Author: Author AIN

ಕನ್ನಡದ ಹುಡುಗಿ, ಟಾಲಿವುಡ್ ಬ್ಯೂಟಿ ನಟಿ ಶ್ರೀಲೀಲಾ ಸಖತ್ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಶ್ರೀಲೀಲಾ ಉಳಿದ ನಟಿಯರಿಗೆ ಟಕ್ಕರ್ ಕೊಡ್ತಿದ್ದಾರೆ. ಶ್ರೀಲೀಲಾ ನಟನೆಯ ಜೊತೆಗೆ ಡ್ಯಾನ್ಸ್ ನಲ್ಲೂ ಸಖತ್ ಮೋಡಿ ಮಾಡ್ತಿದ್ದಾರೆ. ಇದೀಗ ಮಹೇಶ್ ಬಾಬು ಜೊತೆಗಿನ ಗುಂಟೂರು ಖಾರಂ ಚಿತ್ರದಲ್ಲಿ ಶ್ರೀಲೀಲಾ ಡ್ಯಾನ್ಸ್ ನೋಡಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಶ್ರೀಲೀಲಾ ಬಗ್ಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿ, ಇತ್ತೀಚೆಗೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ನೋಡಿದೆ. ಸಿನಿಮಾ ತುಂಬಾ ಚೆನ್ನಾಗಿದೆ. ಅದರಲ್ಲಿ ಶ್ರೀಲೀಲಾ ಡ್ಯಾನ್ಸ್ ಚೆನ್ನಾಗಿ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿ ಬೆರಗಾದೆ ಎಂದಿದ್ದಾರೆ. ನನಗೆ ಸಿನಿಮಾ ನೋಡಲು ಸಮಯವಿಲ್ಲ. ಆದರೆ ರಜನಿಕಾಂತ್ ಸಿನಿಮಾ ಬಿಟ್ಟು ಬೇರೆ ಸಿನಿಮಾಗಳನ್ನು ನೋಡಲ್ಲ. ಆದರೆ ಮಹೇಶ್ ಬಾಬು, ಶ್ರೀಲೀಲಾ ನಟನೆಯ ಈ ಸಿನಿಮಾ ಇಷ್ಟ ಆಯ್ತು. ಅದರಲ್ಲೂ ಶ್ರೀಲೀಲಾ ಡ್ಯಾನ್ಸ್ ಚೆನ್ನಾಗಿದೆ ಎಂದು ಕ್ರಿಕೆಟಿಗ ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯ ಶ್ರೀಲೀಲಾ ಅವರು…

Read More

ನಟಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ಇದೀಗ  ವರ್ಕೌಟ್ ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಗೆ ಶಪಥ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ವರ್ಕೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನು ವರ್ಕೌಟ್ ವಿಡಿಯೋ ಹಂಚಿಕೊಳ್ಳದೇ ಸ್ವಲ್ಪ ಸಮಯ ಆಯಿತು ಅಲ್ಲವೇ? ನಾನು ಸರಿಯಾಗಿ ವರ್ಕೌಟ್ ಮಾಡದೇ 4-5 ತಿಂಗಳಾಗಿತ್ತು. ಆದರೆ ನಾನೀಗ ಮತ್ತೆ ಮರಳಿದ್ದೇನೆ. ನಿಮಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಇನ್ಮುಂದೆ ಇಂಥ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತೇನೆ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ. ಸದಾ ಸಿನಿಮಾಗಳ ಕೆಲಸ, ಟ್ರ್ಯಾವೆಲ್ ನಿಂದಾಗಿ ರಶ್ಮಿಕಾ ವರ್ಕೌಟ್ ಕಡೆ ಅಷ್ಟಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಆಗಾಗ ಒಂದಲ್ಲ ಒಂದು ವರ್ಕೌಟ್ ವಿಡಿಯೋ ಶೇರ್ ಮಾಡುತ್ತಿದ್ದ ರಶ್ಮಿಕಾ ಇದೀಗ ಸಾಕಷ್ಟು ಸಮಯದ ಬಳಿಕ ಮತ್ತೆ ವಿಡಿಯೋ ಹಂಚಿಕೊಂಡು ಫ್ಯಾನ್ಸ್ ಗಳಿಗೆ ಹುರಿ ದುಂಬಿಸಿದ್ದಾರೆ.

Read More

ಇತ್ತೀಚೆಗೆ ನಡೆದಿದ್ದ ರಶ್ಯ ಅಧ್ಯಕ್ಷೀಯ ಚುನಾವಣೆಯ ಮತಪತ್ರದಲ್ಲಿ `ಯುದ್ಧಬೇಡ’ ಎಂದು ಬರೆದಿದ್ದ ಮಹಿಳೆಗೆ 8 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಗೆಲುವು ಸಾಧಿಸಿದ್ದು 6ನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಚುನಾವಣೆಯ ದಿನದಂದು ಮತ ಹಾಕಲು ಬಂದಿದ್ದ ಸೈಂಟ್ ಪೀಟರ್ಸ್ಬರ್ಗ್ ನ ಅಲೆಕ್ಸಾಂಡ್ರಾ ಚಿರ್ಯಟ್ಯೆವಾ ಮತಪತ್ರದ ಹಿಂಬದಿಯಲ್ಲಿ ಕೆಂಪು ಮಾರ್ಕರ್ ಪೆನ್ನಿಂದ `ಯುದ್ಧಬೇಡ’ ಎಂದು ಬರೆದು ಅದನ್ನು ಮತಪೆಟ್ಟಿಗೆಯೊಳಗೆ ಹಾಕಿದ್ದಳು. ಗೂಂಡಾಗಿರಿ ಮತ್ತು ರಶ್ಯದ ಸಶಸ್ತ್ರ ಪಡೆಗಳನ್ನು ಅಪಖ್ಯಾತಿಗೊಳಿಸಿದ ಅಪರಾಧಕ್ಕೆ ಆಕೆಗೆ 40,000 ರೂಬಲ್ಸ್(436 ಡಾಲರ್ಗಳು) ದಂಡ ಮತ್ತು 8 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಕೃತ್ಯದ ಮೂಲಕ ಸರಕಾರದ ಆಸ್ತಿಗೆ ಹಾನಿ ಎಸಗಲಾಗಿದೆ ಎಂದು ಸೈಂಟ್ ಪೀಟರ್ಸ್ಬರ್ಗ್ ನ ಜಿಲ್ಲಾ ನ್ಯಾಯಾಲಯದ ಆದೇಶ ತಿಳಿಸಿದೆ.

Read More

ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಪ್ರಾಂತೀಯ ಅಧಿಕಾರಿ ತಿಳಿಸಿದ್ದಾರೆ. ಕಂದಹಾರ್ ನಗರದಲ್ಲಿ ನ್ಯೂ ಕಾಬೂಲ್ ಬ್ಯಾಂಕ್ ಎದುರು ಕಾಯುತ್ತಿದ್ದ ಜನರ ಗುಂಪನ್ನು ಗುರಿಯಾಗಿಸಿ ಸುಮಾರು 8 ಗಂಟೆಗೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ಮೂವರು ಮೃತಪಟ್ಟಿದ್ದಾರೆ ಹಾಗೂ 12 ಮಂದಿ ಗಾಯಗೊಂಡಿದ್ದಾರೆ. ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ ಎಂದು ಕಂದಹಾರ್ ಪ್ರಾಂತದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಇನಾಮುಲ್ಲಾ ಸಮಂಗನಿ ಹೇಳಿದ್ದಾರೆ. ಅಗ್ನಿಶಾಮಕ ದಳ ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬಾಂಬ್ ದಾಳಿಯ ಕುರಿತು ತನಿಖೆ ನಡೆಸಲಾಗುತ್ತಿದೆ.

Read More

ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಇಬ್ಬರು ಭಾರತೀಯ ಮೂಲದವರಿಗೆ ಹಾಗೂ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ 26 ವರ್ಷದ ಖಾಲಿಸ್ತಾನ್ ಹೋರಾಟಗಾರ ಗುರ್ಪ್ರೀತ್ ಸಿಂಗ್ಗೆ 28 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಪಶ್ಚಿಮ ಲಂಡನ್ನಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ ಗುರುಪ್ರೀತ್ ಸಿಂಗ್, ತನ್ನಲ್ಲಿದ್ದ `ಕಿರ್ಪಾನ್’ (ಸಿಖ್ಖರ ಧಾರ್ಮಿಕ ಸಮವಸ್ತ್ರದ ಭಾಗವಾದ ಸಣ್ಣ ಚೂರಿ)ನಿಂದ ಮೂವರಿಗೆ ಇರಿದಿದ್ದ. ಇದರಿಂದ ಗಾಯಗೊಂಡಿದ್ದ ಮೂವರು ಆತನ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಆರೋಪಿಗೆ ಎರಡು ವರ್ಷ  ನಾಲ್ಕು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

Read More

ಡೀಪ್ ಫೇಕ್ ಅಶ್ಲೀಲ ವೀಡಿಯೊಗಳನ್ನು ಮಾಡಿ ಆನ್ ಲೈನ್ ನಲ್ಲಿ ವೈರಲ್ ಮಾಡಿದ್ದ ಬಳಿಕ ದುಬಾರಿ ಪರಿಹಾರವನ್ನು ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಕೋರಿದ್ದಾರೆ. ಪ್ರಧಾನಿ ಜಿಯೋರ್ಜಿಯಾ ಮೆಲೋನಿ  ಪರಿಹಾರವನ್ನು 100,000 ಯುರೋ (109,345 ಡಾಲರ್) ಪರಿಹಾರವನ್ನು ಕೋರಿದ್ದಾರೆ. ಇಬ್ಬರು ಪುರುಷರು ಮೆಲೋನಿ ಅವರ ಮುಖವನ್ನು ಇನ್ನೊಬ್ಬ ವ್ಯಕ್ತಿಯ ದೇಹದ ಮೇಲೆ ರಚಿಸುವ ಮೂಲಕ ಅಶ್ಲೀಲ ವೀಡಿಯೊಗಳನ್ನು ಮಾಡಿ ನಂತರ ಅವುಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 40 ವರ್ಷದ ವ್ಯಕ್ತಿ ಮತ್ತು ಅವರ 73 ವರ್ಷದ ತಂದೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.ಪೊಲೀಸರ ಪ್ರಕಾರ, ವೀಡಿಯೊಗಳನ್ನು ಅಪ್ಲೋಡ್ ಮಾಡಲು ಬಳಸಿದ ಸ್ಮಾರ್ಟ್ಫೋನ್ ಅನ್ನು ಟ್ರ್ಯಾಕ್ ಮಾಡುವ ಮೂಲಕ ಅವರನ್ನು ಪತ್ತೆಹಚ್ಚಲು ಸಾಧ್ಯವಾಯಿತು. 2022ರಲ್ಲಿ ಅವರು ದೇಶದ ಪ್ರಧಾನಿಯಾಗಿ ನೇಮಕಗೊಳ್ಳುವ ಮುನ್ನ ಈ ವಿಡಿಯೋ ವೈರಲ್ ಆಗಿತ್ತು.

Read More

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪ್ರಾಯೋಜಿತ ಸಮೀಕ್ಷಾ ವರದಿಯಲ್ಲಿ ಫಿನ್ಲೆಂಡ್‌ ವಿಶ್ವದ ಅತ್ಯಂತ ಸಂತೋಷಭರಿತ ದೇಶ ಎನಿಸಿಕೊಂಡಿದೆ. ಫಿನ್ಲೆಂಡ್‌ ಸತತವಾಗಿ ಏಳನೇ ಬಾರಿಯೂ ಮೊದಲನೇ ಸ್ಥಾನದಲ್ಲಿದ್ದು, ಅಫ್ಗಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದೆ. 143 ದೇಶಗಳ ಪಟ್ಟಿಯಲ್ಲಿ ಭಾರತ 126ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಭಾರತ ಸಹ ಇದೇ ಸ್ಥಾನದಲ್ಲಿತ್ತು. ವಿಶೇಷವೆಂದರೆ ಯುದ್ಧ ಪೀಡಿತ ಪ್ಯಾಲೆಸ್ಟೇನ್‌ 103ನೇ ಸ್ಥಾನ ಪಡೆದಿದೆ. ಯುರೋಪಿಯನ್‌ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಮುಂದುವರಿದಿವೆ. ಫಿನ್ಲೆಂಡ್‌, ಡೆನ್ಮಾರ್ಕ್, ಐಸ್‍ಲ್ಯಾಂಡ್, ಸ್ವೀಡನ್ ಮತ್ತು ಇಸ್ರೇಲ್ ಅಗ್ರ 5 ಸ್ಥಾನ ಪಡೆದಿವೆ. 10 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ಜರ್ಮನಿ ಅಗ್ರ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅಮೆರಿಕ 23 ಮತ್ತು ಜರ್ಮನಿ 24ನೇ ಸ್ಥಾನಕ್ಕೆ ಕುಸಿದಿದೆ. ಪೂರ್ವ ಯುರೋಪಿಯನ್ ದೇಶಗಳಾದ ಸರ್ಬಿಯಾ, ಬಲ್ಗೇರಿಯಾ ದೇಶಗಳು ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡರೆ ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್ ದೇಶಗಳ ಶ್ರೇಯಾಂಕ ತೀವ್ರ ಕುಸಿದಿದೆ

Read More

ಈ ತಿಂಗಳ ಆರಂಭದಿಂದ ಕಾಣೆಯಾಗಿರುವ ಕ್ಲೀವ್ಲ್ಯಾಂಡ್ನಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಹುಡುಕಲು ನ್ಯೂಯಾರ್ಕ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ಹೈದರಾಬಾದ್ ನ ನಾಚಾರಂ ಮೂಲದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಕ್ಲೀವ್ಲ್ಯಾಂಡ್ ವಿಶ್ವವಿದ್ಯಾಲಯದಿಂದ ಐಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕಳೆದ ವರ್ಷ ಮೇ ತಿಂಗಳಲ್ಲಿ ಅಮೆರಿಕಕ್ಕೆ ಆಗಮಿಸಿದ್ದರು. ಕಳೆದ ಮಾರ್ಚ್ 7 ರಂದು ಅರ್ಫಾತ್ ತನ್ನೊಂದಿಗೆ ಕೊನೆಯದಾಗಿ ಮಾತನಾಡಿದ್ದ ಎಂದು ಆತನ ತಂದೆ ಮೊಹಮ್ಮದ್ ಸಲೀಂ ಹೇಳಿದ್ದಾರೆ. ಅಂದಿನಿಂದ ಅವರು ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿಲ್ಲ ಮತ್ತು ಅವರ ಮೊಬೈಲ್ -ಫೋನ್ ಸ್ವಿಚ್ ಆಫ್ ಆಗಿದೆ.ಭಾರತೀಯ ದೂತಾವಾಸವು ಅರ್ಫಾತ್ ಅವರ ಕುಟುಂಬ ಮತ್ತು ಯುಎಸ್ ನಲ್ಲಿರುವ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಎಕ್ಸ್ ಪೊಸ್ಟ್ನಲ್ಲಿ ತಿಳಿಸಿದೆ. ಆತನನ್ನು ಆದಷ್ಟು ಬೇಗ ಹುಡುಕಲು ನಾವು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಯುಎಸ್ನಲ್ಲಿರುವ ಅರ್ಫಾತ್ ನ ರೂಮ್ಮೇಟ್ಗಳು ಅವರ ತಂದೆಗೆ ಅವರು ಕ್ಲೀವ್ಲ್ಯಾಂಡ್ ಪೊಲೀಸರಿಗೆ ಕಾಣೆಯಾದವರ ದೂರನ್ನು…

Read More

ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಆಧ್ಯತ್ಮದ ಬಗ್ಗೆ, ಆಧ್ಯಾತ್ಮಿಕ ಆಲೋಚನೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕಂಗನಾಗೆ ಆಧ್ಯಾತ್ಮ ಗುರು ಜಗ್ಗಿ ವಾಸುದೇವ ಅವರ ಬಗ್ಗೆ ವಿಶೇಷ ಗೌರವ ಇದೆ. ಮಿದುಳಿನಲ್ಲಿ ರಕ್ತಸಾವ್ರ ಉಂಟಾಗಿದ್ದರಿಂದ ಸದ್ಗುರು ಇತ್ತೀಚೆಗೆ ಮಿದುಳಿನ ಸರ್ಜರಿಗೆ ಒಳಗಾದರು. ಈ ಸುದ್ದಿ ತಿಳಿದ ಕಂಗನಾ ಕುಗ್ಗಿ ಹೋದರಂತೆ. ತಾವು ಒಂದು ಕ್ಷಣ ಮಂಕಾಗಿದ್ದಾಗಿ ನಟಿ ಹೇಳಿಕೊಂಡಿದ್ದಾರೆ. ‘ಇಂದು ನಾನು ಸದ್ಗುರು ಅವರನ್ನು ಐಸಿಯು ಬೆಡ್ ಮೇಲೆ ಮಲಗಿರುವುದನ್ನು ನೋಡಿದೆ. ಈ ಮೊದಲು ಅವರು ನಮ್ಮಂತೆ ಮೂಳೆಗಳು, ರಕ್ತ, ಮಾಂಸ ಹೊಂದಿದ್ದಾರೆ ಎಂದು ನನಗೆ ಎಂದಿಗೂ ಅನಿಸಿರಲಿಲ್ಲ. ದೇವರೆ ಕುಸಿದಂತೆ ಭಾಸವಾಯಿತು. ಭೂಮಿ ಪಲ್ಲಟಗೊಂಡಿತೇನೋ ಅನಿಸಿತು. ಆಕಾಶವು ನನ್ನನ್ನು ಕೈಬಿಟ್ಟಿದೆ ಎಂದು ಭಾಸವಾಯಿತು. ನನ್ನ ತಲೆ ತಿರುಗುತ್ತಿದೆ ಎಂದು ನನಗೆ ಅನಿಸಿತು. ನಾನು ಈ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎನಿಸಿತು. ಇದನ್ನು ನಂಬಬಾರದು ಎಂದುಕೊಂಡೆ. ನಂತರ ಕಣ್ಣೀರು ಬಂತು’ ಎಂದಿದ್ದಾರೆ ಕಂಗನಾ. ‘ನನ್ನ ನೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.…

Read More

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಮದುವೆಯಾದ ಬಳಿಕವು ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಸಂಸಾರ ಹಾಗೂ ಸಿನಿಮಾ ರಂಗವನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ನಟಿ ಬಾಲಿವುಡ್ ಚಿತ್ರರಂಗದಲ್ಲೂ ಕಮಾಲ್ ಮಾಡಿದ್ದಾರೆ. ಇದೀಗ  ಜಸ್ಟ್ 50 ಸೆಕೆಂಡ್ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ದುಬಾರಿ ಸಂಭಾವನೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಸಿನಿಮಾ ರಂಗ ಹಾಗೂ ಜಾಹೀರಾತು ಕ್ಷೇತ್ರದಲ್ಲೂ ನಯನತಾರಾಗೆ ಭಾರೀ ಬೇಡಿಕೆ ಇದೆ. ಶಾರುಖ್ ಖಾನ್ ಜೊತೆ ನಟಿಸಿದ್ದು ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಬಳಿಕ ನಯನತಾರಾ ಬೇಡಿಕೆ ಮತ್ತಷ್ಟು ಜಾಸ್ತಿಯಾಗಿದ್ದು ಹಾಗಾಗಿ ಸಂಭಾವನೆ ಕೂಡ ಜಾಸ್ತಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಜಾಹೀರಾತಿನಲ್ಲಿ ನಯನತಾರಾ ನಟಿಸಿದ್ದಾರೆ. ಕೇವಲ 50 ಸೆಕೆಂಡ್ ಕಾಣಿಸಿಕೊಂಡಿದ್ದಕ್ಕೆ 5 ಕೋಟಿ ರೂ. ನಟಿ ಪಡೆದಿದ್ದಾರೆ ಎನ್ನಲಾಗಿದೆ. ಪ್ರತಿಷ್ಠಿತ ಸಂಸ್ಥೆ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದು, 2 ದಿನಗಳ ಕಾಲ ಶೂಟಿಂಗ್ ನಡೆದಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದಕ್ಕೆ 5 ಕೋಟಿ ಸಂಭಾವನೆ ಪಡೆಯುವ ಮೂಲಕ ಬೇಡಿಕೆ…

Read More