Author: Author AIN

ಮುಂಬರುವ 2025ರ ಆರ್ಥಿಕ ವರ್ಷಕ್ಕೆ ಭಾರತೀಯ ಐಟಿ ವೃತ್ತಿಪರರಿಂದ ಹೆಚ್ಚು ಬೇಡಿಕೆಯಿರುವ H-1B ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 22 ರಂದು ಮುಕ್ತಾಯಗೊಳ್ಳಲಿದೆ ಎಂದು ಫೆಡರಲ್ ಏಜೆನ್ಸಿ ಮಾಹಿತಿ ನೀಡಿದೆ. H-1B ವೀಸಾ ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ. 2025 ರ ಹಣಕಾಸು ವರ್ಷದಲ್ಲಿ ವಿದೇಶಿ ಅತಿಥಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆಯಿರುವ H-1B ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 22 ರಂದು ಮದ್ಯಾಹ್ನ 12ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.

Read More

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೆಲುವು ಸಿಗಲಿ ಎಂದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಐಟಿ ತಂತ್ರಜ್ಞರು ಹೋಮ ನಡೆಸಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿರುವ ಹಿಂದೂ ದೇವಾಲಯದಲ್ಲಿ ಪೂಜೆ ಆಯೋಜಿಸಿ ಮೋದಿ ಗೆಲುವಿಗೆ ಸಾಕಷ್ಟು ಮಂದಿ ಪ್ರಾರ್ಥನೆ ಸಲ್ಲಿಸಿದರು. ‘ಇದು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ. ಬದಲಿಗೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಸಲ್ಲಿಸುತ್ತಿರುವ ಸಾಮೂಹಿಕ ಆವಾಹನೆಯಾಗಿದೆ. ಅನಿವಾಸಿ ಭಾರತೀಯರು ಹಾಗೂ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರ ಪ್ರಾರ್ಥನೆಯಾಗಿದೆ’ ಎಂದು ಆಯೋಜಕರು ಹೇಳಿದ್ದಾರೆ. ಹವನ ಸಂದರ್ಭದಲ್ಲಿ ‘ಅಬ್‌ ಕೀ ಬಾರ್ 400 ಪಾರ್‌’ ಘೊಷಣೆಯನ್ನು OFBJP ಸದಸ್ಯರು ಕೂಗಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ವಿಜಯ ದಾಖಲಿಸಿದೆ ಎಂದು ಭವಿಷ್ಯ ನುಡಿದರು. ‘ಈ ಧಾರ್ಮಿಕ ಸಂಘಟನೆಯು ನಾವು ಪ್ರಜಾಪ್ರಭುತ್ವದಲ್ಲಿ ಇಟ್ಟಿರುವ ಆಳವಾದ ನಂಬಿಕೆ ಹಾಗೂ ಭಾರತದಲ್ಲಿ ಮುಂದುವರಿದಿರುವ ಆಡಳಿತಾತ್ಮಕ ಸುಧಾರಣೆ ಮತ್ತು ಪ್ರಗತಿಯ ಪ್ರತಿಫಲನವಾಗಿದೆ’ ಎಂದಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯು ಏ.…

Read More

ತಮ್ಮ ಸಿಂಪಲ್ ಲುಕ್ ನಿಂದ ಬಾಲಿವುಡ್ ಚಿತ್ರರಂಗದಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ನಟಿ ಸಾರಾ ಅಲಿಖಾನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.  ಆಗಾಗ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಅಪ್ ಲೋಡ್ ಮಾಡುವ ನಟಿ ಇದೀಗ ಮತ್ತೆ ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಬ್ಲ್ಯಾಕ್‌ ಡ್ರೆಸ್‌ ಧರಿಸಿ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿರುವ ನಟಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸಾರಾ ಹಲವು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಸಾರಾ ಆಲಿ ಖಾನ್‌, 43 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಸಾರಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಜರಾ ಹತ್ಕೆ ಜರಾ ಬಚ್ ಕೆ, ಅತ್ರಂಗಿ ರೇ, ಕೇದಾರ್‌ನಾಥ್‌, ಸಿಂಬಾ, ಲವ್ ಆಜ್‌ ಕಲ್‌,  ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್, ಲುಕಾ ಚುಪ್ಪಿ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಸಾರಾ ಅಲಿಖಾನ್ ಹಿಂದೂ…

Read More

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಘೋಷಿತ ಅಭ್ಯರ್ಥಿಗಳು ಮತಬೇಟೆ ಚಟುವಟಿಕೆಗಳನ್ನು ಜೋರಾಗಿಯೇ ಶುರುಮಾಡಿದ್ದಾರೆ. ತಮ್ಮ ಕ್ಷೇತ್ರದ ಪ್ರಭಾವಿತರ ಮನೆ ಮನೆಗೆ ತೆರಳುತ್ತಿರುವ ಅಭ್ಯರ್ಥಿಗಳು ಚುನಾವಣೆಗೆ ಸಹಕಾರ ನೀಡುವಂತೆ ಕೇಳುತ್ತಿದ್ದಾರೆ. ಅಂತೆಯೇ ಸಂಸದೆ ಶೋಭಾ ಕರಂದ್ಲಾಜೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ  ಅವರನ್ನು ಭೇಟಿ ಮಾಡಿ ಸಹಕಾರ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ನಮ್ಮ ಪಕ್ಷಕ್ಕೆ ಅವರ ಸಹಕಾರ ಕೇಳಿದ್ದೇವೆ. ಅಶ್ವಿನಿ ಅವರಿಗೆ ರಾಜಕೀಯ ಪಾರ್ಟಿ ಇಲ್ಲ. ಹಾಗಾಗಿ ನಿಮ್ಮ ಸಹಕಾರ, ಬೆಂಬಲ ಬೇಕು ಅಂತ ಕೇಳಿದ್ದೇವೆ. ಅವ್ರು ನಮ್ಮದೇ ಕ್ಷೇತ್ರದಲ್ಲಿದ್ದಾರೆ. ಪ್ರಚಾರದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ. ರಾಜಕಾರಣದ ವಿಚಾರದಲ್ಲಿ ಪುನೀತ್ ಯಾವತ್ತಿಗೂ ಹಿಂದೇಟು ಹಾಕುತ್ತಲೇ ಇದ್ದರು. ಸ್ವತಃ ಶಿವರಾಜ್ ಕುಮಾರ್ ಪತ್ನಿ ಚುನಾವಣೆಗೆ ನಿಂತಾಗಲೂ ಅವರು ಸಪೋರ್ಟ್ ಮಾಡಲಿಲ್ಲ. ರಾಜಕಾರಣದಿಂದ ಅಂತರ ಕಾಪಾಡಿಕೊಂಡೇ ಬಂದರು. ಅಶ್ವಿನಿ ಅವರು ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮತ್ತೊಂದೆಡೆ ಶಿವರಾಜ್ ಕುಮಾರ್ ಪತ್ನಿ ಗೀತಾ ಕೂಡ…

Read More

ಗೀತ ಸಾಹಿತಿ ಜಾವೇದ್ ಅಖ್ತರ್ ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಹನಿ ಇರಾನಿ ಅವರನ್ನು 1972ರಲ್ಲಿ ಮದುವೆ ಆದ ಜಾವೇದ್ ಅಖ್ತರ್ 11 ವರ್ಷಗಳ ಬಳಿಕ ದೂರ ಆದರು. ದಶಕಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದ ಇವರು ಬೇರೆ ಆದರು. ಈ ಸಂಬಂಧ ಮುರಿದು ಬೀಳಲು ಮದ್ಯ ಪಾನ ವ್ಯಸನವೇ ಕಾರಣ ಎಂದಿರುವ ಜಾವೇದ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ನಾನು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತೇನೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. ‘ನಾನು ಏಕರೂಪ ನಾಗರಿಕ ಸಂಹಿತೆಯನ್ನು ಪಾಲಿಸುತ್ತಿದ್ದೇನೆ. ನಾನು ಒಬ್ಬರನ್ನು ಮದುವೆ ಆದೆ. 11 ವರ್ಷ ಒಟ್ಟಿಗೆ ಸಂಸಾರ ನಡೆಸಿದೆವು. ನಂತರ ವಿಚ್ಛೇದನ ಪಡೆದೆವು. ಮುಸ್ಲಿಂ ಕಾನೂನಿನ ಪ್ರಕಾರ ಅವಳಿಗೆ ಕೇವಲ ನಾಲ್ಕು ತಿಂಗಳ ಜೀವನಾಂಶ ಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ಆದರೆ ನಾನು ಯೋಚಿಸಲಿಲ್ಲ. ಅವಳು ನನ್ನ ಜವಾಬ್ದಾರಿ. ಅವಳಿಗೆ ನನ್ನ ಬೆಂಬಲ ಬೇಕೋ ಅಥವಾ ಬೇಡವೋ ಎಂದು ನಿರ್ಧರಿಸುವ ಜವಾಬ್ದಾರಿ ಕೂಡ ಅವರದ್ದೇ’ ಎಂದಿದ್ದಾರೆ…

Read More

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ, ಶ್ರೀನಿವಾಸರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿತ್ರೀಕರಣ ವಿಯೆಟ್ನಾಂ ನಲ್ಲಿ ಮುಕ್ತಾಯವಾಗಿದೆ. ಅಲ್ಲಿ ಚಿತ್ರದ ಎರಡು ಹಾಡುಗಳು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ನಡೆದಿದೆ.  ಇದರೊಂದಿಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ. ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 41 ನೇ ಚಿತ್ರವಾಗಿದ್ದು, ಗಣೇಶ್ ಗೆ ಜೋಡಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್,  ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ”…

Read More

ಅನುಪಮಾ ಪರಮೇಶ್ವರ್ ನಟನೆಯ ‘ಟಿಲ್ಲು ಸ್ಕ್ವೇರ್’ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ನಟಿ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಹಿಂದೆಂದೂ ಕಾಣದಷ್ಟು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಹಾಗೂ ಕಿಸ್ಸಿಂಗ್ ದೃಶ್ಯಗಳಿದ್ದು ಇದೇ ಕಾರಣಕ್ಕೆ ಚಿತ್ರ ಮತ್ತಷ್ಟು ಸುದ್ದಿಯಾಗಿದೆ. ಇದೀಗ ಚಿತ್ರತಂಡ ಅಭಿಮಾನಿಗಳ ಜೊತೆ ಚಿತ್ರದ ಕುರಿತು ಚರ್ಚೆ ನಡೆಸಿದೆ. ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಅನುಪಮಾಗೆ ಜೋಡಿಯಾಗಿ ನಟ ಸಿದ್ದು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ.  ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಅವರು ‘ಡಿಜೆ ಟಿಲ್ಲು’ಗೆ ಸೀಕ್ವೆಲ್ ಮಾಡಬಹುದು ಎಂದು ಹೇಳಿದ್ದರು. ಈ ಪ್ಲ್ಯಾನ್ ನಿರ್ಮಾಪಕರಿಗೂ ಇಷ್ಟ ಆಗಿತ್ತು. ಮೊದಲು ‘ಟಿಲ್ಲು ರಿಟರ್ನ್​’, ‘ಟಿಲ್ಲು 2’ ಎಂದೆಲ್ಲ ಟೈಟಲ್ ಇಡಲಾಗಿತ್ತು. ತ್ರಿವಿಕ್ರಮ್ ಅವರು ‘ಟಿಲ್ಲು ಸ್ಕ್ವೇರ್’ ಟೈಟಲ್ ಫಿಕ್ಸ್ ಮಾಡಿದ್ದರು ಎಂದು ಚಿತ್ರತಂಡ ಹೇಳಿದೆ. ಕಿಸ್ಸಿಂಗ್ ದೃಶ್ಯಗಳು ಇದ್ದರೆ ಇಡೀ ಕುಟುಂಬದವರು ಹೋಗಿ ಸಿನಿಮಾ ನೋಡಲು ಮುಜುಗರ ಆಗುತ್ತದೆ. ಈ ಕಾರಣಕ್ಕೆ ಇದು ಫ್ಯಾಮಿಲಿ ಸಿನಿಮಾ ಆಗಲು ಸಾಧ್ಯವೇ ಎಂದು…

Read More

ಬಲ್ಗೇರಿಯನ್ ಹಡಗು ‘ರುಯೆನ್’ ಮತ್ತು ಅದರ ಸಿಬ್ಬಂದಿಯನ್ನು ಸೊಮಾಲಿಯಾದ 35 ಕಡಲ್ಗಳ್ಳರ ಅಪಹರಿಸಿದ್ದು, ಸುದೀರ್ಘ 40 ಗಂಟೆಗಳ ಕಾರ್ಯಾಚರಣೆ ನಡೆಸಿದ್ದ ಭಾರತೀಯ ನೌಕಾಪಡೆ ಕಡಲ್ಗಳ್ಳರನ್ನು ವಶಕ್ಕೆ ಪಡೆದು 17 ಒತ್ತೆಯಾಳುಗಳನ್ನು ರಕ್ಷಿಸಿದ್ದರು. ಈ ಕಾರ್ಯಾಚರಣೆಯನ್ನು ಬಲ್ಗೇರಿಯಾ ಅಧ್ಯಕ್ಷ ಕೊಂಡಾಡಿದ್ದು ಧನ್ಯವಾದ ಹೇಳಿದ್ದಾರೆ. ಭಾರತೀಯ ನೌಕಾಪಡೆಯ ಶೌರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಅಪಹರಣಕ್ಕೊಳಗಾದ ಹಡಗಿನಿಂದ ತನ್ನ ಏಳು ನಾಗರಿಕರ ಪ್ರಾಣ ಉಳಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಪ್ರಧಾನಿ ಮೋದಿ ಮತ್ತು ಭಾರತೀಯ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಡಿಸೆಂಬರ್ 14ರಂದು ಎಂವಿ ರೂಯೆನ್ ಅನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು. ಭಾರತೀಯ ನೌಕಾಪಡೆಯು ಸತತ 40-ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಹಡಗು ರುಯೆನ್ ಅನ್ನು ರಕ್ಷಿಸುವ ಮೂಲಕ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡುವ ಸೊಮಾಲಿ ಕಡಲ್ಗಳ್ಳರ ಯೋಜನೆಗಳನ್ನು ವಿಫಲಗೊಳಿಸಿತು. ಐಎನ್​ಎಸ್ ಕೊಲ್ಕತ್ತ, ಕಳೆದ 40 ಗಂಟೆಗಳಲ್ಲಿ, ಸಂಘಟಿತ ಕ್ರಮಗಳ ಮೂಲಕ ಯಶಸ್ವಿಯಾಗಿ ಎಲ್ಲಾ 17 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ…

Read More

ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು 20ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಭಯೋತ್ಪಾದಕ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್‌ನ ಸೇನೆ ತಿಳಿಸಿದೆ. ಅಲ್-ಶಿಫಾ ಆಸ್ಪತ್ರೆಯಲ್ಲಿ ನಡೆದ ವಿವಿಧ ಕಾರ್ಯಾಚರಣೆಯಲ್ಲಿ ಇದುವರೆಗೆ ಇಪ್ಪತ್ತು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು ಡಜನ್‌ಗಟ್ಟಲೆ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಸೇನೆಯು ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಇಸ್ರೇಲ್ ಈ ಹಿಂದೆ ಹಮಾಸ್ ಆಂತರಿಕ ಭದ್ರತಾ ಅಧಿಕಾರಿ ಎಂದು ಗುರುತಿಸಲಾದ ಫೈಕ್ ಅಲ್-ಮಭೌಹ್ ನನ್ನು ಹತ್ಯೆ ಮಾಡಿದ್ದಾಗಿ ವರದಿ ಮಾಡಿದೆ. ಗಾಜಾ ಪೊಲೀಸ್ ಮೂಲವೊಂದು ಆತನ ಸಾವನ್ನು ದೃಢಪಡಿಸಿದೆ.

Read More

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಜಾಪ್ರಭುತ್ವ ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಬೆದರಿಕೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್, “ಡೊನಾಲ್ಡ್ ಟ್ರಂಪ್ ನಮ್ಮ ಪ್ರಜಾಪ್ರಭುತ್ವ ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಬೆದರಿಕೆಯಾಗಿದ್ದಾರೆ. ಅಧ್ಯಕ್ಷ ಜೋ ಬೈಡನ್ ಮತ್ತು ನಾನು ರೋ ಅವರನ್ನು ಪುನಃಸ್ಥಾಪಿಸುತ್ತೇವೆ. ಮತದಾನದ ಹಕ್ಕುಗಳನ್ನು ರಕ್ಷಿಸುತ್ತೇವೆ ಮತ್ತು ಅಂತಿಮವಾಗಿ ನಮ್ಮ ಬಂದೂಕು ಹಿಂಸಾಚಾರದ ಸಾಂಕ್ರಾಮಿಕ ರೋಗವನ್ನು ಪರಿಹರಿಸುತ್ತೇವೆ. ಈ ವ್ಯತಿರಿಕ್ತತೆಯು ಇದಕ್ಕಿಂತ ಸ್ಪಷ್ಟವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋತರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಟ್ರಂಪ್ ಹೇಳಿಕೆಯನ್ನು ಖಂಡಿಸಿದ ಜೋ ಬೈಡನ್ ಅವರ ಪ್ರಚಾರ ವಕ್ತಾರ ಜೇಮ್ಸ್ ಸಿಂಗರ್, ಯುಎಸ್ ಜನರು ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡುವುದಿಲ್ಲ ಎಂದಿದ್ದಾರೆ. ಅಮೆರಿಕದ ಜನರು ಈ ಟ್ರಂಪ್ ಗೆ ಮತ್ತೊಂದು ಚುನಾವಣಾ ಸೋಲನ್ನು ನೀಡಲಿದ್ದಾರೆ ಏಕೆಂದರೆ ಅವರು ಅವರ ಉಗ್ರವಾದ, ಹಿಂಸಾಚಾರದ ಮೇಲಿನ ಪ್ರೀತಿ ಮತ್ತು ಸೇಡಿನ ದಾಹವನ್ನು ತಿರಸ್ಕರಿಸುತ್ತಲೇ ಇದ್ದಾರೆ…

Read More