ಶಿವಮೊಗ್ಗ : ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೆ ರೈತ ಮಹಿಳೆ ನೇಣಿಗೆ ಶರಣಾದ ಘಟನೆ ಮಂಗಳವಾರ ನಡೆದಿದೆ. ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುವಕ್ಕಿ ಗ್ರಾಮದ ಯೇಗಮ್ಮ(58) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. https://ainlivenews.com/another-victim-of-usurers-harassment-in-hubli/ ತಮ್ಮ ಹೊಲದಲ್ಲಿ ಬೆಳೆಬೆಳೆಯಲು ಕೃಷಿ ಸಾಲವಾಗಿ ಡಿಸಿಸಿ ಬ್ಯಾಂಕ್, ನಂದಿತಳೆ ಸೊಸೈಟಿ , ಹಾಗೂ ಎಲ್ಐಸಿ ಎಲ್ಲಿ ಒಟ್ಟು 2 ರಿಂದ 3 ಲಕ್ಷ ಸಾಲ ಮಾಡಿದ್ದು, ಮಳೆ ಸರಿಯಾಗಿ ಬಾರದೆ ಬೆಳೆಯಲ್ಲಿ ನಷ್ಟ ಕಂಡ ಯೇಗಮ್ಮ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಹೊಲದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. https://www.youtube.com/watch?v=ykrwcXwJseo
Author: Author AIN
ಬೆಳಗಾವಿ : ಅಪಘಾತ ತಪ್ಪಿಸಲು ಹೋಗಿ ಕೆಎಸ್ ಆರ್ ಟಿಸಿ ಬಸ್ ಪಲ್ಟಿಯಾಗಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮೈಶಾಳ ಗ್ರಾಮದ ಬಳಿ ಘಟನೆ ನಡೆದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. https://ainlivenews.com/the-crew-dragged-the-dead-laborers-body-inhuman-incident-in-kalaburagi/ ಮಹಾರಾಷ್ಟ್ರದ ಮೀರಜ್‌ನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕೆಎಸ್ ಆರ್‌ಟಿಬಸ್ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿರುವ ಮೈಶಾಳ ಗ್ರಾಮದಲ್ಲಿ ಅಪಘಾತಕ್ಕೀಡಾಗಿದೆ. ಟ್ರಾಕ್ಟರ್ ಓವರಟೇಕ್ ಮಾಡುತ್ತಿದ್ದ ಬಸ್ , ಮುಂದೆ ಲಾರಿ ಬಂದಿದ್ದರಿಂದ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ. ಬಸ್ ಬೀಳುತ್ತಿದ್ದಂತೆ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಬಸ್ ನಲ್ಲಿ 40 ಕ್ಕೂ ಹೆಚ್ಚು ಜನರ ಪ್ರಯಾಣಿಸುತ್ತಿದ್ದು, 23 ಜನರಿಗೆ ಸಣ್ಣಪುಟ್ಟ ಗಾಯ ಮೀರಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾಗವಾಡ ಬಸ್ ಡಿಪೊ ಮ್ಯಾನೇಜರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ : ಏನೇ ಸುಗ್ರೀವಾಜ್ಞೆ ಜಾರಿಗೆ ತಂದರೂ ಸಹ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ನಿಲ್ಲುತ್ತಿಲ್ಲ. ಇದೀಗ ಹುಬ್ಬಳ್ಳಿಯಲ್ಲಿ ಬಡ್ಡಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಬಡ್ಡಿದಂಧೆಕೋರರ ಕಿರುಕುಳದಿಂದಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. https://ainlivenews.com/ceo-j-somasekhar-notice-for-significant-increase-in-sslc-result/ ಹುಬ್ಬಳ್ಳಿಯ ಉಣಕಲ್ ನಿವಾಸಿ ಶಿವಾನಂದ ಕಳ್ಳಿಮನಿ (36) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರ್ತಿಕ್ ಬಳ್ಳಾರಿ ಎಂಬುವವರ ಬಳಿ 4 ಲಕ್ಷ ಸಾಲ ಪಡೆದಿದ್ದ ಶಿವಾನಂದ್, ಈಗಾಗಲೇ ನಾಲ್ಕು ಲಕ್ಷ ಬಡ್ಡಿ ತುಂಬಿದ್ದಾರೆ. ಆದರೆ ಇನ್ನೂ ಕೂಡ ಬಡ್ಡಿ ಕಟ್ಟುವಂತೆ ಒತ್ತಡ ಹಾಕಿದ್ದಾರೆ. ನಿರಂತರ ಬಡ್ಡಿ ಕಿರುಕುಳದಿಂದಾಗಿ ಬೇಸತ್ತ ಶಿವಾನಂದ್ ಡೆತ್ ನೋಟ್ ಬರೆದಿಟ್ಟು, ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಮ್ಸ್ ನ ಶವಾಗಾರದ ಮುಂದೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು: ಅನ್ಯಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ನಂತರದ ದಿನಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಅಕ್ಕಿ ಲಭ್ಯವಾಗದ ಕಾರಣ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಕೊಟ್ಟು, ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ನೀಡಲಾಗುತ್ತಿತ್ತು. https://ainlivenews.com/does-armpit-sweat-cause-bad-odor-if-so-heres-the-solution-to-this-problem/ ಇದೀಗ ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನೆಲೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒಎಂಎಸ್‌ಎಸ್ ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಅಕ್ಕಿ ವಿತರಿಸಲು ತೀರ್ಮಾನಿಸಿದೆ. ಈ ಸಂಬಂಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಹೈದರಾಬಾದ್: ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರ ಕೆಲಸದ ಸಮಯವನ್ನು ಕಡಿಮೆ ಮಾಡುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ನೀಡಿದ್ದಾರೆ. ಆದ್ರೆ ಈ ಆದೇಶವೀಗ ವಿವಾದಕ್ಕೆ ಕಾರಣವಾಗಿದೆ. ಹೌದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರು, ಮಾ.2 ರಿಂದ 31 ರ ವರೆಗೆ ರಂಜಾನ್ ಸಮಯದಲ್ಲಿ ಅಗತ್ಯ ಪ್ರಾರ್ಥನೆ ಸಲ್ಲಿಸಲು ಸರ್ಕಾರಿ ಮುಸ್ಲಿಂ ನೌಕರರಿಗೆ ಒಂದು ಗಂಟೆ ಮೊದಲು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡಲು ಅವಕಾಶ ನೀಡಿ ಆದೇಶ ಹೊರಡಿಸಿದ್ದರು. ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸರ್ಕಾರಿ ಮುಸ್ಲಿಂ ನೌಕರರು/ಶಿಕ್ಷಕರು/ಗುತ್ತಿಗೆದಾರರು/ಹೊರಗುತ್ತಿಗೆ/ಮಂಡಳಿಗಳು/ನಿಗಮಗಳು ಮತ್ತು ಸಾರ್ವಜನಿಕ ವಲಯದ ನೌಕರರು ರಂಜಾನ್ ಪವಿತ್ರ ಮಾಸದಲ್ಲಿ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು/ಶಾಲೆಗಳಿಂದ ಹೊರಡಲು ಸರ್ಕಾರವು ಅನುಮತಿ ನೀಡಿದೆ. https://ainlivenews.com/does-armpit-sweat-cause-bad-odor-if-so-heres-the-solution-to-this-problem/ ಮಾ.2 ರಿಂದ 31 ರ ವರೆಗೆ (ಸೇವೆಗಳ ತುರ್ತು ಪರಿಸ್ಥಿತಿಯಲ್ಲಿ ಅವರ ಉಪಸ್ಥಿತಿಯು ಅಗತ್ಯವಿರುವುದನ್ನು ಹೊರತುಪಡಿಸಿ) ಅಗತ್ಯ ಪ್ರಾರ್ಥನೆಗಳನ್ನು ಸಲ್ಲಿಸಲು ಕಚೇರಿಯಿಂದ ಬೇಗ ಹೊರಡಲು ಅನುಮತಿಸಲಾಗಿದೆ ಎಂದು ಶಾಂತಿ…
ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಿಸ್ವಾರ್ಥ ನಿರ್ಧಾರ ತೆಗೆದುಕೊಂಡರು. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸುಮಾರು 94 ಲಕ್ಷ ರೂಪಾಯಿ ಮೌಲ್ಯದ 30 ಆಸನಗಳ ವಿಐಪಿ ಹಾಸ್ಪಿಟಾಲಿಟಿ ಬಾಕ್ಸ್ ಅನ್ನು ತ್ಯಾಗ ಮಾಡಿದರು. ತನಗಾಗಿ ಮತ್ತು ತನ್ನ ಅತಿಥಿಗಳಿಗಾಗಿ ಐಷಾರಾಮಿ ಆಸನಗಳನ್ನು ಆನಂದಿಸುವ ಬದಲು, ನಖ್ವಿ ಪ್ರೀಮಿಯಂ ಟಿಕೆಟ್‌ಗಳನ್ನು ಮಾರಾಟ ಮಾಡಲು ಮತ್ತು ಆದಾಯವನ್ನು ಕರಾಚಿ, ಲಾಹೋರ್ ಮತ್ತು ಪಿಂಡಿಯಲ್ಲಿನ ಕ್ರಿಕೆಟ್ ಕ್ರೀಡಾಂಗಣಗಳ ನವೀಕರಣಕ್ಕೆ ಬಳಸಲು ನಿರ್ಧರಿಸಿದರು. https://ainlivenews.com/does-armpit-sweat-cause-bad-odor-if-so-heres-the-solution-to-this-problem/ ಭದ್ರತಾ ಕಾರಣಗಳಿಂದ ಈ ಬಾರಿಯ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಹಾಗಾಗಿ ದುಬೈನಲ್ಲಿ ನಡೆಯುವ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಉತ್ತಮ ಆಸನ, ವಿಶೇಷ ಸೌಕರ್ಯವುಳ್ಳ ಬಾಕ್ಸ್‌ನಲ್ಲಿ ತಮ್ಮ ಕುಟುಂಬ, ಆಪ್ತರೊಂದಿಗೆ ಕುಳಿತು ವೀಕ್ಷಿಸಲು ನಖ್ವಿ ಅವರಿಗೆ ಸುಮಾರು 95 ಲಕ್ಷ ರೂ. (4 ಲಕ್ಷ ದುಬೈ ಕರೆನ್ಸಿ) ಬೆಲೆಯ 30 ವಿಐಪಿ ಆಸನದ ಟಿಕೆಟ್‌ಗಳನ್ನು (VIP box Tickets) ನೀಡಲಾಗಿತ್ತು.…
ಚಿತ್ರದುರ್ಗ: ಜಿಲ್ಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಳ ಮಾಡಲು ಅಗತ್ಯ ಪೂರ್ವಸಿದ್ಧತೆ ಹಾಗೂ ಕ್ರಮವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಎಸ್‍ಎಸ್‍ಎಲ್‍ಸಿ ಶೈಕ್ಷಣಿಕ ಪ್ರಗತಿ ಹಾಗೂ ಪೂರ್ವ ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇನ್ನು ಕೇವಲ 30 ದಿನಗಳು ಮಾತ್ರ ಬಾಕಿ ಉಳಿದಿದ್ದು, ಪರೀಕ್ಷಾ ಸಿದ್ಧತೆಗೆ ಅಮೂಲ್ಯವಾದ ಸಮಯವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಶ್ರಮವಹಿಸಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಬಹಳ ಎಚ್ಚರಿಕೆಯಿಂದ ಕಲಿಕಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಜಿಲ್ಲೆಗೆ ಉತ್ತಮ ಹಾಗೂ ಹೆಚ್ಚಿನ ಫಲಿತಾಂಶ ತರುವಲ್ಲಿ ತಮ್ಮಗಳ ಜವಾಬ್ದಾರಿ ಬಹಳವಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದು ಸೂಚಿಸಿದ ಅವರು, ಫಲಿತಾಂಶ ಹೆಚ್ಚಳಕ್ಕೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಿದ್ಧತೆ ಮಾಡಿಕೊಂಡ ಬಗ್ಗೆ ಎಲ್ಲಾ…
ನವದೆಹಲಿ: ಪ್ರಸ್ತುತ ಅನೇಕ ಮಹಿಳೆಯರು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಒಂದು ಸವಾಲಾಗಿ ಪರಿಣಮಿಸಿದೆ. ಆದಾಗ್ಯೂ, ಇತ್ತೀಚೆಗೆ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪರಾಜ್ ಜಾಧವ್ ಅವರು ಒಂದು ಪ್ರಮುಖ ಘೋಷಣೆ ಮಾಡಿದ್ದಾರೆ. ಕ್ಯಾನ್ಸರ್ ಅನ್ನು ಎದುರಿಸಲು ಲಸಿಕೆ ಐದು ರಿಂದ ಆರು ತಿಂಗಳೊಳಗೆ ಲಭ್ಯವಾಗಲಿದೆ ಎಂದು ಅವರು ಹೇಳಿದರು. 9 ರಿಂದ 16 ವರ್ಷದೊಳಗಿನ ಹುಡುಗಿಯರು ಮಾತ್ರ ಈ ಲಸಿಕೆ ಪಡೆಯಲು ಅರ್ಹರು ಎಂದು ಅವರು ಹೇಳಿದರು. ಈ ಲಸಿಕೆಯ ಸಂಶೋಧನೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಪ್ರಸ್ತುತ ಪ್ರಯೋಗಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. https://ainlivenews.com/do-you-know-what-are-the-health-benefits-of-wearing-silver-anklets/ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ಕೈಗೊಂಡಿದೆ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಗಾಗುತ್ತಾರೆ. ರೋಗವನ್ನು ಮೊದಲೇ ಪತ್ತೆಹಚ್ಚಲು ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಜಾಧವ್ ಹೇಳಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸರ್ಕಾರ ಮನ್ನಾ ಮಾಡಿದೆ…
ಕಲಬುರಗಿ : ಕಲಬುರಗಿಯ ಬಹುತೇಕ ಸಿಮೇಂಟ್ ಕಾರ್ಖಾನೆಗಳಲ್ಲಿನ ಕಾರ್ಮಿಕರ ಜೊತೆ ಅಲ್ಲಿನ ಆಡಳಿತ ಮಂಡಳಿಯವರು ಹಿಂದಿನಿಂದ ಅಮಾನವೀಯವಾಗಿ ನಡೆದುಕೊಂಡು ಬಂದಿದ್ದಾರೆ. ಇದೀಗ ಮೃತ ಕಾರ್ಮಿಕನ ಜೊತೆ ಸಹ ಇಂಥದ್ದೇ ಅಮಾವನೀಯ ವರ್ತನೆ ತೋರಿದ್ದು, ಸಮಾಜ ತೆಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. https://ainlivenews.com/the-carcass-of-a-male-tiger-was-found-in-the-back-water-of-ambligolla-reservoir/ ಕಳೆದ ಎರಡು ದಿನದ ಹಿಂದೆ ಬಿಹಾರ್ ಮೂಲದ ಚಂದನಸಿಂಗ್ ಲೋ ಬಿಪಿಯಿಂದ ಸಾವನಪ್ಪಿದ್ದು, ಆತನ ಸಾವಿನ ಬಳಿಕ ಅಲ್ಲಿನ ಸಿಬ್ಬಂದಿ ಚಂದನ್ ಸಿಂಗ್ ಮೃತದೇಹವನ್ನು ಸತ್ತ ನಾಯಿಯಂತೆ ಕಾರ್ಖಾನೆಯತ್ತ ಎಳೆದುಕೊಂಡು ಹೋಗಿದ್ದಾರೆ. ಮೃತದೇಹದ ಜೊತೆ ಸಿಬ್ಬಂದಿ ನಡೆದುಕೊಂಡ ರೀತಿ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. https://www.youtube.com/watch?v=IKnpGlEhocg ಇನ್ನೂ ಮೃತ ಚಂದನಸಿಂಗ್ ಮೃತದೇಹವನ್ನು ಎಳೆದುಕೊಂಡು ಹೋದ ಆರು ಜನ ಕಾರ್ಮಿಕರಾದ ಉತ್ತರ ಭಾರತದ ಕಾರ್ಮಿಕರಾದ ಹೈದರ್ ಅಲಿ, ಅಜಯ್,ರವಿಶಂಕರ್, ಹರಿಂದರ್,ರಮೇಶಚಂದ್ರ ಹಾಗು ಅಖಿಲೇಶ್ ವಿರುದ್ಧ ಸೇಡಂ ಪೊಲೀಸರು ಸ್ವಯಂಪ್ರೇರಿರತರಾಗಿ ಬಿಎನ್ ಎನ್ ಎಸ್ 129(e),229(g) ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿಯ ಕೊಟ್ವಾಲಿ ಪಂಚವಟಿ ಶಿವ ಪರಿವಾರ್ ಕಾಲೋನಿಯಲ್ಲಿ ಸೋನಾಲಿ ಬುಧೋಲಿಯಾ (27) ಎಂಬ ವಿವಾಹಿತ ಮಹಿಳೆ ಇತ್ತೀಚೆಗೆ ಅನುಮಾನಾಸ್ಪದ ರೀತಿಯಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅವಳ ಅತ್ತೆ ಮತ್ತು ಪತಿ ಎಲ್ಲರಿಗೂ ಹೇಳಿದ್ದರು. ಪೊಲೀಸರು ಸೇರಿದಂತೆ ಎಲ್ಲರೂ ಅದನ್ನು ನಿಜವೆಂದು ಭಾವಿಸಿದ್ದರು. ಆದರೆ ಮೃತರ ಮಗಳು ದರ್ಶಿತಾ ಬಿಡಿಸಿದ ರೇಖಾಚಿತ್ರವು ನಿಜವಾದ ರಹಸ್ಯವನ್ನು ಬಹಿರಂಗಪಡಿಸಿದೆ. ಸರಿಯಾಗಿ ಮಾತನಾಡಲು ಸಹ ಬರದ ಆ ಮಗು, ತನ್ನ ನೋಟ್‌ಬುಕ್‌ನಲ್ಲಿ ಒಂದು ಚಿತ್ರ ಬಿಡಿಸಿ, ತನ್ನ ಕಣ್ಣೆದುರೇ ತಾಯಿಯನ್ನು ಹೊಡೆದು ಫ್ಯಾನ್‌ಗೆ ನೇಣು ಹಾಕಿದ್ದು ಬೇರೆ ಯಾರೂ ಅಲ್ಲ ಎಂದು ತೋರಿಸಿತು. “ನನ್ನ ತಂದೆ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ಕೊಂದರು.” ನಂತರ… ಅವರು ಹೇಳಿದರು, “ನೀವು ಬಯಸಿದರೆ ನೀವು ಸಾಯಬಹುದು” ಎಂದು ಹುಡುಗಿ ಮಾಧ್ಯಮಗಳಿಗೆ ವಿವರಿಸಿದ್ದಾಳೆ. ಅವಳು ಸಂಬಂಧಿತ ರೇಖಾಚಿತ್ರವನ್ನೂ ತೋರಿಸಿದಳು. ಈ ಹಿಂದೆ ಹಲವು ಬಾರಿ ಮಗಳ ಮುಂದೆಯೇ ತಾಯಿಯನ್ನು…