Author: Author AIN

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಸಂಭ್ರಮ ಸಡಗರ ತುಂಬಿಕೊಂಡಿದೆ. ಮಗಳು ಈಗ ತಾನೆ ನಡೆಯಲು ಶುರುಮಾಡಿದ್ದು ಈ ಮಧ್ಯೆ ಮುದ್ದು ಕಂದ ತನ್ನ ತಮ್ಮನಿಗೆ ತೊಟ್ಟಿಲು ತೂಗಿ ಲಾಲಿ ಹಾಡಿದ್ದಾಳೆ. ಹೌದು, ಧ್ರುವ ಸರ್ಜಾ ಮಗಳು ರುದ್ರಕ್ಷಿ ತನ್ನ ತಮ್ಮ ಮಲಗಿರುವ ವೇಳೆ ತೊಟ್ಟಿಲು ತೂಗಿ ಲಾಲಿ ಹಾಡಿದ್ದಾಳೆ. ಈ ವೀಡಿಯೋವನ್ನು ಧ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಶೇರ್​​​ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಸೆಪ್ಟೆಂಬರ್ 18 ರಂದು ಗಣೇಶ ಹಬ್ಬದಂದು ಪ್ರೇರಣಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದ ದಿನವೇ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ತಮ್ಮ ಮಕ್ಕಳ ನಾಮಕರಣವನ್ನು ನೆರವೇರಿಸಿದ್ದರು. ಮಗಳಿಗೆ ‘ರುದ್ರಾಕ್ಷಿ ಡಿ ಸರ್ಜಾ’ ಹಾಗೂ ಮಗನಿಗೆ ‘ಹಯಗ್ರೀವ ಡಿ ಸರ್ಜಾ’ ಎಂದು ನಾಮಕರಣ ಮಾಡಿದ್ದಾರೆ. ಇದೀಗಾ ರುದ್ರಾಕ್ಷಿ ತನ್ನ ತಮ್ಮ…

Read More

‘ನಾಗಿಣಿ’ ಖ್ಯಾತಿಯ ನಟಿ ದೀಪಿಕಾ ದಾಸ್ ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿರುವ ಫೋಟೋವನ್ನು ಸೋಷಿಯಲ್ ಮೀಡಯಾದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಸ್ಯಾಂಡಲ್​ವುಡ್ ನಟಿ, ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಗೋವಾದ ಕಡಲ ತೀರದಲ್ಲಿ ಮದುವೆಯಾಗಿದ್ದಾರೆ. ಬೀಚ್ ಸೈಡ್ ವೆಡ್ಡಿಂಗ್ ಫೊಟೋ ಶೇರ್ ಮಾಡಿ ಮದುವೆಯಾಗಿರುವುದನ್ನು ತಿಳಿಸಿದ್ದಾರೆ. ನಟಿಯ ದಿಢೀರ್ ಮದುವೆ ಫೋಟೋಸ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ಮದುವೆಯಾ? ಅಥವಾ ಆ್ಯಡ್ ಶೂಟಿಂಗ್ ಫೋಟೋಗಳಾ ಎಂದು ಕನ್​​ಫ್ಯೂಸ್ ಆಗಿದ್ದಾರೆ. ಆದರೆ ಸಾಕಷ್ಟು ಮಂದಿ ಇದು ರಿಯಲ್ ಮದುವೆ ಎನ್ನುತ್ತಿದ್ದಾರೆ. ಮೂರು ಫೋಟೋಸ್ ಶೇರ್ ಮಾಡಿದ ದೀಪಿಕಾ ದಾಸ್ ಅವರು ಮಿಸ್ಟರ್ & ಮಿಸಸ್ ಡಿ ಎಂದು ಬರೆದು ರೆಡ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಮದುವೆ ಆಯ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ದೀಪಿಕಾ ದಾಸ್ ಬಿಳಿ ಬಣ್ಣದ ಕೇಸರಿ ಅಂಚಿನ ಸೀರೆಯನ್ನು ಉಟ್ಟಿದ್ದರು. ಆಕರ್ಷಕವಾದ ವರಮಾಲೆ ಧರಿಸಿ ಸುಂದರವಾಗಿ ವಧುವಾಗಿ ಕಂಗೊಳಿಸಿದ್ದಾರೆ. ವರನ ಕೈ…

Read More

ನವದೆಹಲಿ : ಇಸ್ರೇಲ್-ಹಮಾಸ್‌ ನಡುವೆ ನಡೆಯುತ್ತಿರುವ ಯದ್ಧ ಮುಂದುವರೆದಿದ್ದು ಕದನ ವಿರಾಮ ಘೋಷಣೆಯ ಕುರಿತು ಮಾತುಕತೆ ನಡೆಯುತ್ತಿದೆ. ಈ ಮಧ್ಯೆ ಗಾಝಾದಲ್ಲಿ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸಿದ್ದು, ಸಹಾಯಕ್ಕಾಗಿ ಕಾಯುತ್ತಿದ್ದ 112 ಜನರ ಸಾವು ದುರಂತ ಎಂದು ಭಾರತ ವಿಷಾಯ ವ್ಯಕ್ತಪಡಿಸಿದೆ. ಜೆರುಸಲೇಂ. ಗಾಝಾದಲ್ಲಿ ಮಾನವೀಯ ನೆರವಿನ ನಿರೀಕ್ಷೆಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 112 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ ಘಟನೆಯ ಬಗ್ಗೆ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ತೀವ್ರ ದುಃಖ ವ್ಯಕ್ತಪಡಿಸಿದೆ. ಮಾನವೀಯ ನೆರವಿಗಾಗಿ ಕಾಯುತ್ತಿದ್ದ 112 ಜನರು ಗುರುವಾರ ಮೃತಪಟ್ಟಿರುವುದು ದುರಂತ ಎಂದು ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. “ಗಾಝಾದಲ್ಲಿ ಮುಂದುವರಿದ ನಾಗರಿಕ ಸಾವುಗಳು ಮತ್ತು ಮಾನವೀಯ ಪರಿಸ್ಥಿತಿ ಕಳವಳಕಾರಿಯಾಗಿದೆ” ಎಂದಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅಮೆರಿಕ ಮತ್ತು ಜರ್ಮನಿ ಆಗ್ರಹಿಸಿವೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಸ್ರೇಲಿ ಸೈನಿಕರ…

Read More

ಕಳೆದ ಕೆಲವು ದಿನಗಳಿಂದ ಹೆಚ್ಚಾಗಿರುವ ಭಾರೀ ಹಿಮಪಾತದಿಂದ ಇದುವರೆಗೂ 15 ಜನರು ಪ್ರಾಣ ಕಳೆದುಕೊಂಡಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. “ಹಿಮವು ಮುಂದುವರಿದಿದೆ ಮತ್ತು ತುಂಬಾ ಭಾರವಾಗಿದೆ . ಭಾರೀ ಹಿಮಪಾತದಿಂದ ಜಾನುವಾರುಗಳನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಅನೇಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಆದ್ದರಿಂದ ಯಾವುದೇ ಕೆಲಸಗಳು ನಡೆಯದೆ ಸಮಸ್ಯೆ ಎದುರಾಗಿದೆ ಎಂದು ಸಾರ್-ಇ-ಪುಲ್ ನಿವಾಸಿ ಅಬ್ದುಲ್ ಖಾದಿರ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಅಫ್ಘಾನಿಸ್ತಾನವು ವಿಶೇಷವಾಗಿ ಜಾನುವಾರು ಮಾಲೀಕರಿಗೆ ಹಾನಿಯನ್ನು ಪರಿಹರಿಸಲು ವಿವಿಧ ಸಚಿವಾಲಯಗಳನ್ನು ಒಳಗೊಂಡ ಸಮಿತಿಯ ರಚನೆಯನ್ನು ಘೋಷಿಸಿದೆ. ಬಾಲ್ಖ್, ಜಾವ್ಜಾನ್, ಬದ್ಘಿಸ್, ಫರಿಯಾಬ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿ ಜಾನುವಾರು ಮಾಲೀಕರನ್ನು ಬೆಂಬಲಿಸಲು ಅಧಿಕಾರಿಗಳು ಐವತ್ತು ಮಿಲಿಯನ್ ಅಫ್ಘಾನಿಗಳನ್ನು ನಿಯೋಜಿಸಿದ್ದಾರೆ. ಕೃಷಿ, ನೀರಾವರಿ ಮತ್ತು ಜಾನುವಾರು ಸಚಿವಾಲಯದ ತಾಲಿಬಾನ್-ನೇಮಕ ವಕ್ತಾರ ಮಿಸ್ಬಾಹುದ್ದೀನ್ ಮುಸ್ತೀನ್, ಎಲ್ಲಾ ಪ್ರಾಂತ್ಯಗಳಲ್ಲಿ ರಚಿಸಲಾದ ಸಮಿತಿಗಳ ತ್ವರಿತ ಪ್ರತಿಕ್ರಿಯೆಯನ್ನು ಎತ್ತಿ ತೋರಿಸಿದರು. ಈ ಸಮಿತಿಗಳು ನಿರ್ಬಂಧಿತ ರಸ್ತೆಗಳನ್ನು ತೆರೆಯಲು, ಪೀಡಿತ ಸಮುದಾಯಗಳಿಗೆ ಆಹಾರ…

Read More

ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಯುದ್ಧಕ್ಕೆ ತಾತ್ಕಾಲಿಕ ಕದನ ವಿರಾಮಕ್ಕಾಗಿ ಮಧ್ಯಸ್ಥಿಕೆಯ ಮಾತುಕತೆಗಳು ಸ್ಥಗಿತಗೊಂಡಿದ್ದು, ಇಸ್ರೇಲ್ ಜೀವಂತವಾಗಿರುವ ಅಪಹರಿಸಿದ ಒತ್ತೆಯಾಳುಗಳ ಪಟ್ಟಿಯನ್ನು ಒತ್ತಾಯಿಸಿದ ನಂತರ ಸ್ಥಗಿತಗೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಧ್ಯಕ್ಷತೆಯಲ್ಲಿ ನಡೆದ ಯುದ್ಧ ಸಚಿವ ಸಂಪುಟದ ತುರ್ತು ಸಭೆಯ ನಂತರ ಈ ಸಂದೇಶವನ್ನು ಸಂಧಾನಕಾರರಿಗೆ ತಿಳಿಸಲಾಗಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಮಾಹಿತಿ ಹಂಚಿಕೊಂಡಿದೆ. ಅಕ್ಟೋಬರ್ 7, 2023 ರಿಂದ ಹಮಾಸ್ ವಶದಲ್ಲಿರುವ 134 ಒತ್ತೆಯಾಳುಗಳಲ್ಲಿ ಸುಮಾರು 31 ಮಂದಿ ಸಾವನ್ನಪ್ಪಿದ್ದಾರೆ ಎಂದು ಕ್ರಮವಾಗಿ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮತ್ತು ಮಿಲಿಟರಿ ಗುಪ್ತಚರ ಸಂಸ್ಥೆ ಮೊಸಾದ್ ಮತ್ತು ಶಿನ್ ಬೆಟ್ ಈ ಹಿಂದೆ ಬಹಿರಂಗಪಡಿಸಿದ್ದಾರೆ. ಅಮೆರಿಕಾ, ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಅಂತರರಾಷ್ಟ್ರೀಯ ಸಮಾಲೋಚಕರು ಮಾರ್ಚ್ 4 ರಿಂದ ನಡೆಯುತ್ತಿರುವ ಯುದ್ಧಕ್ಕಾಗಿ ಕದನ ವಿರಾಮವನ್ನು ನಿರೀಕ್ಷಿಸುತ್ತಿದ್ದರು. ಆದಾಗ್ಯೂ, ಇಸ್ರೇಲಿ ಸರ್ಕಾರದ ನಿರ್ಧಾರವು ಮಾತುಕತೆಗಳಿಗೆ ತಡೆ ಹಿಡಿದಿದೆ. ಇಸ್ರೇಲ್ ಮತ್ತು ಹಮಾಸ್ ಎರಡೂ ಆರು ವಾರಗಳ…

Read More

ಅಮೆರಿಕದ ಸೇಂಟ್‌ ಲೂಯಿಸ್‌ನಲ್ಲಿ ಸ್ನೇಹಿತನನ್ನು ಹತ್ಯೆ ಮಾಡಲಾಗಿದೆ ಎಂದಿರುವ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಯ, ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಸಂಶೋಧನಾ ವಿದ್ಯಾರ್ಥಿಯಾಗಿದ್ದ ತಮ್ಮ ಸ್ನೇಹಿತ ಅಮರನಾಥ್‌ ಘೋಷ್‌ ಅವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನಟಿ, ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಮನವಿ ಮಾಡಿದ್ದಾರೆ. ‘ನನ್ನ ಸ್ನೇಹಿತ ಅಮರನಾಥ್‌ ಘೋಷ್‌ ಅವರನ್ನು ಸೇಂಟ್‌ ಲೂಯಿಸ್ ಅಕಾಡೆಮಿ ಬಳಿ ಮಂಗಳವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಘೋಷ್ ಮೂರು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ‘ಆರೋಪಿಯ ವಿವರಗಳು ಬಹಿರಂಗವಾಗಿಲ್ಲ. ಸ್ನೇಹಿತರನ್ನು ಬಿಟ್ಟರೆ, ಹೋರಾಟ ನಡೆಸಲು ಘೋಷ್‌ ಕುಟುಂಬದ ಯಾರೊಬ್ಬರೂ ಇಲ್ಲ. ಒಳ್ಳೆಯ ನೃತ್ಯಗಾರ, ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ಘೋಷ್‌ ಕೋಲ್ಕತ್ತದವನು. ಸಂಜೆ ವಿಹರಿಸುತ್ತಿದ್ದ ವೇಳೆ, ಅಪರಿಚಿತನೊಬ್ಬ ಇದ್ದಕ್ಕಿದ್ದಂತೆ ಹಲವು ಬಾರಿ ಗುಂಡು ಹಾರಿಸಿದ್ದಾನೆ’ ಎಂದು ತಿಳಿಸಿದ್ದಾರೆ. ‘ಅಮೆರಿಕದಲ್ಲಿರುವ…

Read More

‘ನಾಗಿಣಿ’ ಖ್ಯಾತಿಯ ನಟಿ ದೀಪಿಕಾ ದಾಸ್ ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾಗಿದ್ದಾರೆ. ತಾವು ಮದುವೆಯಾಗಿರುವುದರ ಬಗ್ಗೆ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಕನ್ಪಾರ್ಮ್ ಮಾಡಿದ್ದಾರೆ. ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಜೊತೆ ದೀಪಿಕಾ ದಾಸ್ ಮದುವೆ ಆಗಿದ್ದು, ಗೋವಾನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿದೆ. ಗೋವಾದ ಕಡಲ ತಡಿಯಲ್ಲಿ ಖಾಸಗಿಯಾಗಿ ವಿವಾಹ ಕಾರ್ಯಕ್ರಮ ನಡೆದಿದ್ದು, ವಧು-ವರರ ಕುಟುಂಬ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ನಾಗಿಣಿ ಧಾರವಾಹಿಯ ಮೂಲಕ ಖ್ಯಾತಿ ಘಳಿಸಿದ್ದ ದೀಪಿಕಾ ದಾಸ್ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಟಫ್ ಕಾಂಪಿಟೇಟರ್ ಆಗಿದ್ದ ದೀಪಿಕಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ದಾಸ್ ಇತ್ತೀಚೆಗೆ ಸಾಕಷ್ಟು ಪ್ರವಾಸ, ಮೋಜುಗಳಲ್ಲಿ ತೊಡಗಿಕೊಂಡಿದ್ದರು, ಇನ್​ಸ್ಟಾಗ್ರಾಂನಲ್ಲಿ ಪ್ರವಾಸದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ತಮ್ಮ ಮದುವೆಯ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ದೀಪಿಕಾ ದಾಸ್, ‘ಸಾಹಸಮಯ ಪ್ರಯಾಣಕ್ಕೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.

Read More

ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಆರಂಭದಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ. ಚಿತ್ರದ ಟೈಟಲ್ ನಿಂದ ಹಿಡಿದು ವಿವಿಧ ಹಂತಗಳಲ್ಲಿ ಪ್ರೇಕ್ಷಕರ ಮನ ಗೆದ್ದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ರಿಲೀಸ್ ಆಗಿರುವ ಚಿತ್ರದ ಮೋಷನ್ ಪೋಸ್ಟರ್ ಸಖತ್ ಕಲರ್ ಫುಲ್ ಹಾಗೂ ಕ್ರಿಯಾತ್ಮಕವಾಗಿಯೂ ಇದೆ. ಹೆಸರೇ ಕೇಳಿದರೆ ಇದು ಯುವಕ-ಯುವತಿಯರ ಬಗೆಗಿನ ಪ್ರೀತಿ-ಪ್ರೇಮ, ಸ್ನೇಹದ ಕತೆಯುಳ್ಳ ಸಿನಿಮಾ ಎನಿಸುತ್ತದೆ. ಆದರೆ ನಿರ್ದೇಶಕರು ಹೇಳುವಂತೆ ನಿರೀಕ್ಷೆಗಳಿಗೆ ನಿಲುಕದ ವಸ್ತುವನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಈ ಹಿಂದೆ ಟೈಟಲ್ ಲಾಂಚ್ ಅನ್ನೂ ಸಹ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿದ್ದ ಚಿತ್ರತಂಡ, ಇಂದು ಬೆಳಗ್ಗೆ ಪೋಸ್ಟರ್ ಹಾಗೂ ಸಂಜೆ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಇದರ ಸುತ್ತ ಈಗೊಂದಷ್ಟು ನಿರೀಕ್ಷೆ ಮತ್ತು ಚರ್ಚೆ ಹುಟ್ಟಿಕೊಂಡಿದೆ. ಇದುವರೆಗೂ ಈ ಸಿನಿಮಾದ ಪಾತ್ರವರ್ಗ ಕಾಣಿಸಿರಲಿಲ್ಲ. ಈ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಕೆಲ ಪಾತ್ರಗಳ…

Read More

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬಾಲಿವುಡ್ ನಲ್ಲೂ ಮಿಂಚು ಹರಿಸುತ್ತಿರೋ ಈಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ನಟರು ಕೂಡ ಈಕೆಯೇ ತಮ್ಮ ಸಿನಿಮಾದ ನಾಯಕಿಯಾಗ್ಬೇಕು ಎಂದು ದುಂಬಾಲು ಬಿದ್ದಿದ್ದಾರೆ. ಈ ಮಧ್ಯೆ ಸ್ಟಾರ್ ನಟರೊಬ್ಬರು ರಶ್ಮಿಕಾಗಾಗಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಯೆಸ್. ರಶ್ಮಿಕಾಗಾಗಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲು ನಟ ವಿಕ್ಕಿ ಕೌಶಲ್ ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿವೆ. ಈ ವೇಳೆ ಹಲವು ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ವಿಕ್ಕಿ ಕೌಶಲ್ ರಶ್ಮಿಕಾ ಮಂದಣ್ಣ ಜೊತೆ ನಟಿಸಲು 25 ಕೆಜಿ ತೂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಒಂದೇ ರೀತಿಯ ಪಾತ್ರಗಳಿಗೆ ಕಟ್ಟು ಬಿದ್ದವರಲ್ಲ. ಪೋಷಕ ಪಾತ್ರವಾಗಲೀ, ಹೀರೋ ಆಗಿ ಮಿಂಚೋದಾಗಿರಲಿ, ವಿಕ್ಕಿ ಕೌಶಲ್ ನಟಿಸಿ ಪಾತ್ರಗಳಿಗೆ ನ್ಯಾಯ…

Read More

ಸಿಂಪಲ್ ಸುನಿ ನಿರ್ದೇಶನದ ಶರಣ್ ನಟನೆಯ ಅವತಾರ ಪುರುಷ 2 ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಹಿಟ್ ಆದ ಬಳಿಕ ಸುನಿ ನಿರ್ದೇಶನದ ಮುಂದಿನ ಸಿನಿಮಾಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ದೇಶಕರು ಅನೌನ್ಸ್ ಮಾಡಿದ್ದಾರೆ. ‘ಅವತಾರ ಪುರುಷ’ ಚಿತ್ರದ ಮುಂದುವರಿದ ಭಾಗ ‘ಅವತಾರ ಪುರುಷ 2’ ಚಿತ್ರ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾ 2022ರ ಮೇ 6ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಹಾಸ್ಯದ ಜೊತೆ ಸಸ್ಪೆನ್ಸ್ ಕೂಡ ಇತ್ತು. ಸುನಿ ಮಾಟ ಮಂತ್ರದ ಕಥೆಯನ್ನು ಹೇಳಿದ್ದರು. ಅವರ ಚಿತ್ರಗಳಲ್ಲಿ ಲವ್​ಸ್ಟೋರಿಗಳೇ ಹೆಚ್ಚು ಹೈಲೈಟ್ ಆಗುತ್ತವೆ. ಆದರೆ, ಈ ಚಿತ್ರದಲ್ಲಿ…

Read More