Author: Author AIN

ಬಾಲಿವುಡ್ ನ ವಿವಾದಿತ ನಟಿ ರಾಖಿ ಸಾವಂತ್ ತಮ್ಮ ಮಾಜಿ ಪತಿ ಆದಿಲ್ ಎರಡನೇ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿದ್ದಾರೆ.  ಮೈಸೂರು ಹುಡುಗ ಆದಿಲ್ ನನ್ನು ತಾವು ಮದುವೆ ಆಗಿರುವುದಾಗಿ ಘೋಷಿಸಿಕೊಂಡಿದ್ದರು ಬಾಲಿವುಡ್ ನಟಿ ರಾಖಿ ಸಾವಂತ್. ಅದಕ್ಕೆ ಸಂಬಂಧಿಸಿದ ಫೋಟೋ ಕೂಡ ರಿಲೀಸ್ ಮಾಡಿದ್ದರು. ನಂತರ ಇಬ್ಬರ ಮಧ್ಯ ಗಲಾಟೆ ಆಯಿತು. ಆದಿಲ್ ನನ್ನು ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಆಚೆ ಬಂದ ಮೇಲೆ ಆದಿಲ್ ಮತ್ತೊಂದು ಮದುವೆ ಆಗಿದ್ದಾರೆ. ಆ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿ ರಾಖಿ ಸಾವಂತ್ ಗೇಲಿ ಮಾಡಿದ್ದಾರೆ. ಆದಿಲ್ ಖಾನ್ ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ ಜೊತೆ ಮದುವೆ ಆಗಿದ್ದಾರೆ. ಮೊನ್ನೆಯಷ್ಟೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮದುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ತಮ್ಮ ಮದುವೆ ವಿಚಾರವನ್ನೂ ಖಚಿತ ಪಡಿಸಿದ್ದರು. ಆದಿಲ್…

Read More

ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ತಡೆಯುವುದಾಗಿ ಡಿಕೆಎಂಕೆ ಪಕ್ಷ ಲೋಕಸಭಾ ಪ್ರಾಣಾಳಿಕೆಯಲ್ಲಿ ಹೊರಡಿಸಿರುವುದನ್ನು ವಿರೋಧಿಸಿ ಬೆಂಗಳೂರು ನಗರ ಜಿಲ್ಲೆಯ ಆನೆಕಲ್​ ತಾಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ವಾಟಳ್ ನಾಗರಾಜ್ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್ ಗೆ ಎಚ್ಚರಿಕೆ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಕೆದಾಟು ಯೋಜನೆ ವಿರೋಧಿಸಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಯೋಜನೆಗೆ ಅಡೆತಡೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ವಿರೋಧಿಸುತ್ತೇನೆ ಎಂದಿದ್ದಾರೆ. ಮೇಕೆದಾಟು ಯೋಜನೆಯಲ್ಲಿ ಕನ್ನಡದ ನಟರೂ ಬೀದಿಗೆ ಇಳಿದು ಹೋರಾಟ ಮಾಡಬೇಕು ಜೊತೆಗೆ ಸ್ಟಾಲಿನ್ ಅವರನ್ನು ರಜನಿಕಾಂತ್, ಕಮಲ್ ಹಾಸನ್ ಭೇಟಿ ಮಾಡಿ ಯೋಜನೆಗೆ ತಡೆ ನೀಡಬಾರದು ಎಂದು ಮನವಿ ಮಾಡಬೇಕು. ಹಾಗೆ ಮಾಡದೇ ಹೋದರೆ ಇಬ್ಬರೂ ಕರ್ನಾಟಕಕ್ಕೆ ಬರಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Read More

ಬಾಲಿವುಡ್ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಕುಟುಂಬ ಸದಸ್ಯರ ಜೊತೆ ಅಯೋಧ್ಯೆಗೆ ಭೇಟಿ ನೀಡಿದ್ದರು. ಇದೀಗ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕೂಡ ಕುಟುಂಬ ಸಮೇತ ಅಯೋಧ್ಯೆಗೆ ಆಗಮಿಸಿದ್ದು, ರಾಮಲಲ್ಲಾನ ದರ್ಶನವನ್ನು ಪಡೆದರು. ರಾಮಮಂದಿರಕ್ಕೆ ಆಗಮಿಸಿದ ಊರ್ವಶಿ ರೌಟೇಲಾ ಸುಮಾರು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿರು. ದೇವರ ಆಶೀರ್ವಾದ ಪಡೆದ ನಟಿ ಊರ್ವಶಿ ಹಾಗೂ ಅವರ ಕುಟುಂಬದವರಿಗೆ ಅರ್ಚಕ ಪ್ರದೀಪ್​ ದಾಸ್​ ಪ್ರಸಾದ ನೀಡಿದರು. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಊರ್ವಶಿ ರೌಟೇಲಾ ನೇರವಾಗಿ ರಾಮಮಂದಿರಕ್ಕೆ ತಲುಪಿ ರಾಮಲಲ್ಲಾನ ದರ್ಶನ ಪಡೆದರು. ಅಯೋಧ್ಯೆ ರಾಮಮಂದಿರಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತದಿಂದ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಭಾಗವಹಿಸಿದ್ದರು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರು ನಂತರದ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

Read More

ಪವನ್ ಕಲ್ಯಾಣ್ ನಟನೆಯ ‘ಓಜಿ’ ಚಿತ್ರದ ಮೂಲಕ ಬಾಲಿವುಡ್ ನಟ ಇಮ್ರಾನ್ ಹಶ್ಮಿ ದಕ್ಷಿಣ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಇಮ್ರಾನ್ ಹಶ್ಮಿ ಬರ್ತಡೇ ಪ್ರಯುಕ್ತ ಓಜಿ ಚಿತ್ರದ ಇಮ್ರಾನ್ ಹಶ್ಮಿ ಲುಕ್ ರಿಲೀಸ್ ಮಾಡಲಾಗಿದೆ. ಹಿಂದಿಯ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಹಶ್ಮಿ ತೆಲುಗಿನ ಮೊದಲ ಸಿನಿಮಾದಲ್ಲೇ ಪವನ್ ಕಲ್ಯಾಣ್ ಮುಂದೆ ಅಬ್ಬರಿಸಲಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡು ಚಿತ್ರ ತಯಾರಕರು, “ಹ್ಯಾಪಿ ಬರ್ತ್‌ಡೇ ಡೆಡ್ಲಿಯೆಸ್ಟ್ OMI BHAU ಇಮ್ರಾನ್​ ಹಶ್ಮಿ” ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ, ಇಮ್ರಾನ್​ ಹಶ್ಮಿ ಸಿಗರೇಟ್ ಸೇದುತ್ತಿದ್ದು,  ಹಣೆಯ ಮೇಲೆ ಗಾಯದ ಗುರುತಿದೆ. ಸಾಕಷ್ಟು ಒರಟಾಗಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್​ ಪೋಸ್ಟರ್ ಹಂಚಿಕೊಂಡ ತಯಾರಕರು ‘OMI BHAU’ ಎನ್ನುವ ಮೂಲಕ ಇಮ್ರಾನ್​ ಹಶ್ಮಿ ನಿರ್ವಹಿಸುತ್ತಿರುವ ಪಾತ್ರದ ಹೆಸರನ್ನು ರಿವೀಲ್ ಮಾಡಿದ್ದಾರೆ. ಇಮ್ರಾನ್​ ಹಶ್ಮಿ ದಕ್ಷಿಣ ಚಿತ್ರರಂಗದ ತಮ್ಮ ಚೊಚ್ಚಲ ಸಿನಿಮಾದ ಪಾತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. “ಓಜಿಯೊಂದಿಗೆ ದಕ್ಷಿಣ ಭಾರತದ ಸಿನಿ ಮಾರುಕಟ್ಟೆಯಲ್ಲಿ ಹೊಸ ಹಾದಿಯನ್ನು ಪ್ರಾರಂಭಿಸಲು…

Read More

ಬಾಲಿವುಡ್ ನಿರ್ಮಾಪಕ, ದಿವಂಗತ ಶ್ರೀದೇವಿ ಪತಿ  ಬೋನಿ ಕಪೂರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್ ಜೊತೆಗೆ ದಕ್ಷಿಣ ಭಾರತರದ ಸ್ಟಾರ್ ನಟರ ಸಿನಿಮಾಗಳಲ್ಲೂ ಜಾನ್ವಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬೋನಿ ಕಪೂರ್ ಕಿರಿಯ ಮಗಳು ಚಿತ್ರರಂಗಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದು ಮಗಳ ಚಿತ್ರಕ್ಕೆ ಬೋನಿ ಕಪೂರ್ ಹಣ ಹೂಡಲು ಮುಂದಾಗಿದ್ದಾರೆ. ಖುಷಿ ಕಪೂರ್​ಗಾಗಿ ‘ಉಪ್ಪೆನಾ’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲು ಬೋನಿ ಕಪೂರ್​ ಉತ್ಸಾಹ ತೋರಿಸಿದ್ದಾರೆ. ಈ ವಿಷಯ ಕೇಳಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಬೋನಿ ಕಪೂರ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಲು ಕಾರಣ ಕೂಡ ಇದೆ. ಯಾಕೆಂದರೆ, ‘ಉಪ್ಪೆನಾ’ ಸಿನಿಮಾದ ಕಥೆ ‘ಧಡಕ್​’ ಚಿತ್ರದ ಕಥೆಯ ರೀತಿಯೇ ಇದೆ. ಇನ್ನು, ‘ಧಡಕ್​’ ಸಿನಿಮಾವು ಮರಾಠಿಯ ‘ಸೈರಾಟ್​’ ಚಿತ್ರದ ರಿಮೇಕ್​. ‘ಉಪ್ಪೆನಾ’ ಕ್ಲೈಮ್ಯಾಕ್ಸ್​ನಲ್ಲಿ ಬರುವ ಕೆಲವು ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಕಥೆ ಅದೇ ರೀತಿ ಇತ್ತು. ಈಗ ಬಾಲಿವುಡ್​ನಲ್ಲಿ ‘ಉಪ್ಪೆನಾ’…

Read More

ಮಾಸ್ಕೊ ಹೊರವಲಯದ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಗುಂಡಿನ ದಾಳಿ ನಡೆಸಿದ ನಾಲ್ವರು ಬಂದೂಕುಧಾರಿಗಳು ಉಕ್ರೇನ್‌ಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಪುಟಿನ್‌ ಅವರ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಉಕ್ರೇನ್‌, ‘ಕ್ರಾಕಸ್ ಸಿಟಿ ಹಾಲ್‌ನಲ್ಲಿ ನಡೆದ ದಾಳಿಯಲ್ಲಿ ತನ್ನ ಪಾತ್ರ ಇಲ್ಲ’ ಎಂದಿದೆ.  ಈ ದಾಳಿಯೊಂದಿಗೆ ತಪ್ಪಾಗಿ ತಳುಕು ಹಾಕಲಾಗುತ್ತಿದೆ ಎಂದು ಪುಟಿನ್‌ ಸೇರಿದಂತೆ ರಷ್ಯಾದ ರಾಜಕೀಯ ನಾಯಕರ ವಿರುದ್ಧವೂ ಉಕ್ರೇನ್‌ ಆರೋಪ ಮಾಡಿದೆ. ‘ಈ ದಾಳಿಯನ್ನು ತಾನೇ ನಡೆಸಿದ್ದಾಗಿ ಐಎಸ್‌ ಹೊಣೆ ಹೊತ್ತಿಕೊಂಡಿದೆ. ಈ ದಾಳಿಯಲ್ಲಿ ಉಕ್ರೇನ್‌ನ ಯಾವುದೇ ಪಾತ್ರವಿಲ್ಲ’ ಎಂದು ಉಕ್ರೇನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಆಯಡ್ರಿಯೆನ್ ವಾಟ್ಸನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಮಾಸ್ಕೊದಲ್ಲಿ ಯೋಜಿತ ಭಯೋತ್ಪಾದಕ ದಾಳಿ ನಡೆಯುವ ಕುರಿತು ಮಾರ್ಚ್‌ ಆರಂಭದಲ್ಲಿಯೇ ರಷ್ಯಾಕ್ಕೆ ಮಾಹಿತಿ ನೀಡಿದ್ದ ಅಮೆರಿಕ, ರಷ್ಯಾದಲ್ಲಿರುವ ತನ್ನ ಪ್ರಜೆಗಳಿಗೂ ಈ ಬಗ್ಗೆ ಎಚ್ಚರಿಕೆ ನೀಡಿತ್ತು’ ಎಂದು ವಾಟ್ಸನ್ ಹೇಳಿದ್ದಾರೆ. ಇಸ್ಲಾಮಿಕ್‌ ಸ್ಟೇಟ್‌ನ (ಐಎಸ್‌)…

Read More

ಅಮೆರಿಕದ ಪೆನ್ಸಿಲ್ವೇನಿಯಾದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಯುವತಿ ಮೃತಪಟ್ಟಿದ್ದಾರೆ ಎಂದು ಭಾರತೀಯ ರಾಜಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಮೂಲದ ಉದ್ಯೋಗಿ ಅರ್ಶಿಯಾ ಜೋಶಿ(24) ಮಾ.21ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಿಲ್ಲಿ ಮೂಲದ ಜೋಶಿ, ತಮ್ಮ ಕಾರಿನಲ್ಲಿ ಪಯಣಿಸುವಾಗ ಅಪಘಾತವಾಗಿ ಮೃತಪಟ್ಟಿದ್ದಾರೆ. ಆಕೆಯ ಪೋಷಕರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More

ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ಥಾನ ಭಾರತದೊಂದಿಗೆ ತನ್ನ ವ್ಯಾಪಾರ ಸಂಬಂಧ ವನ್ನು ಮತ್ತೆ ಸರಿಪಡಿಸಿಕೊಳ್ಳಲು ಯತ್ನಿಸುತ್ತಿದೆ. ಖುದ್ದು ಪಾಕ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಇಶಾಕ್‌ ಧಾರ್‌ ಈ ವಿಚಾರವನ್ನು ಪಾಕಿಸ್ಥಾನ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಲಂಡನ್‌ನಲ್ಲಿ ನಡೆದ ಪರಮಾಣು ಶಕ್ತಿ ಶೃಂಗಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಿಶಾಕ್ ಧಾರ್, “ಪಾಕಿಸ್ಥಾನಿ ಉದ್ಯಮಿಗಳಿಗೆ ಭಾರತದ ಜತೆಗೆ ವ್ಯಾಪಾರ ಸಂಬಂಧ ಹೊಂದುವ ಹಂಬಲ ವಿದೆ. ಈ ನಿಟ್ಟಿನಲ್ಲಿ ಆ ಸಂಬಂಧವನ್ನು ಮತ್ತೆ ಸರಿ ಪಡಿಸುವ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ’ ಎಂದಿದ್ದಾರೆ. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ವ್ಯಾಪಾರ ಸಂಬಂಧವನ್ನು ಪಾಕ್‌ ತಗ್ಗಿಸಿತ್ತು.

Read More

ದೇಶದ ಬೆನ್ನೆಲುಭಾಗಿರುವ ರೈತರಿಗೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಹಲವ ಯೋಜನೆಗಳು ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ರೈತರು ವೃದ್ಧಾಪ್ಯದಲ್ಲಿ ತೊಂದರೆ ಅನುಭವಿಸಬಾರದೆಂದು ಪ್ರಧಾನ ಮಂತ್ರಿ ಕಿಶನ್ ಮನ್ ಧನ್ ಎಂಬ ಹೊಸ ಯೋಜನೆಯನ್ನು ರಚಿಸಿದೆ. ಈ ಯೋಜನೆಯಿಂದ ಆರ್ಥಿಕ ಭದ್ರತೆ ದೊರೆಯಲಿದೆ ಎನ್ನಲಾಗಿದೆ. ಈ ಯೋಜನೆಯಡಿ ತಿಂಗಳಿಗೆ 55 ರೂ. ಪಾವತಿಸಿದರೆ, 60 ವರ್ಷ ಹೂಡಿಕೆಯ ನಂತರ ಪ್ರತಿ ತಿಂಗಳು 3 ಸಾವಿರ ರೂ.ಸಿಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಸರ್ಕಾರವು ಸಂಪೂರ್ಣವಾಗಿ ಬಡ ರೈತರಿಗಾಗಿ ಪ್ರಾರಂಭಿಸಿದೆ. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಸೇರಲು ಅರ್ಹರು. ಈ ಯೋಜನೆಯಡಿ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ಈ ಯೋಜನೆ ತಕ್ಷಣಕ್ಕೆ ಲಾಭ ನೀಡದಿದ್ದರೂ ರೈತರು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಇರಲು ಸಹಕಾರಿಯಾಗುತ್ತದೆ. ಈ ಪಿಎಂ ಕಿಸಾನ್ ಮನ್ ಧನ್ ಯೋಜನೆಯು ವೃದ್ಧಾಪ್ಯದಲ್ಲಿ ಪಿಂಚಣಿ ರೂಪದಲ್ಲಿ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕೊನೆಗಾಲದಲ್ಲಿ ಮಕ್ಕಳು ಕೈಬಿಟ್ಟಾಗ ಕಣ್ಣೀರು…

Read More

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಸಂಘಟನೆ ಉಗ್ರರ ದಾಳಿ ವಿಡಿಯೋ ಬಿಡುಗಡೆ ಮಾಡಿದೆ. ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ಉಗ್ರರು ಸುಮಾರು 150ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರು. ಬಂದೂಕುಧಾರಿಗಳು ಚಿತ್ರೀಕರಿಸಿದ ವೀಡಿಯೊವನ್ನು ಜಿಹಾದಿ ಗುಂಪು ಇಸ್ಲಾಮಿಕ್ ಸ್ಟೇಟ್ (ISIS) ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ. ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ ಮಸುಕುಧಾರಿಗಳು ಘೋಷಣೆ ಕೂಗುತ್ತಾ ಅಸಾಲ್ಟ್ ರೈಫಲ್​ಗಳನ್ನು ಮತ್ತು ಚಾಕುಗಳನ್ನು ಹಿಡಿದು ಅಲ್ಲಿ ನೆರೆದಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ವಿಡಿಯೋದಲ್ಲಿ ದಾಳಿಕೋರರು ಹಲವಾರು ಸುತ್ತು ಗುಂಡುಗಳನ್ನು ಹಾರಿಸುತ್ತಿದ್ದು, ಈ ವೇಳೆ ಸುತ್ತಲಿನ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಷ್ಯಾದ ಸೈಟ್ ಮಾನಿಟರಿಂಗ್ ಗ್ರೂಪ್ ವರದಿ ಪ್ರಕಾರ ಈ ವೀಡಿಯೊ ಐಎಸ್​ನ ಸುದ್ದಿ ವಿಭಾಗವಾದ ಅಮಾಕ್​ ನ ಟೆಲಿಗ್ರಾಮ್ ಖಾತೆಯಲ್ಲಿ ಈ ವಿಡಿಯೋಗಳು ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.

Read More