ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆ ಸಿನಿಮಾದ ಶೂಟಿಂಗ್ ನಲ್ಲಿ ನಡೆದ ದುರಂತದಿಂದ ಮಂಡ್ಯ ರಮೇಶ್ ಅವರಿಗೆ ಎದ್ದು ನಿಲ್ಲೋದು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ನನಗೆ ಸಹಾಯ ಮಾಡಿದ್ದು ದರ್ಶನ್ ಹಾಗೂ ರಿಷಬ್ ಶೆಟ್ಟಿ ಮಾತ್ರ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ. ನಾನು ಬೆಡ್ ಮೇಲೆ ಇದ್ದಾಗ ನನ್ನ ಕಡೆಯವರು ಚಿತ್ರೋದ್ಯಮದ ಕೆಲವರ ಬಳಿ ಹಣದ ಸಹಾಯಕ್ಕಾಗಿ ಬೇಡಿಕೆ ಇಟ್ಟು ಕಾಲ್ ಮಾಡಿದ್ರು. ಆಗ ಒಬ್ಬರ ಹೊರತೂ ಬೇರೆ ಯಾರೂ ಕೂಡ ಆಗ ಸಹಾಯಕ್ಕೆ ಮುಂದೆ ಬಂದಿಲ್ಲ. ಕನ್ನಡ ಆ ಒಬ್ಬ ನಟ-ನಿರ್ದೇಶಕ ಮಾತ್ರ ನನ್ನ ಸಹಾಯಕ್ಕೆ ಬಂದ್ರು. ಅಚ್ಚರಿ ಅಂದ್ರೆ ನಾನು ಅವರ ಜೊತೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರೇ ನನಗೆ ಫೋನ್ ಮಾಡಿ ‘ಭೀಕರ ಅಪಘಾತದಲ್ಲಿ ಬದುಕುಳಿದಿದ್ದೆ ದೊಡ್ಡದು, ಕಳೆದ ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದೀರಾ, ಜೀವನ ಹೇಗೆ ನಡಿತಿದೆ ಅಣ್ಣಾ ಅಂತ ಮಾತಾಡಿ, ಕಾಲ್ ಕಟ್ ಮಾಡಿದ್ರು.…
Author: Author AIN
ಸ್ಯಾಂಡಲ್ ವುಡ್ ನಿರ್ದೇಶಕ ಜೋಗಿ ಪ್ರೇಮ್ ಬಾಲಿವುಡ್ ನಲ್ಲಿ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಕಳೆದ ಕೆಲದಿಗನಳಿಂದ ಕೇಳುತ್ತಲೆ ಇದೆ. ಈ ಬಗ್ಗೆ ಇದೀಗ ಸ್ವತಃ: ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಪ್ರೇಮ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದು ಈ ಸಿನಿಮಾ ಮುಗಿದ ಬಳಿಕವೇ ಬಾಲಿವುಡ್ ಗೆ ಹೋಗೋದಾಗಿ ಹೇಳಿದ್ದಾರೆ. ಪ್ರೇಮ್ ಗೆ ಹಲವು ಭಾರಿ ಬೇರೆ ಬೇರೆ ಭಾಷೆಗಳಿಂದ ಆಫರ್ ಗಳು ಬಂದಿವೆ. ಆ ವೇಳೆ ಎಲ್ಲಾ ರಿಜೆಕ್ಟ್ ಮಾಡಿದ್ದ ಪ್ರೇಮ್ ಇದೀಗ ಬಾಲಿವುಡ್ ಗೆ ಎಂಟ್ರಿಕೊಡೋ ಮುನಸ್ಸು ಮಾಡಿದ್ದಾರೆ. ಸದ್ಯ ಸ್ಕ್ರೀಪ್ಟ್ ವರ್ಕ್ ಕೂಡ ನಡೆಯುತ್ತಿದ್ದು ಸದ್ಯದಲ್ಲೇ ಬಿಟೌನ್ ಚಿತ್ರರಂಗಕ್ಕೆ ಎಂಟ್ರಿಕೊಡಲಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರು ಪ್ರೇಮ್ ಬಳಿ ಸಿನಿಮಾ ಮಾಡುವಂತೆ ಕೇಳಿ ಕೊಂಡಿದ್ದಾರಂತೆ.ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರೇಮ್, “ನಮ್ಮ ಸುಪ್ರಿತ್ ಅವರೆಲ್ಲ ಬಾಂಬೆಯಲ್ಲಿ ಕೆಡಿ ಫುಟೇಜ್ ಎಲ್ಲಾ ತೋರಿಸಿದ್ದಾರೆ. ಕೆಡಿ ಬ್ಯುಸಿನೆಸ್…
ಕಳೆದ ವರ್ಷ ಪತ್ನಿಯಿಂದ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಸಖತ್ ಸುದ್ದಿಯಾಗಿದ್ದ ತಮಿಳಿನ ಖ್ಯಾತ ನಟ ಜಯಂ ರವಿ ಇದೀಗ ಮತ್ತೊಂದು ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ದಿಢೀರ್ ಅಂತ ತನ್ನ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿ ಜಯಂ ರವಿ ಹೇಳೀದ್ದು ಇನ್ಮುಂದೆ ನನ್ನನ್ನು ಜಯಂ ರವಿ ಅಂತ ಕರೀಬೇಡಿ ನನ್ನ ನಿಜವಾದ ಹೆಸರು ರವಿ ಮೋಹನ್ ಎಂದಿದ್ದಾರೆ. ನಟ ರವಿ ಪ್ರಸಿದ್ಧ ಚಲನಚಿತ್ರ ಸಂಪಾದಕ ಎ ಮೋಹನ್ ಅವರ ಮಗ. ಜಯಂ ಚಿತ್ರದ ತಮಿಳು ರಿಮೇಕ್‌ನಲ್ಲಿ ಮೊದಲ ಬಾರಿಗೆ ನಟಿಸಿದ್ದು ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಳಿಕ ರವಿ ಜಯಂ ರವಿ ಎಂದೇ ಖ್ಯಾತಿಯಾದರು. ಆದರೆ ಇದೀಗ ರವಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು ರವಿ ಮೋಹನ್ ಆಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತ್ರಿಕಾ ಪ್ರಕಟನೆಯನ್ನು ರವಿ ಶೇರ್ ಮಾಡಿದ್ದಾರೆ. ಇನ್ಮುಂದೆ ನನ್ನನ್ನು ಜಯಂ ರವಿ ಎಂಬ ಹೆಸರಿನಿಂದ ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ರವಿ ಮೋಹನ್ ಎಂದೇ ಬಳಸುವಂತೆ ಕೋರಿಕೊಂಡಿದ್ದಾರೆ. ಹೊಸ ವರ್ಷದಲ್ಲಿ…
ಹಾಲು ನಮ್ಮ ದೇಹಕ್ಕೆ ಬೇಕಾದಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಒಂದು ಸಂಪೂರ್ಣ ಆಹಾರವಾಗಿದೆ. ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಬಯಸಿದರೆ, ಪ್ರತಿನಿತ್ಯ ಒಂದು ಲೋಟ ಹಾಲು ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಹಾಲು ಆರೋಗ್ಯಕ್ಕೆ ಅಗತ್ಯವಾದ ಹಲವಾರು ಜೀವಸತ್ವಗಳು ಮತ್ತು ಖನಿಜಗಳನನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ನಾವು ಹಲವಾರು ಆರೋಗ್ಯ ಪ್ರಯೋಜಗಳನ್ನು ಪಡೆಯಬಹುದು. ಆದ್ರೆ ಹೆಚ್ಚು ಹಾಲು ಸೇವಿಸುವುದು ನಿಮಗೆ ಹಾನಿಕಾರಕ ಎಂದು ತಿಳಿದಿದೆಯೇ? ಹಾಲನ್ನು ಅತಿಯಾಗಿ ಕುಡಿಯುವುದರಿಂದ ಆಗುವ ಅನನುಕೂಲಗಳೇನು? ಮತ್ತು ದಿನಕ್ಕೆ ಎಷ್ಟು ಹಾಲನ್ನು ಕುಡಿಯಬೇಕು? ಎನ್ನುವುದರ ಮಾಹಿತಿ ಇಲ್ಲಿದೆ. ಪ್ರತಿದಿನ ಹೆಚ್ಚು ಹಾಲು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ಹಾಲಿನಲ್ಲಿ ಬಹಳಷ್ಟು ಕೊಬ್ಬು ಮತ್ತು ಕ್ಯಾಲೋರಿಗಳು ಕಂಡುಬರುತ್ತವೆ. ಇದು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. 1 ಕಪ್ ಹಾಲು 5 ಗ್ರಾಂ ಕೊಬ್ಬು ಮತ್ತು 152 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ನೈಸರ್ಗಿಕ ಸಕ್ಕರೆಯಾದ ದೊಡ್ಡ ಪ್ರಮಾಣದಲ್ಲಿ ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ನಿಮ್ಮ ತೂಕ…
ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ನವದೆಹಲಿ ಮನೆಯಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಟಾಲಿವುಡ್ ನಟ, ಮೆಗಾಸ್ಟಾರ್ ಚಿರಂಜೀವಿ, ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಸೇರಿದಂತೆ ಇನ್ನೂ ಹಲವರು ಭಾಗಿಯಾಗಿ ಸಂಭ್ರಮಿಸಿದ್ದಾರೆ. ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಅಂತೆಯೇ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ನವದೆಹಲಿಯಲ್ಲಿರುವ ನಿವಾಸದಲ್ಲಿ ಸಂಕ್ರಾಂತಿ ಹಬ್ಬದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಟ ಚಿರಂಜೀವಿ, ಪಿವಿ ಸಿಂಧೂ, ಹಲವು ಕೇಂದ್ರ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ದೀಪ ಬೆಳಗಿಸಲು ನಟ ಚಿರಂಜೀವಿ ಅವರು ಪ್ರಧಾನಿ ಮೋದಿ ಅವರೊಂದಿಗೆ ನಡೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪೂಜಾ ಸಮಾರಂಭ ಮತ್ತು ದೀಪೋತ್ಸವದ ನಂತರ ಗಾಯಕಿ ಸುನೀತಾ ತಮ್ಮ ಗಾಯನದ ಮೂಲಕ ಪ್ರತಿಯೊಬ್ಬರನ್ನು…
ಕೇಂದ್ರ ಸರ್ಕಾರ ರೈತರಿಗೆ ನಾನಾ ಯೋಜನೆಗಳನ್ನು ನೀಡುತ್ತಿದೆ. ಪಿಎಂ ಕಿಸಾನ್ ಬಡ್ಡಿ ಸಬ್ಸಿಡಿ ಹತ್ತಿರದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳು ಸೇರುವುದರಿಂದ ಅನ್ನದಾತರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನಬಹುದು. ಅದಲ್ಲದೆ ರೈತರಿಗೆ ಕೃಷಿ ಮಾಡಲು ಹಣ ಬೇಕು. ಬೆಳೆ ನಾಟಿ ಮಾಡಲು, ಗೊಬ್ಬರ, ನೀರು ನೀಡಿ ಆರೈಕೆ ಮಾಡಲು ರೈತ ಎಲ್ಲಿಂದಲೋ ಹಣದ ವ್ಯವಸ್ಥೆ ಮಾಡಬೇಕು. ಅನೇಕ ಬಾರಿ ರೈತರು ಲೇವಾದೇವಿಗಾರರು ಮತ್ತು ಬ್ಯಾಂಕ್‌ಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ಸಹ ತೆಗೆದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಇಲ್ಲದ ಕಾರಣ ಅಥವಾ ಇಳುವರಿ ಕಡಿಮೆಯಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ರೈತರ ಅನುಕೂಲಕ್ಕಾಗಿ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ರೈತರು ತಮ್ಮ ಭೂಮಿಯನ್ನು ಅಡಮಾನವಿಟ್ಟು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಕೃಷಿಗಾಗಿ ಸಾಲ ಪಡೆಯಬಹುದು. ರೈತರಿಗಾಗಿ ಸರ್ಕಾರ ತಂದಿರುವ ಈ ಸಾಲ ಯೋಜನೆಯನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಅಥವಾ ಗ್ರೀನ್ ಕಾರ್ಡ್ ಎಂದು…
ಸುಗ್ಗಿಯ ಕಾಲದಲ್ಲಿ ಆಚರಿಸುವ ಹಾಗೂ ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸುತ್ತೇವೆ. ಸೂರ್ಯ ತನ್ನ ಮಗ, ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಹೋಗುತ್ತಾನೆ ಎನ್ನುವುದು ನಂಬಿಕೆ. ಹೀಗಾಗಿ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ಹಬ್ಬದ ವಿಶೇಷ ಮಾಹಿತಿ ಇಲ್ಲಿದೆ. ಮಕರ ಸಂಕ್ರಾಂತಿ ಇತಿಹಾಸ: ಸಂಕ್ರಾಂತಿಯನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ. ದಂತಕಥೆಯ ಪ್ರಕಾರ, ಸಂಕ್ರಾಂತಿಯು ಶಂಕರಾಸುರ ಎಂಬ ರಾಕ್ಷಸನನ್ನು ಕೊಂದಿತು. ಮಕರ ಸಂಕ್ರಾಂತಿಯ ಮುಂದಿನ ದಿನವನ್ನು ಕರಿದಿನ ಅಥವಾ ಕಿಂಕ್ರಾಂತ ಎಂದು ಕರೆಯಲಾಗುತ್ತದೆ. ಸಂಕ್ರಾಂತಿ ದೇವತೆಯನ್ನು ಹೊರತುಪಡಿಸಿ, ಮಕರ ಸಂಕ್ರಾಂತಿಯನ್ನು ಭಾರತದ ಎರಡು ಮಹಾಕಾವ್ಯ ಗ್ರಂಥಗಳಾದ ಪುರಾಣಗಳು ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ನಂಬಿಕೆಗಳ ಪ್ರಕಾರ, ವೈದಿಕ ಋಷಿ ವಿಶ್ವಾಮಿತ್ರನು ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದನು ಮತ್ತು ಮಹಾಭಾರತದಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಹಬ್ಬವನ್ನು ಆಚರಿಸಿದರು ಎನ್ನುವ ನಂಬಿಕೆಯಿದೆ. ಮಕರ ಸಂಕ್ರಾಂತಿ ಮಹತ್ವ: ಮಕರ…
ಸಾಲ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಬ್ಯಾಂಕ್‌ಗಳು ಕೂಡ ನಾನಾ ರೀತಿಯ ಸಾಲಗಳನ್ನು ಗ್ರಾಹಕರಿಗೆ ನೀಡುತ್ತವೆ. ಸಾಲವನ್ನು ಪಡೆಯುವ ಮೊದಲು ಸಾಲಗಾರರು ಮರುಪಾವತಿಯ ನಿಯಮಗಳು, ಬಡ್ಡಿ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯವಾಗಿದೆ. ಅದಲ್ಲದೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಬಿಗಿಯಾಗಿದೆ. ಅದರಲ್ಲೂ ಪರ್ಸನಲ್ ಲೋನ್ ನಿಯಮ ಕಠಿಣವಾಗಿದೆ. ಪರ್ಸನಲ್ ಲೋನ್‌ನಲ್ಲಿರುವ ನಿಯಮದಲ್ಲಿನ ಸಣ್ಣ ಲೋಪಗಳಿಂದ ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಈ ಅವಕಾಶ ಬಳಸಿ ಹೆಚ್ಚು ಸಾಲ ಪಡೆದು ದಿವಾಳಿಯಾಗುವ, ಸಾಲ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿರುವ ಘಟನೆಗಳು ಹೆಚ್ಚಾಗಿದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮದಲ್ಲಿ ಪರ್ಸನಲ್ ಲೋನ್ ಮೇಲೆ ಮೂಗುದಾರ ಹಾಕಲಾಗಿದೆ. ಆರ್‌ಬಿಐ ಹೊಸ ನಿಯಮದ ಅಡಿಯಲ್ಲಿ ಸಾಲ ನೀಡುವ ಬ್ಯಾಂಕ್‌ಗಳು ಅಥವಾ ಇತರ ಸಂಸ್ಥೆಗಳು ಸಾಲ ಪಡೆದವನ ಮಾಹಿತಿ, ಸಾಲದ ಮೊತ್ತ, ಸಿಬಿಲ್ ಸ್ಕೋರ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು 15 ದಿನಗಳ ಒಳಗೆ ಅಪ್‌ಡೇಟ್…
ಸೂರ್ಯೋದಯ – 6:53 AM ಸೂರ್ಯಾಸ್ತ – 5:57 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ಪಾಡ್ಯ ವರೆಗೆ ನಕ್ಷತ್ರ – ಪುನರ್ವಸು 10:16 ಬೆ ವರೆಗೆ ರಾಹು ಕಾಲ – 03:00 ದಿಂದ 04:30 ವರೆಗೆ ಯಮಗಂಡ – 09:00 ದಿಂದ 10:30 ವರೆಗೆ ಗುಳಿಕ ಕಾಲ – 12:00 ದಿಂದ 01:30 ವರೆಗೆ ಬ್ರಹ್ಮ ಮುಹೂರ್ತ – 5:17 ಬೆ ದಿಂದ 6:05 ಬೆ ವರೆಗೆ ಅಮೃತ ಕಾಲ – 7:54 ಬೆ ದಿಂದ 9:28 ಬೆ ವರೆಗೆ ಅಭಿಜಿತ್ ಮುಹುರ್ತ – 12:03 ಮ ದಿಂದ 12:47 ಮ ವರೆಗೆ ಮೇಷ ರಾಶಿ: ಪ್ರೀತಿಸುತ್ತಿದ್ದೀರಿ ನಿಜ ಆದರೆ ಮದುವೆ ಆಗುವುದು ಯಾವಾಗ? ಕಂಕಣ ಬಲದ ಸಿಹಿ ಸುದ್ದಿ ಹಂಚಿಕೊಳ್ಳುವಿರಿ, ಅಮಾನತು ಗೊಂಡಿರುವ ಉದ್ಯೋಗಿಗಳು ಮರು ನೇಮಕ, ತಡೆಹಿಡಿದ ಎಲ್ಲಾ ಕೆಲಸ…
ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್ ಸಿನಿಮಾದಲ್ಲೂ ನಟಿಸಿ ಬಂದಿರುವ ಸಪ್ತಮಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ ಬ್ಯುಸಿ ಶೆಡ್ಯೂಲ್ ನಡುವೆಯೂ ನಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ನಟಿ ಸಪ್ತಮಿ ಗೌಡ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ನ್ಯೂ ಲುಕ್ನಲ್ಲಿ ನಟಿ ಫೋಟೋ ಶೂಟ್ ಮಾಡಿಸಿದ್ದು ನಟಿಯ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಮೆರೂನ್ ಕಲರ್ ಡಿಸೈನರ್ ಲೆಹಂಗಾ ತೊಟ್ಟ ಸಪ್ತಮಿ ಗೌಡ ಫೋಟೋಗಳು ಇದೀಗ ಇನ್ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲೆಹಂಗಾ ಧರಿಸಿದ ಸಪ್ತಮಿ ಗೌಡ ಟ್ರೆಡಿಷನ್ ಲುಕ್ ಕೊಡುವ ಜ್ಯುವೆಲ್ಲರಿ ಧರಿಸಿದ್ದಾರೆ. ಸಖತ್ ಪೋಸ್ ಕೊಟ್ಟ ನಟಿಯ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್ ಬ್ಯುಸಿ ಆಗಿದ್ದಾರೆ. ಕಾಂತಾರ ಸಿನಿಮಾ ಹಿಟ್ ಆದ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.…