ಗದಗ: ಇಲ್ಲಿನ ಬಿಂಕದಕಟ್ಟಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಕಾಣಿಸಿಕೊಂಡ ನಂತರ ಸ್ಥಳೀಯ ಜನತೆ ಆತಂಕಕ್ಕೀಡಾದ ಘಟನೆ ಜರುಗಿದೆ. ಗದಗ ತಾಲೂಕಿನ ಬಿಂಕದಕಟ್ಟಿ, ನಾಗಾವಿ, ಅಸುಂಡಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮನೆಯೊಂದರ ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿದೆ. ಚಿರತೆ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Author: Author AIN
ರೇಣುಕಾ ಸ್ವಾಮಿ ಕೊಲೆಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಬೆನ್ನು ನೋವಿನ ಚಿಕಿತ್ಸೆಗೆ ಆರು ವಾರಗಳ ಕಾಲಾವಕಾಶವನ್ನು ಕೋರ್ಟ್ ನೀಡಿದೆ. ದರ್ಶನ್ಗೆ ಜಾಮೀನು ಸಿಕ್ಕಿ 15 ದಿನಗಳ ಮೇಲಾಗಿದ್ದು ಇದುವರೆಗೂ ಯಾವುದೇ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ದರ್ಶನ್ ಹೊರಗಿದ್ದಷ್ಟು ದಿನ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ದರ್ಶನ್ಗೆ ನೀಡಿದ್ದ ಜಾಮೀನನ್ನು ಪ್ರಶ್ನೆ ಮಾಡಲು ಪೊಲೀಸರು ಮುಂದಾಗಿದ್ದು, ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನ ಎ2 ಆರೋಪಿ ದರ್ಶನ್ ಬೆನ್ನು ನೋವಿನ ಕಾರಣ ಹೇಳಿ ಜಾಮೀನು ಪಡೆದಿದ್ದಾರೆ. ಇದನ್ನು ಸರ್ಕಾರಿ ಪರ ವಕೀಲರು ವಿರೋಧಿಸಿದ್ದರು. ಈಗ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಪೊಲೀಸರು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿರುವ ಕಡತವನ್ನು ಪೊಲೀಸರು ಗೃಹ ಇಲಾಖೆಗೆ ನೀಡಲಾಗಿದೆ. ಆದೇಶ ಪ್ರತಿಯನ್ನು ಗೃಹ ಇಲಾಖೆ ಪರಿಶೀಲಿಸಿದೆ. ಇದಕ್ಕೆ ಅನುಮತಿ ಕೂಡ ನೀಡಲಾಗಿದೆ. ಈಗ ಸರ್ಕಾರ ಒಪ್ಪಿಗೆ ಸೂಚಿಸಿದ್ದು,…
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲಮ್ಸ್ ಪರಭಾಷೆಯಲ್ಲೂ ಸದ್ದು ಮಾಡುತ್ತಿದೆ. ಇದೀಗ ಹೊಂಬಾಳೆ ಸಂಸ್ಥೆ ಹೊಸ ಸಿನಿಮಾ ಘೋಷಣೆ ಮಾಡಿದ್ದು ಇಂದು ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಈ ಪೋಸ್ಟರ್ ಚಿತ್ರದ ಕುರಿತು ಸಾಕಷ್ಟು ಕುತೂಹಲ ಮೂಡಿಸಿದೆ. ಸದ್ಯ ಬಿಡುಗಡೆ ಮಾಡಲಾಗಿರುವ ಪೋಸ್ಟರ್ನಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ, ಆದರೆ ಪೋಸ್ಟರ್ ನೋಡಿದವರಿಗೆ ಇದು ಪೌರಾಣಿಕ ಸಿನಿಮಾ ಇರಬಹುದು ಎಂಬ ಅನುಮಾನ ಮೂಡಿದೆ. ಜೊತೆಗೆ ಇದು ಅನಿಮೇಷನ್ ಸಿನಿಮಾ ಆಗಿರಬಹುದೆಂಬ ಅನುಮಾನವೂ ಇದೆ. ಹೊಂಬಾಳೆ ಸದ್ಯ ಹಂಚಿಕೊಂಡಿರುವ ಪೋಸ್ಟರ್ನಲ್ಲಿ ರಕ್ತ ಮೆತ್ತಿದ ಕೈ ಮಾತ್ರವೇ ಕಾಣುತ್ತಿದ್ದು, ಪೌರಾಣಿಕ ಕತೆಯಾದ ನರಸಿಂಹನ ಕೈ ರೀತಿ ಕಾಣುತ್ತಿದೆ. ಚೂಪಾದ ಉಗುರುಗಳು ಜೊತೆಗೆ ಕೈಗೆ ಧರಿಸಿರುವ ಕೆಲವು ಆಭರಣಗಳು ಗಮನ ಸೆಳೆಯುತ್ತಿವೆ. ಪೋಸ್ಟರ್ ಬಿಡುಗಡೆ ಮಾಡಿರುವ ಹೊಂಬಾಳೆ, ‘ನಂಬಿಕೆಗೆ ಸವಾಲು ಬಂದಾಗ ಅವನು ಬರುತ್ತಾನೆ’ ಎಂಬ ಅಡಿಬರಹವನ್ನು ನೀಡಿದೆ. ಸಿನಿಮಾದ ಇತರೆ ಮಾಹಿತಿಯನ್ನು ನಾಳೆ ಅಂದರೆ ನವೆಂಬರ್ 16 ಮಧ್ಯಾಹ್ನ…
ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈಗಾಗಲೇ ಕರೆ ಮಾಡಿದ ಕೆಲವರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ಖ್ಯಾತ ಭೋಜ್‌ಪುರಿ ನಟಿ, ಬಿಗ್ ಬಾಸ್ ಒಟಿಟಿ ಖ್ಯಾತಿಯ ಅಕ್ಷರಾ ಸಿಂಗ್‌ಗೆ ಕೊಲೆ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದವರು ಆಕೆಯಿಂದ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿ ಈ ಬಗ್ಗೆ ಡಣಾಪುರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಎರಡು ವಿಭಿನ್ನ ಸಂಖ್ಯೆಗಳಿಂದ ಅಕ್ಷರಾ ಸಿಂಗ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಹಣ ನೀಡುವಂತೆ ಜೀವಬೆದರಿಕೆ ಹಾಕಿರುವುದಾಗಿ ಲಿಖಿತ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ದಾನಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪ್ರಶಾಂತ್ ಭಾರದ್ವಾಜ್ ಅವರು ಪಿಟಿಐಗೆ ದೂರು ನೀಡಿದ್ದಾರೆ. ನಟಿಯ ತಂದೆ ಬಿಪಿನ್ ಸಿಂಗ್ ಈ ಬಗ್ಗೆ ಆಕೆಗೆ ಎರಡು ಅಪರಿಚಿತ ಸಂಖ್ಯೆಗಳಿಂದ…
ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಚಿತ್ರ ರಿಲೀಸ್ ಗೆ ಸಜ್ಜಾಗಿದೆ. ಇದು ಕರ್ನಾಟಕದ 300 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಭೈರತಿ ರಣಗಲ್ ಚಿತ್ರದ ರಿಲೀಸ್ ಆಗುತ್ತಿದ್ದು ಶಿವಣ್ಣನ ಅಭಿಮಾನಿಗಳು ಚಿತ್ರದ ರಿಲೀಸ್ ದೊಡ್ಡ ಹಬ್ಬದಂತೆ ಸೆಲಬ್ರೇಟ್ ಮಾಡುತ್ತಿದ್ದಾರೆ. ಒಂದು ದಿನದ ಮೊದಲೇ ಟಿಕೆಟ್ ಬುಕಿಂಗ್ ಕೂಡಾ ಶುರು . ಭೈರತಿ ರಣಗಲ್ ರಿಲೀಸ್ ಕ್ಷಣಗಣೆ ಶುರು ಆಗಿದೆ. ಒಂದು ದಿನ ಮೊದಲೇ ಅಭಿಮಾನಿಗಳು ಹಬ್ಬ ಮಾಡಲು ರೆಡಿ ಆಗಿದ್ದಾರೆ. ರಾಜಾದ್ಯಂತ ಭೈರತಿ ರಣಗಲ್ ಚಿತ್ರದ ಅಬ್ಬರ ಜೋರಾಗಿಯೇ ಕೇಳಿ ಬರ್ತಿದ್ದು ಎಲ್ಲೆಡೆ ಭೈರತಿ ರಣಗಲ್ ರಿಲೀಸ್ ಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಭೈರತಿ ರಣಗಲ್ ಚಿತ್ರದ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ರಾಜ್ಯದ 300 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಭೈರತಿ ರಣಗಲ್ ರಿಲೀಸ್ ಆಗುತ್ತಿದೆ. ಹೆಚ್ಚಿನ ಥಿಯೇಟರ್‌ನಲ್ಲಿ ಬರ್ತಿರೋ ಭೈರತಿ ರಣಗಲ್ ಚಿತ್ರದ ಸ್ವಾಗತಕ್ಕೆ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಸಿನಿಮಾ ಪ್ರೇಮಿಗಳು, ಸಿನಿಮಾ ಅಭಿಮಾನಿಗಳು ಮಾತ್ರವಲ್ಲದೇ, ಸಿನಿಮಾ…
‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್ ಸೀಸನ್ 9’ರ ಮೂಲಕ ಖ್ಯಾತಿ ಘಳಿಸಿದ ನಟಿ ನೇಹಾ ಗೌಡ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ನ.14 ಮಕ್ಕಳ ದಿನಾಚರಣೆ ಪ್ರಯುಕ್ತ ಮಗಳ ಸುಂದರ ಫೋಟೋವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮಕ್ಕಳ ದಿನಾಚರಣೆಯಂದು ನಮ್ಮ ಪುಟ್ಟ ಮಗುವಿನ ಫೋಟೋ ಹಂಚಿಕೊಳ್ಳುತ್ತಿರೋದಕ್ಕೆ ಖುಷಿಯಿದೆ. ನಮ್ಮ ಜೀವನದಲ್ಲಿ ಮಗಳ ಆಗಮನವಾಗಿರೋದು ಖುಷಿಯಿದೆ ಎಂದು ಮುದ್ದು ಮಗಳ ಫೋಟೋ ಶೇರ್ ಮಾಡಿ ನೇಹಾ ಸಂಭ್ರಮಿಸಿದ್ದಾರೆ. ಅಂದಹಾಗೆ, ಅ.29ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸದ್ಯಕ್ಕೆ ನೇಹಾ ಗೌಡ ನಟನೆಯಿಂದ ದೂರ ಉಳಿದಿದ್ದು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 29ರಂದು ನೇಹಾ ಗೌಡ, ಚೊಚ್ಚಲ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಕ್ಟೋಬರ್ 29, 2024 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು…
ಕಳೆದ ವಾರ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಅಮೆರಿಕದ ವಾಷಿಂಗ್ಟನ್‌ನಲ್ಲಿ 25ಕ್ಕೂ ಅಧಿಕ ಸಂಸದರು ಮತ್ತು ಭಾರತೀಯ ಮೂಲದ ಪ್ರಮುಖ ಅಮೆರಿಕನ್ನರು ಸಂಸತ್ ಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಟ್ರಂಪ್ ಅಧ್ಯಕ್ಷೀಯ ಚುನಾವಣೆ ನಂತರ ಅಮೆರಿಕ ಸರ್ಕಾರ ಆಚರಿಸಿದ ಮೊಟ್ಟ ಮೊದಲ ಪ್ರಮುಖ ಹಬ್ಬ ಇದಾಗಿದೆ. ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರ ಮತ್ತು ಹಿಂದೂ ಅಮೆರಿಕನ್ ಫೌಂಡೇಷನ್, ಸಿಖ್ಸ್ ಫಾರ್ ಅಮೆರಿಕ, ಜೈನ್ ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ, ಆರ್ಟ್ ಆಫ್ ಲಿವಿಂಗ್ ಸೇರಿದಂತೆ ಹಲವು ಭಾರತೀಯ ಅಮೆರಿಕನ್ ಸಂಘಟನೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ದೀಪಾವಳಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೆನೆಟರ್ ರಾಂಡ್ ಪಾಲ್, ‘ಅಮೆರಿಕವು ವಲಸಿಗರ ಭೂಮಿ. ಇದು ವಿಶ್ವದಾದ್ಯಂತ ಅತ್ಯುತ್ತಮ ಮತ್ತು ಪ್ರಕಾಶಮಾನವಾದವರನ್ನು ಆಕರ್ಷಿಸುತ್ತದೆ. ಅವರು ಅಮೆರಿಕವನ್ನು ಶ್ರೇಷ್ಠ ದೇಶವನ್ನಾಗಿ ಮಾಡಲು ಬೆರೆತಿದ್ದಾರೆ ಎಂದರು. ಮಿಸಿಸಿಪ್ಪಿ ಸೆನೆಟರ್ ಸಿಂಡಿ ಹೈದೆ-ಸ್ಮಿತ್ ಅವರು, ‘ಈ ದೇಶದ ಸಮೃದ್ಧಿಯನ್ನು ನಾವು ಬಯಸುತ್ತೇವೆ. ಹೊಸದನ್ನು ಬಯಸುವವರು ಹೊಸದನ್ನು ಮಾಡಬೇಕು.…
ಮೀಥೇನ್ ಮತ್ತು ಕಪ್ಪು ಇಂಗಾಲದಂತಹ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಲು ಭಾರತ ಕ್ರಮ ಕೈಗೊಳ್ಳಬೇಕು ಎಂದು ಸಿಒಪಿ 29 ಹವಾಮಾನ ಶೃಂಗಸಭೆಯಲ್ಲಿ ತಜ್ಞರು ಒತ್ತಾಯಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯವು ದಿನೇ ದಿನೇ ಹದಗೆಡುತ್ತಿದೆ. ಗಾಳಿಯ ಗುಣಮಟ್ಟ ಕುಸಿತ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿರುವ ಮೀಥೇನ್ ಮತ್ತು ಕಪ್ಪು ಇಂಗಾಲದಂತಹ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳನ್ನು (ಎಸ್‌ಎಲ್ಸಿಪಿ) ಕಡಿಮೆ ಮಾಡುವಲ್ಲಿ ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳು (ಎಸ್‌ಎಲ್ಸಿಪಿಗಳು) ಹಸಿರುಮನೆ ಅನಿಲಗಳು ಮತ್ತು ವಾಯು ಮಾಲಿನ್ಯಕಾರಕಗಳ ಗುಂಪಾಗಿದ್ದು, ಇದು ಹವಾಮಾನದ ಮೇಲೆ ದೀರ್ಘಕಾಲೀನ ತಾಪಮಾನದ ಪರಿಣಾಮವನ್ನು ಬೀರುತ್ತದೆ ಮತ್ತು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಎಸ್‌ಎಲ್ಸಿಪಿಗಳಲ್ಲಿ ಕಪ್ಪು ಇಂಗಾಲ, ಮೀಥೇನ್, ನೆಲಮಟ್ಟದ ಓಝೋನ್ ಮತ್ತು ಹೈಡ್ರೋಫ್ರೋರೋಕಾರ್ಬನ್ಗಳು (ಎಚ್‌ಎಫ್ಸಿಗಳು) ಸೇರಿವೆ. ನವದೆಹಲಿಯ ಗಾಳಿಯ ಗುಣಮಟ್ಟವು ಈ ಋತುವಿನಲ್ಲಿ ಮೊದಲ ಬಾರಿಗೆ ತೀವ್ರ ಮಟ್ಟವನ್ನು ತಲುಪಿದೆ, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬುಧವಾರ 418…
ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸಿದ್ದ ಬ್ರಿಟನ್ ಮೂಲದ ಖ್ಯಾತ ಬಾಣಸಿಗ ಅಲೆಕ್ಸಿ ಜಿಮಿನ್ ಸರ್ಬಿಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮೃತ ಜಿಮಿನ್ ಅವರಿಗೆ 52 ವರ್ಷ ವಯಸ್ಸಾಗಿತ್ತು. 2014ರಲ್ಲಿ ರಷ್ಯಾ ತೊರೆದಿದ್ದ ಜಿಮಿನ್ ಲಂಡನ್‌ನಲ್ಲಿ ಸ್ವಂತ ಹೊಟೇಲ್ ನಡೆಸುತ್ತಿದ್ದರು. ಹಾಗೂ ರಷ್ಯಾದ ಎನ್‌ಟಿವಿಯಲ್ಲಿ ಅಡುಗೆ ಕಾರ್ಯಕ್ರಮದ ನಿರೂಪರಾಗಿ ಕೆಲಸ ಮಾಡುತ್ತಿದ್ದರು. ರಷ್ಯಾ-ಉಕ್ರೇನ್ ಯುದ್ಧದ ವೇಳೆ ಪುಟಿನ್ ಅವರನ್ನು ಟೀಕೆ ಮಾಡುತ್ತಿದ್ದ ಜಿಮಿನ್ ಸಾಮಾಜಿಕ ಮಾಧ್ಯಗಳಲ್ಲಿ ಸರಣಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದರು. ಈ ಟೀಕೆ ಬಳಿಕ ಎನ್‌ಟಿವಿಯು ಜಿಮಿನ್ ಅವರ ಕಾರ್ಯಕ್ರಮವನ್ನು ರದ್ದುಪಡಿಸಿತ್ತು. ಜಿಮಿನ್ ಅವರು ತಮ್ಮ ನೂತನ ‘ಅಂಗ್ಲೋಮೇನಿಯಾ’ ಪುಸ್ತಕವನ್ನು ಪ್ರಚಾರ ಮಾಡಲು ಇತ್ತೀಚೆಗೆ ಸರ್ಬಿಯಾ ರಾಜಧಾನಿ ಬೆಲ್ಗ್ರೇಡ್‌ಗೆ ಪ್ರಯಾಣಿಸಿದ್ದರು. ಇಲ್ಲಿನ ಹೋಟೆಲ್ ಕೊಠಡಿಯಲ್ಲಿ ಜಿಮಿನ್ ಮೃತಪಟ್ಟಿದ್ದಾರೆ. ಜಿಮಿನ್ ಸಾವಿಗೆ ನಿಖರ ಕಾರಣಗಳು ತಿಳಿದಿಲ್ಲ, ಯಾವುದೇ ಅನುಮಾನಾಸ್ಪದ ಸಂಗತಿಗಳು ಅಲ್ಲಿ ನಡೆದಿಲ್ಲ, ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ತಿಳಿಯಲಿದೆ ಎಂದು ಸರ್ಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದ ಸಹಾಯಕ್ಕಾಗಿ ಹಾಗೂ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಡೊಮಿನಿಕಾ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ಅನ್ನು ನೀಡಲು ಮುಂದಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತ ನೀಡಿದ ಬೆಂಬಲ, ನೆರವಿಗೆ ಕೃತಜ್ಞತೆಯ ಸಂಕೇತವಾಗಿ ಮತ್ತು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಯ ಸಂಕೇತವಾಗಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಡೊಮಿನಿಕಾದ ಪ್ರಧಾನ ಮಂತ್ರಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 2021ರ ಫೆಬ್ರವರಿಯಲ್ಲಿ COVID-19 ಉತ್ತುಂಗದಲ್ಲಿದ್ದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ ಲಸಿಕೆಯನ್ನು ಕಳುಹಿಸಿತ್ತು. ಈ ಲಸಿಕೆ ಪೂರೈಕೆಯನ್ನು ಭಾರತದ ‘ಲಸಿಕೆ ಮೈತ್ರಿ’ ನೀತಿಯ ಅಡಿಯಲ್ಲಿ ಮಾಡಿತ್ತು. ಈ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಗುರಿ…