Author: Author AIN

ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಸಿದ್ಲಿಂಗು ಸಿನಿಮಾ ಸೂಪರ್ ಹಿಟ್ ಆಗಿದ್ದು ಇದೀಗ ಸಿದ್ಲಿಂಗು ಪಾರ್ಟ್ 2 ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಲೂಸ್ ಮಾದ ಯೋಗಿ ಹಾಗೂ ರಮ್ಯಾ ಅವರನ್ನು ಆಯ್ಕೆ ಮಾಡಿಕೊಂಡು ಸಿದ್ಲಿಂಗು ಕಥೆ ಹೇಳಿದ್ದ ನಿರ್ದೇಶಕರು ಈ ಬಾರಿ ರಮ್ಯಾ ಬದಲು ಸೋನು ಗೌಡ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಿಂಪಲ್ ಆಗಿ ಸಿನಿಮಾದ ಮುಹೂರ್ತ ಮಾಡಲಾಗಿದ್ದು, ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಾಯಕ ಯೋಗಿ, ನಾಯಕಿ ಸೋನು ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಹಾಗಾಗಿ ಸಿದ್ಲಿಂಗು 2 ಸಿನಿಮಾದ ಕಥೆಯು ಹೇಗೆ ಶುರುವಾಗಬಹುದು ಎನ್ನುವ ಅಭಿಮಾನಿಗಳಲ್ಲಿ ಶುರುವಾಗಿದೆ. 2012ರಲ್ಲಿ ತೆರೆಗೆ ಬಂದಿದ್ದ ಸಿದ್ಲಿಂಗು ಸಿನಿಮಾ ಸೂಪರ್ ಹಿಟ್ ಆಗಿತ್ತು. ಮೊದಲ ಬಾರಿಗೆ ರಮ್ಯಾ ಜೊತೆ ಯೋಗಿ ನಟಿಸಿದ್ದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಇದೀಗ ಹನ್ನೆರಡು ವರ್ಷಗಳ ಬಳಿಕ ವಿಜಯ್ ಪ್ರಸಾದ್ ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆರಂಭದಲ್ಲಿಯೇ ಸಿದ್ಲಿಂಗು 2…

Read More

ಭಾರತವು ತಮ್ಮ ದೇಶದ ನಿಕಟ ಮಿತ್ರನಾಗಿ ಮುಂದುವರಿಯುತ್ತದೆ ಎಂದು ಹೇಳಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ದ್ವೀಪಸಮೂಹ ರಾಷ್ಟ್ರಕ್ಕೆ ಸಾಲ ಪರಿಹಾರವನ್ನ ನೀಡುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ, ಮಾಲ್ಡೀವ್ಸ್ ಗೆ ನೆರವು ನೀಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನ ಜಾರಿಗೆ ತಂದಿದೆ ಎಂದು ಮುಯಿಝು ಹೇಳಿದರು. ಭಾರತವು ಮಾಲ್ಡೀವ್ಸ್ನ ನಿಕಟ ಮಿತ್ರನಾಗಿ ಮುಂದುವರಿಯುತ್ತದೆ ಮತ್ತು ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಮಾಲ್ಡೀವ್ಸ್ ಸುದ್ದಿ ಪೋರ್ಟಲ್ Edition.mv ತನ್ನ ಧಿವೇಹಿ ಭಾಷೆಯ ಸಹೋದರಿ-ಪ್ರಕಾಶನ ಮಿಹಾರುಗೆ ಮುಯಿಝು ಅವರ ಸಂದರ್ಶನದ ಆಯ್ದ ಭಾಗಗಳನ್ನು ಒಳಗೊಂಡ ವರದಿಯಲ್ಲಿ ತಿಳಿಸಿದೆ. ಯೋಜಿಸಿದಂತೆ ಈ ತಿಂಗಳು ಭಾರತೀಯ ಮಿಲಿಟರಿ ಸಿಬ್ಬಂದಿಯ ಮೊದಲ ಬ್ಯಾಚ್ ದ್ವೀಪ ರಾಷ್ಟ್ರವನ್ನ ತೊರೆದ ನಂತರ ಭಾರತವನ್ನ ಶ್ಲಾಘಿಸುವ ಮುಯಿಝು ಅವರ ಹೇಳಿಕೆಗಳು ಬಂದಿವೆ. ಮೇ 10 ರೊಳಗೆ, ಮೂರು ಭಾರತೀಯ ವಾಯುಯಾನ ಪ್ಲಾಟ್ಫಾರ್ಮ್ಗಳನ್ನು ನಿರ್ವಹಿಸುವ…

Read More

ರಷ್ಯಾದ ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದ್ದು, ನಾಲ್ವರು ಬಂದೂಕುಧಾರಿಗಳು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ. ಘಟನೆ ನಡೆದು  ಸಾಕಷ್ಟು ಸಮಯ ಕಳೆದಿದ್ದರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದಾಳಿಯ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.ಕಳೆದ 20 ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ದಾಯೆಶ್ ಹೊತ್ತುಕೊಂಡಿದೆ. ಆದರೆ ಉಕ್ರೇನ್ ಅಧ್ಯಕ್ಷೀಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಅವರ ಹೇಳಿಕೆಯ ಹೊರತಾಗಿಯೂ, ರಷ್ಯಾ ಉಕ್ರೇನಿಯನ್ ಸಂಪರ್ಕವನ್ನು ಅನುಸರಿಸುತ್ತಿದೆ ಎಂಬ ಸೂಚನೆಗಳಿವೆ. ಉಕ್ರೇನ್ ಗಡಿಗೆ ಹೋಗುವಾಗ “ಎಲ್ಲಾ ನಾಲ್ವರು ಭಯೋತ್ಪಾದಕರನ್ನು” ಬಂಧಿಸಲಾಗಿದೆ ಮತ್ತು ಅವರು ಉಕ್ರೇನ್ನಲ್ಲಿ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಎಫ್‌ಎಸ್ಬಿ ಭದ್ರತಾ ಸೇವೆ ತಿಳಿಸಿದೆ. ಪ್ರಮುಖ ಅಪರಾಧಗಳ ತನಿಖೆ ನಡೆಸುತ್ತಿರುವ ರಷ್ಯಾದ ತನಿಖಾ ಸಮಿತಿ, ರಕ್ಷಣಾ ಕಾರ್ಯಕರ್ತರು ಕಟ್ಟಡದಿಂದ ಶವಗಳನ್ನು ಹೊರತೆಗೆಯುತ್ತಿದ್ದು ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸಂಗೀತ ಕಚೇರಿ ಆಯೋಜನೆ ಮಾಡಲು ಸಿದ್ಧತೆ ನಡೆಸಿದ್ದ ಕ್ರೋಕಸ್…

Read More

ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸ್ಟಾರ್ ನಟ, ನಟಿಯರನ್ನು ತಮ್ಮ ಪರ ಪ್ರಚಾರ ನಡೆಸುವಂತೆ ಮನವಿ ಮಾಡುತ್ತಿದ್ದಾರೆ. ಅದರಂತೆ ಈ ಭಾರಿ ಸುದೀಪ್ ಚುನಾವಣಾ ಪ್ರಚಾರದಲ್ಲಿ ಇರಲಿದ್ದಾರಾ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇದಕ್ಕೆ ಸುದೀಪ್ ಉತ್ತರಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸುದೀಪ್ ಅಬ್ಬರದ ಪ್ರಚಾರ ಮಾಡಿದ್ದರು. ಸುದೀಪ್, ಬಿಜೆಪಿ ಪರವಾಗಿ ಅಖಾಡಕ್ಕೆ ಇಳಿದಿದ್ದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಬಿಜೆಪಿಗೆ ಕಿಚ್ಚ ಸುದೀಪ್ ಪ್ರಚಾರ ಹೆಚ್ಚಿನ ಸಹಾಯ ಮಾಡಲಿಲ್ಲ. ಇದೀಗ ಲೋಕಸಭೆ ಚುನಾವಣೆ ಬಂದಿದ್ದು, ಈ ಬಾರಿ ಸುದೀಪ್ ಯಾವ ಅಭ್ಯರ್ಥಿ ಪರ ಅಥವಾ ಪಕ್ಷದ ಪರವಾಗಿ ಚುನಾವಣೆ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲ ಇದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ‘ಕಳೆದ ಬಾರಿ ಯಾರಿಗಾಗಿ, ಯಾವ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿದ್ದೆ ಎಂಬುದನ್ನು ನಾನು ಸ್ಪಷ್ಟಪಡಿಸಿದ್ದೆ. ಈ ಬಾರಿ ಇನ್ನೂ ಸಹ ಯಾರೂ ನನ್ನನ್ನು ಪ್ರಚಾರಕ್ಕಾಗಿ ಕೇಳಿಲ್ಲ.…

Read More

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಟಿ ಸಾನ್ಯಾ ಐಯ್ಯರ್ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾ ಹಾಗೂ ಫೋಟೋ ಶೂಟ್ ನಲ್ಲಿ ಬ್ಯುಸಿಯಾಗಿರುವ ಸಾನ್ಯಾ ಇದೀಗ ತಮಿಳು ನಟ ಅಜಿತ್ ಅವರನ್ನು ಭೇಟಿ ಮಾಡಿದ್ದಾರೆ. ನಟ ಅಜಿತ್ ಜೊತೆ ತೆಗೆದ ಫೋಟೋವನ್ನು ಸಾನ್ಯಾ ಅಯ್ಯರ್ ಇನ್ಸ್ಟಾದಲ್ಲಿ ಶೇರ್​ ಮಾಡಿದ್ದಾರೆ. ಅಜಿತ್ ಜೊತೆಗಿನ ಫೋಟೋ ಹಂಚಿಕೊಂಡ ಸಾನ್ಯಾ ನಟನನ್ನು ಹೊಗಳಿದ್ದಾರೆ. ಅಜಿತ್ ಜೊತೆ ಸಾನ್ಯಾ ಅಯ್ಯರ್ ನೋಡಿದ ಅಭಿಮಾನಿಗಳು ಪುಟ್ಟಗೌರಿ ಕಾಲಿವುಡ್​ ಗೆ ಹಾರಿಬಿಟ್ರಾ ಎಂದು ಕಮೆಂಟ್ ಮಾಡಿದ್ದಾರೆ. ಅಜಿತ್ ಜೊತೆಗಿನ ಫೋಟೋ ಶೇರ್ ಮಾಡಿದ ನಟಿ ನಾನು ಕೂಡ ನಟ ಅಜಿತ್ ಸರ್ ಅಭಿಮಾನಿ ಎಂದು ನಟನನ್ನು ಹೊಗಳಿದ್ದಾರೆ. ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡ ಜನರ ಮನಸ್ಸು ಗೆದ್ದಿದ್ದರು ನಟಿ ಸಾನ್ಯಾ ಐಯ್ಯರ್, ಇದೀಗ ನಟಿಯಾಗಿ ಬಿಗ್ ಸ್ಕ್ರೀನ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸ್ಟಾರ್ ಡೈರೆಕ್ಟರ್​ ಇಂದ್ರಜಿತ್ ಲಂಕೇಶ್​ ಸಿನಿಮಾದಲ್ಲಿ ಸಾನ್ಯಾ ಅಯ್ಯರ್​ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿ…

Read More

ಕಾನೂಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ರಾಣಿ ಸೋನು ಗೌಡ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ತಂದೆ ತಾಯಿಗೂ ಸಂಕಷ್ಟ ಉಂಟಾಗುವ ಸಾಧ್ಯತೆ ಇದ್ದು, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ತಂದೆ ತಾಯಿಗೆ ನೋಟಿಸ್ ನೀಡಿದೆ. ಪೋಷಕರು ತಮ್ಮ ಮಕ್ಕಳನ್ನು ಬೇರೆಯವರಿಗೆ ವಹಿಸಬೇಕಾದರೆ ಕೆಲವು ಕಾನೂನಿನ ನಿಯಮಗಳು ಪಾಲಿಸಲೇ ಬೇಕಾಗಿದೆ. ಆದರೆ ಸೋನು ಗೌಡ ಪ್ರಕರಣದಲ್ಲಿ ಆ ರೀತಿ ನಿಯಮಗಳು ಪಾಲನೆ ಆಗಿಲ್ಲ. ಹೀಗಾಗಿ, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಅಧಿಕಾರಿಗಳು ವಿಚಾರಣೆ ವೇಳೆ ಮಗುವನ್ನು ಕೊಟ್ಟಿದ್ದಕ್ಕೆ ಅಧಿಕಾರಿಗಳು ಕಾರಣ ಕೇಳಲಿದ್ದಾರೆ. ಹಣ ಪಡೆದು ಮಗುವನ್ನು ನೀಡಿದ್ದೇವೆ ಎಂದರೆ ಪೋಷಕರಿಗೆ ಕಂಟಕ ಎದುರಾಗಲಿದೆ. ಮಗುವನ್ನು ಹಣಕ್ಕೆ ಮಾರಾಟ ಮಾಡಿದ್ರೆ ಪೋಷಕರ ವಿರುದ್ಧವೂ ಪ್ರಕರಣ ದಾಖಲಾಗುತ್ತದೆ. ಬಡತನದ ಕಾರಣದಿಂದ ಮಗುವನ್ನ ನೋಡಿಕೊಳ್ಳಲು ಕೊಟ್ಟಿದ್ದು ಎಂದರೆ ಸಮಸ್ಯೆ ಉಂಟಾಗೋ ಸಾಧ್ಯತೆ ಕಡಿಮೆ ಇದೆ. ಸದ್ಯ ಮಗುವಿನ ಪಾಲಕರ ಹೇಳಿಕೆ ಮೇಲೆ ಮುಂದಿನ ಕ್ರಮ…

Read More

ಬಿಗ್ ಬಾಸ್ ವಿನ್ನರ್ ನಟ ಕಾರ್ತಿಕ್ ಮಹೇಶ್ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಟ್ರೋಪಿ ಗೆದ್ದ ಬಳಿಕ ಕಾರ್ತಿಕ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದು ಹಲವು ಸಿನಿಮಾ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಯಾವುದೂ ಇನ್ನೂ ಫೈನಲ್ ಆಗಿಲ್ಲ. ಈ ಮಧ್ಯೆ ಕಾರ್ತಿಕ್ ಅಚ್ಚರಿಯ ವಿಚಾರ ಹೊರ ಹಾಕಿದ್ದಾರೆ. ‘ಬಿಗ್ ಬಾಸ್’ ವಿನ್ ಆದವರಿಗೆ ಈ ಬಾರಿ 50 ಲಕ್ಷ ರೂಪಾಯಿ ನಗದು, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬ್ರೇಜಾ ಕಾರು  ಸಿಕ್ಕಿತ್ತು. ಆದರೆ, ಇನ್ನೂ ಕಾರು ಕಾರ್ತಿಕ್ ಕೈ ಸೇರಿಲ್ಲವಂತೆ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕ್ಲಿಪ್ ವೈರಲ್ ಆಗಿದೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಕಾರ್ತಿಕ್ ಮಹೇಶ್ ಸಕ್ರಿಯರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾದಲ್ಲಿ ಕಾರ್ತಿಕ್ ನಟಿಸಿದ್ದರು. ಈ ಚಿತ್ರ ಗಮನ ಸೆಳೆಯಿತು. ಈ ಚಿತ್ರದಿಂದ ಕಾರ್ತಿಕ್ ಖ್ಯಾತಿ ಹೆಚ್ಚಿತು. ಬಿಗ್ ಬಾಸ್​ಗೆ ಬಂದ ಬಳಿಕ ಅವರ ಅಭಿಮಾನಿ ಬಳಗ ಮತ್ತಷ್ಟು…

Read More

ರಷ್ಯಾದ ರಾಜಧಾನಿ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಐವರು ಬಂದೂಕುಧಾರಿಗಳು ಜನರ ಗುಂಪಿನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿ ಬೆನ್ನಲ್ಲೇ ಮೈಕ್ರೋ ಮ್ಯಾನೇಜಿಂಗ್ ಕುರಿತು ಮೋದಿ ಸರ್ಕಾರಕ್ಕೆ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ‘ಮಾಸ್ಕೋದಲ್ಲಿ ಐಸಿಸ್ ದಾಳಿಯ ನಡುವೆ ‘ಮೈಕ್ರೋ ಮ್ಯಾನೇಜಿಂಗ್ ಬ್ಯಾಕ್‌ಫೈರ್‌” (ಹಿನ್ನಡೆ)ಗಳನ್ನು ಅನುಭವಿಸುತ್ತಿದೆ ಎಂದು ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ‘ಮಾಸ್ಕೋ ಬಳಿ ಉಗ್ರರ ದಾಳಿಗೆ 40ಕ್ಕೂ ಹೆಚ್ಚು ಮಂದಿ ಬಲಿಯಾಗಿ, 140 ಮಂದಿ ಗಾಯಗೊಂಡಿದ್ದಾರೆ. ರಷ್ಯನ್ನರನ್ನು ಕೊಂದಿರುವುದಾಗಿ ಎಂದು ಐಸಿಸ್ ಹೇಳಿಕೊಂಡಿದೆ. ದಾಳಿ ಮಾಡಿದ ಉಗ್ರರಲ್ಲಿ ಒಬ್ಬ ಉಗ್ರನೂ ಕೂಡ ಸಿಕ್ಕಿಬಿದ್ದಿಲ್ಲ. ರಷ್ಯಾವನ್ನು ಪುಟಿನ್ ಮೈಕ್ರೋ ಮ್ಯಾನೇಜ್ ಮಾಡಬೇಕಾಗಿತ್ತು.. ಮೋದಿ ! ಎದ್ದೇಳಿ!! ಮೈಕ್ರೋ ಮ್ಯಾನೇಜಿಂಗ್ ಬ್ಯಾಕ್‌ಫೈರ್ಸ್ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಸಂಗೀತ ಕಚೇರಿ ಆಯೋಜನೆ ಮಾಡಲು ಸಿದ್ಧತೆ…

Read More

ನಟ, ನಿರ್ದೇಶಕ ಪ್ರಭುದೇವ ಹಾಗೂ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ 25 ವರ್ಷಗಳ ಬಳಿಕ ಒಂದಾಗಿದ್ದಾರೆ. ಮನೋಜ್ ಎಂ.ಎಸ್ ನಿರ್ದೇಶನದ ಎಆರ್.ಆರ್.ಪಿಡಿ 6 ಎನ್ನುವ ಹೆಸರಿನ ಚಿತ್ರದಲ್ಲಿ ಈ ಜೋಡಿ ಒಂದಾಗಿದ್ದು, ಚಿತ್ರದ ಮೊದಲ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಕುರಿತಂತೆ ನಟ ಪ್ರಭುದೇವ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯೋಗಿ ಬಾಬು, ಅಜು ವರ್ಗೀಸ್, ಸಿಂಗಂ ಪುಲಿ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಅನೂಪ್ ಶೈಲಜಾ ಸಿನಿಮಾಟೋಗ್ರಫಿಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ರೇಮಂಡ್ ಡೆರಿಕ್ ಕ್ರಿಸ್ಟಾ ಅವರ ಸಂಕಲನ ಚಿತ್ರಕ್ಕಿದೆ. ಈ ಹಿಂದೆ ಜಂಟಲ್ ಮನ್ ಸಿನಿಮಾದಲ್ಲಿ ಈ ಜೋಡಿ ಒಂದಾಗಿತ್ತು. ಈ ಸಿನಿಮಾದ ಚಿಕ್ಕು ಬುಕ್ಕು ರೈಲೇ ಹಾಡು ಫೇಮಸ್ ಆಗಿತ್ತು. ಆನಂತರ ಈ ಜೋಡಿ ಮತ್ತೆ ಒಂದಾಗಿರಲಿಲ್ಲ. ಇದೀಗ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Read More

ಪ್ರಕೃತಿಯಲ್ಲಿ ಕೆಲವೊಂದು ನಿಜಕ್ಕೂ ಅಚ್ಚರಿ ಉಂಟುಮಾಡುತ್ತವೆ. ಕೆಲವೊಮ್ಮೆ ವಿಚಿತ್ರವೂ ಎನಿಸುತ್ತದೆ. ಸಾಕಷ್ಟು ಬಾರಿ ಎಂತಹ ಘಟನೆಗಳು ನಡೆದಾಗ ಅದನ್ನು ನಂಬಬೇಕೋ ಬೇಡವೋ ಎಂಬ ಗೊಂದಲ ಶುರುವಾಗುತ್ತದೆ. ಇದೀಗ ಅಂತದ ಅಚ್ಚರಿಯ ಘಟನೆಯೊಂದು ಬ್ರೆಜಿಲ್ ನಲ್ಲಿ ಬೆಳಕಿಗೆ ಬಂದಿದೆ. 81 ವರ್ಷದ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ ಮಗುವೊಂದು ಪತ್ತೆಯಾಗಿದೆ. ವೃದ್ಧೆಯು ಕಳೆದ 56 ವರ್ಷಗಳಿಂದ ಮಗುವನ್ನು ತನ್ನ ಹೊಟ್ಟೆಯಲ್ಲಿ ಹೊತ್ತುಕೊಂಡಿದ್ದಳು. ಆದರೆ ಶಸ್ತ್ರಚಿಕಿತ್ಸೆಯ ವೇಳೆ ವೃದ್ಧೆ ಕೊನೆಯುಸಿರೆಳೆದಿದ್ದಾಳೆ. ಮೂತ್ರನಾಳದ ಸೋಂಕಿನ ಚಿಕಿತ್ಸೆಗಾಗಿ ಡೇನಿಯಲಾ ಎಂಬ ವೃದ್ಧೆ ತನ್ನ ಮನೆಯ ಸಮೀಪವಿರುವ ಆಸ್ಪತ್ರೆಗೆ ತೆರಳಿದ್ದಾಳೆ. ಚಿಕಿತ್ಸೆಯ ಬಳಿಕವು ಆಕೆಗೆ ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ವೈದ್ಯರು ಆಕೆಯನ್ನು ಬೇರೆ ಬೇರೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಕಲ್ಲಿನಂತಿರುವ ಮಗುವಿರುವುದು ವೈದ್ಯರ ಗಮನಕ್ಕೆ ಬಂದಿದೆ. ಏಳು ಮಕ್ಕಳ ತಾಯಿ 1968 ರಲ್ಲಿ ಕೊನೆಯ ಬಾರಿಗೆ ಗರ್ಭಿಣಿಯಾಗಿದ್ದರು. ಕಳೆದ 56 ವರ್ಷಗಳಿಂದ ಆಕೆಯ ದೇಹದಲ್ಲಿತ್ತು ಎಂದು ತಿಳಿದು ಬಂದಿದೆ. ಆ ಬಳಿಕ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ…

Read More