Author: Author AIN

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾಗಿ ಎರಡು ವರ್ಷ ಕಳೆದಿದೆ. ಈ ಮಧ್ಯೆ ಉಕ್ರೇನ್ ಹೈಟೆಕ್ ಸಮುದ್ರ ಡ್ರೋನ್ ಗಳನ್ನು ಬಳಸಿಕೊಂಡು ರಷ್ಯಾದ ಮತ್ತೊಂದು ಯುದ್ಧನೌಕೆಯನ್ನು ಕಪ್ಪು ಸಮುದ್ರದಲ್ಲಿ ಮುಳುಗಿಸಲಾಗಿದೆ ಎಂದು ಹೇಳಿಕೊಂಡಿದೆ. ವಿಶೇಷ ಕಾರ್ಯಾಚರಣೆ ಘಟಕವು ದೊಡ್ಡ ಗಸ್ತು ಹಡಗು ಸೆರ್ಗೆಯ್ ಕೊಟೊವ್ ಅನ್ನು ರಾತ್ರೋರಾತ್ರಿ ನಾಶಪಡಿಸಿದೆ ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಸಂಸ್ಥೆ ತಿಳಿಸಿದೆ. 2021 ರಲ್ಲಿ ನಿಯೋಜಿಸಲಾಗಿದ್ದ ಈ ಹಡಗನ್ನು ಕೆರ್ಚ್ ಜಲಸಂಧಿಯ ಬಳಿ ಡ್ರೋನ್ ದಾಳಿಯಿಂದ ನಾಶವಾಯಿತು ಎಂದು ಉಕ್ರೇನ್ ಹೇಳಿದೆ. ಸುದ್ದಿ ಸಂಸ್ಥೆ ಎಪಿಯ ವರದಿಯ ಪ್ರಕಾರ, ಅಂತಹ ಆಧುನಿಕ ಹಡಗು ಮುಳುಗಿರುವುದು ರಷ್ಯಾಕ್ಕೆ ಗಮನಾರ್ಹ ನಷ್ಟ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಉಕ್ರೇನ್ ಮೇಲಿನ ರಷ್ಯಾದ ಕ್ಷಿಪಣಿ ದಾಳಿಗಳಲ್ಲಿ ಸುಮಾರು 20% ಕಪ್ಪು ಸಮುದ್ರದಿಂದ ಉಕ್ರೇನ್ ನಿಂದ ಉಡಾಯಿಸಲ್ಪಟ್ಟಿವೆ ಮತ್ತು ಯಶಸ್ವಿ ಉಕ್ರೇನ್ ದಾಳಿಗಳು ರಷ್ಯಾದ ಸಾಮರ್ಥ್ಯವನ್ನು ಹಾನಿಗೊಳಿಸಿವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಮಾಸ್ಕೋದ ನೌಕಾ ಸಾಮರ್ಥ್ಯ…

Read More

ನೈರೋಬಿ ರಾಷ್ಟ್ರೀಯ ಉದ್ಯಾನವನದ ಮೇಲೆ ಎರಡು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಸಣ್ಣ ವಿಮಾನ ಪತನಗೊಡಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐವರು ಸಿಬ್ಬಂದಿ ಸೇರಿದಂತೆ 44 ಪ್ರಯಾಣಿಕರನ್ನ ಹೊತ್ತ ಸಫಾರಿಲಿಂಕ್ ಏವಿಯೇಷನ್ ಏರ್ಲೈನ್ ನಿರ್ವಹಿಸುವ ಡ್ಯಾಶ್-8 ದೊಡ್ಡ ವಿಮಾನವು ಕರಾವಳಿ ರೆಸಾರ್ಟ್ ಪಟ್ಟಣ ಡಯಾನಿಗೆ ತೆರಳುತ್ತಿದ್ದಾಗ ವಿಲ್ಸನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೂಡಲೇ ಸಿಬ್ಬಂದಿ ದೊಡ್ಡ ಸ್ಫೋಟವನ್ನ ವರದಿ ಮಾಡಿದೆ ಎಂದು ವಿಮಾನಯಾನ ಸಂಸ್ಥೆ ವರದಿ ಮಾಡಿದೆ. ಪೊಲೀಸ್ ವರದಿಯ ಪ್ರಕಾರ, ಡ್ಯಾಶ್ 8 99 ಫ್ಲೈಯಿಂಗ್ ಸ್ಕೂಲ್ ನಿರ್ವಹಿಸುವ ಸಿಂಗಲ್ ಎಂಜಿನ್ ಸೆಸ್ನಾ 172 ಗೆ ಡಿಕ್ಕಿ ಹೊಡೆದಿದೆ.

Read More

ಮೇ 10ರ ಬಳಿಕ ಭಾರತೀಯ ಸೇನೆಯ ಯಾರೂ ನಮ್ಮ ದೇಶದಲ್ಲಿ ಇರಬಾರದು ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝು ಆಗ್ರಹಿಸಿದ್ದಾರೆ. ಇತ್ತೀಚೆಗೆ ಭಾರತದ ಜೊತೆಗೆ ಸಂಬಂಧ ಹಳಸಿದ ಬೆನ್ನಲ್ಲೇ ಚೀನಾದ ಜೊತೆ ಮಾಲ್ಡೀವ್ಸ್ ಕೈ ಜೋಡಿಸಿತ್ತು. ತನ್ನ ನೆಲದಲ್ಲಿದ್ದ ಭಾರತೀಯ ಸೈನಿಕರನ್ನು ತೆರವುಗೊಳಿಸಲು ಸೂಚಿಸಿತ್ತು. ಇದರ ಬೆನ್ನಲ್ಲೇ ಭಾರತ-ಮಾಲ್ಡೀವ್ಸ್ ನಡುವಿನ ಸಂಬಂಧ ಹದಗೆಡಲು ಶುರುವಾಗಿತ್ತು. ಇದಕ್ಕೆಲ್ಲಾ ಚೀನಾ ಜೊತೆಗಿನ ಬಾಂಧವ್ಯವೇ ಕಾರಣ ಎಂಬ ಮಾತುಗಳೂ ಕೇಳಿ ಬಂದಿತ್ತು. ಇದೀಗ ಮತ್ತೊಮ್ಮೆ ಭಾರತೀಯ ಸೈನಿಕರು ಸಮವಸ್ತ್ರದಲ್ಲಿ ಅಥವಾ ಸಾಮಾನ್ಯ ದಿರಿಸಿನಲ್ಲಿಯೇ ಸರಿ ನಮ್ಮ ದೇಶದಲ್ಲಿ ಮೇ 10 ರ ಬಳಿಕ ಇರಕೂಡದು ಎಂದು ಮೊಹಮ್ಮದ್ ಮೊಯಿಝು ಆದೇಶಿಸಿದ್ದಾರೆ. ‘ಭಾರತೀಯ ಸೈನಿಕರು ನಮ್ಮ ದೇಶದಿಂದ ಹೋಗಲ್ಲ. ಮತ್ತೆ ಸಮವಸ್ತ್ರ ಬಿಟ್ಟು ಸಾಮಾನ್ಯ ದಿರಿಸಿನಲ್ಲಿ ಇಲ್ಲಿಯೇ ಇರಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಡುತ್ತಿವೆ. ಆದರೆ ಇದೆಲ್ಲಾ ಸುಳ್ಳು. ಯಾರೂ ಮೇ 10 ರ ನಂತರ ನಮ್ಮ ದೇಶದಲ್ಲಿ ಇರಬಾರದು’ ಎಂದಿದ್ದಾರೆ. ಭಾರತೀಯ ಸೈನಿಕರು ಮಾಲ್ಡೀವ್ಸ್ ನಲ್ಲಿ ಮಾನವೀಯ…

Read More

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಇತ್ತ ಟಾಲಿವುಡ್‌ನಲ್ಲಿ ನಟಿ ಶ್ರೀಲೀಲಾ ಹವಾ ಕಮ್ಮಿಯಾದಂತಿದೆ. ರಶ್ಮಿಕಾಗೆ ಠಕ್ಕರ್ ಕೊಟ್ಟಿದ್ದ ಶ್ರೀಲೀಲಾಗೆ ಪೈಪೋಟಿ ಕೊಡಲು ನಟಿ ಮೀನಾಕ್ಷಿ ಚೌಧರಿ ರೆಡಿಯಾಗಿದ್ದಾರೆ. ‘ಗುಂಟೂರು ಖಾರಂ’ ಸಿನಿಮಾದ ಬಳಿಕ ನಟಿ ಮೀನಾಕ್ಷಿಗೆ ಬಂಪರ್ ಆಫರ್‌ಗಳು ಬರಲು ಶುರುವಾಗಿದೆ.  ಶ್ರೀಲೀಲಾರನ್ನೇ ಹಿಂದಿಕ್ಕಿ ಮೀನಾಕ್ಷಿ ಸಿನಿಮಾಗಳಲ್ಲಿ ಸದ್ದು ಮಾಡ್ತಿದ್ದಾರೆ. ರಶ್ಮಿಕಾ ಹಾಗೂ ಶ್ರೀಲೀಲಾ ನಡುವಿನ ಪೈಪೋಟಿಯಲ್ಲಿ ಮೀನಾಕ್ಷಿಗೆ ಬಿಗ್‌ ಚಾನ್ಸ್‌ ಸಿಕ್ಕಿದೆ. ಇತ್ತೀಚೆಗೆ ಶ್ರೀಲೀಲಾ ನಟಿಸಿದ 4-5 ಸಿನಿಮಾಗಳು ಮಕಾಡೆ ಮಲಗಿದ್ದವು. ಗುಂಟೂರು ಖಾರಂ ಚಿತ್ರದಲ್ಲಿ ಮಹೇಶ್ ಬಾಬುಗೆ  ಶ್ರೀಲೀಲಾ ಫಸ್ಟ್ ಹೀರೋಯಿನ್ ಆಗಿದ್ರೆ, ಮೀನಾಕ್ಷಿ ಸೆಕೆಂಡ್ ಲೀಡ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ನಂತರ ಲೀಲಾ ಲಕ್ ಬದಲಾಗುತ್ತೆ ಎಂದುಕೊಂಡವರ ಲೆಕ್ಕಾಚಾರ ಉಲ್ಟಾ ಆಗಿದೆ. ಶ್ರೀಲೀಲಾ ಬದಲು ಮೀನಾಕ್ಷಿಗೆ ಬೇಡಿಕೆ ಜಾಸ್ತಿಯಾಗಿದೆ. 2021ರಲ್ಲಿ ತೆಲುಗಿನ ಕಿಲಾಡಿ, ಹಿಟ್ ಸಿನಿಮಾಗಳಲ್ಲಿ ನಟಿಸಿದ ಮೀನಾಕ್ಷಿ ಮಹೇಶ್ ಬಾಬು ಜೊತೆ ನಟಿಸಿದ ಮೇಲೆ ಸ್ಟಾರ್ ನಟರಿಗೆ ನಾಯಕಿಯಗಿದ್ದಾರೆ.…

Read More

ಉತ್ತರ ಇಸ್ರೇಲ್ ಮೇಲೆ ದಕ್ಷಿಣದ ಲೆಬನಾನ್‌ ನಿಂದ ನಡೆದ ಕ್ಷಿಪಣಿ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಇಸ್ರೇಲಿ ಆರ್ಮಿ ತಿಳಿಸಿದೆ. ಇಸ್ರೇಲ್ ನಲ್ಲಿ ಕ್ಷಿಪಣಿ ದಾಳಿಗೆ ಕೇರಳ ರಾಜ್ಯದ ಕೊಲ್ಲಂನ ಪ್ಯಾಟ್ ನಿಬಿನ್ ಮ್ಯಾಕ್ಸ್‌ವೆಲ್ ಎಂಬಾತ ಮೃತಪಟ್ಟಿದ್ದಾರೆ. ಜೋಸೆಫ್ ಜಾರ್ಜ್ ಬುಷ್, ಮತ್ತು ಪಾಲ್ ಮೆಲ್ವಿನ್ ಹಾಗೂ ಇನ್ನೂ ಕೆಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಪ್ಯಾಟ್ ನಿಬಿನ್ ಮ್ಯಾಕ್ಸ್‌ವೆಲ್ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಅವರಿಗೆ ಐದು ವರ್ಷದ ಮಗಳಿದ್ದಾಳೆ ಎಂದು ಪ್ಯಾಟ್ ನಿಬಿನ್ ಮ್ಯಾಕ್ಸ್‌ವೆಲ್ ಅವರ ತಂದೆ ಪಾಥ್ರೋಸ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ. ಪ್ಯಾಟ್ ನಿಬಿನ್ ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕಾಗಿ ಇಸ್ರೇಲ್‌ಗೆ ತೆರಳಿದ್ದರು. ಅವರ ಪಾರ್ಥೀವ ಶರೀರವನ್ನು ಮುಂದಿನ ನಾಲ್ಕು ದಿನಗಳಲ್ಲಿ ಅಂತ್ಯಕ್ರಿಯೆಗಾಗಿ ಭಾರತಕ್ಕೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.

Read More

ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಹಿರಿಯ ನಟಿ ವೈಜಯಂತಿ ಮಾಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ  ಭೇಟಿ ಮಾಡಿ ಮಾತನಾಡಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ  ಮೋದಿ ಹಾಗೂ ವೈಜಯಂತಿ ಭೇಟಿ ನಡೆದಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಭಾರತೀಯ ಚಿತ್ರರಂಗಕ್ಕೆ ವೈಜಯಂತಿಮಾಲಾ ಅವರು ನೀಡಿದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ. ನರೇಂದ್ರ ಮೋದಿ ಹಂಚಿಕೊಂಡ ಮೊದಲ ಫೋಟೋದಲ್ಲಿ ಅವರು ವೈಜಯಂತಿ ಅವರಿಗೆ ಕೈಮುಗಿದು ನಮಿಸುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಅವರ ಎದುರು ಕುಳಿತು ಚರ್ಚೆ ಮಾಡುತ್ತಿದ್ದಾರೆ. ಸಿನಿಮಾ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ ಮೋದಿ. ‘ಚೆನ್ನೈನಲ್ಲಿ ವೈಜಯಂತಿ ಮಾಲಾ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ. ಅವರು ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ ಮತ್ತು ಭಾರತೀಯ ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ’ ಎಂದಿದ್ದಾರೆ.

Read More

ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಸದಾ ಅಮ್ಮನ ಜೊತೆ ಸುತ್ತುತ್ತ ಆಗಾಗ ಕ್ಯಾಮೆರಾ ಕಣ್ಣೀಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಎಲ್ಲಿಯೇ ಹೋದ್ರು ತನ್ನ ಕ್ಯೂಟ್ ನೆಸ್ ನಿಂದ ಆರಾಧ್ಯ ಸದಾ ಸುದ್ದಿಯಾಗುತ್ತಲೆ ಇರುತ್ತಾರೆ. ಇದೀಗ ಆರಾಧ್ಯ ಬಚ್ಚನ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಆರಾಧ್ಯ ಸೌಂದರ್ಯ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಆರಾಧ್ಯ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು ಯಾವ ನಟಿಯರಿಗೂ ಕಮ್ಮಿ ಇಲ್ಲ ಈಕೆಯ ಸೌಂದರ್ಯ ಎನ್ನುವಂತಿದೆ. ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರೊಂದಿಗೆ ಜಾಮ್ನಗರದಲ್ಲಿ ನಡೆದ ಆನಂದ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್ ನಲ್ಲಿ ಆರಾಧ್ಯ ಬಚ್ಚನ್ ಭಾಗಿಯಾಗಿದ್ದಾರೆ. 3 ದಿನಗಳ ಕಾಲ ಜಾಮ್​ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆರಾಧ್ಯ ಅಪ್ಪ ಅಮ್ಮನ ಮಧ್ಯೆ ಕುಳಿತು ಎಂಜಾಯ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಆನಂದ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಪೂರ್ವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಸೆಲೆಬ್ರಿಟಿ ಕಿಡ್ ನಳಲ್ಲಿ…

Read More

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಈ ವಿಚಾರವನ್ನು ಸ್ವತಃ ನಟ ರಣವೀರ್ ಸಿಂಗ್ ರಿವೀಲ್ ಮಾಡಿದ್ದು ಮುದ್ದು ಮಗುವಿನ ಆಗಮನಕ್ಕಾಗಿ ದಂಪತಿ ಎದುರು ನೋಡ್ತಿದ್ದಾರೆ. ಸದ್ಯಕ್ಕೆ ದೀಪಿಕಾ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ದೀಪಿಕಾ ಪ್ರಗ್ನೆಂಟ್ ಆಗಿರುವುದರಿಂದ ಕರಣ್ ಜೋಹರ್ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಒಂದು ಹೋಲ್ಡ್​ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಹಾಗೂ ದೀಪಿಕಾ ಪಡುಕೋಣೆ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಕರಣ್ ದೀಪಿಕಾಗಾಗಿ ಬಿಗ್ ಬಜೆಟ್ ನ ಸಿನಿಮಾವೊಂದನ್ನು ಮಾಡುವ ಉದ್ದೇಶದಿಂದ ಕಥೆ ತಯಾರಿಸಿದ್ದರಂತೆ. ಕರಣ್ ಜೊತೆ ದೀಪಿಕಾ ಈ ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಿದ್ದರು. ಸಿನಿಮಾ ಮಾಡಲು ದೀಪಿಕಾ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ, ಈ ಮಧ್ಯೆ ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ದೀಪಿಕಾ ಮತ್ತೆ ಚಿತ್ರಗಳಲ್ಲಿ ನಟಿಸಲು ಕನಿಷ್ಠ 2 ವರ್ಷವಾದರೂ ಬೇಕು. ಈ ಹಿನ್ನೆಲೆಯಲ್ಲಿ ಬೇರೆಯವರನ್ನು ಆಯ್ಕೆ ಮಾಡಿಕೊಂಡು…

Read More

ಖ್ಯಾತ ರಿಯಾಲಿಟಿ ಶೋ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಿದಂಬರ ಪೂಜಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟ ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಕನ್ಯಾ ಗೌಡ ಎಂಬುವವರ ಜೊತೆ ಚಿದಂಬರ ಪೂಜಾರಿ ಮದುವೆಯಾಗಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಚಿದಂಬರ ಹಾಗೂ ಸುಕನ್ಯಾ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ಜರುಗಿತ್ತು. ಈಗ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಫ್ಯಾಷನ್ ಡಿಸೈನರ್, ಮಾಡೆಲ್ ಆಗಿರುವ ಸುಕನ್ಯಾರನ್ನು ಚಿದಂಬರ ಪ್ರೀತಿಸಿ ಮದುವೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಪ್ರೀತಿಯ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.ಸದ್ಯ ನವ ದಂಪತಿಗಳು ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ.

Read More

ಕೋಲ್ಕತ್ತಾದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ,ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾದ ಈ ಸುರಂಗವು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್‌ನ ಭಾಗವಾಗಿದ್ದು ಇದೇ ಮಾರ್ಚ್ 6ರಂದು ಮೋದಿ ಚಾಲನೆ ನೀಡಲಿದ್ದಾರೆ. ಈ ಮೆಟ್ರೋ ಹೌರಾ ಮೈದಾನದಿಂದ ಎಸ್‌ಪ್ಲೇನೇಡ್‌ಗೆ ಸಂಪರ್ಕಿಸುತ್ತದೆ ಎಂದು ಹೇಳಲಾಗುತ್ತಿದೆ.  ಅದೇ ದಿನ ಕೋಲ್ಕತ್ತಾ ಮೆಟ್ರೋದ ಕವಿ ಸುಭಾಷ್-ಹೇಮಂತ ಮುಖೋಪಾಧ್ಯಾಯ ಮತ್ತು ತಾರಾತಲಾ-ಮಜೆರ್ಹತ್ ವಿಭಾಗಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ವಿಭಾಗಗಳು ರಸ್ತೆ ದಟ್ಟಣೆಯನ್ನು ನಿವಾರಿಸಲು ಮತ್ತು ತಡೆರಹಿತ, ಸುಲಭ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಹೌರಾ ಮೈದಾನ್​-ಎಸ್ಪ್ಲಾನೇಡ್ ಮೆಟ್ರೋ ಮಾರ್ಗವು ಭಾರತದ ಯಾವುದೇ ಪ್ರಬಲ ನದಿಯ ಅಡಿಯಲ್ಲಿ ಮೊದಲ ಸಾರಿಗೆ ಸುರಂಗವನ್ನು ಹೊಂದಿದೆ. ಹೌರಾ ಮೆಟ್ರೋ ನಿಲ್ದಾಣವು ದೇಶದಲ್ಲೇ ಅತ್ಯಂತ ಆಳವಾದುದ್ದಾಗಿದ್ದು 33-ಮೀಟರ್ ಮೇಲ್ಮೈ ಹೊಂದಿದೆ ಎನ್ನಲಾಗಿದೆ. ಮೆಟ್ರೋ 45 ಸೆಕೆಂಡುಗಳಲ್ಲಿ ಹೂಗ್ಲಿ ನದಿಯ ಅಡಿಯಲ್ಲಿ 520-ಮೀಟರ್ ವ್ಯಾಪ್ತಿಯನ್ನು ಕ್ರಮಿಸುವ ನಿರೀಕ್ಷೆಯಿದೆ. ಮಜೆರ್ಹತ್ ಮೆಟ್ರೋ ನಿಲ್ದಾಣವು…

Read More