ಸ್ಪೇನ್ ನ ಈಶಾನ್ಯ ನಗರ ಝರಗೋಜದ ನರ್ಸಿಂಗ್ ಹೋಂ ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ನರ್ಸಿಂಗ್ ಹೋಂನಲ್ಲಿ 82 ಮಂದಿಯಿದ್ದರು. ಇಲ್ಲಿ ಬುದ್ಧಿಮಾಂದ್ಯತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬೆಂಕಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಬೆಂಕಿಯ ತೀವ್ರ ಹೊಗೆ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Author: Author AIN
ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಗೆ ಇನ್ನೆನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನದ ಆಡಳಿತ ಮಂಡಿ ವಿಶೇಷ ಅತಿಥಿಯನ್ನು ಜಾತ್ರೆಗೆ ಆಹ್ವಾನಿಸುತ್ತಿದೆ. ಅಂತೆಯೇ ಈ ಭಾರಿ ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಅವರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿ ಅಮಿತಾಭ್ ಗೆ ಆಹ್ವಾನ ಪತ್ರ ನೀಡಿದೆ. ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿಯವರು ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಪ್ರೀತಿಯಿಂದ ಆಮಂತ್ರಣ ಪತ್ರಿಕೆ ಸ್ವೀಕರಿಸಿ ಈ ಅಮಿತಾಭ್ ಬಚ್ಚನ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಅವರು ಈ ಜಾತ್ರೆಗೆ ಬರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗವಿಸಿದ್ದೇಶ್ವರ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭ ಮೇಳ ಎಂದೆ ಖ್ಯಾತಿ ಪಡೆದಿದೆ. ಜನವರಿ 15ರಂದು ಈ ಜಾತ್ರೆ ನಡೆಯಲಿದೆ. ಒಂದೊಮ್ಮೆ ಅಮಿತಾಭ್ ಬಚ್ಚನ್ ಜಾತ್ರೆಗೆ ಆಗಮಿಸಿದರೆ ಇದರ ಮೆರಗು ಮತ್ತಷ್ಟು ಹೆಚ್ಚಲಿದೆ. ಪ್ರತಿ ವರ್ಷವೂ…
ಬೆಂಗಳೂರು: ನಟ ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆದಿದ್ದು, ತನಿಖಾಧಿಕಾರಿಗಳ ಪರವಾಗಿ ಹಿರಿಯ ವಕೀಲ ರಘುಪತಿ ವಾದ ಮಂಡಿಸಲಿದ್ದಾರೆ. ನವೆಂಬರ್ 18ರಂದು ಅಂದರೆ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಹಿರಿಯ ವಕೀಲ ರಘುಪತಿ ಮೇಲ್ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಹೈಕೋರ್ಟ್ ನಲ್ಲಿ ತನಿಖಾಧಿಕಾರಿಗಳ ಪರವಾಗಿ ವಾದ ಮಂಡಿಸಿದ್ದ ಎಸ್.ಪಿ.ಪಿ ಪ್ರಸನ್ನಕುಮಾರ್, ಮೇಲ್ಮನವಿ ಅರ್ಜಿಗೆ ಅಗತ್ಯವಾದ ಎಲ್ಲ ದಾಖಲೆ ಸಿದ್ದತೆ ಮಾಡಿದ್ದು, ಸುಪ್ರೀಂಕೋರ್ಟ್ ಮೇಲ್ಮನವಿಗೆ ಬೇಕಾದ ಅಗತ್ಯ ದಾಖಲಾತಿಗಳ ಭಾಷಾಂತರ ಕಾರ್ಯ ಕೂಡ ಮುಕ್ತಾಯಗೊಂಡಿದೆ. https://ainlivenews.com/7100-crore-for-facebook-parent-meta-penalty-do-you-know-the-reason/ ಸದ್ಯ ಮೇಲ್ಮನವಿ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಫುಲ್ ಟೆನ್ಶನ್ ಆಗಿದ್ದಾರಂತೆ. ತನಿಖಾಧಿಕಾರಿಗಳು ಮೇಲ್ಮನವಿಗೆ ಸಿದ್ದತೆ ನಡೆಸುತ್ತಿರುವ ಬಗ್ಗೆ ವಕೀಲರ ಜೊತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಚರ್ಚೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ಗೆ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಕೆಯಾದಲ್ಲಿ ಪ್ರತಿಯಾಗಿ ಯಾವೆಲ್ಲಾ ಅಂಶಗಳನ್ನು ಉಲ್ಲೇಖ ಮಾಡಬೇಕು. ಸದ್ಯದ ಆರೋಗ್ಯ ಸ್ಥಿತಿ, ಫಿಸಿಯೋಥೆರಪಿ ವರದಿ ಅಥವಾ ಆಪರೇಷನ್ ಗೊಳಗಾದ್ರೆ ಆಪರೇಷನ್ ನಂತರದ ಹೆಲ್ತ್ ರಿಪೋರ್ಟ್ ಸಲ್ಲಿಕೆ…
ದೇವನಹಳ್ಳಿ : ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಪ್ರಾಣಿಗಳ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. MHO192 ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಕೌಲಲಾಂಪುರರದಿಂದ ಬೆಂಗಳೂರಿಗೆ ಪ್ರಾಣಿಗಳನ್ನು ಬಾಕ್ಸ್ ನಲ್ಲಿಟ್ಟು ತಂದಿದ್ದರು. ಟ್ರಾಲಿ ಬ್ಯಾಗ್ ನಲ್ಲಿ ಅಡಗಿಸಿ 40 ಬಾಕ್ಸ್ ಗಳಲ್ಲಿ ವಿವಿಧ ಪ್ರಾಣಿಗಳ ರವಾನಿಸಲಾಗುತ್ತಿದ್ದು. https://ainlivenews.com/nadita-attacked-by-darshan-fans-on-pratham-the-good-boys-post-that-raised-doubts/ ಏರ್ಪೋಟ್ ನಲ್ಲಿ ಪರಿಶೀಲನೆ ವೇಳೆ ಬಾಕ್ಸ್ ನಲ್ಲಿ ಪ್ರಾಣಿಗಳು ಪತ್ತೆಯಾಗಿವೆ. ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ, ಕೆಂಪು ಇಲಿ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳನ್ನು ರಕ್ಷಿಸಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಾಣಿಗಳನ್ನ ತಂದಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಈ ಸಂಬಂಧ ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕು ಮಹಾರಾಜ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಡಕಾಯಿತನ ಗೆಟಪ್‌ನಲ್ಲಿ ಬಾಲಯ್ಯ ಖಡಕ್ ಎಂಟ್ರಿ ಕೊಟ್ಟಿದ್ದು ಟೀಸರ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಇದು ರಾಜ್ಯವೇ ಇಲ್ಲದೇ ಯುದ್ಧ ಮಾಡಿದ ರಾಜನ ಕಥೆ. ಸಾವಿಗೆ ನಡುಕ ಹುಟ್ಟಿಸಿದ ಮಹಾರಾಜನ ಕಥೆಯಿದು ಎಂದು ಬಾಲಯ್ಯ ಅವರ ಪಾತ್ರಕ್ಕೆ ಇಂಟ್ರೊಡಕ್ಷನ್ ನೀಡಲಾಗಿದೆ. ಕಪ್ಪು ಬಣ್ಣದ ಧಿರಿಸಿನಲ್ಲಿ ಡಕಾಯಿತನ ಗೆಟಪ್‌ನಲ್ಲಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಾಬಿ ಡಿಯೋಲ್ ಅವರು ವಿಲನ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ‘ಡಾಕು ಮಹಾರಾಜ್’ ಸಿನಿಮಾಗೆ ಬಾಬಿ ಕೊಲ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ನ ಕೊನೆಯಲ್ಲಿ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆಯೂ ಅಪ್ಡೇಟ್ ನೀಡಲಾಗಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ (ಜನವರಿ 12) ‘ಡಾಕು ಮಹಾರಾಜ್’ ಸಿನಿಮಾ ತೆರೆಕಾಣಲಿದೆ. ನಂದಮೂರಿ ಬಾಲಕೃಷ್ಣ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ‘ಡಾಕು ಮಹಾರಾಜ್’ ಸಿನಿಮಾದಲ್ಲಿ…
ಬಾಲಿವುಡ್ ಖ್ಯಾತ ನಟಿ ಅಮೀಷಾ ಪಟೇಲ್ ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. 2023ರಲ್ಲಿ ತೆರೆಕಂಡ ಗದರ್ 2 ಸಿನಿಮಾದ ಬಳಿಕ ಅಮೀಷಾ ಸಿನಿಮಾಗಳಿಂದ ದೂರು ಉಳಿದಿದ್ದು ವೈಯಕ್ತಿಕ ವಿಚಾರವಾಗಿಯೇ ಹೆಚ್ಚು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ತನಗಿಂತ 19 ವರ್ಷ ಕಿರಿಯ ಉದ್ಯಮಿ ಜೊತೆ ಅಮೀಷಾ ಪಟೇಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಫೋಟೋವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಇತ್ತೀಚೆಗೆ ಉದ್ಯಮಿ ನಿರ್ವಾಣ್ ಬಿರ್ಲಾ ಅವರೊಂದಿಗಿನ ಖಾಸಗಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋವನ್ನು ಪೋಸ್ಟ್ ಮಾಡಿದ ನಟಿ, ‘ನನ್ನ ಡಾರ್ಲಿಂಗ್ ಜೊತೆ ಒಂದೊಳ್ಳೆಯ ಸಂಜೆ…’ ಎಂದು ಶೀರ್ಷಿಕೆ ನೀಡಿದ್ದಾರೆ. ನಟಿಯ ಫೋಟೋ ದುಬೈನಲ್ಲಿ ತೆಗೆಸಿಕೊಂಡಿರುವುದಾಗಿದೆ. ಫೋಟೋದಲ್ಲಿ ಅಮಿಷಾ ಮತ್ತು ನಿರ್ವಾಣ್ ಇಬ್ಬರೂ ಸಂತೋಷದಿಂದ ಇದ್ದಾರೆ. ಫೋಟೋದಲ್ಲಿ ಇಬ್ಬರೂ ಕಪ್ಪು ಬಟ್ಟೆ ಧರಿಸಿದ್ದಾರೆ. ಸದ್ಯ ಅಮಿಷಾ ಅವರ ಖಾಸಗಿ ಬದುಕಿನ ಬಗ್ಗೆ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇವರಿಬ್ಬರ ಫೋಟೋಗೆ ಅಭಿಮಾನಿಗಳು…
ಬಿಗ್ ಬಾಸ್ ನೀಡಿದ್ದ ಜೋಡಿ ಟಾಸ್ಕ್ ಮುಗಿದ ಬಳಿಕ ಬಾತ್ ರೂಮ್ ಏರಿಯಾದಲ್ಲಿ ಒಬ್ಬರೇ ಇದ್ದಾಗ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಕೂಡಲೇ ಚೈತ್ರಾ ನೆರವಿಗಾಗಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಅವರನ್ನು ಕಳಿಸಿದ್ದಾರೆ. ಅವರಿಬ್ಬರು ಓಡಿ ಬಂದು ನೋಡಿದಾಗ ಚೈತ್ರಾ ಕುಂದಾಪುರ ಅವರು ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ಕೂಡ ಬಂದರು. ಎಷ್ಟು ಪ್ರಯತ್ನಿಸಿದರೂ ಕೂಡ ಚೈತ್ರಾ ಅವರಿಗೆ ಪ್ರಜ್ಞೆ ಬಂದಿಲ್ಲ. ಇದರಿಂದ ಮನೆಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಚೈತ್ರಾ ಕುಂದಾಪುರ ಅವರ ಮುಖದ ಮೇಲೆ ನೀರು ಚಿಮುಕಿಸಲಾಯಿತು. ಆದರೂ ಸಹ ಅವರ ಎಚ್ಚರಗೊಳ್ಳಲಿಲ್ಲ. ಕೂಡಲೇ ಅವರನ್ನು ಕನ್ಫೆಷನ್ ರೂಮಿಗೆ ಕರೆದುಕೊಂಡು ಬರುವಂತೆ ಬಿಗ್ ಬಾಸ್ ಆದೇಶಿಸಿದರು. ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್ ರೂಮ್ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಚೈತ್ರಾ ಪರಿಸ್ಥಿತಿ ಗಂಭೀರವಾಗಿದ್ದಂತೆ ಕಾಣಿಸಿದೆ.…
ಸುರಕ್ಷತೆ ಮತ್ತು ಮಜಬೂತ್ತಾದ ಪ್ರಯಾಣಿಕ ವಾಹನಗಳ ತಯಾರಿಕೆಯಲ್ಲಿ ದೇಶೀಯ ಮೋಟಾರು ವಾಹನ ಉತ್ಪಾದನಾ ಕಂಪನಿ ಮಹೀಂದ್ರಾ ಮುಂದಿದೆ. ಈ ಕಂಪನಿಯಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂನಲ್ಲಿ ಥಾರ್ ರಾಕ್ಸ್, ಎಕ್ಸ್‌ಯುವಿ 3ಎಕ್ಸ್‌ಒ ಮತ್ತು ಎಕ್ಸ್‌ಯುವಿ 400 ಕಾರುಗಳು 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿವೆ. ಮಹಿಂದ್ರಾ ಥಾರ್ ರಾಕ್ಸ್ ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 39ಕ್ಕೆ 31.09 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಪಡೆದು ಥಾರ್ ರಾಕ್ಸ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಥಾರ್ ರಾಕ್ಸ್ 5-ಸ್ಟಾರ್ ಭಾರತ್-ಎನ್‌ಸಿಎಪಿ ರೇಟಿಂಗ್ ಪಡೆದುಕೊಂಡ ಮೊದಲ ಬಾಡಿ-ಆನ್-ಫ್ರೇಮ್ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರು ಏರ್‌ಬ್ಯಾಗ್‌ಗಳು, ಎಲ್ಲಾ ಸೀಟ್‌ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ABS, EBD, CBC, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮಹೀಂದ್ರಾ ಥಾರ್ ರಾಕ್ಸ್ ಕಾರಿನ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್‌ಗಳಾಗಿವೆ. ಮಹೀಂದ್ರಾ XUV 3XO ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.36 ಅಂಕಗಳು…
ಬೆಂಗಳೂರು: ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳೂ ಸೇರಿವೆ. ಈ ಪೈಕಿ ಗರ್ಣಿಯರಿಗಾಗಿಯೇ ವಿಶೇಷ ಯೋಜನೆ ಲಭ್ಯವಿದೆ ಎಂಬುದು ಗಮನಾರ್ಹ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಈ ಲಾಭವನ್ನು ಪಡೆಯಬಹುದಾಗಿದೆ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ. ಗರ್ಭಿಣಿ ಆದಾಗ ಮತ್ತು ಜನ್ಮ ನೀಡಿದ ನಂತರ ಬೇರೆ ಬೇರೆ ಕಂತುಗಳಲ್ಲಿ ಒಟ್ಟು 11,000 ಆರ್ಥಿಕ ನೆರವು ನೀಡಲಾಗುತ್ತದೆ. ಮಾತೃತ್ವ ವಂದನಾ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 2017 ರ ಬಜೆಟ್ ನಲ್ಲಿ ಘೋಷಣೆ ಮಾಡಿದರು. https://ainlivenews.com/good-news-for-women-from-the-central-government-free-sewing-machine-will-be-available/ ಬೇರೆ ಬೇರೆ ಮೂರು ಕಂತುಗಳಲ್ಲಿ 11 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು ಜೊತೆಗೆ ಮಹಿಳೆಯರ ಖಾತೆಗೆ…
ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್ ಇಂದು ಇಂಟರ್‌ನೆಟ್ ಎಂಬ ಅಪಾರವಾದ ಮಾಹಿತಿ ರಾಶಿಕಣಜವನ್ನು ಹೊಂದಿದೆ. ಸಾಮಾನ್ಯರಿಗೆ ಭವಿಷ್ಯವನ್ನು ತೋರಿಸುವ ಈ ಬೃಹತ್ ಕಂಪನಿ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ವಿಶ್ವದ ಅಸಮಾನ್ಯ ಸಾಮ್ರಾಟ ಆಗಲಿದೆ ಎಂದು ಹೇಳಲಾಗಿದೆ. ಪ್ರತಿ ಪ್ರಶ್ನೆಗೂ ಗೂಗಲ್ ಬಳಿ ಉತ್ತರವಿದೆ ಎಂದು ಹೇಳಲಾಗುತ್ತದೆ. ಅಂತೆಯೆ ಪ್ರತಿ ವರ್ಷ ಗೂಗಲ್‌ನಲ್ಲಿ ಜನರು ಏನೆಲ್ಲ ಹುಡುಕಾಟ ನಡೆಸಿದ್ದಾರೆ ಎಂಬ ಫಲಿತಾಂಶಗಳ ವರದಿಯನ್ನು ಕಂಪನಿ ಬಿಡುಗಡೆ ಮಾಡುತ್ತದೆ. ಹೌದು, ಇದರಲ್ಲಿ ಮಹಿಳೆಯರ ಇಂಟರ್‌ನೆಟ್ ಬಳಕೆಗೆ ಸಂಬಂಧಿಸಿದ ಅನೇಕ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿರುತ್ತಾರಂತೆ. ಇವುಗಳ ಜೊತೆಗೆ ಹುಡುಗಿಯರು ಗೂಗಲ್‌ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಕೂಡ ಬೆಳಕಿಗೆ ಬಂದಿದೆ. ಹಾಗಿದ್ದರೆ ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್‌ನಲ್ಲಿ ಸರ್ಚ್ ಮಾಡುವಂತಹ ಪ್ರಮುಖ ವಿಷಯಗಳು ಏನು ಎಂಬುದನ್ನು ನೋಡೋಣ. https://ainlivenews.com/good-news-for-women-from-the-central-government-free-sewing-machine-will-be-available/ ಭಾರತದಲ್ಲಿ ಇಂಟರ್‌ನೆಟ್ ಮಹಿಳಾ…