Author: Author AIN

ನಟ, ಹಿಂದೂಪುರಂ ಶಾಸಕ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಅರಾಧಿಸುತ್ತಾರೆ. ಅವರ ಸಿನಿಮಾಗಳು ತೆರೆಗೆ ಬಂದರೆ ಹಬ್ಬದಂತೆ ಸಂಭ್ರಮಿಸುತ್ತಾರೆ. ಆದರೆ ಅದೆಷ್ಟೋ ಭಾರಿ ಕೆಲ ನಟ, ನಟಿಯರು ತಮ್ಮ ಅಭಿಮಾನಿಗಳ ಮೇಲೆ ಗರಂ ಆಗುತ್ತಾರೆ. ಅಂತೆಯೇ ತೆಲುಗು ನಟ ನಂದಮೂರಿ ಬಾಲಕೃಷ್ಣ ಸಾಕಷ್ಟು ಭಾರಿ ಅಭಿಮಾನಿಗಳ ಮೇಲೆ ಗರಂ ಆಗಿದ್ದು ಅಂತೆಯೇ ಈ ಭಾರಿಯೂ ಅಭಿಮಾನಿಗಳ ಮೇಲೆ ತಿರುಗಿ ಬಿದ್ದಿದ್ದಾರೆ. ಬಾಲಕೃಷ್ಣ ಅವರು ತಮ್ಮ ಸಿನಿಮಾ ಬಿಡುಗಡೆ ಕಾರ್ಯಕ್ರಮಗಳು, ರಾಜಕೀಯ ರ್ಯಾಲಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಅನೇಕ ಘಟನೆಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಕೆಲವರು ಮಾಡುವ ಕಿಡಿಗೇಡಿತ ಬಾಲಯ್ಯ ಅವರ ಸಿಟ್ಟಿಗೆ ಕಾರಣವಾಗುತ್ತೆ. ಬಾಲಕೃಷ್ಣ ಅವರು ಎರಡು ದಿನಗಳ ಕಾಲ ಅನಂತಪುರ ಜಿಲ್ಲೆಯಲ್ಲಿ ಟಿಡಿಪಿ, ಜನಸೇನೆ ಮತ್ತು ಬಿಜೆಪಿ ಮೈತ್ರಿಕೂಟದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಸ್ವರ್ಣಾಂಧ್ರ ಸರ್ಕಾರ ಯಾತ್ರೆ…

Read More

ಭಾರತೀಯ ಮೂಲದ ಡೆಲಿವರಿ ಡ್ರೈವರ್‌ ನ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬ್ರಿಟನ್ ಕೋರ್ಟ್ ಇದೀಗ ಭಾರತ ಮೂಲದ ನಾಲ್ವರಿಗೆ 122 ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಗಳಾದ ಅರ್ಶದೀಪ್‌ ಸಿಂಗ್‌, ಜಗದೀಪ್‌ ಸಿಂಗ್‌, ಶಿವದೀಪ್‌ ಸಿಂಗ್ರ , ಮನ್‌ಜೋತ್‌ ಸಿಂಗ್‌ಗೆ ತಲಾ ಕನಿಷ್ಠ 28 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಆಗಸ್ಟ್‌ ನಲ್ಲಿ ಔರ್ಮನ್‌ ಸಿಂಗ್‌ ಎಂಬ ಚಾಲಕನನ್ನು ಪಶ್ಚಿಮ ಇಂಗ್ಲೆಂಡ್‌ನ‌ಲ್ಲಿ ಹತ್ಯೆ ಮಾಡಲಾಗಿತ್ತು. ಕೊಡಲಿ, ಹಾಕಿ ಸ್ಟಿಕ್‌ ಸೇರಿದಂತೆ ಅಪಾಯಕಾರಿ ಶಸ್ತ್ರಗಳನ್ನು ಬಳಸಿ ಡ್ರೈವರ್ ನನ್ನು ದಾರುಣವಾಗಿ ಕೊಂದಿದ್ದರು. ವಿಚಾರಣೆ ನಡೆಸಿದ ಬ್ರಿಟನ್ ಕೋರ್ಟ್ ಅಪರಾಧ ಸಾಭಿತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ವಿಧಿಸಿದೆ.

Read More

ಇಂದು ಮುಂಜಾನೆ ಅಮೆರಿಕದ ಇಲಿನಾಯ್ಸ್ ನ ಚಿಕಾಗೋದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಚಿಕಾಗೋ ಪೊಲೀಸ್ ಇಲಾಖೆಯ ಪ್ರಕಾರ, ಐದು ವಯಸ್ಕರು ಮತ್ತು ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರ ಮೇಲೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ಶೂಟರ್ ಅನ್ನು ಭದ್ರತಾ ಪಡೆಗಳು ಹಿಡಿದಿವೆಯೇ ಎಂಬುದು ತಿಳಿದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Read More

ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್​ ಕ್ಷಿಪಣಿಗಳು ಸೇರಿದಂತೆ 200ಕ್ಕೂ ಹೆಚ್ಚು ಬಗೆಯ ಡ್ರೋನ್​ ಹಾಗೂ ಕ್ಷಿಪಣಿಗಳ ದಾಳಿಗಳನ್ನು ನಡೆಸಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಈ ದಾಳಿಯನ್ನು ನಡೆಸಿದೆ. ಇಸ್ರೇಲಿ ಮಿಲಿಟರಿಯ ವಕ್ತಾರ, ರಿಯರ್ ಅಡ್ಮ್. ಡೇನಿಯಲ್ ಹಗರಿ ಮಾತನಾಡಿ, ಇರಾನ್ ಹಲವಾರು ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಬಹುಪಾಲು ಕ್ಷಿಪಣಿ ಹಾಗೂ ಡ್ರೋಣ್ ಗಳನ್ನು ಇಸ್ರೇಲ್‌ನ ಗಡಿಯ ಹೊರಗೆ ತಡೆಹಿಡಿಯಲಾಗಿದೆ ಎಂದಿದ್ದಾರೆ. ಡ್ರೋನ್​ಗಳು ಹಾಗೂ ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸುವಲ್ಲಿ ಅಮೆರಿಕ ಹಾಗೂ ಬ್ರಿಟಿಷ್ ವಾಯುಪಡೆಗಳು ಇಸ್ರೇಲ್​ಗೆ ಸಹಾಯ ಮಾಡಿವೆ. ಇಸ್ರೇಲ್ ದಕ್ಷಿಣ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಸಣ್ಣಪುಟ್ಟ ಹಾನಿಗಳಾಗಿವೆ. ಈ ದಾಳಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ದಾಳಿಗೆ ಇಸ್ರೇಲ್ ಪ್ರತಿಕ್ರಿಯೆ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ದೇಶದ ಭದ್ರತೆ ರಕ್ಷಣೆಗೆ ಸೇನೆ…

Read More

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಇಂದು ಮುಂಜಾನೆ 5ಗಂಟೆಗೆ ಗುಂಡಿನ ದಾಳಿ ನಡೆದಿದೆ. ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದ್ದು, ಇಬ್ಬರು ಅಪರಿಚಿತರು ಈ ಈ ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಶೂಟರ್‌ಗಳು ಬೈಕ್‌ನಲ್ಲಿ ಬಂದು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸದ್ಯಕ್ಕೆ ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಲ್ಮಾನ್ ಖಾನ್ ನಿವಾಸಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈ ಗುಂಡಿನ ದಾಳಿಯ ನಂತರ ಮುಂಬೈ ಕ್ರೈಂ ಬ್ರಾಂಚ್ ಜೊತೆಗೆ ಬಾಂದ್ರಾ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದೆ. ಅಲ್ಲದೆ ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಡಿಸಿಪಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಅನೇಕ…

Read More

ಟಾಲಿವುಡ್ ನಟಿ ಶೋಭಿತಾ ಧುಲಿಪಾಲ ಸದ್ಯ ಹಾಲಿವುಡ್ ನ ಮಂಕಿ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆ ಆಗಿದ್ದು, ಭಾರತದಲ್ಲಿ ಇದೇ 26ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಶೋಭಿತಾ ವೇಶ್ಯೆಯ ಪಾತ್ರ ಮಾಡಿದ್ದು, ಈ ಪಾತ್ರ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ನಟಿ ಹೇಳಿಕೊಂಡಿದ್ದಾರೆ. ನಟಿ ಶೋಭಿತಾ ಹೆಸರು ನಟ ನಾಗಚೈತನ್ಯ ಜೊತೆ ಕೇಳಿ ಬಂದಿತ್ತು. ಇಬ್ಬರು ಡೇಟಿಂಗ್ ಮಾಡುತ್ತಿದ್ದು ಸದ್ಯದಲ್ಲೇ ಮದುವೆ ಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದೇ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ನಾಗ ಚೈತನ್ಯ ಫ್ಯಾನ್ಸ್ ಎಳೆದು ತಂದಿದ್ದರು. ಇವರೆಲ್ಲರಿಗೂ ಸಮಂತಾ ಖಡಕ್ ಉತ್ತರ ನೀಡಿದ್ದರು. ಸಮಂತಾ ಜತೆಗಿನ ವಿಚ್ಛೇದನ ನಂತರ ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಜತೆ ಪ್ರೀತಿಯಲ್ಲಿದ್ದಾರಂತೆ. ಸಾಕಷ್ಟು ದಿನಗಳಿಂದ ನಾಗ ಚೈತನ್ಯ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಷ್ಯಕ್ಕೆ ಸಮಂತಾ ಅವರನ್ನು ಎಳೆದಿದ್ದಾರೆ. ಅದಕ್ಕೆ…

Read More

ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾದ ಮೂಲಕ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಇದೀಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದೆ. ಇತ್ತೀಚೆಗಷ್ಟೇ ಕೋಟಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಇದೀಗ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಕನ್ನಡದ ಪ್ರತಿಭಾವಂತ ನಟ ಡಾಲಿ ಧನಂಜಯ ನಟನೆಯ ಕೋಟಿ ಸಿನಿಮಾವನ್ನು ಪರಮ್ ನಿರ್ದೇಶಿಸುತ್ತಿದ್ದಾರೆ. ಬೈಪನ್ ಭಾರಿ ದೇವಾ (ಮರಾಠಿ), ಆರ್ಟಿಕಲ್ 370, ತೇರಿ ಬಾತೋಂಮೆ ಐಸಾ ಉಲ್ಜಾಜಿಯಾ, ಶೈತಾನ್ ಮತ್ತು ಲಾಪಾತಾ ಲೇಡೀಸ್ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ಜಿಯೋ ಸ್ಟುಡಿಯೋಸ್ ನೀಡಿದೆ. ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ಸ್ಥಾನವನ್ನು ಈ ನಿರ್ಮಾಣ ಸಂಸ್ಥೆ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಧನಂಜಯ್ ತಮ್ಮ ಹೊಸ ಸಿನಿಮಾ ʼಕೋಟಿʼಯ ಪಾತ್ರದ ಬಗ್ಗೆ ಎಕ್ಸೈಟ್ ಆಗಿದ್ದು ಸಿನಿಮಾದಲ್ಲಿ ಅಭಿನಯದ ಹೊಸ ಮಗ್ಗುಲುಗಳನ್ನು ಅನ್ವೇಷಿಸಿದ್ದಾರೆ. ‘ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ…

Read More

ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತ್ಯಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಮಳೆಯ ರಭಸಕ್ಕೆ ಸಿಡಿಲು ಬಡಿದು ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳನ್ನು ಮಾಹಿತಿ ನೀಡಿದ್ದಾರೆ. ಬಲೂಚಿಸ್ತಾನದ ಸುರಬ್, ಡೇರಾ ಬುಗ್ತಿ ಮತ್ತು ಪಿಶಿನ್ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದ್ದು ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಬ್ ಜಿಲ್ಲೆಯ ತನಾಕ್ ಪ್ರದೇಶದ ತೋಟದಲ್ಲಿ ಕುಳಿತಿದ್ದ ಫರೀದ್ ಅಹ್ಮದ್ ಮತ್ತು ಜಬೀರ್ ಅಹ್ಮದ್ ಎಂಬ ಇಬ್ಬರು ಯುವಕರು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೊಬ್ಬರು ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಪಿಶಿನ್ ಜಿಲ್ಲೆಯಲ್ಲಿ ಒಬ್ಬರು ಮತ್ತು ಡೇರಾ ಬುಗ್ತಿ ಜಿಲ್ಲೆಯಲ್ಲಿ ಒಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ರಹೀಮ್ ಯಾರ್ ಖಾನ್ ಜಿಲ್ಲೆಯ ಬಸ್ತಿ ಕಲ್ವಾರ್ನಲ್ಲಿ ಇಬ್ಬರು, ತುಲ್ ಹಸನ್ನಲ್ಲಿ ಒಬ್ಬರು, ಬಸ್ತಿ ಖೋಖ್ರಾನ್ ಫಿರೋಜಾದಲ್ಲಿ ದಂಪತಿ, ಖಾನ್ ಬೇಲಾದಲ್ಲಿ ರೈತ ಮತ್ತು ಮಾರಿ ಅಲ್ಲಾಹ್ನಲ್ಲಿ ಕುರುಬ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಖೈರ್ಪುರ್ ದಹಾದಲ್ಲಿ ಇನ್ನೊಬ್ಬ ವ್ಯಕ್ತಿ ಮತ್ತು ಬಹವಾಲ್ಪುರ ಜಿಲ್ಲೆಯ…

Read More

ರಷ್ಯಾದ ಚೆಚೆನ್ಯಾದಲ್ಲಿ ವಿಚಿತ್ರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿನ ಸರ್ಕಾರ ಅತ್ಯಂತ ಆಧುನಿಕ ನೃತ್ಯ ಸಂಗೀತವನ್ನು ಅಪರಾಧ ಎಂದು ಘೋಷಿಸಿದ್ದು, ಯಾವುದೇ ವ್ಯಕ್ತಿಯು ತುಂಬಾ ವೇಗವಾಗಿ ಅಥವಾ ತುಂಬಾ ನಿಧಾನವಾಗಿ ಸಂಗೀತವನ್ನು ನುಡಿಸುವಾಗ ಸಿಕ್ಕಿಬಿದ್ದರೆ, ಅವನು ಶಿಕ್ಷೆಗೆ ಒಳಗಾಗುತ್ತಾನೆ. ಆದ್ದರಿಂದ ಚೆಚೆನ್ಯಾದಲ್ಲಿ ಪಾಪ್, ಡಿಸ್ಕೋ ಅಥವಾ ರಾಕ್ ಸಂಗೀತವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚೆಚೆನ್ಯಾ ರಷ್ಯಾದ ಭಾಗವಾಗಿದ್ದರೂ ಅದನ್ನು ಪ್ರತ್ಯೇಕ ದೇಶವನ್ನಾಗಿ ಮಾಡಲು ಹಲವು ಯುದ್ಧಗಳು ನಡೆದಿವೆ. ಆದಾಗ್ಯೂ, ಆಸಕ್ತಿದಾಯಕ ವಿಷಯವೆಂದರೆ ಚೆಚೆನ್ಯಾ ಕೂಡ ರಷ್ಯಾಕ್ಕಿಂತ ಭಿನ್ನವಾದ ಅಧ್ಯಕ್ಷರನ್ನು ಹೊಂದಿದ್ದಾರೆ. ಇದಲ್ಲದೇ ಇಲ್ಲಿ ಪ್ರತ್ಯೇಕ ಸಂವಿಧಾನವೂ ಇದೆ. ಆಡಿಟಿ ಸೆಂಟ್ರಲ್ ಎಂಬ ವೆಬ್‌ಸೈಟ್ ಪ್ರಕಾರ, ಚೆಚೆನ್ಯಾ ಇತ್ತೀಚೆಗೆ ರಷ್ಯಾದ ನೃತ್ಯ ಸಂಗೀತವನ್ನು ನಿಷೇಧಿಸಿತು, ಮಾಲಿನ್ಯದ ವಿರುದ್ಧ ಹೋರಾಡುವ ವಿಚಿತ್ರ ಪ್ರಯತ್ನವಾಗಿ ಈ ನಿಷೇಧ ಹೇರಲಾಗಿದೆ. ಚೆಚೆನ್ಯಾದ ಸಂಸ್ಕೃತಿ ಸಚಿವ ಮೂಸಾ ದಾದಾಯೆವ್ ಅವರು ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದಾರೆ, ಇದು ಆಧುನಿಕ ನೃತ್ಯ ಸಂಗೀತವನ್ನು ಪರಿಣಾಮಕಾರಿಯಾಗಿ ಅಪರಾಧ. ಯಾವುದೇ ಸಂಗೀತ ಪ್ರತಿ ನಿಮಿಷಕ್ಕೆ 80-116 ಬೀಟ್‌ಗಳ ಗತಿಗೆ…

Read More

ʼಗಲ್ಫ್‌ನಲ್ಲಿರುವ ಜಿಯೋನಿಸ್ಟ್ ಆಡಳಿತಕ್ಕೆ (ಇಸ್ರೇಲ್) ಸಂಬಂಧಿಸಿದʼ ಕಂಟೇನರ್ ಹಡಗನ್ನು ಇರಾನ್‌ನ ರೆವೆಲ್ಯೂಷನ್ ಗಾರ್ಡ್‌ಗಳು ವಶಪಡಿಸಿಕೊಂಡಿದ್ದು, ಘಟನೆ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಈ ಪ್ರದೇಶದಲ್ಲಿ ಸಂಘರ್ಷವನ್ನು ಹೆಚ್ಚಿಸುವ ಪರಿಣಾಮಗಳನ್ನು ಇರಾನ್ ಅನುಭವಿಸಲಿದೆ ಎಂದು ಹಡಗನ್ನು ವಶಪಡಿಸಿಕೊಂಡಿರುವುದಾಗಿ ಇರಾನ್ ಘೋಷಿಸಿದ ನಂತರ ಇಸ್ರೇಲ್ ಸೇನೆ ಎಚ್ಚರಿಸಿದೆ. ‘ಎಂಸಿಎಸ್ ಏರೀಸ್’ ಹೆಸರಿನ ಕಂಟೈನರ್ ಹಡಗನ್ನು ಸೆಪಾ (ಗಾರ್ಡ್ಸ್) ನೌಕಾಪಡೆಯ ವಿಶೇಷ ಪಡೆಗಳು ಹೆಲಿಬೋರ್ನ್ ಕಾರ್ಯಾಚರಣೆಯನ್ನು ನಡೆಸುವ ಮೂಲಕ ವಶಪಡಿಸಿಕೊಂಡವು” ಎಂದು‌ ಇರಾನ್‌ ನ ಅಧಿಕೃತ ಸುದ್ಧಿಸಂಸ್ಥೆಯಾದ IRNA ವರದಿ ಮಾಡಿದೆ. ವಿಶ್ವ ವ್ಯಾಪಾರದಲ್ಲಿ ಪ್ರಮುಖವಾದ ಜಲಮಾರ್ಗವಾದ ಹೋರ್ಮುಜ್ ಜಲಸಂಧಿಯ ಬಳಿ ಕಾರ್ಯಾಚರಣೆ ನಡೆದಿದ್ದು, ಈ ಹಡಗನ್ನು ಸದ್ಯ ಇರಾನ್‌ನ ಪ್ರಾದೇಶಿಕ ನೀರಿನ ಕಡೆಗೆ ತಿರುಗಿಸಲಾಗಿದೆ ಎಂದು IRNA ತಿಳಿಸಿದೆ.  ಸುಮಾರು ಎರಡು ವಾರಗಳ ಹಿಂದೆ ಸಿರಿಯಾದಲ್ಲಿನ ಡಮಾಸ್ಕಸ್ ರಾಯಭಾರ ಕಚೇರಿಯ ಕಾನ್ಸುಲರ್ ವಿಭಾಗದ ಮೇಲೆ ಮಾರಣಾಂತಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದ ನಂತರ,…

Read More