Author: Author AIN

ಈ ವರ್ಷದ ಮೊದಲ ಸೂರ್ಯಗ್ರಹಣವು ಮೆಕ್ಸಿಕೊ ಮತ್ತು ಅಮೆರಿಕದಲ್ಲಿ ಪ್ರಾರಂಭವಾಗಿತ್ತು. ಸಂಪೂರ್ಣ ಸೂರ್ಯಗ್ರಹಣವು ಮೊದಲು ಮೆಕ್ಸಿಕೊದ 603 ಕಿಲೋಮೀಟರ್ ಇಸ್ಲಾ ಸೊಕೊರೊ ದ್ವೀಪವನ್ನು ಪ್ರವೇಶಿಸಿದ್ದು, ಈ ವೇಳೆ ಸಂಪೂರ್ಣ ಕತ್ತಲೆ ಆವರಿಸಿತ್ತು. ಅಮೆರಿಕಾದಲ್ಲಿ ಗ್ರಹಣದ ಹಾದಿಯಲ್ಲಿರುವ ಕನಿಷ್ಠ 12 ರಾಜ್ಯಗಳು ಸುಮಾರು 4 ನಿಮಿಷ 28 ಸೆಕೆಂಡುಗಳ ಕಾಲ ಕತ್ತಲೆಯಲ್ಲಿ ಆವರಿಸಿದ್ದವು. ಅದೇ ಸಮಯದಲ್ಲಿ, 54 ದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸಿಲ್ಲ, ಏಕೆಂದರೆ ಗ್ರಹಣ ಪ್ರಾರಂಭವಾದಾಗ, ಇಲ್ಲಿ ರಾತ್ರಿಯಾಗಿತ್ತು. ಇದು ಕಳೆದ ಹಲವು ವರ್ಷಗಳ ಅತ್ಯಂತ ವಿಶಿಷ್ಟ ಖಗೋಳ ಘಟನೆಯಾಗಲಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ (ನಾಸಾ) ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣವನ್ನು ಲೈವ್ ಸ್ಟ್ರೀಮ್ ಮಾಡಿದ್ದು, ಸೂರ್ಯ ಗ್ರಹಣದ ಅನೇಕ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದೆ.

Read More

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಟಿ ಬೃಂದಾ ಆಚಾರ್ಯ ಸ್ಟೈಲಿಶ್ ಆಗಿ ಫೋಟೋ ಶೂಟ್ ಮಾಡಿಸಿದ್ದು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಹಳದಿ ಮೈ ಹಾಗೂ ಹಸಿರು ಬಾರ್ಡರ್ ನ ರೇಷ್ಮೆ ಸೀರೆಯುಟ್ಟು ಸ್ಟೈಲಿಷ್ ಜ್ಯೂಯಲ್ಸ್ ತೊಟ್ಟು ಕ್ಯಾಮರಾಗೆ ಸಖತ್ತಾಗೆ ಪೋಸ್ ಕೊಟ್ಟಿದ್ದಾರೆ. ಬೃಂದಾ ಆಚಾರ್ಯ ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟವರು. ಬೃಂದಾ ಆಚಾರ್ಯ ಈ ವರ್ಷ ತೆರೆ ಕಂಡ ಸುಪ್ರಜಾ ಕೌಸಲ್ಯ ರಾಮ ಸಿನಿಮಾದಲ್ಲಿ ಶಿವಾಣಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಸದ್ಯ ನಿರೂಪ್ ಬಂಡಾರಿ ನಟನೆಯ ಹೊಸ ಸಿನಿಮಾಗೆ ಬೃಂದಾ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಬೃಂದಾ ಸೋಷಿಯಲ್ ಮೀಡಿಯಾ ಇನ್ಫ್ಯೂಲೆಷನರ್  ಪಾತ್ರ ಮಾಡಲಿದ್ದಾರೆ. ಬೃಂದಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಕ್ಷಿತ್ ಶೆಟ್ಟಿ ನಟನೆಯ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾಗೆ ಬೃಂದಾ ನಾಯಕಿ. ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ನಟಿಸಿ, ನಿರ್ದೇಶಿಸುತ್ತಿರುವ ಎಕ್ಸ್ & ವೈ ಸಿನಿಮಾದಲ್ಲೂ…

Read More

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಇತ್ತೀಚೆಗೆ ಮೆಕ್ಕಾದ ಅಲ್-ಸಫಾ ಅರಮನೆಯಲ್ಲಿ ಅಧಿಕೃತ ಸಭೆ ನಡೆಸಿ, ಕಾಶ್ಮೀರ ವಿಷಯಕ್ಕೆ ಒತ್ತು ನೀಡುವ ಮೂಲಕ ಪಾಕಿಸ್ತಾನ ಮತ್ತು ಭಾರತದ ನಡುವೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಯ ಮಹತ್ವವನ್ನು ಒತ್ತಿಹೇಳಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಏಪ್ರಿಲ್ 7 ರಂದು ಶೆಹಬಾಜ್ ಷರೀಫ್ ಮತ್ತು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನಡುವಿನ ಸಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಇಬ್ಬರೂ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸಹೋದರ ಸಂಬಂಧಗಳನ್ನು ಬಲಪಡಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಯೋಗದ ಮಾರ್ಗಗಳನ್ನು ಅನ್ವೇಷಿಸಲು ಒತ್ತು ನೀಡಿದರು. ಇಬ್ಬರೂ ನಾಯಕರು ಕಾಶ್ಮೀರ ಸೇರಿದಂತೆ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚಿಸಿದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. “ಉಭಯ ದೇಶಗಳ ನಡುವಿನ ಬಾಕಿ ಇರುವ ಸಮಸ್ಯೆಗಳನ್ನು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಪರಿಹರಿಸಲು ಪಾಕಿಸ್ತಾನ ಮತ್ತು ಭಾರತದ…

Read More

ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಗೋಚರವಾಗಿದೆ. ಶತಮಾನಗಳ ಬಳಿಕ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲಿ ಸಂಪೂರ್ಣವಾಗಿ ಗೋಚರವಾಗಿರುವ ಸೂರ್ಯಗ್ರಹಣ ಇದಾಗಿದೆ. ನಾಸಾ ಈ ಬಗೆಗಿನ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಾಸಾ ತನ್ನ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ. ಸಂಪೂರ್ಣತೆಯ ಹಾದಿಯಾಗಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚುವ ದೃಶ್ಯಗಳು ಈ ಚಿತ್ರಪಟ ಹಾಗೂ ವೀಡಿಯೋದಲ್ಲಿ ಕಂಡುಬಂದಿದೆ. ಆದರೆ ಇದು ಭಾರತದಲ್ಲಿ ಗೋಚರವಾಗಿಲ್ಲ. ವಿಡಿಯೋ ಮುಖೇನ ಮಾತ್ರ ಸಂಪೂರ್ಣ ಸೂರ್ಯಗ್ರಹಣ ಕಣ್ತುಂಬಿಕೊಳ್ಳಬಹುದಾಗಿದೆ. ನಾಸಾ ವೀಕ್ಷಕರಿಗಾಗಿ ತನ್ನ ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಅಧಿಕೃತ ನೇರ ಪ್ರಸಾರ ಸಹ ಹಮ್ಮಿಕೊಂಡಿತ್ತು. ಈ ಕುರಿತ ವೀಡಿಯೋಗಳನ್ನು ಶೇರ್ ಮಾಡಲಾಗಿದೆ.

Read More

ಮಹಿಳೆಯ ಯೋನಿಯಲ್ಲಿ ಸತ್ತ ಜಿರಳೆ ಪತ್ತೆಯಾದ ಘಟನೆ ಮಧ್ಯ ಅಮೆರಿಕದ ಹೊಂಡುರಾಸ್ ನಲ್ಲಿ ವರದಿಯಾಗಿದೆ. ಹಿಂದಿನ ರಾತ್ರಿ ತನ್ನ ಯೋನಿಯೊಳಗೆ ವಿಚಿತ್ರವಾದದ್ದನ್ನು ಸ್ಪರ್ಶಿಸಿದಂತೆ ಭಾಸವಾಗಿದ್ದರಿಂದ ತನಗೆ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವಳು ಬಹಿರಂಗಪಡಿಸಿದಳು. ಪರೀಕ್ಷೆಯ ನಂತರ, ಸತ್ತ ಜಿರಳೆ ಅವಳ ಯೋನಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ರೋಗಿಯು ತನ್ನ ಯೋನಿಯಲ್ಲಿ ವಿಚಿತ್ರವಾದದ್ದನ್ನು ಅನುಭವಿಸಿದಳು ಎಂದು ಹೇಳಿದರು. ಯೋನಿ ಪರೀಕ್ಷಿಸಿದಾಗ ಒಂದು ಕೀಟ ಕಂಡುಬಂದಿದೆ. ಜಿರಳೆ ಅವಳ ಯೋನಿಯನ್ನು ಹೇಗೆ ಪ್ರವೇಶಿಸಿತು ಮತ್ತು ಅದು ಎಷ್ಟು ಸಮಯದವರೆಗೆ ಅಲ್ಲಿಯೇ ಇತ್ತು ಎಂಬುದು ಸ್ಪಷ್ಟವಾಗಿಲ್ಲವಾದರೂ, ಯೋನಿ ಪರೀಕ್ಷೆಗಳ ಸಮಯದಲ್ಲಿ ಕಾಂಡೋಮ್ ಮತ್ತು ಲೈಂಗಿಕ ಆಟಿಕೆಗಳ ಮುಖಾಂತರ ಪ್ರವೇಶಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Read More

ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರಾಫತ್ ಅವರ ಮೃತದೇಹ ಅಮೆರಿಕದ ಕ್ಲೀವ್‌ಲ್ಯಾಂಡ್ ನಗರದಲ್ಲಿ ಪತ್ತೆಯಾಗಿದೆ. ಹೈದರಾಬಾದ್‌ನ ನಾಚರಾಮ್ ಮೂಲದ 25 ವರ್ಷದ ಮೊಹಮ್ಮದ್ ಅಬ್ದುಲ್ ಅರಾಫತ್ ಕಳೆದ ವರ್ಷ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅವರು ಕ್ಲೀವ್‌ಲ್ಯಾಂಡ್ ಯುನಿವರ್ಸಿಟಿಯಲ್ಲಿ ಐಟಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದರು. ಭಾರತೀಯ ವಿದ್ಯಾರ್ಥಿಯ ಹುಡುಕಾಟದ ವೇಳೆ ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಇದು ನಿಜಕ್ಕೂ ದುಃಖಕರ ವಾರ್ತೆ ಎಂದು ನ್ಯೂಯಾರ್ಕ್‌ನ ಭಾರತದ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ. ಅರಾಫತ್ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಅವರು ಸಾವಿನ ಬಗ್ಗೆ ನಿಖರ ತನಿಖೆಗಾಗಿ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಅಂತ್ಯಕ್ರಿಯೆಗಾಗಿ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Read More

ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಹಾಗೂ ನಟ ಧನುಷ್ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು. ಆದರೆ ಎರಡು ವರ್ಷಗಳ ಹಿಂದೆ ತಾವು ಬೇರೆ ಆಗುತ್ತಿರುವ ಬಗ್ಗೆ ಇಬ್ಬರು ಘೋಷಣೆ ಮಾಡಿದ್ದರು. ಬೇರೆ ಬೇರೆಯಾದ ಎರಡು ವರ್ಷಗಳ ಬಳಿಕ ಜೋಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದೆ. ಐಶ್ವರ್ಯಾ ಹಾಗೂ ಧನುಷ್ ಡಿವೋರ್ಸ್​ ಪೇಪರ್ ​ನ ಕೋರ್ಟ್​ಗೆ ಸಲ್ಲಿಕೆ ಮಾಡಿದ್ದಾರೆ. ಚೆನ್ನೈನ ಕೌಂಟುಬಿಕ ನ್ಯಾಯಾಲಯದಲ್ಲಿ ಈ ಪ್ರಕರಣ ಇತ್ಯರ್ಥ ಆಗಲಿದೆ. ಭಾರತೀಯ ನೀತಿ ಸಂಹಿತೆ ಸೆಕ್ಷನ್ 13 ಬಿ ಅಡಿಯಲ್ಲಿ ಡಿವೋರ್ಸ್ ಸಲ್ಲಿಕೆ ಮಾಡಲಾಗಿದೆ. ಅಂದರೆ ಇಬ್ಬರೂ ಸಮ್ಮತಿಸಿಯೇ ವಿಚ್ಛೇದನ ಪಡೆಯುತ್ತಿದ್ದೇವೆ ಎಂಬುದು ಇದರ ಅರ್ಥವಾಗಿದೆ. ಈ ಪ್ರಕರಣ ಶೀಘ್ರವೇ ಇತ್ಯರ್ಥ ಆಗಲಿದೆ. ದೂರವಾಗುವ ಬಗ್ಗೆ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. 2022ರ ಜನವರಿ ತಿಂಗಳಲ್ಲಿ ಈ ಬಗ್ಗೆ ದಂಪತಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದರು. ‘18 ವರ್ಷ ನಾವು ಗೆಳೆಯರಾಗಿ, ದಂಪತಿ ಆಗಿ, ಪೋಷಕರಾಗಿ…

Read More

ಕನ್ನಡದ ಪ್ರತಿಭಾವಂತ ನಟ ಡಾಲಿ ಧನಂಜಯ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್‌ ನಿರ್ದೇಶನದಲ್ಲಿ ಡಾಲಿ ನಟಿಸುತ್ತಿದ್ದು ಚಿತ್ರಕ್ಕೆ ಕೋಟಿ ಎಂದು ಹೆಸರಿಡಲಾಗಿದೆ. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್ ಇದೀಗ ಮೊದಲ ಬಾರಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದಾರೆ. ಯುಗಾದಿ ಹಬ್ಬದ ದಿನವಾದ ಇಂದು ಕೋಟಿ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ. ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿದೆ. ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ ಆಗಲೇ ಕೊಟ್ಟಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಅವರ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ…

Read More

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’  ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದೆ. ಕನ್ನಡದಲ್ಲಿ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ  ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್,  ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

Read More

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್‌ಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಧ್ಯೆ ಟೀಸರ್ ನೋಡಿದ ನಟಿ ಆಲಿಯಾ ಭಟ್ ಅಲ್ಲು ಅರ್ಜುನ್ ಅವರನ್ನು ಹೊಗಳಿದ್ದಾರೆ. ‘ಪುಷ್ಪ 2’ ಟೀಸರ್‌ನಲ್ಲಿ ಅಲ್ಲು ಅರ್ಜುನ್ ಕ್ಲಾಸ್ ಹಾಗೂ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ ಟೀಸರ್ ನೋಡಿದ ಆಲಿಯಾ ಭಟ್ ಅಲ್ಲು ಅರ್ಜುನ್‌ಗೆ ವಿಶೇಷವಾಗಿ ಶುಭಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಲ್ಲು ಅರ್ಜುನ್. ವಾಟ್ ಎ ಔಟ್‌ಸ್ಟ್ಯಾಂಡಿಂಗ್‌ ಟೀಸರ್ ಎಂದು ಹಾಡಿಹೊಗಳಿದ್ದಾರೆ. ಟೀಸರ್ ಅದ್ಭುತವಾಗಿದೆ ಎಂದು ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಲಿಯಾ ಮೆಚ್ಚುಗೆಗೆ ಅಲ್ಲು ಅರ್ಜುನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಧನ್ಯವಾದಗಳು. ಟೀಸರ್ ಬೆಂಕಿಯಂತೆ ಬಂದಿದೆ ಎಂದು ವ್ಯಕ್ತಪಡಿಸಿದಕ್ಕೆ ಖುಷಿಯಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ. ಪುಷ್ಪ 2’ ಸಿನಿಮಾದ ಟೀಸರ್ ನಲ್ಲಿ ಅಲ್ಲು ಅರ್ಜುನ್ ಅವರನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲು ಅರ್ಜುನ್ ಅವರು ಮಹಿಳೆಯ ಗೆಟಪ್‌ನಲ್ಲಿ ಸೀರೆ ಧರಿಸಿ,…

Read More