Author: Author AIN

ದೇಶಾದ್ಯಂತ ಸಂಕ್ರಾಂತಿ ಹಾಗೂ ಪೊಂಗಲ್ ಹಬ್ಬವನ್ನು ಅತ್ಯಂತ ಹರ್ಷದಿಂದ ಆಚರಣೆ ಮಾಡಲಾಗುತ್ತಿದೆ. ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅದರಂತೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಳಿಪಟ ಹಾರಿಸಿ ಮಕರ ಸಂಕ್ರಾಂತಿ ಆಚರಣೆ ಮಾಡಿದರು. https://ainlivenews.com/do-you-know-what-benefits-farmers-get-from-the-kisan-credit-card-loan-scheme/ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಅಮಿತ್‌ ಶಾ ಅಹಮದಾಬಾದ್‌ನ ಶಾಂತಿನಿಕೇತನ ಸೊಸೈಟಿಯ ಕಟ್ಟಡವೊಂದರ ಮೇಲ್ಛಾವಣಿಯಿಂದ ಗಾಳಿಪಟ ಹಾರಿಸಿ ಖುಷಿಪಟ್ಟರು. ಪ್ರತಿ ವರ್ಷ ಜ.14 ರಂದು ದೇಶಾದ್ಯಂತ ಆಚರಿಸಲಾಗುವ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ. ಅಮಿತ್ ಶಾ ಅವರು ಮೇಮ್ನಗರದ ಶಾಂತಿನಿಕೇತನ ಸೊಸೈಟಿಯಲ್ಲಿ ಸ್ಥಳೀಯರೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಿದರು. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು ಎಂದು ಸಿಎಂ ಭೂಪೇಂದ್ರ ಪಟೇಲ್‌ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

Read More

ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ಕೆಲಸದ ವೀಸಾಕ್ಕೆ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವ ಭಾರತೀಯರು ವೃತ್ತಿಪರ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವ ಪರಿಶೀಲನೆಗೆ ಒಳಪಡಬೇಕಾಗುತ್ತದೆ ಎಂದು ಸೌದಿ ಅರೇಬಿಯಾ ಸುತ್ತೋಲೆಯನ್ನು ಹೊರಡಿಸಿದೆ. ಜನವರಿ 14ರಿಂದ ಎಲ್ಲಾ ಕೆಲಸದ ವೀಸಾಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಕ್ಷಿಗಳ ವೃತ್ತಿಪರ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಪೂರ್ವ ಪರಿಶೀಲನೆಗೆ ಒಳಪಡಿಸಬೇಕೆಂದು ಸೌದಿ ಅರೇಬಿಯಾ ಸುತ್ತೋಲೆಯನ್ನು ಹೊರಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆಮಾಡಿದೆ. ಸೌದಿ ಅರೇಬಿಯಾದಲ್ಲಿ ಪ್ರಸ್ತುತ 24 ಲಕ್ಷಕಿಂತ ಹೆಚ್ಚು ಭಾರತೀಯ ಕಾರ್ಮಿಕರು ವಾಸಿಸುತ್ತಿದ್ದು, ಬಾಂಗ್ಲಾದೇಶಿಯನ್ನರ ಬಳಿಕ ಭಾರತೀಯರು ಸೌದಿ ಅರೇಬಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರು ಸೇರಿದಂತೆ ಭಾರತೀಯ ಕಾರ್ಮಿಕರು ಸೌದಿ ಅರೇಬಿಯಾದ ಉದ್ಯೋಗ ಮಾರುಕಟ್ಟೆಯ ನಿರ್ಣಾಯಕ ಭಾಗವಾಗಿದ್ದಾರೆ ಮತ್ತು ಭಾರತಕ್ಕೆ ಹಣದ ಒಳ ಹರಿವಿಗೆ ಕಾರಣರಾಗಿದ್ದಾರೆ. ಆರು ತಿಂಗಳ ಹಿಂದೆ ಈ ನಿಯಮಾವಳಿಗಳನ್ನು ಪ್ರಸ್ತಾಪಿಸಲಾಗಿತ್ತು. ಸೌದಿ ಅರೇಬಿಯಾದ ವಿಷನ್ 2030 ಮತ್ತು ತನ್ನ ಪ್ರಜೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿ ನೇಮಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ, ಸೌದಿ ಅರೇಬಿಯಾ ಈ ಬದಲಾವಣೆಗಳಿಗೆ ಮುಂದಾಗಿದೆ ಎಂದು…

Read More

ಬೆಂಗಳೂರು: ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಹಿರಿಯ ಸಾಹಿತಿ ಕೃಷ್ಣ ಕೊಲ್ಹಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾಗಿ ಎಂ.ಎಂ.ಕಲ್ಬುರ್ಗಿ ಅವರ 42 ಸಮಗ್ರ ಸಂಪುಟಗಳ ಬಿಡುಗಡೆಗೆ ದಿನಾಂಕ ನೀಡುವಂತೆ ಮನವಿ ಸಲ್ಲಿಸಿದರು. ‘ಕಾವೇರಿ’ ಯಲ್ಲಿ ಭೇಟಿಯಾದ ಅವರು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. https://ainlivenews.com/new-rules-from-rbi-for-getting-personal-loans-do-you-know-what-the-change-is/ ಕಲ್ಬುರ್ಗಿ ಅವರ ಸಾಹಿತ್ಯದ ಸಮಗ್ರ ಸಂಪುಟ ಕುರಿತು ಮುಖ್ಯಮಂತ್ರಿಯವರಿಗೆ ಅವರು ವಿವರಿಸಿದರು. ಸೂಕ್ತ ದಿನಾಂಕ ನೀಡುವ ಭರವಸೆ ನೀಡಿದರು. ಹಾಗೆಯೇ ದಾಸ ಸಾಹಿತ್ಯದ ಸಮಗ್ರ ಸಂಪುಟ ಕೂಡ ಸಿದ್ಧ ಆಗುತ್ತಿದ್ದು ಅದಕ್ಕೆ ಸರ್ಕಾರದಿಂದ ಬಿಡುಗಡೆ ಆಗಬೇಕಿದ್ದ ಹಣ ಕೊಡಿಸುವಂತೆಯೂ ಅವರು ಕೋರಿಕೆ ಸಲ್ಲಿಸಿದರು.

Read More

ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ ನಲ್ಲಿ ಕಳೆದೊಂದು ವಾರದಿಂದ ಆರಂಭವಾದ ಕಾಳ್ಗಿಚ್ಚು ಹತೋಟಿಗೆ ಬಂದಿಲ್ಲ. ಪರಿಣಾಮ ಹಲವರು ಮೃತಪಟ್ಟಿದ್ದು ಲಕ್ಷಾಂತರ ಮನೆಗಳು ಸುಟ್ಟು ಭಸ್ಮವಾಗಿವೆ. ಈ ಕಾಡ್ಗಿಚ್ಚು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಮೇಲೂ ಬೀರಿದ್ದು ಈ ಕಾರಣದಿಂದ ಆಸ್ಕರ್ ಪ್ರಶಸ್ತಿಗೆ ಚಿತ್ರಗಳ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯನ್ನು ಹತ್ತು ದಿನಗಳ ಕಾಲ ಮುಂದೂಡಲಾಗಿದೆ. ಸತತ ಎರಡನೇ ಬಾರಿಗೆ ಚಿತ್ರಗಳ ನಾಮನಿರ್ದೇಶನ ಘೋಷಣೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸ್ ಹೇಳಿಕೆ ನೀಡಿದೆ. ಚಿತ್ರ ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಜನವರಿ 23ರಂದು ನಾಮನಿರ್ದೇಶನ ಘೋಷಿಸಲಾಗುವುದು ಎಂದು ಆಯೋಜರು ಹೇಳಿದ್ದಾರೆ. ಈ ಮೊದಲು ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿಯನ್ನು ಜವರಿ 19ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. “ಆದರೆ ಕಾಡ್ಗಿಚ್ಚು ಹತೋಟಿಗೆ ಬಾರದ ಕಾರಣ ನಾಮನಿರ್ದೇಶನದ ಅವಧಿಯನ್ನು ಮತ್ತಷ್ಟು ವಿಸ್ತರಿಸುವುದು ಅಗತ್ಯ ಎಂಬ ಭಾವನೆ ನಮ್ಮದು. ಆದ್ದರಿಂದ ನಮ್ಮ ಸದಸ್ಯರಿಗೆ ನಾಮನಿರ್ದೇಶನಗಳನ್ನು ಘೋಷಿಸಲು ಹೆಚ್ಚವರಿ ಸಯಮಾವಕಾಶ ಅಗತ್ಯ”…

Read More

ಅಬುಜಾ: ವಾಯವ್ಯ ನೈಜೀರಿಯಾದ ಜಂಫರಾ ರಾಜ್ಯದಲ್ಲಿ ಮಿಲಿಟರಿ ಯುದ್ಧವಿಮಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ನಾಗರಿಕರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಆತ್ಮರಕ್ಷಣಾ ಪಡೆಗಳನ್ನು ಕ್ರಿಮಿನಲ್ ಗ್ಯಾಂಗ್ ಎಂದು ತಪ್ಪು ಗ್ರಹಿಸಿದ ಯುದ್ಧವಿಮಾನದ ಪೈಲಟ್ ಬಾಂಬ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ವಾಯವ್ಯ ಮತ್ತು ಮಧ್ಯ ನೈಜೀರಿಯಾದಲ್ಲಿ ಗ್ರಾಮಗಳ ಮೇಲೆ ದಾಳಿ ನಡೆಸಿ, ಮನೆಗಳನ್ನು ಲೂಟಿ ಮಾಡುವುದಲ್ಲದೆ ಸ್ಥಳೀಯರನ್ನು ಹತ್ಯೆ ಮಾಡುವ ಕ್ರಿಮಿನಲ್ ಗ್ಯಾಂಗ್‍ನ ವಿರುದ್ಧ ನೈಜೀರಿಯಾದ ಮಿಲಿಟರಿ ಹೋರಾಟ ನಡೆಸುತ್ತಿದೆ. ಝುರ್ಮಿ ಜಿಲ್ಲೆಯ ಡಂಗೆಬೆ ಗ್ರಾಮದ ಮೇಲೆ ದಾಳಿ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿ ಜಾನುವಾರುಗಳನ್ನು ಹೊತ್ತೊಯ್ದ ದುಷ್ಕರ್ಮಿಗಳನ್ನು ಎದುರಿಸಲು ಸ್ಥಳೀಯರು ಗುಂಪು ಸೇರಿದ್ದರು. ದುಷ್ಕರ್ಮಿಗಳನ್ನು ಗ್ರಾಮದಿಂದ ಓಡಿಸಿದ ಬಳಿಕ ಹಿಂತಿರುಗುತ್ತಿದ್ದ ಗುಂಪಿನ ಮೇಲೆ ಯುದ್ಧವಿಮಾನ ಬಾಂಬ್ ಹಾಕಿದೆ ಎಂದು ವರದಿಯಾಗಿದೆ. ಬಾಂಬ್ ದಾಳಿಯ ಬಳಿಕ 16 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು ತೀವ್ರ ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ. ಬಾಂಬ್ ದಾಳಿಯಲ್ಲಿ ಕನಿಷ್ಠ 20 ಮಂದಿ…

Read More

ಬಿಗ್ ಬಾಸ್ ಮೂಲಕ ಪರಿಚಯವಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹೊರ ಬಂದ ಬಳಿಕ ಮದುವೆಯಾದರು. ಆದರೆ ಚಂದನ್ ಹಾಗೂ ನಿವೇದಿತಾ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾ ಕೆಲ ವರ್ಷಕ್ಕೆ ಡಿವೋರ್ಸ್ ಪಡೆದು ದೂರ ದೂರವಾಗಿದ್ದಾರೆ. ಆದರೆ ಡಿವೋರ್ಸ್ ಗೆ ಕಾರಣ ಏನು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ಗೆ ಸಲಗ ಸಿನಿಮಾದ ನಾಯಕಿ ಸಂಜನಾ ಆನಂದ್ ಕಾರಣ ಎಂದು ಹೇಳಲಾಗಿತ್ತು. ಈ ವೇಳೆ ಸಂಜನಾ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಜನಾ, ನನಗೆ ಮತ್ತು ಚಂದನ್ ಶೆಟ್ಟಿ ಅವರಿಗೆ ಮದುವೆ ಫಿಕ್ಸ್ ಆಗಿದೆ ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿದರು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡಿವೋರ್ಸ್‌ಗೆ ನಾನೇ ಕಾರಣವೆಂದರು. ಇನ್ನೂ ಕೆಲವರು ಎಐ ತಂತ್ರಜ್ಞಾನದ ಮೂಲಕ ನಮ್ಮಿಬ್ಬರಿಗೆ ಮದುವೆಯ ಫೋಟೊಗಳನ್ನು ವೈರಲ್ ಮಾಡಿದ್ದರು. ಮಂಗಳೂರಿನಲ್ಲಿ ನಮ್ಮಿಬ್ಬರ ಮದುವೆ ನಡೆಯಲಿದೆ ಎಂದು ಕೂಡ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು ಎಂದು…

Read More

ಬೆಂಗಳೂರು: ಗೋ ಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೊನ್ನೆಯ ದಿನ ದುರ್ಘಟನೆ ನಡೆದಿದೆ. ಯಾವ ಪುಣ್ಯಭೂಮಿ ಮೇಲೆ ಗೋ ಮಾತೆ ಪೂಜೆ ಮಾಡುತ್ತೇವೋ ಅಂತಹ ಗೋವಿಗೆ ಏನಾಗಿದೆ ಅಂತ ರಾಜ್ಯ, ದೇಶದ ಜನ ಗಮನಿಸಿದ್ದಾರೆ. ಇವತ್ತು ಹಸು ಮಾಲೀಕ ಕರ್ಣನಿಗೆ ಧೈರ್ಯ ಹೇಳಿದ್ದೇವೆ. ಗೋ ಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಖಂಡಿಸಿದರು. https://ainlivenews.com/new-rules-from-rbi-for-getting-personal-loans-do-you-know-what-the-change-is/ ಸಿದ್ದರಾಮಯ್ಯ ಸಿಎಂ ಆದ ಮೇಲೆ ಗೋ ರಕ್ಷಣೆ ಆಗುತ್ತಿಲ್ಲ. ಈ ಘಟನೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಒಳ್ಳೆಯದು ಮಾಡಲ್ಲ, ಇವರ ಪಾಪದ ಕೊಡ ತುಂಬಿದೆ. ಯಾರೋ ಬಡಪಾಯಿಯನ್ನು ಅರೆಸ್ಟ್ ಮಾಡಿದ್ದಾರೆ. ಹಸು ಮಾಲೀಕ ಕರ್ಣ ಧೈರ್ಯವಾಗಿ ಎದುರಿಸಿದ್ದಾನೆ. ನಾವು ಧೈರ್ಯ ಹೇಳಿ ಗೋ ಪೂಜೆ ಮಾಡಿದ್ದೇವೆ ಎಂದರು.

Read More

ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದಲ್ಲಿಂದು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ. ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಆಚರಿಸುತ್ತಾರೆ. ಅದರಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಶುಭಾಶಯ ತಿಳಿಸಿರುವುದು ವಿಶೇಷ. ತಮ್ಮ ಇನ್​ಸ್ಟಾಗ್ರಾಮ್ ಖಾತೆಯ ಮೂಲಕ ವಾರ್ನರ್ ಸಂಕ್ರಾಂತಿ ಹಬ್ಬಕ್ಕೆ ವಿಶಸ್ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂಕ್ರಾಂತಿ ಹಬ್ಬದ ಶುಭಾಯಶದ ಫೋಟೋ ಹಂಚಿಕೊಂಡಿರುವ ವಾರ್ನರ್, https://ainlivenews.com/new-rules-from-rbi-for-getting-personal-loans-do-you-know-what-the-change-is/ ಸೂರ್ಯನ ಬೆಳಕು ದಾರಿದೀಪವಾಗಲಿ. ಈ ಹಬ್ಬದ ದಿನವು ನಿಮಗೆ ಶಾಂತಿ, ಸಂತೋಷ ಮತ್ತು ಮೆರಗನ್ನು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್​ ಅನ್ನು GMR ಸ್ಪೋರ್ಟ್ಸ್ ಹೆಚ್​ಒ ವಿಕಾಶ್ ಕುಮಾರ್ ಹಾಗೂ ನಿರಂಜನ್ ಸರೀನ್ ಎಂಬುವರಿಗೆ ಟ್ಯಾಗ್…

Read More

ಬೆಂಗಳೂರು: ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ತಂಡವು ಇಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮಾಲೀಕನ ಮನೆಗೆ ಭೇಟಿ ನೀಡಿತು. ಇದೇವೇಳೆ ತಂಡವು ಹಸುಗಳ ಮಾಲೀಕರಿಗೆ ಧೈರ್ಯ ತುಂಬಿತು. ಸರಕಾರದ ನಿಷ್ಕ್ರಿಯತೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟ ಕುರಿತು ತಂಡವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಗೋಪೂಜೆಯನ್ನೂ ನೆರವೇರಿಸಲಾಯಿತು. https://ainlivenews.com/new-rules-from-rbi-for-getting-personal-loans-do-you-know-what-the-change-is/ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಭಾಸ್ಕರ್ ರಾವ್, ಪಕ್ಷದ ಪ್ರಮುಖರು, ಸ್ಥಳೀಯ ಮುಖಂಡರು ಈ ತಂಡದಲ್ಲಿದ್ದರು.

Read More

ಶ್ರೀನಗರ: ಸೈನಿಕರು ಗಸ್ತು ಕರ್ತವ್ಯದಲ್ಲಿ ತೆರಳುತ್ತಿದ್ದಾಗ ಜಮ್ಮು ಮತ್ತು ಕಾಶ್ಮೀರದ  ರಾಜೌರಿಯಲ್ಲಿ ನೆಲಬಾಂಬ್ ಸ್ಫೋಟಗೊಂಡು ಕನಿಷ್ಠ 6 ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೈನಿಕರು ಗಸ್ತು ಕರ್ತವ್ಯದಲ್ಲಿ ತೆರಳುತ್ತಿದ್ದಾಗ ನೌಶೇರಾ ಸೆಕ್ಟರ್‌ನ ಖಂಬಾ ಕೋಟೆ ಬಳಿ ಬೆಳಿಗ್ಗೆ 10:45 ರ ಸುಮಾರಿಗೆ ಸೈನಿಕರೊಬ್ಬರು ಆಕಸ್ಮಿಕವಾಗಿ ನೆಲಬಾಂಬ್ ಮೇಲೆ ಹೆಜ್ಜೆ ಇಟ್ಟಿದ್ದಾರೆ. https://ainlivenews.com/new-rules-from-rbi-for-getting-personal-loans-do-you-know-what-the-change-is/ ಇದರಿಂದಾಗಿ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಒಳನುಸುಳುವಿಕೆ ತಡೆಯಲು ಗಡಿ ನಿಯಂತ್ರಣ ರೇಖೆಯ ಬಳಿಯ ಪ್ರದೇಶಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗುತ್ತದೆ. ಅವು ಕೆಲವೊಮ್ಮೆ ಮಳೆಯಿಂದ ಕೊಚ್ಚಿಹೋಗುತ್ತವೆ. ಇದು ಕೆಲವೊಮ್ಮೆ ಇಂತಹ ಅವಘಡಗಳಿಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More