ಚಿತ್ರೀಕರಣಕ್ಕೆ ನಿರ್ಭಂದ ಹೇರಲಾಗಿದೆ. ಸಂಚಾರ ದಟ್ಟಣೆ ಕಾರಣ ನೀಡಿರುವ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನನಿಬಿಡ ಚರ್ಚ್ ಸ್ಟ್ರೀಟ್‌ನಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದೆ. ವಿಶೇಷವಾಗಿ ವಾರಾಂತ್ಯದಲ್ಲಿ ಪಾರ್ಟಿಗೆ ಹೋಗುವವರಿಗೆ ಮತ್ತು ಖರೀದಿದಾರರಿಗೆ ಚರ್ಚ್ ಸ್ಟ್ರೀಟ್ ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿದೆ. ಕಳೆದ ಭಾನುವಾರ ಚರ್ಚ ಸ್ಟ್ರೀಟ್​​​ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದುದನ್ನು ಗಮನಿಸಿದ ಬಿಬಿಎಂಪಿ ಈ ಆದೇಶ ಹೊರಡಿಸಿದೆ. ಸೂಕ್ತ ಅನುಮತಿ ಪಡೆಯದೆ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ನಾವು ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಮಲಯಾಳಂ ಚಿತ್ರದ ಸಿಬ್ಬಂದಿಯೊಬ್ಬರು ಹೇಳಿದರು. ಈ ಬಗ್ಗೆ ಕೇಂದ್ರೀಯ ಡಿಸಿಪಿ ಶೇಖರ್ ಎಚ್.ತೆಕ್ಕನವರ್ ಮಾತನಾಡಿ, ನಾವು ಸಿನಿಮಾ ಶೂಟಿಂಗ್‌ಗೆ ಅನುಮತಿ ನೀಡಿಲ್ಲ. ಬಹುತೇಕ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ತೆಗೆದುಕೊಂಡಿರಬಹುದು ಎಂದು ಹೇಳಿದ್ದಾರೆ. ಕೆಎಫ್‌ಸಿಸಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ ನಾವು ಯಾವುದೇ ಅನುಮತಿ ನೀಡಿಲ್ಲ ಮತ್ತು ಅನುಮತಿ ನೀಡಲು ನಮಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದರು.…

Read More