Author: Author AIN

ತೆಲುಗು ನಟ ರಾಮ್ ಚರಣ್ ಪತ್ನಿ ಉಪಾಸನಾ ತಮ್ಮ ತಾತನ ಜೊತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ರಾಮಲಲ್ಲಾ ಪ್ರತಿಷ್ಠಾಪನೆ ದಿನ ಪತಿ ರಾಮ್ ಚರಣ್ ಮತ್ತು ಮಾವ ಚಿರಂಜೀವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಉಪಾಸನಾ ಹೋಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ತಾತಾನ ಜೊತೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ. ತಾತ  ಹಾಗೂ ಕುಟುಂಬದ ಕೆಲ ಸದಸ್ಯರ ಜೊತೆ ಅಯೋಧ್ಯೆಗೆ ತೆರಳಿದ್ದ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಉಪಾಸನಾ ಕನಸಾಗಿದೆ. ಅದಕ್ಕಾಗಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದ ಆ ಬಗ್ಗೆ ಉಪಾಸನ ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲೇ ಆಸ್ಪತ್ರೆಯ ಕೆಲಸವನ್ನು ಶುರು ಕೂಡ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Read More

‘ಬಿಗ್ ಬಾಸ್’ ಖ್ಯಾತಿಯ ತುಕಾಲಿ ಸಂತೋಷ್ ಅವರ ಕಾರು ಅಪಘಾತವಾಗಿದೆ. ತುಮಕೂರಿನಲ್ಲಿ ತುಕಾಲಿ ಸಂತೋಷ್‌ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದ್ದು, ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಕಾಲಿ ಸಂತೋಷ್ ಕೆಲ ದಿನಗಳ ಹಿಂದೆ ಕಿಯಾ ಕಂಪನಿಯ ಹೊಸ ಕಾರು ಖರೀದಿಸಿದ್ದರು. ಆದರೆ ಅವರ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು ಕಾರೂ ಹಾಗೂ ಆಟೋ ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಘಟನೆಯ ವೇಳೆ ತುಕಾಲಿ ಸಂತೋಷ್ ಜೊತೆ ಪತ್ನಿ ಮಾನಸ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಆಟೋ ಚಾಲಕ ಜಗದೀಶ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ದೂರು ಪ್ರತಿದೂರು ದಾಖಲಿಸಲು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಟೋ ಡ್ರೈವರ್ ಕಾರ್‌ಗೆ ಡಿಕ್ಕಿ ಹೊಡೆದಿದ್ದಾರೆ ಅಂತಾ ತುಕಾಲಿ ಸಂತು ಕೂಡ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು…

Read More

ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದನೆ: ವಿದ್ಯಾರ್ಥಿಗೆ ಮರಣದಂಡನೆ, ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ ಪ್ರವಾದಿ ಮೊಹಮ್ಮದ್ ಹಾಗೂ ಆತನ ಪತ್ನಿಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಫೋಟೋ ಹಾಗೂ ವೀಡಿಯೊಗಳನ್ನು ಸಿದ್ಧಪಡಿಸಿದ್ದ 22 ವರ್ಷದ ವಿದ್ಯಾರ್ಥಿಗೆ ಮರಣದಂಡನೆ ಮತ್ತು ವಿದ್ಯಾರ್ಥಿಗೆ ಮರಣದಂಡನೆ ವಿಧಿಸಿದೆ. ಇಬ್ಬರ ವಿದ್ಯಾರ್ಥಿಗಳ ಜೊತೆಗೆ ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದೆಯ ಆರೋಪದ ಮೇಲೆ 17 ವರ್ಷದ ಯುವತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯದ ನ್ಯಾಯಾಧೀಶರ ಆದೇಶವನ್ನು ಉಲ್ಲೇಖಿಸಿ, ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ 22 ವರ್ಷದ ವಿದ್ಯಾರ್ಥಿಯು ಧರ್ಮನಿಂದೆಯ ವಿಷಯವನ್ನು ಹಂಚಿಕೊಂಡಿದ್ದಾನೆ. ಹಾಗಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಧರ್ಮನಿಂದನೆ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಹದಿಹರೆಯದ ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಇಬ್ಬರೂ ಆರೋಪಗಳನ್ನು ನಿರಾಕರಿಸಿದ್ದು ಅವರು ವಕೀಲರು ಇಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ವಾದಿಸಿದರು. ಲಾಹೋರ್‌ನಲ್ಲಿರುವ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಸೈಬರ್…

Read More

ಬಹು ಸಿಡಿತಲೆಗಳನ್ನು ನಿಯೋಜಿಸುವ ಸಾಮರ್ಥ್ಯವಿರುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾ ಕರಾವಳಿ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್​ ಕಲಾಂ ದ್ವೀಪದಲ್ಲಿ ಸೋಮವಾರ ನಡೆದ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.ಈ ಯಶಸ್ಸಿನ ಹಿಂದೆ ಕ್ಷಿಪಣಿ ತಜ್ಞೆ ಆರ್​.  ಶೀನಾ ರಾಣಿ ಹೆಸರು ಸಾಕಷ್ಟು ಕೇಳಿ ಬಂದಿದೆ. ಅಗ್ನಿ-5 ಕ್ಷಿಪಣಿ ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ಯ ತಂಡದ ಮುಂದಾಳತ್ವವನ್ನು ವಹಿಸಿದವರು ಈ ಶೀನಾ ರಾಣೀ.  57 ವರ್ಷದ ಶೀನಾ ರಾಣಿ ಅವರು ಡಿಆರ್​ಡಿಒದ ಹೈದರಾಬಾದ್ ಮೂಲದ ಅಡ್ವಾನ್ಸ್ಡ್​ ಸಿಸ್ಟಮ್ಸ್ ಲ್ಯಾಬೋರೇಟರಿ (ಎಎಸ್​ಎಲ್​)ಯಲ್ಲಿ ಪ್ರೋಗ್ರಾಮ್​ ಡೈರೆಕ್ಟರ್​ ಆಗಿ ಕ್ಷಿಪಣಿ ಪ್ರಾಜೆಕ್ಟ್​ನ ಮುನ್ನಡೆಸಿದರು. ಒಂದೇ ಕ್ಷಿಪಣಿಯು ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿತಲೆಗಳಿಂದ ಟಾರ್ಗೆಟ್​ಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. 5000 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ದೇಶದ ದೀರ್ಘಾವಧಿಯ ಭದ್ರತಾ ಅಗತ್ಯಗಳನ್ನು ಪರಿಗಣಿಸಿ ಅಭಿವೃದ್ಧಿಪಡಿಸಲಾಗಿದೆ. ಕ್ಷಿಪಣಿಯು ಚೀನಾದ ಉತ್ತರದ ಭಾಗ ಮತ್ತು ಯುರೋಪಿನ ಕೆಲವು ಪ್ರದೇಶಗಳನ್ನು ಒಳಗೊಂಡಂತೆ…

Read More

ರಾಕಿಂಗ್ ಸ್ಟಾರ್ ಯಶ್ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಫ್ಯಾಮಿಲಿ ಜೊತೆ ಟೆಂಪಲ್ ರನ್ ಮುಗಿಸಿರುವ ನಟ ಸದ್ಯ ಗೋವಾದ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಯಶ್ ಗೋವಾನಲ್ಲಿ ಬೀಡು ಬಿಟ್ಟಿರೋದು ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿ ಎನ್ನುವ ವಿಚಾರ ಹರಿದಾಡುತ್ತಿದೆ. ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಯಶ್ ಇತ್ತೀಚೆಗಷ್ಟೇ ಟಾಕ್ಸಿಕ್ ಸಿನಿಮಾದ ಕುರಿತು ಮಾತನಾಡಿದ್ದರು. ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಕೆವಿಎನ್ ಸಂಸ್ಥೆ ಚಿತ್ರಕ್ಕೆ ಬಂಡವಳ ಹೂಡಿದೆ. ‘ಟಾಕ್ಸಿಕ್’ ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದರು. ಇಂದು ಕನ್ನಡ ಸಿನಿಮಾರಂಗವನ್ನು ಪರಭಾಷಿಗರು ನೋಡುತ್ತಿರುವ ರೀತಿ ಬಗ್ಗೆ ಯಶ್ ಪ್ರತಿಕ್ರಿಯಿಸಿ, ಹೌದು ಇಂದು ಬೇರೇ ಚಿತ್ರರಂಗದವರು ನಮ್ಮನ್ನು ನೋಡುವ ರೀತಿ ಬದಲಾಗಿದೆ.…

Read More

ಇತ್ತೀಚೆಗೆ ನಟ ಕಂ ರಾಜಕಾರಣ ಉದಯ್ ನಿಧಿ ಸ್ಟಾಲಿನ್ ಹಾಗೂ ನಟಿ ನಿವೇತಾ ಕುರಿತು ಸುದ್ದಿಯೊಂದು ಹರಿದಾಡಿತ್ತು. ಈ ಬಗ್ಗೆ ಗರಂ ಆಗಿದ್ದ ನಟಿ ತಮ್ಮನ್ನು ಉದಯನಿಧಿ ಸ್ಟಾಲಿನ್ ಜೊತೆ ಕೆಟ್ಟದ್ದಾಗಿ ಬಿಂಬಿಸುತ್ತಿರುವುದಕ್ಕೆ ತರಾಟೆಗೆ ತಗೆದುಕೊಂಡಿದ್ದರು. ಇದೀಗ ಸಮಾಧಾನದಿಂದ ಗಾಸಿಪ್ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನೂ ನಟಿ ಶೇರ್ ಮಾಡಿದ್ದಾರೆ. ತಮ್ಮ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ರಾಜಕಾರಣಿಯೊಬ್ಬರು ಕೋಟ್ಯಂತರ ಮೌಲ್ಯದ ಫ್ಲ್ಯಾಟ್ ಕೊಡಿಸಿ, ದುಬೈನಲ್ಲಿ ಇಟ್ಟಿದ್ದಾರೆ ಎನ್ನುವ ವಿಚಾರ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನಟಿ ನಿವೇತಾ ಪೇತುರಾಜ್, ಆ ರಾಜಕಾರಣಿಯಿಂದ (Politician) ಸಾಕಷ್ಟು ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು. ಆ ರಾಜಕಾರಣಿ ಬೇರೆ ಯಾರೂ ಅಲ್ಲ, ಉದಯನಿಧಿ ಸ್ಟಾಲಿನ್ ಎಂದೂ ಸುದ್ದಿ ಹರಿದಾಡಿತ್ತು. ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಿದ ನಟಿ ನಿವೇತಾ, ನಾನು 16ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದೆ. ನಾನು ಅತ್ಯಂತ ಸುಂಸ್ಕೃತ ಮನೆತನದಿಂದ ಬಂದವಳು. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವವಳು…

Read More

ಮಹಿಳೆಯರ ಕ್ರಿಕೆಟ್ ರೋಚಕ ಘಟ್ಟ ತಲುಪಿದ್ದು, ಈ ಮಧ್ಯೆ ಐಪಿಎಲ್ ಫೀವರ್ ಶುರುವಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಆರ್​ಸಿಬಿ ಅಭಿಮಾನಿಗಳು ಸಖತ್ ಜೋಶ್​ನಲ್ಲಿದ್ದು, ಈ ಬಾರಿಯಾದರೂ ಕಪ್ ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಐಪಿಎಲ್ ಶುರುವಾಗಲು ಕೆಲವೇ ದಿನಗಳು ಇರುವಾಗ ನಟ ಕಂ ನಿರ್ದೇಶಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೋಣಗಳ ಜೊತೆ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ‘ಆರ್​ಸಿಬಿ ಕೋಣ’ಗಳ ಜೊತೆ ಕಾಣಿಸಿಕೊಂಡಿರುವ ವಿಡಿಯೋ ಆರ್​ಸಿಬಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಿಷಬ್ ಏನೋ ಹೇಳಿದ್ದಾರೆ, ನಿಮಗೆ ಅರ್ಥವಾಯ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ರಿಷಬ್ ಶೆಟ್ಟಿ, ‘ಕಾಂತಾರ’ ಶಿವನ ಗೆಟಪ್​ನಲ್ಲಿ ಸ್ಟೈಲ್ ಆಗಿ ಎಂಟ್ರಿ ಕೊಟ್ಟಿರುವ ದೃಶ್ಯ ವಿಡಿಯೋನಲ್ಲಿದೆ. ವಿಡಿಯೋ ಮುಂದುವರೆದಂತೆ ಮೂರು ಕೋಣಗಳು ಕಾಣುತ್ತವೆ. ಮೊದಲ ಕೋಣದ ಮೇಲೆ ರಾಯಲ್ ಎಂದು ಬರೆಯಲಾಗಿದೆ, ಎರಡನೇ ಕೋಣದ ಮೇಲೆ ಚಾಲೆಂಜರ್ಸ್ ಎಂದು ಬರೆಯಲಾಗಿದೆ. ಮೂರನೇ ಕೋಣದ ಮೇಲೆ ಬ್ಯಾಂಗಲೂರ್ ಎಂದು ಬರೆಯಲಾಗಿದೆ. ಮೂರನೇ ಕೋಣದ ಬಳಿಕ ಬರುವ ರಿಷಬ್ ಶೆಟ್ಟಿ, ‘ಭಟ್ರೆ, ಇದು…

Read More

ಆಕ್ರಮಣವನ್ನು ತಡೆಯುವಾಗ ಮಾಸ್ಕೋದ ಮಿಲಿಟರಿ ಮತ್ತು ಭದ್ರತಾ ಪಡೆಗಳು 234 ಹೋರಾಟಗಾರರನ್ನು ಸಾಯಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾದ ಮಿಲಿಟರಿ ಮತ್ತು ಗಡಿ ಪಡೆಗಳು ದಾಳಿಕೋರರನ್ನು ತಡೆಯಲು ಮತ್ತು ಗಡಿಯಾಚೆಗಿನ ದಾಳಿಯನ್ನು ತಪ್ಪಿಸಲು ಸಾಧ್ಯವಾಯಿತು ಎಂದು ಸಚಿವಾಲಯವು ಹೇಳಿದ್ದು, ಈ ದಾಳಿಯನ್ನು “ಕೈವ್ ಆಡಳಿತ” ಮತ್ತು “ಉಕ್ರೇನ್ ನ ಭಯೋತ್ಪಾದಕ ರಚನೆಗಳು” ಎಂದು ದೂಷಿಸಿದೆ. ದಾಳಿಕೋರರು ಏಳು ಟ್ಯಾಂಕ್ ಗಳು ಮತ್ತು ಐದು ಶಸ್ತ್ರಸಜ್ಜಿತ ವಾಹನಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ. ರಷ್ಯಾದ ಕುರ್ಸ್ಕ್ ಮತ್ತು ಬೆಲ್ಗೊರೊಡ್ ಪ್ರದೇಶಗಳಲ್ಲಿ ಏನಾಗುತ್ತಿದೆ ಎಂದು ಖಚಿತವಾಗಿ ಕಂಡುಹಿಡಿಯುವುದು ಅಸಾಧ್ಯ. ಯುದ್ಧ ಪ್ರಾರಂಭವಾದಾಗಿನಿಂದ ಈ ಪ್ರದೇಶದಲ್ಲಿ ಗಡಿಯಾಚೆಗಿನ ದಾಳಿಗಳು ವಿರಳವಾಗಿ ಸಂಭವಿಸಿವೆ ಮತ್ತು ಹಕ್ಕುಗಳು ಮತ್ತು ಪ್ರತಿಪಾದನೆಗಳು, ಜೊತೆಗೆ ತಪ್ಪು ಮಾಹಿತಿ ಮತ್ತು ಪ್ರಚಾರದ ವಿಷಯವಾಗಿದೆ. ರಷ್ಯಾದ ಎಂಟು ಪ್ರದೇಶಗಳಲ್ಲಿ ಡ್ರೋನ್ಗಳ ಅಲೆಗಳ ದಾಳಿಯು ಯುದ್ಧವು ತನ್ನ ಮೂರನೇ ವರ್ಷಕ್ಕೆ ವಿಸ್ತರಿಸುತ್ತಿದ್ದಂತೆ ಕೈವ್ ಅವರ ವಿಸ್ತರಿಸುತ್ತಿರುವ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿತು. ಗಡಿಯಾಚೆಗಿನ ನೆಲದ ದಾಳಿಯು…

Read More

ಅಮೆರಿಕ ದೇಶಕ್ಕೆ ಭಾರತದ ಅರ್ಹ ವೃತ್ತಿಪರರ ಅಗತ್ಯವಿದೆ ಎಂದು ಅಮೆರಿಕದ ಪ್ರಭಾವಿ ಸಂಸದ, ಕಾಂಗ್ರೆಸ್‌ ಸದಸ್ಯ ಮ್ಯಾಟ್ ಕಾರ್ಟ್‌ರೈಟ್ ತಿಳಿಸಿದ್ದಾರೆ. ಪ್ರತಿ ದೇಶಕ್ಕೆ ವರ್ಷಕ್ಕೆ ಗ್ರೀನ್ ಕಾರ್ಡ್ ವಿತರಣೆ ಮಾಡಲು ಇರುವ ಶೇ 7ರ ಮಿತಿಯನ್ನು ತೆಗೆದುಹಾಕಬೇಕು. ಇದು ಭಾರತದಿಂದ ವಲಸೆ ಬಂದ ವೃತ್ತಿಪರರಿಗೆ ದಶಕಗಳ ದೀರ್ಘ ಕಾಯುವಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ‘ಭಾರತೀಯರು ಉದ್ಯೋಗಕ್ಕಾಗಿ ಅಮೆರಿಕಕ್ಕೆ ವಲಸೆ ಬರುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ, ಅಮೆರಿಕವು ಇಲ್ಲಿ ಕೆಲಸ ಮಾಡಲು ಅರ್ಹ, ಉನ್ನತ ಕೌಶಲ್ಯ ಹೊಂದಿರುವ ಜಗತ್ತಿನ ವಿವಿಧೆಡೆಯಿಂದ ಬರುವ ಬುದ್ಧಿವಂತ ಜನರನ್ನು ಅವಲಂಬಿಸಿದೆ. ಇದು ಅಮೆರಿಕಕ್ಕೆ ಸಹಜ ಪ್ರಯೋಜನಗಳಲ್ಲಿ ಒಂದಾಗಿದೆ’ಎಂದು ಪೆನ್ಸಿಲ್ವೇನಿಯಾದ 8ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುವ ಕಾಂಗ್ರೆಸ್‌ ಸದಸ್ಯ ಮ್ಯಾಟ್ ಕಾರ್ಟ್‌ರೈಟ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಮೆರಿಕವು ಪ್ರತಿ ವರ್ಷ ಗ್ರೀನ್ ಕಾರ್ಡ್‌ಗಳನ್ನು ನೀಡುವಲ್ಲಿ ಪ್ರತಿ ದೇಶಕ್ಕೆ ಶೇ 7ರಷ್ಟು ಕೋಟಾ ಹೊಂದಿದೆ. ಇದನ್ನು ತೆಗೆದುಹಾಕಲು ಫೌಂಡೇಶನ್ ಫಾರ್ ಇಂಡಿಯಾ ಮತ್ತು ಇಂಡಿಯನ್ ಡಯಾಸ್ಪೊರಾ (ಎಫ್‌ಐಐಡಿಎಸ್) ಸೇರಿದಂತೆ…

Read More

ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಕಂ ಮಾಡೆಲ್‌ ಮೀರಾ ಚೋಪ್ರಾ ಉದ್ಯಮಿ ರಕ್ಷಿತ್‌ ಕೇಜ್ರಿವಾಲ್‌ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಜೈಪುರದಲ್ಲಿ ಮೀರಾ ಚೋಪ್ರಾ ಹಾಗೂ ರಕ್ಷಿತ್ ಕೇಜ್ರಿವಾಲ್ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದದ್ದು ಮದುವೆಯ ಚಿತ್ರಗಳನ್ನು ಮೀರಾ ಚೋಪ್ರಾ ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ. ಮೀರಾ ಚೋಪ್ರಾ ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದರೆ, ರಕ್ಷಿತ್ ಕೇಜ್ರಿವಾಲ್ ಬಿಳಿ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದಾರೆ. ಎಂದೆಂದಿಗೂ ಸಂತೋಷ, ಜಗಳ, ನಗು, ಕಣ್ಣೀರು, ಮತ್ತು ನೆನಪುಗಳು ಈ ಜೀವಮಾನದಲ್ಲಿ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೊಂದಿಗೆ ಪ್ರತಿ ಜನ್ಮ ಬದುಕುತ್ತೇನೆ ಎಂದು ಮೀರಾ ಮದುವೆಯ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಜೈಪುರ-ದೆಹಲಿ ಹೆದ್ದಾರಿಯಲ್ಲಿರುವ ಬ್ಯೂನಾ ವಿಸ್ಟಾ ಐಷಾರಾಮಿ ಗಾರ್ಡನ್ ಸ್ಪಾ ರೆಸಾರ್ಟ್‌ನಲ್ಲಿ ವಿವಾಹ ನಡೆಯಿತು. ಮಾರ್ಚ್ 11 ರಂದು ದಂಪತಿಗಳು ತಮ್ಮ ಮೆಹಂದಿ, ಹಲ್ದಿ ಮತ್ತು ಸಂಗೀತ ಸಮಾರಂಭಗಳನ್ನು ಅಯೋಜಿಸಿದ್ದರು. ಇದರಲ್ಲಿ ಸಂದೀಪ್ ಸಿಂಗ್, ಆನಂದ್ ಪಂಡಿತ್,…

Read More