Author: Author AIN

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಗಾಝಾದ 13,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಹೇಳಿದೆ. ಇಲ್ಲಿನ ಅನೇಕ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಅವರಲ್ಲಿ “ಅಳಲು ಸಹ ಶಕ್ತಿಯಿಲ್ಲ” ಎಂದು ಕಳವಳ ವ್ಯಕ್ತಪಡಿಸಿದೆ. ದಾಳಿಯಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ ಅಥವಾ ಅವರು ಎಲ್ಲಿದ್ದಾರೆಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅವರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು … ವಿಶ್ವದ ಬೇರೆ ಯಾವುದೇ ಸಂಘರ್ಷದಲ್ಲಿ ಮಕ್ಕಳಲ್ಲಿ ಸಾವಿನ ಪ್ರಮಾಣವನ್ನು ನಾವು ನೋಡಿಲ್ಲ” ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಕ್ಯಾಥರೀನ್ ರಸ್ಸೆಲ್ ತಿಳಿಸಿದ್ದಾರೆ. “ನಾನು ತೀವ್ರ ರಕ್ತಹೀನತೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಾರ್ಡ್ ಗಳಲ್ಲಿದ್ದೆ. ಇಡೀ ವಾರ್ಡ್ ಸಂಪೂರ್ಣವಾಗಿ ಶಾಂತವಾಗಿದೆ. ಏಕೆಂದರೆ ಮಕ್ಕಳು ಹಾಗೂ ಶಿಶುಗಳಲ್ಲಿ ಅಳಲು ಸಹ ಶಕ್ತಿಯೂ ಇಲ್ಲ.”ಎಂದಿದ್ದಾರೆ. ಈ ತಿಂಗಳ ಆರಂಭದಲ್ಲಿ ವಿಶ್ವಸಂಸ್ಥೆಯ ತಜ್ಞರು ಇಸ್ರೇಲ್ ಗಾಝಾದ ಆಹಾರ ವ್ಯವಸ್ಥೆಯನ್ನು ವ್ಯಾಪಕ “ಹಸಿವಿನ ಅಭಿಯಾನದ” ಭಾಗವಾಗಿ ನಾಶಪಡಿಸುತ್ತಿದೆ ಎಂದು ಹೇಳಿದ್ದರು. ಇಸ್ರೇಲ್ ಇದನ್ನು ತಿರಸ್ಕರಿಸಿತು. ಯುದ್ಧದಲ್ಲಿ…

Read More

ಕನ್ನಡದ ಹುಡುಗಿ, ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು ಸದ್ಯ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ದೀಪಿಕಾ ಎಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು ಅದಕ್ಕೀಗ ಉತ್ತರ ಸಿಕ್ಕಿದೆ. ದೀಪಿಕಾ ತಮ್ಮ ತವರು ಮನೆಯಾದ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ದೀಪಿಕಾ ಮಗು ಆಗುವವರೆಗೂ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿಯೇ ಕಳೆಯಲಿದ್ದಾರೆ. 14 ನವೆಂಬರ್ 2018ರಲ್ಲಿ ಮದುವೆಯಾದ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮದುವೆಯಾದ ಆರು ವರ್ಷಗಳ ಬಳಿಕ ಪೋಷಕರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರುವ ವಿಷಯವನ್ನು ರಣ್ವೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಲಿಯಾ ಭಟ್, ಕರೀನಾ ಕಪೂರ್ ಇನ್ನೂ ಹಲವು ತಾರೆಯರು ಮುಂಬೈನಲ್ಲಿಯೇ ತಾಯಿಯಾದರು. ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಕೋಕಿಲಾ ಬೆನ್​ನ ವೈದ್ಯರ ನೆರವನ್ನು ಪಡೆದುಕೊಂಡರು. ಆದರೆ ದೀಪಿಕಾ ಪಡುಕೋಣೆ ಇದೀಗ ಬೆಂಗಳೂರಿನಲ್ಲಿಯೇ ತಾಯಿಯಾಗಲು ನಿರ್ಧರಿಸಿದ್ದಾರೆ. ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ.…

Read More

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಶೇಕಡಾ 70 ರಷ್ಟು ಚುನಾವಣಾ ಪ್ರೋಟೋಕಾಲ್ಗಳನ್ನು ಸಂಸ್ಕರಿಸಿದ ಫಲಿತಾಂಶದ ಆಧಾರದ ಮೇಲೆ ಶೇಕಡಾ 87.17 ರಷ್ಟು ಮತಗಳನ್ನು ಪಡೆಯುವ ಮೂಲಕ ಜಯಭೇರಿ ಭಾರಿಸಿದ್ದಾರೆ ಎಂದು ರಷ್ಯಾ ಮೂಲದ ಟಾಸ್ ವರದಿ ಮಾಡಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ದಿ ರಷ್ಯನ್ ಫೆಡರೇಶನ್ ಅಭ್ಯರ್ಥಿ ನಿಕೋಲಾಯ್ ಖರಿಟೊನೊವ್ ಶೇ 4.8ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ನ್ಯೂ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ವ್ಲಾಡಿಸ್ಲಾವ್ ಡಾವಂಕೊವ್ ಶೇ 4.1ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ರಷ್ಯಾ (ಎಲ್ಡಿಪಿಆರ್) ಅಭ್ಯರ್ಥಿ ಲಿಯೋನಿಡ್ ಸ್ಲಟ್ಸ್ಕಿ ಕೇವಲ 3.15 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದಾರೆ. ಭಾನುವಾರ ಸಂಜೆ 6 ಗಂಟೆಗೆ (ಮಾಸ್ಕೋ ಸಮಯ) ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರ್ಚ್ 15-17 ರಿಂದ ಮೂರು ದಿನಗಳಲ್ಲಿ ಮೊದಲ ಬಾರಿಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇಕಡಾ 74.22 ರಷ್ಟಿದೆ. 2018ರ ಚುನಾವಣೆಯಲ್ಲಿ…

Read More

ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 20 ಮುಗಿದಿದೆ. ಈ ಸೀಸನ್ ನ ವಿನ್ನರ್ ಯಾರಾಗ್ತಾರೆ ಎನ್ನುವ ಪ್ರಶ್ನೆ ಹಲವರನ್ನು ಕಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದ್ದು ಸರಿಗಮಪ ಸೀಸನ್ 20ರ ಕಿರೀಟವನ್ನು ದರ್ಶನ್ ಪಡೆದುಕೊಂಡಿದ್ದಾರೆ. ಈ ಹಿಂದೆಯೇ ನಡೆಯಬೇಕಿದ್ದ ಸರಿಗಮಪ ಫೀನಾಳೆ ಕಾರ್ಯಕ್ರಮ ಮುಂದೆ ಹೋಗಿದ್ದು ನಿನ್ನೆ ಕಾರ್ಯಕ್ರಮ ನಡೆದಿದೆ. ರಮೇಶ್​​ ಲಮಾಣಿ ಫಸ್ಟ್​ ರನರ್ ಅಪ್, ಡಾ.ಶ್ರಾವ್ಯಾ ರಾವ್ 2nd ರನ್ನರ್ ಅಪ್ ಆಗಿದ್ದಾರೆ. ತಮ್ಮ ಅದ್ಭುತ ಪ್ರತಿಭೆಯಿಂದ ಎಲ್ಲರ ಮನಗೆದ್ದು ಸರಿಗಮಪ ಸೀಸನ್ 20ರ ಗೆಲುವಿನ ಕಿರೀಟವನ್ನು ದರ್ಶನ್ ನಾರಾಯಣ್ ತೊಟ್ಟಿದ್ದಾರೆ. ಅರ್ಜುನ್ ಜನ್ಯ, ಹಂಸಲೇಖಾ ಹಾಗೂ ವಿಜಯ್ ಪ್ರಕಾಶ್​ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿದ್ದರೆ, ಎಂದಿನಂತೆ ಅನುಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನವನ್ನು ನೀಡಲಾಗಿದೆ. ಫಿನಾಲೆ ಸಡಗರಕ್ಕೆ ಮೆರುಗು ಕೊಟ್ಟ ಅಪ್ಪು ಬರ್ತ್‌ಡೇ ಸಂಭ್ರಮ ಹೆಚ್ಚು ಜನರನ್ನು ಮುಟ್ಟಿತ್ತು. ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಪುನೀತ್​ ರಾಜ್​ಕುಮಾರ್​ ಅವರ ಕಟೌಟ್​ ನಿಲ್ಲಿಸಲಾಗಿತ್ತು ಯಾದಗಿರಿ ಜಿಲ್ಲಾ ಮೈದಾನದಲ್ಲಿ…

Read More

ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮತ್ತೆ ಪುನರುಚ್ಚರಿಸಿರುವ ಚೀನಾ ಮಿಲಿಟರಿಯು, ಈ ಪ್ರದೇಶವು ಚೀನಾದ ಅವಿಭಾಜ್ಯ ಅಂಗ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಕ್ಕೆ ಬೀಜಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದು ಇದನ್ನು ಭಾರತ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಚೀನಾ ಮಿಲಿಟರಿ ಈ ರೀತಿಯಾಗಿ ಪ್ರತಿಕ್ರಿಯಿಸಿದೆ. ‘ಝಾಂಗ್ನಾನ್‌ನ (ಟಿಬೆಟ್‌ಗೆ ಚೀನಾ ಇಟ್ಟಿರುವ ಹೆಸರು) ದಕ್ಷಿಣ ಭಾಗ (ಅರುಣಾಚಲ ಪ್ರದೇಶ) ಚೀನಾದ ಭೂ ಪ್ರದೇಶದ ಅವಿಭಾಜ್ಯ ಅಂಗ. ಅದನ್ನು ಭಾರತ ಅಕ್ರಮವಾಗಿ ತನ್ನದೆಂದು ಹೇಳುತ್ತಿದೆ. ಅದನ್ನು ಚೀನಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಮತ್ತು ಬಲವಾಗಿ ವಿರೋಧಿಸುತ್ತದೆ’ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್‌ ಜಾಂಗ್‌ ಕ್ಸಿಯೋಗಾಂಗ್‌ ಹೇಳಿದ್ದಾರೆ. ಚೀನಾ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾದ ವರದಿಯ ಪ್ರಕಾರ, ಅರುಣಾಚಲ ಪ್ರದೇಶದ ಸೆಲಾ ಸುರಂಗದ ಮೂಲಕ ಭಾರತವು ತನ್ನ ಸೇನಾ ಸನ್ನದ್ಧತೆಯನ್ನು ಹೆಚ್ಚಿಸಿದ್ದಕ್ಕೆ ಜಾಂಗ್‌ ಪ್ರತಿಕ್ರಿಯಿಸಿದ್ದಾರೆ. ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್‌’ ಎಂದು ಚೀನಾ ಪ್ರತಿಪಾದಿಸುತ್ತದೆ. ಅಲ್ಲದೆ…

Read More

ಬಾಲಿವುಡ್ ಬ್ಯೂಟಿ ನಟಿ ಪ್ರಿಯಾಂಕಾ ಚೋಪ್ರಾ ಇತ್ತಿಚೆಗೆ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ನೆಕ್ಲೇಸ್ ಸಖತ್ ಸುದ್ದಿಯಾಗಿದೆ. ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ದುಬಾರಿ ನೆಕ್ಲೇಸ್ ಸಖತ್ ಹೈಲೈಟ್ ಆಗಿದೆ. 2 ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿಯೊಂದಿಗೆ ಭಾರತಕ್ಕೆ ಬಂದಿದ್ದರು. ಈ ವೇಳೆ ಇಟಾಲಿಯನ್ ಆಭರಣ ಬ್ರ್ಯಾಂಡ್ ಬಲ್ಗೇರಿಯ ಸ್ಟೋರ್ ಲಾಂಚ್ ಗಾಗಿ ಪ್ರಿಯಾಂಕಾ ಆಗಮಿಸಿದ್ದು, ಕಾರ್ಯಕ್ರಮದಲ್ಲೂ ಭಾಗಿಯಾಗಿದ್ರು. ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ವೈಟ್ ಕಲರ್ ಡ್ರೆಸ್ ಗೆ ಬ್ಯೂಟಿಫುಲ್ ಸ್ನೇಕ್ ಡಿಸೈನ್ ಡೈಮಂಡ್ ನೆಕ್ಲೇಸ್ ಧರಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಅವರು ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲೂ ಪ್ರಿಯಾಂಕಾ ಚೋಪ್ರಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕಾ ಧರಿಸಿದ್ದ ನೆಕ್ಲೇಸ್ ಚರ್ಚೆಗೆ ಕಾರಣವಾಗಿದೆ. ಹೋಳಿ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಹೈ ಸ್ಲಿಟ್ ಸೀರೆಯನ್ನು ಧರಿಸಿದ್ದರು, ಜೊತೆ ದೇಸಿ…

Read More

ಯೂಟ್ಯೂಬರ್ ಹಾಗೂ ಬಿಗ್‌ ಬಾಸ್‌ ಒಟಿಟಿ ವಿನ್ನರ್‌ ಎಲ್ವಿಶ್‌ ಯಾದವ್‌ನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ನೋಯ್ಡಾ ಪೊಲೀಸರು ಹಾವಿನ ವಿಷದೊಂದಿಗೆ 5 ಜನರನ್ನು ಬಂಧಿಸಿದ್ದರು. ಕಳೆದ ವರ್ಷ, ನೋಯ್ಡಾ ಪೊಲೀಸರು ಸೆಕ್ಟರ್ 39 ರಲ್ಲಿ ಈ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿದ್ದರು, ಇಂದು ಎಲ್ವಿಶ್ ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಅದರ ಬೆನ್ನಲ್ಲಿಯೇ ಅವರನ್ನು ಬಂಧಿಸಲಾಗಿದೆ. ಸ್ವಲ್ಪ ಸಮಯದ ನಂತರ ಎಲ್ವಿಶ್ ಯಾದವ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಘಟನೆ ಹಿನ್ನೆಲೆ : ಕಳೆದ ವರ್ಷ ನವೆಂಬರ್ 8 ರಂದು ನೋಯ್ಡಾ ಪೊಲೀಸರು ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಯೂಟ್ಯೂಬರ್ ಎಲ್ವಿಶ್ ಯಾದವ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರು ಐವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Read More

ಇಂದು ನವರಸ ನಾಯಕ ಜಗ್ಗೇಶ್‌ ಅವರ ಹುಟ್ಟುಹಬ್ಬ. 61ನೇ ವರ್ಷದ ಕಾಲಿಟ್ಟಿರುವ ಜಗ್ಗೇಶ್ ಮಂತ್ರಾಲಯ ದೇವಸ್ಥಾನದಿಂದಲೇ ವಿಶೇಷ ವಿಡಿಯೊ ಮಾಡಿ ಹಲವು ವಿಚಾರ ಹಂಚಿಕೊಂಡಿದ್ದಾರೆ. ಇದೇ ವೇಳೆ ವರ್ತೂರ್‌ ಸಂತೋಷ್‌ ಬಗ್ಗೆ ಜಗ್ಗೇಶ್‌ ಆಡಿದ ಮಾತುಗಳು ಹಾಗೂ ‘ರಂಗನಾಯಕ’ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಜಗ್ಗೇಶ್‌ ಮಾತನಾಡಿ ʻʻಮನುಷ್ಯನ ಜೀವನ ತುಂಬ ಶ್ರೇಷ್ಠವಾದದ್ದು. 60 ವರ್ಷ ಬಹಳ ದೊಡ್ಡ ಆಯಸ್ಸು. 61ಕ್ಕೆ ಕಾಲಿಟ್ಟಿದ್ದೇನೆ. ತಾಯಿಯ ಮಾರ್ಗದರ್ಶನದಿಂದ ಇಲ್ಲಿಯವರೆಗೆ ಬಂದೆ. ತಾಯಿ ಎನ್ನುವವಳು ಎಲ್ಲರಿಗೂ ಪ್ರಥಮ ಗುರು. ಎಲ್ಲ ಬಂಧುಗಳಿಗೆ ಹೇಳೋದು ಒಂದೇ ತಂದೆ ತಾಯಿಗಿಂತ ದೇವರು ಯಾರೂ ಇಲ್ಲ. ತಂದೆ ತಾಯಿಗ ಬಗ್ಗೆ ಗೌರವ ಹೆಚ್ಚು ಮಾಡ್ಕೋಬೇಕು. 1980ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆ. ನನ್ನ ರಾಯರ ಕೃಪೆಯಿಂದ ಇಲ್ಲಿಯವರೆಗೆ ಬಂದೆ. ತುಂಬ ಮನಸ್ಸಿನಲ್ಲಿ ಬಹಳ ದಿನದಿಂದ ಹೇಳಬೇಕು ಅಂತಿದ್ದೆ. ನಾನು ನೇರ ನುಡಿ ಮಾತಾಡ್ತೇನೆ. ಮನಸ್ಸಿನಲ್ಲಿ ಏನಿಲ್ಲ. ಹಳ್ಳಿಯವನು ನಾನು. ರಾಜ್‌ಕುಮಾರ್‌ ಅವರು ಕೂಡ ಎಷ್ಟೇ ದೊಡ್ಡವಾಗಿದ್ದರೂ ಹಳ್ಳಿ ಶೈಲಿಯಲ್ಲೇ ಮಾತನಾಡುತ್ತಿದ್ದರು. ಯಾವತ್ತಾದರೂ ನಾನು…

Read More

ಇಂದಿಗೂ ಲಕ್ಷಾಂತರ ಮಂದಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಲ್ಲಿದ್ದಾರೆ. ಅಂತೆಯೇ ಪುನೀತ್ ಪತ್ನಿ ಅಶ್ವಿನಿ ಪತಿಯ ನೆನಪಿನಲ್ಲೇ ಜೀವನ ನಡೆಸುತ್ತಿದ್ದಾರೆ. ಅಪ್ಪು ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿಕೊಂಡಿದ್ದಾರೆ. ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯಿಂದ ನಮ್ಮ ಹೃದಯಾಂತರಾಳವನ್ನು ಬೆಳಗಿಸುತ್ತಲೇ ಇದ್ದಾರೆ. ಅಪ್ಪು ಅವರು ಮಾನವೀಯತೆಯಲ್ಲಿ ಇರಿಸಿದ್ದ ಅಚಲ ಬದ್ಧತೆ ಅವರ ಹಾದಿಯಲ್ಲಿ ನಡೆಯಲು ನಮಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ ಎಂದು ಅಪ್ಪು ಕುರಿತು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ. ಪುನೀತ್ ನಿಧನದ ಬಳಿಕ ಪ್ರತಿಯೊಂದರ ಜವಬ್ದಾರಿಯನ್ನು ಅಶ್ವಿನಿ ನಿಭಾಯಿಸುತ್ತಿದ್ದಾರೆ. ಪಿಆರ್‌ಕೆ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಈ ಮೂಲಕ ಅಶ್ವಿನಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಅಪ್ಪು ಕನಸನ್ನು ನನಸು ಮಾಡುತ್ತಿದ್ದಾರೆ.

Read More

ಮಹಿಳೆಯರು ಸ್ವಾವಲಂಭಿಯಾಗಿ ಬದುಕಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಮಹಿಳೆಯರಿಗೆ ಸಾಕಷ್ಟು ನೆರವು ನೀಡುತ್ತಿದೆ. ಅಂತೆಯೇ ಕೇಂದ್ರ ಸರ್ಕಾರವು ಮಹಿಳೆಯರಿಗೆ ಲಕ್ ಪತಿ ದೀದಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ರೆ 5 ಲಕ್ಷ ರೂಪಾಯಿಗಳವರೆಗೆ ಸಾಲ ನೀಡುತ್ತಿದೆ. ಇದು ಬಡ್ಡಿ ರಹಿತವಾಗಿದ್ದು ಯಾವುದೇ ಬಡ್ಡಿ ನೀಡುವ ಅವಶ್ಯಕತೆ ಇರುವುದಿಲ್ಲ.. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಅವರನ್ನು ಮುಂದೆ ತರುವುದು ಲಕ್ ಪತಿ ದೀದಿ ಯೋಜನೆಯ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ದೇಶಾದ್ಯಂತ ಹಳ್ಳಿಗಳಲ್ಲಿ 3 ಕೋಟಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಇದಲ್ಲದೆ, ಈ ಯೋಜನೆಯಡಿ (ಲಖ್ಪತಿ ದೀದಿ ಯೋಜನೆ) ಮಹಿಳೆಯರು ಯಾವುದೇ ಬಡ್ಡಿಯಿಲ್ಲದೆ 1 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯುತ್ತಾರೆ. ಇದರೊಂದಿಗೆ, ಸರ್ಕಾರವು ಅವರಿಗೆ ಉತ್ತಮ ಮಾರುಕಟ್ಟೆ ಬೆಂಬಲವನ್ನು ಒದಗಿಸುತ್ತದೆ. ಇದಕ್ಕಾಗಿ, ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವುದು ಅವಶ್ಯಕ. ಅಲ್ಲಿ ಅವರಿಗೆ ಸರ್ಕಾರವು ಆರ್ಥಿಕ ಮತ್ತು…

Read More