Author: Author AIN

ಮಾಜಿ ಬಿಗ್​ ಬಾಸ್​ ಸ್ಪರ್ಧಿ ಕನ್ನಡ ಪರ ಹೋರಾಟಗಾರ ಪ್ರಶಾಂತ್​ ಸಂಬರ್ಗಿ ಅವರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ವಾಟ್ಸಪ್​ ಮತ್ತು ಇ-ಮೇಲ್​ ಮೂಲಕ ಬೆದರಿಕೆ ಹಾಕಿದ ಕಿಡಿಗೇಡಿಗಳು ಆ್ಯಸಿಡ್​​ ಹಾಕುವುದಾಗಿ ಎಚ್ಚರಿಸಿದ್ದಾರೆ. ಈ ಸಂಬಂಧವಾಗಿ ಪ್ರಶಾಂತ್​ ಸಂಬರ್ಗಿ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಬೆದರಿಕೆ ಬಂದ ಹಿನ್ನೆಲೆಯಲ್ಲಿ ದೂರು ನೀಡಿದ ಸಂಬರ್ಗಿ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಿದೇಶದ ಮೊಬೈಲ್​ ಸಂಖ್ಯೆಗಳಿಂದ ಪ್ರಶಾಂತ್ ಸಂಬರ್ಗಿ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಅಮೆರಿಕ, ಕ್ರೊಯೇಷ್ಯಾ ಮುಂತಾದ ದೇಶಗಳ ವಾಟ್ಸಪ್​ ಸಂಖ್ಯೆಗಳನ್ನು ಬಳಸಿ ಬೆದರಿಕೆ ಸಂದೇಶ ಕಳಿಸಲಾಗಿದೆ. ಪ್ರಶಾಂತ್​ ಸಂಬರ್ಗಿ ಅವರ ಫ್ಯಾಮಿಲಿ ಫೋಟೋವನ್ನು ಕಳಿಸಿ, ‘ಟಾರ್ಗೆಟ್​’ ಎಂದು ಬರೆಯಲಾಗಿದೆ. ಪತ್ನಿ ಮತ್ತು ಮಕ್ಕಳನ್ನು ಕೂಡ ಬಲಿ ತೆಗೆದುಕೊಳ್ಳುವುದಾಗಿ ಬೆದರಿಕೆ ಸಂದೇಶ ಕಳಿಸಲಾಗಿದೆ. ‘ಮಾರ್ಚ್​ 10ರ ಮಧ್ಯರಾತ್ರಿಯಿಂದ ನನಗೆ ಮೇಲ್ಕಂಡ ಮೊಬೈಲ್​ ಸಂಖ್ಯೆಗಳಿಂದ ಬೆದರಿಕೆ ಸಂದೇಶ ಬಂದಿದೆ.…

Read More

ಅಮೆರಿಕದ ಕ್ರಿಪ್ಟೋ ಲೋಕದ ಜೀನಿಯಸ್ ಎಂದು ಖ್ಯಾತಿ ಘಳಿಸಿದ್ದ ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ ಇದೀಗ 25 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. 32 ವರ್ಷದ ಈ ಯುವ ಉದ್ಯಮಿ ಮುಂದಿನ 25 ವರ್ಷ ಜೈಲಿನಲ್ಲೇ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. 8 ಬಿಲಿಯಲ್ ಡಾಲರ್ ಹಣಕಾಸು ವಂಚನೆಯ ಆರೋಪದಲ್ಲಿ ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ ಆರೋಪಿಯಾಗಿದ್ದಾರೆ. ಈತನ ಮೇಲಿದ್ದ ಎಲ್ಲಾ ಎಂಟು ದೂರುಗಳಲ್ಲೂ ಆರೋಪ ಸಾಬೀತಾಗಿದೆ. ತೀರ್ಪು ನೀಡಿದ ನ್ಯಾಯಾಧೀಶರು, ಎಸ್​ಬಿಎಫ್ ಅವರನ್ನು ಅಮೆರಿಕದ ಹಣಕಾಸು ಇತಿಹಾಸದಲ್ಲೇ ಅತಿದೊಡ್ಡ ವಂಚಕ ಎಂದಿದ್ದಾರೆ. ಅಮೆರಿಕದ ಸ್ಯಾಮ್ ಬ್ಯಾಂಕ್ಮನ್ ಫ್ರೈಡ್ 2019ರಲ್ಲಿ ಎಫ್​ಟಿಎಕ್ಸ್ ಎಂಬ ಕ್ರಿಪ್ಟೋಕರೆನ್ಸಿ ಎಕ್ಸ್​ಚೇಂಜ್ ಅನ್ನು ತೆರೆದಿದ್ದರು. ಆಗ ಕ್ರಿಪ್ಟೋಕರೆನ್ಸಿ ಬಹಳ ದೊಡ್ಡ ಭರವಸೆ ಹುಟ್ಟಿಸಿದ ಕ್ಷೇತ್ರವಾಗಿತ್ತು. ಕಡಿಮೆ ಶುಲ್ಕ ಹಾಗೂ ವೇಗದ ವಹಿವಾಟು ಇವೆರಡನ್ನೂ ಕೊಡುತ್ತಿದ್ದರಿಂದ ಎಫ್​ಟಿಎಕ್ಸ್ ಬಹಳ ವೇಗದಲ್ಲಿ ಬೆಳೆಯಿತು. ಬಹಳ ಬೇಗ ಇದು ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋ ಎಕ್ಸ್​ಚೇಂಜ್ ಎನಿಸಿತು. ನೋಡನೋಡುತ್ತಿದ್ದಂತೆಯೇ ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ ಅತಿಕಿರಿಯ ವಯಸ್ಸಿನ ಬಿಲಿಯನೇರ್…

Read More

ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಹಾಗೂ ಟಾಲಿವುಡ್ ಹೀರೋ ಸಿದ್ದಾರ್ಥ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಕಾಲ ಸಖತ್ ವೈರಲ್ ಆಗಿತ್ತು. ಮದುವೆಯ ಸುದ್ದಿಗೆ ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ನಾವಿನ್ನು ಮದುವೆಯಾಗಿಲ್ಲ. ಆಗಿರೋದು ಜಸ್ಟ್ ಎಂಗೇಜ್ ಮೆಂಟ್ ಅಷ್ಟೇ ಎಂದು ಕ್ಲಾರಿಟಿ ನೀಡಿದ್ದರು. ಅಂದ ಹಾಗೆ ಅದಿತಿ ಹಾಗೂ ಸಿದ್ದಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆ. ಮೊದಲನೇ ಮದುವೆಯ ಸಂಬಂಧ ಕಳೆದುಕೊಂಡಿರುವ ಜೋಡಿ ಇದೀಗ ಎರಡನೇ ಮದುವೆಯಾಗಲು ರೆಡಿಯಾಗಿದ್ದಾರೆ. ಸಿನಿಮಾ ರಂಗದಿಂದ ಕೆಲ ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಸಿದ್ದಾರ್ಥ್ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಸಿದ್ದಾರ್ಥ್ 2003ರಲ್ಲಿ ಮೇಘನಾ ನಾರಾಯಣ್ ಎಂಬುವವರನ್ನು ಮದುವೆಯಾಗಿದ್ದರು. ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಪಕ್ಕದ ಮನೆಯ ಮೇಘನಾ ಮೇಲೆ ಪ್ರೀತಿ ಶುರುವಾಗಿ ಬಳಿಕ ಆಕೆಯನ್ನು ವರಿಸಿದ್ದರು. ಸಿದ್ದಾರ್ಥ್ ಹಾಗೂ ಮೇಘನಾ ಮದುವೆಯನ್ನು ಸಾಕಷ್ಟು ಗುಟ್ಟಾಗಿ ಇಡಲಾಗಿತ್ತು. ಇದುವರೆಗೂ ಮೇಘನಾ ಹಾಗೂ ಸಿದ್ದಾರ್ಥ್ ಮದುವೆಯ ಫೋಟೋಗಳು ಲಭ್ಯವಾಗಿಲ್ಲ. ಇಬ್ಬರ ಮಧ್ಯೆ ಶುರುವಾದ…

Read More

ಸಾಯಮಿ ಜೋಡಿಯಾದಅಬ್ಬಿ ಮತ್ತು ಬ್ರಿಟಾನಿ ಹೆನ್ಸೆಲ್ 2021 ರಲ್ಲಿ ತಾವು ವಿವಾಹವಾಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಅಮೆರಿಕ ಸೇನೆಯ ಜೋಶ್ ಬೌಲಿಂಗ್ ಎಂಬುವವರೊಂದಿಗೆ ಸಾಯಮಿ ಜೋಡಿಯಾದ ಅಬ್ಬಿ ಹಾಗೂ ಹೆನ್ಸೆಲ್ ಮದುವೆಯಾಗಿದ್ದಾರೆ. 1996ರಲ್ಲಿ ದಿ ಓಪ್ರಾ ವಿನ್ಫ್ರೇ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಜೋಡಿ ವಿಶ್ವದಾದ್ಯಂತ ಗಮನ ಸೆಳೆದಿದ್ದರು. ಇದೀಗ ಅಬ್ಬಿ, ಹೆನ್ಸೆಲ್ ತಮ್ಮ ವಿವಾಹದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮದುವೆಯ ಆರತಕ್ಷತೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ.

Read More

ಕೃಷಿ, ಶಿಕ್ಷಣ ಮತ್ತು ಆರೋಗ್ಯ ಈ ಮೂರು ಕ್ಷೇತ್ರಗಳಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕೋಪಕಾರಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ದೆಹಲಿಯ ತಮ್ಮ ನಿವಾಸದಲ್ಲಿ ನಡೆಸಿದ ಸಂವಾದದಲ್ಲಿ ಅವರು, ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ಕೇಳುತ್ತಿದ್ದೇನೆ. ಆದರೆ ಭಾರತದಲ್ಲಿ ಇದು ಸಂಭವಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಗರ್ಭಕಂಠದ ಕ್ಯಾನ್ಸರ್‌ ಗೆ ಕನಿಷ್ಠ ವೆಚ್ಚದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಸಂಶೋಧನೆಗಾಗಿ ವಿಜ್ಞಾನಿಗಳಿಗೆ ಹಣವನ್ನು ವಿನಿಯೋಗಿಸಲು ಮುಂದೆ ಬರಲಿರುವ ತಮ್ಮ ಹೊಸ ಸರ್ಕಾರವು ವಿಶೇಷವಾಗಿ ಎಲ್ಲಾ ವರ್ಗದ ಹುಡುಗಿಯರಿಗೆ ಲಸಿಕೆಯನ್ನು ನೀಡಲು ಶ್ರಮಿಸುತ್ತದೆ ಎಂದಿದ್ದಾರೆ. ಸಾರ್ವತ್ರಿಕ ಚುನಾವಣೆಯ ನಂತರ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿರುವ ಮೋದಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಗತ್ಯವಿದೆ, ಭಾರತವು ಈ ನಿಟ್ಟಿನಲ್ಲಿ ಮುನ್ನಡೆಯಲಿದೆ ಎಂದು ಹೇಳಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವಿಷಯದ ಕುರಿತು ಪ್ರತಿಕ್ರಿಯಿಸಿದ ಮೋದಿ, ಇದನ್ನು ಮಾಂತ್ರಿಕ ಸಾಧನವಾಗಿ ಅಥವಾ ಕೆಲವು ಕೆಲಸಗಳನ್ನು…

Read More

ಪುಷ್ಪ ಸಿನಿಮಾದ ಮೂಲಕ ಖ್ಯಾತಿ ಘಳಿಸಿರುವ ತೆಲುಗು ನಟಿ ಕಂ ನಿರೂಪಕಿ ಅನಸೂಯ ಭಾರದ್ವಾಜ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಂದೆ ತಮಗೂ ರಾಜಕೀಯಕ್ಕೂ ಆಗಲ್ಲ ಎಂದಿದ್ದ ನಟಿ ಇದೀಗ ದಿಢೀರ್ ಎಂದು ಉಲ್ಟ್ ಹೊಡೆದಿದ್ದಾರೆ. ನನಗೆ ರಾಜಕೀಯಕ್ಕೆ ಬರಲು ಇಷ್ಟವಿದೆ ಎಂದು ನಟಿ ಹೇಳಿದ್ದು ನಟಿಯ ಹೇಳಿಕೆ ನಾನಾ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕೆಲವು ನಟಿಯರನ್ನು ನಟ ಪವನ್ ಕಲ್ಯಾಣ್ ಸಂಪರ್ಕಿಸಿದ್ದು, ಮುಂದಿನ ಆಂಧ್ರದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿದ್ದಾರಂತೆ. ಅಲ್ಲದೇ, ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರಂತೆ. ಅಂತೆಯೇ ನಟಿ ಅನಸೂಯ ಅವರನ್ನೂ ಪವನ್ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇದೀಗ ಅನಸೂಯ ರಾಜಕೀಯಕ್ಕೆ ಎಂಟ್ರಿಕೊಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನಾನಾ ಕಾರಣಗಳಿಂದ ಅನಸೂಯ ಸುದ್ದಿ ಆಗುತ್ತಲೇ ಇರುತ್ತಾರೆ. ಅತೀ ಹೆಚ್ಚು ಟ್ರೋಲ್ ಆಗುವ ವ್ಯಕ್ತಿಗಳ ಸಾಲಿನಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುತ್ತಾ, ತಮ್ಮ ಹಿಂಬಾಲಕರಿಗೆ ಮನರಂಜನೆ ನೀಡುವ ಅನಸೂಯ, ತಮ್ಮ ವಿರುದ್ಧ ಕೆಟ್ಟದಾಗಿ…

Read More

ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸ್ಪಂದನಾ ನಿಧನದ ಬಳಿಕ  ಕುಟುಂಬದಲ್ಲಿ ಮತ್ತೆ ನೋವು ಉಂಟಾಗಿದೆ. ಸ್ಪಂದನಾ ಅವರ ಮಾವ ಹೇರಾಜೆ ಶೇಖರ ಬಂಗೇರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಿ.ಸ್ಪಂದನಾ ಹಾಗೂ ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ತಾಯಿಯ ಅಣ್ಣ ಶೇಖರ ಬಂಗೇರ, ದ.ಕ ಜಿಲ್ಲೆಯ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ರಾತ್ರಿ ನಡೆದ ಘಟನೆ ನಿಧನರಾಗಿದ್ದಾರೆ. ಸಂತೆಕಟ್ಟೆಯಲ್ಲಿ ಫುಡ್ ಪಾರ್ಸೆಲ್ ಹಿಡಿದು ರಸ್ತೆ ದಾಟುವಾಗ ದುರಂತ ಸಂಭವಿಸಿದೆ. ಯುವತಿಯೋರ್ವಳು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ, ಶೇಖರ್ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆ ತಲುಪುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More

ಭಾರತ -ಮಲೇಷ್ಯಾ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸಲು ಇತ್ತೀಚೆಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಆ ದೇಶದ ಉನ್ನತ ನಾಯಕರ ಜೊತೆಗೆ ಈಚೆಗೆ ನಡೆಸಿದ ಚರ್ಚೆ ನೆರವಾಗಿದೆ’ ಎಂದು ವಿದೇಶಾಂಗ ಸಚಿವಾಲಯ 0ಹೇಳಿದೆ. ಜೈಶಂಕರ್‌ ಅವರು ಸಿಂಗಪುರ, ಫಿಲಿಪ್ಪೀನ್ಸ್‌, ಮಲೇಷ್ಯಾಗೆ ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದರು. ಮಾರ್ಚ್‌ 27ರಿಂದ ಎರಡು ದಿನ ಕ್ವಾಲಾಲಂಪುರಕ್ಕೆ ಭೇಟಿ ನೀಡಿದ್ದರು. ಮಲೇಷ್ಯಾ ಪ್ರಧಾನಿ ಅನ್ವರ್ ಬಿನ್ ಇಬ್ರಾಹಿಂ, ಇತರ ನಾಯಕರೊಂದಿಗೆ ಚರ್ಚಿಸಿದ್ದರು. ವಿದೇಶಾಂಗ ಸಚಿವಾಲಯ ಈ ಸಂಬಂಧ ಹೇಳಿಕೆ ನೀಡಿದೆ. ‘ಭಾರತದ ಐಐಟಿ ಶಾಖೆಯನ್ನು ಮಲೇಷ್ಯಾದಲ್ಲಿ ಆರಂಭಿಸಲು ಅಗತ್ಯ ಸಹಕಾರ ನೀಡುವ ಭರವಸೆಯನ್ನು ಭೇಟಿಯ ಸಂದರ್ಭದಲ್ಲಿ ಅನ್ವರ್ ಅವರು ನೀಡಿದ್ದಾರೆ’ ಎಂದು ಉಲ್ಲೇಖಿಸಿದೆ. ‘ಮಲೇಷ್ಯಾದಲ್ಲಿ ಅಕ್ಕಿ ಕೊರತೆಯಿದ್ದಾಗ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಆಮದಿಗೆ ಪ್ರಧಾನಿ ನರೇಂದ್ರ ಮೋದಿ ಸಹಕರಿಸಿದ್ದರು. ಜನರ ಅನುಕೂಲಕ್ಕಾಗಿ ಉಭಯ ದೇಶಗಳ ಬಾಂಧವ್ಯ ಇನ್ನಷ್ಟು ದೃಢವಾಗಲಿ’ ಎಂದು ಮಲೇಷ್ಯಾ ಪ್ರಧಾನಿ ತಿಳಿಸಿದ್ದಾರೆ.

Read More

ದಕ್ಷಿಣ ಆಫ್ರಿಕಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಚಾಲಕ ಸೇರಿದಂತೆ 46 ಪ್ರಯಾಣಿಕರಿದ್ದರು. ಬಸ್ ನಲ್ಲಿದ್ದ ಎಂಟು ವರ್ಷದ ಬಾಲಕ ಮಾತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಶಾನ್ಯ ಪ್ರಾಂತ್ಯದ ಲಿಂಪೊಪೊದ ಮಮಟ್ಲಕಲಾ ಬಳಿಯ ಸೇತುವೆಯ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸಾರಿಗೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಬಸ್ ದಕ್ಷಿಣ ಆಫ್ರಿಕಾದ ಭೂ-ಆವೃತ ದೇಶವಾದ ಬೋಟ್ಸ್ವಾನಾದಿಂದ ಲಿಂಪೊಪೊದ ಮೊರಿಯಾ ಎಂಬ ಪಟ್ಟಣಕ್ಕೆ ಜನರನ್ನು ಕರೆದೊಯ್ಯುತ್ತಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. “ರಕ್ಷಣಾ ಕಾರ್ಯಾಚರಣೆ ಗುರುವಾರ ಸಂಜೆಯವರೆಗೂ ಮುಂದುವರಿಯಿತು, ಕೆಲವು ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ, ಇತರರು ಅವಶೇಷಗಳ ಒಳಗೆ ಸಿಕ್ಕಿಬಿದ್ದು ಘಟನಾ ಸ್ಥಳದಲ್ಲಿ ಚದುರಿಹೋಗಿದ್ದಾರೆ” ಎಂದು ಲಿಂಪೊಪೊದ ಸಾರಿಗೆ ಇಲಾಖೆ ಪ್ರತ್ಯೇಕ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

Read More

2022 ರಲ್ಲಿ ಜಗತ್ತು ಪ್ರತಿದಿನ ಒಂದು ಬಿಲಿಯನ್ (100 ಕೋಟಿ) ಊಟವನ್ನು ವ್ಯರ್ಥ ಮಾಡಿದೆ. ಇದು ಜಾಗತಿಕವಾಗಿ ಉತ್ಪಾದಿಸುವ ಆಹಾರದ ಶೇಕಡಾ 19 ರಷ್ಟಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಾದ್ಯಂತ 783 ಮಿಲಿಯನ್ (78.3 ಕೋಟಿ) ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ಆಹಾರ ತ್ಯಾಜ್ಯ ಸೂಚ್ಯಂಕ ವರದಿಯನ್ನು ಬುಧವಾರ (ಮಾರ್ಚ್ 27) ಪ್ರಕಟಿಸಿದ ನಂತರ ಆತಂಕಕಾರಿ ಅಂಕಿಅಂಶಗಳು ಬೆಳಕಿಗೆ ಬಂದಿವೆ. ಆಹಾರ ತ್ಯಾಜ್ಯವು ಕೇವಲ “ಶ್ರೀಮಂತ ಪ್ರಪಂಚದ” ಸಮಸ್ಯೆಯಲ್ಲ ಎಂದು ವರದಿಯು ಗಮನಸೆಳೆದಿದೆ. ವಿಶ್ವಸಂಸ್ಥೆ ವರದಿ ಏನು ಹೇಳುತ್ತದೆ? ಪ್ರತಿ ವ್ಯಕ್ತಿಯು ವಾರ್ಷಿಕವಾಗಿ ಸುಮಾರು 79 ಕಿಲೋಗ್ರಾಂಗಳಷ್ಟು ಆಹಾರವನ್ನು ವ್ಯರ್ಥ ಮಾಡುತ್ತಾನೆ ಎಂದು ಯುಎನ್ ವರದಿ ತಿಳಿಸಿದೆ. ಇದು ಜಾಗತಿಕವಾಗಿ ಪ್ರತಿದಿನ ವ್ಯರ್ಥವಾಗುವ ಕನಿಷ್ಠ ಒಂದು ಬಿಲಿಯನ್ ಊಟಕ್ಕೆ ಸಮಾನವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ. 2022 ರಲ್ಲಿ ಮನೆಗಳು, ರೆಸ್ಟೋರೆಂಟ್ಗಳು ಮತ್ತು ಚಿಲ್ಲರೆ ವಲಯಗಳು ಸುಮಾರು…

Read More