Author: Author AIN

ಹಾಲಿವುಡ್ ಸಿನಿಮಾ ರಂಗದಲ್ಲಿ ಸೆಟಲ್ ಆಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಮೇರಿಯೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಬಲ್ಗರಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಪ್ರಿಯಾಂಕಾ ಚೋಪ್ರಾ ಅದೇ ಕಂಪನಿಯ ಇವೆಂಟ್​ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದಾರೆ. ಇದೇ ವೇಳೆ ಅಯೋಧ್ಯೆಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ಪಾಪ್‌ಸ್ಟಾರ್ ನಿಕ್ ಜೋನಾಸ್ ಅವರು ಮಗಳು ಮಾಲ್ತಿ ಮೇರಿಯೊಂದಿಗೆ ಅಯೋಧ್ಯೆಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜನವರಿಯಲ್ಲಿ ನಡೆದ ಶ್ರೀರಾಮ ಲಲ್ಲಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪ್ರಿಯಾಂಕಾ ಜನವರಿಯಲ್ಲಿ ಭಾರತದಲ್ಲಿ ಇರಲಿಲ್ಲ. ಇತ್ತೀಚೆಗೆ ಇಶಾ ಅಂಬಾನಿ ಅವರು ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಪ್ರಿಯಾಂಕಾ ಭಾಗವಹಿಸಿದ್ದು, ಪಾರ್ಟಿಯಲ್ಲಿ ದೇಸಿ ಗರ್ಲ್ ಎಲ್ಲರ ಗಮನ ಸೆಳೆದಿದ್ದಾರೆ. ಅಂದ ಹಾಗೆ ಸದ್ಯ ಬಾಲಿವುಡ್​ ತೊರೆದಿರುವ ನಟಿ ಹಾಲಿವುಡ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.  ಸದ್ಯ ಬಾಲಿವುಡ್​ಗೆ ಬೈ ಬೈ…

Read More

ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾ ತೆರೆಗೆ ಬರ್ತಿದ್ದು ಚಿತ್ರದಲ್ಲಿ ಇಳಯರಾಜನ ಪಾತ್ರದಲ್ಲಿ ನಟ ಧನುಷ್ ಕಾಣಿಸಿಕೊಳ್ತಿದ್ದಾರೆ. ಸದ್ಯ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು ಧನುಷ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.   ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಧನುಷ್‌, ಗೌರವಾನ್ವಿತ ಇಳಯರಾಜ ಸರ್‌ ಎಂದು ಬರೆದುಕೊಂಡಿದ್ದಾರೆ. ಧನುಷ್‌ ಅಭಿಯನದ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಅರುಣ್ ಮಾಥೇಶ್ವರನ್ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಇಳಯರಾಜ ಅವರ ಜೀವನ ಹಾಗೂ ಅವರು ಸಾಗಿ ಬಂದ ಹಾದಿ, ಸಂಗೀತ ಕ್ಷೇತ್ರದಲ್ಲಿನ ಅವರ ಸಾಧನೆ ಸೇರಿದಂತೆ ಇನ್ನಿತರೆ ವಿಷಯಗಳ ಸುತ್ತ ಈ ಚಿತ್ರ ಹೆಣೆಯಲಾಗಿದೆ.  ಐದು ದಶಕಗಳ ಕಾಲ ಸುಮಾರು 7,000ಕ್ಕೂ ಅಧಿಕ ಹಾಡುಗಳನ್ನು ರಚಿಸಿರುವ ಇಳಯರಾಜ ಅವರು ತಮ್ಮ ವೃತ್ತಿ ಜೀವನದಲ್ಲಿ 20,000ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರಿಗೆ ಪದ್ಮ ಭೂಷಣ ಹಾಗೂ ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.…

Read More

ಶರಣ್, ಆಶಿಕಾ ರಂಗನಾಥ್ ಕಾಂಬಿನೇಷನ್ ನ ಅವತಾರ ಪುರುಷ ಸಿನಿಮಾದ ರಿಲೀಸ್ ಡೇಟ್ ಮುಂದೂಡಲಾಗಿದೆ. ಐಪಿಎಲ್ ಕ್ರಿಕೆಟ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ರಿಲೀಸ್ ಡೇಟ್ ಮುಂದೂಡಲಾಗಿದ್ದು, ಹೊಸ ರಿಲೀಸ್‌ ಡೇಟ್‌ ಅನ್ನು ಚಿತ್ರತಂಡ ಅನೌನ್ಸ್‌ ಮಾಡಿದೆ.  ‘ಅವತಾರ ಪುರುಷ’ 2ನೇ ಭಾಗ ಇದೇ ಮಾರ್ಚ್ 22ರಂದು ರಾಜ್ಯಾದ್ಯಂತ ತೆರೆಗೆ ಬರಲು ರೆಡಿಯಾಗಿತ್ತು. ಆದರೆ ಮಾರ್ಚ್ 22ರಿಂದ ಐಪಿಎಲ್ ಪಂದ್ಯ ಪ್ರಾರಂಭವಾಗುತ್ತಿದೆ. ಈ ವೇಳೆ ಸಿನಿಮಾ ರಿಲೀಸ್ ಮಾಡಿದರೆ ಹೊಡೆತ ಬೀಳಲಿದೆ ಎಂಬ ಕಾರಣಕ್ಕೆ ಇದೀಗ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಸದ್ಯ ಚಿತ್ರ ಏಪ್ರಿಲ್ 5ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಟ ಶರಣ್- ನಟಿ ಆಶಿಕಾ ರಂಗನಾಥ್ ಜೋಡಿ, ಮತ್ತೆ ಶ್ರೀನಗರ ಕಿಟ್ಟಿಯ ಮಂತ್ರವಾದಿಯ ಪಾತ್ರ ಈ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಶ್ರೀನಗರ ಕಿಟ್ಟಿ ಪಾತ್ರ ಮೊದಲ ಭಾಗಕ್ಕಿಂತ ಅವತಾರ ಪುರುಷ ಎರಡನೇ ಭಾಗದಲ್ಲಿ ಇನ್ನಷ್ಟು ಭಯಂಕರವಾಗಿಯೇ ಮೂಡಿ ಬಂದಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಪ್ರೇಕ್ಷಕರ…

Read More

ಟಾಲಿವುಡ್‌ ಮೆಗಾಸ್ಟಾರ್‌ ಪುತ್ರ ರಾಮ್ ಚರಣ್ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿದ್ದಾರೆ. ಸಿನಿಮಾಗಳ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಕೆಲ ಸಮಯ ಕಳೆದಿದ್ದಾರೆ. ಬ್ಯುಸಿ ಶೆಡ್ಯೂಲ್‌ ಮಧ್ಯೆಯೇ ಕಡಲ ತೀರದ ಬಳಿ ಪತ್ನಿ ಉಪಾಸನಾ ಮತ್ತು ಮಗಳು ಕ್ಲಿಂಕಾರರೊಂದಿಗೆ ಎಂಜಾಯ್ ಮಾಡಿದ್ದಾರೆ. ರಾಮ್‌ ಚರಣ್‌ ತಮ್ಮ ಮುದ್ದಾದ ಕುಟುಂಬದ ಜೊತೆಗೆ ಬೀಚ್‌ ನ್ಲಿ ಮೋಜು-ಮಸ್ತಿ ಮಾಡಿದ್ದಾರೆ. ನಟ ರಾಮ್‌ಚರಣ್‌ ಹಾಗೂ ಉಪಾಸನಾ ಜೋಡಿ ಮದುವೆಯಾದ 11 ವರ್ಷಗಳ ನಂತರ ಪೋಷಕರಾಗಿದ್ದಾರೆ. ಕಳೆದ ವರ್ಷ ಈ ಜೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಕ್ಲಿಂಕಾರ ಎಂದು ಹೆಸರಿಟ್ಟಿದ್ದಾರೆ. ಈ ದಂಪತಿ ತಮ್ಮ ಪುಟ್ಟ ಮಗಳ ಜೊತೆಗೆ ವೈಜಾಗ್‌ನ ಬೀಚ್‌ ಗೆ ತೆರೆಳಿ ಸಮಯ ಕಳೆದಿದ್ದಾರೆ. ಇದೇ ವೇಳೆ ರಾಮ್ ಚರಣ್ ಮಗಳಿಗೆ ನೀರಿನ ಅಲೆಗಳನ್ನು ತೋರಿಸಿ ಆಕೆಯ ಪಾದಗಳನ್ನು ನೀರಿನಲ್ಲಿ ಒದ್ದೆ ಮಾಡಿಸಿದ್ದಾರೆ.

Read More

ಟೀಂ ಇಂಡಿಯಾ ಕ್ರಿಕೆಟಿಗ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಎಂದು ಎಲ್ಲರಿಗೂ ಗೊತ್ತು. ಅಳಿಯನ್ನು ಮಗ ಎಂದೇ ಭಾವಿಸಿರುವ ಸುನಿಲ್ ಶೆಟ್ಟಿ ಇದೀಗ ಏಕಾಏಕಿ ನೀನು ನನ್ನ ಮಗನೇ ಅಲ್ಲ ಎಂದಿದ್ದಾರೆ. ಕೆಎಲ್ ರಾಹುಲ್ ಅಳಿಯನಾದರೂ ಸುನಿಲ್ ಶೆಟ್ಟಿ ಜೊತೆಗೆ ತಂದೆ-ಮಗನಷ್ಟೇ ಉತ್ತಮ ಬಾಂಧವ್ಯವಿದೆ. ಸುನಿಲ್ ಶೆಟ್ಟಿ ಕೂಡಾ ರಾಹುಲ್ ನನ್ನ ಇನ್ನೊಬ್ಬ ಮಗ ಎಂದೇ ಹೇಳುತ್ತಾರೆ. ಆದರೆ ಇದೀಗ ಸುನಿಲ್ ಶೆಟ್ಟಿ ತಮ್ಮ ವರಸೆ ಬದಲಿಸಿದ್ದು, ಸದ್ಯಕ್ಕೆ ನೀನು ನನ್ನ ಮಗನಲ್ಲ ಎಂದು ಗರಂ ಆಗಿದ್ದಾರೆ. ಅಷ್ಟಕ್ಕೂ ಈ ರೀತಿ ಎಚ್ಚರಿಕೆ ಕೊಟ್ಟಿದ್ದು ಜಾಹೀರಾತೊಂದಕ್ಕಾಗಿ. ಐಪಿಎಲ್ ನಲ್ಲಿ ಸುನಿಲ್ ಶೆಟ್ಟಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಅಳಿಯ ರಾಹುಲ್ ಲಕ್ನೋ ತಂಡದ ನಾಯಕ. ಹೀಗಾಗಿ ಮುಂಬೈ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ತಮಾಷೆಯ ಜಾಹೀರಾತೊಂದನ್ನು ಹೊರತರಲಾಗಿದೆ. ಈ ಜಾಹೀರಾತಿನಲ್ಲಿ ರೆಸ್ಟೋರೆಂಟ್ ನಲ್ಲಿ ಸುನಿಲ್ ಶೆಟ್ಟಿ…

Read More

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ-ಒಂದು ದಂತಕಥೆ’ಯ ಮೊದಲ ಅಧ್ಯಾಯ ರಿಲೀಸ್ ಗೂ ಮೊದಲೇ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊ ಈ ಸಿನಿಮಾವನ್ನು ಖರೀದಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ ಘೋಷಿಸಿತು. ರಿಷಬ್‌ ಶೆಟ್ಟಿ ಹಾಗೂ ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರಾಹ ರೂಪಂ ಹಾಡಿಗೆ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡಿದ ಬಳಿಕ, ಪ್ರೈಂ ತಂಡವು ‘ಕಾಂತಾರ-ಒಂದು ದಂತಕಥೆ’ ಅಧ್ಯಾಯ 1ರ ಬಿಡುಗಡೆಯನ್ನು ಘೋಷಿಸಿತು. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಹೊಸ ಸಿನಿಮಾ ‘ಕಾಂತಾರ-ಒಂದು ದಂತಕಥೆ’ಯ ಪ್ರೀಕ್ವೆಲ್‌ ಆಗಿದ್ದು, ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಬಲ್ಲ ಮಾಹಿತಿಗಳ ಪ್ರಕಾರ ‘ಕಾಂತಾರ’: ಚಾಪ್ಟರ್- 1 ಓಟಿಟಿ ರೈಟ್ಸ್ ಅಂದಾಜು 150 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದು ದಾಖಲೆ ಎನ್ನಬಹುದು. ಪ್ರೈ ವೀಡಿಯೋ ‘ಕಾಂತಾರ’ ಪ್ರೀಕ್ವೆಲ್ 5 ಭಾಷೆಗಳ ಸ್ಟ್ರೀಮಿಂಗ್ ರೈಟ್ಸ್‌…

Read More

ಕೆಲವೇ ದಿನಗಳ ಅಂತರದಲ್ಲಿ ಮೆಟಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಾದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸರ್ವರ್ ಮತ್ತೆ ಡೌನ್ ಆಗಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ಜನರಿಗೆ ಈ ಸಮಸ್ಯೆ ಎದುರಾಗಿದ್ದು ಇದರಿಂದ ಜನತೆ ಕೆಲಸ ಹೊತ್ತು ಪರದಾಡುವಂತಾಗಿದೆ. ಕೆಲವರನ್ನ ತಮ್ಮ ಪಾಸ್ ವರ್ಡ್’ಗಳನ್ನ ಬದಲಾಯಿಸಲು ಸಹ ಕೇಳಲಾಯಿತು. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳು ಮತ್ತು ಇತರ ಹಲವಾರು ಫ್ಲ್ಯಾಟ್ ಫಾರ್ಮ್ ಗಳು ಸ್ಥಗಿತಗೊಂಡ ಕೆಲವೇ ವಾರಗಳಲ್ಲಿ ಮತ್ತೆ ಮರುಕಳಿಸಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಎರಡೂ ಮೆಟಾ ಅಪ್ಲಿಕೇಶನ್ಗಳಲ್ಲಿ ಕ್ರ್ಯಾಶ್ಗಳು ಮತ್ತು ಲಾಗಿನ್ ಸಮಸ್ಯೆಗಳನ್ನು ಅನುಭವಿಸುವ ಬಗ್ಗೆ ತಮ್ಮ ಹತಾಶೆಯನ್ನ ವ್ಯಕ್ತಪಡಿಸಲು ಭಾರತ ಮತ್ತು ಪ್ರಪಂಚದಾದ್ಯಂತದ ಜನರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ ಕಡೆಗೆ ತಿರುಗಿದರು. ಹೆಚ್ಚುವರಿಯಾಗಿ, ಮೆಸೆಂಜರ್ ಅಪ್ಲಿಕೇಶನ್ ಬಳಸುವಾಗ ಕೆಲವು ಬಳಕೆದಾರರು ತೊಂದರೆಗಳನ್ನು ಎದುರಿಸಿದ್ದಾರೆ.

Read More

ಶಸ್ತ್ರಸಜ್ಜಿತ ಬಲೂಚ್ ಭಯೋತ್ಪಾದಕರು ಗ್ವಾದರ್ ಬಂದರು ಕಾಂಪ್ಲೆಕ್ಸ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಪ್ರದೇಶದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ತೀವ್ರ ಗುಂಡಿನ ಚಕಮಕಿ ಹಿನ್ನಲೆ ಪೊಲೀಸ್ ಮತ್ತು ಭದ್ರತಾ ಪಡೆಗಳ ದೊಡ್ಡ ತುಕಡಿ ಸ್ಥಳಕ್ಕೆ ತಲುಪಿದೆ ಎಂದು ಮಕ್ರನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ಹೇಳಿದ್ದಾರೆ. ಗ್ವಾದರ್ ಪೋರ್ಟ್ ಅಥಾರಿಟಿ ಸಂಕೀರ್ಣದ ಮೇಲಿನ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು ಎಂಟು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ. ಕಾಂಪ್ಲೆಕ್ಸ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ)ದ ಮಜೀದ್ ಬ್ರಿಗೇಡ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ದೀರ್ಘಾವಧಿಯ ಹಿಂಸಾತ್ಮಕ ದಂಗೆಗೆ ನೆಲೆಯಾಗಿದೆ. ಬಲೂಚ್ ದಂಗೆಕೋರ ಗುಂಪುಗಳು ಈ ಹಿಂದೆ ಶತಕೋಟಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದ್ದವು. ಗಡಿಯಾಚೆಗಿನ ಭಯೋತ್ಪಾದನೆಯ…

Read More

ಐದು ವರ್ಷದ ಮಗುವನ್ನು ಕೊಲೆ ಮಾಡಿ ಬಳಿಕ ಮಗುವಿನ ದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಾಗಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕಾದ ಲಾಸ್‌ ಏಂಜಲೀಸ್‌ ನಲ್ಲಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ನಡೆದು ಎರಡು ವರ್ಷಗಳಾಗಿದ್ದು ಆದರೆ ತಾಯಿಯನ್ನು ಈಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯಾನದ ಡೆಜಾನೆ ಲೂಡಿ ಆಂಡರ್ಸನ್‌(38) ಎಂಬಾಕೆಯ ಐದು ವರ್ಷದ ಪುತ್ರ ಕೈರೋ ಅಮ್ಮರ್‌ ಜೋರ್ಡಾನ್‌ ಎಂಬಾತ ಎರಡು ವರ್ಷದ ಹಿಂದೆ ಮೃತಪಟ್ಟಿದ್ದ. ಆತನಿಗೆ ಹೊಟ್ಟೆ ನೋವಿಗೆ ಸಂಬಂಧಿಸಿ ನೀಡಿದ್ದ ಎಲೆಕ್ಟ್ರೋಲೈಟ್‌ ಅನ್ನು ನೀಡಲಾಗಿತ್ತು. ಇದು ಅಡ್ಡಪರಿಣಾಮ ಬೀರಿ ಕೈರೋ ಮೃತಪಟ್ಟಿದ್ದ. ಇದು ಬಹಿರಂಗವಾದರೆ ತೊಂದರೆಯಾಗುತ್ತದೆ ಎನ್ನುವ ಕಾರಣ ನೀಡಿ ಆಕೆ ವಿಶೇಷವಾದ ಸೂಟ್‌ಕೇಸ್‌ನಲ್ಲಿ ದೇಹವನ್ನು ತುಂಬಿ ವಾಷಿಂಗ್ಟನ್‌ ಗ್ರಾಮೀಣ ಪ್ರದೇಶದಲ್ಲಿ ಎಸೆದಿದ್ದಳು. ವ್ಯಕ್ತಿಯೊಬ್ಬ ಸಮೀಪದಲ್ಲಿಯೇ ಅಣಬೆ ಹುಡುಕಲು ಬಂದಾಗ ಸೂಟ್‌ಕೇಸ್‌ ಕಂಡು ಬಂದಿತ್ತು. ಇದರಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಆನಂತರ ದೇಹವನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮಗುವಿನ ಪೋಷಕರ ಪತ್ತೆ ಹಾಗೂ ಸಾವಿಗೆ ನಿಖರ…

Read More

ಇತ್ತೀಚೆಗೆ ಪಂಜಾಬ್ ನ ಖ್ಯಾತ ಗಾಯಕ ಮೃತ ಸಿಧು ಮೂಸೆವಾಲಾ ಪೋಷಕರು ಐವಿಎಫ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಕೇಂದ್ರವು ಐವಿಎಫ್ ಮೂಲಕ ಗರ್ಭ ಧರಿಸಲು ವಯಸ್ಸಿನ ಮಿತಿಯನ್ನು ನಿಗದಿಪಡಿಸಿದೆ. ಕಳೆದ ವಾರ ಸಿಧು ಮೂಸ್ ವಾಲಾ ಪೋಷಕರು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಐವಿಎಫ್ ವಿಧಾನದ ಮೂಲಕ ಮಗುವನ್ನು ಗರ್ಭಧರಿಸಲು ವಯಸ್ಸಿನ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ. ಮಗುವಿನ ಬಗ್ಗೆ ದಾಖಲೆಗಳಿಗಾಗಿ ಜಿಲ್ಲಾಡಳಿತವು ತನಗೆ ಕಿರುಕುಳ ನೀಡುತ್ತಿದೆ ಎಂದು ಗಾಯಕನ ತಂದೆ ಬಲ್ಕೌರ್ ಸಿಂಗ್ ಆರೋಪಿಸಿದ್ದಾರೆ. ಸಿಧು ಮೂಸೆವಾಲ ಅವರನ್ನು ಗುಂಡಿಕ್ಕಿ ಕೊಂದ ಸುಮಾರು ಎರಡು ವರ್ಷಗಳ ನಂತರ, ದಂಪತಿಗೆ ಕಳೆದ ಶನಿವಾರ ಮಗು ಜನಿಸಿತು. 58 ವರ್ಷದ ಚರಣ್ ಸಿಂಗ್ ಇನ್-ವಿಟ್ರೊ ಫಲೀಕರಣ (ಐವಿಎಫ್) ತಂತ್ರದ ಮೂಲಕ ಮಗುವನ್ನು ಗರ್ಭಧರಿಸಿದ್ದರು ಎಂದು ಸಂಬಂಧಿಕರು ಈ ವರ್ಷದ ಆರಂಭದಲ್ಲಿ ತಿಳಿಸಿದ್ದರು.

Read More