Author: Author AIN

ಹಿಂದಿ ಕಿರುತೆರೆ ಸಾಕಷ್ಟು ಖ್ಯಾತಿ ಘಳಿಸಿರುವ ಹಾಗೂ ಬಾಲಿವುಡ್ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದಿವ್ಯಾಂಕಾ ತ್ರಿಪಾಠಿ ತನಿಗೆ ಎದುರಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ‘ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಟೂತ್‌ ಪೇಸ್ಟ್ ಬಾಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದೆ. ಒಂದು ಪೇಸ್ಟ್​ ಬಾಕ್ಸ್​ಗೆ ಒಂದು ರೂಪಾಯಿ ಕೊಡುತ್ತಿದ್ದರು. ಆ ಹಣ ತಿಂಗಳಿಗೆ 2 ಸಾವಿರ ರೂ. ಸಿಗುತ್ತಿತ್ತು ಎಂದಿದ್ದಾಳೆ. ದಿವ್ಯಾಂಕಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. ‘ಧಾರಾವಾಹಿ ಅಥವಾ ಕಾರ್ಯಕ್ರಮ ಮುಗಿದ ನಂತರ ಕಲಾವಿದರಿಗೆ ನಿಜವಾದ ಕಷ್ಟ ಪ್ರಾರಂಭವಾಗುತ್ತವೆ. ಸರಿಯಾದ ಅವಕಾಶ, ಹಣ ಸಿಗಬೇಕಾದರೆ ತೊಂದರೆ ಎದುರಿಸಬೇಕಾಗುತ್ತದೆ. ನನಗೂ ಅಂತಹ ಕಷ್ಟದ ಅನುಭವವಾಗಿತ್ತು. ಪಾವತಿಸಬೇಕಾದ ಬಿಲ್‌ಗಳು ಮತ್ತು ಇಎಂಐಗಳನ್ನು ಮ್ಯಾನೇಜ್​ ಮಾಡುವುದು ನನಗೂ ಕಷ್ಟವಿತ್ತು. ಆಗ ನನಗೊಂದು ಸೀರಿಯಲ್​ನಲ್ಲಿ ನಟಿಸುವ ಅವಕಾಶ ಬಂದಿತ್ತು. ಒಳ್ಳೆಯ ಅವಕಾಶ ಬಂದಿದೆ ಎಂದುಕೊಂಡು ಹೋಗಿದ್ದೆ. ಅಲ್ಲಿ ಡೈರೆಕ್ಟರ್…

Read More

ತಮಿಳು ನಟ ಇಳಯ ದಳಪತಿ ವಿಜಯ್​ ನಟನೆಯ ಸೂಪರ್​ ಹಿಟ್​ ಸಿನಿಮಾ ‘ಬಿಗಿಲ್​ ಸಾಕಷ್ಟು ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಬಿಗಿಲ್ ಚಿತ್ರದ ಪ್ರತಿಯೊಂದು ಪಾತ್ರವು ಪ್ರೇಕ್ಷಕರನ್ನು ಹುರಿದುಂಬಿಸಿತು. ಮಹಿಳೆಯರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಫುಟ್​ಬಾಲ್​ ಆಡಿ, ಟ್ರೋಫಿ ಗೆಲ್ಲುವುದು ಚಿತ್ರದ ಕತೆ. ಈ ಸಿನಿಮಾದಲ್ಲಿ ತುಂಬಾ ಗಮನ ಸೆಳೆಯುವ ಪಾತ್ರಗಳಲ್ಲಿ ಪಾಂಡಿಯಮ್ಮನ ಪಾತ್ರವೂ ಒಂದು. ತನ್ನ ದೈತ್ಯ ದೇಹದೊಂದಿಗೆ ಫುಟ್ ​ಬಾಲ್​ ಆಡುವ ಪಾಂಡಿಯಮ್ಮ ಅಲ್ಲಲ್ಲಿ ಕಾಮಿಡಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ನಟ ವಿಜಯ್​ ಅವರು ಪಾಂಡಿಯಮ್ಮಳನ್ನು ಕಿಚಾಯಿಸುವ ದೃಶ್ಯ ನೋಡುಗರಿಗೆ ಮಜಾ ನೀಡಿತ್ತು. ಬಿಗಿಲ್ ಚಿತ್ರದಲ್ಲಿ ಪಾಂಡಿಯಮ್ಮಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈಕೆಯ ನಿಜವಾದ ಹೆಸರು ಇಂದ್ರಜಾ ಶಂಕರ್​. ಈಕೆ ನಟ ರೋಬೋ ಶಂಕರ್​ ಅವರು ಮಗಳು. ಬಿಗಿಲ್​ ಮಾತ್ರವಲ್ಲದೇ ಅನೇಕ ಸಿನಿಮಾಗಳಲ್ಲಿ ಇಂದ್ರಜಾ ನಟಿಸಿದ್ದಾರೆ. ಆದರೆ, ಬಿಗಿಲ್​ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ. ಮಾರ್ಚ್​ 24ರಂದು ಇಂದ್ರಜಾ,…

Read More

ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ನಲ್ಲಿ ಸುರಿದ ಧಾರಾಕಾರ ಮಳೆಗೆ ದುಬೈ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ವಿಶ್ವದ ಅತ್ಯಂತ ಜನದಟ್ಟಣೆಯ ವಿಮಾನ ನಿಲ್ದಾಣವೆಂದೇ ಹೆಸರಾಗಿರುವ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈ ವ್ಯಾಪ್ತಿಯಲ್ಲಿರುವ ಹೈವೇಗಳು ಹಾಗೂ ಹಲವಾರು ರಸ್ತೆಗಳು ಜಲಾವೃತವಾಗಿದ್ದು ಈ ಹಿನ್ನೆಲೆಯಲ್ಲಿ ಭಾರತ ಹಾಗೂ ದುಬೈ ನಡುವಿನ 30ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು ಪಡಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಬಾಧಿತ ಪ್ರಯಾಣಿಕರಿಗೆ ಮತ್ತೊಂದು ವಿಮಾನದಲ್ಲಿ ಸ್ಥಳಾವಕಾಶ ಕಲ್ಪಿಸಲು ಮತ್ತು ಸಾಧ್ಯವಾದಷ್ಟು ಬೇಗ ಅವರ ಗಮ್ಯಸ್ಥಾನಗಳನ್ನು ತಲುಪಲು ವಿಮಾನಯಾನವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ, ಏಪ್ರಿಲ್ 16 ಮತ್ತು 17 ರ ಮಾನ್ಯ ಟಿಕೆಟ್ ಗಳನ್ನು ಹೊಂದಿರುವ ಪ್ರಯಾಣಿಕರಿಗೆ ವಿಮಾನಯಾನವು ದಿನಾಂಕದ ಒಂದು ಬಾರಿಯ ಬದಲಾವಣೆಯನ್ನು ನೀಡುತ್ತಿದೆ, ಇದರಿಂದಾಗಿ ಅವರು ಟಿಕೆಟ್ ನ ಮಾನ್ಯತೆಯ ಅವಧಿಯಲ್ಲಿ ತಮ್ಮ ವಿಮಾನಗಳನ್ನು ಭವಿಷ್ಯದ ದಿನಾಂಕಗಳಿಗೆ ಮರುಹೊಂದಿಸಬಹುದು ಎಂದು ಹೇಳಿದೆ. ಏರ್ ಇಂಡಿಯಾ…

Read More

ಬ್ಯಾಂಕ್​ನಲ್ಲಿ ಸಾಲ ಪಡೆಯುವ ಸಲುವಾಗಿ ಮಹಿಳೆಯೊಬ್ಬಳು ಸತ್ತ ವ್ಯಕ್ತಿಯನ್ನು ವ್ಹೀಲ್​ಚೇರ್​ ಮೇಲೆ ಕೂರಿಸಿಕೊಂಡು ಬ್ಯಾಂಕ್​ ಆಗಮಿಸಿ ಸಿಕ್ಕಿಬಿದ್ದಿದ್ದಾಳೆ. ವ್ಯಕ್ತಿ ಇನ್ನೂ ಬದುಕಿದ್ದಾನೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಬಿಂಬಿಸಲು ಹೋಗಿ ಮಹಿಳೆ ಸಿಕ್ಕಿ ಬಿದ್ದಿರುವ ಘಟನೆ ಬ್ರೆಜಿಲ್​ನ ರಿಯೋ ಡಿ ಜನೈರೊದಲ್ಲಿ ನಡೆದಿದೆ. ಬ್ಯಾಂಕ್​ನಲ್ಲಿದ್ದ ವ್ಯಕ್ತಿಯೊಬ್ಬರು ವ್ಹೀಲ್​ಚೇರ್​ ಮೇಲೆ ಕುಳಿತಿದ್ದ ವ್ಯಕ್ತಿಯ ಕಳೆಗುಂದಿದ ಮುಖ ಮತ್ತು ಮಹಿಳೆಯ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ, ತುರ್ತು ಸೇವೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿ, ಆಕೆಯ ಚಲನಾವಲನವನ್ನು ವಿಡಿಯೋ ರೆಕಾರ್ಡ್​ ಮಾಡಲು ಆರಂಭಿಸಿದರು. ಮಹಿಳೆಯು ಮೃತ ವ್ಯಕ್ತಿಯ ತಲೆಯನ್ನು ಹಿಡಿದುಕೊಂಡು ಕಾಗದದ ಮೇಲೆ ಸಹಿ ಹಾಕುವಂತೆ ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಸತ್ತ ವ್ಯಕ್ತಿ ಸಹಿ ಹಾಕುವುದು ಅಸಾಧ್ಯ ಎಂಬುದು ಗೊತ್ತಿದ್ದರೂ ಸಹಿಯನ್ನು ಪಡೆಯುವ ತನ್ನ ವ್ಯರ್ಥ ಪ್ರಯತ್ನದಲ್ಲಿ ಮೃತನ ಬೆರಳುಗಳ ನಡುವೆ ಪೆನ್ನನ್ನು ಸಹ ಇರಿಸುತ್ತಾಳೆ. ಮಹಿಳೆಯ ವರ್ತನೆ ನೋಡಿ, ಅನುಮಾನ ಜಾಸ್ತಿಯಾಗುತ್ತಿದ್ದಂತೆ ವ್ಹೀಲ್​​ಚೇರ್​ ಮೇಲೆ ಕುಳಿತಿರುವ ವ್ಯಕ್ತಿಯ ಯೋಗಕ್ಷೇಮದ ಬಗ್ಗೆ ಬ್ಯಾಂಕ್​ ಉದ್ಯೋಗಿಯೊಬ್ಬಳು ಕೇಳಿದ್ದಾರೆ.…

Read More

ಉಕ್ರೇನ್ ನಗರಗಳ ಮೇಲೆ ರಷ್ಯಾ ದಾಳಿ ಮುಂದುವರೆದಿದೆ. ಉತ್ತರ ಉಕ್ರೇನ್ ನಗರ ಚೆರ್ನೆಹಿವ್ ಅನ್ನು ಗುರಿಯಾಗಿಸಿಕೊಂಡು ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು ಘಟನೆಯಲ್ಲಿ 17 ಜನರು ಮೃತಪಟ್ಟಿದ್ದಾರೆ. ಅಲ್ಲದೆ ಮೂವರು ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದಾಳಿಯಲ್ಲಿ ನಾಗರಿಕ ಮೂಲಸೌಕರ್ಯ ಮತ್ತು ಆಸ್ಪತ್ರೆಗೆ ಹಾನಿಯಾಗಿದೆ. ದಾಳಿಯ ಕೆಲವು ಗಂಟೆಗಳ ನಂತರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಪಾಶ್ಚಿಮಾತ್ಯ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಒತ್ತಾಯಿಸಿದರು, ಬುಧವಾರ ಬೆಳಿಗ್ಗೆ 9 ಗಂಟೆಯ ನಂತರ ನಗರದ ಜನನಿಬಿಡ ಪ್ರದೇಶದಲ್ಲಿ ಮೂರು ಪ್ರಬಲ ಸ್ಫೋಟಗಳು ಸಂಭವಿಸಿವೆ ಎಂದು ಚೆರ್ನಿಹಿವ್ ಹಂಗಾಮಿ ಮೇಯರ್ ಒಲೆಕ್ಸಾಂಡರ್ ಲೊಮೆಕೊ ಹೇಳಿದ್ದಾರೆ. ದಾಳಿಯಲ್ಲಿ ರಷ್ಯಾ ಮೂರು ಇಸ್ಕಂದರ್ ಕ್ರೂಸ್ ಕ್ಷಿಪಣಿಗಳನ್ನು ಬಳಸಿದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದನ್ನು ರಷ್ಯಾ ನಿರಾಕರಿಸಿದೆ. ರಷ್ಯಾ ನಿರಂತರವಾಗಿ ಉಕ್ರೇನ್ ನ ವಾಯು ರಕ್ಷಣೆಯನ್ನು ಗುರಿಯಾಗಿಸಿಕೊಂಡಿದೆ.…

Read More

ಡಾಲಿ ಧನಂಜಯ್‌ ನಟನೆಯ ‘ಉತ್ತರಕಾಂಡ’ ಚಿತ್ರಕ್ಕೆ ದೂದ್ ಪೇಡ ದಿಗಂತ್ ಎಂಟ್ರಿ ಕೊಟ್ಟಿದ್ದಾರೆ. ಹೆಚ್ಚಿನ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ದಿಗಂತ್ ಉತ್ತರಕಾಂಡ ಚಿತ್ರದಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಚಿತ್ರದ ದಿಗಂತ್ ಪೋಸ್ಟರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ‘ಉತ್ತರಕಾಂಡ’ ಸಿನಿಮಾದಲ್ಲಿ ಡಾಲಿ ಧನಂಜಯ್ ಹಾಗೂ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದರ ಜೊತೆಗೆ ಸಿನಿಮಾದ ಪಾತ್ರವರ್ಗ ಹಿರಿದಾಗುತ್ತಿದೆ. ದಿಗಂತ್ ಅವರು ತಂಡ ಸೇರಿಕೊಂಡಿದ್ದಾರೆ. ಮಿರ್ಚಿ ಮಲ್ಲಿಗೆ ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್​ನಲ್ಲಿ ಖಡಕ್ ಲುಕ್ ಮೂಲಕ ಕುತೂಹಲ ಮೂಡಿಸಿದ್ದಾರೆ. ‘ಲವ್ ಮತ್ತ್ ಗುಟ್ಕಾ ಜೀವಕ್ಕ್ ಅನಾಹುತ ಹೆಂಗ ಹಂಗಾ ದೂದ್ ಪೇಡಾ ದಿಗಂತ್ ಇಗ್ ಮಿರ್ಚಿ ಮಲ್ಲಿಗಿ ಉತ್ತರಕಾಂಡ ಪಿಚ್ಚರದಾಗ’ ಎಂದು ನಿರ್ಮಾಣ ಸಂಸ್ಥೆ ಕೆಆರ್​ಜಿ ಸ್ಟುಡಿಯೋಸ್ ಪೋಸ್ಟ್ ಮಾಡಿದೆ.ದಿಗಂತ್ ಇದುವರೆಗೂ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಈ ಬಾರಿ ಅವರ…

Read More

ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಗೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯವು ದೇಶದ ಸಾರ್ವಭೌಮತ್ವವನ್ನು ಗೌರವಿಸುವಲ್ಲಿ ಎಕ್ಸ್‌ (X) ವಿಫಲವಾಗಿದೆ ಮತ್ತು ಮೈಕ್ರೋಬ್ಲಾಗಿಂಗ್ ಸೈಟ್‌ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ನಿಷೇಧ ಹೇರಿದೆ. ಪಾಕಿಸ್ತಾನದಲ್ಲಿ ಎಕ್ಸ್‌ ನೋಂದಣಿಯಾಗಿಲ್ಲ ಅಥವಾ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಲು ಯಾವುದೇ ಒಪ್ಪಂದಕ್ಕೆ ಸಹಿ ಮಾಡಿಲ್ಲ ಎಂದು ಸಿಂಧ್‌ ಹೈಕೋರ್ಟ್‌ಗೆ ತಿಳಿಸಿದೆ. ದೇಶದ ಭದ್ರತೆಯ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಹಲವು ದೇಶಗಳು ಎಕ್ಸ್‌ ಮೇಲೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದವು ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಪಾಕ್‌ ಇಲ್ಲಿಯವರೆಗೆ ಅಧಿಕೃತವಾಗಿ ಎಕ್ಸ್‌ ಅನ್ನು ನಿಷೇಧ ಮಾಡಿರುವುದಾಗಿ ತಿಳಿಸಿಲ್ಲ. ಆದರೆ ಕಳೆದ ಫೆಬ್ರವರಿ 17 ರಿಂದ ಪಾಕ್‌ ಜನತೆ ಎಕ್ಸ್‌ ಅನ್ನು ಸರಿಯಾಗಿ ಬಳಕೆ ಮಾಡಲು ಅಸಮರ್ಥರಾಗಿದ್ದಾರೆ.

Read More

ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ಅಂತ್ಯಕ್ರಿಯೆ ಏ.17ರಂದು ಬೆಂಗಳೂರಿನ ಟಿ ಆರ್ ಮಿಲ್ ಹಿಂದೂ ರುದ್ರಭೂಮಿಯಲ್ಲಿ ನಡೆದಿದೆ. ಬ್ರಾಹ್ಮಣರ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ದ್ವಾರಕೀಶ್ ಹಿರಿಯ ಪುತ್ರ ಸಂತೋಷ್ ಅವರು ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಇಂದು ದ್ವಾರಕೀಶ್ ಕುಟುಂಬಸ್ಥರಿಂದ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ. ಬೆಳಗ್ಗೆ 7 ಗಂಟೆಗೆ ರುದ್ರಭೂಮಿಯಲ್ಲಿ ಕುಟುಂಬಸ್ಥರು ಪೂಜೆ ಪೂಜೆ ಸಲ್ಲಿಸಿದ್ದು, 9ಕ್ಕೆ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ. ಏ.16 ಬೆಳಗ್ಗೆ ದ್ವಾರಕೀಶ್ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ಕನ್ನಡ ಚಿತ್ರೋದ್ಯಮದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್, ಸುದೀಪ್, ಯಶ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಕಲಾವಿದರು, ಅಭಿಮಾನಿಗಳು, ಗಣ್ಯರ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನ ಚಾಮರಾಜ ಪೇಟೆಯಲ್ಲಿರುವ ಹಿಂದೂರುದ್ರಭೂಮಿಗೆ ರವಾನಿಸಲಾಯಿತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಐವರು ಪುತ್ರರೂ ಸೇರಿ ತಂದೆಯ…

Read More

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಹಾಕಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಮೋಹನ್‌ಲಾಲ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಮೋಹನ್ ಲಾಲ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೋಹನ್‌ಲಾಲ್ ಮೂಕಾಂಬಿಕೆಯ ಸನ್ನಿಧಿಗೆ ಭೇಟಿ ನೀಡಿ ಮುಂಜಾನೆ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ದೇಗುಲದಲ್ಲಿ ಕೆಲ ಕಾಲ ಧ್ಯಾನ ಮಾಡಿದ್ರು.  ಈ ವೇಳೆ, ಅಭಿಮಾನಿಗಳು ಮೋಹನ್‌ಲಾಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್, ನಟರಲ್ಲದೆ, ನಿರ್ಮಾಪಕ, ಹಿನ್ನೆಲೆ ಗಾಯಕ, ಚಲನಚಿತ್ರ ವಿತರಕ ಮತ್ತು ನಿರ್ದೇಶಕರಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ. ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಮೋಹನ್ ಲಾಲ್ 4…

Read More

ಖ್ಯಾತ ಯೂಟ್ಯೂಬರ್ ಅಭ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್‌ಮ್ಯಾನ್ ನಿಧನರಾಗಿದ್ದಾರೆ. ಕ್ರಿಕೆಟ್,  ಫುಟ್ಬಾಲ್ ಕ್ರೀಡೆ ಹಾಗೂ ಸಿನಿಮಾ ವಿಶ್ಲೇಷಕರಾಗಿ ಕನ್ನಡಿಗರ ಮನ ಗೆದ್ದಿದ್ದ ಯುವ ಯೂಟ್ಯೂಬರ್ ಅಭ್ರದೀಪ್ ಸಾಹಾ ತಮ್ಮ 27ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ, ಆಂಗ್ರಿ ರಾಂಟ್‌ಮ್ಯಾನ್, ಯಶ್ ನಟನೆಯ ‘ಕೆಜಿಎಫ್’ ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಯೂಟ್ಯೂಬ್‌ನಲ್ಲಿ 4.8 ಲಕ್ಷ ಫಾಲೋವರ್ಸ್ ಹೊಂದಿರುವ ರಾಂಟ್ ಮ್ಯಾನ್ ನಿಧನದ ಸುದ್ದಿ ಕೇಳಿ ಅನೇಕರು ಶಾಕ್ ಆಗಿದ್ದಾರೆ.  ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಭ್ರದೀಪ್ ಸಾಹಾ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 16ರ ಮಧ್ಯರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಸಾಹಾ ಅವರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಇತ್ತೀಚೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿರಲಿಲ್ಲ. ಜೊತೆಗೆ, ನಿಧಾನವಾಗಿ ಅವರಲ್ಲಿ ಬಹು ಅಂಗಾಂಗ ವೈಫಲ್ಯದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಹೀಗಾಗಿ ಮಗನ ಆರೋಗ್ಯದ ಬಗ್ಗೆ ಏ. 15ರಂದು ತಂದೆ ಟ್ವೀಟ್ ಮಾಡಿ, ಅಭ್ರದೀಪ್…

Read More